Tag: swathi muttina male haniye film

  • ಸೋ ಮೂಡಿ, ಸೋ ಬ್ಯೂಟಿಫುಲ್- ರಕ್ಷಿತ್ ಶೆಟ್ಟಿ ಹೀಗಂದಿದ್ದು ಯಾರಿಗೆ?

    ಸೋ ಮೂಡಿ, ಸೋ ಬ್ಯೂಟಿಫುಲ್- ರಕ್ಷಿತ್ ಶೆಟ್ಟಿ ಹೀಗಂದಿದ್ದು ಯಾರಿಗೆ?

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ರೆಂಡ್‌ನಲ್ಲಿರುವ ಸಾಲನ್ನ ಆಪ್ತರೊಬ್ಬರಿಗೆ ಹೇಳಿದ್ದಾರೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಬರೆದುಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.

    ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು ಬೇರೇ ಯಾರಿಗೋ ಅಲ್ಲ. ಗೆಳೆಯ ರಾಜ್ ಬಿ ಶೆಟ್ಟಿಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್, ಸಿರಿ ನಟನೆ ಬಲು ಇಷ್ಟಪಟ್ಟಿದ್ದಾರೆ.

    ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್ ಶೇರ್ ಮಾಡಿ ಸೋ ಮೂಡಿ, ಸೋ ಬ್ಯೂಟಿಫುಲ್ ರಾಜ್ ಬಿ ಶೆಟ್ಟಿ (Raj B Shetty) ಯೂ ಆರ್ ದಿ ಮ್ಯಾನ್ ಎಂದು ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಾನವೀಯತೆ ಮರೆತ ಸಂಗೀತಾಗೆ ‘ಬಿಗ್ ಬಾಸ್’ ಕ್ಲಾಸ್

    ರಮ್ಯಾ (Ramya) ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಇದೇ ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಹಾಡು, ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಮಂದಿರದಲ್ಲಿ ರಾಜ್ ಬಿ ಶೆಟ್ಟಿ, ಸಿರಿ ಜೋಡಿಯ ಈ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡುತ್ತೆ ಕಾಯಬೇಕಿದೆ.

  • ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್‌ ಔಟ್‌

    ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್‌ ಔಟ್‌

    ಮೋಹಕ ತಾರೆ ರಮ್ಯಾ (Ramya) ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಟ್ರೈಲರ್ ಇದೀಗ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಟ್ರೈಲರ್ ರಿಲೀಸ್ ಸಮಾರಂಭ ನಡೆದಿದೆ. ಚಿತ್ರದ ‌ಟ್ರೈಲರ್ ಭಾವನಾತ್ಮಕವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಅನಿಕೇತ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ (Raj B Shetty), ಪ್ರೇರಣಾ ರೋಲ್‌ನಲ್ಲಿ ಸಿರಿ ರವಿಕುಮಾರ್ (Siri Ravikumar) ಜೀವತುಂಬಿದ್ದು, ಇಡೀ ಟ್ರೈಲರ್ ಎಮೋಷನಲ್ ಆಗಿ ನೋಡುಗರಿಗೆ ಕನೆಕ್ಟ್ ಆಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅನಿಕೇತ್‌ಗೆ ಹೆಲ್ತ್ ಕೌನ್ಸಿಲರ್ ಆಗಿ ಪ್ರೇರಣಾ ಜೊತೆಯಾಗುತ್ತಾರೆ. ಕಥೆಯಲ್ಲಿ ಏನಾಗುತ್ತೆ ಎಂಬುದನ್ನ ಸುಳಿವು ಬಿಟ್ಟು ಕೊಡದೇ ಸಿನಿಮಾ ನೋಡುವಂತೆ ಪ್ರೇರಣೆ ನೀಡಿದೆ ಈ ಟ್ರೈಲರ್. ಭಾವನಾತ್ಮಕವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದೆ ಈ ಟ್ರೈಲರ್.‌

     

    View this post on Instagram

     

    A post shared by Raj B Shetty (@rajbshetty)

    ರಿಲೀಸ್ ಆಗಿರೋ ಟ್ರೈಲರ್ ನೋಡಿಯೇ ರಾಜ್ ಬಿ ಶೆಟ್ಟಿ, ಸಿರಿ ನಟನೆಗೆ ಫ್ಯಾನ್ಸ್ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಂದೊಳ್ಳೆ ವಿಭಿನ್ನ ಕಥೆಗೆ ನಟಿ ರಮ್ಯಾ ನಿರ್ಮಾಣದ ಮೂಲಕ ಸಾಥ್ ನೀಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದೇ ನವೆಂಬರ್ 24ಕ್ಕೆ ರಿಲೀಸ್ ಆಗ್ತಿದೆ.

    ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದ ಮೂಲಕ ರಮ್ಯಾ ನಟಿಯಾಗಿ ಮತ್ತೆ ಚಿತ್ರೋದ್ಯಮ ಪ್ರವೇಶಿಸಬೇಕಿತ್ತು. ಮೊದ ಮೊದಲು ಈ ಸಿನಿಮಾಗೆ ರಮ್ಯಾನೆ ನಾಯಕಿ ಎಂದು ಹೇಳಲಾಗಿತ್ತು. ಆದರೆ, ಬಳಿಕ ಚಿತ್ರದಿಂದ ಹೊರಬಂದರು. ಈ ಕುರಿತಂತೆ ಮೊನ್ನೆಯಷ್ಟೇ ರಮ್ಯಾ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

    ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ. ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ ಎಂದು ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದರು. ಇದನ್ನೂ ಓದಿ:ಅದ್ದೂರಿಯಾಗಿ ನಡೆಯಿತು ಯಶ್ ಪುತ್ರನ ಬರ್ತ್‌ಡೇ

    ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಮ್‌ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕೆಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ಹುಡುಕುತ್ತೇವೆ ಎಂದು ನಟಿ ತಿಳಿಸಿದ್ದರು.

    ‘ಟೋಬಿ’ ಹೀರೋ ರಾಜ್ ಬಿ ಶೆಟ್ಟಿ ಜೊತೆ ಮೋಹಕ ತಾರೆ ರಮ್ಯಾ (Ramya) ನಟಿಸಬೇಕಿತ್ತು. ಆದರೆ ಈಗ ಅಸಲಿ ಕಾರಣವನ್ನ ತಿಳಿಸುವ ಮೂಲಕ ಗಾಸಿಪ್‌ಗೆಲ್ಲಾ ನಟಿ ಸ್ಪಷ್ಟನೆ ನೀಡಿದ್ದರು. ರಾಜ್ ಬಿ ಶೆಟ್ಟಿ, ಸಿರಿ ರವಿಕುಮಾರ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಮತ್ತು ಕೆವಿಎನ್ ಸಂಸ್ಥೆಯ ರೂವಾರಿ ಕಾರ್ತಿಕ್-ಯೋಗಿಗೆ, ರಮ್ಯಾ ಧನ್ಯವಾದಗಳನ್ನ ತಿಳಿಸಿದ್ದರು.

  • ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಹೊರಬಂದಿದ್ದೇಕೆ? ರಮ್ಯಾ ಸ್ಪಷ್ಟನೆ

    ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಹೊರಬಂದಿದ್ದೇಕೆ? ರಮ್ಯಾ ಸ್ಪಷ್ಟನೆ

    ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಅವರು ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷವಾಗಿ ಶುಭಕೋರಿದ್ದಾರೆ. ತಮ್ಮ ಮೊದಲ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಸಿನಿಮಾದಿಂದಲೇ ಮತ್ತೆ ಕಮ್‌ಬ್ಯಾಕ್ ಆಗುತ್ತಾರೆ ಎಂದು ಹೇಳಲಾಗಿತ್ತು. ಬಳಿಕ ಚಿತ್ರದಿಂದ ಹೊರಬಂದಿದ್ದೇಕೆ ಎಂದು ಇದೀಗ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

    ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ. ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ ಎಂದು ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಪಘಾತ ಪ್ರಕರಣ: ನಟ ನಾಗಭೂಷಣ್ ವಿರುದ್ಧ 70 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

    ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಮ್‌ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕೆಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ಹುಡುಕುತ್ತೇವೆ ಎಂದು ನಟಿ ತಿಳಿಸಿದ್ದಾರೆ.

    ‘ಟೋಬಿ’ ಹೀರೋ ರಾಜ್ ಬಿ ಶೆಟ್ಟಿ ಜೊತೆ ಮೋಹಕ ತಾರೆ ರಮ್ಯಾ ನಟಿಸಬೇಕಿತ್ತು. ಆದರೆ ಈಗ ಅಸಲಿ ಕಾರಣವನ್ನ ತಿಳಿಸುವ ಮೂಲಕ ಗಾಸಿಪ್‌ಗೆಲ್ಲಾ ನಟಿ ಸ್ಪಷ್ಟನೆ ನೀಡಿದ್ದಾರೆ.

    ರಾಜ್ ಬಿ ಶೆಟ್ಟಿ, ಸಿರಿ ರವಿಕುಮಾರ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಮತ್ತು ಕೆವಿಎನ್‌ ಸಂಸ್ಥೆಯ ರೂವಾರಿ ಕಾರ್ತಿಕ್-ಯೋಗಿಗೆ, ರಮ್ಯಾ ಧನ್ಯವಾದಗಳನ್ನ ತಿಳಿಸಿದ್ದಾರೆ. ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿರೋ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

  • ರಮ್ಯಾ ಸಿನಿಮಾಗಿಂತ ಮುಂಚೆ ‘ಟೋಬಿ’ ರಿಲೀಸ್: ರಾಜ್ ಬಿ ಶೆಟ್ಟಿ ಸ್ಪಷ್ಟನೆ

    ರಮ್ಯಾ ಸಿನಿಮಾಗಿಂತ ಮುಂಚೆ ‘ಟೋಬಿ’ ರಿಲೀಸ್: ರಾಜ್ ಬಿ ಶೆಟ್ಟಿ ಸ್ಪಷ್ಟನೆ

    ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಟೋಬಿ’ (Toby) ಸಿನಿಮಾ ತೆರೆಗೆ ಬರೋದ್ದಕ್ಕೆ ಸಜ್ಜಾಗಿದೆ. ಚಿತ್ರದ ಫಸ್ಟ್ ಲುಕ್‌ನಿಂದ ‘ಟೋಬಿ’ ಹೈಪ್ ಕ್ರಿಯೇಟ್ ಮಾಡಿದೆ. ಟೋಬಿ ಚಿತ್ರಕ್ಕೆ ಚಾಲನೆ ಸಿಗುವ ಮುಂಚೆಯೇ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಶೂಟಿಂಗ್ ಮುಗಿದಿದೆ. ಆದ್ರೂ ‘ಟೋಬಿ’ ಸಿನಿಮಾ ಯಾಕೆ ತೆರೆಗೆ ಬರುತ್ತಿದೆ ಎಂಬ ಪ್ರಶ್ನೆಗೆ ನಿರ್ದೇಶಕ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ.

    ರಾಜ್ ಬಿ ಶೆಟ್ಟಿ (Raj B Shetty) ಅವರು ‘ಟೋಬಿ’ ಸಿನಿಮಾ ಲುಕ್‌ನಿಂದ ಈಗಾಗಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ರಕ್ತ-ಸಿಕ್ತ ಅವತಾರದಿಂದ ಶೆಟ್ರು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಎಂದೂ ನಟಿಸಿರದ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಜೀವ ತುಂಬಿದ್ದಾರೆ. ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯನ್ನ ರಾಜ್ ಬಿ ಶೆಟ್ಟಿ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಇದರ ಜೊತೆ ರಮ್ಯಾ ನಿರ್ಮಾಣದ ಸಿನಿಮಾ ಯಾಕೆ ತಡ ಆಗುತ್ತಿದೆ ಎಂದು ಶೆಟ್ರು ಪ್ರತಿಕ್ರಿಯೆ ನೀಡಿದ್ದಾರೆ.

    ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮಾಡಬೇಕಾದರೇನೆ ಒಂದು ಖಾಸಗಿ ಅನುಭವ ನೀಡುವ ಆಪ್ತವಾದ ಫೀಲ್ ನೀಡುವ ಸಿನಿಮಾ ಮಾಡಬೇಕೆಂಬ ಉದ್ದೇಶದಿಂದಲೇ ಆ ಸಿನಿಮಾ ಶುರು ಮಾಡಿದೆವು. ಆ ಸಿನಿಮಾ ಮಾಡುವಾಗ ಇದು ಒಳ್ಳೆಯ ಸಿನಿಮಾ ಆಗಿರಬೇಕು, ಒಟಿಟಿಯಲ್ಲಿ ನೋಡುವಂಥಹಾ ಒಂದು ಪರ್ಸನಲ್ ಆದ ಸಿನಿಮಾ ಮಾದರಿಯಲ್ಲಿರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಸದ್ಯಕ್ಕೆ ಸಿನಿಮಾ ಪೂರ್ಣ ಮುಗಿದು ಅದರ ಮಿಕ್ಸಿಂಗ್‌ನ ಸಣ್ಣ-ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಅದೂ ಸಹ ಒಂದು ವಾರ ಅಥವಾ ಹತ್ತು ದಿನದಲ್ಲಿ ಮುಗಿಯಬಹುದು ಎಂದಿದ್ದಾರೆ. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ‘ಟೋಬಿʼ ಬರುವ ಮುಂಚೆಯೇ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ನಿರ್ಮಾಣ ಸಂಸ್ಥೆಯವರೇನಾದರೂ ಯಾವುದಾದರೂ ಒಟಿಟಿಯಲ್ಲಿ ಒಳ್ಳೆಯ ಡೀಲ್ ಮಾಡಿಕೊಂಡರೆ ನಮ್ಮ  ಸಿನಿಮಾಕ್ಕಿಂತಲೂ ಮೊದಲೇ ಆ ಸಿನಿಮಾ ಬಿಡುಗಡೆ ಆಗಬಹುದು. ಆದರೆ ಆ ವಿಷಯ ನನಗೆ ಗೊತ್ತಿಲ್ಲ. ಇನ್ನು ಟೋಬಿ ಸಿನಿಮಾದ ಎಲ್ಲ ಕೆಲಸ ಮುಗಿದಿದ್ದು, ಕೊನೆಯ ಹಂತದ ಕೆಲಸ ಚಾಲ್ತಿಯಲ್ಲಿದೆ ಎಂದಿದ್ದಾರೆ. ರಮ್ಯಾ (Ramya) ನಿರ್ಮಾಣದ ಈ ಚಿತ್ರ, ರಾಜ್- ಸಿರಿ ನಟನೆಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ರಿಲೀಸ್ ಅಪ್‌ಡೇಟ್ ಸದ್ಯದಲ್ಲೇ ಸಿಗಲಿದೆ ಎಂದು ನಟ ತಿಳಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BREAKING:ರಮ್ಯಾ ನಿರ್ಮಾಣದ `ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಕಾನೂನು ಸಂಕಷ್ಟ

    BREAKING:ರಮ್ಯಾ ನಿರ್ಮಾಣದ `ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಕಾನೂನು ಸಂಕಷ್ಟ

    ಸ್ಯಾಂಡಲ್‌ವುಡ್ (Sandalwood) ಕ್ವೀನ್ ರಮ್ಯಾ (Ramya) ಚಿತ್ರರಂಗಕ್ಕೆ ಮರಳಿದ್ದಾರೆ. `ಸ್ವಾತಿ ಮುತ್ತಿನ ಮಳೆ ಹನಿಯೇ’ ಟೈಟಲ್ ಇಡುವ ಮೂಲಕ ನಟಿ ನಿರ್ಮಾಣಕ್ಕೆ ಇಳಿದಿದ್ದರು. ಆದರೆ ಈಗ ಈ ಚಿತ್ರದ ಶೀರ್ಷಿಕೆಗೆ ವಿಘ್ನ ಎದುರಾಗಿದೆ.

    ಮೋಹಕತಾರೆ ರಮ್ಯಾ ನಿರ್ಮಾಣ ಮಾಡ್ತಿರುವ `ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಚಿತ್ರದ ಟೈಟಲ್ ಬಳಸದಂತೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಡೆ ನೀಡಿದ್ದಾರೆ. ಹಾಗಾಗಿ ನಟಿ ರಮ್ಯಾ ಅವರ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಈ ಸಿನಿಮಾದ ಕಾನೂನು ಸಮರದ ಬಗ್ಗೆ ತಿಳಿಸಲು ರಾಜೇಂದ್ರ ಸಿಂಗ್ ಬಾಬು (Rajendra Singh Babu) ಜನವರಿ 19ರಂದು ಸುದ್ದಿಗೋಷ್ಠಿ ನಡೆಸಿದ್ದಾರೆ.

    `ಬಣ್ಣದ ಗೆಜ್ಜೆ’ ಚಿತ್ರಕ್ಕೆ ರಾಜೇಂದ್ರ ಸಿಂಗ್ ಅವರು 1990ರಲ್ಲಿ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ `ಸ್ವಾತಿ ಮುತ್ತಿನ ಮಳೆಯೇ’ ಸಾಂಗ್ ಸೂಪರ್ ಹಿಟ್ ಆಗಿತ್ತು. ರಮ್ಯಾ `ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಾಣ ಮಾಡುವ ಮುನ್ನವೇ ಈ ಟೈಟಲ್ ಅನ್ನು ತಾವು ರಿಜಿಸ್ಟರ್ ಮಾಡಿರುವುದಾಗಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.

     

    View this post on Instagram

     

    A post shared by AppleBox Studios (@applebox.studios)

    ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಹಾಸಿನಿ ನಟಿಸಿದ್ದಾರೆ. ಸಿನಿಮಾ ಈಗಾಗಲೇ 80% ರಷ್ಟು ಚಿತ್ರೀಕರಣವಾಗಿದೆ. ಅಂಬರೀಶ್ ನಿಧನದ ಬಳಿಕ ಕೆಲವು ದೃಶ್ಯಗಳು ಬಾಕಿ ಉಳಿದಿತ್ತು. ಈಗ ಈ ಶೀರ್ಷಿಕೆಯನ್ನು ಅಭಿಷೇಕ್ ಅಂಬರೀಶ್ ಸಿನಿಮಾಗೆ ಬಳಸಬೇಕು ಎಂದು ಆಲೋಚಿಸಿದ್ದಾರೆ. ಇನ್ನೂ ರಮ್ಯಾ ಕೂಡ ಇದೇ ಟೈಟಲ್‌ನಲ್ಲಿ ಚಿತ್ರ ನಿರ್ಮಾಣ ಮಾಡಿರುವುದು ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಈ ವಿಚಾರ ಕೋರ್ಟ್‌ನಲ್ಲಿ ತೀರ್ಪು ಬರುವವರೆಗೂ ರಮ್ಯಾ ನಿರ್ಮಾಣದ ಈ ಸಿನಿಮಾವನ್ನು ಸೆನ್ಸಾರ್ ಮಾಡಬಾರದು ಎಂದು ತಡೆ ನೀಡಿರುವುದಾಗಿ ಈ ವೇಳೆ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ. ರಮ್ಯಾ ನಿರ್ಮಾಣದ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k