Tag: swords

  • ಹಾಡಹಗಲೇ 11 ಮಂದಿ ದಾಳಿ ನಡೆಸಿ, 27 ಬಾರಿ ಕೊಚ್ಚಿ ಕೊಂದೇ ಬಿಟ್ರು!  ಶಾಕಿಂಗ್ ವಿಡಿಯೋ

    ಹಾಡಹಗಲೇ 11 ಮಂದಿ ದಾಳಿ ನಡೆಸಿ, 27 ಬಾರಿ ಕೊಚ್ಚಿ ಕೊಂದೇ ಬಿಟ್ರು! ಶಾಕಿಂಗ್ ವಿಡಿಯೋ

    ಮುಂಬೈ: 11 ಜನರ ಗುಂಪೊಂದು ಹಾಡಹಗಲೇ ವ್ಯಕ್ತಿಯನ್ನು ರಸ್ತೆ ಬದಿಯಲ್ಲೇ 27 ಬಾರಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ಮಂಗಳವಾರ ನಡೆದಿದೆ.

    ಮುಂಬೈಯಿಂದ 280 ಕಿಮೀ ದೂರದಲ್ಲಿರುವ ಧುಲೆ ಎಂಬಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರೌಡಿ ಶೀಟರ್ ರಫೀಕುದ್ದೀನ್ ಕೊಲೆಯಾದ ವ್ಯಕ್ತಿ. ಮಂಗಳವಾರ ಬೆಳಗ್ಗೆ ರಸ್ತೆಯ ಬದಿಯಲ್ಲಿನ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ 11 ಮಂದಿಯ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ನಡೆಸಿದೆ. ಹತ್ಯೆ ಎಸಗಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ರೌಡಿಯಾಗಿದ್ದ ಈತನ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ದ್ವೇಷದ ಹಿನ್ನೆಲೆಯಲ್ಲಿ ಸ್ಥಳೀಯ ಗೂಂಡಾಗಳೇ ಈತನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಕೊಲೆಯಾದ ಎರಡು ದಿನಗಳ ನಂತರ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಇದುವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ.

     

    https://youtu.be/TL8BVmg-p9c