Tag: Sweet Potato Cutlet

  • ಚಹಾದೊಂದಿಗೆ ಮಾಡಿ ಸವಿಯಿರಿ ರುಚಿರುಚಿಯಾದ ಗೆಣಸಿನ ಕಟ್ಲೆಟ್

    ಚಹಾದೊಂದಿಗೆ ಮಾಡಿ ಸವಿಯಿರಿ ರುಚಿರುಚಿಯಾದ ಗೆಣಸಿನ ಕಟ್ಲೆಟ್

    ನೀವು ಆಲೂಗಡ್ಡೆಯ ಕಟ್ಲೆಟ್ ಅಥವಾ ಮಿಕ್ಸ್ ವೆಜ್‌ಟೇಬಲ್ ಕಟ್ಲೆಟ್ ಅನ್ನು ಯಾವಾಗಲೂ ಮಾಡಿ ಸವಿದಿರುತ್ತೀರಿ. ಎಂದಾದರೂ ಗೆಣಸಿನ ಕಟ್ಲೆಟ್ (Sweet Potato Cutlet) ಮಾಡಿ ನೋಡಿದ್ದೀರಾ? ತುಂಬಾ ಸರಳವಾಗಿ, ರುಚಿರುಚಿಯಾಗಿ ಹಾಗೂ ಬೇಗನೆ ಮಾಡಬಹುದಾದ ಗೆಣಸಿನ ಕಟ್ಲೆಟ್ ಅನ್ನು ಒಮ್ಮೆ ಮಾಡಿ ನೋಡಿ. ನೀವು ಚಹಾದೊಂದಿಗೆ ಸವಿಯಲು ಮತ್ತೆ ಮತ್ತೆ ಈ ರೆಸಿಪಿಯನ್ನು ಖಂಡಿತವಾಗಿಯೂ ಮಾಡುತ್ತೀರಿ.

    ಬೇಕಾಗುವ ಪದಾರ್ಥಗಳು:
    ಗೆಣಸು – 2-3
    ಈರುಳ್ಳಿ – 1
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1-2
    ತುರಿದ ಶುಂಠಿ – 1 ಇಂಚು
    ತುರಿದ ಕ್ಯಾರೆಟ್ – 1 (ಐಚ್ಛಿಕ)
    ಜೀರಿಗೆ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಚಾಟ್ ಮಸಾಲಾ – ಅರ್ಧ ಟೀಸ್ಪೂನ್ (ಐಚ್ಛಿಕ)
    ಆಮ್ಚೂರ್ ಪುಡಿ – ಅರ್ಧ ಟೀಸ್ಪೂನ್
    ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ಬ್ರೆಡ್ ಕ್ರಂಬ್ಸ್ – ಕೋಟಿಂಗ್‌ಗೆ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಟೇಸ್ಟಿ ಆಲೂಗಡ್ಡೆ ರವಾ ಫ್ರೈ

    ಮಾಡುವ ವಿಧಾನ:
    * ಮೊದಲಿಗೆ ಗೆಣಸನ್ನು ಬೇಯಿಸಿ, ಸಿಪ್ಪೆ ಸುಲಿದು ಕಿವುಚಿ (ಮ್ಯಾಶ್ ಮಾಡಿ) ಪಕ್ಕಕ್ಕಿಡಿ.
    * ಬಾಣಲೆಗೆ 1 ಟೀಸ್ಪೂನ್ ಎಣ್ಣೆ ಹಾಕಿ, ಜೀರಿಗೆ, ಈರುಳ್ಳಿ, ಶುಂಠಿ ಹಾಗೂ ಹಸಿರು ಮೆಣಸು ಸೇರಿಸಿ, 2-3 ನಿಮಿಷ ಹುರಿಯಿರಿ.
    * ಅದಕ್ಕೆ ಕ್ಯಾರೆಟ್ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಮತ್ತೆ 1-2 ನಿಮಿಷ ಹುರಿಯಿರಿ.
    * ಈಗ ಉರಿಯನ್ನು ಆಫ್ ಮಾಡಿ, ಬೇಯಿಸಿ ಕಿವುಚಿದ ಗೆಣಸನ್ನು ಸೇರಿಸಿ ಮಿಶ್ರಣ ಮಾಡಿ.
    * ಈಗ ರುಚಿಗೆ ಬೇಕಾಗುವಷ್ಟು ಉಪ್ಪು, ಮೆಣಸಿನ ಪುಡಿ, ಚಾಟ್ ಮಸಾಲಾ, ಆಮ್ಚೂರ್ ಪುಡಿ, ಗರಂ ಮಸಾಲಾ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ತಯಾರಿಸಿಟ್ಟ ಮಿಶ್ರಣವನ್ನು 2-3 ಟೀಸ್ಪೂನ್‌ನಷ್ಟು ತೆಗೆದುಕೊಂಡು ಕಟ್ಲೆಟ್ ಆಕಾರ ನೀಡಿ. ನಿಮ್ಮಿಷ್ಟದ ರೌಂಡ್, ಅಂಡಾಕಾರ, ಚೌಕ ಅಥವಾ ಹೃದಯದ ಆಕಾರವನ್ನೂ ನೀಡಬಹುದು.

    * ಈಗ ಒಂದು ಸಣ್ಣ ಬಟ್ಟಲಿನಲ್ಲಿ ಕಾರ್ನ್ ಫ್ಲೋರ್ ಅನ್ನು ತೆಗೆದುಕೊಂಡು, ಅದಕ್ಕೆ 2-3 ಟೀಸ್ಪೂನ್ ನೀರು ಹಾಕಿ, ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಇನ್ನೊಂದು ತಟ್ಟೆ ತೆಗೆದುಕೊಂಡು, ಅದರಲ್ಲಿ ಬ್ರೆಡ್ ಕ್ರಂಬ್ಸ್ ಅನ್ನು ಹರಡಿ ಇಡಿ.
    * ತಯಾರಿಸಿಟ್ಟ ಕಟ್ಲೆಟ್‌ಗಳನ್ನು ಮೊದಲಿಗೆ ಕಾರ್ನ್ ಫ್ಲೋರ್ ಮಿಶ್ರಣದಲ್ಲಿ ಅದ್ದಿ, ಬಳಿಕ ಬ್ರೆಡ್ ಕ್ರಂಬ್ಸ್‌ಗೆ ಹಾಕಿ ರೋಲ್ ಮಾಡಿ ಚೆನ್ನಾಗಿ ಕೋಟ್ ಮಾಡಿ.
    * ಕಟ್ಲೆಟ್‌ಗಳನ್ನು ಗಟ್ಟಿಯಾಗಿಸಲು 30 ನಿಮಿಷ ಫ್ರಿಜ್‌ನಲ್ಲಿಡಬಹುದು.
    * ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಅದಕ್ಕೆ 1-2 ಟೀಸ್ಪೂನ್ ಎಣ್ಣೆ ಹಾಕಿ, ಕಟ್ಲೆಟ್‌ಗಳನ್ನು ಅದರಲ್ಲಿ ಹಾಕಿ, ಫ್ರೈ ಮಾಡಿ.
    * ಕಟ್ಲೆಟ್ ಗರಿಗರಿ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿಗಳಲ್ಲಿ ಚೆನ್ನಾಗಿ ಕರಿಯಿರಿ.
    * ಇದೀಗ ಗೆಣಸಿನ ಕಟ್ಲೆಟ್ ರೆಡಿಯಾಗಿದ್ದು, ಚಹಾದ ಸಮಯದಲ್ಲಿ ಕೆಚಪ್ ಜೊತೆಗೆ ಸವಿಯಿರಿ. ಇದನ್ನೂ ಓದಿ: ಸ್ಟಫ್ಡ್ ಹಾಗಲಕಾಯಿಯನ್ನು ಒಮ್ಮೆ ಮಾಡಿ ನೋಡಿ – ಮತ್ತೆಂದೂ ಈ ತರಕಾರಿ ಬೇಡ ಎನ್ನಲ್ಲ

    Live Tv
    [brid partner=56869869 player=32851 video=960834 autoplay=true]