Tag: Swiss Bank

  • ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ನವದೆಹಲಿ/ಜ್ಯೂರಿಚ್: ಸ್ವಿಜರ್ಲೆಂಡ್‌ನಲ್ಲಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ (Swiss Banks) ಭಾರತೀಯರ ಭಾರತೀಯರ ಹೂಡಿಕೆ, ಡಿಪಾಸಿಟ್ (Indians’ funds) ಪ್ರಮಾಣ ಇಳಿಕೆಯಾಗಿದೆ.

    2021ಕ್ಕೆ ಹೋಲಿಸಿದರೆ 11% ರಷ್ಟು ಕುಸಿತ ಕಂಡಿದ್ದು, ಪ್ರಸ್ತುತ 3.42 ಶತಕೋಟಿ ಫ್ರಾಂಕ್‌ (ಅಂದಾಜು 30 ಸಾವಿರ ಕೋಟಿ ರೂ.) ಇಳಿಕೆಯಾಗಿದೆ ಎಂದು ಸ್ವಿಸ್‌ ಕೇಂದ್ರೀಯ ಬ್ಯಾಂಕ್‌ನ (Switzerland’s Central Bank) ವಾರ್ಷಿಕ ದತ್ತಾಂಶ ವರದಿ ತಿಳಿಸಿದೆ.

    2021ರಲ್ಲಿ ಭಾರತೀಯರು, ಭಾರತ ಮೂಲದ ಬ್ಯಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಬಂಡವಾಳ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ 44ನೇ ಸ್ಥಾನದಲ್ಲಿ ಭಾರತ ಈ ಬಾರಿ 46ನೇ ಸ್ಥಾನ ಪಡೆದಿದೆ.

    2006ರಲ್ಲಿ ಸಾರ್ವಕಾಲಿಕ ಗರಿಷ್ಟ 60 ಸಾವಿರ ಕೋಟಿ ರೂ. ಹೂಡಿಕೆಗೆ ಏರಿಕೆಯಾಗಿತ್ತು. 2011, 2013, 2017, 2020, 2021ರಲ್ಲಿ ಬಂಡವಾಳ ಏರಿಕೆಯಾಗಿತ್ತು. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂ. ಗಳಷ್ಟಿತ್ತು. ಇದನ್ನೂ ಓದಿ: ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ (PM Narendra Modi Government) ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ (Black Money) ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

    ಹಲವು ಸುತ್ತಿನ ಮಾತುಕತೆಯ ಬಳಿಕ ಸ್ವಿಸ್‌ ಬ್ಯಾಂಕ್‍ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೊದಲ ಪಟ್ಟಿ 2018ರಲ್ಲಿ ಭಾರತದ ಕೈಸೇರಿತ್ತು. ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಲಾಗಿತ್ತು. ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗಿತ್ತು.

    ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ ಅಡಿಯಲ್ಲಿ ಭಾರತವು ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ನಾಲ್ಕನೇ ಪಟ್ಟಿಯನ್ನು 2022ರ ಅಕ್ಟೋಬರ್‌ನಲ್ಲಿ ಪಡೆದಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐದನೇ ಪಟ್ಟಿ ಕೇಂದ್ರ ಸರ್ಕಾರದ ಕೈ ಸೇರುವ ಸಾಧ್ಯತೆಯಿದೆ.

     

    ಕಪ್ಪುಹಣವೇ?
    ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸ್ವಿಸ್‌ ಬ್ಯಾಂಕ್‌ ಸರ್ಕಾರಗಳಿಗೆ ನೀಡುತ್ತದೆ. ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣಗಳು ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.

  • ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ನವದೆಹಲಿ: 2015-16ರ ಅವಧಿಯಲ್ಲಿ ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್ ನಗದು ಕೊರತೆ ಎದುರಿಸುತ್ತಿದ್ದ ಸಮಯದಲ್ಲೇ ಉದ್ಯಮಿ ವಿಜಯ ಮಲ್ಯ (Vijaya Mallya) ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ 330 ಕೋಟಿ ರೂ. (ಬ್ರಿಟನ್ ನಲ್ಲಿ 80 ಕೋಟಿ ರೂ., ಫ್ರಾನ್ಸ್‌ನಲ್ಲಿ 250 ಕೋಟಿ ರೂ. ಮೌಲ್ಯದ ಆಸ್ತಿ) ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (CBI) ಮುಂಬೈ ಸಿಬಿಐ ವಿಶೇಷ ನ್ಯಾಯಾಲಯಕ್ಕೆ (CBI Speical Court) ಸಲ್ಲಿಸಿರುವ 3ನೇ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

    ಅಷ್ಟೇ ಅಲ್ಲದೇ 2017ರಲ್ಲಿ ವಿಜಯ ಮಲ್ಯ ಅವರ ಆಸ್ತಿ ಮೌಲ್ಯ 7,500 ಕೋಟಿ ರೂ. ಎಂದು ಸ್ವಿಸ್ ಬ್ಯಾಂಕ್ (Swiss Bank) ಅಂದಾಜಿಸಿದ್ದು, ಬ್ಯಾಂಕ್‌ಗಳ ಸಾಲ ತೀರಿಸಲು ಬೇಕಾದಷ್ಟು ಹಣ ಅವರ ಬಳಿ ಇದೆ. ಯುಕೆನಲ್ಲಿ ಸುಮಾರು 44 ಮದ್ಯ ಘಟಕಗಳನ್ನ ಅವರು ಸ್ಥಾಪಿಸಿದ್ದರು. ಆ ಮೂಲಕ ಅವರು ಯುರೋಪಿನಾದ್ಯಂತ ಹಲವಾರು ಕಡೆ ಹೂಡಿಕೆ ಮತ್ತು ಆಸ್ತಿ ಖರೀದಿಸಿದ್ದಾರೆ ಎಂದು ಹೇಳಿದೆ.

    900 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಐಡಿಬಿಐ ಬ್ಯಾಂಕ್ (ADBI Bank) -ಕಿಂಗ್‌ಫಿಷರ್ ಏರ್‌ಲೈನ್ಸ್ (Kingfisher Airlines) ಸಾಲ ವಂಚನೆ ಪ್ರಕರಣದಲ್ಲಿ ವಿಜಯ ಮಲ್ಯ ಆರೋಪಿಯಾಗಿದ್ದು, ಈ ಸಂಬಂಧ ಸಿಬಿಐ ಇತ್ತೀಚೆಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಸಿಬಿಐ ಹಿಂದಿನ ಚಾರ್ಜ್‌ಶೀಟ್‌ಗಳಲ್ಲಿ ಹೆಸರಿಸಲಾದ ಎಲ್ಲಾ 11 ಆರೋಪಿಗಳ ಜೊತೆಗೆ, ತನಿಖಾ ಸಂಸ್ಥೆ ತನ್ನ ಇತ್ತೀಚಿನ ಪೂರಕ ಆರೋಪ ಪಟ್ಟಿಯಲ್ಲಿ ಐಡಿಬಿಐ ಬ್ಯಾಂಕ್‌ನ ಮಾಜಿ ಜನರಲ್ ಮ್ಯಾನೇಜರ್ ಬುದ್ಧದೇವ್ ದಾಸ್‌ಗುಪ್ತಾ ಅವರ ಹೆಸರನ್ನು ಸೇರಿಸಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ

    2009ರ ಅಕ್ಟೋಬರ್‌ನಲ್ಲಿ 150 ಕೋಟಿ ರೂ. ಅಲ್ಪಾವಧಿ ಸಾಲ ಮಂಜೂರಾತಿ ಮತ್ತು ವಿತರಣೆಗಾಗಿ ದಾಸ್‌ಗುಪ್ತಾ ಅವರು ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ. ವಿಜಯ ಮಲ್ಯ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಏರ್‌ಲೈನ್ಸ್‌ಗೆ ಸಾಲ ನೀಡುವ ವಿಚಾರದಲ್ಲಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

  • ಪತನದ ಭೀತಿಯಲ್ಲಿ ಮತ್ತೊಂದು ಬ್ಯಾಂಕ್ – ಕ್ರೆಡಿಟ್ ಸ್ಯೂಸಿ ಸಹಾಯಕ್ಕೆ ನಿಂತ ಸ್ವಿಸ್ ಬ್ಯಾಂಕ್

    ಪತನದ ಭೀತಿಯಲ್ಲಿ ಮತ್ತೊಂದು ಬ್ಯಾಂಕ್ – ಕ್ರೆಡಿಟ್ ಸ್ಯೂಸಿ ಸಹಾಯಕ್ಕೆ ನಿಂತ ಸ್ವಿಸ್ ಬ್ಯಾಂಕ್

    ವಾಷಿಂಗ್ಟನ್: ಅಮೆರಿಕದಲ್ಲಿ (America) ಕಳೆದ ಕೆಲವು ದಿನಗಳಿಂದ ಒಂದಾದ ಮೇಲೊಂದರಂತೆ ಬ್ಯಾಂಕುಗಳು (Bank) ದಿವಾಳಿಯಾಗುತ್ತಿವೆ. ಕಳೆದ 10 ದಿನಗಳಲ್ಲಿ ಅಮೆರಿಕದ 3 ಬ್ಯಾಂಕುಗಳು ದಿವಾಳಿಯಾಗಿರುವ ಬೆನ್ನಲ್ಲೇ ಜಗತ್ತಿನ 8ನೇ ಅತಿ ದೊಡ್ಡ ಬ್ಯಾಂಕ್ ‘ಕ್ರೆಡಿಟ್ ಸ್ಯೂಸಿ’ (Credit Suisse) ನೆಲಕಚ್ಚುವ ಭೀತಿಯಲ್ಲಿದೆ.

    ಸ್ವಿಡ್ಜರ್‌ಲ್ಯಾಂಡ್ (Switzerland) ಮೂಲದ ಕ್ರೆಡಿಟ್ ಸ್ಯೂಸಿ ಬ್ಯಾಂಕ್‌ನ ಷೇರುಗಳು ಬುಧವಾರ ಶೇ.30 ರಷ್ಟು ಕುಸಿದಿದೆ. ಈ ಹಿನ್ನೆಲೆ ಕ್ರೆಡಿಟ್ ಸ್ಯೂಸಿ ಮುಚ್ಚಿಹೋಗುವ ಭೀತಿಯಲ್ಲಿದೆ. ಈ ನಡುವೆ ಸ್ವಿಸ್ ನ್ಯಾಷನಲ್ ಬ್ಯಾಂಕ್ (Swiss bank) ಕ್ರೆಡಿಟ್ ಸ್ಯೂಸಿಯನ್ನು ಬಲಪಡಿಸಲು 54 ಶತಕೋಟಿ ಡಾಲರ್ ನೀಡಲು ಮುಂದಾಗಿದೆ.

    ಕ್ರೆಡಿಟ್ ಸ್ಯೂಸಿ ಬ್ಯಾಂಕ್ ಕುಸಿಯುವ ಸಾಧ್ಯತೆಯಿದೆ ಎಂದು ಖ್ಯಾತ ಹೂಡಿಕೆ ತಜ್ಞ ರಾಬರ್ಟ್ ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ. ಕಳೆದ 10 ದಿನಗಳಲ್ಲಿ ಅಮೆರಿಕದ ಸಿಲ್ವರ್ ಗೇಟ್ ಕ್ಯಾಪಿಟಲ್, ಸಿಲಿಕಾನ್ ವ್ಯಾಲಿ ಹಾಗೂ ಸಿಗ್ನೆಚರ್ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಒಂದು ವೇಳೆ ತಜ್ಞರ ಭವಿಷ್ಯದಂತೆ ಕ್ರೆಡಿಟ್ ಸ್ಯೂಸಿ ಬ್ಯಾಂಕ್ ಕೂಡಾ ದಿವಾಳಿಯಾದರೆ ಅಮೆರಿಕದ ಆರ್ಥಿಕತೆ ಬುಡಮೇಲಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ನ್ಯೂಜಿಲೆಂಡ್‌ನ ಕೆರ್ಮಾಡೆಕ್ ದ್ವೀಪಗಳಲ್ಲಿ 7.1 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ

    ಕ್ರೆಡಿಟ್ ಸ್ಯೂಸಿ ಬ್ಯಾಂಕ್ 2021ರ ಬಳಿಕ ಸಾಕಷ್ಟು ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದಿಂದಾಗಿ ಮಾರುಕಟ್ಟೆ ಮೌಲ್ಯವನ್ನು ಶೇ.80 ರಷ್ಟು ಕಳೆದುಕೊಂಡಿದೆ. ಇದೀಗ ಬಾಂಡ್ ಮಾರುಕಟ್ಟೆಯಲ್ಲಿ ಈ ಬ್ಯಾಂಕ್ ಸಾಕಷ್ಟು ಹಣವನ್ನು ಹೊಂದಿದೆ. ಆದರೆ ಬಾಂಡ್ ಮಾರುಕಟ್ಟೆಯೇ ಕುಸಿತದ ಭೀತಿಯಲ್ಲಿದೆ. ಷೇರುಪೇಟೆಗಿಂತಲೂ ಬಾಂಡ್ ಪೇಟೆಯಲ್ಲಿ ಹೆಚ್ಚು ಹಣವಿದೆ. ಒಂದುವೇಳೆ ಬಾಂಡ್ ಪೇಟೆ ಕುಸಿದರೆ ಕ್ರೆಡಿಟ್ ಸ್ಯೂಸಿ ಕೂಡಾ ಕುಸಿದುಹೋಗುವ ಸಾಧ್ಯತೆಯಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ನಿಯಂತ್ರಣಕ್ಕೆ ಹೈಟೆಕ್ ಟಚ್: ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್

  • ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಇಟ್ಟಿದ್ದಾರೆ 20,700 ಕೋಟಿ ರೂ. ಹಣ

    ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಇಟ್ಟಿದ್ದಾರೆ 20,700 ಕೋಟಿ ರೂ. ಹಣ

    – 13 ವರ್ಷದಲ್ಲೇ ಗರಿಷ್ಠ
    – ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆ

    ನವದೆಹಲಿ/ಜ್ಯೂರಿಚ್: ಭಾರತೀಯರು ವೈಯಕ್ತಿಕವಾಗಿ ಮತ್ತು ಬೇರೆ ಬೇರೆ ಹಣಕಾಸು ಸಂಸ್ಥೆಗಳ ಮೂಲಕ ಸ್ವಿಸ್ ಬ್ಯಾಂಕ್ ಗಳನ್ನು ಇಟ್ಟಿರುವ ಹಣದ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.

    13 ವರ್ಷಗಳಲ್ಲೇ ಇದು ಗರಿಷ್ಠ ಮೊತ್ತವಾಗಿದ್ದರೂ ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆಯಾಗಿದೆ ಎಂದು ಸ್ವಿಜರ್ಲೆಂಡ್ ಕೇಂದ್ರೀಯ ಬ್ಯಾಂಕ್ ಹೇಳಿದೆ.

    ಬ್ಯಾಂಕ್ 2020ರ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದ್ದು, ಸೆಕ್ಯೂರೀಟಿಸ್ ಮತ್ತು ಅದೇ ರೀತಿಯ ಇತರ ಮಾದರಿಯ ಹೂಡಿಕೆಯಿಂದಾಗಿ ಮೊತ್ತ ಏರಿಕೆಯಾಗಿದೆ. ಭಾರತದಲ್ಲಿನ ಸ್ವಿಜರ್ಲೆಂಡ್ ಬ್ಯಾಂಕಿನಲ್ಲಿರುವ ಹಣವು ಇದರಲ್ಲಿ ಸೇರಿದೆ ಎಂದು ತಿಳಿಸಿದೆ. ಈ ಹಣದಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಡಲಾಗಿರುವ ಹಣವನ್ನು ಸೇರಿಸಿಲ್ಲ. ಇದನ್ನೂ ಓದಿ: ಭಾರತದ ಕೈ ಸೇರಿದ ಸ್ವಿಸ್ ಬ್ಯಾಂಕ್ ಖಾತೆದಾರರ ಮೊದಲ ಪಟ್ಟಿ

    2006ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಒಟ್ಟು 23,000 ಕೋಟಿ ರೂ. ಹಣವನ್ನು ಇಡಲಾಗಿತ್ತು. ಇದು ಇಲ್ಲಿಯವರೆಗೆ ಭಾರತೀಯರು ಇರಿಸಿದ್ದ ಗರಿಷ್ಠ ಮೊತ್ತವಾಗಿತ್ತು. 2010, 2013, 2017 ಹೊರತು ಪಡಿಸಿ ನಂತರದ ವರ್ಷಗಳಲ್ಲಿ ಠೇವಣಿ ಇಳಿಕೆಯಾಗಿತ್ತು. ಆದರೆ 2020ರಲ್ಲಿ ಈ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.

    ವೈಯಕ್ತಿಕ ಹಣ ಇಳಿಕೆ:
    2019ರಲ್ಲಿ ಭಾರತೀಯರು ವೈಯಕ್ತಿಕವಾಗಿ 4,500 ಕೋಟಿ ರೂ. ಇಟ್ಟಿದ್ದರು. ಆದರೆ ಈಗ ಇದು 4,000 ಕೋಟಿ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: ಪಿಎಂಜಿಕೆವೈ ಅಡಿಯಲ್ಲಿ ಎಷ್ಟು ಕೋಟಿ ಕಪ್ಪು ಹಣ ಘೋಷಣೆಯಾಗಿದೆ ಗೊತ್ತಾ?

    ಟಾಪ್ 10 ದೇಶಗಳು:
    ವೆಸ್ಟ್ ಇಂಡೀಸ್, ಫ್ರಾನ್ಸ್, ಹಾಂಕಾಂಗ್, ಜರ್ಮನಿ, ಸಿಂಗಾಪುರ, ಲಕ್ಸೆಂಬರ್ಗ್, ಕೇಮನ್ ದ್ವೀಪಗಳು ಮತ್ತು ಬಹಾಮಾಸ್ ಅನುಕ್ರಮವಾಗಿ ಟಾಪ್ 10 ಸ್ಥಾನವನ್ನು ಪಡೆದಿವೆ. ಪಟ್ಟಿಯಲ್ಲಿ ಭಾರತ 51ನೇ ಸ್ಥಾನ ಪಡೆದಿದೆ.

    ಕಪ್ಪುಹಣವೇ?
    ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸರ್ಕಾರಗಳಿಗೆ ನೀಡುತ್ತದೆ.  ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣವೂ ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.

  • ನೀರವ್ ಮೋದಿ ಸೋದರಿಯ ಸ್ವಿಸ್ ಬ್ಯಾಂಕಿನ 4 ಖಾತೆ ಜಪ್ತಿ

    ನೀರವ್ ಮೋದಿ ಸೋದರಿಯ ಸ್ವಿಸ್ ಬ್ಯಾಂಕಿನ 4 ಖಾತೆ ಜಪ್ತಿ

    ನವದೆಹಲಿ: ಪಿಎನ್‍ಬಿ ಬ್ಯಾಂಕ್ ಹಗರಣದ ಆರೋಪಿ ನೀರವ್ ಮೋದಿ ಸೋದರಿ ಪೂರ್ವಿ ಸ್ವಿಸ್ ಬ್ಯಾಂಕ್ ನಲ್ಲಿ ಹೊಂದಿರುವ ನಾಲ್ಕು ಖಾತೆಯನ್ನು ಜಪ್ತಿ ಮಾಡಲಾಗಿದೆ.

    ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‍ಎ) ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದ ಜಾರಿ ನಿರ್ದೇಶನಾಲಯ ಸ್ವಿಜರ್ಲೆಂಡ್ ಸರ್ಕಾರಕ್ಕೆ ಪೂರ್ವಿ ಖಾತೆಯ ವ್ಯವಹಾರಗಳ ಮೇಲೆ ನಿರ್ಬಂಧ ಹೇರಬೇಕೆಂದು ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಸ್ವೀಕರಿಸಿದ್ದ ಸ್ವಿಜರ್ಲೆಂಡ್ ಸರ್ಕಾರ ಪೂರ್ವಿ ಖಾತೆಯನ್ನು ವಶಕ್ಕೆ ಪಡೆದಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಒಟ್ಟು 6 ದಶಲಕ್ಷ ಅಮೆರಿಕನ್ ಡಾಲರ್(ಅಂದಾಜು 41.46 ಕೋಟಿ ರೂ.) ಹಣ ಇದ್ದ ಈ ನಾಲ್ಕು ಖಾತೆಗನ್ನು ಈಗ ಜಪ್ತಿ ಮಾಡಲಾಗಿದೆ. ನೀರವ್ ಮೋದಿ ತನ್ನ ಹಣವನ್ನು ಸೋದರಿಯ ಖಾತೆಯಲ್ಲಿ ಇರಿಸಿದ್ದ ಎಂಬ ಮಾಹಿತಿ ಮೇರೆಗೆ ಅಕೌಂಟ್ ಜಪ್ತಿ ಮಾಡಲಾಗಿದೆ.

    ಪಿಎನ್‍ಬಿ ಹಗರಣದ ಆರೋಪಿ ನೀರವ್ ಮೋದಿಯನ್ನು ಸದ್ಯ ಲಂಡನ್ ನಗರದ ವಾಂಡಸ್ವರ್ಥ್ ಜೈಲಿನಲ್ಲಿರಿಸಲಾಗಿದೆ. ನೀರವ್ ಮೋದಿ ಲಂಡನ್ ನಲ್ಲಿರುವ ಬಗ್ಗೆ ಟೆಲಿಗ್ರಾಫ್ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಲಂಡನ್ ಪೊಲೀಸರು ನೀರವ್ ಮೋದಿಯನ್ನು ಮಾರ್ಚ್ 19ರಂದು ಹೋಲ್ಬಾರ್ನ್ ಮೆಟ್ರೋ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದೂವರೆಗೂ ನೀರವ್ ಮೋದಿ ಜಾಮೀನಿಗಾಗಿ ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದರೂ, ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

    ಮಾರ್ಚ್ 9ರಂದು ವರದಿ:
    48 ವರ್ಷದ ನೀರವ್ ಮೋದಿ ಲಂಡನ್ ನಲ್ಲಿ ರಾಜರೋಷವಾಗಿ ಓಡಾಡುತ್ತಿರವ ಬಗ್ಗೆ ಟೆಲಿಗ್ರಾಫ್ ಮಾರ್ಚ್ 9 ರಂದು ವರದಿ ಮಾಡಿತ್ತು. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೆ “ನೋ ಕಮೆಂಟ್ಸ್” ಎಂದು ಉತ್ತರಿಸಿದ್ದರು. 13 ಸಾವಿರ ಕೋಟಿ ರೂ. ವಂಚನೆಗೈದ ಆರೋಪಿ ನೀರವ್ ಮೋದಿಗೆ ಇನ್ನು ಎಷ್ಟು ದಿನ ಲಂಡನ್ ನಲ್ಲಿ ಇರಲಿದ್ದೀರಿ ಎನ್ನುವ ಪ್ರಶ್ನೆಗೆ ಅವರಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. 48 ವರ್ಷದ ನೀರವ್ ಮೋದಿ ಲಂಡನ್ ನಗರದಲ್ಲಿ ಹೋದ ಎಲ್ಲ ಕಡೆ ಪತ್ರಕರ್ತರು ಅವರನ್ನು ಹಿಂಬಾಲಿಸಿದ್ದರು. ಆದರೆ ಯಾವುದೇ ಪ್ರಶ್ನೆಗೆ ಉತ್ತರಿಸಲಿಲ್ಲ. ಕೊನೆಗೆ ನೀರವ್ ಮೋದಿ ಟ್ಯಾಕ್ಸಿ ಮಾಡಿ ಹೊರಟು ಹೋಗಿರುವ ದೃಶ್ಯ ಸೆರೆಯಾಗಿತ್ತು.

    ಏನಿದು ಪ್ರಕರಣ?:
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.

  • ಲಂಡನ್ ಮನೆಯಿಂದ ವಿಜಯ್ ಮಲ್ಯ ಔಟ್?

    ಲಂಡನ್ ಮನೆಯಿಂದ ವಿಜಯ್ ಮಲ್ಯ ಔಟ್?

    ಬ್ರಿಟನ್: ದೇಶದ ಬ್ಯಾಂಕ್‍ಗಳಿಂದ ಸಾಲ ಪಡೆದು ಮರುಪಾವತಿ ಮಾಡದೆ ಲಂಡನ್‍ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಹೊಸ ಸಂಕಷ್ಟ ಎದುರಾಗಿದೆ.

    ಲಂಡನ್ ನ ರೀಜೆಂಟ್ ಪಾರ್ಕ್ ನಲ್ಲಿರುವ ಬಹುಕೋಟಿ ಮೌಲ್ಯದ ಮನೆಯಿಂದ ಮಲ್ಯರನ್ನ ಹೊರಹಾಕಲು ಸ್ವಿಸ್ ಬ್ಯಾಂಕ್ ಬ್ರಿಟನ್ ಹೈಕೋರ್ಟ್ ಮೆಟ್ಟಿಲೇರಿದೆ.

    ವಿಜಯ್ ಮಲ್ಯ ಸದ್ಯಕ್ಕೆ ಅವರ ತಾಯಿ ಲಲಿತಾ ಮಲ್ಯ ಮತ್ತು ಅವರ ಮಗ ಸಿದ್ಧಾರ್ಥ್ ಮಲ್ಯರ ಜೊತೆ ರೀಜೆಂಟ್ ಪಾರ್ಕ್ ನಲ್ಲಿರುವ ಮಲ್ಟಿ ಮಿಲಿಯನ್ ಮ್ಯಾನ್ಷನ್ ನಲ್ಲಿ ವಾಸಿವಿದ್ದಾರೆ. ಆದರೆ ಈ ಮನೆಯನ್ನ ಅಡವಿಟ್ಟಿದ್ದ ವಿಜಯ್ ಮಲ್ಯ, ಸೆಪ್ಟೆಂಬರ್ 2017 ರಲ್ಲಿ ಸುಮಾರು 198 ಕೋಟಿಗಳಷ್ಟು ಹಣವನ್ನ ಸಾಲ ಪಡೆದಿದ್ದು, 5 ವರ್ಷಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಆದರೆ ಇಲ್ಲಿಯ ವರೆಗೆ ಸಾಲ ಮರುಪಾವತಿ ಮಾಡದ ಹಿನ್ನಲೆ ವಿಜಯ್ ಮಲ್ಯ ಅವರನ್ನು ಮ್ಯಾನ್ಷನ್ ನಿಂದ ಹೊರಹಾಕುವುದಕ್ಕೆ ಅನುಮತಿ ನೀಡಬೇಕೆಂದು ಸ್ವಿಸ್ ಬ್ಯಾಂಕ್ ಬ್ರಿಟನ್ ಕೋರ್ಟ್ ಮೆಟ್ಟಿಲೇರಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv