Tag: swing ride

  • ಬಾಲಕಿಯನ್ನು ರೇಪ್ ಮಾಡಿ ಪೊದೆಗೆ ಎಸೆದ ಕುಡುಕ!

    ಪಾಟ್ನಾ: ಏಳು ವರ್ಷದ ಬಾಲಕಿಯ ಮೇಲೆ ಕುಡುಕನೊಬ್ಬ ಅತ್ಯಾಚಾರ ಎಸಗಿದ ಪ್ರಕರಣ ಬಿಹಾರದ (Bihar) ಬೆಗುಸರಾಯ್ (Begusarai) ಜಿಲ್ಲೆಯ ಹಳ್ಳಿಯೊಂದರ ಶಾಲಾ ಆವರಣದಲ್ಲಿ ನಡೆದಿದೆ.

    ಬಾಲಕಿ ಹಾಗೂ ಆಕೆಯ ಸ್ನೇಹಿತೆ ಹೋಳಿಯ ದಿನ ಶಾಲೆಯ ಆವರಣದ ಸ್ವಿಂಗ್ ರೈಡ್‍ನಲ್ಲಿ (Swing ride) ಆಟ ಆಡಲು ತೆರಳಿದ್ದರು. ಈ ವೇಳೆ ಚೋಟು ಕುಮಾರ್ ಎಂಬಾತ ಬಾಲಕಿಯರನ್ನು ಪುಸಲಾಯಿಸಿ ಶಾಲೆಯ (School) ಶೌಚಾಲಯಕ್ಕೆ ಕರೆದೊಯ್ದಿದ್ದಾನೆ. ನಂತರ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Rape) ಎಸಗಿದ್ದಾನೆ. ಆರೋಪಿಯನ್ನು ತಡೆಯಲು ಪ್ರಯತ್ನಿಸಿದ ಒಂಬತ್ತು ವರ್ಷದ ಸ್ನೇಹಿತೆಯ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಆಕೆ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಸತಿ ಮನೆ ಬಿಡುಗಡೆಗೆ ಲಂಚ ನೀಡದ ವ್ಯಕ್ತಿಯ ಮರ್ಮಾಂಗಕ್ಕೆ ಒದ್ದು ಹತ್ಯೆ

    ಆರೋಪಿ ಬಾಲಕಿಯನ್ನು ಪೊದೆಗೆ ಎಸೆದಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ಬಾಲಕಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾಳೆ.

    ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಬೆಗುಸರಾಯ್ ಉಪ ಪೊಲೀಸ್ ವರಿಷ್ಠಾಧಿಕಾರಿ (Deputy Superintendent of Police) ನಿಶಿತ್ ಪ್ರಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ!

  • ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

    ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

    ಮಾಸ್ಕೋ: ಜೋಕಾಲಿಯಾಡುತ್ತಿದ್ದ ವೇಳೆ ಮಹಿಳೆಯರಿಬ್ಬರು ಬೆಟ್ಟದ ಮೇಲ್ಭಾಗದಿಂದ ಕೆಳಗೆ ಬಿದ್ದಿರುವ ಅಪಾಯಕಾರಿ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ಘಟನೆ ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‍ನ ಸುಲಕ್ ಕ್ಯಾನ್ಯನ್ ನಲ್ಲಿ ನಡೆದಿದ್ದು, ವೀಡಿಯೋದಲ್ಲಿ ಇಬ್ಬರು ಮಹಿಳೆಯರು ಬೆಟ್ಟದ ತುದಿಯಲ್ಲಿ ಜೋಕಾಲಿಯಾಡುತ್ತಿರುವುದನ್ನು ಕಾಣಬಹುದಾಗಿದೆ.

    ಇಬ್ಬರು ಮಹಿಳೆಯರು ಜೋಕಾಲಿ ಆಡಬೇಕೆಂದು ನಿರ್ಧರಿಸಿ ಜೋಕಾಲಿ ಮೇಲೆ ಕುಳಿತುಕೊಂಡಾಗ ಹಿಂದಿನಿಂದ ವ್ಯಕ್ತಿಯೊಬ್ಬರು ಜೋಕಾಲಿಯನ್ನು ತಳ್ಳುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದಂತೆ ಜೋಕಾಲಿ ತಿರುಗಿ ಇಬ್ಬರು 6,300 ಅಡಿಯಿಂದ ಕೆಳಗೆ ಬಿದ್ದಿದ್ದಾರೆ. ಸದ್ಯ ಅದೃಷ್ಟವಶತ್ ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಹಿಳೆಯರಿಬ್ಬರು ಘಟನೆ ವೇಳೆ ಗಾಬರಿಯಾಗಿದ್ದು, ಅಷ್ಟು ಎತ್ತರದಿಂದ ಬಿದ್ದಿದ್ದರೂ ಸದ್ಯ ಇಬ್ಬರಿಗೂ ಯಾವುದೇ ಅನಾಹುತ ಸಂಭವಿಲ್ಲ ಹಾಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಜೋಕಾಲಿಯಾಡುವ ವೇಳೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮಹಿಳೆಯರು ಬಿದ್ದಿದ್ದಾರೆ ಎಂದು ಡಾಗೆಸ್ತಾನ್ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ:ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ