Tag: sweet

  • ಅತಿಥಿಗಳು ಬಂದಾಗ ಫಟಾಫಟ್ ಅವಲಕ್ಕಿ ಲಾಡು ಮಾಡಿ

    ಅತಿಥಿಗಳು ಬಂದಾಗ ಫಟಾಫಟ್ ಅವಲಕ್ಕಿ ಲಾಡು ಮಾಡಿ

    ನೆಗೆ ಅತಿಥಿಗಳು ಬಂದಾಗ ತಕ್ಷಣಕ್ಕೆ ಏನಾದರೂ ಸಿಹಿ ತಿಂಡಿಯನ್ನು ಮಾಡಬೇಕಾಗಿ ಬರುತ್ತದೆ. ಈ ಸಂದರ್ಭದಲ್ಲಿ ಸಿಂಪಲ್ ಆದ ರೆಸಿಪಿಯ ಹುಡುಕಾಟದಲ್ಲಿ ನೀವಿದ್ದರೆ ಒಮ್ಮೆ ಅವಲಕ್ಕಿಯ ಲಾಡು (Poha Laddu) ಮಾಡಿ ನೋಡಿ. ಕೇವಲ ಅತಿಥಿಗಳಿಗೇ ಏಕೆ? ಹಬ್ಬದ ಸಂದರ್ಭಗಳಲ್ಲಿ ಇಲ್ಲವೇ ವಿಶೇಷ ದಿನಗಳಲ್ಲಿ ನೀವಿದನ್ನು ಮಾಡಿ ಎಲ್ಲರಿಗೂ ಹಂಚಬಹುದು. ಸುಲಭ ಹಾಗೂ ತ್ವರಿತವಾಗಿ ಮಾಡಬಹುದಾದ ಅವಲಕ್ಕಿ ಲಾಡು ಮಾಡುವುದು ಹೇಗೆಂದು ಇಲ್ಲಿ ತಿಳಿಸಲಾಗಿದೆ.

    ಬೇಕಾಗುವ ಪದಾರ್ಥಗಳು:
    ಅವಲಕ್ಕಿ – 1 ಕಪ್
    ಸಕ್ಕರೆ – ಅರ್ಧ ಕಪ್
    ತುಪ್ಪ – ಕಾಲು ಕಪ್
    ಒಣ ತೆಂಗಿನ ತುರಿ – ಅರ್ಧ ಕಪ್
    ಗೋಡಂಬಿ ಹಾಗೂ ಒಣ ದ್ರಾಕ್ಷಿ – ಕಾಲು ಕಪ್
    ಏಲಕ್ಕಿ ಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಹುಳಿ-ಸಿಹಿ ರುಚಿಯ ನೆಲ್ಲಿಕಾಯಿ ಜ್ಯಾಮ್ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ಹುರಿದುಕೊಳ್ಳಿ. ಗೋಡಂಬಿ, ದ್ರಾಕ್ಷಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ಪಕ್ಕಕ್ಕಿರಿಸಿ.
    * ಈಗ ಮಧ್ಯಮ ಉರಿಯಲ್ಲಿ ಒಣ ಕೊಬ್ಬರಿ ಹಾಗೂ ಅವಲಕ್ಕಿಯನ್ನು ಗರಿಗರಿಯಾಗಿ ಹುರಿದುಕೊಳ್ಳಿ. ಬಳಿಕ ಅದನ್ನು ಆರಲು ಪಕ್ಕಕ್ಕಿರಿಸಿ.
    * ಈಗ ಮಿಕ್ಸರ್ ಜಾರ್‌ಗೆ ಸಕ್ಕರೆ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಹುರಿದ ಅವಲಕ್ಕಿ ಹಾಗೂ ಒಣ ತೆಂಗಿನಕಾಯಿ ಮಿಶ್ರಣ ಸೇರಿಸಿ ಮತ್ತೆ ಪುಡಿ ಮಾಡಿಕೊಳ್ಳಿ.
    * ಈಗ ಒಂದು ಕಡಾಯಿಯಲ್ಲಿ ಉಳಿದ ತುಪ್ಪ ಬಿಸಿ ಮಾಡಿ, ಪುಡಿ ಮಾಡಿದ ಮಿಶ್ರಣವನ್ನು ಹಾಕಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿಯನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣವಾದ ಬಳಿಕ ಉರಿಯನ್ನು ಆಫ್ ಮಾಡಿ.
    * ಮಿಶ್ರಣ ಸ್ವಲ್ಪ ಬೆಚ್ಚಗಿರುವಾಗಲೇ ನಿಂಬೆ ಗಾತ್ರದ ಮಿಶ್ರಣ ಕೈಯಲ್ಲಿ ತೆಗೆದುಕೊಂಡು ಉಂಡೆಗಳನ್ನು ಕಟ್ಟಿಕೊಳ್ಳಿ.
    * ಮಿಶ್ರಣ ಗಟ್ಟಿ ಎನಿಸಿದರೆ ಸ್ವಲ್ಪ ಹಾಲನ್ನು ಹಾಕಿ ಮಿಕ್ಸ್ ಮಾಡಿ ಉಂಡೆಗಳನ್ನು ಕಟ್ಟಿಕೊಳ್ಳಬಹುದು. (ಆದರೆ ಹಾಲು ಸೇರಿಸಿದರೆ ಹೆಚ್ಚು ದಿನ ಇರಿಸಿಕೊಳ್ಳಲು ಆಗುವುದಿಲ್ಲ)
    * ಇದೀಗ ಅವಲಕ್ಕಿ ಲಾಡು ತಯಾರಾಗಿದ್ದು, ಅತಿಥಿಗಳಿಗೆ ನೀಡಿ. ನೀವಿದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟರೆ 15 ದಿನಗಳವರೆಗೆ ಕೆಡದಂತೆ ಇರಿಸಬಹುದು. ಇದನ್ನೂ ಓದಿ: ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿದ್ದ ಮಹಿಳೆಗೆ 2 ಲಕ್ಷ ರೂ. ಪಂಗನಾಮ

    ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿದ್ದ ಮಹಿಳೆಗೆ 2 ಲಕ್ಷ ರೂ. ಪಂಗನಾಮ

    ಮುಂಬೈ: ದೀಪಾವಳಿ ( Diwali) ಹಬ್ಬದ ಹಿನ್ನೆಲೆ ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿ 49 ವರ್ಷದ ಮಹಿಳೆ 2.8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

    ಮುಂಬೈ (Mumbai) ಉಪನಗರ ಅಂಧೇರಿ (Andheri) ನಿವಾಸಿಯಾಗಿರುವ ಪೂಜಾ ಶಾ ಅವರು, ಭಾನುವಾರ ಫುಡ್ ಅಪ್ಲಿಕೇಶನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಿ ಆನ್‍ಲೈನ್‍ನಲ್ಲಿ 1,000 ರೂಪಾಯಿ ಪಾವತಿಸಲು ಪ್ರಯತ್ನಿಸಿದರು, ಆದರೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ವೀಟ್ ಅಂಗಡಿಯವರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿದರು. ಈ ವೇಳೆ ವ್ಯಕ್ತಿ ಪೂಜಾ ಅವರ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಓಟಿಪಿ ನಂಬರ್ ನೀಡುವಂತೆ ಕೇಳಿದ್ದಾನೆ. ಇದನ್ನೂ ಓದಿ: ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಕೋತಿಗಳ ಕಾಟ- ಕೈಯಲ್ಲಿರೋ ಬ್ಯಾಗನ್ನೂ ಬಿಡದೇ ಚೆಲ್ಲಾಟ

    ಮಹಿಳೆ ಕೂಡ ತಮ್ಮ ಕಾರ್ಡ್ ವಿವರಗಳು ಹಾಗೂ ಓಟಿಪಿಯನ್ನು ಹಂಚಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮಹಿಳೆ ಖಾತೆಯಿಂದ 2,40,310 ರೂಪಾಯಿ ಹಣ ಕಟ್ ಆಗಿದೆ. ಬಳಿಕ ಈ ಸಂಬಂಧ ಮಹಿಳೆ ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ 2,27,205 ರೂಪಾಯಿ ಬೇರೆ ಖಾತೆಗೆ ವರ್ಗಾವಣೆಯಾಗುತ್ತಿರುವುದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆ ತಮ್ಮ ಹಣವನ್ನು ಮರು ಪಡೆದುಕೊಂಡಿದ್ದಾರೆ. ಸದ್ಯ ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುದ್ರೋಳಿಯಲ್ಲಿ ದೀಪಾವಳಿ ಸಂಭ್ರಮ- ಎಲ್ಲರನ್ನೂ ಆಕರ್ಷಿಸಿದ ಗೂಡುದೀಪದ ಕಾರ್ಯಕ್ರಮ

    Live Tv
    [brid partner=56869869 player=32851 video=960834 autoplay=true]

  • ಸೀಬೆ ಹಣ್ಣಿನಿಂದ ಬರ್ಫಿ ಮಾಡಿ ನೋಡಿ

    ಸೀಬೆ ಹಣ್ಣಿನಿಂದ ಬರ್ಫಿ ಮಾಡಿ ನೋಡಿ

    ಸೀಸನ್‌ನಲ್ಲಿ ಸೀಬೆ ಹಣ್ಣು ಹೇರಳವಾಗಿ ಬೆಳೆಯುತ್ತದೆ. ಬಾಯಲ್ಲಿ ನೀರು ತರುವ ಸೀಬೆ ಹಣ್ಣಿನ ಜ್ಯೂಸ್ ಅಥವಾ ಸಲಾಡ್ ಅನ್ನು ನಾವು ಸವಿದಿರುತ್ತೇವೆ. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಇಂದು ನಾವು ಈ ರುಚಿಕರವಾದ ಸೀಬೆ ಹಣ್ಣಿನಿಂದ ಬರ್ಫಿ (Guava Barfi) ಮಾಡೋಣ. ಸೀಬೆ ಹಣ್ಣಿನಿಂದ ಬರ್ಫಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ತಾಜಾ ಹಾಲು – ಅರ್ಧ ಕಪ್
    ಸೀಬೆ ಹಣ್ಣಿನ ತಿರುಳು – 1 ಕಪ್
    ಫ್ರೆಶ್ ಕ್ರೀಂ – 2 ಟೀಸ್ಪೂನ್
    ಸಕ್ಕರೆ – 1 ಕಪ್
    ತುರಿದ ತೆಂಗಿನಕಾಯಿ – 3 ಕಪ್
    ತುಪ್ಪ – 2 ಟೀಸ್ಪೂನ್
    ನಿಂಬೆ ಸರ – 1 ಟೀಸ್ಪೂನ್
    ಒಣ ಹಣ್ಣುಗಳು – ಅಲಂಕಾರಕ್ಕೆ

    ಮಾಡುವ ವಿಧಾನ:
    * ಮೊದಲಿಗೆ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ, ಅದು ಅರ್ಧದಷ್ಟಾಗುವವರೆಗೆ ಕುದಿಸಿ.
    * ಅದಕ್ಕೆ ಸಕ್ಕರೆ ಹಾಗೂ ತೆಂಗಿನ ತುರಿ ಸೇರಿಸಿ ದಪ್ಪ ಮಿಶ್ರಣ ಮಾಡಿ.
    * ಇನ್ನೊಂದು ಪಾತ್ರೆಯಲ್ಲಿ ಸೀಬೆ ಹಣ್ಣಿನ ತಿರುಳನ್ನು ತುಪ್ಪದೊಂದಿಗೆ ಬೇಯಿಸಿ.
    * ಹಣ್ಣಿನ ತಿರುಳು ತುಪ್ಪವನ್ನು ಬಿಡಲಾರಂಭಿಸಿದಾಗ ಅದಕ್ಕೆ ಫ್ರೆಶ್ ಕ್ರೀಂ ಸೇರಿಸಿ.
    * ನಂತರ ನಿಂಬೆ ರಸವನ್ನು ಸೇರಿಸಿ, ಹಾಲಿನ ಮಿಶ್ರಣವನ್ನೂ ಅದಕ್ಕೆ ಹಾಕಿ ಮಿಕ್ಸ್ ಮಾಡಿ.
    * ಈ ಮಿಶ್ರಣವನ್ನು ಇನ್ನೂ 10 ನಿಮಿಷ ಬೇಯಿಸಿ, ದಪ್ಪವಾಗಲು ಬಿಡಿ.
    * ಕೊನೆಯದಾಗಿ ಏಲಕ್ಕಿ ಪುಡಿ ಸೇರಿಸಿ, ತುಪ್ಪ ಸವರಿದ ಬಟ್ಟಲಿನಲ್ಲಿ ಹಾಕಿ ಆಕಾರ ನೀಡಿ.
    * ಈಗ ಒಣ ಹಣ್ಣುಗಳಿಂದ ಅಲಂಕರಿಸಿ, ತಣ್ಣಗಾದ ಬಳಿಕ ಸೀಬೆ ಹಣ್ಣಿನ ಬರ್ಫಿಯನ್ನು ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ತೆಂಗಿನಕಾಯಿಯಿಂದ ಲಡ್ಡು ಮಾಡುವುದು ಹೇಗೆ ಗೊತ್ತಾ?

    ತೆಂಗಿನಕಾಯಿಯಿಂದ ಲಡ್ಡು ಮಾಡುವುದು ಹೇಗೆ ಗೊತ್ತಾ?

    ದೀಗ ನವರಾತ್ರಿ ಹಬ್ಬ ನಡೆಯುತ್ತಿದ್ದು, ಅದನ್ನು ಆಚರಿಸಲು ಪ್ರತಿ ದಿನ ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅಲ್ವಾ? ಇಂದು ನಾವು ತೆಂಗಿನಕಾಯಿಯ ಲಡ್ಡು ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಸಿಹಿ ಕಂಡೆನ್ಸ್ಡ್ ಮಿಲ್ಕ್ – 220 ಗ್ರಾಂ
    ತೆಂಗಿನ ತುರಿ – ಅರ್ಧ ಕಪ್
    ಒಣ ತೆಂಗಿನ ತುರಿ – ಕೋಟಿಂಗ್‌ಗೆ ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ಮನೆಲಿ ಮಾಡಿ ಸೋರೆಕಾಯಿ ಹಲ್ವಾ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ತೆಂಗಿನ ತುರಿಯನ್ನು ಹಾಕಿ 3-4 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಅದಕ್ಕೆ ಸಿಹಿ ಕಂಡೆನ್ಸ್ಡ್ ಮಿಲ್ಕ್ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
    * ಮಿಶ್ರಣ ದಪ್ಪವಾಗುತ್ತಾ ಬರುತ್ತಿದ್ದಂತೆ ಕೈಯಾಡಿಸುವುದನ್ನು ಮುಂದುವರಿಸಿ.
    * ಈಗ ಮಿಶ್ರಣವನ್ನು ತಣ್ಣಗಾಗಲು ಪಕ್ಕಕ್ಕಿಡಿ.
    * ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ಬಳಿಕ ಒಂದೊಂದು ಟೀಸ್ಪೂನ್‌ನಷ್ಟು ಮಿಶ್ರಣದ ಉಂಡೆಗಳನ್ನು ಕಟ್ಟಿ.
    * ಈಗ ಉಂಡೆಗಳನ್ನು ಒಣ ತೆಂಗಿನ ತುರಿಯಲ್ಲಿ ಉರುಳಿಸಿ ಕೋಟ್ ಮಾಡಿ.
    * ತೆಂಗಿನಕಾಯಿಯ ಲಡ್ಡು ಇದೀಗ ಸವಿಯಲು ಸಿದ್ದವಾಗಿದ್ದು, ಅದನ್ನು 2-3 ದಿನಗಳ ವರೆಗೆ ಫ್ರಿಜ್‌ನಲ್ಲಿ ಇಡಬಹುದು. ಇದನ್ನೂ ಓದಿ: ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ

    Live Tv
    [brid partner=56869869 player=32851 video=960834 autoplay=true]

  • ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ

    ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ

    ಅಂಗಡಿಗಳಲ್ಲಿ ಸಿಗುವ ಚಿಕ್ಕಿಯನ್ನು (Chikki) ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಹಲವು ಬಗೆಯ ಒಣ ಬೀಜಗಳನ್ನು ಬಳಸಿ ಚಿಕ್ಕಿಯನ್ನು ಮಾಡಲಾಗುತ್ತದೆ. ಅದೇ ರೀತಿ ಎಳ್ಳಿನಿಂದಲೂ ಚಿಕ್ಕಿ (Sesame Chikki) ಮಾಡಬಹುದು. ಒಮ್ಮೆ ಮನೆಯಲ್ಲಿಯೇ ಎಳ್ಳು ಚಿಕ್ಕಿಯನ್ನು ಮಾಡಿ ನೋಡಿ. ಎಳ್ಳಿನ ಚಿಕ್ಕಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬಿಳಿ ಎಳ್ಳು- 1 ಕಪ್
    ತುಪ್ಪ- 1 ಟೀಸ್ಪೂನ್
    ಬೆಲ್ಲ- 1 ಕಪ್ ಇದನ್ನೂ ಓದಿ: ಸಿಹಿಯಾದ ಆಲೂಗಡ್ಡೆಯ ಹಲ್ವಾ

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್‌ನಲ್ಲಿ ಎಳ್ಳು ಹಾಕಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಬಳಿಕ ಬದಿಗಿಡಿ.
    * ಇನ್ನೊಂದು ಕಡಾಯಿ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ.
    * ಬಳಿಕ ಬೆಲ್ಲ ಸೇರಿಸಿ ಅದು ಸಂಪೂರ್ಣ ಕರಗುವ ತನಕ ಮಧ್ಯಮ ಉರಿಯಲ್ಲಿ ಕುದಿಸಿ.
    * ಬೆಲ್ಲ ಸಂಪೂರ್ಣ ಕರಗಿದ ಬಳಿಕ ಸಿರಪ್‌ನಂತೆ ಆಗುತ್ತದೆ.
    * ಅದರ ಒಂದು ಹನಿಯನ್ನು ತೆಗೆದುಕೊಂಡು, ನೀರಿರುವ ಬಟ್ಟಲಿನಲ್ಲಿ ಹಾಕಿ ನೋಡಿ. ಅದು ತಕ್ಷಣ ಗಟ್ಟಿಯಾದ ಚೆಂಡಿನಂತಾದರೆ

    ಪಾಕ ತಯಾರಾಗಿದೆ. ಇಲ್ಲದೇ ಹೋದರೆ ಮತ್ತೊಂದು ನಿಮಿಷ ಕುದಿಸಿ ಮತ್ತೆ ಪರಿಶೀಲಿಸಿ.
    * ಈಗ ಬೆಲ್ಲದ ಸಿರಪ್‌ಗೆ ಎಳ್ಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಒಂದು ತಟ್ಟೆಗೆ ತುಪ್ಪವನ್ನು ಸವರಿ(ಬಟರ್ ಪೇಪರ್ ಬಳಸಬಹುದು), ಅದರ ಮೇಲೆ ಎಳ್ಳಿನ ಮಿಶ್ರಣವನ್ನು ಸುರಿಯಿರಿ.
    * ಮಿಶ್ರಣ ಬೇಗ ಗಟ್ಟಿಯಾಗುವುದರಿಂದ ಅದು ಬೆಚ್ಚಗಿರುವಾಗಲೇ ಚಾಕುವಿನ ಮೂಲಕ ಚೌಕಾಕಾರದಲ್ಲಿ ಕತ್ತರಿಸಿ.
    * ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ.
    * ಎಳ್ಳು ಚಿಕ್ಕಿ ಇದೀಗ ತಯಾರಾಗಿದ್ದು, ಇದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ, 1 ತಿಂಗಳ ವರೆಗೂ ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ

    Live Tv
    [brid partner=56869869 player=32851 video=960834 autoplay=true]

  • ಸಿಹಿಯಾದ ಆಲೂಗಡ್ಡೆಯ ಹಲ್ವಾ

    ಸಿಹಿಯಾದ ಆಲೂಗಡ್ಡೆಯ ಹಲ್ವಾ

    ಲ್ವಾ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸಿಹಿಗಳಲ್ಲಿ ಒಂದು. ಹಲವು ಹಣ್ಣು, ತರಕಾರಿಗಳನ್ನು ಬಳಸಿ ಹಲ್ವಾವನ್ನು ತಯಾರಿಸಲಾಗುತ್ತದೆ. ಇಂದು ನಾವು ಸ್ವಲ್ಪ ಡಿಫರೆಂಟ್ ಆಗಿ ಆಲೂಗಡ್ಡೆಯಿಂದ ಹಲ್ವಾ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ. ಸಿಹಿಯಾದ ಆಲೂಗಡ್ಡೆಯ ಹಲ್ವಾ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 5
    ತುಪ್ಪ – ಅರ್ಧ ಕಪ್
    ಸಕ್ಕರೆ – 1 ಕಪ್
    ಕೇಸರಿ ಆಹಾರ ಬಣ್ಣ – ಅರ್ಧ ಟೀಸ್ಪೂನ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಹುರಿಯಲು:
    ತುಪ್ಪ – 1 ಟೀಸ್ಪೂನ್
    ಒಣದ್ರಾಕ್ಷಿ – 2 ಟೀಸ್ಪೂನ್
    ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್
    ಕತ್ತರಿಸಿದ ಬಾದಾಮಿ – 2 ಟೀಸ್ಪೂನ್ ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ

    ಮಾಡುವ ವಿಧಾನ:
    * ಮೊದಲಿಗೆ, ಪ್ರೆಷರ್ ಕುಕ್ಕರ್‌ನಲ್ಲಿ 5 ಆಲೂಗಡ್ಡೆಯನ್ನು 5 ಸೀಟಿ ಬರಿಸಿ ಬೇಯಿಸಿ.
    * ಬಳಿಕ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ತುರಿಯಿರಿ ಮತ್ತು ಪಕ್ಕಕ್ಕೆ ಇರಿಸಿ.
    * ದೊಡ್ಡ ಕಡಾಯಿಯಲ್ಲಿ ಅರ್ಧ ಕಪ್ ತುಪ್ಪ ತೆಗೆದುಕೊಂಡು, ಅದಕ್ಕೆ ಬೇಯಿಸಿ, ತುರಿದ ಆಲೂಗಡ್ಡೆಯನ್ನು ಸೇರಿಸಿ.
    * 5 ನಿಮಿಷಗಳ ಕಾಲ ಹುರಿದು, ಬಳಿಕ ಸಕ್ಕರೆ ಮತ್ತು ಕೇಸರಿ ಆಹಾರ ಬಣ್ಣ ಸೇರಿಸಿ.
    * ಮಧ್ಯಮ ಉರಿಯಲ್ಲಿ ಕೈ ಆಡಿಸುತ್ತಾ ಸಕ್ಕರೆ ಕರಗುವವರೆಗೆ ಬೇಯಿಸಿ.
    * ತುಪ್ಪ ಬೇರ್ಪಡುವವರೆಗೂ ಮಧ್ಯಮ ಉರಿಯಲ್ಲಿ ಬೇಯಿಸಿ. ಇದು ಸುಮಾರು 15 ನಿಮಿಷ ತೆಗೆದುಕೊಳ್ಳುತ್ತದೆ.
    * ಈಗ ಇನ್ನೊಂದು ಪ್ಯಾನ್‌ನಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಒಣದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿ ಸೇರಿಸಿ.
    * ಬೀಜಗಳು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಹಲ್ವಾಗೆ ಹುರಿದ ಬೀಜಗಳನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಇದೀಗ ಆಲೂಗಡ್ಡೆಯ ಹಲ್ವಾ ತಯಾರಾಗಿದ್ದು, ಸ್ವಲ್ಪ ತಣ್ಣಗಾದಬಳಿಕ ಸವಿಯಿರಿ. ಇದನ್ನೂ ಓದಿ: ಸಿಹಿಯಾದ ಬಾಳೆಹಣ್ಣಿನ ಅಪ್ಪಂ – ಮಾಡುವುದು ತುಂಬಾ ಸುಲಭ

    Live Tv
    [brid partner=56869869 player=32851 video=960834 autoplay=true]

  • ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಸಾಂಪ್ರದಾಯಿಕ ಭಾರತೀಯ ಸಿಹಿ ತಿಂಡಿಗಳಲ್ಲೊಂದು ಕಡಲೆ ಹಿಟ್ಟಿನ ಲಡ್ಡು. ಏಲಕ್ಕಿ ತುಪ್ಪದ ಮಿಶ್ರಣದೊಂದಿಗೆ ಮಾಡುವ ಈ ಸಿಹಿ ಎಂಹವರ ಬಾಯಲ್ಲೂ ನೀರೂರಿಸುತ್ತದೆ. ಗಣೇಶ ಚತುರ್ಥಿ ಹತ್ತಿರದಲ್ಲಿದ್ದು, ಈ ಸಂದರ್ಭದಲ್ಲಿ ತಯಾರಿಸಬಹುದಾದ ಸಿಹಿಗಳಲ್ಲಿ ಇದು ಕೂಡಾ ಒಂದಾಗಿದೆ. ಭಾರತದಾದ್ಯಂತ ಫೇಮಸ್ ಆಗಿರುವ ಕಡಲೆ ಹಿಟ್ಟಿನ ಲಡ್ಡನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡಿ ಕಲಿಯಿರಿ.

    ಬೇಕಾಗುವ ಪದಾರ್ಥಗಳು:
    * ತುಪ್ಪ – ಅರ್ಧ ಕಪ್
    * ಕಡಲೆ ಹಿಟ್ಟು – 2 ಕಪ್
    * ಸಕ್ಕರೆ – 1 ಕಪ್
    * ಏಲಕ್ಕಿ – 4
    * ಒಣ ಕಲ್ಲಂಗಡಿ ಬೀಜಗಳು – 2 ಟೀಸ್ಪೂನ್
    * ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಹುರಿಯಿರಿ. ಮಿಶ್ರಣ ಒಣ ಎನಿಸಿದರೆ ಇನ್ನಷ್ಟು ತುಪ್ಪ ಸೇರಿಸಬಹುದು.
    * 20 ನಿಮಿಷಗಳ ಬಳಿಕ ಹಿಟ್ಟು ತುಪ್ಪವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಹಿಟ್ಟು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ಇದು ಸುಮಾರು 30 ನಿಮಿಷ ತೆಗೆದುಕೊಳ್ಳಬಹುದು.
    * ಬಳಿಕ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ಹಾಕಿ, ಸ್ವಲ್ಪ ತಣ್ಣಗಾಗಲು ಬಿಡಿ.
    * ಈ ನಡುವೆ ಒಣ ಹುರಿದ ಕಲ್ಲಂಗಡಿ ಬೀಜ ಹಾಗೂ ಗೋಡಂಬಿಯನ್ನು ಕಡಿಮೆ ಉರಿಯಲ್ಲಿ ಹುರಿದು, ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ.
    * ಈಗ ಸಕ್ಕರೆ ಹಾಗೂ ಏಲಕ್ಕಿಯನ್ನು ಬ್ಲೆಂಡರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಬಳಿಕ ತಣ್ಣಗಾದ ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. (ಹಿಟ್ಟು ಬೆಚ್ಚಗಿದ್ದರೆ ಸಕ್ಕರೆಯನ್ನು ಸೇರಿಸಬೇಡಿ. ಇದರಿಂದ ಸಕ್ಕರೆ ಕರಗುವ ಸಾಧ್ಯತೆ ಇರುತ್ತದೆ.)
    * ಈಗ ಮಿಶ್ರಣವನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿ, ಲಡ್ಡನ್ನು ತಯಾರಿಸಿ.
    * ಈಗ ಕಡಲೆ ಹಿಟ್ಟಿನ ಲಡ್ಡು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ, 2 ವಾರಗಳ ಕಾಲ ಕೆಡುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಫ್ರೀ ಟೈಂನಲ್ಲಿ ಮನೆಯಲ್ಲೇ ಮಾಡಿ ಗುಲಾಬ್ ಜಾಮೂನ್

    ಫ್ರೀ ಟೈಂನಲ್ಲಿ ಮನೆಯಲ್ಲೇ ಮಾಡಿ ಗುಲಾಬ್ ಜಾಮೂನ್

    ತ್ಯಂತ ಮೃದುವಾದ, ಬಾಯಿಗಿಟ್ಟರೆ ಕರಗುವಂತಹ ರುಚಿಕರವಾದ ಗುಲಾಬ್ ಜಾಮೂನ್ ಯಾರಿಗೆ ಇಷ್ಟ ಇಲ್ಲ ಹೇಳಿ? ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು. ಆದರೂ ಜನರು ಮಾರುಕಟ್ಟೆಯಲ್ಲಿ ದೊರಕುವ ರೆಡಿಮೆಡ್ ಇನ್ಸ್ಟೆಂಟ್ ಮಿಕ್ಸರ್‌ಗಳಿಂದಲೇ ಜಾಮೂನ್ ತಯಾರಿಸುವುದು ಎಷ್ಟು ಬೇಸರ ಅಲ್ವಾ? ಆದರೂ ಇದನ್ನು ಮನೆಯಲ್ಲಿಯೇ ಯಾವುದೇ ರೆಡಿಮೆಡ್ ಪೌಡರ್ ಬಳಸದೇ ಸುಲಭವಾಗಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಫ್ರೀ ಟೈಮ್‌ನಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಗುಲಾಬ್ ಜಾಮೂನ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    * ಮೈದಾ – 1/2 ಕಪ್
    * ತುರಿದ ಖೋವಾ- 1 ಕಪ್ (200-225 ಗ್ರಾಂ)
    * ಅಡುಗೆ ಸೋಡ- 1/8 ಟೀಸ್ಪೂನ್
    * ತುಪ್ಪ/ಎಣ್ಣೆ- ಡೀಪ್ ಫ್ರೈಗೆ ಬೇಕಾಗುವಷ್ಟು
    * ಹಸಿರು ಏಲಕ್ಕಿ – 3-4
    * ಕೇಸರಿ ಎಳೆಗಳು – 8-10
    * ಸಕ್ಕರೆ – ಒಂದೂವರೆ ಕಪ್
    * ನೀರು – ಎರಡೂವರೆ ಕಪ್

    ಮಾಡುವ ವಿಧಾನ:
    * ಮೊದಲು ಸಕ್ಕರೆ ಪಾಕ ತಯಾರಿಸಲು ಆಳವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ನೀರಿನೊಂದಿಗೆ ಸಕ್ಕರೆ, ಏಲಕ್ಕಿ ಹಾಗೂ ಕೇಸರಿ ಎಳೆಗಳನ್ನು ಹಾಕಿ ಕುದಿಸಿ. ಬಳಿಕ 10-12 ನಿಮಿಷಗಳವರೆಗೆ ಪಾಕ ಜಿಗುಟಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ, ಪಕ್ಕಕ್ಕಿಡಿ.
    * ಜಾಮೂನ್ ಮಿಶ್ರಣ ತಯಾರಿಸಲು ತುರಿದ ಖೋವಾಗೆ ಅಡುಗೆ ಸೋಡಾ, ಜರಡಿ ಹಿಡಿದ ಮೈದಾ ಸೇರಿಸಿ, ಹಿಟ್ಟಿನಂತೆ ನುಣ್ಣಗೆ ಮಿಶ್ರಣ ಮಾಡಿ. ಅಂಟು ಬರಲು ಸ್ವಲ್ಪ ಹಾಲು ಬಳಸಬಹುದು.
    * ಈ ಹಿಟ್ಟನ್ನು 20 ನಿಮಿಷಗಳ ಕಾಲ ಪಕ್ಕಕ್ಕೆ ಇಟ್ಟು, ಬಳಿಕ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಕೈಗೆ ಸ್ವಲ್ಪ ತುಪ್ಪ ಸವರಿ ಉಂಡೆ ಕಟ್ಟುವುದರಿಂದ ಉಂಡೆ ನಯವಾಗಿ ಮೂಡಿ ಬರುತ್ತದೆ. ಉಂಡೆಯಲ್ಲಿ ಬಿರುಕು ಬೀಳದಂತೆ ಎಚ್ಚರವಹಿಸಿ.
    * ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಉಂಡೆಗಳನ್ನು ಹಾಕಿ ಗಾಢ ಕಂದು ಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ.
    * ಕಾದ ಉಂಡೆಗಳನ್ನು ಎಣ್ಣೆಯಿಂದ ತೆಗೆದು 5 ನಿಮಿಷ ಆರಲು ಬಿಡಿ.
    * ಬಿಸಿ ಸ್ವಲ್ಪ ಆರಿದ ಬಳಿಕ ಸಕ್ಕರೆ ಪಾಕಕ್ಕೆ ಅವುಗಳನ್ನು ಹಾಕಿ, 2 ಗಂಟೆ ಹೀರಿಕೊಳ್ಳಲು ಬಿಡಿ.

     

    ಬೇಕೆಂದಲ್ಲಿ ಬಾದಾಮಿ ಪಿಸ್ತಾಗಳನ್ನು ಇಟ್ಟು ಅಲಂಕಾರ ಮಾಡಿದರೆ ಮೃದುವಾದ ಗುಲಾಬ್ ಜಾಮೂನ್ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿಯೇ ಮಾಡಬಹುದು ಸರಳವಾದ ಸಬ್ಬಕ್ಕಿ ಪಾಯಸ

    ಮನೆಯಲ್ಲಿಯೇ ಮಾಡಬಹುದು ಸರಳವಾದ ಸಬ್ಬಕ್ಕಿ ಪಾಯಸ

    ಸಾಮಾನ್ಯವಾಗಿ ಸಿಹಿ ಎಂದ ತಕ್ಷಣ ಮೊದಲಿಗೆ ನೆನೆಪಾಗುವುದು ಪಾಯಸ. ಯಾವುದೇ ಹಬ್ಬ, ಕಾರ್ಯಕ್ರಮಗಳಲ್ಲಿ ಸಿಹಿಯೂಟದ ಜೊತೆಗೆ ಪಾಯಸ ಕಡ್ಡಾಯವಾಗಿ ಹಾಕುತ್ತಾರೆ. ಮಕ್ಕಳಿಂದ ವಯಸ್ಸಾದವರವರೆಗೂ ಪಾಯಸ ಎಂದರೆ ಎಲ್ಲರೂ ಬಾಯಿ ಚಪ್ಪರಿಸುತ್ತಾರೆ. ಪಾಯಸದಲ್ಲಿ ಹಾಲು ಪಾಯಸ, ಶಾವಿಗೆ ಪಾಯಸ, ಹೆಸರು ಬೆಳೆ ಪಾಯಸ ಹೀಗೆ ವಿಧ, ವಿಧವಾದ ಹಲವಾರು ಪಾಯಸಗಳಿದೆ. ಅವುಗಳಲ್ಲಿ ಸಬ್ಬಕ್ಕಿ ಪಾಯಸ ಕೂಡ ಒಂದು. ನಿಮಗೆ ತಕ್ಷಣಕ್ಕೆ ಸಿಹಿ ಮಾಡಿ ಸವಿಯ ಬೇಕೆಂದರೆ ಮನೆಯಲ್ಲಿಯೇ ಫಟಾಫಟ್ ಎಂದು ಸಬ್ಬಕ್ಕಿ ಪಾಯಸ ಮಾಡಿ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * 1/4 ಕಪ್ ಸಬ್ಬಕ್ಕಿ
    * ಏಲಕ್ಕಿಕಾಯಿ ಪುಡಿ
    * 1/4 ಕಪ್ ಸಕ್ಕರೆ
    * ದ್ರಾಕ್ಷಿ, ಗೋಡಂಬಿ
    * ಕೇಸರಿ ದಳ
    * ಬಾದಮಿ ಪುಡಿ- 1 ಚಮಚ
    * ಹಾಲು – 3 ಕಪ್
    * ತುಪ್ಪ -1 ಚಮಚ

    ಮಾಡುವ ವಿಧಾನ:
    * ಒಂದು ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿಯನ್ನು ಉರಿದುಕೊಳ್ಳಬೇಕು.
    * ಬಾಣಲಿಲೆಗೆ ಹಾಲನ್ನು ಸುರಿದುಕೊಂಡು ನೀರಿನಲ್ಲಿ ನೆನೆಸಿಟ್ಟಿದ್ದ ಸಬ್ಬಕ್ಕಿಯನ್ನು ಬೆರೆಸಬೇಕು.
    * ಸಬ್ಬಕ್ಕಿ ಬೆಂದ ನಂತರ ಇದಕ್ಕೆ ಸಕ್ಕರೆ ಹಾಕಬೇಕು. ನಂತರ ಒಂದು ಕಪ್ ಹಾಲಿನಲ್ಲಿ ನೆನಸಿಟ್ಟ ಕೇಸರಿಯನ್ನು ಮಿಶ್ರಣ ಮಾಡಬೇಕು. ಬಳಿಕ 5-6 ನಿಮಿಷ ಚೆನ್ನಾಗಿ ಕುದಿಸಬೇಕು.
    * 10 ನಿಮಿಷ ಕುದಿಸಿದ ನಂತರ ಬಾದಾಮಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಬೇಕು. ಕ್ರೀಮಿ ರೀತಿ ಇರುವ ಪಾಯಸವನ್ನು ಸ್ಟವ್ ಮೇಲಿಂದ ಕೆಳಗೆ ಇಳಿಸಿ ಕಪ್‍ನಲ್ಲಿ ಬಡಿಸಿಕೊಂಡರೆ, ಪಾಯಸ ಸವಿಯಲು ಸಿದ್ಧ. ಇದನ್ನೂ ಓದಿ: ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿ ಫಿಶ್ ಫ್ರೈ

  • ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಯಾವುದೇ ವಿಶೇಷವಿಲ್ಲ. ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ  ಬರ್ಫಿ ಮಾಡಿ ಸವಿಯಿರಿ…

    ಬೇಕಾಗುವ ಸಾಮಗ್ರಿಗಳು:
    * ಪಾರ್ಲೆಜಿ ಬಿಸ್ಕೆಟ್ – 3 ಪ್ಯಾಕೆಟ್
    * ಸಕ್ಕರೆ – ಅ ಕಪ್
    * ತುಪ್ಪ- ಅರ್ಧ ಕೆಜಿ
    * ಹಾಲಿನ ಪುಡಿ- 2 ಚಮಚ
    * ಹಾಲು- 1 ಕಪ್
    * ಡ್ರೈಫ್ರೂಟ್ಸ್- ಅರ್ಧ ಕಪ್

    ಮಾಡುವ ವಿಧಾನ:
    * ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಪಾರ್ಲೆಜಿ ಬಿಸ್ಕೆಟ್‍ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ.
    * ನಂತರ ತುಪ್ಪದಲ್ಲಿ ಹುರಿದ ಬಿಸ್ಕೇಟ್‍ನ್ನು ಮಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    biscuit barfi

    * ಬಿಸ್ಕೇಟ್ ಪುಡಿಯನ್ನು ಹಾಲಿನ ಪುಡಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
    * ಮತ್ತೊಂದು ಬಾಣೆಲೆ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ಗಟ್ಟಿಯಾದ ಬಳಿಕ ಹಾಲಿನ ಪುಡಿ, ಬಿಸ್ಕೆಟ್ ಪುಡಿಯನ್ನು ಹಾಕಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಕದಡಿಕೊಂಡು, ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ, ರುಚಿಕರವಾದ ಬಿಸ್ಕೆಟ್ ಬರ್ಫಿ ಸವಿಯಲು ಸಿದ್ಧವಾಗುತ್ತದೆ.  ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ