Tag: Sweet Recipe

  • ಸಿಹಿಯೊಂದಿಗೆ ಬೆಳಕಿನ ಹಬ್ಬ ಆಚರಿಸೋಣ – ಮನೆಯಲ್ಲೇ ಮಾಡಿ ವಾಲ್ನಟ್ ಬರ್ಫಿ

    ಸಿಹಿಯೊಂದಿಗೆ ಬೆಳಕಿನ ಹಬ್ಬ ಆಚರಿಸೋಣ – ಮನೆಯಲ್ಲೇ ಮಾಡಿ ವಾಲ್ನಟ್ ಬರ್ಫಿ

    ದೀಪಾವಳಿ ಹಬ್ಬ ಬಂತು ಅಂದ್ರೆ ಚಳಿಗಾಲವೂ ಶುರುವಾಯ್ತು ಎಂದೇ ಅರ್ಥ. ಈ ಸಂದರ್ಭದಲ್ಲಿ ಆರೋಗ್ಯ ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯ. ತಣ್ಣಗಿನ ಈ ದಿನಗಳಲ್ಲಿ ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿ ಹಬ್ಬದಲ್ಲೂ ಸಿಹಿ ತಿನಿಸುಗಳೇ ಹೆಚ್ಚು ವಿಶೇಷ. ಬಂಧು-ಬಳಗದವರಿಗೆ ಬಾಯಿ ಸಿಹಿ ಮಾಡಿಸಿ ಹಬ್ಬವನ್ನು ಸಮೃದ್ಧಿಯಿಂದ ಆಚರಣೆ ಮಾಡ್ತಾರೆ. ಈ ಬಾರಿ ಮನೆಯಲ್ಲೇ ಮಾಡಬಹುದಾದ ಸ್ಪೆಷಲ್‌ ವಾಲ್ನಟ್‌ ಬರ್ಫಿ (Walnut Burfi) ಮಾಡೋದು ಹೇಗೆಂದು ಹೇಳಿಕೊಡ್ತಿದ್ದೇವೆ. ಮನೆಯಲ್ಲೇ ಮಾಡಿ ಸವಿದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಮಾತ್ರವಲ್ಲದೇ ಕುಟುಂಬ, ಸ್ನೇಹಿತರಿಗೂ ಹಂಚಿ ಸಂಬಂಧಗಳನ್ನು ಗಟ್ಟಿಗೊಳಿಸಿ.

    ಬೇಕಾಗುವ ಪದಾರ್ಥಗಳು:
    ಒರಟಾಗಿ ಪುಡಿ ಮಾಡಿದ ವಾಲ್ನಟ್ – 1 ಕಪ್
    ಸಕ್ಕರೆ – 4 ಟೀಸ್ಪೂನ್
    ಹಾಲಿನ ಪುಡಿ – 4 ಟೀಸ್ಪೂನ್
    ಹಾಲು – 4 ಟೀಸ್ಪೂನ್
    ಜಾಯಿಕಾಯಿ ಪುಡಿ – ಚಿಟಿಕೆ
    ತುಪ್ಪ – 4 ಟೀಸ್ಪೂನ್
    ಮಾವಾ – ಕಾಲು ಕಪ್

    ಬೇಕಾಗುವ ಪದಾರ್ಥಗಳು:
    * ಮೊದಲಿಗೆ ಮೈಕ್ರೊವೇವ್ ಸೇಫ್ ಬೌಲ್‌ನಲ್ಲಿ ಮಾವಾ ಮತ್ತು 2 ಟೀಸ್ಪೂನ್ ತುಪ್ಪವನ್ನು ಸೇರಿಸಿ ಮತ್ತು 1 ನಿಮಿಷ ಬಿಸಿ ಮಾಡಿ.
    * ಸಕ್ಕರೆ, ಹಾಲಿನ ಪುಡಿ, ಹಾಲು ಮತ್ತು ಜಾಯಿಕಾಯಿ ಪುಡಿ ಸೇರಿಸಿ ಪಕ್ಕಕ್ಕೆ ಇರಿಸಿ.
    * ಉಳಿದ ತುಪ್ಪವನ್ನು ವಾಲ್ನಟ್‌ಗೆ ಸೇರಿಸಿ 1 ನಿಮಿಷ ಬೆರೆಸಿ. ಅದನ್ನು 2 ನಿಮಿಷಗಳ ಕಾಲ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಮಿಶ್ರಣಕ್ಕೆ ಹಾಲು ಮತ್ತು ಸಕ್ಕರೆ ಮಿಶ್ರಣ ಸೇರಿಸಿ ಮೈಕ್ರೊವೇವ್‌ನಲ್ಲಿ 1 ನಿಮಿಷ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಈಗ ಗ್ರೀಸ್ ಮಾಡಿದ ಪಾತ್ರೆಯಲ್ಲಿ ಈ ಮಿಶ್ರಣವನ್ನು ಹರಡಿ, 1 ಗಂಟೆ ತಣ್ಣಗಾಗಲು ಪಕ್ಕಕ್ಕೆ ಇರಿಸಿ.
    * ನಂತರ ಅದನ್ನು ಚಾಕುವಿನ ಸಹಾಯದಿಂದ ಚೌಕಾಕಾರ ಇಲ್ಲವೇ ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿಕೊಳ್ಳಿ.
    * ಇದೀಗ ವಾಲ್ನಟ್ ಬರ್ಫಿ ತಯಾರಾಗಿದ್ದು, ಕುಟುಂಬ, ಸ್ನೇಹಿತರಿಗೆ ಹಂಚಿ. ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್

  • ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಸ್ಪೆಷಲ್‌ ಬೇಯಿಸಿದ ಹೂರಣ ಕಡುಬು ಮಾಡಿ

    ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಸ್ಪೆಷಲ್‌ ಬೇಯಿಸಿದ ಹೂರಣ ಕಡುಬು ಮಾಡಿ

    ತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಶ್ರಾವಣದ ಜೊತೆಗೆ ನಾಗರಪಂಚಮಿ ಬರುವುದರಿಂದ ಅದರ ಕಳೆ ಇನ್ನಷ್ಟು ಹೆಚ್ಚುತ್ತದೆ.

    ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್‌, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ಬೇಯಿಸಿದ ಹೂರಣದ ಕಡುಬು ಮಾಡುವುದು ವಿಶೇಷ. ಇದನ್ನು ದೇವರಿಗೆ ನೈವೇದ್ಯವಾಗಿಯೂ ಅರ್ಪಿಸುತ್ತಾರೆ.

    ಬೇಕಾಗುವ ಪದಾರ್ಥಗಳು:
    ಗೋಧಿ ಹಿಟ್ಟು
    ಕಡಲೆ ಬೆಳೆ
    ಬೆಲ್ಲ
    ಮೆಕ್ಕೆ ಜೋಳದ ಎಲೆ
    ಉಪ್ಪು (ರುಚಿಗೆ ತಕ್ಕಷ್ಟು)

    ಮಾಡುವ ವಿಧಾನ:
    ಮೊದಲಿಗೆ ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಮೆತ್ತಗೆ ಆಗುವವರೆಗೂ ಬೇಯಿಸಿಕೊಳ್ಳಬೇಕು. ಬಳಿಕ ಅದರ ರುಚಿಗನುಸಾರವಾಗಿ ಬೆಲ್ಲವನ್ನು ಹಾಕಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಬೇಕು. ಅದರ ಮೇಲೆ ಸ್ಟೀಲ್‌ ರಂಧ್ರದ ಜರಡಿಯನ್ನು ಇಟ್ಟುಕೊಂಡು ಅದಕ್ಕೆ ಮೆಕ್ಕೆಜೋಳದ ಎಲೆಯನ್ನು ಹಾಕಿಕೊಳ್ಳಬೇಕು.

    ಬಳಿಕ ಕಡುಬು ಮಾಡುವ ಆಕಾರದಲ್ಲಿ ಚಪಾತಿಯನ್ನು ಮಾಡಿಕೊಂಡು ಅದಕ್ಕೆ ಹೂರಣ ತುಂಬಿಕೊಳ್ಳಬೇಕು. ಬಳಿಕ ಖರ್ಜಿಕಾಯಿ ರೀತಿಯಲ್ಲಿ ಮಾಡಿಕೊಳ್ಳಬೇಕು. ಕೊನೆಗೆ ಪಾತ್ರೆಯಲ್ಲಿಟ್ಟ ನೀರು ಕುದಿಯಲು ಆರಂಭಿಸಿದಾಗ ಮೆಕ್ಕೆಜೋಳದ ಎಲೆ ಮೇಲೆ ಮಾಡಿದ ಕಡುಬು ಹಾಕಿಕೊಂಡು ಅದರ ಮೇಲೆ ಮುಚ್ಚಳ ಮುಚ್ಚಿಕೊಳ್ಳಬೇಕು. 5 ರಿಂದ 9 ನಿಮಿಷದ ಒಳಗೆ ಕಡುಬು ತಯಾರಾಗಿರುತ್ತದೆ.

    ಕಡುಬು ತುಪ್ಪಿನ ಜೊತೆ ಸವಿಯಲು ಚೆನ್ನಾಗಿರುತ್ತದೆ.