Tag: Sydney Sixers

  • ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಮೆಲ್ಬರ್ನ್‌ : ವಿರಾಟ್‌ ಕೊಹ್ಲಿ (Virat Kohli) ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ. ಹೀಗಂತ ಸಿಡ್ನಿ ಸಿಕ್ಸರ್‌ (Sydney Sixers) ತಂಡವೇ ಅಧಿಕೃತವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕೊಹ್ಲಿ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ತಲೆಗೆ ಹುಳ ಬಿಟ್ಟಿದೆ.

    ಭಾರತದಲ್ಲಿ ಹೇಗೆ ಇಂಡಿಯನ್‌ ಪೀಮಿಯರ್‌ ಲೀಗ್‌ (IPL) ಇದೆಯೋ ಅದೇ ರೀತಿ ಆಸ್ಟ್ರೇಲಿಯಾದಲ್ಲಿ (Austrila) ಬಿಗ್‌ ಬ್ಯಾಷ್‌ ಲೀಗ್‌ (BBL) ಇದೆ. ಈ ಲೀಗ್‌ನಲ್ಲಿರುವ ಸಿಡ್ನಿ ಸಿಕ್ಸರ್‌, ಮುಂದಿನ ಎರಡು ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ ನಮ್ಮ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ಪೋಸ್ಟ್‌ ಮಾಡಿದೆ.

     

    ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನಲ್ಲೇ ಸಿಡ್ನಿ ಸಿಕ್ಸರ್‌ ಏಪ್ರಿಲ್‌ ಫೂಲ್ಸ್‌ ಡೇ (April Fools Day) ಎಂದು ಪೋಸ್ಟ್‌ ಮಾಡಿ ಎದ್ದಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

    ಬಿಸಿಸಿಐ (BCCI) ಐಪಿಎಲ್‌ಗೆ ಆದ್ಯತೆ ನೀಡುವ ಮತ್ತು ದೇಶೀಯ ಕ್ರಿಕೆಟ್‌ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ನೀತಿಯಿಂದಾಗಿ ಭಾರತೀಯ ಆಟಗಾರರು ಇತರ ಕ್ರಿಕೆಟ್ ಲೀಗ್‌ಗಳಿಗೆ ಆಸಕ್ತಿ ತೋರಿಸುತ್ತಿಲ್ಲ.  ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

    ಇದರ ಜೊತೆ ಇನ್ನೊಂದು ಕಾರಣ ಇದೆ. ಭಾರತದ ಯಾವುದೇ ಕ್ರಿಕೆಟಿಗ ಕೂಡ ವಿದೇಶಿ ಕ್ರಿಕೆಟ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸಬೇಕೆಂದರೆ ಆ ಆಟಗಾರ ಬಿಸಿಸಿಐ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಐಪಿಎಲ್‌ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಬೇಕಾಗುತ್ತದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

    ಬಿಸಿಸಿಐ ವಿದೇಶಿ ಟೂರ್ನಿಗೆ ಹೋಗಲೇಬಾರದು ಎಂದು ಯಾವುದೇ ನಿರ್ಬಂಧ ಹೇರಿಲ್ಲ. ಸದ್ಯ ಐಪಿಎಲ್‌ನಷ್ಟು ಪ್ರಚಾರ ಬೇರೆ ಯಾವುದೇ ಕ್ರಿಕೆಟ್‌ ಟೂರ್ನಿಗೆ ಇಲ್ಲ. ಹೀಗಾಗಿ ಭಾರತದ ಆಟಗಾರರು ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ.

     

  • ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್‍ಬಾಶ್ ಲೀಗ್‍ನಲ್ಲಿ ಭಾರತದ ರಾಧಾ ಯಾದವ್ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿಯುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ.

    ಸಿಡ್ನಿ ಸಿಕ್ಸರ್ಸ್ ಮತ್ತು ಬ್ರಿಸ್ಬೇನ್ ನಡುವಿನ ಪಂದ್ಯದಲ್ಲಿ ಮಿಲನ್ ಡು ಪ್ರೀಜ್ ಪಾಯಿಂಟ್ ಮೇಲೆ ಬಾಲ್‍ನ್ನು ಬೌಂಡರಿ ಗಟ್ಟಲು ಪ್ರಯತ್ನಿಸಿದರು. ಈ ವೇಳೆ ಪಾಯಿಂಟ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಧಾ ಯಾದವ್ ಚಂಗನೆ ಹಾರಿ ಒಂದೇ ಕೈಯಲ್ಲಿ ಅದ್ಭುತವಾದ ಕ್ಯಾಚ್ ಹಿಡಿದರು. ಇದನ್ನು ಕಂಡ ಅಭಿಮಾನಿಗಳು ಆಶ್ಚರ್ಯಚಕಿತರಾದರು. ತಂಡ ಸಹ ಆಟಗಾರ್ತಿಯರು ಯಾದವ್ ಕ್ಯಾಚ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ

    ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‍ಬಾಶ್ ಲೀಗ್‍ನಲ್ಲಿ ಭಾರತದ 8 ಮಂದಿ ಆಟಗಾರ್ತಿಯರು ಆಡುತ್ತಿದ್ದು, ಅವರು ಪ್ರತಿನಿಧಿಸುತ್ತಿರುವ ತಂಡದ ಪರವಾಗಿ ಭರ್ಜರಿ ಪ್ರದರ್ಶನ ಕೊಡುವ ಮೂಲಕ ವಿಶ್ವ ಕ್ರಿಕೆಟ್‍ನ ಗಮನಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ