Tag: Swim Suit

  • ಸ್ವಿಮ್ ಸೂಟ್ ತೊಟ್ಟು ಬಿಸಿ ನೀರಿನ ಬಗ್ಗೆ ಪಾಠ ಮಾಡಿದ ಶಿಲ್ಪಾ ಶೆಟ್ಟಿ

    ಸ್ವಿಮ್ ಸೂಟ್ ತೊಟ್ಟು ಬಿಸಿ ನೀರಿನ ಬಗ್ಗೆ ಪಾಠ ಮಾಡಿದ ಶಿಲ್ಪಾ ಶೆಟ್ಟಿ

    ಬಾಲಿವುಡ್ (Bollywood) ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಸದ್ಯ ಇಟಲಿ ಪ್ರವಾಸದಲ್ಲಿದ್ದಾರೆ. ಕನ್ನಡದ ಕೆಡಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಸೀದಾ ಇಟಲಿ ಫ್ಲೈಟ್ ಹತ್ತಿರುವ ಅವರು, ಇಟಲಿಯಲ್ಲಿ ಸ್ವಿಮ್ ಸೂಟ್ (Swim Suit) ತೊಟ್ಟು ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ತಾವು ಸ್ವಿಮ್ ಸೂಟ್ ತೊಟ್ಟು ನಿಂತಿರುವ ನೆಲದ ಮಹತ್ವವನ್ನು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಮೊನೊಕಿನಿ ತೊಟ್ಟು ಇಟಲಿ (Italy) ನೆಲದ ಮಹತ್ವವನ್ನು ಬರೆದಿರುವ ಶಿಲ್ಪಾ ಶೆಟ್ಟಿ, ‘ಇಟಲಿ ನೆಲವು ದೈವಿಕ ಸ್ಥಳವಾಗಿದೆ. 3000ದಷ್ಟು ಹಳೆಯದಾದ ಪವಿತ್ರ ನೀರು, ಭೂಮಿಯ ಆಳದಿಂದ ಚಿಮ್ಮುವ ಬಿಸಿ ನೀರಿನ ಬುಗ್ಗೆಗಳು. ಚಿಮ್ಮಿ ಬರುವ ನೀರಿನಲ್ಲಿವೆ ಆರೋಗ್ಯದ ಪ್ರಯೋಜನಗಳು. ಈ ನೆಲವನ್ನು ಸ್ಪರ್ಶಿಸುವವರೇ ಧನ್ಯ’ ಎನ್ನುವಂತೆ ಆ ನೆಲದ ವರ್ಣನೆಯನ್ನು ಮಾಡಿದ್ದಾರೆ. ಇದರ ಜೊತೆ ರಜೆಯ ಮೂಡ್ ನಲ್ಲೂ ಅವರು ಇದ್ದಾರೆ.

    ಸದ್ಯ ಇಟಲಿ ಪ್ರವಾಸದಲ್ಲಿರುವ ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೇ ಅವರು ಕರ್ನಾಟಕಕ್ಕೂ ಬಂದಿದ್ದರು. ತುಳುನಾಡಿನ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari Temple) ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಶಿಲ್ಪಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು, ಮುಂಬೈನಲ್ಲಿ ಸೆಟಲ್ ಆಗಿದ್ದರು ಕೂಡ ಇಂದಿಗೂ ದೈವ ಕೋಲ, ಇನ್ನಿತರ ಪೂಜೆ ಕಾರ್ಯಕ್ರಮಗಳಿಗೆ ಆಗಾಗ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡುತ್ತಾರೆ. ಅದರಂತೆಯೇ ಇದೀಗ ಶಿಲ್ಪಾ ಶೆಟ್ಟಿ ಕುಟುಂಬ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿತ್ತು. ಶಿಲ್ಪಾ ಜೊತೆ ಪತಿ ರಾಜ್‌ ಕುಂದ್ರಾ, ಶಮಿತಾ ಶೆಟ್ಟಿ, ಸುನಂದಾ ಶೆಟ್ಟಿ ಭಾಗಿಯಾಗಿದ್ದರು.  ದೇವಳದ ವತಿಯಿಂದ ಶಿಲ್ಪಾ ಶೆಟ್ಟಿಗೆ ದೇವರ ವಸ್ತ್ರ ಪ್ರಸಾದ ನೀಡಿ ಅಶೀರ್ವಾದ ಮಾಡಲಾಯಿತು

     

    ಕನ್ನಡದ ‘ಕೆಡಿ’ ಸಿನಿಮಾ ಮೂಲಕ 17 ವರ್ಷಗಳ ನಂತರ ಮತ್ತೆ ನಟಿ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಡೈರೆಕ್ಟರ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.

  • ಸ್ವಿಮ್ ಸ್ಯೂಟ್ ನಲ್ಲಿ ಕಾಣಿಸಿಕೊಂಡು ‘ಬಿಗ್ ಬಾಸ್’ ಮನೆ ಬಿಸಿ ಹೆಚ್ಚಿಸಿದ ಅನುಪಮಾ ಗೌಡ

    ಸ್ವಿಮ್ ಸ್ಯೂಟ್ ನಲ್ಲಿ ಕಾಣಿಸಿಕೊಂಡು ‘ಬಿಗ್ ಬಾಸ್’ ಮನೆ ಬಿಸಿ ಹೆಚ್ಚಿಸಿದ ಅನುಪಮಾ ಗೌಡ

    ಕಿರುತೆರೆ ಖ್ಯಾತ ನಟಿ, ನಿರೂಪಕಿ ಅನುಪಮಾ ಗೌಡ (Anupama Gowda) ಎರಡನೇ ಬಾರಿಗೆ ಬಿಗ್ ಬಾಸ್ (Bigg Boss Season 9) ಮನೆ ಪ್ರವೇಶ ಮಾಡಿದ್ದಾರೆ. ತಮ್ಮ ಸ್ನಿಗ್ಧ ನಗುವಿನ ಮೂಲಕ ‘ಬಿಗ್ ಬಾಸ್’ ಚಿತ್ತವನ್ನೇ ಚಂಚಲ ಮಾಡುವಷ್ಟು ಹಸನ್ಮುಖಿ ಆಗಿರುವ ಅನುಪಮಾ, ಇಂದು ದೊಡ್ಮನೆ ಸ್ವಿಮಿಂಗ್ ಫೂಲ್ (Swim Suit) ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಿಮ್ ಸ್ಯೂಟ್ ಹಾಕಿಕೊಂಡು ಮನೆಯ ವಾತಾವರಣವನ್ನೇ ಮತ್ತಷ್ಟು ಬಿಸಿ ಮಾಡಿದ್ದಾರೆ. ನೆಚ್ಚಿನ ನಟಿಯನ್ನು ಸ್ವಿಮ್ ಸ್ಯೂಟ್ ನಲ್ಲಿ ನೋಡಿದ ಅಭಿಮಾನಿಗಳು, ಅನುಪಮಾ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

    ಮಾತಿನ ಮೂಲಕವೇ ಸಾವಿರ ಹೃದಯಗಳನ್ನು ಖೆಡ್ಡಾಗಿ ಕೆಡವುವ ತಾಕತ್ತು ಅನುಪಮಾ ಗೌಡರಿಗಿದೆ. ರಿಯಾಲಿಟಿ ಶೋಗಳಲ್ಲಿ ಅದನ್ನು ಸಾಬೀತೂ ಪಡಿಸಲಾಗಿದೆ. ಗುಳಿಕೆನ್ನೆಯ ಮೇಲಿನ ನಗು ಮತ್ತು ತುಟಿ ಚಲನೆಗಳ ಮೂಲಕ ಮಾತಿಗೆ ಬೇರೆಯೇ ಶಕ್ತಿ ನೀಡುವ ಈ ಸುಂದರಿಯು ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಸೈ ಅನಿಸಿಕೊಂಡವರು. ಅದರಲ್ಲೂ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿದೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ಪಟಟಪನೇ ಮಾತಾಡುವ ಈ ಹುಡುಗಿ, ಬಿಗ್ ಬಾಸ್ ಮನೆಯಲ್ಲಿ ಯಾಕೋ ಕೊಂಚ ಡಲ್ ಆದಂತೆ ಕಾಣುತ್ತಿದೆ. ಮಾತು ಅಷ್ಟಕಷ್ಟೇ. ಟಾಸ್ಕ್ ಗಳಲ್ಲೂ ಹೇಳಿಕೊಳ್ಳುವಂತಹ ಫರ್ಫಾಮೆನ್ಸ್ ಮಾಡುತ್ತಿಲ್ಲ. ಹೊಂದಾಣಿಕೆಯ ಕೊರತೆಯೂ ಈ ಹುಡುಗಿಯಲ್ಲಿದೆ. ಹೀಗಾಗಿ ಅನುಪಮಾ ಗೌಡ ನಿರೀಕ್ಷಿಸಿದಷ್ಟು ಮನರಂಜನೆ ನೀಡುತ್ತಿಲ್ಲ. ಈ ಎಲ್ಲಾ ಇಲ್ಲಗಳನ್ನು ಒಂದೇ ಸಲ ಮರೆಸುವಂತೆ ಈಜುಡುಗೆಯಲ್ಲಿ ಕಾಣಿಸಿಕೊಂಡು ಸ್ವತಃ ಬಿಗ್ ಬಾಸ್ ಗೆ ಅಚ್ಚರಿ ಮೂಡಿಸಿದ್ದಾಳೆ ಈ ನಟಿ.

    ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಹುಡುಗಿಯರು ತುಂಡುಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಆದರೆ, ಅನುಪಮಾ ಗೌಡ ಅದಕ್ಕೆ ಹೊರತಾಗಿದ್ದರು. ತೀರಾ ಅಪರೂಪಕ್ಕೆ ಎನ್ನುವಂತೆ ಅಂತಹ ಬಟ್ಟೆಗಳನ್ನು ಧರಿಸುತ್ತಿದ್ದರು. ದೀಪಿಕಾ ದಾಸ್ (Deepika Das), ಸಾನ್ಯಾ ಐಯ್ಯರ್ (Sanya Iyer) ಗೆ ಹೋಲಿಸಿದರೆ, ಅನುಪಮಾ ಗೌಡ ಕಾಸ್ಟ್ಯೂಮ್ ವಿಶೇಷವಾಗಿ ಇರುತ್ತಿದ್ದವು. ಆದರೆ, ಇವತ್ತು ಅವೆಲ್ಲ ಬಟ್ಟೆಗಳಿಗೆ ಕೊಂಚ ವಿರಾಮ ಕೊಟ್ಟು ಸ್ವಿಮ್ ಸ್ಯೂಟ್ ಹಾಕಿದ್ದಾರೆ. ನೆಮ್ಮೆದಿಯಾಗಿ ನೀರಿನ ಜೊತೆ ಸರಸಕ್ಕೆ ಇಳಿದಿದ್ದಾರೆ. ಆ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ.

    Live Tv
    [brid partner=56869869 player=32851 video=960834 autoplay=true]

  • ಸ್ವಿಮ್ ಸೂಟ್‍ನಲ್ಲಿ ಮರ್ಡರ್ ಬೆಡಗಿ ಹಾಟ್ ಅವತಾರ ವೈರಲ್

    ಸ್ವಿಮ್ ಸೂಟ್‍ನಲ್ಲಿ ಮರ್ಡರ್ ಬೆಡಗಿ ಹಾಟ್ ಅವತಾರ ವೈರಲ್

    ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸ್ವಿಮ್ ಸೂಟ್ ಧರಿಸಿ ಫೋಟೋಗೆ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ.

    ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಮೊದಲಿನಿಂದಲೂ ದುಬೈ ಎಂದರೆ ಅಚ್ಚುಮೆಚ್ಚು. ಸದ್ಯ ದುಬೈನಲ್ಲಿ ಟೈಂ ಸ್ಪೆಂಡ್ ಮಾಡುತ್ತಿರುವ ಜಾಕ್ವೆಲಿನ್ ಸ್ವಿಮ್ಮಿಂಗ್ ಪೂಲ್ ಬಳಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಫೋಟೋಗಳನ್ನು ಜಾಕ್ವೆಲಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಪೂಲ್ ಬೇಬಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಸ್ವಿಮ್ಮಿಂಗ್ ಪೂಲ್ ಪಕ್ಕದ ಕುಳಿತುಕೊಳ್ಳುವುದರಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿದು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಜಾಕ್ವೆಲಿನ್ ಬ್ಲೂ ಕಲರ್ ಸ್ವಿಮ್ ಸೂಟ್ ಮತ್ತು ಸನ್ ಗ್ಲಾಸ್ ತೊಟ್ಟು ಬಿಸಿಲಿನಲ್ಲಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಜಾಕ್ವೆಲಿನ್ ಹಾಟ್ ಅವತಾರಕ್ಕೆ ತುಂಡೈಕ್ಳು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಇತ್ತೀಚೆಗಷ್ಟೇ ಬಾಲಿವುಡ್ ಜಾನ್ ಅಬ್ರಹಾಂ ಮತ್ತು ಜಾಕ್ವೆಲಿನ್ ಅಭಿನಯದ ಅಟ್ಯಾಕ್ ಸಿನಿಮಾ 2022ರ ಜನವರಿ 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಕ್ಷಯ್ ಕುಮಾರ್ ಮತ್ತು ನುಶ್ರತ್ ಭರುಚ್ಚ ಅವರೊಂದಿಗೆ ರಾಮ್ ಸೇತು ಚಿತ್ರದಲ್ಲಿ ಕೂಡ ಜಾಕ್ವೆಲಿನ್ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಕೂಡ 2022ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಅಲ್ಲದೇ ಬಚ್ಚನ್ ಪಾಂಡೆ ಎಂಬ ಅಕ್ಷಯ್ ಕುಮಾರ್ ಅಭಿನಯದ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದರಲ್ಲಿ ಸುದೀಪ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ಸೊಂಟ ಬಳುಕಿಸಿದ್ದಾರೆ.