Tag: Swine Fever

  • ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಆತಂಕ ಹೆಚ್ಚಿಸಿದ ಆಫ್ರಿಕನ್ ಹಂದಿಜ್ವರ

    ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಆತಂಕ ಹೆಚ್ಚಿಸಿದ ಆಫ್ರಿಕನ್ ಹಂದಿಜ್ವರ

    ತಿರುವನಂತಪುರಂ: ದೇಶದಲ್ಲಿ ಮಂಕಿಪಾಕ್ಸ್ ಭೀತಿ ಕೆಲದಿನಗಳಿಂದ ಕೇರಳ ಸೇರಿದಂತೆ ದೇಶಾದ್ಯಂತ ಭೀತಿ ಹುಟ್ಟಿಸಿದೆ. ಈ ನಡುವೆ ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಆಫ್ರಿಕನ್ ಹಂದಿಜ್ವರ ಪ್ರಕರಣಗಳು ವರದಿಯಾಗಿವೆ.

    ಕೇರಳದ ವಯನಾಡ್ ಜಿಲ್ಲೆಯ ಫಾರ್ಮ್‍ನಲ್ಲಿ ಆಫ್ರಿಕನ್ ಹಂದಿ ಜ್ವರ (ASF) ವರದಿಯಾಗಿದೆ ಎಂದು ರಾಜ್ಯ ಪಶುಸಂಗೋಪನಾ ಸಚಿವ ಜೆ.ಚಿಂಚುರಾಣಿ ಮಾಹಿತಿ ಹಂಚಿಕೊಂಡಿದ್ದಾರೆ. ಈವರೆಗೆ ದೇಶದಲ್ಲಿ ಆಫ್ರಿಕನ್ ಹಂದಿ ಜ್ವರದ ಯಾವುದೇ ಅಧಿಕೃತ ಸಂಖ್ಯೆಗಳು ದೃಢವಾಗಿಲ್ಲ. ಕೇರಳದಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸೋಂಕು ಪತ್ತೆ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Monkeypox; ಕೇರಳದಲ್ಲಿ 3ನೇ ಪ್ರಕರಣ ಪತ್ತೆ

    ಆಫ್ರಿಕನ್ ಹಂದಿ ಜ್ವರ ಹಂದಿಗಳಲ್ಲಿ ಜ್ವರ, ವಾಕರಿಕೆ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ. ಈ ಹಿಂದೆ ಶಂಕೆ ಮೇರೆಗೆ ಸ್ಯಾಂಪಲ್ ಪುಣೆಗೆ ರವಾನೆ ಮಾಡಲಾಗಿತ್ತು. ಇದರ ಫಲಿತಾಂಶ ಇದೀಗ ಲಭ್ಯವಾಗಿದ್ದು, ಜಿಲ್ಲೆಯ ಫಾರ್ಮ್‍ನಲ್ಲಿ ಹಂದಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

    ಕೇರಳ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಈ ಹಂದಿ ಜ್ವರ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ಜಂಟಿ ನಿರ್ದೇಶಕ ಡಾ.ಪಿ.ಸಿಂಗ್, ಉತ್ತರ ಪ್ರದೇಶದ ಬರೇಲಿಯ ನವಾಬ್‍ಗಂಜ್ ತಹಸಿಲ್‍ನ ಭಾದ್ಸರ್ ದಾಂಡಿಯಾ ಗ್ರಾಮದ ನಿವಾಸಿ ಅನಿಲ್ ಕುಮಾರ್ ಸಾಕಿದ್ದ ಹಂದಿ ಜ್ವರದಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳವಾರ BBMP ಚುನಾವಣಾ ಭವಿಷ್ಯ ನಿರ್ಧಾರ?

    Live Tv
    [brid partner=56869869 player=32851 video=960834 autoplay=true]

  • ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ದಿಸ್ಪುರ್: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ (ASF) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ, ಇಲ್ಲಿನ ಹಂದಿಯೊಂದರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿದ್ದು ಕೊಂದ ಹಂದಿಗಳನ್ನು ಹೂಳಲಾಗಿದೆ. ಅದೇ ಸಮಯದಲ್ಲಿ, ನಾವು ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಿ, ಏಕಕಾಲದಲ್ಲಿ ಶುಚಿಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಆಫ್ರಿಕನ್ ಹಂದಿ ಜ್ವರವು ಹಂದಿಗಳಿಗೆ ಮಾರಣಾಂತಿಕ ಅಷ್ಟೇ, ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಮನುಷ್ಯರಿಗೆ ಸೋಂಕು ಹರಡುವುದಿಲ್ಲ. ಹೀಗಾಗಿ ಆತಂಕಕೊಳ್ಳಕಾಗಬಾರದೆಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ

    ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2020 ರಿಂದ 2022ರ ಜುಲೈ 11ರ ವರೆಗೆ ರಾಜ್ಯದಲ್ಲಿ ಸುಮಾರು 40,159 ಹಂದಿಗಳು ಜ್ವರದಿಂದ ಸಾವನ್ನಪ್ಪಿವೆ. 1,181 ಹಂದಿಗಳನ್ನು ಕೊಲ್ಲಲಾಗಿದೆ ಎಂದಿದ್ದಾರೆ.

    ಎಲ್ಲೆಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ?
    ಅಸ್ಸಾಂ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪ್ರಕರಣಗಳು ವರದಿಯಾಗಿವೆ.

    ಈ ಜ್ವರವು ಸಾಂಕ್ರಾಮಿಕವಾಗಿದ್ದು, ಮನುಷ್ಯರಿಗೆ ಹರಡುವುದಿಲ್ಲ. ಆದರೆ ಇದಕ್ಕೆ ಸೂಕ್ತ ಲಸಿಕೆಯೂ ಇಲ್ಲದಿರುವುದರಿಂದ ಹಂದಿ ಮಾಂಸ ತಿನ್ನುವುದನ್ನು ತಪ್ಪಿಸುವಂತೆ ಸರ್ಕಾರವು ನಿವಾಸಿಗಳನ್ನು ಒತ್ತಾಯಿಸಿದೆ. ಇದನ್ನೂ ಓದಿ: ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್

    ಕೇಂದ್ರ ಸರ್ಕಾರವು ಆಫ್ರಿಕನ್ ಹಂದಿ ಜ್ವರದ ಕ್ರಿಯಾ ಯೋಜನೆ ರೂಪಿಸಿದ್ದು, ಇದನ್ನು ಎಲ್ಲಾ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಅನುಸರಿಸಬೇಕು, ಆರೋಗ್ಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು. ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಜ್ವರ ಅಥವಾ ಜ್ವರದಿಂದ ಸಾವನ್ನಪ್ಪಿದ ಪ್ರಕರಣಗಳ ಬಗ್ಗೆ ನಿಗಾ ವಹಿಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

    Live Tv
    [brid partner=56869869 player=32851 video=960834 autoplay=true]