Tag: Swim

  • ಹಾವೇರಿ | ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

    ಹಾವೇರಿ | ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

    ಹಾವೇರಿ: ಕೆರೆಗೆ (Lake) ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ (Shiggaon) ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಪ್ರಜ್ವಲ್ ದೇವರಮನಿ (15) ಮತ್ತು ಸನತ್ ಭೂಸರೆಡ್ಡಿ (14) ಎಂದು ಗುರುತಿಸಲಾಗಿದೆ. ಸೈಕಲ್ ತೆಗೆದುಕೊಂಡು ಕೆರೆಗೆ ಈಜಲು ಹೋಗಿದ್ದ ಬಾಲಕರು ಸೈಕಲ್ ಅನ್ನು ಕೆರೆಯ ದಡದಲ್ಲಿ ಬಿಟ್ಟು ಈಜಲು ತೆರಳಿದ್ದಾರೆ. ನೀರಿಗಿಳಿದ ಸಂದರ್ಭ ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆರೆಯ ದಡದಲ್ಲಿ ಸೈಕಲ್ ಹಾಗೂ ಬಟ್ಟೆಗಳು ಇರುವುದನ್ನು ಗಮನಿಸಿದ ಸ್ಥಳೀಯರು ಕೆರೆಯಲ್ಲಿ ಬಾಲಕರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಓರ್ವ ಬಾಲಕನ ಮೃತದೇಹ ಕೆರೆಯಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ

    ಘಟನಾ ಸ್ಥಳಕ್ಕೆ ಶಿಗ್ಗಾಂವಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಲ್ಲಿ ಪ್ರಜ್ವಲ್ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವ ಬಾಲಕನ ಮೃತದೇಹ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹುಲಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

  • ಕಲ್ಯಾಣಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು – ಮೊಬೈಲ್‌ನಲ್ಲಿ ದೃಶ್ಯ ಸೆರೆ

    ಕಲ್ಯಾಣಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು – ಮೊಬೈಲ್‌ನಲ್ಲಿ ದೃಶ್ಯ ಸೆರೆ

    ಬೆಂಗಳೂರು: ಈಜಲು (Swim) ಹೋದ ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಬನ್ನೇರುಘಟ್ಟ (Bannerghatta) ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ನಡೆದಿದೆ.

    ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯದ ದೀಪು (20), ಯೋಗಿಶ್ವರನ್ (20) ಮೃತ ವಿದ್ಯಾರ್ಥಿಗಳು. ಹೆಬ್ಬಗೋಡಿಯ ಕಾಲೇಜುವೊಂದರ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಗೆ ಈಜಲು ತೆರಳಿದ್ದರು. ಈ ಪೈಕಿ ದೀಪು, ಯೋಗೀಶ್ವರನ್‌ಗೆ ಈಜಲು ಆಗದೆ ಪರಾದಾಟ ನಡೆಸಿದ್ದಾರೆ. ಕೆಲಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: Exclusive | ಮುಡಾ ಕೇಸ್‌ನಲ್ಲಿ ಸಿಎಂ & ಕುಟುಂಬಸ್ಥರೇ ಸಂತ್ರಸ್ತರು – ನಟೇಶ್‌ ಪ್ರಮುಖ ಆರೋಪಿ ಎಂದ ʻಲೋಕಾʼ

    ವಿದ್ಯಾರ್ಥಿಗಳು ಮುಳುಗುತ್ತಿದ್ದ ವೇಳೆ ರಕ್ಷಣೆ ಮಾಡಲು ಸಾಧ್ಯವಾಗದೇ ಉಳಿದ ಸ್ನೇಹಿತರು ಪರದಾಡಿದ್ದಾರೆ. ಈಜಲು ಬಾರದೇ ಒಬ್ಬರಾದ ಮೇಲೆ ಒಬ್ಬರಂತೆ ನೀರಿನಲ್ಲಿ ಮುಳುಗಿ ಸ್ನೇಹಿತರ ಕಣ್ಣೆದುರೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸಂಪೂರ್ಣ ಘಟನೆಯ ದೃಶ್ಯ ಅಲ್ಲಿದ್ದ ಯುವಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಬೇಕಾ – ಬೇಡ್ವಾ?; ಸಾರ್ವಜನಿಕರಿಂದ ಸಲಹೆಗೆ ಆಹ್ವಾನ

  • ಮಂಡ್ಯ| ಈಜು ಬಾರದೇ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ

    ಮಂಡ್ಯ| ಈಜು ಬಾರದೇ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ

    ಮಂಡ್ಯ: ಈಜಲೆಂದು (Swim) ಕೆರೆಗೆ ತೆರಳಿದ್ದ ಇಬ್ಬರು ಬಾಲಕರು ಈಜು ಬಾರದೇ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು (Maddur) ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶಂಕರಪುರ ಗ್ರಾಮದ ಸೋಮು (14) ಹಾಗೂ ಮುತ್ತುರಾಜು (17) ಮೃತ ಬಾಲಕರು. ಕೆರೆಯಲ್ಲಿ ಈಜು ಹೊಡೆಯಲೆಂದು ಐವರು ಸ್ನೇಹಿತರು ಕೆರೆಗೆ ತೆರಳಿದ್ದರು. ಈ ವೇಳೆ ಈಜು ಬಾರದೇ ಸೋಮು ಹಾಗೂ ಮುತ್ತುರಾಜು ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಮುಳುಗಿದ ಇಬ್ಬರ ಪೈಕಿ ಮುತ್ತುರಾಜು ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸಂಡೂರು ಬಿಜೆಪಿಯಲ್ಲಿ ಬಂಡಾಯದ ಹೊಗೆ – ಸಂಧಾನಕ್ಕೂ ಬಗ್ಗದ ಟಿಕೆಟ್ ವಂಚಿತ ದಿವಾಕರ್

    ಸೋಮು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಭಾನುವಾರ ಸಂಜೆ ಘಟನೆ ನಡೆದಿದೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರೀ ಮಳೆ; ಬೆಂಗಳೂರಿನ ಶಾಲೆಗಳಿಗೆ ಇಂದು ರಜೆ ಘೋಷಣೆ

  • ತುಮಕೂರು| ನೀರಿನ ರಭಸ ಹೆಚ್ಚಾಗಿ ಕೊಚ್ಚಿಹೋದ ಸೇತುವೆ – ಈಜಲು ಹೋದ ಯುವಕ ಸಾವು

    ತುಮಕೂರು| ನೀರಿನ ರಭಸ ಹೆಚ್ಚಾಗಿ ಕೊಚ್ಚಿಹೋದ ಸೇತುವೆ – ಈಜಲು ಹೋದ ಯುವಕ ಸಾವು

    ತುಮಕೂರು: ಸೇತುವೆ (Bridge) ಬಳಿ ಈಜಲು(Swim) ಹೋಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆ ಮಧುಗಿರಿ (Madhugiri) ತಾಲೂಕಿನ ಪುರವರ ಬಳಿಯ ತಗ್ಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೇಮಂತ್ ಕುಮಾರ್ (21) ಮೃತ ಯುವಕ. ಈತ ಶನಿವಾರ ಮಧ್ಯಾಹ್ನದ ವೇಳೆ ಜಯಮಂಗಲಿ ನದಿ ನೀರು ಹರಿಯುವ ಸೇತುವೆ ಬಳಿ ಈಜಲೆಂದು ತೆರಳಿದ್ದ. ಈ ವೇಳೆ ನೀರಿನ ರಭಸ ಹೆಚ್ಚಾಗಿ ಸೇತುವೆ ಕೊಚ್ಚಿ ಹೋಗಿದೆ. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿ ಯುವಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಲಿಷ್ಠವಾಗಿದೆ, ಬಿಜೆಪಿಯ ತಿರುಕನ ಕನಸು ನನಸಾಗಲ್ಲ: ಕೆವೈ ನಂಜೇಗೌಡ

    ಕಳೆದ ಕೆಲ ತಿಂಗಳ ಹಿಂದಷ್ಟೇ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಚೆಕ್ ಡ್ಯಾಂ ಕಳಪೆ ಎಂದು ಗುತ್ತಿಗೆದಾರನ ವಿರುದ್ಧ ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಶನಿವಾರ ಸಂಜೆಯಿಂದ ಹುಡುಕಾಟ ನಡೆಸಿದರೂ ಯುವಕನ ಮೃತದೇಹ ಪತ್ತೆಯಾಗಿಲ್ಲ. ಇದನ್ನೂ ಓದಿ: ಸಿಗಂದೂರು ದೇವಾಲಯಕ್ಕೆ ತೆರಳುತ್ತಿದ್ದ ಕಾರು ಅಪಘಾತ – ಯುವಕ ಸಾವು

  • ಮಗನಿಗೆ ಈಜು ಕಲಿಸಲು ಹೋಗಿದ್ದ ತಂದೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು

    ಮಗನಿಗೆ ಈಜು ಕಲಿಸಲು ಹೋಗಿದ್ದ ತಂದೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು

    ಚಿಕ್ಕಬಳ್ಳಾಪುರ: ಮಗನಿಗೆ (Son) ಈಜು (Swimming) ಕಲಿಸಲು ಹೋದ ತಂದೆ (Father) ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಕೋನಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅಂಗಡಿ ಬಾಬು (45) ಮೃತ ತಂದೆ. ಬಾಬು ತನ್ನ ಮಗ ತೇಜುವಿಗೆ ಗ್ರಾಮದ ಕೆ.ನಾರಾಯಣಸ್ವಾಮಿ ಎಂಬವರ ಕೃಷಿ ಹೊಂಡದಲ್ಲಿ ಈಜು ಕಲಿಸಲು ಮುಂದಾಗಿದ್ದರು. ಮಗನಿಗೆ ತರಬೇತಿ ನೀಡಿ ದಡಕ್ಕೆ ತಲುಪಿಸಿದ ತಂದೆ ಮರಳಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದು, ಮತ್ತೆ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ತಂದೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಮಗ ಜೋರಾಗಿ ಕಿರುಚಿದ ಕಾರಣ ಅಕ್ಕಪಕ್ಕದ ಜಮೀನಿನವರು ಬಂದು ಬಾಬುವನ್ನ ರಕ್ಷಣೆ ಮಾಡಲು ಪ್ರಯತ್ನಿಸಿದರಾದರೂ ಪ್ರಯತ್ನ ವಿಫಲವಾಗಿದೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮಾಜಿ ಶಾಸಕ ರೋಡ್‌ಶೋ

  • ಸ್ನೇಹಿತರ ಜೊತೆ ನದಿಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲು

    ಸ್ನೇಹಿತರ ಜೊತೆ ನದಿಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲು

    ರಾಮನಗರ: ಸ್ನೇಹಿತರ ಜೊತೆ ನದಿಯಲ್ಲಿ ಈಜಲು (Swimming) ಹೋಗಿದ್ದ ಬಾಲಕನೋರ್ವ ನೀರುಪಾಲಾದ ಘಟನೆ ರಾಮನಗರ (Ramanagara) ತಾಲೂಕಿನ ದ್ಯಾವರಸನೇಗೌಡನದೊಡ್ಡಿ ಬಳಿ ನಡೆದಿದೆ.

    ರಾಮನಗರ ಟೌನ್‌ನ ವಿನಾಯಕನಗರ ನಿವಾಸಿ ಕಿಶೋರ್ (14) ಮೃತ ಬಾಲಕ. ಎಂಟನೇ ತರಗತಿ ಓದುತ್ತಿದ್ದ ಕಿಶೋರ್ ಭಾನುವಾರ ಮಧ್ಯಾಹ್ನ ಸ್ನೇಹಿತರ ಜೊತೆ ಈಜಲು ಹೋಗಿದ್ದ. ಅರ್ಕಾವತಿ ನದಿಯಲ್ಲಿ (River) ಈಜುತ್ತಿದ್ದ ಕಿಶೋರ್ ನೀರಿನಲ್ಲಿ ಮುಳುಗಿ (Drown) ನಾಪತ್ತೆಯಾಗಿದ್ದಾನೆ. ಇದರಿಂದ ಭಯಗೊಂಡ ಸ್ನೇಹಿತರು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರ ಅಬ್ದುಲ್ ಮತೀನ್ ತಂದೆ ನಿಧನ

    ಕಿಶೋರ್ ನೀರಿನಲ್ಲಿ ಮುಳುಗಿರುವುದನ್ನು ಆತನ ಸ್ನೇಹಿತರು ಮನೆಯವರಿಗೂ ತಿಳಿಸಿರಲಿಲ್ಲ. ಇತ್ತ ಮಗನಿಗಾಗಿ ಹುಡುಕಾಡಿದ್ದ ಪೋಷಕರು ಮಗ ಕಾಣೆಯಾಗಿದ್ದಾನೆ ಎಂದು ರಾಮನಗರದ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಸೊಮವಾರ ಕಿಶೋರ್ ಬಗ್ಗೆ ಸ್ನೇಹಿತರ ಬಳಿ ಪೊಲೀಸರು ವಿಚಾರಿಸಿದಾಗ ನೀರಿನಲ್ಲಿ ಮುಳುಗಿ ಹೋಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಸಾಲ ನೀಡುವುದಾಗಿ ಹೇಳಿ ವ್ಯಕ್ತಿಯ ಖಾತೆಯಲ್ಲಿದ್ದ ಹಣ ಲಪಟಾಯಿಸಿದ ವಂಚಕರು

    ವಿಷಯ ಅರಿತ ಬಳಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರ್ಕಾವತಿ ನದಿಯಿಂದ ಕಿಶೋರ್ ಮೃತ ದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಇಬ್ಬರ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲು

    ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲು

    ರಾಯಚೂರು: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲಾಗಿರುವ ಘಟನೆ ತಾಲೂಕಿನ ಯರಗೇರಾದಲ್ಲಿ ನಡೆದಿದೆ.

    ತನಾಜ್ (16) ಹಾಗೂ ಮುಸ್ಕಾನ್ (17) ಮೃತ ಸಹೋದರಿಯರು. ತುಂಬಿದ ಕೆರೆಯಲ್ಲಿ ಈಜಲು ತೆರಳಿದ್ದ ಸಹೋದರಿಯರು ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾಯಚೂರು ನಗರದ ನಿವಾಸಿಗಳಾದ ಬಾಲಕಿಯರು ಅತ್ತೆಯ ಮನೆಗೆ ತೆರಳಿದ್ದರು. ಈ ವೇಳೆ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    ಬಾಲಕಿಯರು ಸಾವನ್ನಪ್ಪಿದ ಹಿನ್ನೆಲೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವು- ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆರೋಪ

  • ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    – ಇತ್ತ ಮೈಸೂರಿನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ

    ಬೆಳಗಾವಿ/ಮೈಸೂರು: ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ.

    ಶಿಲ್ಪಾ ಚನ್ನಗೌಡರ (34) ಮೃತಪಟ್ಟ ತಾಯಿ. ಶಿಲ್ಪಾ ತನ್ನ ಮಕ್ಕಳಾದ ಸುಜಲ ಮತ್ತು ಸುದರ್ಶನನಿಗೆ ನೇಜ ಗ್ರಾಮದ ಹೊರವಲಯದಲ್ಲಿ ತೆರೆದ ಬಾವಿಯಲ್ಲಿ ಈಜು ಕಲಿಸುತ್ತಿದ್ದಳು. ಈ ವೇಳೆ ಶಿಲ್ಪಾ ಮೂರ್ಛೆ ತಪ್ಪಿದ್ದಾಳೆ. ಈಜುವಾಗ ಶಿಲ್ಪಾ ತಂಬಾಕು ಸೇವನೆ ಮಾಡಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ.

    ತಾಯಿ ಮುಳುಗುತ್ತಿರುವುದನ್ನು ನೋಡಿದ ಮಕ್ಕಳು ಸಹಾಯಕ್ಕಾಗಿ ಕೂಗಾಡಿದ್ದಾರೆ. ಅಲ್ಲದೆ ತಾಯಿಯ ರಕ್ಷಣೆ ಮಾಡುವಂತೆ ಮಕ್ಕಳು ನೆರೆ ಹೊರೆಯವರನ್ನು ಬಾವಿಯ ಬಳಿ ಕರೆದುಕೊಂಡು ಬಂದಿದ್ದಾರೆ. ಜನರು ರಕ್ಷಣೆಗೆ ಬರುವಷ್ಟರಲ್ಲಿ ಶಿಲ್ಪಾ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ನೀರು ತರಲು ಹೋಗಿದ್ದ ಯುವಕ ಮೃತಪಟ್ಟಿದ್ದಾನೆ. ಧನುಷ್ (19) ಮೃತ ಯುವಕನಾಗಿದ್ದು, ಬೆಂಗಳೂರಿನಲ್ಲಿ ಡಿಪ್ಲೋಮಾ ಓದುತ್ತಿದ್ದನು.

    ಧನುಷ್ ತನ್ನ ಸೋದರಮಾವನ ತಿಥಿ ಕಾರ್ಯಕ್ಕೆ ಬಂದಿದ್ದನು. ನದಿ ತೀರದ ಸಮಾಧಿ ಸ್ವಚ್ಚಗೊಳಿಸಲು ನೀರು ತರಲು ಹೋಗಿದ್ದ ವೇಳೆ ಧನುಷ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನದಿ ಪ್ರವಾಹದಲ್ಲಿ ಯುವಕರ ಹುಚ್ಚು ಸಾಹಸ

    ನದಿ ಪ್ರವಾಹದಲ್ಲಿ ಯುವಕರ ಹುಚ್ಚು ಸಾಹಸ

    ಮಂಗಳೂರು: ರಾಜ್ಯದ ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನೇತ್ರಾವತಿ ನದಿ ಸಹ ತುಂಬಿ ಹರಿಯುತ್ತಿದ್ದು, ಕೆಲ ಯುವಕರು ಸೇತುವೆ ಮೇಲಿಂದ ಜಿಗಿಯುವ ಮೂಲಕ ತಮ್ಮ ಹುಚ್ಚಾಟವನ್ನು ಪ್ರದರ್ಶಿಸುತ್ತಿದ್ದಾರೆ.

    ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಎದುರೇ ಸೇತುವೆ ಮೇಲಿಂದ ನದಿಗೆ ಜಿಗಿದು ಯುವಕರು ಈಜಾಡುತ್ತಿದ್ದಾರೆ. ಯುವಕರ ಹುಚ್ಚು ಸಾಹಸ ನೋಡಲು ಸ್ಥಳದಲ್ಲಿ ಜನ ಜಾತ್ರೆಯ ರೀತಿಯಲ್ಲಿ ಸೇರಿದ್ದಾರೆ.

    ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗದ್ದಗಿ ಗ್ರಾಮದ ಯುವಕರು ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಈಜುವ ಸ್ಪರ್ಧೆ ನಡೆಸಿದ್ದರು. ಗಂಗಮ್ಮನ ಕಟ್ಟೆಯಿಂದ ಸಾಯಿ ಬಾಬಾ ಮಂದಿರದವರೆಗೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮದ 8-10 ಯುವಕರು ಈಜಿದ್ದರು. 5-10 ಸಾವಿರ ರೂ. ಹಾಗೂ ಕುರಿಮರಿಗಾಗಿ 3 ಕಿ.ಮೀ. ಈಜಲು ಬೆಟ್ಟಿಂಗ್ ಕಟ್ಟಿಕೊಂಡಿದ್ದರು. ಪ್ರವಾಹದಲ್ಲಿ ಈಜಿ ದಂಡ ಸೇರಲು ಹರಸಾಹಸವೇ ಪಟ್ಟಿದ್ದರು.

  • ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ 13ರ ಬಾಲಕ ಜಲಸಮಾಧಿ!

    ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ 13ರ ಬಾಲಕ ಜಲಸಮಾಧಿ!

    ಮಂಗಳೂರು: ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ ವೇಳೆ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಅಡ್ಯಾರ್‍ಪದವಿನಲ್ಲಿ ನಡೆದಿದೆ.

    ಸ್ಥಳೀಯ ನಿವಾಸಿ 13 ವರ್ಷದ ತಮೀಮ್ ಮೃತಪಟ್ಟ ಬಾಲಕ. ತಮೀಮ್ ತನ್ನ ಸ್ನೇಹಿತರೊಂದಿಗೆ ಈಜಲು ಕಲ್ಲಿನ ಕೋರೆಗೆ ತೆರಳಿದ್ದಾನೆ. ಕೋರೆಯಲ್ಲಿ ಈಜುವ ವೇಳೆ ಮುಳುಗಿ ಮೃತಪಟ್ಟಿದ್ದಾನೆ. ಕಳೆದ ಕೆಲ ದಿನಗಳಿಂದ ಮಂಗಳೂರು ಪರಿಸರದಲ್ಲಿ ನಿರಂತರ ಮಳೆಯಾಗುತ್ತಿದ್ದರಿಂದ ಕಲ್ಲಿನ ಕೋರೆಯಲ್ಲಿ ನೀರು ತುಂಬಿಕೊಂಡಿತ್ತು.

    ತಮೀಮ್ ಈಜಾಡುತ್ತಾ ನೀರಿರುವ ಮಧ್ಯಭಾಗವನ್ನು ತಲುಪಿದ್ದು, ನಿಯಂತ್ರಣ ಕಳೆದುಕೊಂಡು ಮುಳುಗಲಾರಂಭಿಸಿದ್ದಾನೆ. ಕೂಡಲೇ ಸ್ನೇಹಿತರು ರಕ್ಷಿಸುವುದಕ್ಕೆ ಮುಂದಾದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬಾಲಕನ ಶವ ಹೊರತೆಗೆದಿದ್ದಾರೆ.

    ಘಟನೆ ಬಳಿಕ ಸ್ಥಳೀಯರು ಪ್ರತಿಭಟನೆಗಾಗಿ ಮುಂದಾಗಿದ್ದು, ಕಾನೂನುಬಾಹಿರ ಕಲ್ಲು ಕ್ವಾರಿಯ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.