Tag: switzerland

  • ಸ್ವಿಟ್ಜರ್​ಲ್ಯಾಂಡ್‌ನಲ್ಲಿ ಕಾಂತಾರ ಚೆಲುವೆ ಸಪ್ತಮಿಗೌಡ ಜಾಲಿ ಜಾಲಿ

    ಸ್ವಿಟ್ಜರ್​ಲ್ಯಾಂಡ್‌ನಲ್ಲಿ ಕಾಂತಾರ ಚೆಲುವೆ ಸಪ್ತಮಿಗೌಡ ಜಾಲಿ ಜಾಲಿ

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ (Kantara) ಸ್ವಿಕ್ವೇಲ್ ಸಿನಿಮಾದಲ್ಲಿ ಲೀಲಾ ಆಗಿ ಮಿಂಚಿದ್ದ ಸಪ್ತಮಿ ಗೌಡ (Sapthami Gowda) ಬಳಿಕ ತೆಲುಗು ಸಿನಿಮಾದಲ್ಲೂ ನಟಿಸಿ ಖ್ಯಾತಿ ಗಳಿಸಿದ್ದಾರೆ. ಇದೀಗ ವಿದೇಶದ ಸುಂದರ ತಾಣಗಳಲ್ಲಿ ನಿಂತು ವಿಧ ವಿಧವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಪ್ತಮಿಗೌಡ ಸ್ವಿಟ್ಜರ್​ಲ್ಯಾಂಡ್‌ನ (Switzerland) ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಸ್ಟೈಲ್ ಸ್ಮೈಲ್ ಕೊಟ್ಟಿದ್ದಾರೆ.

    ಸಪ್ತಮಿಗೌಡ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರ್ತಾರೆ. ಇತ್ತೀಚೆಗೆ ತೂಕ ಇಳಿಸಿ, ತೆಳ್ಳಗೆ ಬಳುಕುವ ಬಳ್ಳಿಯ ಹಾಗೆ ಮತ್ತಷ್ಟು ಪಿಟ್ ಆಗಿ ಕಣ್ಮನ ಸೆಳೆಯುತ್ತಿದ್ದಾರೆ. ಪ್ರಕೃತಿಯ ಸೊಬಗನ್ನು ಸವಿಯುತ್ತಾ ಹೊಸ ಹೊಸ ಉಡುಗೆಯಲ್ಲಿ ವಿದೇಶದ ಬೀದಿಯಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ

    ಸದ್ಯ ವಿಶ್ವದಾದ್ಯಂತ ಕಾಂತಾರ ಚಾಪ್ಟರ್-1 ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇತ್ತ ಕಾಂತಾರ ಸಿಕ್ವೇಲ್ ಸುಂದರಿ ಸಿಂಗಾರ ಸಿರಿ ಸ್ವಿಟ್ಜರ್​ಲ್ಯಾಂಡ್‌ನ ಯಾತ್ರೆ ಕೈಗೊಂಡಿದ್ದಾರೆ. ಸಪ್ತಮಿಗೌಡ ಹಾಕಿರುವ ಪೋಸ್ಟ್‌ಗೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ.

  • ಕ್ವಾಂಟಮ್ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ, ಆವಿಷ್ಕಾರಕ್ಕೆ ಕರ್ನಾಟಕದ ಜೊತೆ ಕೈಜೋಡಿಸಿ: ಬೋಸರಾಜು ಆಹ್ವಾನ

    ಕ್ವಾಂಟಮ್ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ, ಆವಿಷ್ಕಾರಕ್ಕೆ ಕರ್ನಾಟಕದ ಜೊತೆ ಕೈಜೋಡಿಸಿ: ಬೋಸರಾಜು ಆಹ್ವಾನ

    ಬರ್ನ್: 2035ರ ವೇಳೆಗೆ ರಾಜ್ಯವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ದಿಟ್ಟ ಹೆಜ್ಜೆಗಳನ್ನು ಕರ್ನಾಟಕ ಸರ್ಕಾರ ಇಟ್ಟಿದೆ. ಬೆಂಗಳೂರು ನಗರದಲ್ಲಿ ಕ್ಯೂ-ಸಿಟಿ (Q- ಕ್ವಾಂಟಮ್‌ ಸಿಟಿ) ಸ್ಥಾಪಿಸಲು ಅಗತ್ಯ ಭೂಮಿಯನ್ನು ನಿಗದಿಪಡಿಸಲಾಗಿದೆ. ಕ್ವಾಂಟಮ್ (Quantum) ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಫುಲ ಅವಕಾಶಗಳಿದ್ದು, ಸಹಭಾಗಿತ್ವದ ಸಂಶೋಧನೆಗೆ ಕರ್ನಾಟಕ (Karnataka) ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ಎಸ್ ಬೋಸರಾಜು (NS Boseraju) ಕರೆ ನೀಡಿದರು.

    ಇಂದು ಸ್ವಿಟ್ಜರ್ಲೆಂಡ್‌ನ ಜಿನೆವಾದ ಬಯೋಟೆಕ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ‘ಸ್ವಿಸ್‌ನೆಕ್ಸ್ ಕ್ವಾಂಟಮ್ ಸಮಿಟ್ 2025’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ಇಟ್ಟಿರುವಂತಹ ದಿಟ್ಟ ಹೆಜ್ಜೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಭಾರತ ಸರ್ಕಾರವು ಸುಮಾರು 6,000 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಆರಂಭಿಸಿದೆ. ಈ ಮಿಷನ್ ನಾವೀನ್ಯತೆ, ಕೌಶಲ್ಯ ಮತ್ತು ಸ್ಟಾರ್ಟ್-ಅಪ್ ಬೆಂಬಲದ ಮೂಲಕ 50ರಿಂದ 1000ಕ್ಯೂ ಬಿಟ್ ಕ್ವಾಂಟಮ್ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವುದು, ಸುರಕ್ಷಿತ ಕ್ವಾಂಟಮ್ ಸಂವಹನ ಜಾಲಗಳನ್ನು ನಿರ್ಮಿಸುವುದು ಮತ್ತು ಕಂಪ್ಯೂಟಿಂಗ್, ಸಂವಹನ, ಸಂವೇದನೆ ಮತ್ತು ಸಾಮಗ್ರಿಗಳಿಗಾಗಿ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯವು ಈ ರಾಷ್ಟ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವ ಪ್ರಮುಖ ರಾಜ್ಯವಾಗಿ ಹೊರಹೊಮ್ಮಿದೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಅನ್ಯಕೋಮಿನ ವ್ಯಕ್ತಿಯಿಂದ ಪದವೀಧರೆ ಮೇಲೆ ರೇಪ್‌ – ಸಂತ್ರಸ್ತೆ ನೆರವಿಗೆ ಧಾವಿಸಿದ ಮಹಿಳೆ ಹೇಳಿದ್ದೇನು?

    ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಈಗಾಗಲೇ ಕ್ವಾಂಟಮ್ ರಿಸರ್ಚ್ ಪಾರ್ಕನ್ನು ಸ್ಥಾಪಿಸಿದ್ದು, ಕರ್ನಾಟಕ ಸರ್ಕಾರ ಅಗತ್ಯ ಅನುದಾನ ನೀಡಿದೆ. ಈ ಮೂಲಕ ತಂತ್ರಜ್ಞಾನಕ್ಕೆ ಈಗಾಗಲೇ ಮಹತ್ವದ ಬದ್ಧತೆಯನ್ನು ತೋರಿದೆ. ಈ ಸೌಲಭ್ಯವು 55ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಮತ್ತು 13 ಸ್ಟಾರ್ಟ್ಅಪ್‌ಗಳನ್ನು ಬೆಂಬಲಿಸಿದೆ. ವಾರ್ಷಿಕ 1,000ಕ್ಕೂ ಹೆಚ್ಚು ಕ್ವಾಂಟಮ್ ತಜ್ಞರಿಗೆ ತರಬೇತಿ ನೀಡುತ್ತಿದೆ. ದೀರ್ಘಾವಧಿಯಲ್ಲಿ ಇದನ್ನು ಮುಂದುವರಿಸಲು ನಮ್ಮ ಸರ್ಕಾರವು 48 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಮೇಲೆ ಕೇಸ್ ದಾಖಲಿಸಲಿ: ಅಶ್ವಥ್ ನಾರಾಯಣ್

    ಜುಲೈ 31 ಹಾಗೂ ಆಗಸ್ಟ್ 1, 2025ರಂದು ಎರಡು ದಿನಗಳ ಕಾಲ ಭಾರತ ದೇಶದ ಮೊದಲ ಕ್ವಾಂಟಮ್ ಇಂಡಿಯಾ ಶೃಂಗಸಭೆಯನ್ನು ಬೆಂಗಳೂರು ನಗರದಲ್ಲಿ ಆಯೋಜಿಸಲಾಯಿತು. ಕ್ವಾಂಟಮ್ ಇಂಡಿಯಾ ಸಮಿಟ್, ಇಬ್ಬರು ನೋಬೆಲ್ ಪ್ರಶಸ್ತಿ ಪುರಸ್ಕೃರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಸಂಶೋಧಕರು, ಹಾಗೂ ಕ್ವಾಂಟಮ್ ಕ್ಷೇತ್ರದ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಆ ಸಮ್ಮೇಳನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಕ್ವಾಂಟಮ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಮೀಸಲಿರಿಸುವ ಘೋಷಣೆಯನ್ನು ಮಾಡಿದ್ದಾರೆ. ಸಮಾವೇಶದಲ್ಲಿ ನೀಡಿದ್ದ ಭರವಸೆಯಂತೆ ಕ್ಯೂ-ಸಿಟಿ ನಿರ್ಮಾಣಕ್ಕೆ ಅಗತ್ಯವಿರುವಂತಹ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನೀವು ಪಿತೂರಿಯಲ್ಲಿ ತೊಡಗಿದ್ದೀರಿ – ರೈಲ್ವೇ ಹಗರಣದಲ್ಲಿ ಲಾಲು, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

    ಪ್ರತಿವರ್ಷ ಸುಮಾರು 90 ಸಾವಿರಕ್ಕೂ ಹೆಚ್ಚು ಕ್ವಾಂಟಮ್ ಎಂಜಿನಿಯರ್‌ಗಳನ್ನು ತಯಾರಿಸುವ ಮೂಲಕ ವಿಶ್ವದಲ್ಲೇ ಅತ್ಯತ್ತಮ ಮಾನವ ಸಂಪನ್ಮೂಲ ಹೊಂದಿರುವ ದೇಶವಾಗಿದೆ. ಸಂಶೋಧನೆ ಹಾಗೂ ಆವಿಷ್ಕಾರದಲ್ಲಿ ಭಾರತ ದೇಶ ವಿಶ್ವ ಭೂಫಟದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಕರ್ನಾಟಕ ರಾಜ್ಯ ಕ್ವಾಂಟಮ್ ಕ್ಷೇತ್ರದ ಅಭಿವೃದ್ಧಿಗೆ ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡಿದೆ. ಸಿಲಿಕಾನ್ ವ್ಯಾಲಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ನಗರದಲ್ಲಿ ಕ್ವಾಂಟಮ್ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಫುಲ ಅವಕಾಶಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಸರ್ಕಾರ ಈ ಕ್ಷೇತ್ರಗಳಲ್ಲಿ ಕೈಜೋಡಿಸಲು ಮುಂದಾಗುವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಕರೆ ನೀಡಿದರು. ಇದನ್ನೂ ಓದಿ: ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದ್ರೆ ಮುಖಕ್ಕೆ ಹೊಡೆಯುತ್ತೇನೆ – ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ತರಾಟೆ

    ಶೃಂಗಸಭೆಯ ಸಂದರ್ಭದಲ್ಲಿ, ಸಚಿವ ಎನ್.ಎಸ್. ಬೋಸರಾಜು ಅವರು ʼಕ್ಯೂ-ಸಿಟಿ – ಫೇಸ್ ಒನ್ʼ ಪರಿಕಲ್ಪನೆಯ ವೀಡಿಯೋವನ್ನು ಅನಾವರಣಗೊಳಿಸಿದರು. ಇದು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಿರುವ ಕ್ವಾಂಟಮ್ ತಂತ್ರಜ್ಞಾನ ಕ್ಯಾಂಪಸ್‌ನ ಮೊದಲ ನೋಟವನ್ನು ನೀಡುತ್ತದೆ. ಪ್ರಸ್ತಾವಿತ ಕ್ಯೂ-ಸಿಟಿ ಹಾರ್ಡ್ವೇರ್ ಉತ್ಪಾದನಾ ಘಟಕಗಳು, ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು, ಇನ್‌ಕ್ಯುಬೇಶನ್ ಕೇಂದ್ರಗಳು ಮತ್ತು ಪ್ರಯೋಗಾಲಯದಿಂದ ಮಾರುಕಟ್ಟೆಗೆ ಕ್ವಾಂಟಮ್ ನಾವೀನ್ಯತೆಯನ್ನು ಅಭಿವೃದ್ಧಿಗೊಳಿಸಲು ವಿನ್ಯಾಸಗೊಳಿಸಲಾದ ಸಹಯೋಗದ ಕಾರ್ಯಕ್ಷೇತ್ರಗಳನ್ನು ಸಂಯೋಜಿಸುತ್ತದೆ. ಇದನ್ನೂ ಓದಿ: RSS ಬಗ್ಗೆ ಖರ್ಗೆಗೆ ಏನೂ ಕಿಸಿಯೋಕೆ ಆಗ್ಲಿಲ್ಲ, ಪ್ರಿಯಾಂಕ್‌ಗೆ ಆಗುತ್ತಾ? – ಯತ್ನಾಳ್ ಕಿಡಿ

    ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಐಎಎಸ್, ಭಾರತೀಯ ವಿಜ್ಞಾನ ಸಂಸ್ಥೆ (IISc) ಕ್ವಾಂಟಮ್ ರಿಸರ್ಚ್ ಪಾರ್ಕನ ಅಧ್ಯಕ್ಷರಾದ ಪ್ರೊ. ಅರಿಂದಮ್ ಘೋಷ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಸಮಾವೇಶದಲ್ಲಿ ಭಾಗವಹಿಸಿದೆ. ಇದನ್ನೂ ಓದಿ: ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

  • Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

    Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

    ಜೀವನದಲ್ಲಿ ಸಾಕಷ್ಟು ನೊಂದು, ಬೆಂದು ಬಹಳಷ್ಟು ಕಷ್ಟಗಳನ್ನು ಎದುರಿಸಿ ಜೀವನವೇ ಸಾಕಪ್ಪ ಎಂದು ಆತ್ಮಹತ್ಯೆ ಮಾಡಿಕೊಂಡು ಸಾಯುವವರ ಸುದ್ದಿಗಳನ್ನು ಪ್ರತಿನಿತ್ಯ ಟಿವಿ, ನ್ಯೂಸ್‌ಪೇಪರ್‌ಗಳಲ್ಲಿ ನೋಡುತ್ತಿರುತ್ತೇವೆ. ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಮಹಾ ಅಪರಾಧ. ಈ ಮಧ್ಯೆ ಸ್ವಿಟ್ಜರ್ಲೆಂಡ್ (Switzerland) ‘ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಬಹುದಾದ ಯಂತ್ರ’ವನ್ನು ಕಂಡುಹಿಡಿದಿದೆ. ಅದುವೇ ʼಸೂಸೈಡ್‌ ಪಾಡ್‌ʼ (ಆತ್ಮಹತ್ಯಾ ಪಾಡ್).‌ ಹಾಗಿದ್ರೆ ಏನಿದು ಯಂತ್ರ? ಇದರ ಕೆಲಸ ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    46 ವರ್ಷಗಳ ಕಾಲ ಬಾಳಿ ಬದುಕಿದ ಬ್ರಿಟಿಷ್‌ ದಂಪತಿ ಇದೀಗ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಪೀಟರ್ ಸ್ಕಾಟ್ (86) ಮತ್ತು ಕ್ರಿಸ್ಟಿನ್ ಸ್ಕಾಟ್ (80) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವ ದಂಪತಿ. ಕ್ರಿಸ್ಟಿನ್ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಪತ್ನಿ ಇಲ್ಲದೇ ತನ್ನ ಬದುಕನ್ನು ಊಹಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಸ್ವಿಟ್ಜರ್ಲೆಂಡ್‌ನ ಸಾರ್ಕೊ ಸೂಸೈಡ್ ಪಾಡ್‌ನಲ್ಲಿ (Sarco Suicide Pod) ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಈ ದಂಪತಿ ಸಾರ್ಕೋ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸ್ವಿಟ್ಜರ್ಲೆಂಡ್ ಸರ್ಕಾರ ‘ಆತ್ಮಹತ್ಯೆ ಯಂತ್ರ’ ಬಳಕೆಗೆ ಕಾನೂನು ಅನುಮೋದನೆ ನೀಡಿದ್ದು, ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದು. ಶೀಘ್ರದಲ್ಲೇ ಇದು ಬಳಕೆಗೆ ಬರುವ ಸಾಧ್ಯತೆ ಇದೆ.

    ಏನಿದು ಸೂಸೈಡ್‌ ಪಾಡ್?
    ಸಾರ್ಕೋ ಎಂಬ ಸಂಸ್ಥೆ ಈ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, 2019ರಲ್ಲೇ ಈ ಆತ್ಮಹತ್ಯಾ ಸಾಧನವನ್ನು ಸಂಸ್ಥೆ ರಿವೀಲ್ ಮಾಡಿತ್ತು. ಆದರೆ ಇದೀಗ ಅತ್ಯಾಧುನಿಕ ಅಪ್ಡೇಟ್ ನೊಂದಿಗೆ ಈ ಯಂತ್ರ ಬಳಕೆಗೆ ಸಿದ್ಧವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಪಾಡ್ ಅನ್ನು ಆಸ್ಟ್ರೇಲಿಯನ್ ಮೂಲದ ವೈದ್ಯ ಫಿಲಿಪ್ ನಿಟ್ಷ್ಕೆ ಕಂಡುಹಿಡಿದಿದ್ದಾರೆ. ಮೊದಲಿಗೆ ಈ ಆತ್ಮಹತ್ಯೆ ಪಾಡ್ ಅನ್ನು 2019ರಲ್ಲಿ ವೆನಿಸ್ ಡಿಸೈನ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲಾಯಿತು.

    ಈ ಯಂತ್ರದ ಪ್ರಮುಖ ವಿಷಯವೆಂದರೆ, ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ. ಈ ಯಂತ್ರವು ಆತ್ಮಹತ್ಯೆಗಾಗಿ ಬರುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ ಎಂದು ಹೇಳಲಾಗಿದೆ.

    ಈ ಆತ್ಮಹತ್ಯಾ ಪಾಡ್ ಅನ್ನು ಸ್ವಿಟ್ಜರ್ಲೆಂಡ್ ನ ‘ದಿ ಲಾಸ್ಟ್ ರೆಸಾರ್ಟ್’ ಸಂಸ್ಥೆ ಆವಿಷ್ಕರಿಸಿದೆ. ಸ್ವಿಟ್ಜರ್ಲೆಂಡ್ ನಲ್ಲಿ ಆತ್ಮಹತ್ಯೆಗೆ ಕಾನೂನು ಬದ್ಧ ಮಾನ್ಯತೆ ನೀಡಿರುವುದರಿಂದ ಈ ವರೆಗೂ ಈ ಸಂಸ್ಥೆ ಸೇವೆಗೆ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗಿಲ್ಲ.

    ಸ್ವಿಟ್ಜರ್ಲೆಂಡ್ ನಲ್ಲಿ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಕಾರಣ ನೀಡಿದರೆ ಅಥವಾ ಆತನ ಸಾವಿಗೆ ಪೂರಕವಾದ ಅಂಶವನ್ನು ಸಾಬೀತುಪಡಿಸಿದರೆ ಆತನ ಆತ್ಮಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ. ಕಾನೂನು ಆತನ ಆತ್ಮಹತ್ಯೆಗೆ ಅನುಮತಿಸುತ್ತದೆ ಎಂದು ಹೇಳಲಾಗಿದೆ.

    ಈ ಬಗ್ಗೆ ಮಾತನಾಡಿರುವ ಆತ್ಮಹತ್ಯಾ ಪಾಡ್ ಯಂತ್ರದ ತಯಾರಕಾ ಸಂಸ್ಥೆ ‘ದಿ ಲಾಸ್ಟ್ ರೆಸಾರ್ಟ್’ ಮುಖ್ಯ ಕಾರ್ಯನಿರ್ವಾಹಕ ಫ್ಲೋರಿಯನ್ ವಿಲೆಟ್, ‘ನಮ್ಮಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದಾರೆ. ನಮ್ಮ ಸಾರ್ಕೋ ಯಂತ್ರದ ಬಳಕೆಗಾಗಿ ಕಾಯುತ್ತಿದ್ದಾರೆ. ಇಲ್ಲಿ ಸಾವು ಬಹಳ ಬೇಗ ನಡೆದುಹೋಗುತ್ತದೆ. ನಿಮ್ಮ ಸಾವು ನೋವು ರಹಿತವಾಗಿರುತ್ತದೆ ಎಂದು ನಾನು ಹೇಳಬಲ್ಲೆ. ಶಾಶ್ವತ ನಿದ್ರೆಗೆ ಜಾರುವವರಿಗೆ ಸಾಯಲು ಹೆಚ್ಚು ಸುಂದರವಾದ ಮಾರ್ಗ ಇದಾಗಿದೆ ಎಂದು ಹೇಳಿದ್ದಾರೆ.

    ಆದಷ್ಟು ಬೇಗ ಈ ಯಂತ್ರ ಬಳಕೆಗೆ ಸಿದ್ಧವಾಗಲಿದೆ. ಮೊದಲ ಸಾವು ಮತ್ತು ಅದರ ದಿನ, ತಿಂಗಳು ಮತ್ತು ವರ್ಷವನ್ನು ಬಹಿರಂಗಪಡಿಸಲಾಗಿಲ್ಲ. ಇದು ಖಾಸಗಿ ಮಾಹಿತಿಯಾಗಿದ್ದು ಅದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದಿಲ್ಲ.

    ಯುಕೆ ಯಾವುದೇ ರೂಪದಲ್ಲಿ ದಯಾಮರಣವನ್ನು ಅನುಮತಿಸುವುದಿಲ್ಲ ಮತ್ತು ಆತ್ಮಹತ್ಯೆಗೆ ಸಹಾಯ ಮಾಡುವವರಿಗೆ ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.

    ಕೆಲಸ ಹೇಗೆ?
    3D-ಮುದ್ರಿತ ಶವಪೆಟ್ಟಿಗೆಯಂತಹ ಕ್ಯಾಪ್ಸುಲ್ ಅದರ ಕೋಣೆಯನ್ನು ಸಾರಜನಕದಿಂದ ತುಂಬುವ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಒಳಗಿನಿಂದ ಬಟನ್ ಅನ್ನು ಸಕ್ರಿಯಗೊಳಿಸಿದ ನಂತರ ಆಮ್ಲಜನಕದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ವ್ಯಕ್ತಿಯು ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು 10 ನಿಮಿಷಗಳಲ್ಲಿ ಆ ವ್ಯಕ್ತಿ ಸಾಯುತ್ತಾನೆ.

    ಸನ್ನೆಗಳು, ಧ್ವನಿ ನಿಯಂತ್ರಣ, ಅಥವಾ ಅನಾರೋಗ್ಯದ ಕಾರಣದಿಂದಾಗಿ ಮಾತನಾಡಲು ಅಥವಾ ದೈಹಿಕವಾಗಿ ಚಲಿಸಲು ಸಾಧ್ಯವಾಗದವರಿಗೆ ಕಣ್ಣಿನ ಚಲನೆಯನ್ನು ಒಳಗೊಂಡಂತೆ ಪಾಡ್‌ಗಳನ್ನು ಅನೇಕ ರೀತಿಯಲ್ಲಿ ಸಕ್ರಿಯಗೊಳಿಸಬಹುದು. ಸಂಪೂರ್ಣ ಪ್ರಕ್ರಿಯೆಯನ್ನು ದಾಖಲಾತಿಗಾಗಿ ಚಿತ್ರೀಕರಿಸಲಾಗಿದೆ ಮತ್ತು ತನಿಖಾಧಿಕಾರಿಗೆ ನೀಡಲಾಗುವುದು. ಆದರೆ ಒಮ್ಮೆ ಸಕ್ರಿಯಗೊಳಿಸಿದ ನಂತರ ಪ್ರಕ್ರಿಯೆಯನ್ನು ಬದಲಾಯಿಸಲಾಗುವುದಿಲ್ಲ.

    ಈ ಸೂಸೈಡ್‌ ಪಾಡ್‌ ಅನ್ನು ಬಳಸಲು ಕೇವಲ 20 ಡಾಲರ್‌ ಸಾಕು ಎಂದು ವರದಿಗಳು ತಿಳಿಸಿವೆ. ಅಂದರೆ ಈ ಪಾಡ್‌ ಒಳಗಡೆ ಬಿಡುಗಡೆಗೊಳ್ಳುವ ನೈಟ್ರೋಜನ್‌ ಗ್ಯಾಸ್‌ಗೆ 20 ಡಾಲರ್‌ನಷ್ಟು (1,673 ರೂ.) ಖರ್ಚಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಬಟನ್‌ ಒತ್ತಿದ ಬಳಿಕ ಆಮ್ಲಜನಕವು 21 ಪ್ರತಿಶತದಿಂದ 0.05 ಪ್ರತಿಶತಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ವ್ಯಕ್ತಿ ಪ್ರಜ್ಞಾಹೀನನಾಗಿ ಕೊನೆಗೆ ಸಾಯುತ್ತಾನೆ. ಒಂದು ಬಾರಿ ಬಟನ್‌ ಒತ್ತಿದ ಬಳಿಕ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗಲಾಗುವುದಿಲ್ಲ ಎಂದು ಫಿಲಿಪ್ ನಿಟ್ಷ್ಕೆ ಹೇಳಿದ್ದಾರೆ.

    ಸ್ವಿಟ್ಜರ್ಲೆಂಡ್‌ ಹೊರತುಪಡಿಸಿ, ಕೆನಡಾ, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್ ಮತ್ತು ಕೊಲಂಬಿಯಾದಲ್ಲಿ ಆತ್ಮಹತ್ಯೆ ಅಥವಾ ಸ್ವಯಂಪ್ರೇರಿತ ದಯಾಮರಣವನ್ನು ಅನುಮತಿಸಲಾಗಿದೆ.

  • ನಾನಿನ್ನೂ ವೆಬ್‌ಸೀರಿಸ್‌ ನೋಡಿಲ್ಲ, ಮಾಡುವವರು ಸರ್ಕಾರವನ್ನು ಒಳ್ಳೆಯ ರೀತಿಯಲ್ಲಿ ತೋರಿಸಲ್ಲ: ಎಸ್.ಜೈಶಂಕರ್

    ನಾನಿನ್ನೂ ವೆಬ್‌ಸೀರಿಸ್‌ ನೋಡಿಲ್ಲ, ಮಾಡುವವರು ಸರ್ಕಾರವನ್ನು ಒಳ್ಳೆಯ ರೀತಿಯಲ್ಲಿ ತೋರಿಸಲ್ಲ: ಎಸ್.ಜೈಶಂಕರ್

    -1984ರಲ್ಲಿ ಹೈಜಾಕ್ ಆದ ವಿಮಾನದಲ್ಲಿ ನನ್ನ ಅಪ್ಪನೂ ಇದ್ದರು

    ನವದೆಹಲಿ: ಐಸಿ 814 ವಿಮಾನ ಹೈಜಾಕ್‌ನಲ್ಲಿ ನನ್ನಪ್ಪನೂ ಇದ್ದರು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಬಹಿರಂಗಪಡಿಸಿದರು.

    ಸ್ವಿಟ್ಜರ್‌ಲ್ಯಾಂಡ್‌ನ (Switzerland) ಜಿನೇವಾದಲ್ಲಿ (Geneva) ಇಂಡಿಯನ್ ಡಯಸ್ಪೋರಾದಲ್ಲಿ ಮಾತನಾಡಿದ ಅವರು, ಐಸಿ814 ದಿ ಕಂದಹಾರ್ ಹೈಜಾಕ್ (IC 814 The Kandahar Hijack) ನೆಟ್‌ಫ್ಲಿಕ್ಸ್ ವೆಬ್‌ಸೀರಿಸ್ (Netflix Webseries) ವಿವಾದದ ಬಗ್ಗೆ ಮಾತನಾಡಿದರು.ಇದನ್ನೂ ಓದಿ: ಕೇಜ್ರಿವಾಲ್‌ಗೆ ಜಾಮೀನು – 6 ತಿಂಗಳ ಬಳಿಕ ಜೈಲಿನಿಂದ ಹೊರಬಂದ ದೆಹಲಿ ಸಿಎಂ

    ಮುಸ್ಲಿಂ ಹೆಸರಿನ ಬದಲಾಗಿ, ಹಿಂದೂಗಳ ಹೆಸರನ್ನು ಬಳಸಿರುವ ವಿವಾದದ ಕುರಿತಾಗಿ ಮಾತನಾಡಿ, ಐಸಿ814 ಹೈಜಾಕ್ ಮಾಡಿದ ವಿಮಾನದಲ್ಲಿ ನನ್ನಪ್ಪ ಕೂಡ ಇದ್ದರು ಎಂದು ಬಹಿರಂಗ ಪಡಿಸಿದ್ದಾರೆ. ನನ್ನ ತಂದೆ ಕೃಷ್ಣಸ್ವಾಮಿ ಸುಬ್ರಹ್ಮಣ್ಯಂ  ಅವರು ಐಸಿ814 ವಿಮಾನದಲ್ಲಿದ್ದರು.

    ಇನ್ನೂ ನಾನು ಐಸಿ814 ದಿ ಕಂದಹಾರ್ ಹೈಜಾಕ್ ನೆಟ್‌ಫ್ಲಿಕ್ಸ್ ವೆಬ್‌ಸೀರಿಸ್ ಅನ್ನು ನೋಡಿಲ್ಲ. ಆದ್ದರಿಂದ ನಾನು ಆ ಕುರಿತು ಯಾವುದೇ ಅಭಿಪ್ರಾಯವನ್ನು ಹಂಚಿಕೊಳ್ಳುವುದಿಲ್ಲ ಎಂದರು. 1984ರಲ್ಲಿ ಯುವ ಅಧಿಕಾರಿಯಾಗಿ ಅಪಹರಣವನ್ನು ವ್ಯವಹರಿಸುವ ತಂಡದ ಭಾಗವಾಗಿದ್ದೆ. ಆಗ ಮನೆಗೆ ಕರೆ ಮಾಡಿ ತಡವಾಗಿ ಬರುತ್ತೇನೆಂದು ತಿಳಿಸಿದಾಗ ನನ್ನ ತಂದೆ ಅದೇ ವಿಮಾದಲ್ಲಿದ್ದರೆಂದು ತಿಳಿದು ಬಂದಿತು.ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ರೈಲ್ವೇ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಯತ್ನ

    ಒಂದು ಕಡೆ ಅಪಹರಣವನ್ನು ವ್ಯವಹರಿಸುವ ಭಾಗವಾಗಿ ಮತ್ತು ಇನ್ನೊಂದು ಕಡೆ ನನ್ನ ತಂದೆ ಆ ವಿಮಾದಲ್ಲಿದ್ದರೆಂದು ಸರ್ಕಾರಕ್ಕೆ ಒತ್ತಾಯಿಸುವುದಾ ಎಂದು ಹೇಳಿದರು.

  • ಪತಿಯಿಂದಲೇ ಮಿಸ್ ಸ್ವಿಜರ್ಲೆಂಡ್ ಹತ್ಯೆ: ಕೊಲೆ ಬಳಿಕ ಬ್ಲೆಂಡರ್ ಬಳಸಿ ಮೃತದೇಹ ಪೀಸ್ ಪೀಸ್

    ಪತಿಯಿಂದಲೇ ಮಿಸ್ ಸ್ವಿಜರ್ಲೆಂಡ್ ಹತ್ಯೆ: ಕೊಲೆ ಬಳಿಕ ಬ್ಲೆಂಡರ್ ಬಳಸಿ ಮೃತದೇಹ ಪೀಸ್ ಪೀಸ್

    -ಪತಿಯ ಬಿಡುಗಡೆಗೆ ಕೋರ್ಟ್ ನಕಾರ

    ಬರ್ನ್: ಮಾಜಿ ಮಿಸ್ ಸ್ವಿಜರ್ಲೆಂಡ್ ಫೈನಲಿಸ್ಟ್ಆ ( Miss Switzerland finalist) ಗಿದ್ದ ಕ್ರಿಸ್ಟಿನಾ ಜೋಕ್ಸಿಮೊವಿಕ್ (Kristina Joksimovic) ಅವರನ್ನು ಆಕೆಯ ಪತಿ ಬರ್ಬರವಾಗಿ ಹತ್ಯೆ ಮಾಡಿದ್ದು, ಪೊಲೀಸ್ ತನಿಖೆಯ ಬಳಿಕ ಆಕೆಯ ಪತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    38 ವರ್ಷದ ಕ್ರಿಸ್ಟಿನಾ ಅವರನ್ನು ಆಕೆಯ ಪತಿ ಕತ್ತುಹಿಸುಕಿ, ಬಳಿಕ ಆಕೆಯನ್ನು ಬ್ಲೆಂಡರ್ ಮೂಲಕ ಕತ್ತರಿಸಿದ್ದಾರೆ. ಆನಂತರ ಆಕೆಯ ದೇಹದ ಭಾಗಗಳನ್ನು ಆಸಿಡ್‌ನಲ್ಲಿ ಕರಗಿಸುವ ಮೂಲಕ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು.ಇದನ್ನೂ ಓದಿ: ನಾಳೆಯಿಂದ ಐಫೋನ್ 16 ಸೀರಿಸ್ ಬುಕಿಂಗ್ ಶುರು

    ಇದೇ ವರ್ಷ ಫೆಬ್ರವರಿಯಲ್ಲಿ ಜೋಕ್ಸಿಮೊವಿಕ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಬಳಿಕ ಛಿದ್ರಗೊಂಡ ದೇಹವು ಪತ್ತೆಯಾದಾಗ ಈ ಭಯಾನಕ ಅಪರಾಧ ಬೆಳಕಿಗೆ ಬಂದಿದೆ.

    ಪೊಲೀಸ್‌ರಿಂದ ತನಿಖೆಯಾದ ಬಳಿಕ ಆಕೆಯ ಪತಿ ಥಾಮಸ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಥಾಮಸ್ ತನ್ನ ಹೆಂಡತಿಯ ದೇಹವನ್ನು ಗರಗಸ, ಚಾಕು ಮತ್ತು ಗಾರ್ಡನ್ ಕತ್ತರಿಗಳನ್ನು ಬಳಸಿ ಕತ್ತರಿಸಿರುವುದಾಗಿ ಮತ್ತು ರಾಸಾಯನಿಕ ದ್ರಾವಣದಲ್ಲಿ ಭಾಗಗಳನ್ನು ಕರಗಿಸಲು ಹ್ಯಾಂಡ್ ಬ್ಲೆಂಡರ್ ಬಳಸಿರುವುದನ್ನು ಒಪ್ಪಿಕೊಂಡಿದ್ದಾನೆ.

    ಕ್ರಿಸ್ಟಿನಾ ಮತ್ತು ಥಾಮಸ್ 2017ರಲ್ಲಿ ಮದುವೆಯಾಗಿದ್ದರು. ಈ ದುರಂತ ಘಟನೆಗೆ ಕೇವಲ ನಾಲ್ಕು ವಾರಗಳ ಮೊದಲು ಕ್ರಿಸ್ಟಿನಾ ಅವರು ತಮ್ಮ ಇತ್ತೀಚಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಅವರಿಬ್ಬರ ಸ್ನೇಹಿತರು, ದಂಪತಿ ನಡುವೆ ಕೆಲವು ದಿನಗಳ ಹಿಂದೆ ವೈಮನಸ್ಸಿತ್ತು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: Nagamangala Violence | 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಸದ್ಯ ಕೋರ್ಟ್ ಆತನ ಬಿಡುಗಡೆಗೆ ನಿರಾಕರಿಸಿದೆ ಎಂದು ತಿಳಿದು ಬಂದಿದೆ.

  • ಸ್ವಿಸ್ ವಿಜ್ಞಾನಿಗಳಿಂದ ಬಯೋ ಕಂಪ್ಯೂಟರ್ ಸಂಶೋಧನೆ – ಏನಿದರ ವಿಶೇಷ?

    ಸ್ವಿಸ್ ವಿಜ್ಞಾನಿಗಳಿಂದ ಬಯೋ ಕಂಪ್ಯೂಟರ್ ಸಂಶೋಧನೆ – ಏನಿದರ ವಿಶೇಷ?

    ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗ ಮನುಷ್ಯನ ಮೆದುಳಿಗಿದೆ ಎಂಬ ಮಾತಿದೆ. ಅದರಂತೆ ತಂತ್ರಜ್ಞಾನ ಹಾಗೂ ವಿಜ್ಞಾನದಲ್ಲಿ ಪ್ರಗತಿ ಸಾಧಿಸುವ ಗುರಿಯಿಂದ ಮನುಷ್ಯನ ಮೆದುಳಿನ (Human Brain) ಜೀವಕೋಶಗಳನ್ನು ಬಳಸಿ ಸ್ವಿಟ್ಜರ್ಲ್ಯಾಂಡ್‌ನ (Switzerland) ವಿಜ್ಞಾನಿಗಳು ಬಯೋ ಕಂಪ್ಯೂಟರ್‌ (Biocomputer) ಸಂಶೋಧನೆಗೆ ಮುಂದಾಗಿದ್ದಾರೆ.  

    ಮಾನವನ ಮೆದುಳು ಕಂಪ್ಯೂಟರ್‌ಗಳಿಗಿಂತ ನಿಧಾನವಾಗಿದ್ದರೂ, ಸಂಕೀರ್ಣ ಮಾಹಿತಿಯನ್ನು ಸಂಸ್ಕರಿಸುವಲ್ಲಿ ಅದು ಯಂತ್ರಗಳನ್ನು ಮೀರಿಸುತ್ತದೆ. ಮನುಷ್ಯನ ಮೆದುಳು ಅಸ್ತಿತ್ವದಲ್ಲಿರುವ ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್‌ಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದ ಜೈವಿಕ ಕಂಪ್ಯೂಟರ್‌ನ ಸಂಶೋಧನೆ ವಿಶ್ವದ ಗಮನ ಸೆಳೆದಿದೆ. ಒಮ್ಮೆ ಬಯೋ ಕಂಪ್ಯೂಟರ್‌ ಪರಿಪೂರ್ಣವಾಗಿ ಅಸ್ಥಿತ್ವಕ್ಕೆ ಬಂದರೆ ಖಂಡಿತ ವಿಜ್ಞಾನ ಜಗತ್ತಿನಲ್ಲಿ ಮಹತ್ವದ ಬೆಳವಣಿಗೆ ಸಾಧ್ಯವಾಗಲಿದೆ.

    ಮೆದುಳಿನ ಕೋಶಗಳ ತಯಾರಿಕೆ ಹೇಗೆ?

    ಬಯೋ ಕಂಪ್ಯೂಟರ್‌ಗೆ ಲ್ಯಾಬ್‌ನಲ್ಲಿ ತಯಾರಿಸಿದ ಮಾನವನ ಮೆದುಳಿನ ಕೋಶಗಳ ಗೋಲಾಕಾರದ ಸಮೂಹಗಳನ್ನು ಅಳವಡಿಸಲಾಗಿದೆ. ಒಟ್ಟು 16 ಆರ್ಗನೈಡ್‌ಗಳನ್ನು ನಾಲ್ಕು ವ್ಯೂಹಗಳಲ್ಲಿ ಇರಿಸಿ, ಅದು ಪ್ರತಿ ಎಂಟು ಎಲೆಕ್ಟ್ರೋಡ್‌ಗಳಿಗೆ ಸಂಪರ್ಕಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ  ಮೆದುಳಿನ ಕೋಶಗಳನ್ನು ಲ್ಯಾಬ್‌ನಲ್ಲಿ ಗಾಜಿನ ಜರಡಿಯಲ್ಲಿ ʻಕಲ್ಚರ್‌ʼ ಮಾಡುವ ಮೂಲಕ ಬೆಳೆಸಿ ತಯಾರಿಸಲಾಗಿದೆ. ಇದನ್ನು ಕಂಪ್ಯೂಟರ್‌ಗಳಿಗೆ ಅಳವಡಿಸಿದ ಬಳಿಕ, ಈ ಜೀವಕೋಶಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಪೂರೈಸುವ ಮೈಕ್ರೋಫ್ಲೂಯಿಡಿಕ್ಸ್ ಸಿಸ್ಟಮ್‌ನ್ನು ಸಹ ಮಾಡಲಾಗಿದೆ. 

    ವೆಟ್‌ವೇರ್ ಕಂಪ್ಯೂಟಿಂಗ್ ಎಂದರೇನು?

    ಬಯೋ ಕಂಪ್ಯೂಟರ್‌ನ ಸಂಶೋಧನೆಯು ವೆಟ್‌ವೇರ್ ಕಂಪ್ಯೂಟಿಂಗ್ ವರ್ಗದ ಅಡಿಯಲ್ಲಿ ಬರುತ್ತದೆ. ಇದು ಜೀವಂತ ಜೀವಿಗಳೊಳಗಿನ ಕಾರ್ಯನಿರ್ವಹಿಸುವ ಮೆದುಳು ಹಾಗೂ ನರಮಂಡಲದಂತೆ ಕೆಲಸ ಮಾಡುತ್ತದೆ. ಇದರಲ್ಲಿ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಜೀವಕೋಶಗಳ ಮಿಶ್ರಣ ಇರಲಿದೆ.

    ಫೈನಲ್‌ಸ್ಪಾರ್ಕ್‌ನ ಸಂಶೋಧನೆಯ ಪ್ರಕಾರ ವೆಟ್‌ವೇರ್ ಕಂಪ್ಯೂಟಿಂಗ್ ಕೆಲಸ ನಿರ್ವಹಿಸಲು ಜೀವಂತ ನ್ಯೂರಾನ್‌ಗಳನ್ನು ಬಳಸುತ್ತದೆ. ಈ ಪರಿಕಲ್ಪನೆಯು ಕಂಪ್ಯೂಟರ್‌ನಲ್ಲಿನ ಕೃತಕ ನರ ಜಾಲಗಳನ್ನು (ಎಎನ್‌ಎನ್) ಹೇಗೆ ಬಳಸಲಾಗಿದಿಯೋ ಅದನ್ನೇ ಹೋಲುತ್ತದೆ. ಆದರೂ ಈ ಜೈವಿಕ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. 

    16 ಮಿನಿ-ಬ್ರೈನ್‌ಗಳಿಂದ ತಯಾರಾದ ಬಯೋಕಂಪ್ಯೂಟರ್

    ಸ್ವಿಸ್ ಬಯೋಕಂಪ್ಯೂಟಿಂಗ್ ಸ್ಟಾರ್ಟ್ಅಪ್ ಫೈನಲ್‌ಸ್ಪಾರ್ಕ್‌, ಇತಿಹಾಸದಲ್ಲಿ ಮೊದಲ ಜೀವಂತ ಪ್ರೊಸೆಸರ್‌ನ್ನು ರಚಿಸಲು ಮಾನವನ 16 ಮೆದುಳಿನ ಕೋಶಗಳನ್ನು ಬಳಸಿಕೊಂಡಿರುವುದಾಗಿ ಹೇಳಿದೆ. ಡೇಟಾವನ್ನು ಕಲಿಯುವ ಮತ್ತು ಪ್ರಕ್ರಿಯೆಗೊಳಿಸುವ ಸಾಮರ್ಥ್ಯದೊಂದಿಗೆ ಜೀವಂತ ನ್ಯೂರಾನ್‌ಗಳಿಂದ ಇದು ತಯಾರಾಗಿದೆ. ಸಾಂಪ್ರದಾಯಿಕ ಡಿಜಿಟಲ್ ಪ್ರೊಸೆಸರ್‌ಗಳಿಗಿಂತ ಇದು ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

    ಕಳೆದ 3 ವಷಗಳಿಂದ 1,000ಕ್ಕೂ ಹೆಚ್ಚು ಮೆದುಳಿನ ಕೋಶಗಳಿಂದ 18 ಟೆರಾಬೈಟ್‌ಗಳಿಗಿಂತ ಹೆಚ್ಚು ಡೇಟಾವನ್ನು ಸಂಗ್ರಹಿಸಲಾಗಿದೆ. ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಅಂತರರಾಷ್ಟ್ರೀಯ ಮಟ್ಟದ ಸಹಯೋಗ ಅಗತ್ಯವಾಗಿದೆ ಎಂದು FinalSpark ಸಹ-ಸಂಸ್ಥಾಪಕ ಡಾ. ಫ್ರೆಡ್ ಜೋರ್ಡಾನ್ ಹೇಳಿದ್ದಾರೆ.

    ಅಮೆರಿಕ ವಿಜ್ಞಾನಿಗಳಿಂದಲೂ ಬಯೋ ಕಂಪ್ಯೂಟರ್‌ ಸಂಶೋಧನೆ

    ಸ್ವಿಸ್‌ ವಿಜ್ಞಾನಿಗಳ ಕೈಗೊಂಡ ಪ್ರಯತ್ನವೇನು ಈ ವಿಚಾರದಲ್ಲಿ ಮೊದಲಲ್ಲ. 2023 ರಲ್ಲಿ ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಟೆಕ್ನಿಯನ್-ಇಸ್ರೇಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡವು ಜೈವಿಕ ಅಣುಗಳನ್ನು ಬಳಸಿಕೊಂಡು ಕಂಪ್ಯೂಟಿಂಗ್ ವ್ಯವಸ್ಥೆಯನ್ನು ರಚಿಸಿದ್ದೇವೆ ಎಂದು ಹೇಳಿಕೊಂಡಿತ್ತು.. ಅದು ಕಂಪ್ಯೂಟರ್ ಹಾರ್ಡ್‌ವೇರ್‌ನ್ನು ಮೆದುಳಿನ ಆರ್ಗನೈಡ್‌ಗಳಿಗೆ ಸಂಪರ್ಕಿಸುತ್ತದೆ. ಇದರೊಂದಿಗೆ ಮಾತಿನ ಮಾದರಿಗಳನ್ನು ಗುರುತಿಸುತ್ತಿದೆ ಎನ್ನಲಾಗಿದೆ.

    ಒಟ್ಟಾರೆ ಈ ಸಂಶೋಧನೆ ಯಶಸ್ವಿಯಾದರೆ ಕಂಪ್ಯೂಟರ್‌ ವಿಜ್ಞಾನದಲ್ಲಿ ಹೊಸ ಕ್ರಾಂತಿಯೊಂದು ನಡೆಯಲಿದೆ. 

     

  • ಸಂಜು ವೆಡ್ಸ್ ಗೀತಾ 2: ಸ್ವಿಟ್ಜರ್‌ಲ್ಯಾಂಡ್‌ ಅನುಭವ ಬಿಚ್ಚಿಟ್ಟ ಟೀಮ್

    ಸಂಜು ವೆಡ್ಸ್ ಗೀತಾ 2: ಸ್ವಿಟ್ಜರ್‌ಲ್ಯಾಂಡ್‌ ಅನುಭವ ಬಿಚ್ಚಿಟ್ಟ ಟೀಮ್

    ನಾಲ್ಕು ತಿಂಗಳ‌ ಹಿಂದೆ ಪ್ರಾರಂಭವಾಗಿದ್ದ ನಾಗಶೇಖರ್ ಅವರ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2′ (Sanju Weds Geeta 2) ಚಿತ್ರದ ಚಿತ್ರೀಕರಣ ಪ್ರಮುಖ ಘಟ್ಟಕ್ಕೆ ಬಂದಿದೆ. ಇದೇ ತಿಂಗಳು ಚಿತ್ರತಂಡ ಸ್ವಿಟ್ಜರ್‌ಲ್ಯಾಂಡ್ (Switzerland) ಗೆ ಹೋಗಿ 2 ಹಾಡುಗಳನ್ನು ಚಿತ್ರೀಕರಿಸಿಕೊಂಡು ಬಂದಿದೆ. ಈವರೆಗೆ ನಡೆಸಿದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಳ್ಳಲೆಂದು ನಿರ್ದೇಶಕ‌ ನಾಗಶೇಖರ್ ಹಾಗೂ ತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಅಶೋಕ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಿಟ್ಜರ್‌ಲ್ಯಾಂಡ್ ಶೂಟಿಂಗ್ ದೃಶ್ಯಗಳ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ನಾಗಶೇಖರ್ ಹಿಂದೆ ಸಂಜು ವೆಡ್ಸ್ ಗೀತಾ ಸಿನಿಮಾ ಮಾಡುವಾಗ ಆದ ಅನುಭವಗಳನ್ನು ಮೆಲುಕು ಹಾಕಿದರು. ಅಲ್ಲದೆ ಈ ಚಿತ್ರ ಅದಕ್ಕಿಂತ ಚೆನ್ನಾಗಿ, ವೈಭವಯುತವಾಗಿ ಮೂಡಿಬರುತ್ತಿದೆ. ಇತ್ತೀಚೆಗಷ್ಟೇ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಾಡುಗಳ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ನಂತರ ಮುಂಬಯಿ, ಹೈದರಾಬಾದ್ ಶೂಟಿಂಗ್ ಮಾಡಿ, 2024ರ ಏಪ್ರಿಲ್ 1ರಂದು ಚಿತ್ರವನ್ನು  ರಿಲೀಸ್ ಮಾಡುವ ಯೋಜನೆಯಿದೆ.

    ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದಲೇ  ಭಾಗ ಎರಡು ಇಷ್ಟು ಅದ್ದೂರಿಯಾಗಿ ಮೂಡಿಬರುತ್ತಿದೆ. ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ. ನನ್ನ‌ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್‌ಮೆಟ್ ಕುಮಾರ್ ಕೈಜೋಡಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅದ್ಭುತವಾದ  ಟ್ಯೂನ್‌ಗಳನ್ನು ಮಾಡಿಕೊಟ್ಟಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಇಬ್ಬರೂ ಅದ್ಭುತ ಅಭಿನಯ ನೀಡಿದ್ದಾರೆ.

    2024ರ ಬ್ಲಾಕ್‌ಬಸ್ಟರ್ ಚಿತ್ರವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಲಿದೆ. ಇಂಥ ಒಳ್ಳೆ ನಿರ್ಮಾಪಕರು ನಮ್ಮ ಚಿತ್ರಕ್ಕೆ ಸಿಕ್ಕಿದ್ದಾರೆ. ಯಾವುದಕ್ಕೂ ಹಿಂದೇಟು ಹಾಕಲ್ಲ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ನಿರ್ದೇಶಕ ಎಸ್.ಮಹೇಂದರ್, ನಟ ಶರಣ್ ಆಗಮಿಸಿ ನಾಗಶೇಖರ್ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು. ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ಅಲ್ಲಿ ಕೊರೆಯುವ ಚಳಿ ಇತ್ತು. ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ ಎಂದು ಹೇಳಿದರು.

    ನಾಯಕಿ ರಚಿತಾ ರಾಮ್ (Rachita Ram) ಮಾತನಾಡಿ  ತುಂಬಾ ಶೇಡ್ಸ್ ಇರುವಂಥ ಗೀತಾ ಪಾತ್ರ ನನ್ನದು. ಸಿನಿಮಾ ಅಂದ್ರೆ ಖುಷಿ, ಕಷ್ಟ ಎರಡೂ ಇರುತ್ತೆ. ನಾವಿ ಹೋಗಿದ್ದೇ ಡಿಸೆಂಬರ್ ಚಳಿಯಲ್ಲಿ. ನಾಗಶೇಖರ್ ಏನಾ ಮಾಡಿದರೂ ಪ್ಲಾನ್ಡ್ ಆಗಿ ಮಾಡ್ತಾರೆ. ನಮಗೆ ನೇಚರ್ ಕೂಡ ತುಂಬಾ ಸಪೋರ್ಟ್ ಮಾಡಿತು. ಅಲ್ಲಿ ಮಾಡಿದ ಎರಡು ಹಾಡುಗಳೂ ತುಂಬಾ ಚೆನ್ನಾಗಿ ಬಂದಿವೆ. ಲೊಕೇಶನ್ ಅದ್ಭುತ. ಸತ್ಯ ಹೆಗಡೆ ಸರ್ ಬೇರೆ ಬೇರೆ ಆ್ಯಂಗಲ್‌ನಲ್ಲಿ ಶೂಟ್ ಮಾಡಿದ್ದಾರೆ. ಎಮೋಷನಲ್ ಸೀನ್ಸ್ ಇನ್ಟೆನ್ಸ್ ಆಗಿ ಬಂದಿದೆ ಎಂದರು.

     

    ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ ಚಿತ್ರದಲ್ಲಿ 5 ಸುಂದರ ಹಾಡುಗಳಿಗೆ ಸಂಗೀತ ನೀಡಿದ್ದು, ಕವಿರಾಜ ಸಾಹಿತ್ಯ ಬರೆದಿದ್ದಾರೆ. ನಿರ್ಮಾಪಕ ಚಲವಾದಿ ಕುಮಾರ್‌ ಮಾತನಾಡಿ,  ನಾಗಶೇಖರ್ ಮತ್ತು ನಾನು ಎಂಜಿನಿಯರಿಂಗ್ ಕ್ಲಾಸ್‌ಮೆಟ್ಸ್. ಸ್ಕ್ರಿಪ್ಟ್ ನಲ್ಲೂ ನಾನು ಜೊತೆ ಕುಳಿತಿದ್ದೆ. ಸಿನಿಮಾ ತುಂಬಾ ಚೆನ್ನಾಗಿ ಬರುತ್ತಿದೆ ಎಂದರು. ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

  • ಸ್ವಿಸ್ ಮಹಿಳೆಯನ್ನು ದೆಹಲಿಗೆ ಕರೆಸಿ ಹತ್ಯೆ ಮಾಡಿದ ಸ್ನೇಹಿತ

    ಸ್ವಿಸ್ ಮಹಿಳೆಯನ್ನು ದೆಹಲಿಗೆ ಕರೆಸಿ ಹತ್ಯೆ ಮಾಡಿದ ಸ್ನೇಹಿತ

    ನವದೆಹಲಿ: ಸ್ವಿಟ್ಜರ್ಲೆಂಡ್‌ನ (Switzerland) ಮಹಿಳೆಯೊಬ್ಬಳನ್ನು (Woman) ತನ್ನ ದೇಶದಿಂದ ದೆಹಲಿಗೆ (Delhi) ಕರೆಸಿಕೊಂಡು ಕೈಕಾಲು ಕಟ್ಟಿ ಹತ್ಯೆಗೈದ ಘಟನೆ ನಡೆದಿದೆ.

    ಹತ್ಯೆಗೊಳಗಾದ ಮಹಿಳೆಯನ್ನು ಲೀನಾ ಬರ್ಗರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪ್ರೀತ್ ಸಿಂಗ್ ಎಂಬಾತನನ್ನು ಪೊಲೀಸರು (Police) ಬಂಧಿಸಿದ್ದಾರೆ. ಆರೋಪಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದಾಗ ಮಹಿಳೆಯನ್ನು ಭೇಟಿಯಾಗಿದ್ದು, ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು. ಇದನ್ನೂ ಓದಿ: ಅಬ್ಬಬ್ಬಾ! ಬ್ಲೌಸ್‌ನಲ್ಲೂ ಚಿನ್ನ ಸಾಗಾಟ – ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ ಅಂದರ್‌

    ಮಹಿಳೆಯನ್ನು ಭೇಟಿಯಾಗಲು ಆರೋಪಿ ಆಗಾಗ ಸ್ವಿಟ್ಜರ್ಲೆಂಡ್‌ಗೆ ತೆರಳುತ್ತಿದ್ದ. ಆಕೆಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆರೋಪಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಮಹಿಳೆಯ ಹತ್ಯೆಗೆ ಸಂಚು ರೂಪಿಸಿ ಭಾರತಕ್ಕೆ ಬರುವಂತೆ ಆಕೆಯನ್ನು ಕರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

    ಮಹಿಳೆ ಅ.11 ರಂದು ಭಾರತಕ್ಕೆ ಬಂದಿದ್ದರು. ಐದು ದಿನಗಳ ಬಳಿಕ ಆಕೆಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅವಳ ಕೈ ಮತ್ತು ಕಾಲುಗಳನ್ನು ಕಟ್ಟಿ ಕೊಲೆ ಮಾಡಿದ್ದಾನೆ. ಸ್ವಲ್ಪ ದಿನ ಮೃತ ದೇಹವನ್ನು ಕಾರಿನಲ್ಲಿ ಇರಿಸಿಕೊಂಡಿದ್ದ. ದುರ್ವಾಸನೆ ಬಂದ ಬಳಿಕ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿ ರಸ್ತೆಯ ಬದಿಯಲ್ಲಿ ಎಸೆದು ಹೋಗಿದ್ದ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ವಾಹನದ ನೋಂದಣಿ ಸಂಖ್ಯೆ ಪಡೆದು ನಂತರ ದೆಹಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

    ಆರೋಪಿಯ ಮನೆಯಲ್ಲಿ 2.25 ಕೋಟಿ ರೂ. ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ನವದೆಹಲಿ/ಜ್ಯೂರಿಚ್: ಸ್ವಿಜರ್ಲೆಂಡ್‌ನಲ್ಲಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ (Swiss Banks) ಭಾರತೀಯರ ಭಾರತೀಯರ ಹೂಡಿಕೆ, ಡಿಪಾಸಿಟ್ (Indians’ funds) ಪ್ರಮಾಣ ಇಳಿಕೆಯಾಗಿದೆ.

    2021ಕ್ಕೆ ಹೋಲಿಸಿದರೆ 11% ರಷ್ಟು ಕುಸಿತ ಕಂಡಿದ್ದು, ಪ್ರಸ್ತುತ 3.42 ಶತಕೋಟಿ ಫ್ರಾಂಕ್‌ (ಅಂದಾಜು 30 ಸಾವಿರ ಕೋಟಿ ರೂ.) ಇಳಿಕೆಯಾಗಿದೆ ಎಂದು ಸ್ವಿಸ್‌ ಕೇಂದ್ರೀಯ ಬ್ಯಾಂಕ್‌ನ (Switzerland’s Central Bank) ವಾರ್ಷಿಕ ದತ್ತಾಂಶ ವರದಿ ತಿಳಿಸಿದೆ.

    2021ರಲ್ಲಿ ಭಾರತೀಯರು, ಭಾರತ ಮೂಲದ ಬ್ಯಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಬಂಡವಾಳ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ 44ನೇ ಸ್ಥಾನದಲ್ಲಿ ಭಾರತ ಈ ಬಾರಿ 46ನೇ ಸ್ಥಾನ ಪಡೆದಿದೆ.

    2006ರಲ್ಲಿ ಸಾರ್ವಕಾಲಿಕ ಗರಿಷ್ಟ 60 ಸಾವಿರ ಕೋಟಿ ರೂ. ಹೂಡಿಕೆಗೆ ಏರಿಕೆಯಾಗಿತ್ತು. 2011, 2013, 2017, 2020, 2021ರಲ್ಲಿ ಬಂಡವಾಳ ಏರಿಕೆಯಾಗಿತ್ತು. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂ. ಗಳಷ್ಟಿತ್ತು. ಇದನ್ನೂ ಓದಿ: ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ (PM Narendra Modi Government) ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ (Black Money) ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

    ಹಲವು ಸುತ್ತಿನ ಮಾತುಕತೆಯ ಬಳಿಕ ಸ್ವಿಸ್‌ ಬ್ಯಾಂಕ್‍ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೊದಲ ಪಟ್ಟಿ 2018ರಲ್ಲಿ ಭಾರತದ ಕೈಸೇರಿತ್ತು. ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಲಾಗಿತ್ತು. ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗಿತ್ತು.

    ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ ಅಡಿಯಲ್ಲಿ ಭಾರತವು ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ನಾಲ್ಕನೇ ಪಟ್ಟಿಯನ್ನು 2022ರ ಅಕ್ಟೋಬರ್‌ನಲ್ಲಿ ಪಡೆದಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐದನೇ ಪಟ್ಟಿ ಕೇಂದ್ರ ಸರ್ಕಾರದ ಕೈ ಸೇರುವ ಸಾಧ್ಯತೆಯಿದೆ.

     

    ಕಪ್ಪುಹಣವೇ?
    ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸ್ವಿಸ್‌ ಬ್ಯಾಂಕ್‌ ಸರ್ಕಾರಗಳಿಗೆ ನೀಡುತ್ತದೆ. ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣಗಳು ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.

  • ಯುರೋಪ್‌ನಲ್ಲಿ ಗೂಗಲ್ ಉದ್ಯೋಗಿಗಳ ಸಾಮೂಹಿಕ ವಜಾ- ಕಚೇರಿಯಲ್ಲಿ ಪ್ರತಿಭಟನೆ

    ಯುರೋಪ್‌ನಲ್ಲಿ ಗೂಗಲ್ ಉದ್ಯೋಗಿಗಳ ಸಾಮೂಹಿಕ ವಜಾ- ಕಚೇರಿಯಲ್ಲಿ ಪ್ರತಿಭಟನೆ

    ಬರ್ನ್: ಗೂಗಲ್ (Google) ಕಂಪನಿ ಉದ್ಯೋಗಿಗಳ (Employees) ಸಾಮೂಹಿಕ ವಜಾ (Layoff) ಮುಂದುವರಿಸಿದ್ದು, ಇದೀಗ 200 ಉದ್ಯೋಗಿಗಳನ್ನು ವಜಾಗೊಳಿಸಿರುವ ಹಿನ್ನೆಲೆ ಸ್ವಿಟ್ಜರ್‌ಲೆಂಡ್‌ನ (Switzerland) ಜ್ಯೂರಿಯಲ್ಲಿರುವ ಕಂಪನಿಯ ಕಚೇರಿಯಲ್ಲಿ ಉದ್ಯೋಗಿಗಳು ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದ್ದಾರೆ.

    ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಜನವರಿಯಲ್ಲಿ ಪ್ರಪಂಚದಾದ್ಯಂತ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದು ಜಾಗತಿಕವಾಗಿ ಶೇ.9 ರಷ್ಟು ಕಂಪನಿಯ ಉದ್ಯೋಗಿಗಳಿಗೆ ಸಮವಾದ ಸಂಖ್ಯೆಯಾಗಿದೆ. ಇದೀಗ ಗೂಗಲ್ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

    ಸುಮಾರು 5,000 ಉದ್ಯೋಗಿಗಳಿರುವ ಗೂಗಲ್‌ನ ಜ್ಯೂರಿ ಕಚೇರಿಯಲ್ಲಿ ಕಳೆದ ತಿಂಗಳು ಉದ್ಯೋಗಿಗಳನ್ನು ಕಡಿತಗೊಳಿಸುವುದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಬೆಂಬಲಿಸಿ ಇತರ ಉದ್ಯೋಗಿಗಳು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆಪಲ್

    ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಲ್ಲಿ ಪಾರದರ್ಶಕತೆಯನ್ನು ತೋರ್ಪಡಿಸಲಾಗುತ್ತಿಲ್ಲ. ಕಂಪನಿ ಪ್ರತಿ ವರ್ಷ ಭಾರೀ ಲಾಭ ಗಳಿಸುತ್ತಿರುವ ಸಮಯದಲ್ಲಿಯೂ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಅವರಲ್ಲಿ ನಿರಾಸೆ ಮೂಡಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವುದರ ಬಗ್ಗೆ ಗೂಗಲ್ ವಕ್ತಾರರು, ಕಂಪನಿಯು ಅಗತ್ಯಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಹಿನ್ನೆಲೆ ಕಡಿತಗೊಳಿಸಲು ಮುಂದಾಗಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ