Tag: Swati Maliwal

  • ಎಲ್ಲಾ ನಾಯಕರು ಬಿಜೆಪಿ ಕಚೇರಿಗೆ ಬರ್ತೀವಿ.. ಎಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ: ಕೇಜ್ರಿವಾಲ್‌ ಕಿಡಿ

    ಎಲ್ಲಾ ನಾಯಕರು ಬಿಜೆಪಿ ಕಚೇರಿಗೆ ಬರ್ತೀವಿ.. ಎಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ: ಕೇಜ್ರಿವಾಲ್‌ ಕಿಡಿ

    – ಆಪ್ತ ಸಹಾಯಕನ ಬಂಧನಕ್ಕೆ ದೆಹಲಿ ಸಿಎಂ ಅಸಮಾಧಾನ

    ನವದೆಹಲಿ: ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ (Swati Maliwal) ಅವರ ಮೇಲೆ ಹಲ್ಲೆ ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕನನ್ನು ಬಂಧಿಸಿದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ (BJP) ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬಿಜೆಪಿ ನಾಯಕರು ಆಪ್ ಪಕ್ಷದ ಹಿಂದೆ ಬಿದ್ದಿದ್ದಾರೆ. ಒಬ್ಬರಾದ ಬಳಿಕ ಒಬ್ಬರಂತೆ ನಮ್ಮ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಮನೀಶ್ ಸಿಸೋಡಿಯ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಮತ್ತು ನನ್ನನ್ನು ಜೈಲಿಗೆ ಹಾಕಲಾಯಿತು. ಈಗ ನನ್ನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸ್ವಾತಿ ಮಲಿವಾಲ್‌ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತ ಸಹಾಯಕ ಅರೆಸ್ಟ್‌

    ಈಗಷ್ಟೇ ಲಂಡನ್‌ನಿಂದ ವಾಪಸ್ ಆಗಿರುವ ರಾಘವ್ ಚಡ್ಡಾ ಅವರನ್ನು ಬಂಧಿಸಲಿದ್ದಾರಂತೆ. ಸೌರಭ್ ಭಾರಧ್ವಾಜ್ ಮತ್ತು ಅತಿಯನ್ನು ಜೈಲಿಗೆ ಹಾಕಲಾಗುವುದು ಎನ್ನಲಾಗುತ್ತಿದೆ. ನಮ್ಮನ್ನು ಜೈಲಿಗೆ ಹಾಕಲಾಗುತ್ತಿದೆ. ಅಷ್ಟಕ್ಕೂ ನಮ್ಮ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

    ದೆಹಲಿ ಬಡ ಜನರಿಗೆ ಒಳ್ಳೆಯ ಶಿಕ್ಷಣ, ಉತ್ತಮ ಆರೋಗ್ಯ ನೀಡುತ್ತಿರುವುದು ನಮ್ಮ ತಪ್ಪಾ? ಇದನ್ನು ಅವರು ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಜೈಲಿ ಕಾ ಕೇಲ್ (ಜೈಲಿನ ಆಟ) ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌

    ನಾಳೆ ಮಧ್ಯಾಹ್ನ 12 ಗಂಟೆಗೆ ಎಲ್ಲ ಹಿರಿಯ ನಾಯಕರೊಂದಿಗೆ ನಾನು ಬಿಜೆಪಿ ಕಚೇರಿಗೆ ಬರಲಿದ್ದೇವೆ. ಯಾರ‍್ಯಾರನ್ನು ಜೈಲಿಗೆ ಹಾಕಬೇಕು ಒಟ್ಟಿಗೆ ಹಾಕಿ. ಹೀಗೆ ಜೈಲಿಗೆ ಹಾಕಿ ಆಪ್ ಪಕ್ಷವನ್ನು ನಾಶ ಮಾಡಬೇಕು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಆಪ್ ಪಕ್ಷ ಒಂದೇ ಚಿಂತನೆಯಾಗಿದೆ. ಇದನ್ನು ನಾಶ ಮಾಡಲು ಪ್ರಯತ್ನಿಸಿದಷ್ಟು ಈ ಚಿಂತನೆ ದೇಶದಲ್ಲಿ ಹೆಚ್ಚಲಿದೆ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

  • ಸ್ವಾತಿ ಮಲಿವಾಲ್‌ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತ ಸಹಾಯಕ ಅರೆಸ್ಟ್‌

    ಸ್ವಾತಿ ಮಲಿವಾಲ್‌ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತ ಸಹಾಯಕ ಅರೆಸ್ಟ್‌

    ನವದೆಹಲಿ: ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಲ್‌ (Swati Maliwal) ಮೇಲೆ ದೌರ್ಜನ್ಯ ಎಸಗಿದ ದೆಹಲಿ ಸಿಎಂ ಕೇಜ್ರಿವಾಲ್‌ (Arvind Kejriwal) ಆಪ್ತ ಸಹಾಯಕ ಬಿಭವ್‌ ಕುಮಾರ್‌ (Bibhav Kumar) ಅವರನ್ನು ಪೊಲೀಸರು ಬಂಧಿಸಿದ್ದರು.

    ಮೇ 13 ರಂದು ಸಿಎಂ ನಿವಾಸದಲ್ಲಿ ತನ್ನ ಮೇಲೆ ಬಿಭವ್‌ ಕುಮಾರ್‌ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್‌ ದೂರು ನೀಡಿದ್ದರು. ಸ್ವಾತಿ ಮಲಿವಾಲ್‌ ದೂರಿನ ಬೆನ್ನಲ್ಲೇ ವಿಧಿವಿಜ್ಞಾನ ತಜ್ಞರು, ಪೊಲೀಸರ ತಂಡ ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತ್ತು. ತನಿಖೆಯ ಭಾಗವಾಗಿ ವಿಡಿಯೋ ಸೆರೆ ಹಿಡಿದ ನಂತರ ಶನಿವಾರ ನಸುಕಿನ ಜಾವ 2:15ಕ್ಕೆ ತಂಡ ಸಿಎಂ ನಿವಾಸದಿಂದ ಹೊರಬಂದಿತ್ತು.

     

    ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ನಿವಾಸದ ಸಿಸಿಟಿವಿ ಪೊಲೀಸರು ಸೀಲ್ ಮಾಡಿದ್ದಾರೆ. ತನಿಖೆಯ ದೃಷ್ಟಿಯಿಂದ ತಾಂತ್ರಿಕ ಸಾಕ್ಷಿಯಾಗಿ ಪರಿಗಣನೆ ಮಾಡಲು ಡಿವಿಆರ್‌ ಸಹಿತ ದತ್ತಾಂಶವನ್ನು ದೆಹಲಿ ಪೊಲೀಸರು ಸೀಲ್ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದು, ಕೆನ್ನೆಗೆ ಹೊಡೆದಿದ್ದಾನೆ – ಕೇಜ್ರಿವಾಲ್ ಆಪ್ತನ ವಿರುದ್ಧ ಮಲಿವಾಲ್ ದೂರು

     

  • ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌

    ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌

    ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್‌ (Delhi CM Arvind Kejriwal) ನಿವಾಸದ ಸಿಸಿಟಿವಿಯನ್ನು ಟ್ಯಾಂಪರಿಂಗ್‌ (CCTV Tampering ) ಮಾಡುತ್ತಿದ್ದಾರೆ ಎಂದು ಆಪ್‌ (AAP) ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ (Swati Maliwal) ಗಂಭೀರ ಆರೋಪ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ಈಗ ಈ ವ್ಯಕ್ತಿಗಳು ಮನೆಯ ಸಿಸಿಟಿವಿಯನ್ನು ಟ್ಯಾಂಪರಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ ಎಂದು ಆರೋಪಿಸಿ ತಮ್ಮ ಪೋಸ್ಟ್‌ನಲ್ಲಿ ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

    ಶುಕ್ರವಾರದವರೆಗೆ ಸ್ವಾತಿ ಮಲಿವಾಲ್‌ ಅವರ ಡಿಪಿಯಲ್ಲಿ ಬಂಧನಕ್ಕೆ ಒಳಗಾದ ಕೇಜ್ರಿವಾಲ್‌ ಅವರ ಚಿತ್ರವಿತ್ತು. ಆದರೆ ಈಗ ಕಪ್ಪು ಬಣ್ಣದ ಚಿತ್ರವನ್ನು ಹಾಕಿದ್ದಾರೆ. ಇದನ್ನೂ ಓದಿ: ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

    ಸ್ವಾತಿ ಮಲಿವಾಲ್‌ ದೂರಿನ ಬೆನ್ನಲ್ಲೇ ವಿಧಿವಿಜ್ಞಾನ ತಜ್ಞರು, ಪೊಲೀಸರ ತಂಡ ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತು. ತನಿಖೆಯ ಭಾಗವಾಗಿ ವಿಡಿಯೋ ಸೆರೆ ಹಿಡಿದ ನಂತರ ಶನಿವಾರ ನಸುಕಿನ ಜಾವ 2:15ಕ್ಕೆ ತಂಡ ಸಿಎಂ ನಿವಾಸದಿಂದ ಹೊರಟಿತು.

    ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ನಿವಾಸದ ಸಿಸಿಟಿವಿ ಪೊಲೀಸರು ಸೀಲ್ ಮಾಡಿದ್ದಾರೆ. ತನಿಖೆಯ ದೃಷ್ಟಿಯಿಂದ ತಾಂತ್ರಿಕ ಸಾಕ್ಷಿಯಾಗಿ ಪರಿಗಣನೆ ಮಾಡಲು ಡಿವಿಆರ್‌ ಸಹಿತ ದತ್ತಾಂಶವನ್ನು ದೆಹಲಿ ಪೊಲೀಸ್ ಸೀಲ್ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

     

    ಪ್ರತಿ ಬಾರಿಯಂತೆ ಈ ಬಾರಿಯೂ ಈ ರಾಜಕೀಯ ಹಿಟ್‌ಮ್ಯಾನ್ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾನೆ. ತನ್ನ ಜನರ ಮೂಲಕ ಸರಿಯಾದ ವಿವರ ಇಲ್ಲದ ವೀಡಿಯೋವನ್ನು ಟ್ವೀಟ್‌ ಮಾಡಿ ತಪ್ಪು ಮಾಡಿಯೂ ತಾನು ಪಾರಾಗಬಹುದು ಎಂದು ಭಾವಿಸಿದ್ದಾನೆ. ಮನೆಯಲ್ಲಿ ಥಳಿಸುವ ವಿಡಿಯೋವನ್ನು ಯಾರಾದರೂ ಮಾಡುತ್ತಾರಾ? ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗಲೇ ಸತ್ಯಾಂಶ ಎಲ್ಲರಿಗೂ ಬಹಿರಂಗವಾಗುವುದು. ನೀವು ಯಾವ ಮಟ್ಟಕ್ಕೆ ಇಳಿಯುತ್ತಿದ್ದೀರಿ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ಮುಂದೊಂದು ದಿನ ಪ್ರತಿಯೊಬ್ಬರ ಸತ್ಯವೂ ಜಗತ್ತಿನ ಮುಂದೆ ಅನಾವರಣವಾಗಲಿದೆ ಎಂದು ಸ್ವಾತಿ ಮಲಿವಾಲ್‌ ಶುಕ್ರವಾರ ಹೇಳಿದ್ದರು.

  • ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಕೇಸ್‌ – ಪ್ರತಿ ದೂರು ದಾಖಲಿಸಿದ ಆರೋಪಿ ಬಿಭವ್‌

    ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಕೇಸ್‌ – ಪ್ರತಿ ದೂರು ದಾಖಲಿಸಿದ ಆರೋಪಿ ಬಿಭವ್‌

    ನವದೆಹಲಿ: ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ (Swati Maliwal) ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ (Bibhav Kumar) ಪ್ರತಿದೂರು ದಾಖಲಿಸಿದ್ದಾರೆ.

    ಸ್ವಾತಿ ಮಲಿವಾಲ್‌ ವಿರುದ್ಧವೇ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ನವದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತನಾಗಿರುವ ಬಿಭವ್‌ ಕುಮಾರ್‌ ಪ್ರತಿ ದೂರು ನೀಡಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದ್ರೂ ರಾಜಕೀಯ ಹಿಟ್‌ಮ್ಯಾನ್‌ ಪಾರಾಗಬಹುದು ಅಂದ್ಕೊಂಡಿದ್ದಾನೆ: ಸ್ವಾತಿ ಮಲಿವಾಲ್‌ ಕಿಡಿ

    ಸ್ವಾತಿ ಮಲಿವಾಲ್ ಬಲವಂತವಾಗಿ ದೂರು ದಾಖಲಿಸಿದ್ದಾರೆ.‌ ಸಿಎಂ ನಿವಾಸಕ್ಕೆ ಅಕ್ರಮವಾಗಿ ಅತಿಕ್ರಮಣ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆಪ್ತ ಬಿಭವ್ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್‌ ದೂರು ನೀಡಿದ್ದು ಎಫ್‌ಐಆರ್‌ (FIR) ದಾಖಲಾಗಿದೆ. ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಆಪ್ತ ಬಿಭವ್‌ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ನೀಡಿತ್ತು. ಆಯೋಗದ ಎದುರು ವಿಚಾರಣೆಗೆ ಆರೋಪಿ ಹಾಜರಾಗಿಲ್ಲ. ಇದನ್ನೂ ಓದಿ: ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದು, ಕೆನ್ನೆಗೆ ಹೊಡೆದಿದ್ದಾನೆ – ಕೇಜ್ರಿವಾಲ್ ಆಪ್ತನ ವಿರುದ್ಧ ಮಲಿವಾಲ್ ದೂರು

    ಸಿಎಂ ನಿವಾಸಕ್ಕೆ ತೆರಳಿದ್ದಾಗ, ಅವರ ಕಾರ್ಯದರ್ಶಿಯಾಗಿರುವ ಬಿಭವ್‌ ನನ್ನ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದರು ಎಂದು ಸಂಸದೆ ಸ್ವಾತಿ ಮಲಿವಾಲ್‌ ಆರೋಪಿಸಿದ್ದರು. ಸಿಎಂ ಕಚೇರಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಬಿಭವ್‌ ಕುಮಾರ್‌ ವಿರುದ್ಧ ಕೇಳಿಬಂದ ಆರೋಪವು ಈಗ ವಿವಾದಕ್ಕೆ ತಿರುಗಿದೆ. ಪ್ರತಿಪಕ್ಷಗಳ ತೀವ್ರ ಟೀಕೆಗೂ ಗುರಿಯಾಗಿದೆ.

  • ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

    ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

    ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎನ್ನುವ ಸ್ವಾತಿ ಮಲಿವಾಲ್‌ ಅವರ ಆರೋಪ ಸುಳ್ಳು. ಇದು ಬಿಜೆಪಿಯ ಒಳಸಂಚು, ಆ ದಿನ ಸ್ವಾತಿ ಮಲಿವಾಲ್‌ರನ್ನ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ ಎಂದು ಸಚಿವೆ ಅತಿಶಿ (Atishi) ತಿರುಗೇಟು ನೀಡಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ವಿರುದ್ಧ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮಾಡುತ್ತಿರುವ ಆರೋಪಗಳೆಲ್ಲವೂ ಆಧಾರ ರಹಿತ ಮತ್ತು ಸುಳ್ಳು. ಇದು ಬಿಜೆಪಿಯ ಸಂಚು ಎಂದು ಅಲ್ಲಗಳೆದಿದ್ದಾರೆ.

    ಈ ಆರೋಪವು ಬಿಜೆಪಿ (BJP) ಒಳಸಂಚು, ಸ್ವಾತಿ ಮಲಿವಾಲ್‌ ಅದರ ಮುಖವಾಡ. ಮೇ 13ರಂದು ಬೆಳಗ್ಗೆ ಕೇಜ್ರಿವಾಲ್‌ ನಿವಾಸಕ್ಕೆ ಮಲಿವಾಲ್‌ರನ್ನ ಕಳುಹಿಸಿದ್ದೇ ಬಿಜೆಪಿ. ಮುಖ್ಯವಾಗಿ ಸ್ವಾತಿಗೆ ಸಿಎಂ ಮೇಲೆಯೇ ಆರೋಪ ಮಾಡುವ ಉದ್ದೇಶವಿತ್ತು. ಆ ಸಂದರ್ಭದಲ್ಲಿ ಸಿಎಂ ಇಲ್ಲದಿದ್ದ ಕಾರಣ ಬಚಾವ್‌ ಆಗಿದ್ದಾರೆ. ಸಿಎಂ ಇಲ್ಲದಿದ್ದರಿಂದ ಅವರ ಆಪ್ತ ಸಹಾಯಕನ ವಿರುದ್ಧ ದೂರು ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಮುಂದುವರಿದು ಮಾತನಾಡಿ, ಸ್ವಾತಿ ಮಲಿವಾಲ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಸಿಸಿಟಿವಿ ವೀಡಿಯೋದಲ್ಲಿ, ಮಲಿವಾಲ್‌ ಸಿಎಂ ಮನೆ ಡ್ರಾಯಿಂಗ್‌ ರೂಮಿನಲ್ಲಿ ಆರಾಮಾಗಿ ಕುಳಿತಿರುವುದು ಕಂಡುಬಂದಿದೆ. ಅವರೇ ಅಲ್ಲಿದ್ದ ಪೊಲೀಸರಿಗೆ ಮತ್ತು ಬಿಭವ್‌ ಕುಮಾರ್‌ಗೆ ಬೆದರಿಕೆ ಹಾಕಿದ್ದಾರೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

    ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರಾಜ್ಯಸಭೆ ಆಪ್‌ ಸಂಸದೆ ಸ್ವಾತಿ ಮಾಲಿವಾಲ್‌ ಅವರು ಆರೋಪಿಸಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ವಿಭವ್‌ ಕುಮಾರ್‌ ಅವರೇ ಹಲ್ಲೆ ಮಾಡಿದ್ದಾರೆ ಎಂದು ಸ್ವಾತಿ ಮಾಲಿವಾಲ್‌ ಅವರು ಆರೋಪಿಸಿ ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ. ಆದರೆ, ಈ ಪ್ರಕರಣಕ್ಕೀಗ ಟ್ವಿಸ್ಟ್‌ ಸಿಕ್ಕಿದ್ದು, ಸ್ವಾತಿ ಮಾಲಿವಾಲ್‌ ಆರೋಪ ಸುಳ್ಳು ಎಂದು ಆಪ್‌ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಸಿಎಂ ಕಚೇರಿಯಲ್ಲಿ ಗಲಾಟೆ ನಡೆದಿದೆ ಎನ್ನಲಾದ ವೀಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.

  • ಕೇಜ್ರಿವಾಲ್ ನಾಚಿಕೆಯಿಲ್ಲದೆ ಆರೋಪಿಯೊಂದಿಗೆ ತಿರುಗಾಡುತ್ತಿದ್ದಾರೆ: ಮಲಿವಾಲ್‌ ಹಲ್ಲೆಗೆ ಸೀತಾರಾಮನ್ ಕಿಡಿ

    ಕೇಜ್ರಿವಾಲ್ ನಾಚಿಕೆಯಿಲ್ಲದೆ ಆರೋಪಿಯೊಂದಿಗೆ ತಿರುಗಾಡುತ್ತಿದ್ದಾರೆ: ಮಲಿವಾಲ್‌ ಹಲ್ಲೆಗೆ ಸೀತಾರಾಮನ್ ಕಿಡಿ

    ನವದೆಹಲಿ: ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Swati Malival) ಮೇಲಿನ ಹಲ್ಲೆಯನ್ನು ಖಂಡಿಸಿ ಮಾತನಾಡದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಗುಡುಗಿದ್ದಾರೆ.

    ನಾಚಿಕೆಯಿಲ್ಲದೇ ಆರೋಪಿ ಬಿಭವ್‌ ಕುಮಾರ್‌ ಅವರೊಂದಿಗೆ ತಿರುಗಾಡುತ್ತಿದ್ದಾರೆ ಎಂದು ಕೇಜ್ರಿವಾಲ್‌ (Arvind Kejriwal) ವಿರುದ್ಧ ನಿರ್ಮಲಾ ಕಿಡಿಕಾರಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್, ಎಎಪಿ ಸಂಚಾಲಕರು ಈ ವಿಷಯದ ಬಗ್ಗೆ ಮಾತನಾಡಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದ್ರೂ ರಾಜಕೀಯ ಹಿಟ್‌ಮ್ಯಾನ್‌ ಪಾರಾಗಬಹುದು ಅಂದ್ಕೊಂಡಿದ್ದಾನೆ: ಸ್ವಾತಿ ಮಲಿವಾಲ್‌ ಕಿಡಿ

    ನವದೆಹಲಿ ಲೋಕಸಭಾ ಅಭ್ಯರ್ಥಿ ಸೋಮನಾಥ್‌ ಭಾರ್ತಿ ಸೇರಿದಂತೆ ಹಲವು ಎಎಪಿ ನಾಯಕರ ವಿರುದ್ಧ ಮಹಿಳೆಯರ ಮೇಲಿನ ಹಲ್ಲೆಯ ಆರೋಪಗಳಿವೆ. ಇದು ಮಹಿಳಾ ವಿರೋಧ ಪಕ್ಷ (ಎಎಪಿ) ಎಂದು ಸೀತಾರಾಮನ್‌ ವಾಗ್ದಾಳಿ ನಡೆಸಿದ್ದಾರೆ.

    ಎಎಪಿ ಸಂಸದ ಸಂಜಯ್ ಸಿಂಗ್, ಮಲಿವಾಲ್ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಒಂದು ದಿನದ ನಂತರ ಆರೋಪಿ ಬಿಭವ್ ಕುಮಾರ್ ಅವರು ಲಕ್ನೋದಲ್ಲಿ ಕೇಜ್ರಿವಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ಪಕ್ಷದ ಮಹಿಳಾ ಸಂಸದರ (ರಾಜ್ಯಸಭೆ) ಮೇಲಿನ ದಾಳಿಯ ಬಗ್ಗೆ ಒಂದು ಮಾತನ್ನೂ ಆಡದಿರುವುದು ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದು, ಕೆನ್ನೆಗೆ ಹೊಡೆದಿದ್ದಾನೆ – ಕೇಜ್ರಿವಾಲ್ ಆಪ್ತನ ವಿರುದ್ಧ ಮಲಿವಾಲ್ ದೂರು

    ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ನಿವಾಸದಲ್ಲಿ ಅವರ ಆಪ್ತ ಸಹಾಯಕರೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್‌ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಬಿಭವ್‌ ಕುಮಾರ್ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ.

  • ತಪ್ಪು ಮಾಡಿದ್ರೂ ರಾಜಕೀಯ ಹಿಟ್‌ಮ್ಯಾನ್‌ ಪಾರಾಗಬಹುದು ಅಂದ್ಕೊಂಡಿದ್ದಾನೆ: ಸ್ವಾತಿ ಮಲಿವಾಲ್‌ ಕಿಡಿ

    ತಪ್ಪು ಮಾಡಿದ್ರೂ ರಾಜಕೀಯ ಹಿಟ್‌ಮ್ಯಾನ್‌ ಪಾರಾಗಬಹುದು ಅಂದ್ಕೊಂಡಿದ್ದಾನೆ: ಸ್ವಾತಿ ಮಲಿವಾಲ್‌ ಕಿಡಿ

    ನವದೆಹಲಿ: ತಪ್ಪು ಮಾಡಿದ್ರೂ ರಾಜಕೀಯ ಹಿಟ್‌ಮ್ಯಾನ್‌ ಪಾರಾಗಬಹುದು ಅಂತ ಭಾವಿಸಿದ್ದಾನೆ. ಕೊಠಡಿಯ ಸಿಸಿಟಿವಿಯನ್ನು (CCTV) ಪರಿಶೀಲಿಸಿದರೆ ಸತ್ಯಾಂಶ ಪ್ರಕಟವಾಗಲಿದೆ ಎಂದು ಆಪ್‌ (AAP) ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ (Swati Maliwal) ಕಿಡಿಕಾರಿದ್ದಾರೆ.

    ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆಪ್ತ ಬಿಭವ್ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್‌ ದೂರು ನೀಡಿದ್ದು ಎಫ್‌ಐಆರ್‌ (FIR) ದಾಖಲಾಗಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದು, ಕೆನ್ನೆಗೆ ಹೊಡೆದಿದ್ದಾನೆ – ಕೇಜ್ರಿವಾಲ್ ಆಪ್ತನ ವಿರುದ್ಧ ಮಲಿವಾಲ್ ದೂರು

    ಪೋಸ್ಟ್‌ನಲ್ಲಿ ಏನಿದೆ?
    ಪ್ರತಿ ಬಾರಿಯಂತೆ ಈ ಬಾರಿಯೂ ಈ ರಾಜಕೀಯ ಹಿಟ್‌ಮ್ಯಾನ್ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾನೆ. ತನ್ನ ಜನರ ಮೂಲಕ ಸರಿಯಾದ ವಿವರ ಇಲ್ಲದ ವೀಡಿಯೋವನ್ನು ಟ್ವೀಟ್‌ ಮಾಡಿ ತಪ್ಪು ಮಾಡಿಯೂ ತಾನು ಪಾರಾಗಬಹುದು ಎಂದು ಭಾವಿಸಿದ್ದಾನೆ.

    ಮನೆಯಲ್ಲಿ ಥಳಿಸುವ ವಿಡಿಯೋವನ್ನು ಯಾರಾದರೂ ಮಾಡುತ್ತಾರಾ? ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗಲೇ ಸತ್ಯಾಂಶ ಎಲ್ಲರಿಗೂ ಬಹಿರಂಗವಾಗುವುದು. ನೀವು ಯಾವ ಮಟ್ಟಕ್ಕೆ ಇಳಿಯುತ್ತಿದ್ದೀರಿ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ಮುಂದೊಂದು ದಿನ ಪ್ರತಿಯೊಬ್ಬರ ಸತ್ಯವೂ ಜಗತ್ತಿನ ಮುಂದೆ ಅನಾವರಣವಾಗಲಿದೆ.

     

  • ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತನ ವಿರುದ್ಧ FIR

    ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತನ ವಿರುದ್ಧ FIR

    ನವದೆಹಲಿ: ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Swati Maliwal) ಮೇಲೆ ದೌರ್ಜನ್ಯ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆಪ್ತ ಸಹಾಯಕ ಬಿಭವ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಪ್ರಕರಣ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸ್ವಾತಿ ಮಲಿವಾಲ್‌ ಹೇಳಿಕೆ ಬಳಿಕ ಐಪಿಸಿ 354, 323, 506,509 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

    ದೌರ್ಜನ್ಯ ನಡೆದ ಘಟನೆಯ ಕುರಿತು ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಳೆದ ಕೆಲವು ದಿನಗಳು ನನಗೆ ತುಂಬಾ ಕಷ್ಟಕರವಾಗಿತ್ತು. ನನಗಾಗಿ ಪ್ರಾರ್ಥಿಸಿದವರಿಗೆ ನಾನು ಧನ್ಯವಾದ ಹೇಳುತ್ತೇನೆ. ಚಾರಿತ್ರ್ಯಹರಣ ಮಾಡಲು ಯತ್ನಿಸಿದವರು ಬೇರೆಯವರ ಸೂಚನೆ ಮೇರೆಗೆ ಮಾಡುತ್ತಿದ್ದಾರೆ. ಅವರನ್ನೂ ದೇವರು ನೆಮ್ಮದಿಯಿಂದ ಇಡಲಿ ಎಂದು ಬೇಡಿಕೊಂಡಿದ್ದೇನೆ. ದೇಶದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಸ್ವಾತಿ ಮಲಿವಾಲ್ ಮುಖ್ಯವಲ್ಲ, ದೇಶದ ಸಮಸ್ಯೆಗಳು ಮುಖ್ಯ. ಈ ಘಟನೆಯಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿಯವರಿಗೆ ವಿಶೇಷ ವಿನಂತಿ ಎಂದು ಮಲಿವಾಲ್‌ ಪೋಸ್ಟ್‌ ಹಾಕಿದ್ದಾರೆ.

  • ಸ್ವಾತಿ ಮಲಿವಾಲ್ ದೌರ್ಜನ್ಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮೈಕ್‌ ಪಕ್ಕಕ್ಕಿಟ್ಟ ಕೇಜ್ರಿವಾಲ್‌

    ಸ್ವಾತಿ ಮಲಿವಾಲ್ ದೌರ್ಜನ್ಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮೈಕ್‌ ಪಕ್ಕಕ್ಕಿಟ್ಟ ಕೇಜ್ರಿವಾಲ್‌

    ಲಕ್ನೋ : ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Swati Maliwal) ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಾತನಾಡಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Aravind Kejriwal) ನಿರಾಕರಿಸಿದ್ದಾರೆ.

    ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಜೊತೆಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಲು ನಿರಾಕರಿಸಿದ ಅವರು ತಮ್ಮ ಮುಂದಿದ್ದ ಮೈಕ್ ಅನ್ನು ಪಕ್ಕಟ್ಟಿದ್ದಾರೆ. ಇದನ್ನೂ ಓದಿ: ಸಿಎಂ ನಿವಾಸದಲ್ಲೇ ಕೇಜ್ರಿವಾಲ್‌ ಆಪ್ತನಿಂದ ಹಲ್ಲೆ : ಸ್ವಾತಿ ಮಲಿವಾಲ್‌ ಆರೋಪ

    ಅರವಿಂದ್ ಕೇಜ್ರಿವಾಲ್ ಮಾತನಾಡಲು ನಿರಾಕರಿಸುತ್ತಿದ್ದಂತೆ ಈ ಬಗ್ಗೆ ಮಾತನಾಡಿದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ (Sanjay Sing), ಮಣಿಪುರದಲ್ಲಿ ನಡೆದ ಘಟನೆಗಳನ್ನು ನೋಡಿ ಇಡೀ ದೇಶವೇ ನೋವು ಅನುಭವಿಸಿದೆ ಆದರೆ ಪ್ರಧಾನಿ ಮೋದಿ ಈ ಬಗ್ಗೆ ಮೌನವಾಗಿದ್ದರು. ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು ಆಗಲೂ ಸುಮ್ಮನಿದ್ದರು. ನಮ್ಮ ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್‌ಗೆ ಪೊಲೀಸರು ಥಳಿಸಿದ್ದರು. ಈ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದರು ಎಂದು ಹೇಳಿದರು.

    ಉತ್ತರ ಪ್ರದೇಶದಲ್ಲಿಯೂ, ಕುಲದೀಪ್ ಸೆಂಗಾರ್ (2017 ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ) ಅಥವಾ ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಪ್ರಧಾನಿ ಸುಮ್ಮನಿದ್ದರು. ಮೊದಲು ನಾನು ಹೇಳಿದ ಈ ಎಲ್ಲಾ ವಿಚಾರಗಳಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು, ಸ್ವಾತಿ ಮಲಿವಾಲ್ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ಸಂಸದ ಸಂಜಯ್ ಸಿಂಗ್ ತಿರುಗೇಟು ನೀಡಿದರು.

  • ಸಿಎಂ ನಿವಾಸದಲ್ಲೇ ಕೇಜ್ರಿವಾಲ್‌ ಆಪ್ತನಿಂದ ಹಲ್ಲೆ : ಸ್ವಾತಿ ಮಲಿವಾಲ್‌ ಆರೋಪ

    ಸಿಎಂ ನಿವಾಸದಲ್ಲೇ ಕೇಜ್ರಿವಾಲ್‌ ಆಪ್ತನಿಂದ ಹಲ್ಲೆ : ಸ್ವಾತಿ ಮಲಿವಾಲ್‌ ಆರೋಪ

    ನವದೆಹಲಿ:ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ನಿರ್ದೇಶನದ ಮೇರೆಗೆ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕಿ ಸ್ವಾತಿ ಮಲಿವಾಲ್ (Swati Maliwal) ಸೋಮವಾರ ಆರೋಪಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

    ದೆಹಲಿ (Delhi) ಸಿಎಂ ನಿವಾಸದಿಂದ ಪೊಲೀಸ್‌ ಕಂಟ್ರೋಲ್‌ ರೂಂಗೆ (PCR) ಮೊಬೈಲಿನಿಂದ ಎರಡು ಕರೆಗಳು ಬಂದಿದೆ. ಬೆಳಗ್ಗೆ 9:34 ರ ಸುಮಾರಿಗೆ ಮೊದಲ ಕರೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೊಬೈಲ್‌ ಸಂಖ್ಯೆ ಸ್ವಾತಿ ಮಲಿವಾಲ್‌ ಅವರಿಗೆ ಸಂಬಂಧಿಸಿದ ಸಂಖ್ಯೆಯಾಗಿದೆ ಎಂದು ವರದಿ ತಿಳಿಸಿದೆ.

    ಹಲ್ಲೆಯ ಬಗ್ಗೆ ಸಿಎಂ ನಿವಾಸ ಅಥವಾ ಆಪ್ ಆಗಲಿ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್‌ ಠಾಣೆಯಲ್ಲಿರುವ ಪುಸ್ತಕದಲ್ಲಿ ದೂರು ದಾಖಲಾಗಿದೆ. ಈ ವಿಚಾರದ ಬಗ್ಗೆ ಸ್ವಾತಿ ಮಲಿವಾಲ್‌ ಇಲ್ಲಿಯವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

    ಸ್ವಾತಿ ಮಲಿವಾಲ್ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯಾಗಿದ್ದು ರಾಜ್ಯಸಭಾ ಸದಸ್ಯರಾಗಿದ್ದಾರೆ. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ

    ಸ್ವಾತಿ ಮಲಿವಾಲ್ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದಾಗ 223 ಸಿಬ್ಬಂದಿಯನ್ನು ನೇಮಿಸಿದ್ದರು. 40 ಹುದ್ದೆಗಳು ಮಂಜೂರಾಗಿದ್ದರೂ 223 ಮಂದಿಯನ್ನು ಅನುಮತಿ ಇಲ್ಲದೆ ಅಕ್ರಮವಾಗಿ ನೇಮಕಾತಿ ಮಾಡಿದ್ದಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ 223 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದ್ದರು.