Tag: Swiggy

  • ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋರಿಗೆ ಶಾಕ್

    ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋರಿಗೆ ಶಾಕ್

    ಬೆಂಗಳೂರು: ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದ ಹಿಡಿದು ಎಲ್ಲವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುವವರಿಗೆ ಡೆಲಿವರಿ ಆ್ಯಪ್‌ಗಳು (Delivery App) ಶಾಕ್ ನೀಡೋಕೆ ಮುಂದಾಗಿವೆ.

    ಹೌದು, ಬೆಳಿಗ್ಗೆ ತಿಂಡಿಗೆ ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದಿಡಿದು ರಾತ್ರಿ ಸೌತ್, ನಾರ್ಥ್ ಮೀಲ್ಸ್, ಚಿಕನ್, ಮಟನ್ ಸೇರಿದಂತೆ ಬೇಕಾದ ಎಲವನ್ನು ಆನ್‌ಲೈನ್‌ನಲ್ಲೇ ಬುಕ್ ಮಾಡ್ಕೊಂಡು ಸವಿಯುತ್ತಿದ್ದಾರೆ. ಅಂತಹ ಸಿಲಿಕಾನ್ ಸಿಟಿ ಜನರಿಗೆ ಆನ್‌ಲೈನ್ ಕಂಪನಿಗಳು ಶಾಕ್ ನೀಡಲು ಮುಂದಾಗಿವೆ. ಅದಲ್ಲದೇ ಹೋಟೆಲ್ ಮಾಲೀಕರು ಕೂಡ ಆನ್‌ಲೈನ್ ಸಂಸ್ಥೆಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.ಇದನ್ನೂ ಓದಿ: ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ – 20 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ

    ಡೆಲಿವರಿ ಸಂಸ್ಥೆಗಳು ಗ್ರಾಹಕರಿಗೆ ಶಾಕ್ ನೀಡಲು ಸಜ್ಜಾಗಿದೆ. ಸ್ವಿಗ್ಗಿ, ಜೊಮೊಟೊ ಸೇರಿದಂತೆ ಫುಡ್ ಡೆಲಿವರಿ ಆಪ್‌ಗಳು ಫ್ಲಾಟ್‌ಫಾರಂ ಚಾರ್ಜ್ ಹೆಚ್ಚು ಮಾಡಲು ಮುಂದಾಗಿದೆ. ಈಗಾಗಲೇ ಆನ್‌ಲೈನ್ ಡೆಲಿವರಿ ಆಪ್‌ಗಳು ಡೆಲಿವರಿ ಚಾರ್ಜ್ ಎಂದು ಹಣವನ್ನು ತೆಗೆದುಕೊಳ್ಳುತ್ತಿದ್ದು, ಕಳೆದ ವರ್ಷದಿಂದ ಫ್ಲಾಟ್ ಫಾರಂ ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದರು. 2 ರಿಂದ 3 ರೂ. ಇದ್ದ ದರ ಇದೀಗ 12 ರಿಂದ 15 ರೂ.ವರೆಗೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಸ್ವಿಗ್ಗಿ ಫ್ಲಾಟ್‌ಫಾರಂ ಚಾರ್ಜ್ 12 ರೂ., ಜೊಮಾಟೊ 15 ರು.ಗೆ ಏರಿಕೆ ಆಗಲಿದೆ.

    ಇನ್ನೂ ಹಬ್ಬಗಳು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಗಳು ದರ ಹೆಚ್ಚಳ ಮಾಡಿವೆ. ಅಲ್ಲದೆ ಈ ಕಂಪನಿಗಳು ಊಟ, ತಿಂಡಿಯನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ, ಶೇಕಡ 18ರಷ್ಟು ತೆರಿಗೆಯನ್ನು ಸೆಪ್ಟೆಂಬರ್ 22ರಿಂದ ಜಾರಿ ಬರಲಿರುವ ಕಾರಣಕ್ಕೆ ಅದರ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ. ಜೊತೆಗೆ ಸಂಸ್ಥೆಗಳ ಪ್ಲಾಟ್‌ಫಾರಂ ಚಾರ್ಜ್ ಕೂಡ ಹೆಚ್ಚು ಮಾಡ್ತಿದೆ. ಇದಕ್ಕೆ ಹೋಟೆಲ್ ಮಾಲೀಕರು ನಾವು ಆನ್‌ಲೈನ್ ಸಂಸ್ಥೆಗೆ ಮನವಿ ಮಾಡಿದರೂ ಉಪಯೋಗ ಆಗ್ತಿಲ್ಲ, ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ಹೋಂ ಡೆಲಿವರಿ ತೆಗೆದುಕೊಳ್ಳಬೇಕಾಗಿತ್ತು. ಈಗ ಅಂತಹ ಸ್ಥಿತಿ ಕೂಡ ಇಲ್ಲ, ಹೋಮ್ ಡೆಲಿವರಿ ಮಾಡಿಸಿಕೊಳ್ಳೊದ್ರಿಂದ ಊಟದ ತಾಜತನ, ಬಿಸಿ ಕೂಡ ಇರೋಲ್ಲ, ಹೋಟೆಲ್‌ಗೆ ಬನ್ನಿ, ಅಲ್ಲೇ ಊಟ ಮಾಡಿ, ಹಣ ಕೂಡ ಉಳಿಸಿಕೊಳ್ಳಿ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಫ್ಲಾಟ್‌ಫಾರಂ ಚಾರ್ಜ್ ಹೆಸರಲ್ಲಿ ಕಳೆದ ವರ್ಷದಿಂದ ಗ್ರಾಹಕರಿಗೆ ಕಡಿಮೆ ಪ್ರಮಾಣದಲ್ಲಿ ಹೊರೆ ಹಾಕಲು ಮುಂದಾಗಿದ್ದ ಈ ಆನ್‌ಲೈನ್ ಕಂಪನಿಗಳು, ಇದೀಗ ದೊಡ್ಡಮಟ್ಟದಲ್ಲಿ ಹೊರೆ ಹಾಕಲು ಮುಂದಾಗಿವೆ. ಇದರಿಂದ ಗ್ರಾಹಕರು ಮಾತ್ರವಲ್ಲ, ಹೋಟೆಲ್ ಮಾಲೀಕರು ಕೂಡ ಆಕ್ರೋಶ ವ್ಯಕ್ತಪಡಸ್ತಿದ್ದಾರೆ.ಇದನ್ನೂ ಓದಿ: ನೇಪಾಳ ಪ್ರಧಾನಿ ಹುದ್ದೆ ರೇಸಲ್ಲಿ ಕರ್ನಾಟಕದ ಎಂಟೆಕ್ ಪದವೀಧರ

  • ಸ್ವಿಗ್ಗಿ‌ ಕಂಪನಿಯ 7 ಕೋಟಿ ಹಣ ಬೆಟ್ಟಿಂಗ್‌ಗೆ ಹಾಕಿ ವಂಚಿಸಿದ್ದವ ಅರೆಸ್ಟ್!

    ಸ್ವಿಗ್ಗಿ‌ ಕಂಪನಿಯ 7 ಕೋಟಿ ಹಣ ಬೆಟ್ಟಿಂಗ್‌ಗೆ ಹಾಕಿ ವಂಚಿಸಿದ್ದವ ಅರೆಸ್ಟ್!

    ಬೆಂಗಳೂರು: ಸ್ವಿಗ್ಗಿ (Swiggy) ಕಂಪನಿಯ ಹಣದಲ್ಲಿ (Money) ಆನ್‌ಲೈನ್ ಬೆಟ್ಟಿಂಗ್ (Online Betting) ಆಡಿ, ಸುಮಾರು 7 ಕೋಟಿ ರೂ. ವಂಚಿಸಿದ (Fraud Case) ಉದ್ಯೋಗಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಶ್ರೀಕಾಂತ್‌ (23) ಎಂದು ಗುರುತಿಸಲಾಗಿದೆ. ಒಂದು ವರ್ಷದಿಂದ ಆರೋಪಿ ಕಂಪನಿಯ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಅರ್ನಸ್ಟ್ ಅಂಡ್ ಯಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಪ್ರತಿ ತಿಂಗಳು ಸ್ವಿಗ್ಗಿ ಖಾತೆಯಿಂದ 1 ರಿಂದ 2 ಕೋಟಿ ರೂ. ಹಣವನ್ನು ಎಗರಿಸುತ್ತಿದ್ದ ಎಂದು ತಿಳಿದು ಬಂದಿದೆ.

    ಕಂಪನಿಯ ಹಿರಿಯ ಅಧಿಕಾರಿ ಶೋರಿ ರಾಜನ್‌ ನೀಡಿದ ದೂರಿನ ಪ್ರಕಾರ, ಅರ್ನಸ್ಟ್ ಅಂಡ್ ಯಂಗ್ ಕಂಪನಿ ಸ್ವಿಗ್ಗಿ ಸೇರಿದಂತೆ ಅನೇಕ ಕಂಪನಿಗಳಿಗೆ ಲೆಕ್ಕಪತ್ರ ನಿರ್ವಹಣೆ ಸೇವೆ ಒದಗಿಸುತ್ತಿದೆ. ಅದರಂತೆ ಕಂಪನಿಯ ಸಹಾಯಕ ಲೆಕ್ಕಧಿಕಾರಿ ಶ್ರೀಕಾಂತ್‌ ಅವರನ್ನ ಸ್ವಿಗ್ಗಿ ಕಂಪನಿಯ ಕಚೇರಿಯ ವಿದ್ಯುತ್‌ ಬಿಲ್‌ ಕಟ್ಟಲು ನೇಮಕ ಮಾಡಿಕೊಳ್ಳಲಾಗಿತ್ತು. ಆದ್ರೆ ಶ್ರೀಕಾಂತ್‌ ಪ್ರತಿ ತಿಂಗಳು ಸ್ವಿಗ್ಗಿ ಬ್ಯಾಂಕ್‌ ಖಾತೆಯಿಂದ 1 ಕೋಟಿ ರೂ. ನಿಂದ 2 ಕೋಟಿ ರೂ. ವಂಚಿಸಿದ್ದಾನೆ ಎಂದು ತಿಳಿಸಿದ್ದಾರೆ.

    ಶ್ರೀಕಾಂತ್‌ ಅವರು 2024ರ ಜೂನ್‌ನಿಂದ ಡಿಸೆಂಬ‌ರ್ ತಿಂಗಳ ಅವಧಿಯಲ್ಲಿ ಒಟ್ಟು 6,86,51,160 ರೂ.ಗಳನ್ನ ಬಿಟಿಎನ್‌ಎಕ್ಸ್‌ಚೆಂಜ್ 247.ಕಾಂ (BetinExchange247.com) ಕಂಪನಿಗೆ ಹಾಕಿರುವುದು ಸ್ವಿಗ್ಗಿ ಕಂಪನಿಯ ಲೆಕ್ಕಪರಿಶೋಧನೆ ವೇಳೆ ಗೊತ್ತಾಗಿದೆ. ಈ ವಿಷಯವನ್ನು ಆಡಳಿತ ಮಂಡಳಿ ಹಿರಿಯ ಸಿಬ್ಬಂದಿ ಗಮನಕ್ಕೆ ತಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಬಳಿಕ ಈ ಬಗ್ಗೆ ಶ್ರೀಕಾಂತ್ ಅವರನ್ನು ವಿಚಾರಿಸಿದಾಗ, ಬಿಟಿಎನ್ ಕಂಪನಿಯು ಈ ಹಣವನ್ನು ಬೆಟ್ಟಿಂಗ್ ಆ್ಯಪ್‌ನಲ್ಲಿ ಠೇವಣಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಮ್ಮ ಕಂಪನಿಗೆ ನಂಬಿಕೆ ದ್ರೋಹ ಮಾಡಿ, 7 ಕೋಟಿ ರೂ. ವಂಚನೆ ಮಾಡಿರುವ ಶ್ರೀಕಾಂತ್ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

  • Swiggy, Zomatoಗೆ ಕೌಂಟರ್ – ಹೋಟೆಲ್ ಅಸೋಸಿಯೇಷನ್‍ನಿಂದ ಹೊಸ ಆ್ಯಪ್‌ಗೆ ಸಿದ್ಧತೆ

    Swiggy, Zomatoಗೆ ಕೌಂಟರ್ – ಹೋಟೆಲ್ ಅಸೋಸಿಯೇಷನ್‍ನಿಂದ ಹೊಸ ಆ್ಯಪ್‌ಗೆ ಸಿದ್ಧತೆ

    ಬೆಂಗಳೂರು: ದುಬಾರಿ ಆಗಿರುವ ಫುಡ್ ಆ್ಯಪ್‍ಗಳಿಗೆ ಹೋಟೆಲ್ ಮಾಲೀಕರು ಕೌಂಟರ್ ನೀಡಲು ಸಿದ್ಧರಾಗಿದ್ದು, ಫುಡ್‍ಗಳನ್ನು ಆರ್ಡರ್ ಮಾಡಲು ಎಂದೇ ಹೊಸ ಆ್ಯಪ್‍ಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.

    ಹೌದು, ಇತ್ತೀಚೆಗೆ ಸ್ವಿಗ್ಗಿ (Swiggy), ಝೊಮ್ಯಾಟೋದಂತಹ (Zomato) ಫುಡ್ ಆ್ಯಪ್‍ಗಳು ಲೂಟಿಗಿಳಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆ್ಯಪ್ ಮೊರೆ ಹೋಗಿರುವ ಬೆಂಗಳೂರು ಹೋಟೆಲ್ (Hotel) ಮಾಲೀಕರು ಒಪನ್ ನೆಟ್‍ವರ್ಕ್ ಡಿಜಿಟಲ್ ಕಾಮರ್ಸ್ ಆ್ಯಪ್ ಜೊತೆ ಟೈಅಪ್ ಆಗೋಕೆ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಎನ್‍ಡಿಸಿ ಆ್ಯಪ್ ಪ್ರತಿನಿಧಿಗಳ ಜೊತೆ ಹೋಟೆಲ್ ಅಸೋಸಿಯೇಷನ್ ಸಭೆಯನ್ನು ಮಾಡಿದೆ. ಈ ಆ್ಯಪ್‍ನಿಂದ ಗ್ರಾಹಕರು ಹಾಗೂ ಮಾಲೀಕರ ಹಣ ಸುಮಾರು 15% ರಷ್ಟು ಉಳಿತಾಯ ಆಗುವ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

    ಸ್ವಿಗ್ಗಿ- ಝೊಮ್ಯಾಟೋ ಆನ್‍ಲೈನ್‍ನಲ್ಲಿ ಫುಡ್ ಡೆಲಿವರಿ ಮಾಡುತ್ತಿವೆ. ಹೋಟೆಲ್ ಮೆನ್ಯು ಕಾರ್ಡ್‍ಗಿಂತ ಶೇ.40ರಷ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದು, ಫುಡ್ ಡೆಲಿವರಿ ನೆಪದಲ್ಲಿ ಗ್ರಾಹಕರ ಬಳಿ ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿಬರುತ್ತಿವೆ. ಇದನ್ನೂ ಓದಿ: ವರುಣಾದಲ್ಲಿ ಸಿದ್ದು-ಬಿಎಸ್‌ವೈ ಹೊಂದಾಣಿಕೆ ಮಾಡ್ಕೊಂಡಿದ್ದಾರೆ: ಹೆಚ್‌ಡಿಡಿ ಹೊಸ ಬಾಂಬ್‌

    ಅತ್ತ ಮಾಲೀಕರಿಗೂ ಹಣ ಸೇರಲ್ಲ. ಇತ್ತ ಗ್ರಾಹಕರ ಜೇಬಿಗೂ ಕತ್ತರಿಯಾಗಿದ್ದು, ಹೆಚ್ಚಿನ ಹಣ ಪಡೆಯದಂತೆ ಆ್ಯಪ್‍ಗಳಿಗೆ ಹಲವು ಬಾರಿ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಆದರೆ ಸ್ವಿಗ್ಗಿ- ಝೊಮ್ಯಾಟೋ, ನಾವು ನಷ್ಟದಲ್ಲಿ ಇದ್ದೇವೆ ಅಂತ ಕಾರಣ ನೀಡುತ್ತೀವೆ. ಅವರು ಹೇಳುತ್ತಿರುವುದು ಸುಳ್ಳು. ಅವರು ನಷ್ಟದಲ್ಲಿ ಇಲ್ಲ. ಆದರೂ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿವೆ ಎಂದು ಹೋಟೆಲ್ ಅಸೋಸಿಯೇಷನ್ ಆರೋಪಿಸಿವೆ.

    ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಇದೀಗ ಹೊಸ ಪ್ಲಾನ್ ಒಂದನ್ನ ರಚಿಸಿದ್ದಾರೆ. ಬೆಂಗಳೂರಿನವರು (Bengaluru) ದೇಶದಲ್ಲೇ ಹೆಚ್ಚು ಆನ್‍ಲೈನ್ ಆರ್ಡರ್ ಮಾಡ್ತಾರೆ. ಹೀಗಾಗಿ ಸ್ವಿಗ್ಗಿ – ಝೊಮ್ಯಾಟೋ ಆ್ಯಪ್‍ಗಳಿಗೆ ಹೋಟೆಲ್ ಮಾಲೀಕರು ಟಕ್ಕರ್ ನೀಡಲು ಸಿದ್ಧರಾಗಿದ್ದು, ಕೇಂದ್ರ ಸರ್ಕಾರದ ಹೊಸ ಆ್ಯಪ್ ಮೊರೆ ಹೋಗಿದ್ದಾರೆ. ಓಪನ್ ನೆಟ್‍ವರ್ಕ್ ಡಿಜಿಟಲ್ ಕಾಮರ್ಸ್ ಆ್ಯಪ್‍ನಿಂದ ಗ್ರಾಹಕರು ಹಾಗೂ ಮಾಲೀಕರ ಹಣ ಉಳಿತಾಯ ನಿರೀಕ್ಷೆಯಿದೆ. ಸ್ವಿಗ್ಗಿ ಹಾಗೂ ಝೊಮ್ಯಾಟೋಗಿಂತ ಶೇ.20ರಷ್ಟು ಉಳಿತಾಯ ನಿರೀಕ್ಷೆಯಿದೆ ಎಂದು ONDC ಆ್ಯಪ್ ಪ್ರತಿನಿಧಿ, ಹೊಟೇಲ್ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದನ್ನೂ ಓದಿ: ದಾವಣಗೆರೆ ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ

  • ಸ್ವಿಗ್ಗಿ ಡೆಲಿವರಿ ಬ್ಯಾಗ್‍ಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

    ಸ್ವಿಗ್ಗಿ ಡೆಲಿವರಿ ಬ್ಯಾಗ್‍ಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

    ಬೆಂಗಳೂರು: ನಗರದಲ್ಲಿ ಸ್ವಿಗ್ಗಿ ಡೆಲಿವರಿ (Swiggy Delivery)  ಬ್ಯಾಗ್‍ಗಳಲ್ಲಿ (Bag) ಗಾಂಜಾ (Cannabis) ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು (Bengaluru) ಸಿಸಿಬಿ (CCB) ಪೊಲೀಸರು (Police) ಬಂಧಿಸಿದ್ದಾರೆ.

    ಸ್ವಿಗ್ಗಿ ಡೆಲಿವರಿ ಬ್ಯಾಗ್‍ನಲ್ಲಿ ಗಾಂಜಾ ಸಾಗಾಟದ ಅನುಮಾನ ಬಂದ ಹಿನ್ನೆಲೆ ಕಾರ್ಯಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ವೈಟ್ ಫೀಲ್ಡ್ ಮತ್ತು ಯಲಹಂಕದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ ಡೆಲಿವರಿ ಬ್ಯಾಗ್‍ನಲ್ಲಿ ಸಾಗಾಟ ಮಾಡಿ ಮಾರಾಟ ಮಾಡುವ ಜಾಲ ಬಯಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಬೆಂಕಿ ಅವಘಡ – ಮನೆಯಲ್ಲಿದ್ದ ಇಬ್ಬರು ಮಕ್ಕಳು ಸೇರಿ 6 ಮಂದಿ ಸಜೀವ ದಹನ

    ಬಂಧಿತರಿಬ್ಬರೂ ಸ್ವಿಗ್ಗಿ ಡೆಲಿವರಿ ಹೆಸರಲ್ಲಿ ಗ್ರಾಹಕರಿಗೆ ಗಾಂಜಾ ಸರಬರಾಜು ಮಾಡುತ್ತಿದ್ರು. ಬಿಹಾರದಿಂದ ಬೆಂಗಳೂರಿಗೆ ವಿವಿಧ ಬಗೆಯ ಡ್ರಗ್ಸ್ ತಂದು ಸ್ವಿಗ್ಗಿ ಡೆಲಿವರಿ ಬ್ಯಾಗ್‍ಗಳಲ್ಲಿ ತುಂಬಿಕೊಂಡು ಅಪಾರ್ಟ್ಮೆಂಟ್‌ಗಳಲ್ಲಿ ನಡೆಯುವ ಪಾರ್ಟಿಗಳು, ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬ ಕುರಿತು ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ ಗಾಂಜಾ ಮತ್ತು ಎಮ್‍ಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಮತ್ತಷ್ಟು ಇದೇ ರೀತಿಯ ತಂಡಗಳು ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್‌ಗೂ ಕೇಸರಿ ಕಂಟಕ

    Live Tv
    [brid partner=56869869 player=32851 video=960834 autoplay=true]

  • ಊಟಕ್ಕಿಂತ ಹೆಚ್ಚಾಗಿದ್ಯಂತೆ ಕಾಂಡೋಮ್ ಸೆಲ್ – ಸ್ವಿಗ್ಗಿ ಸಮೀಕ್ಷೆಯಲ್ಲಿನಿದೆ?

    ಊಟಕ್ಕಿಂತ ಹೆಚ್ಚಾಗಿದ್ಯಂತೆ ಕಾಂಡೋಮ್ ಸೆಲ್ – ಸ್ವಿಗ್ಗಿ ಸಮೀಕ್ಷೆಯಲ್ಲಿನಿದೆ?

    ಮುಂಬೈ: ಇಂದಿನ ಪೀಳಿಗೆಯವರ ಲೈಫ್ ಸ್ಟೈಲ್ ತುಂಬಾ ಚೇಂಜ್ ಆಗಿದೆ. ಇಂದಿನ ಜನ ತಮ್ಮ ಬ್ಯೂಸಿ ಶೆಡ್ಯೂಲ್ ನಡುವೆ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಲು ಆಗದೇ ಪರದಾಡುತ್ತಿದ್ದಾರೆ. ಹೀಗಾಗಿ ಅದೆಷ್ಟೋ ಮಂದಿ ಆನ್‍ಲೈನ್ ಆ್ಯಪ್‍ಗಳ ಮೇಲೆ ಅವಲಂಬಿತರಾಗಿದ್ದಾರೆ. ಇತ್ತೀಚಿನ ಜನಪ್ರಿಯ ಡೆಲಿವರಿ ಆ್ಯಪ್‍ನಲ್ಲಿ ಸ್ವಿಗ್ಗಿ ಕೂಡ ಒಂದು. ತಮಗೆ ಬೇಕಾದಂತಹ ವಸ್ತುಗಳನ್ನು ಈ ಆ್ಯಪ್ ಮೂಲಕ ಜನ ಆರ್ಡರ್ ಮಾಡಿ ತಮ್ಮ ಮನೆಯ ಬಾಗಿಲಿಗೆ ತರಿಸಿಕೊಳ್ಳುವುದರ ಮೂಲಕ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತಾರೆ. ಸಾಮಾನ್ಯವಾಗಿ ಸ್ವಿಗ್ಗಿ ಇರುವುದು ರುಚಿ ರುಚಿಯಾದ ಊಟವನ್ನು ಆರ್ಡರ್ ಮಾಡಿ ತಿನ್ನುವುದಕ್ಕೆ, ಆದರೆ ಮುಂಬೈ ಜನ ಮಾತ್ರ ತಿನ್ನುವುದನ್ನು ಬಿಟ್ಟು ಬೇರೆ ಕೆಲಸವನ್ನೇ ಮಾಡುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಜನ ಈಗ ಕೇಳಲು ಆರಂಭಿಸಿದ್ದಾರೆ.

    ಹೌದು ಇತ್ತೀಚೆಗೆ ಸ್ವಿಗ್ಗಿ ಡೆಲಿವರಿ ಆ್ಯಪ್ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈ ಸೇರಿದಂತೆ ಮೆಟ್ರೋ ನಗರಗಳಲ್ಲಿ ವಾಸಿಸುವ ಜನರು ಇನ್‍ಸ್ಟಾಮಾರ್ಟ್ ಅನ್ನು ಹೆಚ್ಚು ಬಳಸುತ್ತಾರೆ ಎಂದು ಬಹಿರಂಗಪಡಿಸಿದೆ. ಆದರೆ ಮುಂಬೈ ಜನ ಮಾತ್ರ ಕಳೆದ 12 ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ 570 ಪಟ್ಟು ಹೆಚ್ಚು ಕಾಂಡೋಮ್‍ಗಳನ್ನು ಆರ್ಡರ್ ಮಾಡಿದ್ದಾರೆ ಎಂಬುವುದು ತಿಳಿದುಬಂದಿದೆ. ಇದನ್ನೂ ಓದಿ: ಜನಜಂಗುಳಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್ ಅಟ್ಯಾಕ್

    ಸಮೀಕ್ಷೆಯಲ್ಲಿ ಏನಿದೆ?
    * ಕಳೆದ ವರ್ಷ ಏಪ್ರಿಲ್‍ನಿಂದ ಜೂನ್‍ವರೆಗೆ ಐಸ್‍ಕ್ರೀಮ್ ಬೇಡಿಕೆಯು ಶೇಕಡಾ 42 ರಷ್ಟು ಹೆಚ್ಚಾಗಿತ್ತು. ಅದರಲ್ಲಿಯೂ ಹೆಚ್ಚಿನ ಆರ್ಡರ್‌ಗಳು ರಾತ್ರಿ 10 ಗಂಟೆಯ ನಂತರ ಮಾಡಲಾಗಿದೆ ಎಂದು ಹೇಳಿದೆ.
    * ಹೈದರಾಬಾದ್ ಜನರು ಬೇಸಿಗೆಯಲ್ಲಿ ಸುಮಾರು 27,000 ತಾಜಾ ಜ್ಯೂಸ್ ಬಾಟಲಿಗಳನ್ನು ಆರ್ಡರ್ ಮಾಡಿದ್ದಾರೆ.
    * ಗ್ರಾಹಕರು ಸ್ವಿಗ್ಗಿಯಲ್ಲಿ 2021ರಲ್ಲಿ 5 ಕೋಟಿ ಮೊಟ್ಟೆಗಳನ್ನು ಆರ್ಡರ್ ಮಾಡಿದ್ದಾರೆ.
    * ಸೋಯಾ ಮತ್ತು ಓಟ್ ಡೈರಿ ಮಿಲ್ಕ್ ಅನ್ನು ಹೆಚ್ಚಾಗಿ ಬೆಂಗಳೂರಿನ ಜನರು ಆರ್ಡರ್ ಮಾಡಿದ್ದಾರೆ. ಅದರಲ್ಲಿಯೂ 30 ಮಿಲಿಯನ್ ಆರ್ಡರ್‌ಗಳು ಬೆಂಗಳೂರು ಮತ್ತು ಮುಂಬೈನಲ್ಲಿ ಬೆಳಗಿನ ಹೊತ್ತಿನಲ್ಲಿ ಮಾಡಲಾಗುತ್ತಿತ್ತು.
    * ಊಟದ ಸಮಯದಲ್ಲಿ ಹೆಚ್ಚಾಗಿ ಅವಲಕ್ಕಿ ಮತ್ತು ರವೆಯನ್ನು ಬೆಂಗಳೂರು, ಮುಂಬೈ ಮತ್ತು ದೆಹಲಿಯ ನಗರಗಳಲ್ಲಿರುವ ಜನರು ಆರ್ಡರ್ ಮಾಡಿದ್ದರು.
    * ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹಸಿರು ಮೆಣಸಿನಕಾಯಿಗೆ ಹೆಚ್ಚಿನ ಆರ್ಡರ್‌ಗಳಿವೆ ಎಂದು ಮತ್ತೊಂದು ಸಮೀಕ್ಷೆ ಹೇಳಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ತರಕಾರಿ ಟೆಂಡರ್‌ಗಳನ್ನು ಸ್ವಿಗ್ಗಿ ಪಡೆದುಕೊಂಡಿದೆ.

    ಈ ನಡುವೆ ಸ್ವಿಗ್ಗಿಯ ಮತ್ತೊಂದು ಸಮೀಕ್ಷೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮುಂಬೈನಲ್ಲಿ ಕಾಂಡೋಮ್ ಆರ್ಡರ್ 570 ಪಟ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಇದೀಗ ಸ್ವಿಗ್ಗಿ ಇರೋದು ರುಚಿ ರುಚಿಯಾದ ಊಟವನ್ನು ಆನ್‍ಲೈನ್ ಆರ್ಡರ್ ಮಾಡಿ ತಿನ್ನವುದಕ್ಕೆ ಆದರೆ ಮುಂಬೈ ಜನ ತಿನ್ನುವುದನ್ನು ಬಿಟ್ಟು ಬೇರೆ ಕೆಲಸವನ್ನು ಹೆಚ್ಚು ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೊಲೀಸ್, ಬಿಜೆಪಿ ಮುಖಂಡನ ಹೆಸರು ಬರೆದಿಟ್ಟು, ರಮೇಶ್ ಜಾರಕಿಹೊಳಿ ಆಪ್ತ ಆತ್ಮಹತ್ಯೆ

    ಈ ಬಾರಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ದೆಹಲಿಯಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳು, ಬ್ಯಾಂಡೇಜ್‍ಗಳು ಇತ್ಯಾದಿಗಳ ಹೆಚ್ಚು ಆರ್ಡರ್ ಆಗಿದೆ ಸಮೀಕ್ಷೆ ಬಹಿರಂಗಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ವ್ಯಕ್ತಿ ಆಹಾರ ತರೋದು ಬೇಡ- ಸ್ವಿಗ್ಗಿ ಗ್ರಾಹಕನ ಮೆಸೇಜ್ ವೈರಲ್

    ಮುಸ್ಲಿಂ ವ್ಯಕ್ತಿ ಆಹಾರ ತರೋದು ಬೇಡ- ಸ್ವಿಗ್ಗಿ ಗ್ರಾಹಕನ ಮೆಸೇಜ್ ವೈರಲ್

    ಹೈದಾರಾಬಾದ್: ವ್ಯಕ್ತಿಯೊಬ್ಬ ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡಿದಲ್ಲದೆ, ತನಗೆ ಮುಸ್ಲಿಂ ವ್ಯಕ್ತಿ ಆಹಾರ ತರುವುದು ಬೇಡ ಎಂದು ಹೇಳಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಸ್ವಿಗ್ಗಿ ಆರ್ಡರ್ ನ ಸ್ಕ್ರೀನ್‍ಶಾಟ್ ಅನ್ನು ಕಾರ್ಮಿಕರ ಸಂಘಟನೆಯ ಮುಖ್ಯಸ್ಥ ಶೇಕ್ ಸಲಾವುದ್ದೀನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ನೀವು ನಿಲುವು ತೆಗೆದುಕೊಳ್ಳಿ ಎಂದು ಸ್ವಿಗ್ಗಿಗೆ ಒತ್ತಾಯಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಂದು ಎಲ್ಲರಿಗೂ ಆಹಾರವನ್ನು ತಲುಪಿಸಲು ನಾವು ಇಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಗ್ರಾಹಕನ ಮೆಸೇಜ್‌ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ಟ್ವಿಟ್‍ನಲ್ಲೇನಿದೆ..?: ಡಿಯರ್ ಸ್ವಿಗ್ಗಿ, ದಯವಿಟ್ಟು ಇಂತಹ ಮತಾಂಧ ವಿನಂತಿಯ ವಿರುದ್ಧ ನಿಲುವು ತೆಗೆದುಕೊಳ್ಳಿ. ನಾವು (ವಿತರಣಾ ಕೆಲಸಗಾರರು) ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರಿಗೂ ಆಹಾರವನ್ನು ತಲುಪಿಸಲು ಇಲ್ಲಿದ್ದೇವೆ. ಮಜಬ್ ನಹೀ ಸಿಖಾತಾ ಆಪಾಸ್ ಮೇ ಬೈರ್ ರಖ್ನಾ ಎಂದು ಸಲಾವುದ್ದೀನ್ ಎಂದು ತಿಳಿಸಿದ್ದಾರೆ. ಈ ವಿವಾದಕ್ಕೆ ಸ್ವಿಗ್ಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: 15 ನಿಮಿಷದಲ್ಲಿ ಸೈಕಲಿನಲ್ಲಿ ಟೀ ತಂದುಕೊಟ್ಟ ಡೆಲಿವರಿ ಬಾಯ್‍ಗೆ ಐಟಿ ಉದ್ಯೋಗಿಯಿಂದ ಬೈಕ್ ಗಿಫ್ಟ್..!

    ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಈ ಟ್ವೀಟ್‌ಗೆ ಆಕ್ರೋಶ ಹೊರಹಾಕಿದ್ದು, ಕಾರ್ಮಿಕರು ಧರ್ಮದ ಹೆಸರಿನಲ್ಲಿ ಇಂತಹ ಕಟುವಾದ ಮತಾಂಧತೆಯನ್ನು ಎದುರಿಸುತ್ತಿರುವುದನ್ನು ಪ್ಲಾಟ್‍ಫಾರ್ಮ್ ಕಂಪನಿಗಳು ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಕಂಪನಿಗಳು ಯಾವ ಕ್ರಮ ತೆಗೆದುಕೊಳ್ಳುತ್ತವೆ ಎಂದು  ಸ್ವಿಗಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್- ಸ್ವಿಗ್ಗಿ ವಿರುದ್ಧ ದೂರು

    ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್- ಸ್ವಿಗ್ಗಿ ವಿರುದ್ಧ ದೂರು

    ಚೆನ್ನೈ: ವ್ಯಕ್ತಿಯೋರ್ವ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದ ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್‍ಗಳು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆತ ಫುಡ್ ಡೆಲಿವರಿ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.

    ಕೋ ಶೇಶಾ ಎಂಬ ತಮಿಳು ಗೀತೆ ರಚನಕಾರರು ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದಾರೆ. ಶೇಷಾ ಅವರು ಸಸ್ಯಹಾರಿಯಾಗಿದ್ದು, ಗೋಬಿ ಮಂಚೂರಿ ವಿತ್ ಕಾರ್ನ್ ಫ್ರೈಡ್ ರೈಸ್‍ನ್ನು ಆರ್ಡರ್ ಮಾಡಿದ್ದರು. ಆದರೆ ಆ ತಿಂಡಿಯಲ್ಲಿ ಅವರಿಗೆ ಚಿಕನ್ ಪೀಸ್ ಇರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಅವರು ಸ್ವಿಗ್ಗಿಯು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಘಟನೆ ಸಂಬಂಧಿಸಿ ಸ್ವಿಗ್ಗಿ ಅವರು ಕ್ಷಮೆಯಾಚಿಸಿ 70 ರೂ. ಪರಿಹಾರವನ್ನು ಅಷ್ಟೇ ನೀಡಿದೆ ಎಂದು ಆರೋಪಿಸಿದ್ದಾರೆ.

    ಘಟನೆಗೆ ಸಂಬಂಧಿಸಿ ಪರ ವಿರೋಧಗಳೆರಡೂ ಚರ್ಚೆ ಆಗುತ್ತಿದ್ದು, ಅನೇಕರು ನಾನ್‍ವೆಜ್ ರೆಸ್ಟೋರೆಂಟ್‍ನಿಂದ ಏಕೆ ಆರ್ಡರ್ ಮಾಡಿದರು. ಈ ರೀತಿ ದೂರು ನೀಡುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳಗಳು – ರೆಸ್ಟೋರೆಂಟ್ ವಿರುದ್ಧ ಮಹಿಳೆ ದೂರು

    ಇತ್ತೀಚೆಗಷ್ಟೇ ಜನಪ್ರಿಯ ರೆಸ್ಟೋರೆಂಟ್‍ನಲ್ಲಿ ಆರ್ಡರ್ ಮಾಡಿದ್ದ ಊಟದಲ್ಲಿ ಹುಳುಗಳು ಕಂಡು ಬಂದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಅಮೆರಿಕದಲ್ಲಿ ತಿರಂಗಾ ರ‍್ಯಾಲಿ – ಗಮನಸೆಳೆದ ಬಾಬಾ ಬುಲ್ಡೋಜರ್

    Live Tv
    [brid partner=56869869 player=32851 video=960834 autoplay=true]

  • ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ಮುಂಬೈ: ಇತ್ತೀಚೆಗಷ್ಟೇ ಕುದುರೆ ಸವಾರಿ ಮಾಡಿ ಫುಡ್ ಡೆಲವರಿ ಮಾಡಿದ್ದ ವ್ಯಕ್ತಿಯೊಬ್ಬ ಭಾರೀ ವೈರಲ್ ಆಗಿದ್ದ. ಈ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ಫುಡ್ ಡೆಲಿವರಿ ಮಾಡಿದವನ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿತ್ತು. ಇದೀಗ ಈ ವ್ಯಕ್ತಿ ಯಾರೆಂದು ಪತ್ತೆ ಆಗಿದ್ದಾನೆ.

    ಈ ಬಗ್ಗೆ ಸ್ವಿಗ್ಗಿ ಟ್ವೀಟ್ ಮಾಡಿದ್ದು, ಕುದುರೆ ಹಾಗೂ ಯುವಕರಿಬ್ಬರು ಪತ್ತೆ ಆಗಿದ್ದಾರೆ ಎನ್ನುವ ಮೂಲಕ ಸ್ಪಷ್ಟೀಕರಣ ನೀಡಿದೆ. ಕುದುರೆಯಲ್ಲಿದ್ದ ಯುವಕನ ಹೆಸರು ಸುಶಾಂತ್(17). ಆದರೆ ಈತ ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ. ಈತನಿಗೆ ವಿಚಿತ್ರ ಕಾಯಿಲೆಯೊಂದಿದೆ. ಯಾವುದಾದರೂ ವಸ್ತುವನ್ನು ತೆಗೆದುಕೊಂಡರೆ ಅದನ್ನು ವಾಪಸ್ ಕೊಡುವುದನ್ನು ಮರೆತು ಬಿಡುತ್ತಾನೆ. ಇದೇ ರೀತಿಯೇ ಸ್ವಿಗ್ಗಿ ಬ್ಯಾಗ್‍ನ್ನು ತೆಗೆದುಕೊಂಡಿದ್ದ. ಆದರೆ ಇದೇ ರೀತಿ ಮರೆತಿದ್ದಾನೆ.

    ಪ್ರಸ್ತುತ ಸುಶಾಂತ್ ಮದುವೆ ಕಾರ್ಯಕ್ರಮಗಳಿಗೆ ಕುದುರೆಯನ್ನು ಕಳುಹಿಸುವ ಏರ್ಪಾಟು ಮಾಡುವವನಾಗಿದ್ದಾನೆ. ಹಾಗೆಯೇ ಆ ಸ್ವಿಗ್ಗಿ ಬ್ಯಾಗ್‍ನಲ್ಲಿ ತಿಂಡಿಯ ಬದಲಿಗೆ ಮದುವೆ ಮೆರವಣಿಗೆಗಳಲ್ಲಿ ಕುದುರೆಗಳ ಮೇಲೆ ಹಾಕುವ ಕಸೂತಿ ಬಟ್ಟೆ ಹಾಗೂ ಪರಿಕರಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಎಂದು ಕಂಪನಿ ತಿಳಿಸಿದೆ. ಜೊತೆಗೆ ವೀಡಿಯೋವನ್ನು ಚಿತ್ರೀಕರಿಸಿದ ಅವಿ ಹಾಗೂ ಆತನ ಸ್ನೇಹಿತರಿಗೆ ಬಹುಮಾನವನ್ನು ನೀಡಿದೆ. ಇದನ್ನೂ ಓದಿ: ಕಾರು ಹೊಳೆಗೆ ಬಿದ್ದ ಪ್ರಕರಣ- ನಾಪತ್ತೆಯಾಗಿದ್ದ ಇಬ್ಬರ ಮೃತದೇಹವೂ ಪತ್ತೆ

    ಇತ್ತೀಚೆಗಷ್ಟೇ ಸ್ವಿಗ್ಗಿ ಕಂಪನಿಯ ಬ್ಯಾಗ್ ಹಾಕಿಕೊಂಡು ಕುದುರೆ ಸವಾರಿ ಮಾಡಿ ಫುಡ್ ಡೆಲಿವರಿ ಮಾಡಿದವನ ಸುಳಿವು ಕೊಟ್ಟವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಸ್ವಿಗ್ಗಿ ಕಂಪನಿ ಘೋಷಿಸಿತ್ತು. ಮುಂಬೈನಲ್ಲಿ ಮಳೆಯ ನಡುವೆಯೂ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಡೆಲಿವರಿ ಬಾಯ್ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಂಪನಿ ಮನವಿ ಮಾಡಿತ್ತು. ವೈರಲ್ ಆಗಿರುವ ವೀಡಿಯೋದಲ್ಲಿ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂಪನಿ ಹೇಳಿತ್ತು. ಇದನ್ನೂ ಓದಿ: ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    Live Tv
    [brid partner=56869869 player=32851 video=960834 autoplay=true]

  • ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    ಮುಂಬೈ: ಸಾಮಾನ್ಯವಾಗಿ ಬೈಕ್‌ಗಳಲ್ಲಿ ಸಂಚರಿಸಿ ಫುಡ್‌ ಡೆಲಿವರಿ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ್ದಾನೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿದ್ದು, ಇದಕ್ಕೆ ಕಂಪನಿ ಅಚ್ಚರಿ ವ್ಯಕ್ತಪಡಿಸಿದೆ.

    ಡೆಲಿವರಿ ಬಾಯ್‌ ಸುಳಿವು ಕೊಟ್ಟವರಿಗೆ ಬಹುಮಾನ
    ಸ್ವಿಗ್ಗಿ ಕಂಪನಿಯ ಬ್ಯಾಗ್‌ ಹಾಕಿಕೊಂಡು ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದವನ ಸುಳಿವು ಕೊಟ್ಟವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಸ್ವಿಗ್ಗಿ ಕಂಪನಿ ಘೋಷಿಸಿದೆ. ಇದನ್ನೂ ಓದಿ: ಗುಂಡು ಹಾರಿಸಿ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನ ಹತ್ಯೆ

    ಮುಂಬೈನಲ್ಲಿ ಮಳೆಯ ನಡುವೆಯೂ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಡೆಲಿವರಿ ಬಾಯ್‌ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಂಪನಿ ಮನವಿ ಮಾಡಿದೆ. ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂಪನಿ ಹೇಳಿದೆ.

    ಮುಂಬೈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸ್ವಿಗ್ಗಿ ಕಂಪನಿಯ ಬ್ಯಾಗ್‌ ಹಾಕಿಕೊಂಡು ಕುದುರೆ ಸವಾರಿ ಮಾಡಿ ಆರ್ಡರ್‌ ತಲುಪಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ, ಆತನ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ. ಮಾಹಿತಿ ಸಿಕ್ಕರೆ ತಿಳಿಸಿ. ಅಂತಹವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಸ್ವಿಗ್ಗಿ ತಿಳಿಸಿದೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

    ಸ್ವಿಗ್ಗಿ ಕಂಪನಿ ಪೋಸ್ಟ್‌ಗೆ ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ʻನೀವು ಯಾರನ್ನೋ ಹುಡುಕುತ್ತಿದ್ದೀರಿ ಎನಿಸುತ್ತೆʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಈ ವೈರಲ್‌ ವೀಡಿಯೋ ಬಗ್ಗೆ ನೀವೇನು ಹೇಳುತ್ತೀರಿʼ ಎಂದು ಮತ್ತೊಬ್ಬರು ಕಂಪನಿಗೆ ಪ್ರಶ್ನೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ವಿಗ್ಗಿ ಊಟ ತಂದು ಕೊಡದಕ್ಕೆ ಪಿಎಂ, ಸಿಎಂಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್  

    ಸ್ವಿಗ್ಗಿ ಊಟ ತಂದು ಕೊಡದಕ್ಕೆ ಪಿಎಂ, ಸಿಎಂಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್  

    ನವದೆಹಲಿ: ಸ್ವಿಗ್ಗಿಯಲ್ಲಿ ಊಟ ಸರಿಯಾಗಿ ಸಮಯಕ್ಕೆ ಬರಲಿಲ್ಲ ಎಂದರೆ ಕಂಪನಿಗೆ ಕರೆ ಮಾಡಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ದೂರುವುದನ್ನು ನಾವು ನೋಡಿದ್ದೆವೆ. ಆದರೆ ಬೆಂಗಾಳಿ ಸಿನಿಮಾ ಸೂಪರ್ ಸ್ಟಾರ್  ಪ್ರಸೂನ್‌ಜಿತ್ ಚಟರ್ಜಿ  , ಸ್ವಿಗ್ಗಿ ವಿರುದ್ಧ ಪ್ರಧಾನಿ ಮೋದಿ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾಗೆ ಬಹಿರಂಗ ಪತ್ರ ಬರೆದಿದ್ದಾರೆ.

    ತಾವು ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲ. ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಮೋದಿ ಹಾಗೂ ಮಮತಾ ಅವರಿಗೆ ಬರೆದಿರುವ ಪತ್ರ ಇದಾಗಿದೆ.

    ಪತ್ರದಲ್ಲಿ ಏನಿದೆ?:
    ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಬ್ಬದ ಶುಭಾಶಯಗಳು. ನೀವು ಚೆನ್ನಾಗಿರುತ್ತೀರಿ ಎಂದು ಭಾವಿಸುತ್ತೇವೆ. ನಾನು ಇತ್ತೀಚೆಗೆ ಎದುರಿಸಿದ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರುತ್ತೇನೆ. ನವೆಂಬರ್ 3 ರಂದು ನಾನು ಆಹಾರ ವಿತರಣಾ ಅಪ್ಲಿಕೇಶನ್ ಆಗಿರುವ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದ್ದೆ. ಆದರೆ ನಾನು ಆಹಾರವನ್ನು ಸ್ವೀಕರಿಸಲಿಲ್ಲ. ಸ್ವಿಗ್ಗಿ ಅವರಿಗೆ ನಾನು ಆಗಿರುವ ಸಮಸ್ಯೆಯನ್ನು ಹೇಳಿಕೊಂಡೆ. ಅವರು ಆರ್ಡರ್ ಪ್ರಿಪೇಯ್ಡ್ ಆಗಿರುವುದರಿಂದ ಅವರು ನನಗೆ ಹಣವನ್ನು ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್

    ಆದರೆ ಮುಂದೆ ಯಾರಾದರೂ ಈ ಸಮಸ್ಯೆಯನ್ನು ಎದುರಿಸಬಹುದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಈ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೆನೆ. ಯಾರಾದರೂ ತಮ್ಮ ರಾತ್ರಿಯ ಊಟಕ್ಕೆ ಈ ಫುಡ್ ಅಪ್ಲಿಕೇಶನ್‍ಗಳನ್ನು ಅವಲಂಬಿಸಿದ್ದರೆ ಏನು? ಅವರು ಹಸಿವಿನಿಂದ ಇರುತ್ತಾರೆಯೇ? ಅಂತಹ ಅನೇಕ ಸಂದರ್ಭಗಳು ಇರಬಹುದು. ಹೀಗೆ ಈ ಸಮಸ್ಯೆ ಕುರಿತಾಗಿ ಮಾತನಾಡುವುದು ಅಗತ್ಯ ಎಂದು ನನಗೆ ಅನಿಸಿತು ಎಂದು ಬರೆದುಕೊಂಡು ಮೋದಿ ಮತ್ತು ಮಮತಾ ಅವರು ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್‍ಗೆ ಹೋಗ್ತಿದ್ರು?