Tag: symbol

  • ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಎಲ್ಲೆಲ್ಲೂ ರಾಜಕೀಯವೇ ರಾರಾಜಿಸುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ಮನೋಜ್ ತಿವಾರಿ ಅವರ ಜಾಕೆಟ್ ಮೇಲೆ, ಅಗ್ನಿಮಿತ್ರ ಪಾಲ್ ಅವರ ಡಿಸೈನರ್ ಸೀರೆಗಳ ಕಮಲದ ಚಿಹ್ನೆ ಇತ್ತು. ಇದೀಗ ಸ್ವೀಟ್ ಅಂಗಡಿಯ ಮಾಲೀಕ ಸಂದೇಶ್ ಸರದಿ.

    ಕೋಲ್ಕತ್ತಾದ ಬಲರಾಮ್ ಮುಲ್ಲಿಕ್ ರಾಧರಮನ್ ಮುಲ್ಲಿಕ್ ಸ್ವೀಟ್‍ಗಳ ಮೇಲೆ ರಾಜಕೀಯ ಪಕ್ಷದ ಚಿಹ್ನೆಗಳನ್ನು ರಚಿಸುವ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ರಾಜಕೀಯದ ಪ್ರಮುಖ ಪಕ್ಷಗಳ ಚಿಹ್ನೆ ಸೇರಿದಂತೆ ಕಾಂಗ್ರೆಸ್, ಭಾರತೀಯ ಜನತಾ ಪಕ್ಷದ ಚಿಹ್ನೆ ಜೊತೆಗೆ ಜೈ ಶ್ರೀ ರಾಮ್ ಮತ್ತು ಖೇಲಾ ಹೋಬ್ ಎಂಬ ಎರಡು ಪದಗಳನ್ನು ಸ್ವೀಟ್‍ಗಳ ಮೇಲೆ ರಚಿಸಿದ್ದಾರೆ. ಇದೀಗ ಈ ಸ್ವೀಟ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

    ಈ ಕುರಿತಂತೆ ಮಾತನಾಡಿದ ಸ್ವೀಟ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ಸುದೀಪ್ ಮಲ್ಲಿಕ್, ವರ್ಷದ ಬಹುದೊಡ್ಡ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಾವು ಚುನಾವಣೆಯ ಸಂಬಂಧಪಟ್ಟಂತೆ ಸ್ವೀಟ್‍ಗಳನ್ನು ತಯಾರಿ ಮಾಡುತ್ತಿದ್ದು, ಈ ಸ್ವೀಟ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಖೇಲಾ ಹೋಬ್ ಮತ್ತು ಜೈ ಶ್ರೀ ರಾಮ್ ಎಂದು ಪದವನ್ನು ರಚಿಸಿರುವ ಸ್ವೀಟ್‍ಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿಹೋಗಿದೆ ಎಂದು ಹೇಳಿದ್ದಾರೆ.

    ಸದ್ಯ ಈ ಸ್ವೀಟ್‍ಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ಗ್ರಾಹಕರು ರಾಜಕೀಯ ಚಿಹ್ನೆಗಳುಳ್ಳ ಸ್ವೀಟ್‍ಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

  • ನಮೋ 2.0ಗೆ 100 ದಿನ- ನಮ್ಮ ಸರ್ಕಾರ ಭರವಸೆಯ ಸಂಕೇತ ಎಂದ ಅಮಿತ್ ಶಾ

    ನಮೋ 2.0ಗೆ 100 ದಿನ- ನಮ್ಮ ಸರ್ಕಾರ ಭರವಸೆಯ ಸಂಕೇತ ಎಂದ ಅಮಿತ್ ಶಾ

    ನವದೆಹಲಿ: ಪ್ರಧಾನಿ ಮೋದಿ ಅವರ ಸತತ ಎರಡನೇ ಬಾರಿ ಅಧಿಕಾರ ವಹಿಸಿಕೊಂಡು ಇಂದಿಗೆ ನೂರು ದಿನ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಸರ್ಕಾರ ದೇಶದ ಎಲ್ಲಾ ಜನರಿಗೂ ಭರವಸೆಯ ಸಂಕೇತ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ನರೇಂದ್ರ ಮೋದಿ ಸರ್ಕಾರವು ಬಡವರ ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಮಾನಾರ್ಥಕವಾಗಿದೆ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ “ಭರವಸೆಯ ಸಂಕೇತ” ವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಮೋದಿ ಸರ್ಕಾರದ 100 ದಿನಗಳ ಪೂರ್ಣಗೊಂಡ ನಂತರ ಸರಣಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಮೂಲಕ ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಸಮಾನಾರ್ಥಕವಾಗಿದೆ ಎಂದು ಅವರು ಸರಣಿ ಟ್ವೀಟ್‍ಗಳಲ್ಲಿ ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370, ಆರ್ಟಿಕಲ್ 35 ಎ ಅನ್ನು ತೆಗೆದುಹಾಕುವುದು. ಮುಸ್ಲಿಂ ಮಹಿಳೆಯರನ್ನು ತ್ರಿಪಲ್ ತಲಾಖ್ ಶಾಪದಿಂದ ಮುಕ್ತಗೊಳಿಸುವ ನಿರ್ಧಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಷ್ಟ್ರದ ಭದ್ರತಾ ವಿಚಾರವನ್ನು ಬಲಪಡಿಸುವ ನಿರ್ಧಾರಗಳು ಮೋದಿಯವರ ನಿರ್ಣಾಯಕ ನಾಯಕತ್ವದ ಫಲಿತಾಂಶವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

    # MODIfied100 ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು. ಮೋದಿ ಅವರ ಸರ್ಕಾರ ಎರಡನೇ ಅವಧಿಯಲ್ಲಿ 100 ದಿನವನ್ನು ಪೂರ್ಣಗೊಳಿಸಿದ್ದಕ್ಕೆ ಪಿಎಂ ಮೋದಿ ಮತ್ತು ನನ್ನ ಎಲ್ಲಾ ಮಂತ್ರಿ ಸಹದ್ಯೋಗಿಗಳಿಗೆ ಅಭಿನಂದಿಸುತ್ತೇನೆ. ನಮ್ಮ ರಾಷ್ಟ್ರದ ಅಭಿವೃದ್ಧಿ ಮತ್ತು ರಕ್ಷಣೆ ಯಾವುದೇ ತೊಂದರೆ ಬಾರದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ನಾನು ನಮ್ಮ ಎಲ್ಲ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

     

  • ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಗುರುತು- ಗೊಂದಲದಲ್ಲಿ ಚುನಾವಣಾ ಸಿಬ್ಬಂದಿ!

    ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಗುರುತು- ಗೊಂದಲದಲ್ಲಿ ಚುನಾವಣಾ ಸಿಬ್ಬಂದಿ!

    ಕೊಪ್ಪಳ: 2ನೇ ಹಂತದ ಚುನಾವಣೆಗೆ ಇನ್ನೂ ಕೇವಲ ಒಂದು ದಿನ ಬಾಕಿ ಇರಬೇಕಾದರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಿಬ್ಬಂದಿ ಗೊಂದಲದಲ್ಲಿದ್ದಾರೆ.

    ಹೌದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 14 ಜನ ಕಣದಲ್ಲಿದ್ದಾರೆ. ಆದರೆ ಒಬ್ಬ ಪಕ್ಷೇತರ ಅಭ್ಯರ್ಥಿಯ ಚಿಹ್ನೆ ಚಪ್ಪಲಿ ಗುರುತು ಇರುವುದರಿಂದ ಚುನಾವಣಾ ಸಿಬ್ಬಂದಿ ಚಪ್ಪಲಿ ಹಾಕಬೇಕಾ ಬೇಡವಾ ಎನ್ನುವ ಚಿಂತನೆಯಲ್ಲಿ ಇದ್ದಾರೆ.

    ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಯಿಂದ 100 ಮೀಟರ್ ವರೆಗೂ ಎಲ್ಲಿಯೂ ಅಭ್ಯರ್ಥಿಯ ಚಿಹ್ನೆ ಕಾಣುವಂತಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿ ಪ.ಯ ಗಣೇಶ್ ಅವರ ಚಿಹ್ನೆ ಚಪ್ಪಲಿ ಇರುವುದರಿಂದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರೇ ಇದಕ್ಕೆ ಏನು ಮಾಡೋದು ಎಂದು ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಸಿಬ್ಬಂದಿ ವಿಚಾರವಿರಲಿ ಮತಗಟ್ಟೆಗೆ ಮತ ಹಾಕಲು ಬರುವ ಮತದಾರರು ಚಪ್ಪಲಿ ಹಾಕಿಕೊಳ್ಳಬೇಕಾ ಅಥವಾ ಬಿಟ್ಟು ಬರಬೇಕಾ ಎನ್ನುವುದು ಇದೀಗ ಕೊಪ್ಪಳದಲ್ಲಿ ಜನರು ಚರ್ಚೆ ಮಾಡುವಂತಾಗಿದೆ.

  • ಚಿಹ್ನೆ ಆಯ್ಕೆಯಲ್ಲಿ ದಳಪತಿಗಳಿಗೆ ರೆಬೆಲ್ ಸುಮಲತಾ ಸೆಡ್ಡು!

    ಚಿಹ್ನೆ ಆಯ್ಕೆಯಲ್ಲಿ ದಳಪತಿಗಳಿಗೆ ರೆಬೆಲ್ ಸುಮಲತಾ ಸೆಡ್ಡು!

    ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಚಿಹ್ನೆ ಆಯ್ಕೆಯಲ್ಲಿ ದಳಪತಿಗಳಿಗೆ ಶಾಕ್ ನೀಡಿದ್ದಾರೆ. ರೈತರು ಇರುವ ಮೂರು ಚಿಹ್ನೆಗಳಲ್ಲಿ ಒಂದನ್ನು ನೀಡುತ್ತೇವೆ ಆಯೋಗಕ್ಕೆ ಸುಮಲತಾ ಅಂಬರೀಶ್ ಮನವಿ ಮಾಡಿಕೊಂಡಿದ್ದಾರೆ.

    ಈಗಾಗಲೇ ನಾಲ್ಕು ನಾಮಪತ್ರ ಸಲ್ಲಿಸಿರುವ ಸುಮಲತಾ ಅಂಬರೀಶ್ ರೈತ ಪರವಾದ ಮೂರು ಚಿಹ್ನೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಕಬ್ಬಿನ ಗದ್ದೆ ಮುಂದೆ ರೈತ, ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ ಚಿಹ್ನೆಗಳನ್ನು ಸುಮಲತಾ ಅವರು ಆಯ್ಕೆ ಮಾಡಿಕೊಂಡಿದ್ದಾರೆ.

    ರಾಜ್ಯದಲ್ಲಿ ಪ್ರತಿದಿನ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರ ಒಂದೇ ಹೆಸರಿನ ನಾಲ್ಕು ಅಭ್ಯರ್ಥಿಗಳ ಹೆಸರಿನಿಂದ ಸುದ್ದಿ ಆಗುತ್ತಿದೆ. ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಸುಮಲತಾ ಹೆಸರಿನ 4 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ. ಸುಮಲತಾ ಅಂಬರೀಶ್, ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ, ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗ್ರಾಮದ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

    ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡೋಕೆ ಸುಮಲತಾ ಎಂಬ ಹೆಸರಿನ ಮೂರು ಮಂದಿಯನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಬರತೊಡಗಿವೆ. ಇದರಿಂದ ಸುಮಲತಾ ಅಂಬರೀಶ್ ಅವರಿಗೆ ಬೀಳುವ ಮತಗಳನ್ನು ವಿಭಜನೆಯಾಗಿ, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈ ತಂತ್ರ ಮಾಡಲಾಗಿದೆ ಎನ್ನಲಾಗುತ್ತಿದೆ.

  • ಕೊನೆಗೂ ಹುಚ್ಚ ವೆಂಕಟ್ ಗೆ `ಎಕ್ಕಡ’ ದಯಪಾಲಿಸಿದ ಚುನಾವಣಾ ಆಯೋಗ!

    ಕೊನೆಗೂ ಹುಚ್ಚ ವೆಂಕಟ್ ಗೆ `ಎಕ್ಕಡ’ ದಯಪಾಲಿಸಿದ ಚುನಾವಣಾ ಆಯೋಗ!

    ಬೆಂಗಳೂರು: ನನ್ ಮಗಂದ್ ನನ್ ಎಕ್ಕಡ ಅಂತಾ ತಲೆ ತುಂಬಾ ಇರುವ ಕೂದಲನ್ನು ಕೆದರಿಸಿ ಕೆದರಿಸಿ ಹೇಳುವ ಹುಚ್ಚಾ ವೆಂಕಟ್ ಗೆ ಕೊನೆಗೂ ಚುನಾವಣಾ ಆಯೋಗ ಎಕ್ಕಡವನ್ನು ದಯಪಾಲಿಸಿದೆ.

    ನಟ, ನಿರ್ದೇಶಕ ಹುಚ್ಚ ವೆಂಕಟ್ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ ಪಕ್ಷದವರು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಚುನಾವಣೆ ಪ್ರಚಾರವನ್ನು ಶುರು ಮಾಡಿದ್ದಾರೆ.

    ಹುಚ್ಚ ವೆಂಕಟ್ ಆರ್ ಆರ್ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಚುನಾವಣೆ ಆಯೋಗವು ಅಭ್ಯರ್ಥಿಗಳ ಗುರುತನ್ನ, ಚಿಹ್ನೆಯನ್ನು ಘೋಷಣೆ ಮಾಡಿದೆ. ಆದರೆ ನಿಮ್ಮಪ್ಪನ ಚಪ್ಪಲಿ ಸೈಜ್ ಗೊತ್ತಾ, ಅಪ್ಪಂಗೆ ಯಾವತ್ತಾದ್ದರೂ ಚಪ್ಪಲಿ ಕೊಡಿಸಿದ್ದೀರಾ ಅಂತಾ ಪದೇ ಪದೇ ಟಿವಿಯೆದುರು ಕುಂತಾಗ ಸೆಂಟಿಮೆಂಟ್ ಡೈಲಾಗ್ ಹೇಳುವ ವೆಂಕಟ್ ಗೆ ಚಿಹ್ನೆಯಾಗಿ ಎಕ್ಕಡವೆ ತನ್ನ ಗುರುತಾಗಿ ಸಿಕ್ಕಿದೆ.

    ಎಕ್ಕಡನಾ ಕಾಡಿಬೇಡಿ ವೆಂಕಟ್ ಪಡೆದುಕೊಂಡರೋ ಅಥವಾ ಚುನಾವಣಾಧಿಕಾರಿಗಳೇ ವೆಂಕಟ್ ಎಕ್ಕಡಾ ಡೈಲಾಗ್ ಗೆ ಫಿದಾ ಆಗಿ ಇದೇ ಚಿಹ್ನೆ ಕೊಟ್ಟರೋ ಗೊತ್ತಿಲ್ಲ. ಆದರೆ ಎಕ್ಕಡದೊಂದಿಗೆ ಕಣಕ್ಕಿಳಿದಿರುವ ವೆಂಕಟ್ ಆರ್ ಆರ್ ನಗರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.

  • ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ನೀತಿ ಸಂಹಿತೆ ಉಲ್ಲಂಘನೆ, ಹಸ್ತ ಚಿಹ್ನೆಯನ್ನೇ ರದ್ದುಮಾಡಿ!

    ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ನೀತಿ ಸಂಹಿತೆ ಉಲ್ಲಂಘನೆ, ಹಸ್ತ ಚಿಹ್ನೆಯನ್ನೇ ರದ್ದುಮಾಡಿ!

    ನವದೆಹಲಿ: ಕರ್ನಾಟಕ ಚುನಾವಣಾ ಹೊಸ್ತಿಲಿನಲ್ಲಿದೆ. ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ನ ಕೈ ಚಿಹ್ನೆಯನ್ನು ತೆಗೆಯುವಂತೆ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ದೂರಿನ ವಿಚಾರಣೆ ಏಪ್ರಿಲ್ 18ರಂದು ನಡೆಯಲಿದೆ.

    ಕಾಂಗ್ರೆಸ್ ಹಸ್ತ ಚಿಹ್ನೆ ಹೊಂದಿರುವ ಕಾರಣ ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಚುನಾವಣಾ ಆಯೋಗಕ್ಕೆ ಜನವರಿ ತಿಂಗಳಿನಲ್ಲಿ ದೂರು ನೀಡಿದ್ದರು.

    ಕೈ ದೇಹದ ಭಾಗವಾಗಿರುವುದರಿಂದ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ದೂರು ನೀಡಿದ್ದೆ. ಆಯೋಗ ದೂರನ್ನು ಸ್ವೀಕರಿಸಿದೆ. ಉಪ ಚುನಾವಣಾ ಆಯುಕ್ತ ಭೂಷಣ್ ಚಂದ್ರ ಕುಮಾರ್ ಅವರು ವಿಚಾರಣೆ ನಡೆಸಲಿದ್ದಾರೆ ಎಂದು ಅಶ್ವಿನಿ ಉಪಾಧ್ಯಾಯ ತಿಳಿಸಿದ್ದಾರೆ.

    ಚುನಾವಣೆ ನಡೆಯುವ 48 ಘಂಟೆಗಳ ಮೊದಲು, ಚುನಾವಣೆಯ ದಿನ, ಮತ ಕೇಂದ್ರದಿಂದ 100 ಮೀಟರ್ ಒಳಗೆ ಯಾರು ಪ್ರಚಾರ ಮಾಡುವಂತಿಲ್ಲ. ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಕಾಂಗ್ರೆಸ್ ಚಿಹ್ನೆ ಕೈ ಆಗಿರುವುದರಿಂದ ಮತ ಕೇಂದ್ರಗಳಲ್ಲಿ ಕೂರುವ ಪಕ್ಷದ ವೀಕ್ಷಕರು ಕೂಡ ಕೈ ತೋರಿಸಿ ಮತದಾರರಿಗೆ ಸನ್ನೆ ಮಾಡಬಹುದಾಗಿದೆ. ಎಲ್ಲ ಚುನಾವಣೆಯಲ್ಲಿ ಇದು ಉಲ್ಲಂಘನೆ ಆಗುತ್ತಿರುವ ಕಾರಣ ಕೈ ಚಿಹ್ನೆಯನ್ನು ತೆಗೆಯುವಂತೆ ದೂರಿನಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

    ಈ ಮೊದಲು ಎತ್ತಿನ ಬಂಡಿ, ಹಸು ಮತ್ತು ಕರು ಕಾಂಗ್ರೆಸ್‍ನ ಚಿಹ್ನೆಗಳಾಗಿದ್ದವು ಎಂದು ದೂರಿನಲ್ಲಿ  ದೂರುದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

  • ನಟ ಉಪೇಂದ್ರ ಕೆಪಿಜೆಪಿ ಪಕ್ಷದ ಅಧಿಕೃತ ಚಿಹ್ನೆ ಘೋಷಣೆ

    ನಟ ಉಪೇಂದ್ರ ಕೆಪಿಜೆಪಿ ಪಕ್ಷದ ಅಧಿಕೃತ ಚಿಹ್ನೆ ಘೋಷಣೆ

    ಹುಬ್ಬಳ್ಳಿ: ನಟ ಉಪೇಂದ್ರ ತಮ್ಮ `ಪ್ರಜಾಕೀಯ’ (ಕೆಪಿಜೆಪಿ) ಪಕ್ಷದ ಅಧಿಕೃತ ಚಿಹ್ನೆ “ಆಟೋ ರಿಕ್ಷಾ” ಎಂದು ಘೋಷಣೆ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಟೋ ರಿಕ್ಷಾ ಪಕ್ಷದ ಚಿಹ್ನೆಯಾಗಿ ಸಿಕ್ಕಿರುವುದು ಅತ್ಯಂತ ಸಂತೋಷವಾಗಿದೆ. ಕನ್ನಡ ಅಭಿಮಾನಿಗಳ ನೆಚ್ಚಿನ ನಟ ಶಂಕರ್ ನಾಗ್ ಸರ್ ಅವರಿಗೆ ಇದನ್ನು ಅರ್ಪಣೆ ಮಾಡುತ್ತೇನೆ. ಶಂಕರ್ ನಾಗ್ ಅವರು ಹಲವು ಕನಸುಗಳನ್ನು ಹೊಂದಿದ್ದರು. ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ಭಾರತಕ್ಕೆ ಮೆಟ್ರೋ ರೈಲು, ಬಡವರಿಗೆ ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡುವಂತಹ ಹಲವು ಯೊಜನೆಗಳನ್ನು ಹೊಂದಿದ್ದರು. ಅವರ ಆಟೋ ರಾಜ ಸಿನಿಮಾ ಮೂಲಕ ಎಲ್ಲರಿಗೂ ಪ್ರೇರಣೆ, ಅವರ ಚಿಂತನೆಗಳಿಂದ ಸ್ಫೂರ್ತಿ ಪಡೆದು ನಾನು ಖಾಕಿ ಬಟ್ಟೆ ಧರಿಸಿ, ಪಕ್ಷ ಸ್ಥಾಪನೆ ಮಾಡಿದೆ ಎಂದು ಹೇಳಿದರು.

    ಇನ್ನು ಪಕ್ಷದ ಚಿಹ್ನೆಯ ಕುರಿತು ವಿವರಣೆ ನೀಡಿದ ಅವರು, ಆಟೋ ಎಂಬ ಪದಕ್ಕೆ ವಿಶಾಲ ಅರ್ಥವಿದೆ. ನಮಗೇ ನಾಯಕರು ಬೇಡ, ಕಾರ್ಮಿಕರು ಬೇಕು ಎಂಬ ಹಿನ್ನೆಲೆಯಲ್ಲಿ ಖಾಕಿ ಧರಿಸಿ ಕೆಪಿಜಿಪಿ ಪಕ್ಷ ಸಂಘಟನೆ ಮಾಡಿದ್ದೇವೆ. ಆಟೋ ಎಂಬ ಪದ ಮಿಷನ್, ಆಟೋಮೆಟಿಕ್ ಆಂದರೆ ಸ್ವಯಂ ಚಾಲಿತವಾದದ್ದು ಎಂಬ ಅರ್ಥ ಹೊಂದಿದೆ. ಸರ್ಕಾರವು ಹಾಗೆಯೇ ಕಾರ್ಯ ನಿರ್ವಹಿಸಬೇಕು. ಒಂದು ದೊಡ್ಡ ಕಾಪೋರೇಟ್ ಸಂಸ್ಥೆ ಹೇಗೆ ಭ್ರಷ್ಟಚಾರ ಮುಕ್ತವಾಗಿ ನಡೆಯುತ್ತದೆ. ಅಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಕೋಟ್ಯಾಂತರ ಹಣ, ಬಜೆಟ್ ಹೊಂದಿದ್ದರೂ ಸರ್ಕಾರದಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಮಾಡುವ ನಾಯಕರು ಬೇಡ. ಜನರ ಸಂಪರ್ಕದಲ್ಲಿರುವ ಸೇವಕರು ಬೇಕಾಗಿದ್ದಾರೆ. ಪ್ರಜಾಕೀಯದ ಮೂಲಕ ಆಡಳಿತದಲ್ಲಿ ಪರದರ್ಶಕತೆ ತರುವುದು ನಮ್ಮ ಉದ್ದೇಶವಾಗಿದೆ. ಆದೇ ರೀತಿ ಸರ್ಕಾರವು ಭ್ರಷ್ಟಚಾರ ಮುಕ್ತವಾಗಿ ನಡೆಯಬೇಕು ಎಂದರು.

    ರಾಜಕೀಯದಲ್ಲಿ ಹಣ, ಜಾತಿ, ಜನರ ಮನೋಭಾವನೆ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಬದಲಾಗಬೇಕಿದೆ. ಅದರಿಂದಲೇ ಪ್ರಜಾಕೀಯ ಎಂಬ ವೇದಿಕೆ ಸೃಷ್ಟಿಯಾಗಿದೆ. ಪ್ರತಿಯೊಬ್ಬರಲ್ಲೂ ಹಲವಾರು ಯೋಜನೆ, ಚಿಂತನೆಗಳು ಇರುತ್ತವೆ. ಅವುಗಳನ್ನು ನಮಗೆ ತಿಳಿಸಿ, ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

    ಚುನಾವಣೆಯಲ್ಲಿ ವಿಷಯಾಧಾರಿತವಾದ ಅಂಶಗಳ ಮೇಲೆ ಚರ್ಚೆ ನಡೆದು, ಅವುಗಳ ಮೇಲೆ ಮತದಾನ ಮಾಡುವ ನಿರ್ಣಯ ಮಾಡಬೇಕಿದೆ. ತಂತ್ರಜ್ಞಾನವನ್ನು ಬಳಸಿ ಪ್ರತಿಯೊಂದು ಕಾರ್ಯವನ್ನ ಪರದರ್ಶಕವಾಗಿ ಮಾಡಬಹುದು. ಪ್ರತಿ ಸರ್ಕಾರಿ ಅಧಿಕಾರಿಯ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು. ಸಮಸ್ಯೆಗಳ ಕುರಿತು ಚರ್ಚೆ ಮಾಡುವ ಬದಲು ಅವುಗಳಿಗೆ ಪರಿಹಾರ ಹುಡುಕುವ ಕಾರ್ಯ ನಡೆಯಬೇಕಿದೆ. ಪಕ್ಷ ಪ್ರಣಾಳಿಕೆಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅವುಗಳ ಕುರಿತು ವಿಸ್ತಾರ ಚರ್ಚೆ ಮಾಡಲಾಗುತ್ತದೆ. ನಾನು ಸಾಮಾನ್ಯ ಪ್ರಜೆಯಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

     

  • ನಾಗರ ಹಾವಿನ ತಲೆಯ ಮೇಲೆ ಹಾರುವ ಗರುಡನ ಚಿತ್ರ

    ನಾಗರ ಹಾವಿನ ತಲೆಯ ಮೇಲೆ ಹಾರುವ ಗರುಡನ ಚಿತ್ರ

    ಕಾರವಾರ: ನಾಗರ ಹಾವಿನ ತಲೆಯ ಮೇಲೆ ಗರುಡನ ಚಿತ್ರ ಮೂಡಿರುವ ಅಪರೂಪದ ಹಾವೊಂದು ಕಾರವಾರ ತಾಲೂಕಿನ ಆವರ್ಸಾದ ಸಚಿನ್ ನಾಯ್ಕ ರವರ ಮನೆಯಲ್ಲಿ ಪ್ರತ್ಯಕ್ಷವಾಗುವ ಮೂಲಕ ಜನರ ಕುತೂಹಲಕ್ಕೆ ಕಾರಣವಾಗಿದೆ.

    ತನ್ನ ಹೆಡೆಯ ಮೇಲೆ ಕನ್ನಡಕದ ಆಕಾರದ ಚಿಹ್ನೆಯ ಜೊತೆಗೆ ಅದರ ಮೇಲ್ಭಾಗದಲ್ಲಿ ಹಾರುತ್ತಿರುವ ಗರುಡನಂತಹ ಚಿಹ್ನೆ ಮೂಡಿದೆ. ಸಾಮಾನ್ಯವಾಗಿ ನಾಗರ ಹಾವಿನ ಹೆಡೆಯ ಮೇಲೆ ಕನ್ನಡಕದಂತೆ ರೇಖೆಗಳು ಮೂಡಿರುತ್ತದೆ. ಇಲ್ಲವೇ ಹೆಡೆಯ ಭಾಗದಲ್ಲಿ ಎರಡು ಕಪ್ಪು ಮಚ್ಚೆಯಂತೆ ಆಕೃತಿ ಮೂಡುವುದು ಸಾಮಾನ್ಯವಾಗಿರುತ್ತದೆ.

    ಇವೆಲ್ಲವನ್ನೂ ಹೊರತುಪಡಿಸಿ ಹೆಡೆಯ ಮೇಲೆ ಗರುಡನ ಆಕೃತಿ ಮೂಡಿರುವ ಈ ನಾಗರಹಾವು ಬಲು ಅಪರೂಪದ್ದಾಗಿದೆ. ಇನ್ನು ಮನೆಗೆ ಆಗಮಿಸಿದ್ದ ಈ ವಿಶೇಷ ನಾಗರಹಾವನ್ನು ಉರಗ ತಜ್ಞ ಮಹೇಶ್ ನಾಯ್ಕ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

     

  • ಎಐಎಡಿಎಂಕೆಯ ಚಿಹ್ನೆಗಾಗಿ ಲಂಚ ಆರೋಪ- ಶಶಿಕಲಾ ಸಂಬಂಧಿ ದಿನಕರನ್ ವಿರುದ್ಧ ಕೇಸ್

    ಎಐಎಡಿಎಂಕೆಯ ಚಿಹ್ನೆಗಾಗಿ ಲಂಚ ಆರೋಪ- ಶಶಿಕಲಾ ಸಂಬಂಧಿ ದಿನಕರನ್ ವಿರುದ್ಧ ಕೇಸ್

    ನವದೆಹಲಿ: ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ಆರೋಪದ ಮೇಲೆ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾದ ದಿನಕರನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರ್‍ಕೆ ನಗರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಎರಡು ಬಣದ ನಡುವೆ ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣಾ ಆಯೋಗ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ತಡೆಹಿಡಿದಿತ್ತು. ಈ ಚಿಹ್ನೆಗಾಗಿ ದನಕರನ್ 50 ಕೋಟಿ ರೂ. ಲಂಚ ಕೊಡಲು ಸಿದ್ಧರಾಗಿದ್ದರು ಎಂದು ವರದಿಯಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್‍ನನ್ನು ಪೊಲೀಸರು ಬಂಧಿಸಿದ್ದು, ಸುಖೇಶ್ ಬಳಿ 1.3 ಕೋಟಿ ರೂ. ಪತ್ತೆಯಾಗಿದೆ. ಇದು ಚುನಾವಣಾ ಆಯೋಗಕ್ಕೆ ನೀಡಲು ಇಟ್ಟುಕೊಂಡಿದ್ದ ಹಣ ಎಂದು ಹೇಳಲಾಗಿದೆ. ಲಂಚ ನೀಡಲು ಮುಂದಾಗದ್ದ ಬಗ್ಗೆ ಸುಖೇಶ್ ಒಪ್ಪಿಕೊಂಡಿದ್ದಾನೆಂದು ವರದಿಯಾಗಿದೆ. ಆದ್ರೆ ಈ ಪ್ರಕರಣದಲ್ಲಿ ಚುನಾವಣಾ ಆಯೋಗದ ಪಾತ್ರ ಇದೆಯೋ ಇಲ್ಲವೋ ಎಂದು ಹೇಳಲು ಯಾವುದೇ ಸಾಕ್ಷಿಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಆದ್ರೆ ದಿನಕರನ್ ಈ ಆರೋಪಗಳನ್ನ ತಳ್ಳಿಹಾಕಿದ್ದು, ಸುಖೇಶ್ ಚಂದ್ರಶೇಖರ್ ಎಂಬ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಾನು ನನ್ನ ಜೀವನದಲ್ಲೇ ಈ ವ್ಯಕ್ತಿಯ ಜೊತೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಬಂಧಿತ ಆರೋಪಿ ಸುಖೇಶ್‍ನಿಂದ ಪೊಲೀಸರು 1.3 ಕೋಟಿ ರೂ. ಹಣ, ಬಿಎಂಡ್ಬ್ಯೂ ಹಾಗೂ ಮರ್ಸಿಡಿಸ್ ಕಾರುಗಳನ್ನ ಜಪ್ತಿ ಮಾಡಿದ್ದಾರೆ.