Tag: Swimming

  • ಒಂದು ಕ್ಷಣದಲ್ಲಿ ಜೀವವೇ ಹೋಯ್ತು – ತಂದೆ ಎದುರೇ ಮಗನನ್ನು ಕೊಂದು ತಿಂದ ಟೈಗರ್ ಶಾರ್ಕ್

    ಒಂದು ಕ್ಷಣದಲ್ಲಿ ಜೀವವೇ ಹೋಯ್ತು – ತಂದೆ ಎದುರೇ ಮಗನನ್ನು ಕೊಂದು ತಿಂದ ಟೈಗರ್ ಶಾರ್ಕ್

    ಕೈರೋ: ಸಮುದ್ರದಲ್ಲಿ ಈಜಾಡುತ್ತಿದ್ದ ರಷ್ಯಾ ಮೂಲದ ಪ್ರವಾಸಿಗನ (Russian Tourist) ಮೇಲೆ ಟೈಗರ್ ಶಾರ್ಕ್ ದಾಳಿ ನಡೆಸಿ, ತನ್ನ ತಂದೆ ಎದುರೇ ಕೊಂದು ತಿಂದಿರುವ ಘಟನೆ ಈಜಿಪ್ಟ್‌ನ (Egypt) ಹುರ್ಘಾಡ ನಗರದಲ್ಲಿರುವ ರೆಡ್ ಸೀ ರೆಸಾರ್ಟ್‌ನಲ್ಲಿ ನಡೆದಿದೆ.

    ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡುತ್ತಿದೆ. ಪ್ರವಾಸಿಗ ವ್ಲಾಡಿಮಿರ್ ಪೊಪೊವ್ (23) ಎಂದು ಗುರುತಿಸಲಾದ ವ್ಯಕ್ತಿ ಮೇಲೆ ದಾಳಿ ಮಾಡಿದ್ದು ಟೈಗರ್ ಶಾರ್ಕ್ ಎಂದು ಈಜಿಪ್ಟ್ನ ಪರಿಸರ ಸಚಿವಾಲಯ ತಿಳಿಸಿದೆ.

    ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಕರಾವಳಿಯ 74 ಕಿಮೀ ವ್ಯಾಪ್ತಿಯನ್ನು ನಿಷೇಧಿಸಿದ್ದು, ಭಾನುವಾರದವರೆಗೆ ಜಲಕ್ರೀಡೆ ಹಾಗೂ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಮೃತನ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಪಾರ್ಕ್‌ನಲ್ಲಿ ಆಡುತ್ತಿದ್ದ ಶಾಲಾ ಮಕ್ಕಳ ಮೇಲೆ ಮನಬಂದಂತೆ ಚಾಕುವಿನಿಂದ ಇರಿತ – 3 ಮಕ್ಕಳ ಸ್ಥಿತಿ ಗಂಭೀರ

    ಏನಿದು ಘಟನೆ?
    ಶಾರ್ಕ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನನ್ನು ಸುತ್ತುವರಿದ ಶಾರ್ಕ್ನಿಂದ ತಪ್ಪಿಸಿಕೊಳ್ಳಲು ಪ್ರವಾಸಿಗ ಭಯದಿಂದ ಸಮುದ್ರದಲ್ಲಿ ಈಜಲು ಪರದಾಡುತ್ತಿದ್ದಾನೆ. ಈ ವೇಳೆ ಶಾರ್ಕ್ ಎರಡ್ಮೂರು ಬಾರಿ ದಾಳಿ ಮಾಡಿ, ಅಂತಿಮವಾಗಿ ವ್ಯಕ್ತಿಯನ್ನ ನೀರಿನ ಒಳಕ್ಕೆ ಎಳೆದೊಯ್ದಿದೆ. ಲೈಫ್‌ಗಾರ್ಡ್ ಸಹಾಯಕ್ಕಾಗಿ ಕೂಗಿಕೊಂಡರೂ ಆತನನ್ನು ರಕ್ಷಿಸಲು ಸಮೀಪಕ್ಕೆ ರಕ್ಷಣಾ ಸಿಬ್ಬಂದಿ ಹೋಗುವಷ್ಟರಲ್ಲೇ ಶಾರ್ಕ್ ಆತನನ್ನು ಮತ್ತಷ್ಟು ನಿರೀನ ಆಳಕ್ಕೆ ಎಳೆದುಕೊಂಡು ಹೋಗಿತ್ತು.

    ರಷ್ಯಾದ ಪ್ರವಾಸಿಗರು ನೀರಿನಲ್ಲಿದ್ದಾಗ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ಯಾವುದೇ ಈಜು ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಷ್ಯಾ ರಾಯಭಾರ ಕಚೇರಿ (Embassy of Russia) ಎಚ್ಚರಿಸಿದೆ. ಇದನ್ನೂ ಓದಿ: ವರ್ಗೀಕೃತ ದಾಖಲೆಗಳ ಕೇಸ್ – ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

  • ರಾಮನಾಥಪುರ ಕೆರೆಯಲ್ಲಿ ಈಜಲು ಹೋದ ನಾಲ್ವರು ಯುವಕರು ನೀರುಪಾಲು

    ರಾಮನಾಥಪುರ ಕೆರೆಯಲ್ಲಿ ಈಜಲು ಹೋದ ನಾಲ್ವರು ಯುವಕರು ನೀರುಪಾಲು

    ಬೆಂಗಳೂರು: ನಂದಿಬೆಟ್ಟಕ್ಕೆ (Nandi Hills) ಬಂದು ಈಜಲು ಹೋಗಿದ್ದ ನಾಲ್ವರು ಯುವಕರು ನೀರುಪಾಲಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.

    ಭಾನುವಾರ ಬೆಳಗ್ಗೆ ನಂದಿಬೆಟ್ಟಕ್ಕೆ ಬಂದಿದ್ದ ನಾಲ್ವರು ಸ್ನೇಹಿತರು, ಬಿಸಿಲ ಬೇಗೆಗೆ ಕಂಗೆಟ್ಟು ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದ ಕೆರೆಗೆ ಈಜಲು (Swimming) ತೆರಳಿದ್ದರು. ಆದ್ರೆ ಶೇಖ್ ಥೈರ್ (18), ತೋಹಿದ್, ಶಾಹಿದ್, ಮತ್ತು ಫೈಜಲ್ ಖಾನ್ ನಾಲ್ವರು ಸ್ನೇಹಿತರೂ ನೀರುಪಾಲಾಗಿದ್ದಾರೆ. ಇದನ್ನೂ ಓದಿ: Manipur Violence: ಮಣಿಪುರದಲ್ಲಿ 40 ಮಂದಿ ದಂಗೆಕೋರರ ಹತ್ಯೆ – ಇಂಟರ್ನೆಟ್ ಸೇವೆ ಬಂದ್

    ಕೆರೆ ದಡದಲ್ಲಿ ಬಟ್ಟೆಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ಪತ್ತೆಗೆ ಶೋಧ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರ ಮೃತದೇಹ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮೋತಿ ಚೂರು ಲಾಡು ತಿನ್ನಲು ಮುಗಿಬಿದ್ದ ʻಕೈʼ ಕಾರ್ಯಕರ್ತರು

  • ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ ಸಾವು

    ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ ಸಾವು

    ಕಾರವಾರ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ (Student) ಸಾವನ್ನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ.

    ಧನ್ಯಾ ಗೌಡ ಕಂಚಾಳ ಮೃತಪಟ್ಟ ವಿದ್ಯಾರ್ಥಿನಿ. 8ನೇ ತರಗತಿ ಓದುತ್ತಿರುವ ಈಕೆ ಸಿದ್ದಾಪುರದ ಹರ್ಲಗುಂಡಿ ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

    ಧನ್ಯಾ ಹರ್ಲಗುಂಡಿ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದಳು. ಹೊಳೆ ಆಳವಿದ್ದರಿಂದ ಈಜು ಬಾರದೇ ಮುಳುಗಿದ್ದಾಳೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಶಿಕ್ಷಕ ಅರೆಸ್ಟ್

    ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು

    ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು

    ಚಿಕ್ಕಬಳ್ಳಾಪುರ: ಈಜಲು (Swimming) ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ (Drown) ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Srinivasa Sagara Dam) ಈ ಘಟನೆ ನಡೆದಿದ್ದು, ಇಮ್ರಾನ್ ಖಾನ್(20), ರಾಧಿಕಾ(19) ಹಾಗೂ ಪೂಜಾ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರ ಬಸ್‌ಗೆ ಬೆಂಕಿ ಇಟ್ಟ ನಕ್ಸಲರು – 15 ಮಂದಿ ಸಾವು  

    ವೀಕೆಂಡ್ ಎಂದು ಕರ್ನಾಟಕ ಫಾರ್ಮಸಿ ಕಾಲೇಜಿನ ಸುನೀತಾ, ರಾಧಿಕ, ಪೂಜಾ, ಇಮ್ರಾನ್ ಖಾನ್, ವಿಕಾಸ್, ಚನ್ನರಾಮ್ ಎಂಬ ಆರು ವಿದ್ಯಾರ್ಥಿಗಳು ಮೂರು ಬೈಕುಗಳಲ್ಲಿ ಶನಿವಾರ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಪಿಕ್‌ನಿಕ್ ಬಂದಿದ್ದರು. ಈ ವೇಳೆ ಸುನಿತಾಳನ್ನು ಹೊರತುಪಡಿಸಿ ಉಳಿದ 5 ಮಂದಿ ವಿದ್ಯಾರ್ಥಿಗಳು ಜಲಾಶಯ ಹಿಂಭಾಗದ ಹಿನ್ನೀರಿನಲ್ಲಿ ಈಜಾಡಲು ಹೋಗಿದ್ದು, ರಾಧಿಕಾ, ಪೂಜಾ ಮತ್ತು ಇಮ್ರಾನ್ ಖಾನ್ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಂಚ ಪಡೆಯುತ್ತಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಲೋಕಾಯುಕ್ತ ಬಲೆಗೆ

    ನೀರಿನ ಆಳದ ಅರಿವಿರದ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಕೂಗುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಚನ್ನರಾಮ್ ಹಾಗೂ ವಿಕಾಸ್ ಎಂಬ ವಿದ್ಯಾರ್ಥಿಗಳನ್ನು ರಕ್ಷಿಸಿದ್ದು, ಪೂಜಾಳನ್ನು ಸಹ ಮೇಲೆ ಎಳೆದುಕೊಂಡು ಬಂದು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೂ ಆಕೆ ಬದುಕುಳಿಯಲಿಲ್ಲ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ

    ಇನ್ನೂ ಪೂಜಾ ಹಾಗೂ ಇಮ್ರಾನ್ ಖಾನ್ ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ಆಗ್ನಿಶಾಮಕದಳ ಸಿಬ್ಬಂದಿ ಮೇಲೆ ತಂದಿದ್ದಾರೆ. ಓಟ್ಟಿನಲ್ಲಿ ವೀಕೆಂಡ್ ಔಟಿಂಗ್ ಪೋಟೋಶೂಟ್ ಎಂದು ಬಂದ ಆರು ಮಂದಿಯಲ್ಲಿ ಮೂವರು ಜಲಸಮಾಧಿಯಾಗಿದ್ರೆ, ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಸದ್ಯ ಮೃತರ ಸಂಬಂಧಿಕರು, ಪೋಷಕರು ವಿಷಯ ತಿಳಿದು ಬೆಂಗಳೂರಿನಿಂದ (Bengaluru) ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೃತದೇಹಗಳನ್ನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ

  • Shark Attackː ಸ್ವಿಮ್ಮಿಂಗ್‌ಗೆ ತೆರಳಿದ್ದ 16ರ ಬಾಲಕಿ ಶಾರ್ಕ್ ದಾಳಿಗೆ ಬಲಿ

    Shark Attackː ಸ್ವಿಮ್ಮಿಂಗ್‌ಗೆ ತೆರಳಿದ್ದ 16ರ ಬಾಲಕಿ ಶಾರ್ಕ್ ದಾಳಿಗೆ ಬಲಿ

    ಕ್ಯಾನ್ಬೆರಾ: ಇಲ್ಲಿನ ಪಶ್ಚಿಮ ಆಸ್ಟ್ರೇಲಿಯಾದ (Australia) ರಾಜಧಾನಿ ಪರ್ತ್‌ ನದಿಯಲ್ಲಿ ಸ್ವಿಮ್ಮಿಂಗ್ (Swimming) ಮಾಡಲು ತೆರಳಿದ್ದ 16 ವರ್ಷದ ಬಾಲಕಿ ಶಾರ್ಕ್ (ಮೀನು) (Fatal Shark) ದಾಳಿಯಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪರ್ತ್ನ ಫ್ರೀಮೆಂಟಲ್ ಬಂದರು ಪ್ರದೇಶದಲ್ಲಿ ಸ್ವಾನ್ ನದಿಯ ಸಂಚಾರ ಸೇತುವೆಯ ಬಳಿ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ನೀರಿನಿಂದ ಹೊರ ತೆಗೆಯಲಾಯಿತು. ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಳು.

    16ರ ಬಾಲಕಿ ನದಿಯಲ್ಲಿ ಜೆಟ್ ಸ್ಕೀ (ಜಲವಾಹನ) (Jet Ski) ಮೂಲಕ ಡಾಲ್ಫಿನ್‌ನೊಂದಿಗೆ ಈಜಲು ತೆರಳಿದ್ದಳು. ಈ ವೇಳೆ ಶಾರ್ಕ್ ದಾಳಿಗೆ ತುತ್ತಾಗಿದ್ದಾಳೆ. ಆದ್ರೆ ಶಾರ್ಕ್ ಯಾವ ರೀತಿ ದಾಳಿ ಮಾಡಿದೆ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: US Fighter Jet Attack: ಚೀನಾ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ

    2021ರಲ್ಲಿಯೂ ಪರ್ತ್‌ನ ಪೋರ್ಟ್ ಬೀಚ್‌ನಲ್ಲಿ 57 ವರ್ಷದ ವ್ಯಕ್ತಿಯನ್ನು ಶಾರ್ಕ್ ಕೊಂದಿತ್ತು. ಆ ನಂತರ ಸ್ವಾನ್ ನದಿಯಲ್ಲಿ ಈಜುತ್ತಿದ್ದಾಗ ಬುಲ್ ಶಾರ್ಕ್‌ನಿಂದ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇದನ್ನೂ ಓದಿ: ನಾಳೆ ಮತ್ತೆ ಕರ್ನಾಟಕಕ್ಕೆ ಮೋದಿ – ಒಂದೇ ದಿನ 6 ಕಾರ್ಯಕ್ರಮಗಳಿಗೆ ಚಾಲನೆ

    ಪಶ್ಚಿಮ ಆಸ್ಟ್ರೇಲಿಯಾದ ನದಿಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಜಾತಿಯ ಶಾರ್ಕ್ ಗಳಿವೆ. ಅನೇಕ ಕಿಲೋಮೀಟರ್‌ಗಳ ಆಳದಲ್ಲಿ ಬುಲ್ ಶಾರ್ಕ್ ಕಂಡುಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಸಾವು – 3 ದಿನವಾದರೂ ಸಿಕ್ಕಿಲ್ಲ ಶವ

    ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಸಾವು – 3 ದಿನವಾದರೂ ಸಿಕ್ಕಿಲ್ಲ ಶವ

    ಹುಬ್ಬಳ್ಳಿ: ಕೆರೆಯಲ್ಲಿ (Lake) ಈಜಲು ತೆರಳಿದ್ದ ಬಾಲಕ (Boy) ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ (Hubballi) ಉಣಕಲ್ ಕೆರೆಯಲ್ಲಿ (Unakal Lake) ನಡೆದಿದೆ. ಕಳೆದ 3 ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಹುಬ್ಬಳ್ಳಿ ಇಂದಿರಾ ನಗರದ ನಿವಾಸಿ ವೆಂಕಟೇಶ್ ವಾಲ್ಮೀಕಿ ಮೃತಪಟ್ಟ ಬಾಲಕ. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಾಡಲು (Swimming) ತೆರಳಿದ್ದ ವೆಂಕಟೇಶ್ ಆಳ ಇರುವಕಡೆ ನೀರಿಗೆ ಇಳಿದಿದ್ದ ಎನ್ನಲಾಗಿದೆ. ಆತ ನೀರಿನ ಸುಳಿಯಲ್ಲಿ ಸಿಲುಕಿ ಸಾವಿನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ 3 ದಿನವಾದರೂ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.

    ಬಾಲಕನ ಶವ ಹುಡುಕಾಟಕ್ಕೆ ಎನ್‌ಡಿಆರ್‌ಎಫ್ ತಂಡದ ಆಗಮಿಸಿದ್ದು, ಸಿಬ್ಬಂದಿ ಜೊತೆಗೆ ಸ್ಥಳೀಯ ನುರಿತ ಈಜುಗಾರರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ

    ಸುರಕ್ಷಿತ ಕ್ರಮಗಳು ಇಲ್ಲದ ಕಾರಣ ಉಣಕಲ್ ಕೆರೆಯಲ್ಲಿ ಪದೇ ಪದೇ ದುರ್ಘಟನೆಗಳು ನಡೆಯುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕೆರೆಯ ಸುತ್ತಲೂ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷ್ಯವಹಿಸುತ್ತಿರುವುದಕ್ಕೆ ಹು-ಧಾ ಪಾಲಿಕೆ ವಿರುದ್ಧ ಬಾಲಕನ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೈಂಟ್ ವ್ಹೀಲ್ ಆಡುವಾಗ ಬಾಲಕಿಯ ಕೂದಲು ಸಿಲುಕಿ ಕಿತ್ತು ಬಂತು ಚರ್ಮ – ಮೂವರ ವಿರುದ್ಧ ಕೇಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಿಯತಮನನ್ನು ಮದುವೆಯಾಗಲು ಬಾಂಗ್ಲಾದಿಂದ ಭಾರತಕ್ಕೆ ಈಜಿಕೊಂಡೇ ಬಂದ್ಳು!

    ಕೋಲ್ಕತ್ತಾ: ನಾವು ಈ ಹಿಂದೆ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹುಡುಕಲು ಸಪ್ತ ಸಾಗರವನ್ನೇ ದಾಟಿ ಬರುವಂತಹ ಕಥೆಗಳನ್ನು ಕೇಳಿರುತ್ತೇವೆ. ಆದರೆ ಅವು ಕಾಲ್ಪನಿಕ ಕಥೆಗಳೇ ಹೊರತು ನಿಜವಲ್ಲ. ಆದರೆ ಇಲ್ಲೊಬ್ಬ ಬಾಂಗ್ಲಾದೇಶದ ಯುವತಿ ಭಾರತದಲ್ಲಿರುವ ತನ್ನ ಗೆಳೆಯನನ್ನು ಮದುವೆಯಾಗಲು ಈಜಿಕೊಂಡೇ ಬಂದಿದ್ದಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೇ 1 ಗಂಟೆ ನದಿಯಲ್ಲಿ ಈಜುವ ಮೂಲಕ ಭಾರತ ಪ್ರವೆಶಿಸಿ ತನ್ನ ಪ್ರಿಯತಮನನ್ನು ಕೊನೆಗೂ ಭೇಟಿಯಾಗಿದ್ದಾಳೆ.

    ಹೌದು, ಬಾಂಗ್ಲಾದೇಶದ ಯುವತಿ ಕೃಷ್ಣ ಮಂಡಲ್ ಭಾರತದ ಯುವಕ ಅಭಿಕ್ ಮಂಡಲ್‌ನನ್ನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿ, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕೃಷ್ಣ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಆಕೆ ತನ್ನ ಗೆಳೆಯನನ್ನು ಭೇಟಿಯಾಗಲು ಅಕ್ರಮವಾಗಿ ಭಾರತ ಪ್ರವೇಶಿಸಿಲು ನಿರ್ಧರಿಸಿದಳು. ಇದನ್ನೂ ಓದಿ: ಪ್ರೀತಿಸಿ ಮೋಸ ಮಾಡ್ತಾರೆ, ಕೈಗೊಂದು ಮಗು ಕೊಟ್ಟು ಓಡಿ ಹೋಗ್ತಾರೆ – ಲವ್‌ಜಿಹಾದ್ ವಿರುದ್ಧ ಶೋಭಾ ಗುಡುಗು

    ಕೃಷ್ಣ ಮೊದಲು ರಾಯಲ್ ಬೆಂಗಾಲ್ ಟೈಗರ್ಸ್ಗೆ ಹೆಸರುವಾಸಿಯಾಗಿರುವ ಸುಂದರಬನ್ಸ್ ಪ್ರವೆಶಿಸಿದ್ದಳು. ಬಳಿಕ ತನ್ನ ಗೆಳೆಯನನ್ನು ತಲುಪಲು ನದಿಯಲ್ಲಿ ಸುಮಾರು 1 ಗಂಟೆ ಈಜಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ಮುಂದೇನಾಯ್ತು?
    ಕೃಷ್ಣ 3 ದಿನಗಳ ಹಿಂದೆ ತನ್ನ ಗೆಳೆಯ ಅಭಿಕ್‌ನನ್ನು ಕೋಲ್ಕತ್ತಾದ ಕಾಳಿಘಾಟ್ ದೇವಾಲಯದಲ್ಲಿ ವಿವಾಹವಾಗಿದ್ದಾಳೆ. ಆದರೆ ಆಕೆ ಅಕ್ರಮವಾಗಿ ಭಾರತ ಪ್ರವೇಶಿಸಿರುವುದರಿಂದ ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಕೃಷ್ಣಳನ್ನು ಬಾಂಗ್ಲಾದೇಶದ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

  • ಕಾಲು ಜಾರಿ ಉಕ್ಕಿ ಹರಿಯುತ್ತಿರೋ ನದಿಗೆ ಬಿದ್ರೂ ಈಜಿ ದಡ ಸೇರಿದ ಗಟ್ಟಿಗ!

    ಕಾಲು ಜಾರಿ ಉಕ್ಕಿ ಹರಿಯುತ್ತಿರೋ ನದಿಗೆ ಬಿದ್ರೂ ಈಜಿ ದಡ ಸೇರಿದ ಗಟ್ಟಿಗ!

    ಬಳ್ಳಾರಿ: ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಭಾರೀ ಅಪಾಯದಿಂದ ಪಾರಾದ ಘಟನೆ ನಗರದ ಸಿರಗುಪ್ಪಾ ತಾಲೂಕಿನ ರಾರಾವಿ ಬಳಿ ನಡೆದಿದೆ.

    ಸಿರಗುಪ್ಪಾ ನಿವಾಸಿ ಮಲ್ಲಿಕಾರ್ಜುನ ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿ. ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನದಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾಲುವೆ ಮೇಲೆ ಹರಿಯುತ್ತಿರುವ ನದಿಯನ್ನು ದಾಟಲು ಹೋಗಿ ಮಲ್ಲಿಕಾರ್ಜುನ ಕಾಲು ಜಾರಿ ರಾರಾವಿ ಬಳಿಯ ವೇದಾವತಿ ನದಿಯಲ್ಲಿ ಬಿದ್ದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 124 ಮಂದಿಗೆ ಕೊರೊನಾ -159 ಮಂದಿ ಡಿಸ್ಚಾರ್ಜ್

    ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನದಿಯನ್ನು ದಾಟಲು ಮುಂದಾಗಿದ್ದರು. ಅದೇ ಸಮಯದಲ್ಲಿ ಸೇತುವೆ ಮೇಲೆ ಭಾರೀ ವಾಹನವೊಂದು ಸಾಗಿದೆ. ಹೀಗಾಗಿ ನದಿಯ ರಭಸಕ್ಕೆ ಸಿಲುಕಿ ಕಾಲು ಜಾರಿ ನದಿಗೆ ಬಿದಿದ್ದಾರೆ. ಆದರೂ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಧೈರ್ಯದಿಂದ ಈಜಿ ದಡ ಸೇರಿದ್ದಾರೆ. ಇದೇ ವೇಳೆಯಲ್ಲಿ ಸ್ಥಳೀಯರು ಸಹಾಯ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸನ್ನಿ ಲಿಯೋನ್: ಮಂಡ್ಯ ಫ್ಯಾನ್ಸ್ ಪ್ರೀತಿಗೆ ಧನ್ಯವಾದ ತಿಳಿಸಿದ ಸನ್ನಿ

  • ಪುತ್ರನಿಗೆ ಈಜು ಕಲಿಸಲು ಹೋದ ತಂದೆ – ಇಬ್ಬರು ನೀರು ಪಾಲು

    ಪುತ್ರನಿಗೆ ಈಜು ಕಲಿಸಲು ಹೋದ ತಂದೆ – ಇಬ್ಬರು ನೀರು ಪಾಲು

    ಬೀದರ್: ಬಾವಿಯಲ್ಲಿ ಪುತ್ರನಿಗೆ ಈಜು ಕಲಿಸಲು ಹೋದ ತಂದೆ ಹಾಗೂ ಮಗ ನೀರು ಪಾಲಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತಾಲೂಕಿನ ಬಗದೂರಿ ಗ್ರಾಮದಲ್ಲಿ ನಡೆದಿದೆ.

    42 ವರ್ಷದ ತಂದೆ ಸೂರ್ಯಕಾಂತ್ ಚಂದ್ರಾಶಾ ಹಾಗೂ 16 ವರ್ಷದ ಮಗ ಅಭಿಷೇಕ್ ದುರಂತ ಸಾವನ್ನಪ್ಪಿದ್ದಾರೆ. ಬಾವಿಯಲ್ಲಿ ಅಭಿಷೇಕ್ ನಿಗೆ ಈಜು ಕಲಿಸಲು ಹೋಗಿದ್ದರು. ಈ ವೇಳೆ ಸೂರ್ಯಕಾಂತ್ ಮೊದಲು ಮಗ ಅಭಿಷೇಕ್‍ನನ್ನು ನೀರಿಗೆ ಇಳಿಸಿದ್ದು, ಆತ ಬಾವಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಈ ಹಿನ್ನೆಲೆ ಸೂರ್ಯಕಾಂತ್, ಅಭಿಷೇಕ್‍ನನ್ನು ರಕ್ಷಣೆ ಮಾಡಲು ಮುಂದಾಗಿದ್ದಾನೆ. ಇದನ್ನೂ ಓದಿ: ಪಿಎಂ ಮನೆ ಮುಂದೆ ಎಲ್ಲ ಧರ್ಮದ ಸಾಲುಗಳನ್ನು ಪಠಿಸಲು ಅವಕಾಶ ಕೊಡಿ: NCP ನಾಯಕಿ 

    ಅಭಿಷೇಕ್ ರಕ್ಷಣೆಗೆ ಮುಂದಾದಾಗ ಸೂರ್ಯಕಾಂತ್ ಸಹ ಕೆಸರಿನಲ್ಲಿ ಸಿಲಕು ಮೇಲೆ ಬರಲಾಗದೆ ಇಬ್ಬರು ದುರಂತವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುಡಬಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    ಚೆನ್ನೈ: ಕೇವಲ 13 ಗಂಟೆಗಳಲ್ಲಿ ಶ್ರೀಲಂಕಾದ ತಲೈಮನ್ನಾರ್‍ನಿಂದ ತಮಿಳುನಾಡಿನ ಧನುಷ್ಕೋಡಿಯ ಅರಿಚಲ್ಮುನೈವರೆಗೆ 28.5 ಕಿ.ಮೀ ಸ್ವಿಮ್ಮಿಂಗ್ ಮಾಡಿದ ಮುಂಬೈ ಮೂಲದ 13 ವರ್ಷದ ಬಾಲಕಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಜಿಯಾ ರೈ ನೌಕಾಪಡೆಯ ಅಧಿಕಾರಿಯೊಬ್ಬರ ಮಗಳಾಗಿದ್ದು, ಶ್ರೀಲಂಕಾ ಮತ್ತು ಭಾರತೀಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆದು ಮಾರ್ಚ್ 20ರ ಭಾನುವಾರ ಬೆಳಗ್ಗೆ 4.22ಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ನಂತರ ಸಂಜೆ 5.32ರ ಹೊತ್ತಿಗೆ ಅರಿಚಲ್ಮುನೈ ತಲುಪಿದ್ದಾರೆ. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

    ಈ ವೇಳೆ ಹಾಜರಿದ್ದ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೈಲೇಂದ್ರ ಬಾಬು ಅವರು, ಈ ಸಮುದ್ರದಲ್ಲಿ ಹಾವುಗಳು, ಶಾರ್ಕ್‍ಗಳು ಮತ್ತು ಜೆಲ್ಲಿ ಮೀನುಗಳು ಹೆಚ್ಚಾಗಿದೆ. ಅಲ್ಲದೆ ಈ ನೀರಿನ ಪ್ರವಾಹವನ್ನು ನೀವು ಊಹಿಸಲು ಸಾಧ್ಯವಿಲ್ಲ. ಆದರೆ ಜಿಯಾ ರೈ ಈ ನೀರಿನಲ್ಲಿ ಸ್ವಿಮ್ಮಿಂಗ್ ಮಾಡಿದ್ದಾಳೆ ಎಂದರೆ ಖಂಡಿತವಾಗಿಯೂ ಪ್ರಶಂಶಿಸಬೇಕು ಎಂದು ಅವರ ತಂದೆ, ತಾಯಿಯ ಬಳಿ ಶ್ಲಾಘಿಸಿದ್ದಾರೆ.

    ಜಿಯಾ ರೈ ಸ್ವಿಮ್ಮಿಂಗ್ ಮಾಡುವ ವೇಳೆ ಶ್ರೀಲಂಕಾದ ನೌಕಾಪಡೆಯು ಭಾರತೀಯ ಕರಾವಳಿ ಭದ್ರತಾಪಡೆಯು ಸ್ವಾಧೀನಪಡಿಸಿಕೊಳ್ಳುವ ಅಂತರಾಷ್ಟ್ರೀಯ ಕಡಲ ಗಡಿಯವರೆಗೆ ರಕ್ಷಣೆ ನೀಡಿದೆ. ಇದನ್ನೂ ಓದಿ: 2.8 ಕೋಟಿ ಸಾಗಾಟ -ಸಿಕ್ಕಿ ಬಿದ್ದ ಮಾಜಿ ಸಂಸದನ ಪತ್ನಿ