ಸಾಮಾನ್ಯವಾಗಿ ಬೆಕ್ಕಿಗೆ ಕುತೂಹಲಗಳು ಜಾಸ್ತಿ ಇರುತ್ತದೆ. ಮನೆಯಲ್ಲಿ ಪ್ಲಾಸ್ಟಿಕ್ ಕವರ್ ಶಬ್ಧ ಮಾಡಿದ್ರೆ ಸಾಕು ಎಲ್ಲಿದ್ದರೂ ಬೆಕ್ಕುಗಳು ಓಡಿ ಬರುತ್ತವೆ. ಹೀಗೆಯೇ ಕುತೂಹಲಕ್ಕೀಡಾದ ಬೆಕ್ಕೊಂದು ಸ್ವಿಚ್ಛ್ ಬೋರ್ಡಿಗೆ ತನ್ನ ತಲೆ ತೂರಿಸಿ ಎಡವಟ್ಟು ಮಾಡಿಕೊಂಡಿದೆ.
ಈ ಘಟನೆ ಎಲ್ಲಿ, ಯಾವಾಗ ನಡೆದಿದ್ದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಬೆಕ್ಕಿನ 4 ಫೋಟೋಗಳು ಮೇ ತಿಂಗಳಲ್ಲಿ ಒಂದು ಬಾರಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದೆ. ಆ ಬಳಿಕ ಇದೀಗ ಟ್ವಿಟ್ಟರ್‍ನಲ್ಲಿ ಹರಿದಾಡುತ್ತಿದೆ. ಬೆಕ್ಕಿನ ಫೋಟೋಗಳನ್ನು ನೋಡಿ ಕೆಲವರು ನಕ್ಕರೆ ಇನ್ನೂ ಕೆಲವರು ಬೆಕ್ಕಿನ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ.
https://twitter.com/owurakuwaa/status/1158643671916564480
ಸದ್ಯ ಬೆಕ್ಕಿನ ಫೋಟೋಗಳನ್ನು ಗ್ಲಾಡಿಸ್ ಎಂಬವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಕುತೂಹಲದಿಂದಲೇ ಬೆಕ್ಕು ತನ್ನ ಪ್ರಾಣ ಕಳೆದುಕೊಳ್ಳುತ್ತಿತ್ತು ಎಂದು ಬರೆದುಕೊಂಡು ನಗುವ ಎಮೋಜಿ ಹಾಕಿಕೊಂಡಿದ್ದಾರೆ.
ಫೋಟೋದಲ್ಲಿ, ಹೊಸ ಮನೆಗೆ ಸ್ವಿಚ್ಛ್ ಬೋರ್ಡ್‍ಗಳನ್ನು ಅಳವಡಿಸುವ ಕೆಲಸ ನಡೆಯುತ್ತಿತ್ತು. ಆದರೆ ಒಂದು ಕಡೆ ಗೋಡೆಯಲ್ಲಿ ಸ್ವಿಚ್ಛ್ ಬೋರ್ಡ್ ಹಾಕುವ ಕೆಲಸ ಅರ್ಧದಲ್ಲಿ ನಿಂತಿತ್ತು. ಹೀಗಾಗಿ ಗೋಡೆ ತೂತಾಗಿದ್ದನ್ನು ಗಮನಿಸಿದ ಬೆಕ್ಕು ಕುತೂಹಲಕ್ಕೀಡಾಗಿ ತನ್ನ ತಲೆಯನ್ನು ತೂರಿಸಿದೆ. ಈ ವೇಳೆ ಬೋರ್ಡ್ ಒಳಗಿದ್ದ ವೈಯರ್ ನಿಂದ ಕರೆಂಟ್ ಪಾಸಾಗಿದ್ದು, ಬೆಕ್ಕಿನ ತಲೆಯ ಕೂದಲು ನೆಟ್ಟಗೆ ನಿಂತು ಕಾರ್ಟೂನ್ ನಂತೆ ಕಾಣಿಸುತ್ತದೆ. ಅದೃಷ್ಟವಶಾತ್ ಬೆಕ್ಕಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದನ್ನು ಕಾಣಬಹುದು.
https://twitter.com/beautifulnaa/status/1158675651009896453