Tag: Swimming

  • ಈಜು ಬಾರದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಚಿತ್ರ ಹಿಂಸೆ ಕೊಟ್ಟ ಯುವಕರು

    ಈಜು ಬಾರದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಚಿತ್ರ ಹಿಂಸೆ ಕೊಟ್ಟ ಯುವಕರು

    – ಈಜು ಬರಲ್ಲ ಉಸಿರುಗಟ್ಟುತ್ತಿದೆ ಎಂದು ಕಿರುಚಾಡಿದ ಬಾಲಕ

    ಬೆಂಗಳೂರು: ಈಜು ಬಾರದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಯುವಕರ ಗುಂಪೊಂದು ಚಿತ್ರ ಹಿಂಸೆ ನೀಡಿರುವ ಘಟನ ಸಿಲಿಕಾನ್ ಸಿಟಿಯ ಕಂಠೀರವ ಸ್ಟೇಡಿಯಂ ಬಳಿ ನಡೆದಿದೆ.

    ಮ್ಯಾನುಯಲ್, ಸೂರ್ಯ ಮತ್ತು ಚರಣ್ ಅಪ್ರಾಪ್ತ ಬಾಲಕನನ್ನು ಕಂಠೀರವ ಸ್ಟೇಡಿಯಂ ಬಳಿಯ ಕೆರೆಗೆ ತಳ್ಳಿ ಈಜು ಬರಲ್ಲ ಉಸಿರುಗಟ್ಟುತ್ತಿದೆ ಎಂದು ಬಾಲಕ ಕಿರುಚಾಡಿದರೂ ಬಿಡದೆ ನೀರಿನಲ್ಲಿ ಮುಳುಗಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

    ಬಾಲಕನನ್ನು ಕರೆಯ ದಡದಲ್ಲಿ ನಿಲ್ಲಿಸಿ ಅವನನ್ನು ಗುದ್ದಿಕೊಂಡು ಕೆರೆಗೆ ಹಾರಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವಕರು ಬಾಲಕನನ್ನು ಹಿಡಿದುಕೊಂಡು ನೀರಿನಲ್ಲಿ ಮುಳುಗಿಸುತ್ತಿರುವುದು, ದೈಹಿಕವಾಗಿ ಹಲ್ಲೆ ಮಾಡುತ್ತಿರುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ. ಅಲ್ಲದೇ ಈ ಕೃತ್ಯವನ್ನು ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಈ ವಿಡಿಯೋದಲ್ಲಿ ಬಾಲಕ ಅಣ್ಣ ನನಗೆ ಈಜು ಬರುವುದಿಲ್ಲ. ನನಗೆ ಉಸಿರಾಡಲು ಆಗುತ್ತಿಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಬಿಡದ ಯುವಕರು ಬಾಲಕನನ್ನು ನೀರಿನ ಒಳಗೆ ಎತ್ತಿಕೊಂಡು ಹೋಗಿ ಮುಳುಗಿಸಿದ್ದಾರೆ. ಬಾಹುಬಲಿ ನಾನು ಎಂದು ಹೇಳಿ ಎತ್ತಿ ಎಸೆದಿದ್ದಾರೆ. ಈ ಸಂಬಂಧ ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಕೇಸ್ ದಾಖಲಾಗಿದೆ.

  • ಸ್ನೇಹಿತ ನೀರಿನಲ್ಲಿ ಮುಳುಗೋದನ್ನು ಕಂಡ್ರೂ ಬದುಕಿಸಲಾಗದ ಸ್ಥಿತಿ!

    ಸ್ನೇಹಿತ ನೀರಿನಲ್ಲಿ ಮುಳುಗೋದನ್ನು ಕಂಡ್ರೂ ಬದುಕಿಸಲಾಗದ ಸ್ಥಿತಿ!

    – ಸಾವಿನ ಕೊನೆ ಕ್ಷಣಗಳು ಮೊಬೈಲಿನಲ್ಲಿ ಸೆರೆ

    ಕಲಬುರಗಿ: ತನ್ನ ಕಣ್ಣಮುಂದೆಯೇ ಸ್ನೇಹಿತ ನೀರಿನಲ್ಲಿ ಮುಳುಗುವುದನ್ನು ಕಂಡು ಸ್ನೇಹಿತರು ಗಾಬರಿಯಾಗಿದ್ದು, ಬದುಕಿಸುವಲ್ಲಿ ಅಸಹಾಯಕರಾದ ಪ್ರಸಂಗವೊಂದು ನಡೆದಿದೆ.

    ಕಲಬುರಗಿ ಪಟ್ಟಣದ ಹೊರವಲಯದಲ್ಲಿನ ರಾಣೇಶಪೀರ್‍ದರ್ಗಾ ಬಳಿಯ ಕಲ್ಲು ಕ್ವಾರಿಯಲ್ಲಿ ಘಟನೆ ನಡೆದಿದೆ. ಜಾಫರ್(22) ನೀರಲ್ಲಿ ಮುಳುಗಿ ಮೃತ ಯುವಕ. ಸಾವಿನ ಕೊನೆ ಕ್ಷಣಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವಕ ಜಾಫರ್ ನೀರಲ್ಲಿ ಮುಳುಗಿ ಸಾಯುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ತನ್ನ ಕಣ್ಣಮುಂದೆ ಸ್ನೇಹಿತ ನೀರಲ್ಲಿ ಮುಳಗುವುದನ್ನೂ ಕಂಡರೂ ಬದುಕಿಸಲಾಗದ ಸ್ಥಿತಿಯಲ್ಲಿ ಸ್ನೇಹಿತನಿದ್ದನು.

    ಕಲಬುರಗಿ ನಗರದ ಮಿಜಗುರಿ ಬಡಾವಣೆ ನಿವಾಸಿ ಜಾಫರ್, ಶುಕ್ರವಾರ ಸಂಜೆ ಸ್ನೇಹಿತರ ಜೊತೆ ಸೇರಿ ಕಲ್ಲು ಕಣಿಯಲ್ಲಿ ಈಜಲು ಹೋಗಿದ್ದ. ಸುಮಾರು ಹೊತ್ತು ಸ್ನೇಹಿತರೆಲ್ಲ ಸೇರಿ ಈಜಾಡಿದ್ದಾರೆ. ಅದೆಲ್ಲವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಗಿದೆ. ಕೊನೆಗೆ ಮತ್ತೆ ನೀರಿಗೆ ಜಿಗಿದ ಜಾಫರ್, ಒಂದು ನಿಮಿಷ ಈಜಿ ದಡಕ್ಕೆ ಬರಲು ಪ್ರಯತ್ನಿಸುತ್ತಿದ್ದ. ದಣಿವಾಗಿ ದಡಮುಟ್ಟಲು ಬರುತ್ತಾನೆ. ದಡದತ್ತ ಬರುತ್ತಿದ್ದಾನೆ ಎಂದು ಸ್ನೇಹಿತರು ಸುಮ್ಮನಾಗಿದ್ದಾರೆ.

    ಆದರೆ ಅಷ್ಟರೊಳಗಾಗಿ ಜಾಫರ್ ನೀರು ಪಾಲಾಗಿ ಮೃತಪಟ್ಟಿರುತ್ತಾನೆ. ಈ ಎಲ್ಲ ಘಟನೆ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸತ್ತೆ ಹೋದ್ರು ಎಂದು ಕೊಂಡ ಅರ್ಚಕ ಪವಾಡ ಸದೃಶವಾಗಿ ಬಚಾವ್

    ಸತ್ತೆ ಹೋದ್ರು ಎಂದು ಕೊಂಡ ಅರ್ಚಕ ಪವಾಡ ಸದೃಶವಾಗಿ ಬಚಾವ್

    ಮೈಸೂರು: ಕಳೆದ ಶನಿವಾರ ಬೆಳಗ್ಗೆ ಸ್ನೇಹಿತರ ಜೊತೆ ಸವಾಲು ಹಾಕಿ ಭೋರ್ಗರೆಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ಬಿದ್ದಿದ್ದ ನಂಜನಗೂಡಿನ ಅರ್ಚಕ ವೆಂಕಟೇಶ್ ಪವಾಡ ಸದೃಶವಾಗಿ ಪರಾಗಿದ್ದಾರೆ.

    ನಂಜನಗೂಡಿನ ಸೇತುವೆ ಮೇಲಿಂದ ಹೆಜ್ಜಿಗೆ ಸೇತುವೆವರೆಗೂ ಈಜುತ್ತೇನೆ ಎಂದು ವೆಂಕಟೇಶ್ ಸ್ನೇಹಿತರ ಜೊತೆ ಸವಾಲಾಕಿದ್ದರು. ಆದರೆ ಹರಿಯುವ ನದಿಯಲ್ಲಿ ಹಾದಿ ತಪ್ಪಿದ ವೆಂಕಟೇಶ್ ತಾವು ತಲುಪಬೇಕಾದ ಸ್ಥಳ ಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು. ನದಿಯೊಳಗೆ ಹಾಕಿದ್ದ ದೊಡ್ಡ ಪೈಪ್ ಒಳಗೆ ನುಸುಳಿ ಬಿಟ್ಟಿದ್ದರು. ನಂತರ ಅಲ್ಲಿಂದ ಪಾರಾಗಿ ಸೇತುವೆಯೊಂದನ್ನು ಹಿಡಿದು ಅದರ ಅಡಿ ಮಲಗಿದ್ದರು.

    ಶನಿವಾರದಿಂದ ನಾಪತ್ತೆಯಾಗಿದ್ದ ಕಾರಣ ಅವರು ಸತ್ತೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಸಂಜೆ ವೇಳೆಗೆ ಈಜಿಕೊಂಡು ಮತ್ತೆ ದಡ ಸೇರಲು ಯಶಸ್ವಿಯಾಗಿದ್ದಾರೆ. ಕಳೆದ 2 ದಿನಗಳಿಂದ ಊಟವಿಲ್ಲದೆ ಸೇತುವೆ ಕೆಳಗೆ ಮಲಗಿದ್ದ ಅವರು ನೀರಿನಲ್ಲಿ ತೇಲಿ ಬಂದ ಎಳನೀರು ಕುಡಿದು ಕಾಲ ಕಳೆದಿದ್ದರು.

    ನೀರಿನಲ್ಲಿ ಕೊಚ್ಚಿ ಹೋಗಿದ್ದ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಹಣಕ್ಕಾಗಿ ಸವಾಲು ಎಸೆದು ಈಜಲು ಹೋಗಿಲ್ಲ. ಹೊಳೆ ತುಂಬಿದ ವೇಳೆ ಈಜುವುದು ಒಂದು ಹವ್ಯಾಸವಾಗಿದ್ದು, ನೀರಿನಲ್ಲಿ ಈಜುವುದು ನಮಗೇ ಒಂದು ರೀತಿ ಸಾಹಸವಾಗಿದೆ. ಈ ಹಿಂದೆ ಹಲವು ಬಾರಿ ನಾವು ಇಂತಹದ್ದೆ ಸಾಹಸ ಮಾಡಿದ್ದೇವೆ. ಆದರೆ ನನಗೆ ಈ ಸೇತುವೆಯ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆದ್ದರಿಂದ ಸಮಸ್ಯೆ ಎದುರಾಗಿತ್ತು. ಯೋಗ ಹಾಗೂ ಉಪವಾಸ ಇರುವುದು ಅಭ್ಯಾಸವಿರುವುದರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಯಾರ ಸಹಾಯವನ್ನು ನಿರೀಕ್ಷೆ ಮಾಡದೆ ಮತ್ತೆ ಈಜಿ ದಡಕ್ಕೆ ಬಂದೆ ಎಂದು ತಿಳಿಸಿದರು.

  • ಸವಾಲೆಸೆದು ಕಪಿಲಾ ನದಿಗೆ ಹಾರಿದ ಪೂಜಾರಿ ನಾಪತ್ತೆ

    ಸವಾಲೆಸೆದು ಕಪಿಲಾ ನದಿಗೆ ಹಾರಿದ ಪೂಜಾರಿ ನಾಪತ್ತೆ

    ಮೈಸೂರು: ಸ್ನೇಹಿತರ ಜೊತೆ ಸವಾಲು ಹಾಕಿ ಕಪಿಲಾ ನದಿಗೆ ಹಾರಿದ ಪೂಜಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ನಂಜನಗೂಡು ಪಟ್ಟಣದ ಲಿಂಗ ಭಟ್ಟರ ಗುಡಿಯ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದ 53 ವರ್ಷದ ವೆಂಕಟೇಶ್ ನಾಪತ್ತೆಯಾದ ವ್ಯಕ್ತಿ. ಉಕ್ಕಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಈಜುವ ದುಃಸ್ಸಾಹಸಕ್ಕೆ ಹೋಗಿ ನಾಪತ್ತೆ ಆಗಿದ್ದಾರೆ.

    ಸ್ನೇಹಿತರ ಜೊತೆ ಸವಾಲು ಹಾಕಿ ಶನಿವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ನಂಜನಗೂಡು ಪಟ್ಟಣದ ಹೊಸ ರೈಲ್ವೆ ಸೇತುವೆಯಿಂದ ಕಪಿಲಾ ನದಿಗೆ ಧುಮುಕಿದ ಪೂಜಾರಿ ವೆಂಕಟೇಶ್ ಮೂರು ದಿನ ಕಳೆದರು ಇನ್ನೂ ಪತ್ತೆಯಾಗಿಲ್ಲ.

    ಈ ಬಗ್ಗೆ ವೆಂಕಟೇಶ್ ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಸ್ವಿಮ್ ಸೂಟಿನಲ್ಲಿ ಪ್ರಿಯಾಂಕಾ ಹಾಟ್ ಲುಕ್

    ಸ್ವಿಮ್ ಸೂಟಿನಲ್ಲಿ ಪ್ರಿಯಾಂಕಾ ಹಾಟ್ ಲುಕ್

    ಫ್ಲೋರಿಡಾ: ಬಾಲಿವುಡ್ ದೇಸಿ ಗರ್ಲ್, ನಟಿ ಪ್ರಿಯಾಂಕಾ ಚೋಪ್ರಾ ಅವರು ತಾವು ಧರಿಸುವ ಉಡುಪು, ಫೋಟೋಶೂಟ್, ಪ್ರವಾಸ ಹೀಗೆ ತಮ್ಮ ಜೀವನ ಶೈಲಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಪ್ರಿಯಾಂಕಾ ಅವರು ಸ್ವಿಮ್ ಸೂಟಿನಲ್ಲಿ ಹಾಟಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿದ್ದು, ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಪ್ರಿಯಾಂಕಾ ಮಿಯಾಮಿ ಸಿಟಿಯಲ್ಲಿದ್ದು, ಪತಿ ನಿಕ್ ಜೋನಸ್ ಸಹೋದರನ ಪತ್ನಿಯಾದ ಸೋಫಿ ಟರ್ನರ್ ಹಾಗೂ ಆಕೆಯ ಗೆಳತಿಯರ ಜೊತೆಗೆ ಅಲ್ಲಿನ ಸ್ವಿಮ್ಮಿಂಗ್ ಪೂಲ್‍ಗೆ ಹೋಗಿದ್ದಾರೆ.

    https://www.instagram.com/p/B0uNY0JF-zo/

    ಪ್ರಿಯಾಂಕಾ ಅವರು ಮೆರೂನ್ ಸ್ವಿಮ್ ಸೂಟ್ ಹಾಕಿಕೊಂಡಿದ್ದು, ಹಾಟಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕಾ ಅವರ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಆ ಫೋಟೋಗಳನ್ನು ಪ್ರಿಯಾಂಕಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಕಿನಿ ತೊಟ್ಟ ಪ್ರಿಯಾಂಕಾ ಅವರ ಹಾಟ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಇತ್ತೀಚಿಗಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬರೋಬ್ಬರಿ 3.5 ಲಕ್ಷ ರೂ. ಬೆಲೆಯ ಕೇಕ್ ಕಟ್ ಮಾಡಿದ್ದರು. ಪ್ರೀತಿಯ ಪತ್ನಿಗಾಗಿ ಪತಿ ನಿಕ್ ಈ ಕೇಕ್ ಆರ್ಡರ್ ಮಾಡಿದ್ದು, ಅದನ್ನು ತಯಾರಿಸಲು ಸುಮಾರು 24 ಗಂಟೆಗಳು ತೆಗೆದುಕೊಳ್ಳಲಾಗಿತ್ತು. ಕೇಕನ್ನು ಕೆಂಪು ಮತ್ತು ಗೋಲ್ಡನ್ ಕಾಂಬಿನೇಷನ್‍ನ್ನಲ್ಲೇ ತಯಾರಿಸಲಾಗಿತ್ತು. ಯಾಕೆಂದರೆ ಹುಟ್ಟುಹಬ್ಬದ ದಿನ ಪ್ರಿಯಾಂಕಾ ಅವರು ಕೂಡ ಅದೇ ಬಣ್ಣದ ಡ್ರೆಸ್ ಧರಿಸಿದ್ದರು.

    https://www.instagram.com/p/B0trV8CDVPH/

  • ತೊಟ್ಟಿಯಲ್ಲಿ ಕೋತಿಗಳ ಸ್ವಿಮ್ಮಿಂಗ್ – ವಿಡಿಯೋ ವೈರಲ್

    ತೊಟ್ಟಿಯಲ್ಲಿ ಕೋತಿಗಳ ಸ್ವಿಮ್ಮಿಂಗ್ – ವಿಡಿಯೋ ವೈರಲ್

    ಮಂಡ್ಯ: ಮಳವಳ್ಳಿ ತಾಲೂಕಿನ ಬಸವನ ಬೆಟ್ಟದಲ್ಲಿ ಬಿಸಿಲಿನ ತಾಪ ತಾಳಲಾರದೆ ಕೋತಿಗಳು ನೀರಿನ ತೊಟ್ಟಿಗಿಳಿದು ಸ್ನಾನ ಮಾಡುತ್ತ ಆಟವಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಬಸವನ ಬೆಟ್ಟದ ಬಳಿಯಿರುವ ಹೆಬ್ಬೆಟ್ಟೇ ಬಸವೇಶ್ವರಸ್ವಾಮಿ ದೇವಸ್ಥಾನದ ಬಳಿ ಕೋತಿಗಳು ಸ್ವಿಮ್ಮಿಂಗ್ ಕಂಡು ಬಂದಿದೆ. ಪ್ರವಾಸಿಗರೊಬ್ಬರು ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸುಮಾರು 10-15 ಕೋತಿಗಳು ನೀರಿನ ತೊಟ್ಟಿ ಸುತ್ತಾ ಕುಳಿತಿದ್ದು, ಒಂದರಂದೆ ಒಂದು ತೊಟ್ಟಿಗೆ ಮುಳುಗಿ ಏಳುತ್ತಿವೆ. ಕೆಲವು ಕೋತಿಗಳು ತೊಟ್ಟಿಯಲ್ಲಿಯೇ ಸ್ವಿಮ್ಮಿಂಗ್ ಮಾಡುತ್ತಿವೆ. ಇನ್ನೂ ಜೋಡಿಯಾಗಿಯೂ ಮುಳುಗಿ-ಮುಳುಗಿ ಎದ್ದೇಳುತ್ತಿವೆ. ಬಿಸಿಲಿನ ತಾಪಕ್ಕೆ ಕೋತಿಗಳು ನೀರನ್ನು ಕಂಡ ಸಂತಸಕ್ಕೆ ತೊಟ್ಟಿಯಲ್ಲಿ ಮುಳುಗಿ ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಮಳೆ ಇಲ್ಲದೆ ಕಾಡು ಒಣಗಿದ್ದು, ಹಲವಾರು ಮರಗಳು ಎಲೆಗಳು ಉದುರಿ ನಿಂತಿವೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮಂಗಗಳು ಮತ್ತು ಕಾಡು ಪ್ರಾಣಿಗಳು ಹಾಹಾಕಾರ ಪಡುತ್ತಿವೆ. ಈ ವೇಳೆ ದೇವಾಲಯದ ಸಮೀಪವಿರುವ ಕಾಡಿನಲ್ಲಿ ವಾಸವಿರುವ ಮಂಗಗಳು ನೀರಿನ ತೊಟ್ಟಿಗೆ ಜಿಗಿದು ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದಾವೆ ಎಂದು ಪ್ರವಾಸಿಗ ಲೋಕೇಶ್ ಹೇಳಿದ್ದಾರೆ.

  • ಕಣ್ಣ ಮುಂದೆಯೇ ಎಲ್ಲರು ಜಲಸಮಾಧಿಯಾದ್ರು – ನನ್ನನ್ನು `ಅಂಜನೇಯ’ ರಕ್ಷಿಸಿದ : ಗಿರೀಶ್

    ಕಣ್ಣ ಮುಂದೆಯೇ ಎಲ್ಲರು ಜಲಸಮಾಧಿಯಾದ್ರು – ನನ್ನನ್ನು `ಅಂಜನೇಯ’ ರಕ್ಷಿಸಿದ : ಗಿರೀಶ್

    ಮಂಡ್ಯ: ಜಿಲ್ಲೆಯ ಪಂಡಾವಪುರ ಬಳಿಕ ನಡೆದ ಬಸ್ ದುರಂತದಲ್ಲಿ ಬಾಲಕ ಲೋಹಿತ್ ಸೇರಿದಂತೆ, ಗಿರೀಶ್ ಬದುಕಿ ಬಂದಿದ್ದಾರೆ.

    ಬಸ್ ನಾಲೆಗೆ ಉರುಳಿ ಬಿದ್ದ ಬಳಿಕ ಬದುಕಿ ಬಂದ ಗಿರೀಶ್ ಪಬ್ಲಿಕ್ ಟಿವಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಬಸ್ ನ ಹಿಂಭಾಗದಲ್ಲಿ ಕುಳಿತ್ತಿದ್ದ ಕಾರಣ ಬಸ್‍ನಿಂದ ಹೊರ ಬರಲು ಸಾಧ್ಯವಾಯಿತು. ಬಸ್ ಉರುಳುತ್ತಿದಂತೆ ಕಿಟಕಿ ಗಾಜು ಒಡೆದು ಹೊರ ಬಂದೆ. ಈಜು ಬಂದ ಕಾರಣ ದಡಕ್ಕೆ ಬಂದ ಕೂಡಲೇ ಲೋಹಿತ್ ಮೇಲಕ್ಕೆ ಬಂದ, ಅದ್ದರಿಂದ ಅವರನ್ನು ರಕ್ಷಣೆ ಮಾಡಿದೆ. ಆದರೆ ನನ್ನನ್ನು ಆ ಅಂಜನೇಯನೇ ರಕ್ಷಣೆ ಮಾಡಿದ ಆದರೆ ಇತರನ್ನು ರಕ್ಷಣೆ ಮಾಡಲು ಆಗಲಿಲ್ಲ ಬೇಸರ ವ್ಯಕ್ತಪಡಿಸಿದರು.

    ನಾನು ಬಸ್ ಹೊರ ಬರುತ್ತಿದಂತೆ ಬಾಲಕನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಯಿತು. ನಮ್ಮ ಊರಿನವರೇ 15 ಜನರಿದ್ದರು. ಆದರೆ ನನ್ನ ಕಣ್ಣ ಮುಂದೆಯೇ ಎಲ್ಲರನ್ನೂ ಕಳೆದುಕೊಂಡೆ. ಆದರೆ ಬಸ್ ಕಂಡಕ್ಟರ್ ಬಸ್‍ನಿಂದ ಬದುಕಿ ಬಂದಿದ್ದು, ಕಾಲುವೆಯಿಂದ ಈಜಿ ಬಂದ ಬಳಿಕ ಸ್ಥಳದಿಂದ ಪರಾರಿಯಾದ ಎಂದು ತಿಳಿಸಿದರು.

    ಬಸ್ ಉರುಳಿದ 10 ನಿಮಿಷದ ಬಳಿಕ ಸ್ಥಳೀಯರು ಆಗಮಿಸಿ ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಆಗಾಗಲೇ ಬಸ್ ಮೇಲೆ ಒಂದು ಅಡಿ ನೀರು ಇತ್ತು. ಬಸ್ಸಿನಲ್ಲಿ 5 ಶಾಲಾ ಮಕ್ಕಳು ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಮ್ಮ ಗ್ರಾಮದ 15 ಜನರು ಇದ್ದರು. ಸದ್ಯ ಊರಿನಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

    ಬಸ್ ಉರುಳಿ ಬಿದ್ದ ಸ್ಥಳದಲ್ಲಿ ಯಾವುದೇ ತಿರುವು ಇಲ್ಲ. ಆದರೆ ಏಕೆ ಬಸ್ ಕಾಲುವೆಗೆ ಉರುಳಿತು ಎಂಬುವುದೇ ತಿಳಿಯಲಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಗ್ರಾಮಸ್ಥರು ಕೂಡ ಪ್ರಯಾಣಿಕರನ್ನು ಬದುಕಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭಾರೀ ಅನಾಹುತದಿಂದ ಬದುಕುಳಿದ ಐದು ವಿದ್ಯಾರ್ಥಿಗಳು!

    ಭಾರೀ ಅನಾಹುತದಿಂದ ಬದುಕುಳಿದ ಐದು ವಿದ್ಯಾರ್ಥಿಗಳು!

    ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ, ವಿದ್ಯಾರ್ಥಿಗಳಲ್ಲಿ ಐವರು ನೀರಿನ ಪ್ರವಾಹಕ್ಕೆ ಸಿಲುಕಿ, ಬದುಕುಳಿದ ಘಟನೆ ಮಂಗಳೂರು ತಾಲೂಕಿನ ನಾವೂರ ಗ್ರಾಮದಲ್ಲಿ ನಡೆದಿದೆ.

    ವಾಲ್ಮೀಕಿ ಜಯಂತಿ ನಿಮಿತ್ತ ಇಂದು ಶಾಲಾಗಳಿಗೆ ಸರ್ಕಾರಿ ರಜೆ ಘೋಷಿಸಲಾಗಿತ್ತು. ಹೀಗಾಗಿ ನಾವೂರ ಗ್ರಾಮ ಸಮೀಪದ ಲಕ್ಷ್ಮಿ ವಿಷ್ಣು ಮೂರ್ತಿ ದೇವಸ್ಥಾನದ ಬಳಿ ಹರಿಯುವ ನೇತ್ರಾವತಿ ನದಿಗೆ 11 ಜನರ ವಿದ್ಯಾರ್ಥಿಗಳ ತಂಡ ಈಜಾಡಲು ತೆರಳಿತ್ತು. ಈ ವೇಳೆ ಶಂಭೂರು ಎಎಂಆರ್ ಡ್ಯಾಂನಿಂದ ಏಕಾಏಕಿ ನೀರನ್ನು ಹೊರಬಿಡಲಾಗಿತ್ತು. ನೀರಿನ ರಭಸವನ್ನು ಗಮನಿಸಿದ 6 ಮಂದಿ ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ.

    ಉಳಿದ ಐವರು ವಿದ್ಯಾರ್ಥಿಗಳಿಗೆ ಈಜಲು ಸಾಧ್ಯವಾಗದೇ ನದಿಯ ಇನ್ನೊಂದು ಬದಿಯ ದೊಡ್ಡ ಬಂಡೆಯ ಮೇಲೆ ಹತ್ತಿದ್ದಾರೆ. ಮಕ್ಕಳು ಅಲ್ಲಿಂದ ಪಾರಾಗಲು ಪರದಾಡುವಂತಾಗಿತ್ತು. ನದಿಯ ದಂಡೆ ಸೇರಿದ್ದ 6 ವಿದ್ಯಾರ್ಥಿಗಳು ಬೊಬ್ಬೆ ಹಾಗೂ ಕಿರುಚಾಟ ಕೇಳಿಸಿಕೊಂಡ, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾದರು. ಹಗ್ಗ ಕೊಟ್ಟು ಒಬ್ಬೊಬ್ಬರನ್ನೇ ರಕ್ಷಿಸಿದ್ದಾರೆ.

    ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿ, ವಿದ್ಯಾರ್ಥಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡು, ನಿಮಗೆ ನದಿಯ ಆಳ ಗೊತ್ತಿಲ್ಲದಿದ್ದರೆ ಸ್ಥಳೀಯರನ್ನು ಕೇಳಬೇಕಿತ್ತು. ಯಾರೇ ಪ್ರಾಣ ಹೋಗಿದ್ದರೂ ನಷ್ಟ ಅಲ್ಲವೇ. ಡ್ಯಾಂ ಹತ್ತಿರವೇ ಇದೆ. ನಿಮಗೆ ಈಜಾಡುವ ಉದ್ದೇಶವಿದ್ದರೆ ಮಾಹಿತಿ ಪಡೆಯಬೇಕಿತ್ತು. ಒಂದು ವೇಳೆ ಸ್ಥಳೀಯರು ಬಾರದಿದ್ದರೇ ಐವರ ಜೀವವೇ ಹೋಗುತ್ತಿತ್ತು ಎಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಸಾವು!

    ವರದಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಸಾವು!

    ಹಾವೇರಿ: ಸಂಬಂಧಿಕರೊಬ್ಬರ ಕಾರ್ಯಕ್ರಮದ ನಿಮಿತ್ತ ದೇವಸ್ಥಾನಕ್ಕೆ ಬಂದಿದ್ದ ಯುವಕನೊಬ್ಬ ವರದಾ ನದಿಯಲ್ಲಿ ಈಜಲು ಹೋಗಿ, ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಕಿತ್ತೂರು ಗ್ರಾಮದ ಬಳಿ ನಡೆದಿದೆ.

    ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ನಿವಾಸಿ ನಾಗರಾಜ ಮೃತ ಯುವಕ. ಇಂದು ಕಿತ್ತೂರು ಗ್ರಾಮದ ಬಳಿಯ ಸಂಗಮೇಶ್ವರ ದೇವಸ್ಥಾನದಲ್ಲಿ ನಾಗರಾಜ ಸಂಬಂಧಿಕರ ಕಾರ್ಯಕ್ರಮ ನಡೆದಿತ್ತು. ದೇವಸ್ಥಾನದ ಹಿಂಭಾಗದಲ್ಲಿ ವರದಾನದಿ ಹರಿಯುತ್ತಿದ್ದು, ನದಿಯ ನೀರು ತುಂಬಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ.

    ಎಲ್ಲರೂ ಕಾರ್ಯಕ್ರಮದಲ್ಲಿ ನಿರತರಾಗಿದ್ದರು. ಆದರೆ ನಾಗರಾಜ ಮಾತ್ರ ದೇವಸ್ಥಾನದ ಹಿಂದೆ ಇದ್ದ ಮಟ್ಟಿಲು ಇಳಿದು ವರದಾ ನದಿಗೆ ಹಾರಿದ್ದಾನೆ. ನದಿ ರಭಸವಾಗಿ ಹರಿಯುತ್ತಿದ್ದ ಪರಿಣಾಮ ನಾಗರಾಜ ಸುಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ ಮತ್ತು ಪೊಲೀಸರು ಆಗಮಿಸಿ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ.

    ಘಟನಾ ಸ್ಥಳದಲ್ಲಿದ್ದ ನಾಗರಾಜ ತಾಯಿ ಹಾಗೂ ಸಹೋದರಿ ಆಕ್ರಂದ ಮುಗಿಲು ಮುಟ್ಟಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರ ಸಾವು

    ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರ ಸಾವು

    ಬಾಗಲಕೋಟೆ: ಈಜಲು ಬಾರದೇ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

    ಸುಹಾಸ್ ನೀಲಣ್ಣವರ (15), ಮೇಘರಾಜ ಪತ್ತಾರ (14) ಮೃತಪಟ್ಟ ಬಾಲಕರು. ಸ್ನಾನ ಮಾಡಲು ಹೋಗಿ ಈ ಅವಘಡ ನಡೆದಿದೆ. ಶನಿವಾರ ಬಾಲಕರು ಮನೆಗೆ ಬಾರದೇ ಇದ್ದ ಕಾರಣ ಪೋಷಕರು ಪೊಲೀಸರ ಮೊರೆ ಹೋಗಿದ್ದರು. ಬಳಿಕ ಪೊಲೀಸರು ತಡರಾತ್ರಿ ಹುಡುಕಾಟ ನಡೆಸಿ ಕೃಷಿ ಹೊಂಡದಿಂದ ಇಬ್ಬರು ಬಾಲಕರ ಶವವನ್ನು ಹೊರತೆಗೆದಿದ್ದಾರೆ.

    ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv