Tag: Swimming

  • ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

    ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

    ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.

    ಅಚೇಪಲ್ಲಿ ಗ್ರಾಮದ ವಿಷ್ಣು (14), ನಿಹಾಲ್ ರಾಜ್ (12) ಮತ್ತು ಹರ್ಷವರ್ಧನ್ (16) ಮೃತ ದುರ್ದೈವಿಗಳು. ಇದನ್ನೂ ಓದಿ: ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು

    ದಸರಾ ರಜೆ ಹಿನ್ನೆಲೆ ಶಾಲೆಗಳಿಗೆ ರಜೆ ಇದ್ದುದ್ದರಿಂದ ಬಾಲಕರು ಕೆರೆಯಲ್ಲಿ ಈಜಾಡಲು ತೆರಳಿದ್ದರು. ಮೊದಲಿಗೆ ವಿಷ್ಣು ಹಾಗೂ ನಿಹಾಲ್ ರಾಜ್ ಈಜಾಡಲು ತೆರಳಿದ್ದು, ಅವರು ನೀರಿನಲ್ಲಿ ಮುಳುಗುತ್ತಿದ್ದುದ್ದನ್ನು ಕಂಡ ಹರ್ಷವರ್ಧನ್ ರಕ್ಷಣೆಗೆ ಮುಂದಾಗಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮೂವರ ಮೃತದೇಹಗಳನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸ್ವಾಂತಾನ ಹೇಳಿ, ವೈಯುಕ್ತಕವಾಗಿ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

  • Bidar | ಈಜುಕೊಳದಲ್ಲಿ ಸ್ವಿಮ್ಮಿಂಗ್ ವೇಳೆ ಅವಘಡ – ಯುವಕ ದುರ್ಮರಣ

    Bidar | ಈಜುಕೊಳದಲ್ಲಿ ಸ್ವಿಮ್ಮಿಂಗ್ ವೇಳೆ ಅವಘಡ – ಯುವಕ ದುರ್ಮರಣ

    ಬೀದರ್: ಈಜುಕೊಳದಲ್ಲಿ (Swimming Pool) ಸ್ವಿಮ್ಮಿಂಗ್ ವೇಳೆ ಅವಘಡ ಸಂಭವಿಸಿ ಯುವಕ ಸಾವನ್ನಪ್ಪಿದ ಘಟನೆ ಬೀದರ್‌ನ (Bidar) ನರಸಿಂಹ ಝರಣಿ ದೇವಸ್ಥಾನದ ಹತ್ತಿರವಿರುವ ಖಾಸಗಿ ಈಜುಕೊಳದಲ್ಲಿ ನಡೆದಿದೆ.

    ಬೀದರ್‌ನ ಫೈಜ್‌ದರ್ಗಾ ಕಾಲನಿಯ ನಿವಾಸಿ ಸೈಯದ್ ಅಫಾನ್ (19) ಮೃತ ಯುವಕ. ಸ್ನೇಹಿತರೊಂದಿಗೆ ಈಜುಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿ ಯುವಕ ಪೂಲ್‌ನಲ್ಲೇ ಮುಳುಗಿ ಮೃತಪಟ್ಟಿದ್ದಾನೆ. ಈಜು ಕೊಳದಲ್ಲಿ ಪಲ್ಟಿ ಹೊಡೆಯುವ ವೇಳೆ ತಲೆಗೆ ಗಂಭೀರ ಪೆಟ್ಟಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮೇಲಾಧಿಕಾರಿಗಳ ಕಿರುಕುಳ – ವಿಷ ಸೇವಿಸಿ KSRTC ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನ

    ಘಟನೆ ಬಳಿಕ ಈಜುಕೊಳ ಮಾಲೀಕರ ವಿರುದ್ಧ ಮೃತ ಯುವಕನ ಕುಟುಂಬಸ್ಥರು ನಿರ್ಲಕ್ಷ್ಯ ಆರೋಪ ಹೊರಿಸಿದ್ದಾರೆ. ನಿಷ್ಕಾಳಜಿ ವಹಿಸಿದ ಈಜುಕೊಳದ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈಜುಕೊಳದ ಮಾಲೀಕ ಡಾ.ವೈಜಿನಾಥ ಮದನಾ ಎಂಬವರ ವಿರುದ್ಧ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈಜುಕೊಳದಲ್ಲಿ ರಕ್ಷಣಾ ಸಲಕರಣೆಗಳು, ತರಬೇತುದಾರರು ಇಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ನೋ ಎಂಟ್ರಿ – ಬೀದರ್ ವಿದ್ಯಾರ್ಥಿಗೆ ನ್ಯಾಯ ಕೊಡಿಸಲು ಕೆಇಎ ಸಿದ್ಧತೆ

  • ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು

    ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು

    ಮೈಸೂರು: ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಹುಡುಗರು ನೀರುಪಾಲಾಗಿರುವ ಘಟನೆ ಮೈಸೂರು (Mysuru) ಜಿಲ್ಲೆ ಟಿ.ನರಸೀಪುರ ( T.Narasipura) ತಾಲೂಕಿನ ಮೇದಿನಿ ಗ್ರಾಮದಲ್ಲಿ ನಡೆದಿದೆ.

    ಕೊಳ್ಳೇಗಾಲ ಪಟ್ಟಣದ ನಿವಾಸಿಗಳಾದ ಭರತ್ (17), ಲಿಖಿತ್ (18) ಮೃತರು. ಇದನ್ನೂ ಓದಿ: ತ್ರಿಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅರೆಸ್ಟ್ – ಹೆಣ್ಣಿನ ವಿಚಾರಕ್ಕೆ ಬಿತ್ತು ಮೂರು ಹೆಣ

    ಮೇದಿನಿ ಗ್ರಾಮದ ರಾಮಕಟ್ಟೆ ಬಳಿ ಈಜಲು ಐವರು ತೆರಳಿದ್ದರು. ಈ ವೇಳೆ ಭರತ್ ಹಾಗೂ ಲಿಖಿತ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಉಳಿದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: Tumakuru | ಬಸ್, ಬೈಕ್ ನಡುವೆ ಅಪಘಾತ – ಯುಗಾದಿಗೆ ಊರಿಗೆ ತೆರಳುತ್ತಿದ್ದ ಇಬ್ಬರು ಸಾವು

    ನೀರಿನಲ್ಲಿ ಕೊಚ್ಚಿ ಹೋಗಿರುವ ಭರತ್ ಹಾಗೂ ಲಿಖಿತ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ (Talakadu Police Station) ಪ್ರಕರಣ ದಾಖಲಾಗಿದೆ.

  • ಬೀದರ್ | ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು

    ಬೀದರ್ | ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು

    – ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ಕಾಪಾಡಲು ಹೋಗಿ ಇಬ್ಬರೂ ದುರಂತ ಸಾವು

    ಬೀದರ್: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾಗಿರುವ ದುರಂತ ಘಟನೆ ಬೀದರ್‌ನಲ್ಲಿ (Bidar) ಸಂಭವಿಸಿದೆ.

    ಪ್ರಕಾಶ್(22), ಶಿವಾಜೀ (21) ಮತ್ತು ಆಕಾಶ್ ಕಂಟೆಪ್ಪ ಗುಂಗೆ (23) ಮೃತ ದುರ್ದೈವಿಗಳು. ಇದನ್ನೂ ಓದಿ: ಮಂಗಳೂರು| ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ – 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

    ಪ್ರಕಾಶ್ ಹಾಗೂ ಶಿವಾಜೀ ಎಂಬ ಯುವಕರಿಬ್ಬರು ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದ ಐತಿಹಾಸಿಕ ಬಾವಿಯಲ್ಲಿ ಈಜಲು ತೆರಳಿದ್ದರು. ಆಳದ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸ್ನೇಹಿತನನ್ನು ಕಾಪಾಡಲು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ. ಇದನ್ನೂ ಓದಿ: ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಆಸ್ಪತ್ರೆಗೆ ದಾಖಲು

    ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಹಾಗೂ ಪೊಲೀಸರು, ಇಬ್ಬರು ಯುವಕರ ಮೃತದೇಹಗಳನ್ನು ಹೊರ ತೆಗೆದರು. ಬೆಮ್ಮಳಕೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜಿಲ್ಲೆಯ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಕೆರೆಯಲ್ಲಿ ಆಕಾಶ್ ಕಂಟೆಪ್ಪ ಗುಂಗೆ ಎಂಬ ಯುವಕ ನೀರುಪಾಲಾಗಿದ್ದಾನೆ. ಸ್ನೇಹಿತರ ಜೊತೆ ಈಜಲು ಹೋಗಿದ್ದಾಗ ಈಜು ಬಾರದೇ ಆಕಾಶ್ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬಿಡದಿಯ ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಪತ್ತೆ

    ಕೆರೆಯಲ್ಲಿ ಶೋಧ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರ ತೆಗೆದರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಯಲ್ಲಿ ಈಜಲು ತೆರಳಿದ್ದ ಯುವಕರು ನೀರುಪಾಲು

    ಕೆರೆಯಲ್ಲಿ ಈಜಲು ತೆರಳಿದ್ದ ಯುವಕರು ನೀರುಪಾಲು

    ಹಾಸನ: ಕೆರೆಯಲ್ಲಿ ಈಜಲು (Swiming) ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.

    ಯಶ್ವಂತ್‌ ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ಮೃತ ಯುವಕರು.  ಮೃತ ಗಣೇಶ್ ಮತ್ತು ರೋಹಿತ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸ ಮುಗಿಸಿ ಇಬ್ಬರು ಸಂಜೆ ಕೆರೆಗೆ ಈಜಲು ತೆರಳಿದ್ದರು. ಇಬ್ಬರಿಗೂ ಈಜು ಗೊತ್ತಿದ್ದರಿಂದ ಮೊದಲು ರೋಹಿತ್ ಕೆರೆಗೆ ಧುಮುಕಿದ್ದಾನೆ. ಈ ವೇಳೆ ಕೆರೆಯಲ್ಲಿ ಬೆಳೆದಿದ್ದ ಬಳ್ಳಿಗಳು ರೋಹಿತ್ ಕಾಲಿಗೆ ಸುತ್ತಿಕೊಂಡಿದೆ.

    ರೋಹಿತ್ ಕೆರೆಯಿಂದ ಮೇಲೆ ಬರಲಾರದೇ ಕಾಪಾಡಿ ಎಂದು ಕಿರುಚಿದ್ದಾನೆ. ಈ ವೇಳೆ ಗೆಳೆಯನನ್ನು ರಕ್ಷಿಸಲು ಯಶ್ವಂತ್‌ ಸಿಂಗ್ ಕೆರೆಗೆ ಜಿಗಿದ್ದಾನೆ. ಬಳ್ಳಿ, ಗಿಡಗಂಟಿಗಳ ನಡುವೆ ಸಿಲುಕಿಕೊಂಡ ಯಶ್ವಂತ್‌ ಸಿಂಗ್ ಮತ್ತು ರೋಹಿತ್ ಕೆರೆಯಿಂದ ಮೇಲೆ ಬರಲಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್‌ ಆಫ್‌!

    ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಡರಾತ್ರಿ ಶೋಧಕಾರ್ಯ ನಡೆಸಿ  ಯುವಕರಿಬ್ಬರ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಡ್ಯಾಂನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು

    ಡ್ಯಾಂನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು

    ಉಡುಪಿ: ಡ್ಯಾಂಗೆ ಈಜಲು (Swimming) ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಕುಂದಾಪುರ (Kundapura) ತಾಲೂಕಿನ ಬೆಳ್ವೆಯಲ್ಲಿ ನಡೆದಿದೆ.

    ಮೃತ ಬಾಲಕರನ್ನು ಶ್ರೀಶ (13) ಹಾಗೂ ಜಯಂತ್ (19) ಎಂದು ಗುರುತಿಸಲಾಗಿದೆ. ನಾಲ್ವರು ಬಾಲಕರು ಡ್ಯಾಂಗೆ ಈಜಲು ಹೋಗಿದ್ದರು. ಈ ವೇಳೆ ಶ್ರೀಶ ಮತ್ತು ಜಯಂತ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಚೆಕ್ ಡ್ಯಾಂನಲ್ಲಿ ಈಜಾಡಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

    ಚೆಕ್ ಡ್ಯಾಂನಲ್ಲಿ ಈಜಾಡಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

    ದಾವಣಗೆರೆ: ಚೆಕ್ ಡ್ಯಾಂನಲ್ಲಿ ಈಜಾಡಲು (Swimming) ಹೋಗಿದ್ದ ಬಾಲಕ ನೀರು ಪಾಲಾದ ಘಟನೆ ಜಗಳೂರು (Jagaluru) ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನು ಸೂರಗೊಂಡನಹಳ್ಳಿ ಗ್ರಾಮದ ಅಜಯ್ (15) ಎಂದು ಗುರುತಿಸಲಾಗಿದೆ. ಆತ ಸಿದ್ದಯ್ಯನಕೋಟೆಯ ಸಂಬಂಧಿಕರ ಮನೆಗೆ ಬಂದಿದ್ದ. ಈ ವೇಳೆ ಚಕ್ ಡ್ಯಾಂನಲ್ಲಿ ಈಜಾಡಲು ತೆರಳಿದ್ದಾಗ ಈ ಅವಘಡ ನಡೆದಿದೆ.

    ಬಾಲಕನ ಮೃತದೇಹವನ್ನು ಸ್ಥಳೀಯರು ನೀರಿನಿಂದ ಹೊರ ತೆಗೆದಿದ್ದಾರೆ. ಈ ಸಂಬಂಧ ಬೀಳಚೋಡು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀರಿನ ಹೊಂಡದಲ್ಲಿ ಈಜಲು ತೆರಳಿದ್ದ ಯುವತಿ ಸೇರಿ ಮೂವರ ದುರ್ಮರಣ

    ನೀರಿನ ಹೊಂಡದಲ್ಲಿ ಈಜಲು ತೆರಳಿದ್ದ ಯುವತಿ ಸೇರಿ ಮೂವರ ದುರ್ಮರಣ

    ಚಿಕ್ಕಬಳ್ಳಾಪುರ: ನೀರಿನ ಹೊಂಡದಲ್ಲಿ ಈಜಲು (Swimming) ತೆರಳಿದ್ದ ಮೂವರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಕಂಬತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ರಂಜಿತ್ (27) ಅಭಿಲಾಷ್ (21) ಹಾಗೂ ರಮ್ಯ (24) ಎಂದು ಗುರುತಿಸಲಾಗಿದೆ. ಮೂವರು ಬೆಂಗಳೂರಿನಲ್ಲಿ (Bengaluru) ವ್ಯಾಸಂಗ ಮಾಡುತ್ತಿದ್ದರು. ದೀಪಾವಳಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಬಂದಿದ್ದರು. ಈ ವೇಳೆ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

    ಸ್ಥಳೀಯರು, ಆಗ್ನಿಶಾಮಕ ದಳ ಸಿಬ್ಬಂದಿ ನೆರವಿನೊಂದಿಗೆ ಮೃತದೇಹಗಳನ್ನು ಹೊರ ತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೇರೇಸಂದ್ರ ಪೊಲೀಸರು (Police) ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

  • ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವು

    ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವು

    ಚಿಕ್ಕಬಳ್ಳಾಪುರ: ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿರಂಗನ ಕಲ್ಯಾಣಿಯಲ್ಲಿ ನಡೆದಿದೆ.

    ಗುಡಿಬಂಟೆ ಪಟ್ಟಣದ ಐಟಿಐ ಕಾಲೇಜಿನಲ್ಲಿ (Chikkaballapur ITI College) ವ್ಯಾಸಂಗ ಮಾಡುತ್ತಿದ್ದು 17 ವರ್ಷದ ವೆಂಕಟಾಚಲಪತಿ ಮೃತ ವಿದ್ಯಾರ್ಥಿಯಾಗಿದ್ದಾನೆ. ಅಂದಹಾಗೆ ಮೂಲತಃ ಗೌರಿಬಿದನೂರು ತಾಲೂಕಿನ ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದವನಾಗಿದ್ದ ಮೃತ ವೆಂಕಟಾಚಲಪತಿ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ವಸತಿನಿಲಯದ (Hostel Student) ವಿದ್ಯಾರ್ಥಿಯಾಗಿದ್ದ.

    ಕಾಲೇಜಿನಿಂದ ಹಾಸ್ಟೆಲ್‌ಗೆ ಬಂದಿದ್ದ ವೆಂಕಟಾಚಲಪತಿ ಊಟ ಮುಗಿಸಿ ಹಾಸ್ಟೆಲ್ ಸಮೀಪವೇ ಇರುವ ಕಲ್ಯಾಣಿಯಲ್ಲಿ ಈಜಲು ತೆರಳಿದ್ದು ಈ ವೇಳೆ ಕಲ್ಯಾಣಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ತಿಳಿದು ಜಿಲ್ಲಾಧಿಕಾರಿ ಪಿ.ಎನ್ ರವಿಂದ್ರ ಸಮೇತ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಕೊಡಗಿನಲ್ಲಿ ವೈರಲ್ ಫೀವರ್, ಒಂದೇ ದಿನ 200 ರಿಂದ 300 ಜನರಿಗೆ ಚಿಕಿತ್ಸೆ

    ಇಡೀ ರಾತ್ರಿ ಹುಡುಕಾಟ ನಡೆಸಿದ್ದು ಮುಂಜಾನೆ ಮೃತ ಯುವಕನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 10ನೇ ತರಗತಿ ಗಣಿತ, ವಿಜ್ಞಾನ ವಿಷಯಗಳ ಪಾಸಿಂಗ್ ಮಾರ್ಕ್ಸ್ 20ಕ್ಕೆ ಇಳಿಸಿದ ಮಹಾರಾಷ್ಟ್ರ

     

  • Bellary | ಈಜಲು ತೆರಳಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    Bellary | ಈಜಲು ತೆರಳಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಬಳ್ಳಾರಿ: ಕೆರೆಯಲ್ಲಿ ಈಜಲು (Swimming) ತೆರಳಿದ್ದ ಮೂವರು ಮಕ್ಕಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಿಜಯನಗರ (Vijayanagar) ಜಿಲ್ಲೆಯ ಕೂಡ್ಲಿಗಿಯ ಕುಮತಿ ಗ್ರಾಮದಲ್ಲಿ ನಡೆದಿದೆ.

    ಮೃತ ಮಕ್ಕಳನ್ನು ಸಾಗರ್ (14), ಗುರು (14) ಮತ್ತು ವಿನಯ್ (11) ಎಂದು ಗುರುತಿಸಲಾಗಿದೆ. ಎಲ್ಲಾ ಮಕ್ಕಳು ಕುಮತಿ ಗ್ರಾಮದ ಒಂದೇ ಏರಿಯಾದವರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ – 6 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್‌

    ಶಾಲೆಗೆ ದಸರಾ ರಜೆ ಇದ್ದ ಹಿನ್ನೆಲೆ ಮಕ್ಕಳು ಈಜಲು ಕೆರೆಗೆ ಹೋಗಿದ್ದರು. ಮೃತ ಮೂವರಿಗೂ ಸರಿಯಾಗಿ ಈಜು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸ್ಥಳಕ್ಕೆ ಕಾನಾಹೊಸಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ಇಂದೂ ಸಿಗ್ಲಿಲ್ಲ ಜಾಮೀನು – ವಿಚಾರಣೆ ನಾಳೆಗೆ ಮುಂದೂಡಿಕೆ