Tag: swift

  • ಮದುವೆ ಮುಗಿಸಿ ಬರುತ್ತಿದ್ದ ಕಾರು ಮರಕ್ಕೆ ಡಿಕ್ಕಿ – 6 ಮಂದಿ ದುರ್ಮರಣ

    ಮದುವೆ ಮುಗಿಸಿ ಬರುತ್ತಿದ್ದ ಕಾರು ಮರಕ್ಕೆ ಡಿಕ್ಕಿ – 6 ಮಂದಿ ದುರ್ಮರಣ

    ಬೆಳಗಾವಿ: ಮರಕ್ಕೆ (Tree) ಕಾರು (Car) ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ನಡೆದಿದೆ.

    ಮಹರಾಷ್ಟ್ರ (Maharashtra) ಪಾಸಿಂಗ್ ಇರುವ ಸ್ವಿಫ್ಟ್ (Swift) ಕಾರು ಮದುವೆ ಮುಗಿಸಿ ಮರಳುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿರಂತರ ಅತ್ಯಾಚಾರದಿಂದ ಅಪ್ರಾಪ್ತೆ ಪ್ರೆಗ್ನೆಂಟ್- ವೃದ್ಧ ಅರೆಸ್ಟ್

    ಒಂದೇ ಕಾರಿನಲ್ಲಿ ಒಂಬತ್ತು ಜನ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಮೃತರು ಧಾರವಾಡ (Dharwad) ನಗರ ಮೂಲದವರಾಗಿದ್ದು, ಹೆಸರು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: IPL ಸ್ಟಾರ್‌ ಜೊತೆ ಗೆಳೆತನ ಹೊಂದಿದ್ದ ರೂಪದರ್ಶಿ ನಿಗೂಢ ಸಾವು – ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

  • ರಷ್ಯಾದ SWIFT ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    ರಷ್ಯಾದ SWIFT ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    ಕೀವ್: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ತಡೆಯುವ ಉದ್ದೇಶದಿಂದ ಜರ್ಮನಿ ಮತ್ತು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು SWIFT ಜಾಗತಿಕ ಪಾವತಿ ವ್ಯವಸ್ಥೆಯಿಂದ ರಷ್ಯಾವನ್ನು ಕಡಿತಗೊಳಿಸಲು ಒಪ್ಪಿಕೊಂಡಿವೆ ಎಂದು ಜರ್ಮನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

    ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಕೆನಡಾ, ಇಟಲಿ, ಗ್ರೇಟ್ ಬ್ರಿಟನ್ ಮತ್ತು ಯುರೋಪಿಯನ್ ಕಮಿಷನ್‍ಗಳು ಈ ನಿರ್ಧಾರವನ್ನು ಒಪ್ಪಿಕೊಂಡಿದ್ದು, ರಷ್ಯಾದ ಕೇಂದ್ರ ಬ್ಯಾಂಕ್‍ಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ಇದು ಶ್ರೀಮಂತ ರಷ್ಯನ್ನರು ಮತ್ತು ಅವರ ಕುಟುಂಬಗಳಿಗೆ ನೀಡಿರುವ ಗೋಲ್ಡನ್ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಉಕ್ರೇನ್ ವಿರುದ್ಧ ಯುದ್ಧವನ್ನು ಮಾಡುತ್ತಿರುವ ರಷ್ಯಾವನ್ನು ಬೆಂಬಲಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸುತ್ತದೆ.  ಇದನ್ನೂ ಓದಿ: ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ

    ಉಕ್ರೇನ್ ಮತ್ತು ಯುರೋಪಿಯನ್ ಶಾಂತಿ ಸುವ್ಯವಸ್ಥೆಯ ಮೇಲೆ ರಷ್ಯಾ ತನ್ನ ದಾಳಿಯನ್ನು ಕೊನೆಗೊಳಿಸದಿದ್ದರೆ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಇತರೆ ದೇಶಗಳು ವಾರ್ನ್ ಮಾಡಿದೆ. ಇದನ್ನೂ ಓದಿ: ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

  • 566 ಸ್ವಿಫ್ಟ್, 713 ಡಿಸೈರ್ ಹಿಂಪಡೆದ ಮಾರುತಿ ಕಂಪೆನಿ

    566 ಸ್ವಿಫ್ಟ್, 713 ಡಿಸೈರ್ ಹಿಂಪಡೆದ ಮಾರುತಿ ಕಂಪೆನಿ

    ನವದೆಹಲಿ: ದೇಶದ ನಂಬರ್ ಒನ್ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ತನ್ನ ನೂತನ ಮಾದರಿಯ ಸ್ವಿಫ್ಟ್ ಹಾಗೂ ಡಿಸೈರ್ ನ ಒಟ್ಟು 1,279 ಕಾರುಗಳನ್ನು ಹಿಂಪಡೆದುಕೊಂಡಿದೆ.

    ನೂತನ ಸ್ವಿಫ್ಟ್ ಹಾಗೂ ಡಿಸೈರ್ ಕಾರುಗಳಲ್ಲಿ ಏರ್ ಬ್ಯಾಗ್ ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ಕಂಪೆನಿ ತನ್ನ ವೆಬ್‍ಸೈಟ್ ನಲ್ಲಿ ತಿಳಿಸಿದೆ.

    ನೂತನ ಮಾದರಿಯ ಸ್ವಿಫ್ಟ್ ಮಾದರಿಯ 566 ಹಾಗೂ ಡಿಸೈರ್ ಮಾದರಿಯ 713 ವಾಹನಗಳನ್ನು ಹಿಂಪಡೆದುಕೊಂಡಿದೆ. ಅಲ್ಲದೇ ಇದೇ ವರ್ಷ ಮೇ ತಿಂಗಳ 7 ರಿಂದ ಜುಲೈ ತಿಂಗಳ 5 ನೇ ತಾರೀಖಿನವರೆಗೂ ಮಾರಾಟವಾದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ವಾಹನಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?

    ಇಂದಿನಿಂದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ಗ್ರಾಹಕರು ಮಾರುತಿ ಸುಜುಕಿಯ ಎಲ್ಲಾ ಡೀಲರ್ ಗಳ ಬಳಿ ತಮ್ಮ ವಾಹನಗಳನ್ನು ನೀಡಿ ತಾಂತ್ರಿಕ ದೋಷಗಳನ್ನು ಉಚಿತವಾಗಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

    ಈ ಹಿಂದೆ ಮಾರುತಿ ಕಂಪೆನಿ ತನ್ನ ನೂತನ ಸ್ವಿಫ್ಟ್ ಹಾಗೂ ಬಲೆನೊ ಮಾದರಿಗಳಲ್ಲಿ ಬ್ರೇಕ್ ಗೆ ಸಂಬಂಧಿತ ತಾಂತ್ರಿಕ ದೋಷದಿಂದಾಗಿ ಸುಮಾರು 52,686 ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿ ಕೊಟ್ಟಿತ್ತು. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಕಂಪೆನಿಯು ಉತ್ಪಾದನಾ ವೇಳೆ ಉಂಟಾದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಯೋಜನೆಯನ್ನು 2012ರ ಜುಲೈ ತಿಂಗಳಿನಿಂದ ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಕಂಪೆನಿಯು ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿಕೊಡುತ್ತಾ ಬಂದಿದೆ.

  • ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಹೊರಕ್ಕೆ ಎಸೆದ್ರು!

    ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಹೊರಕ್ಕೆ ಎಸೆದ್ರು!

    ಚಂಡೀಗಢ: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಮೂವರು ಕಾಮುಕರು ಗ್ಯಾಂಗ್ ರೇಪ್ ಎಸಗಿ ಕಾರಿನಿಂದ ರಸ್ತೆಗೆಸೆದ ಆರೋಪವೊಂದು ಕೇಳಿಬಂದಿದೆ.

    ಈ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಹಿಳೆ ಮೂಲತಃ ರಾಜಸ್ತಾನದ ಭರತ್‍ಪುರದವರಾಗಿದ್ದು, ಸಂಬಂಧಿಕರ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಏನಿದು ಪ್ರಕರಣ?: ರಾಜಸ್ಥಾನ ಮೂಲದ ಮಹಿಳೆ ಉತ್ತರಪ್ರದೇಶದ ಸೋಹ್ನಾ ಪ್ರದೇಶದಲ್ಲಿರುವ ತನ್ನ ಸಂಬಂಧಿಕ ಮನೆಗೆ ಕಳೆದ ವಾರ ಬಂದಿದ್ದರು. ಅಂತೆಯೇ ಮಹಿಳೆ ಕಳೆದ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸುಮಾರು 8.30ರ ವೇಳೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ಕಾಮುಕರು ಚಲಿಸುತ್ತಿದ್ದ ಕಾರಿನಲ್ಲೇ ಗ್ಯಾಂಗ್ ರೇಪ್ ಎಸಗಿದ್ದಾರೆ. ಬಳಿಕ ನೊಯ್ಡಾ ಬಳಿ ಕಾರಿನಿಂದ ರಸ್ತೆಗೆಸೆದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

    ಮಹಿಳೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

    ಪ್ರಕರಣ ಸಂಬಂಧ ಯುವತಿಯ ವೈದ್ಯಕೀಯ ಪರೀಕ್ಷೆ ಈಗಾಗಲೇ ನಡೆದಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಪೊಲಿಸರ ಕೈ ಸೇರಿದ ಬಳಿಕ ಆರೋಪಿಗಳ ಪತ್ತೆಗೆ ಬಲೆ ಬೀಸಲಿದ್ದಾರೆ ಎಂದು ವರದಿಯಾಗಿದೆ.

    ಚಲಿಸುತ್ತಿರುವ ಕಾರಿನಲ್ಲಿ ಗ್ಯಾಂಗ್ ರೇಪ್ ಮಾಡಿರುವುದು ಇದು ಮೊದಲ ಬಾರಿಯೇನಲ್ಲ. ಕಳೆದ ತಿಂಗಳು ತಾಯಿ ಮತ್ತು ಮಗಳು ಮನೆಗೆ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದರು. ಮೂರು ಜನ ಕಾಮುಕರು ರಿಕ್ಷಾವನ್ನು ತಡೆದು ಮಗುವನ್ನು ಹೊರಗೆ ಎಸೆದು ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಲಾಗಿತ್ತು. ಹಾಗೂ ಕೆಲ ದಿನಗಳ ಹಿಂದೆ ಗುರ್‍ಗಾಂವ್‍ನಲ್ಲಿ 22 ವರ್ಷದ ಯುವತಿಯನ್ನು ಚಲಿಸುತ್ತಿರುವ ಕಾರಿನಲ್ಲಿ ಅತ್ಯಾಚಾರ ಮಾಡಿ ಮನೆಯ ಎದುರು ಎಸೆದು ಹೋಗಿರುವ ಘಟನೆ ನಡೆದಿತ್ತು.