Tag: sweet

  • ಪ್ರವಾಹದಿಂದ ಪಾರು ಮಾಡುವಂತೆ 108 ಬಗೆಯ ಸಿಹಿ ಮಾಡಿ ದೇವಿಗೆ ವಿಶೇಷ ಪೂಜೆ

    ಪ್ರವಾಹದಿಂದ ಪಾರು ಮಾಡುವಂತೆ 108 ಬಗೆಯ ಸಿಹಿ ಮಾಡಿ ದೇವಿಗೆ ವಿಶೇಷ ಪೂಜೆ

    ಕೋಲಾರ: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಪ್ರವಾಹಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಲ್ಲಿ ಅನಾಹುತದಿಂದ ಪಾರು ಮಾಡುವಂತೆ ಇಲ್ಲೊಂದು ದೇವಾಲಯದಲ್ಲಿ ವಿಭಿನ್ನ ರೀತಿಯಲ್ಲಿ ಪೂಜೆ ಸಲ್ಲಿಸಲಾಗಿದೆ.

    ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಆದಿಪರಾಶಕ್ತಿ ದೇವಾಲಯದಲ್ಲಿ ವಿಶೇಷ ರೀತಿಯ ತಿಂಡಿ ತಿನಿಸುಗಳು ಮಾಡಿ ಪೂಜೆ ಮಾಡಲಾಗಿದೆ. ವಿವಿಧ ಬಗೆಯ ಮೈಸೂರ್ ಪಾಕ್, ಲಾಡು, ಜಹಂಗೀರ್, ಜಿಲೇಬಿ, ಚಕ್ಕುಲಿ, ನಿಪ್ಪಟ್, ಪುರಿಉಂಡೆಯಂತಹ 108 ಬಗೆಯ ತಿಂಡಿಗಳನ್ನು ಮಾಡಲಾಗಿತ್ತು. ಅದನ್ನು ದೇವರಿಗೆ ಅರ್ಪಿಸಿ ನಂತರ ಭಕ್ತರಿಗೂ ವಿತರಿಸಲಾಗಿದೆ.

    ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಜನರಿಗೆ ದೇವರು ಶಕ್ತಿ ನೀಡಲಿ. ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳು ಮತ್ತೆ ಮೊದಲಿನಂತಾಗಲಿ ಎಂದು ಈ ಬಾರಿ ವರಮಹಾಲಕ್ಷ್ಮಿಯಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಪ್ರತಿ ವರ್ಷದಂತೆ ಗ್ರಾಮದ ಹೊರವಲಯದಲ್ಲಿರುವ ಆದಿಪರಾಶಕ್ತಿಯ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಯನ್ನ ಮಾಡಲಾಗಿದೆ. ಇಲ್ಲಿ ಕಳೆದ 22 ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆಂದು 108 ಬಗೆಯ ಸಿಹಿ ತಿಂಡಿಗಳನ್ನು ಮಾಡಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲಾಗಿದೆ ಎಂದು ದೇವಾಲಯದ ಅರ್ಚಕರು ತಿಮ್ಮಪ್ಪಸ್ವಾಮಿ ತಿಳಿಸಿದ್ದಾರೆ.

    ತಿಮ್ಮಪ್ಪಸಾಮಿ ಅವರಿಗೆ ತಮ್ಮ ಭೂಮಿಯಲ್ಲಿ ಸಿಕ್ಕ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ 22 ವರ್ಷಗಳಿಂದ ಈ ಜಾಗದಲ್ಲಿ ಆದಿಪರಾಶಕ್ತಿ ದೇವರ ಪ್ರತಿಷ್ಠಾಪನೆ ಮಾಡಿ, ದೇವಾಲಯ ನಿರ್ಮಾಣ ಮಾಡಲಾಗಿದೆ. ಅಂದಿನಿಂದ ಈ ದೇವಾಲಯದಲ್ಲಿ ಹಲವು ವಿಶೇಷ ಪೂಜೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಹಾಗಾಗಿ ಇಂದಿಗೂ ಇಲ್ಲಿಗೆ ದೂರದ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಸುತ್ತಮುತ್ತಲ ಹಳ್ಳಿಗಳ ಜನರು ಸೇರಿದಂತೆ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಜನ ಬರುತ್ತಾರೆ.

    ಹಾಗಾಗಿನೇ ಇಲ್ಲಿ ಪ್ರತಿ ವರ್ಷದಂತೆ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುವ ಮೂಲಕ ಮಳೆ ಹಾನಿಯಿಂದ ನೊಂದವರಿಗೆ ಕಷ್ಟಗಳನ್ನ ಎದುರಿಸುವ ಶಕ್ತಿಕೊಡು ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಲಾಗಿದೆ. ಇಲ್ಲಿನ ತಿಮ್ಮಪ್ಪ ಸ್ವಾಮೀಜಿ ಹಲವಾರು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ಕೋಲಾರ ಜಿಲ್ಲೆಗೆ ಒಳ್ಳೆಯದಾಗಲಿ ಎಂದು ಇಲ್ಲಿನ ಗುಹೆಯಲ್ಲಿ ತಪ್ಪಸ್ಸು ಮಾಡುತ್ತಿದ್ದಾರೆ ಎಂದು ಮುಳಬಾಗಲು ತಹಶೀಲ್ದಾರ್ ಪ್ರವೀಣ್ ಹೇಳಿದ್ದಾರೆ.

  • ಸಿಹಿ ಹಂಚಿ ಹುತಾತ್ಮ ಯೋಧನ ಪತ್ನಿಯಿಂದ ಸಂಭ್ರಮ

    ಸಿಹಿ ಹಂಚಿ ಹುತಾತ್ಮ ಯೋಧನ ಪತ್ನಿಯಿಂದ ಸಂಭ್ರಮ

    ಮಂಡ್ಯ: ಪಾಕಿಸ್ತಾನ ತನ್ನ ವಶದಲ್ಲಿರಿಸಿಕೊಂಡಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸತಾಯಿಸಿ ಸತಾಯಿಸಿ ಕೊನೆಗೂ ಶುಕ್ರವಾರ ರಾತ್ರಿ ಭಾರತಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಅಭಿನಂದನ್ ಭಾರತಕ್ಕೆ ಮರಳಿದ ಹಿನ್ನೆಲೆಯಲ್ಲಿ ಹುತಾತ್ಮ ಯೋಧ ಗುರು ತವರಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಗುರು ಪತ್ನಿ ಕಲಾವತಿ, ಸಹೋದರರಾದ ಆನಂದ್, ಮಧು ಸೇರಿದಂತೆ ನೂರಾರು ಜನರು ಒಟ್ಟಾಗಿ ಭಾಗಿಯಾಗಿ ಅಭಿನಂದನ್ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಅಭಿನಂದನ್ ಭಾವ ಚಿತ್ರ ಹಿಡಿದು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ `ಟೈಗರ್ ಅಭಿನಂದನ್ ಸರ್’ ಎಂದು ಜೈಕಾರ ಹಾಕಿದ್ದಾರೆ.

    ಅಭಿನಂದನ್ ವಾಪಸ್ ಬಂದಿದ್ದಕ್ಕೆ ಖುಷಿ ಇದೆ. ನಮ್ಮ ಸೇನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸೇನೆಗೆ ಒಳಿತಾಗಲಿ, ಅವರಿಗೆ ಶಕ್ತಿ, ಧೈರ್ಯ ಕೊಟ್ಟು ಕಾಪಾಡಲಿ. ಪಾಕಿಸ್ತಾನದವರನ್ನು ಒಬ್ಬರನ್ನು ಉಳಿಸಬಾರದು ಎಂದು ಟೈಗರ್ ಅಭಿನಂದನ್ ಅವರಿಗೆ ಕಲಾವತಿ ಸೆಲ್ಯೂಟ್ ಮಾಡಿದ್ದಾರೆ.

    ಭಾರತದ ಕೆಚ್ಚೆದೆಯ ವೀರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ 60 ಗಂಟೆಗಳ ಬಳಿಕ ತಾಯ್ನಾಡಿಗೆ ಸುರಕ್ಷಿತರಾಗಿ ವಾಪಸ್ ಆಗಿದ್ದಾರೆ. ಪಾಕಿಸ್ತಾನಿ ಗಡಿ ಅಧಿಕಾರಿಗಳು ಕಾಗದ ಪತ್ರ ಪರಿಶೀಲನೆಗೆ ಸುಧೀರ್ಘ ಸಮಯ ತೆಗೆದುಕೊಂಡಿದ್ದೇ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ.

    https://www.youtube.com/watch?v=ArvRnqPs81s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಟಾಕಿ ಸಿಡಿಸಿ, ಸಿಹಿ ಹಂಚಿ ರಾಜ್ಯದ ಜನತೆಯಿಂದ ಸಂಭ್ರಮವೋ ಸಂಭ್ರಮ

    ಪಟಾಕಿ ಸಿಡಿಸಿ, ಸಿಹಿ ಹಂಚಿ ರಾಜ್ಯದ ಜನತೆಯಿಂದ ಸಂಭ್ರಮವೋ ಸಂಭ್ರಮ

    ಬೆಂಗಳೂರು: ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ಇಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಮೇಲೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿ 200ಕ್ಕೂ ಹೆಚ್ಚು ಉಗ್ರರನ್ನು ಉಡೀಸ್ ಮಾಡಿದೆ. ಈ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.

    ಗಂಗಾವತಿಯ ಶ್ರೀ ರಾಘವೇಂದ್ರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆ ಮುಖಾಂತರ ವಿಜಯದ ಘೊಷಣೆ ಕೂಗುತ್ತ ಸಾಗಿದ್ದಾರೆ. ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಪಟಾಕಿ ಸಿಡಿಸಿ ಉಗ್ರರ ದಾಳಿಗೆ ಪ್ರತಿಕಾರ ತಿರೀಸಿಕೊಂಡಿದಕ್ಕೆ ಹರ್ಷೊದ್ಘಾರ ವ್ಯಕ್ತಪಡಿಸಿದ್ದಾರೆ. ಇನ್ನೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸವನ್ನು ಹಂಚಿಕೊಂಡರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪಾಕಿಸ್ತಾನವನ್ನು ಬಗ್ಗು ಬಡೆದಿದ್ದಾರೆ. ಕೂಡಲೇ ಮೋದಿ ಯುದ್ಧ ಘೋಷಿಸಿ ಪಾಕಿಸ್ತಾನ ಉಗ್ರರ ತಾಣಗಳನ್ನು ಉಡೀಸ್ ಮಾಡಿ ತಕ್ಕ ಉತ್ತರ ನೀಡ ಬೇಕು ಎಂದಿದ್ದಾರೆ. ಎರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇತ್ತ ಬೆಳಗಾವಿ ಕಪಿಲೇಶ್ವರ ದೇವಸ್ಥಾನದ ಆಡಳಿತ ವತಿಯಿಂದ ಉಗ್ರರ ಮೇಲೆ ಭಾರತೀಯ ಸೈನ್ಯ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಸ್ಥಳೀಯ ಜನರು, ಆಟೋ ಚಾಲಕರು ದೇವಸ್ಥಾನದ ಮುಂಭಾಗದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಮೈಸೂರು ಪ್ರಜ್ಞಾವಂತ ನಾಗರೀಕ ವೇದಿಕೆಯವರು ಅವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

    ಮೈಸೂರಿನ ಅಗ್ರಹಾರ ವೃತ್ತದಲ್ಲಿ ತ್ರಿವಣ ಧ್ವಜ ಹಿಡಿದು ಯೋಧರ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಮೋದಿ ಭಾವಚಿತ್ರ ಹಿಡಿದು ಪ್ರಜ್ಞಾವಂತ ಕಾರ್ಯಕರ್ತರು ಸಂಭ್ರಮಿಸಿದ್ದು, ಕಾಶ್ಮೀರ ನಮ್ಮದು ನಮ್ಮದು ಎಂದು ಘೋಷಣೆ ಕೂಗಿದ್ದಾರೆ. ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಭಾರತೀಯ ಸೇನೆಗೆ ಶಕ್ತಿ ತುಂಬುವಂತೆ ದೇವರಲ್ಲಿ ಪ್ರಾರ್ಥಿನೆ ಮಾಡಿಕೊಂಡಿದ್ದು, ಉಗ್ರರ ಮೇಲಿನ ದಾಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

    ಹಿಂದೂ ಪರ ಸಂಘಟನೆಗಳು ಕೋಲಾರ ನಗರದ ಹೊಸ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತ್ರಿವಣ ಧ್ವಜ ಹಿಡಿದು ದೇಶದ ಯೋಧರ ಪರ ಘೋಷಣೆ ಕೂಗಿದ್ದು, ಭಾರತ ಮಾತೆಗೆ ಹೂ ಹಾಕಿ, ಪಾಕಿಸ್ತಾನಕ್ಕೆ ಬಾಂಬ್ ಎಂದು ಘೋಷಣೆ ಕೂಗಿದ್ದಾರೆ.

    ಇನ್ನೂ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಉಗ್ರವಾದದ ವಿರುದ್ಧ ಭಾರತದ ದಿಟ್ಟ ಪ್ರತಿಕಾರಕ್ಕೆ ಶಿರಸಿ ನಗರದ ಪ್ರಮುಖ ಬೀದಿಗಳಲ್ಲಿ ವಿಜಯ ಮೆರವಣಿಗೆ ಮಾಡಿದ್ದಾರೆ.

    https://www.youtube.com/watch?v=zmcs1r70Pls

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೆಂಟರ ಜೊತೆ ಸೇರಿ ಶೇಂಗಾ/ನೆಲಗಡಲೆ ಉಂಡೆ ಮಾಡಿ ಹಬ್ಬವನ್ನು ಸಂಭ್ರಮಿಸಿ

    ನೆಂಟರ ಜೊತೆ ಸೇರಿ ಶೇಂಗಾ/ನೆಲಗಡಲೆ ಉಂಡೆ ಮಾಡಿ ಹಬ್ಬವನ್ನು ಸಂಭ್ರಮಿಸಿ

    ಬೇರೆ ಬೇರೆ ರೀತಿಯ ಉಂಡೆಗಳನ್ನು ನೀವು ತಿಂದಿರಬಹುದು. ಆದರಲ್ಲೂ ಬಹಳಷ್ಟು ಜನರಿಗೆ ನೆಲಗಡಲೆ ಉಂಡೆ ಅಂದ್ರೆ ಬಹಳ ಅಚ್ಚುಮೆಚ್ಚು. ಹಲವು ಜನರ ಪ್ರಿಯವಾಗಿರುವ ನೆಲಗಡಲೆ ಉಂಡೆ ಮಾಡುವುದು ಸಹ ಅಷ್ಟೇನು ಕಷ್ಟದ ಕೆಲಸವಲ್ಲ. ಮನೆಯಲ್ಲೇ ಉಂಡೆ ಮಾಡಬಹುದು. ಹೇಗೂ ಮನೆಗೆ ನೆಂಟರು ಬಂದಿರುತ್ತಾರೆ. ಬಂದವರ ಜೊತೆ ಸೇರಿ ಉಂಡೆ ಮಾಡಿ ತಿಂದರೆ ಹಬ್ಬದ ಸಂಭ್ರಮವೇ ಬೇರೆ. ಹೀಗಾಗಿ ಇಲ್ಲಿ ನೆಲಗಡಲೆ ಉಂಡೆ ಮಾಡುವ ಸರಳ ವಿಧಾನವನ್ನು ವಿವರಿಸಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕಡಲೆಬೀಜ – 1 ಕಪ್
    2. ತುರಿದ ಕೊಬ್ಬರಿ – 1/4 ಕಪ್
    3. ಬೆಲ್ಲ – 3/4 ಕಪ್
    4. ಎಳ್ಳು – 1/4 ಕಪ್
    5. ಏಲಕ್ಕಿ – ಚಿಟಿಕೆ

    ಮಾಡುವ ವಿಧಾನ:
    1. ದಪ್ಪ ತಳದ ಪ್ಯಾನ್ ಗೆ ಮಧ್ಯಮ ಉರಿಯಲ್ಲಿ ಕಡಲೆಬೀಜಗಳನ್ನ ಹುರಿದುಕೊಳ್ಳಿ.
    2. ಯಾವಾಗ ಕಡಲೆಬೀಜಗಳು ಕಂದು ಬಣ್ಣಕ್ಕೆ ತಿರುಗುತ್ತದೆಯೋ, ಆಗ ಅದಕ್ಕೆ ಎಳ್ಳನ್ನ ಸೇರಿಸಿ ಹುರಿದುಕೊಳ್ಳಿ
    3. ಎಳ್ಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಸಣ್ಣ ಉರಿಯಲ್ಲಿ ಕೊಬ್ಬರಿ ತುರಿಯನ್ನ ಗರಿ ಗರಿಯಾಗುವವರೆಗೆ ಹುರಿದುಕೊಳ್ಳಿ. ನಂತರ ಸ್ಟವ್ ಆಫ್ ಮಾಡಿ.
    4. ಹುರಿದ ಕೊಬ್ಬರಿ, ಕಡಲೆಬೀಜ, ಎಳ್ಳು ಎಲ್ಲಾ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
    5. ಪುಡಿಯು ಆದಷ್ಟು ತರಿ ತರಿಯಾಗಿ ಮತ್ತು ದಪ್ಪವಾಗಿರಲಿ.
    6. ಅದಕ್ಕೆ ಬೆಲ್ಲವನ್ನ ಹಾಕಿ ಪುಡಿ ಮಾಡಿಕೊಳ್ಳಿ.
    7. ಸುಮಾರು 3-4 ಸುತ್ತು ಮಿಕ್ಸಿಯಲ್ಲಿ ಪುಡಿ ಮಾಡಿ. ಅದಕ್ಕಿಂತ ಹೆಚ್ಚು ಮಾಡದಿರಿ
    8. ಈ ಪುಡಿಯನ್ನ ಒಂದು ತಟ್ಟೆಗೆ ಹಾಕಿ, ಅದಕ್ಕೆ ಏಲಕ್ಕಿ ಪುಡಿಯನ್ನ ಮಿಶ್ರ ಮಾಡಿರಿ
    9. ಸಣ್ಣ ಸಣ್ಣ ಉಂಡೆಗಳನ್ನ ಮಾಡಿ, ಗಾಳಿ ಆಡದಂತ ಡಬ್ಬಿಗೆ ಆ ಉಂಡೆಗಳನ್ನ ಹಾಕಿ, ವಾರಗಟ್ಟಲೆ ಶೇಖರಿಸಿ ಇಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

    ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

    ಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಅದರಲ್ಲೂ ಮಹಿಳೆಯರಂತೂ ತಿಂಡಿ-ತಿನಿಸುಗಳನ್ನು ಮಾಡುವುದರಲ್ಲಿ ಬ್ಯುಸಿಯಾಗುತ್ತಾರೆ. ಪ್ರತಿ ಹಬ್ಬದಲ್ಲೂ ಒಂದೇ ರೀತಿಯ ತಿಂಡಿಗಳನ್ನು ಬೇಜಾರಾಗಿರುತ್ತೆ. ಸಾಮಾನ್ಯವಾಗಿ ಅಕ್ಕಿ, ರವೆ ಮತ್ತು ರಾಗಿಯಲ್ಲಿ ಇಡ್ಲಿ ಮಾಡುತ್ತೀರಾ. ಆದರೆ ಹಬ್ಬ ಅಂದರೆ ಏನಾದರೂ ಸ್ಪೆಷನ್ ಆಗಿ ಮಾಡಬೇಕು ಅಲ್ಲವಾ.. ಅದಕ್ಕಾಗಿ ಈ ಬಾರಿ ಸಿಹಿಕುಂಬಳಕಾಯಿಯಲ್ಲಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ..

    ಬೇಕಾಗಿರುವ ಸಾಮಾಗ್ರಿಗಳು
    1. ತುರಿದ ಕುಂಬಳಕಾಯಿ- 1 ಕಪ್
    2. ತುರಿದ ತೆಂಗಿನಕಾಯಿ – 1/2 ಕಪ್
    3. ಬೆಲ್ಲ (ರುಚಿಗೆ ತಕ್ಕಷ್ಟು) – 1/4 ಕಪ್
    4.. ಇಡ್ಲಿ ರವೆ ಅಥವಾ ಅಕ್ಕಿ ರವೆ – 1/2 ಕಪ್
    5. ಏಲಕ್ಕಿ – 1
    6. ಎಣ್ಣೆ -2-3 ಚಮಚ

    ಮಾಡುವ ವಿಧಾನ:
    *  ಮಿಕ್ಸಿ ಜಾರಿಗೆ ತೆಂಗಿನ ತುರಿ, ಏಲಕ್ಕಿ, ಮತ್ತು ಬೆಲ್ಲವನ್ನ ಹಾಕಿ ಪುಡಿ ಮಾಡಿಕೊಳ್ಳಿ.
    *  ಈ ಪುಡಿಯನ್ನ ಒಂದು ಅಗಲವಾದ ಬಟ್ಟಲಿಗೆ ಹಾಕಿಕೊಳ್ಳಿ.
    *  ಈಗ ಇದಕ್ಕೆ ತುರಿದ ಸಿಹಿಕುಂಬಳಕಾಯಿ, ಇಡ್ಲಿ ರವೆ,  ಸ್ವಲ್ಪ ನೀರನ್ನ ಹಾಕಿರಿ.
    *  ಈ ಮಿಶ್ರಣವನ್ನ ಮೃದುವಾಗಿ ಕಲಸಿಕೊಳ್ಳಿ. 5 ನಿಮಿಷ ಹಾಗೆಯೇ ಬಿಡಿ.
    *  ಇಡ್ಲಿ ಪಾತ್ರೆಗೆ ಎಣ್ಣೆ ಸವರಿ, ಇಡ್ಲಿ ಆಕಾರದಲ್ಲಿ ಈ ಮಿಶ್ರಣವನ್ನ ತುಂಬಿರಿ.
    *  12-13 ನಿಮಿಷಗಳವರೆಗೆ ಇದನ್ನ ಹಬೆಯಲ್ಲಿ ಬೇಯಿಸಿಕೊಳ್ಳಿ
    *  ಬಿಸಿ ಸಿಹಿಕುಂಬಳಕಾಯಿಯ ಇಡ್ಲಿಯನ್ನ ತುಪ್ಪ ಅಥವಾ ಜೇನುತುಪ್ಪ ಜೊತೆ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    ಜಂಬೂ ಸವಾರಿಗೆ ಜನರು ಕಾಯುತ್ತಿದ್ದು, ಇನ್ನು ನಾಲ್ಕು ದಿನಗಳ ಕಾಲ ದಸರಾ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಳೆಕಟ್ಟುತ್ತದೆ. ಈಗಾಗಲೇ ದೇವಿಗಾಗಿ ಮೈಸೂರು ಪಾಕ್, ಜಿಲೇಬಿ, ಕಜ್ಜಾಯವನ್ನು ಮಾಡಿದ್ದೀರಿ, ಸಿಹಿ ಮಾತ್ರವಲ್ಲದೇ ಮೈಸೂರು ಬೋಂಡಾವನ್ನು ಕೂಡ ಮಾಡಿದ್ದೀರಿ, ಈಗ ಮತ್ತೊಂದು ಸಿಹಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ.. ನಿಮಗಾಗಿ ಸಿಂಪಲ್ ಆಗಿ ಸಿಹಿ ಬಾದೂಷ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸಕ್ಕರೆ – 1 ಕೆಜಿ
    2. ಮೈದಾಹಿಟ್ಟು – ಅರ್ಧ ಕೆಜಿ
    3. ಬೆಣ್ಣೆ – 100 ಗ್ರಾಂ
    4. ಅಡುಗೆ ಸೋಡಾ -ಚಿಟಿಕೆ
    5. ಏಲಕ್ಕಿ ಪುಡಿ – ಚಿಟಿಕೆ
    6. ಎಣ್ಣೆ ಕರಿಯಲು

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ಸಕ್ಕರೆ ಅದಕ್ಕೆ 2 ಕಪ್ ನೀರು ಹಾಕಿ ಕುದಿಸಿ.
    * ಅದಕ್ಕೆ ಏಲಕ್ಕಿ ಪುಡಿ ಹಾಕಿ ಒಂದು ಎಳೆ ಪಾಕ ಮಾಡಿಟ್ಟುಕೊಳ್ಳಿ.
    * ಬಳಿಕ ಒಂದು ಬೌಲ್‍ಗೆ ಜರಡಿ ಹಿಡಿದ ಮೈದಾ ಹಿಟ್ಟು, ಬೆಣ್ಣೆ, ಸೋಡಾ ಹಾಕಿ ಕಲಸಿ.
    * ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಆದಷ್ಟು ಸಾಫ್ಟ್ ಆಗಿದ್ದರೆ ಉತ್ತಮ.
    * ಈಗ ಹಿಟ್ಟನ್ನು ಚೆನ್ನಾಗಿ ನಾದಿ. ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ.
    * ಸಣ್ಣ ಉಂಡೆಯನ್ನು ಮತ್ತೆ ಎರಡೂ ಕೈಯಲ್ಲಿ ನಾದಿ ಎರಡು ಕಡೆಗಳಲ್ಲಿ ಮಧ್ಯದಲ್ಲಿ ಬೆರಳಿನಿಂದ ಒತ್ತಿ.


    * ಹೀಗೆ ಮಾಡಿಟ್ಟುಕೊಂಡ ಬಾದುಷಾವನ್ನು ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗೋತನಕ ಡೀಪ್ ಪ್ರೈ ಮಾಡಿ.
    * ಬಿಸಿ ಇರುವಾಗಲೇ ಸಕ್ಕರೆ ಪಾಕಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟು ಪಾಕದಿಂದ ಬಾದುಷಾವನ್ನು ತೆಗೆದು ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    ನಾಡಿನಾದ್ಯಂತ ದಸರಾ ಹಬ್ಬದ ವಾತಾವರಣ ಕಳೆಗಟ್ಟುತ್ತಿದೆ. ಈಗಾಗಲೇ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದಸರಾ ಅಂದರೆ ನವರಾತ್ರಿ, ಒಂಬತ್ತು ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಸಿಹಿ ಮಾಡಬೇಕಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕಾಗಿ ಮೈಸೂರು ಪಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕಡಲೆ ಹಿಟ್ಟು – ಅರ್ಧ ಕೆಜಿ
    2. ತುಪ್ಪ – 1 ಬಟ್ಟಲು
    3. ಎಣ್ಣೆ – 1 ಬಟ್ಟಲು
    4. ಸಕ್ಕರೆ – ಮುಕ್ಕಾಲು ಕೆಜಿ
    5. ನೀರು – 1 ಲೋಟ

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಕುದಿಸಿಡಿ.
    * ಈಗ ಒಂದು ಪ್ಯಾನ್‍ಗೆ ಸಕ್ಕರೆ, 1 ಲೋಟ ನೀರು ಹಾಕಿ ಕುದಿಸಿ.
    * ಒಂದು ಎಳೆ ಪಾಕ ಬಂದ ಮೇಲೆ ಅದಕ್ಕೆ(ಪಾಕ) ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟನ್ನು ಹಾಕಿಕೊಳ್ಳುತ್ತಾ ಸೌಟಿನಿಂದ ತಿರುಗಿಸುತ್ತಿರಿ.
    * ಕಡಲೆಹಿಟ್ಟು ಗಂಟುಗಳಿಲ್ಲದಂತೆ ಸಂಪೂರ್ಣವಾಗಿ ಸಕ್ಕರೆ ಪಾಕದೊಂದಿಗೆ ಮಿಕ್ಸ್ ಮಾಡಿ.
    * ಈಗ ಸ್ವಲ್ಪ ಸ್ವಲ್ಪವೇ ತುಪ್ಪ ಮತ್ತು ಎಣ್ಣೆ ಮಿಕ್ಸ್ ಅನ್ನು ಸೇರಿಸಿ ಕೈಯಾಡಿಸುತ್ತಿರಿ.
    * ಕಡಲೆಹಿಟ್ಟು ಈಗ ತುಪ್ಪ ಮತ್ತು ಎಣ್ಣೆಯನ್ನು ಹೀರಿಕೊಂಡು ಗಟ್ಟಿಯಾಗುತ್ತಾ ಬರುತ್ತದೆ.
    * ನಂತರ ತುಪ್ಪ ಸವರಿದ ಟ್ರೇಗೆ ಬಿಸಿ ಇರುವಾಗಲೇ ಕಡಲೆಹಿಟ್ಟು ಗಟ್ಟಿಯನ್ನು ಹಾಕಿ ಬೇಕಾದ ಶೇಪ್‍ಗೆ ಕತ್ತರಿಸಿ.
    * ಬಿಸಿ ಆರಿದ ಮೇಲೆ ಸ್ಲೈಸ್‍ ಗಳನ್ನು ಟ್ರೇನಿಂದ ಸಪರೇಟ್ ಮಾಡಿ ಸವಿಯಿರಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

  • ಹುಟ್ಟುಹಬ್ಬ ಆಚರಿಸಿ, ಅಂಬರೀಶ್ ಗೆ ಬೇಡಿಕೆಯಿಟ್ಟ ಮಂಡ್ಯ ಅಭಿಮಾನಿಗಳು

    ಹುಟ್ಟುಹಬ್ಬ ಆಚರಿಸಿ, ಅಂಬರೀಶ್ ಗೆ ಬೇಡಿಕೆಯಿಟ್ಟ ಮಂಡ್ಯ ಅಭಿಮಾನಿಗಳು

    ಮಂಡ್ಯ: ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಅಭಿಮಾನಿಗಳು ಅಂಬರೀಶ್ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಮಂಡ್ಯದ ಗಾಂಧಿ ಪಾರ್ಕ್ ನಲ್ಲಿ, ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಅಂಬಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಭಿಮಾನಿಗಳು ಅಂಬಿ ಕಟೌಟ್‍ಗೆ ಅರಿಶಿಣ, ಕುಂಕುಮ, ಹಾಲಿನ ಅಭಿಷೇಕ ಮಾಡಿದ್ದಾರೆ.

    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದ ನಡುವೆಯೇ ಅಂಬಿ ರಾಜಕೀಯ ನಿವೃತ್ತಿ ಬಗ್ಗೆ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಅಂಬಿ ನಡೆಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನಗಳನ್ನು ಸೋತಿದೆ.

    ಅಂಬಿ ರಾಜಕೀಯಕ್ಕೆ ವಾಪಸ್ಸಾದರೆ ಮತ್ತೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತೆ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಆದರೆ ಅಭಿಮಾನಿಗಳ ಒತ್ತಡಕ್ಕೆ ಮಣಿದು ಅಂಬರೀಶ್ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರ ಅನ್ನೋದನ್ನು ಕಾದು ನೋಡಬೇಕಿದೆ.

  • ಇಲ್ಲಿದೆ ರವಾ ಜಾಮೂನು ಮಾಡುವ ಸಿಂಪಲ್ ವಿಧಾನ

    ಇಲ್ಲಿದೆ ರವಾ ಜಾಮೂನು ಮಾಡುವ ಸಿಂಪಲ್ ವಿಧಾನ

    ಮನೆಯಲ್ಲಿ ಜಾಮೂನು ಮಾಡಬೇಕೆಂದ್ರೆ ರೆಡಿ ಜಾಮುನು ಮಿಕ್ಸ್ ತರಬೇಕು. ಅದರ ಬದಲು ರವೆಯಲ್ಲಿ ಕೂಡ ಜಾಮೂನು ಮಾಡಬಹುದು ಗೊತ್ತಾ? ಅದಕ್ಕಾಗಿ ಇಲ್ಲಿದೆ ಸುಲಭ ವಿಧಾನ

    ಬೇಕಾಗುವ ಸಾಮಾಗ್ರಿಗಳು
    1. ರವೆ – 1 ಕಪ್
    2. ಸಕ್ಕರೆ – 1.5 ಕಪ್
    3. ಹಾಲು – 1.5 ಕಪ್
    4. ನೀರು – 1 ಕಪ್
    5. ತುಪ್ಪ – 1 ಸ್ಪೋನ್
    6. ಕರಿಯಲು ಎಣ್ಣೆ
    7. ಏಲಕಿ ಪುಡಿ- ಸ್ವಲ್ಪ

    ಮಾಡುವ ವಿಧಾನ
    * ಪ್ಯಾನ್‍ಗೆ 1.5 ಕಪ್ ಸಕ್ಕರೆ, 1 ಕಪ್ ನೀರು ಹಾಕಿ ಕುದಿಯಲು ಬಿಡಿ.
    * ಸಕ್ಕರೆ ಕರಗಿ ಒಂದೆಳೆ ಪಾಕ ಬರೋವರೆಗೂ ಕೈಯಾಡಿಸುತ್ತಿರಿ. ನಂತರ ಏಲಕ್ಕಿ ಪೌಡರ್ ಹಾಕಿ.
    * ಮತ್ತೊಂದು ಪ್ಯಾನ್‍ಗೆ 1 ಕಪ್ ರವೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.
    * ರವೆ ಸ್ವಲ್ಪ ಕೆಂಪಾದ ಬಳಿಕ ಅದಕ್ಕೆ 1.5 ಕಪ್ ಹಾಲು ಹಾಕಿ ಕೈಯಾಡಿಸುತ್ತಿರಿ.
    * ನಂತರ ಸ್ವಲ್ಪ ಗಟ್ಟಿಯಾದ ಬಳಿಕ 1 ಚಮಚ ತುಪ್ಪ ಹಾಕಿ ಕಲಸಿ ಕೆಳಗಿಳಿಸಿ.
    * ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಹಿಟ್ಟು ಮೃದುವಾಗುವವರೆಗೆ ಕೈಯಲ್ಲಿ ಕಲಸಿ.
    * ಬಳಿಕ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಳ್ಳಿ.
    * ಬಾಣಲೆಗೆ ಎಣ್ಣೆ ಹಾಕಿ ಬಿಸಿಗಿಟ್ಟು ಸಣ್ಣ ಉರಿಯಲ್ಲಿ ಜಾಮೂನನ್ನು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವ ತನಕ ಕರಿಯಿರಿ.
    * ಎಣ್ಣೆಯಿಂದ ತೆಗೆದ ಬಂತರ ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷ ಕುದಿಸಿ, ಆರಲು ಬಿಡಿ.

  • ಸಿಹಿ ಸಿಹಿ ಸಬ್ಬಕ್ಕಿ ಪಾಯಸ ಮಾಡೋ ವಿಧಾನ

    ಸಿಹಿ ಸಿಹಿ ಸಬ್ಬಕ್ಕಿ ಪಾಯಸ ಮಾಡೋ ವಿಧಾನ

    ಬ್ಬಕ್ಕಿಯಿಂದ ಅನೇಕ ವಿಧವಾದ ಅಡುಗೆಗಳನ್ನ ಮಾಡಬಹುದು. ಸಾಮಾನ್ಯವಾಗಿ ಸಬ್ಬಕ್ಕಿ ಬಳಸಿ ವಡೆ, ಬೋಂಡಾ, ಕಿಚಡಿ ಮಾಡ್ತಾರೆ. ಅಲ್ಲದೆ ಸಬ್ಬಕ್ಕಿ ಪಾಯಸ ಅಂತೂ ತುಂಬಾ ಫೇಮಸ್. ಸಬ್ಬಕ್ಕಿ ತಿನ್ನೋದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ, ರಕ್ತದೊತ್ತಡವನ್ನ ನಿಯಂತ್ರಿಸುತ್ತದೆ ಹಾಗೂ ದೇಹದ ತೂಕ ಹೆಚ್ಚಿಸಲು ಸಹಕಾರಿ.

    ಬೇಕಾಗುವ ಸಾಮಗ್ರಿಗಳು
    1. ಸಬ್ಬಕ್ಕಿ – 1/2 ಕಪ್
    2. ಸಕ್ಕರೆ – 1/2 ಕಪ್
    3. ಹಾಲು – 4 ಕಪ್
    4. ದ್ರಾಕ್ಷಿ – 10
    5. ಗೋಡಂಬಿ – 10
    6. ಏಲಕ್ಕಿ ಪುಡಿ – ಸ್ವಲ್ಪ

    ಮಾಡುವ ವಿಧಾನ
    * ಒಂದು ಪತ್ರೆಗೆ ಸಬ್ಬಕ್ಕಿ ಹಾಕಿ ಅದಕ್ಕೆ 1 ಕಪ್ ನೀರು ಹಾಕಿ 30 ನಿಮಿಷ ನೆನೆಯಲು ಬಿಡಿ.
    * ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಅದಕ್ಕೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಕರಿದು ತೆಗೆಯಿರಿ.
    * ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಹಾಲು ಹಾಕಿ ನಂತರ ನೆನೆಸಿದ ಸಬ್ಬಕ್ಕಿ(ನೀರಿನ ಸಮೇತ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಹಾಲು ತಳ ಹಿಡಿಯದಂತೆ ಆಗಾಗ ತಿರುವುತ್ತಾ ಇರಬೇಕು.
    * ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಸಬ್ಬಕ್ಕಿ ಚೆನ್ನಾಗಿ ಬೆಂದು ಹಾಲು ಗಟ್ಟಿಯಾದಾಗ ಅದಕ್ಕೆ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ 5 ನಿಮಿಷ ಕುದಿಸಿ
    * ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿದ್ರೆ ಸಬ್ಬಕ್ಕಿ ಪಾಯಸ ರೆಡಿ.

    (ಇದಕ್ಕೆ ಸಕ್ಕರೆ ಬದಲಾಗಿ ಬೆಲ್ಲ ಕೂಡ ಹಾಕಬಹುದು- 4 ಕಪ್ ಹಾಲಿಗೆ 1 ಬೆಲ್ಲ ಅಥವಾ ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕನುಗುಣವಾಗಿ ಬಳಸಿ.)