Tag: Swathi

  • ಹಾರ್ಡ್‌ವರ್ಕ್‌ಗೆ ತಕ್ಕ ಪ್ರತಿಫಲ ಸಿಕ್ಕಿದೆ: ಖುಷಿ ಹಂಚಿಕೊಂಡ ಉಡುಪಿಯ ಸ್ವಾತಿ

    ಹಾರ್ಡ್‌ವರ್ಕ್‌ಗೆ ತಕ್ಕ ಪ್ರತಿಫಲ ಸಿಕ್ಕಿದೆ: ಖುಷಿ ಹಂಚಿಕೊಂಡ ಉಡುಪಿಯ ಸ್ವಾತಿ

    -ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ

    ಉಡುಪಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯೇ ರಾಜ್ಯಕ್ಕೆ ಫಸ್ಟ್ ಬಂದಿದೆ. ನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ  ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾಳೆ.

    ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದಿರುವ ಸ್ವಾತಿ, ನಗರದ ಅಂಬಾಗಿಲು ನಿವಾಸಿ ಉದಯಶಂಕರ್ -ಗಿರಿಜಾ ದಂಪತಿಯ ಪುತ್ರಿಯಾಗಿದ್ದಾರೆ. ಇದೀಗ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾತಿ, ತನ್ನ ಖುಷಿ ಹಂಚಿಕೊಂಡಿದ್ದಾರೆ.

    ನನಗೆ ಮೊದಲಿಗೆ ನಂಬಲು ಸಾಧ್ಯವಾಗಿಲ್ಲ. ಆದರೂ ನಾನು ಇದಕ್ಕಿಂತ ಹೆಚ್ಚಿನ ಅಂಕ ಬರುತ್ತದೆ ಅಂದುಕೊಂಡಿದ್ದೆ. ಪೋಷಕರು ಹಾಗೂ ಅಕ್ಕನ ಸಪೋರ್ಟ್ ಇತ್ತು. ಜೊತೆ ನಮ್ಮ ಶಿಕ್ಷಕರ ಮಾರ್ಗದರ್ಶನವೂ ಇತ್ತು. ನಾನು ತುಂಬಾ ಹಾರ್ಡ್ ವರ್ಕ್ ಮಾಡಿದ್ದೇನೆ. ಹೀಗಾಗಿ ನನ್ನ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಇದರಿಂದ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ರು.

    ಪ್ರತಿದಿನ ಮಾಡಿದ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದೆ. ಮುಂದೆ ಎಂಜಿನಿಯರಿಂಗ್ ಮಾಡಬೇಕು ಎಂದುಕೊಂಡಿದ್ದೇನೆ. ಅದಕ್ಕೆ ಸಿಇಟಿ ಪರೀಕ್ಷೆ ಬರೆಯಬೇಕು. ಅದಕ್ಕೂ ಈಗಿನಿಂದಲೇ ರೆಡಿಯಾಗುತ್ತಿದ್ದೇನೆ. ಎಂಜಿನಿಯರ್ ಕಾಲೇಜಿನಲ್ಲಿ ಸೀಟ್ ತೆಗೆದುಕೊಳ್ಳುತ್ತೇನೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಅಂದು ಮಾಡಿದ ಪಾಠವನ್ನು ಅಂದೇ ಓದಿಕೊಳ್ಳಿ, ನಿರ್ಲಕ್ಷ್ಯ ಮಾಡಬೇಡಿ. ಪರೀಕ್ಷೆಯ ಹಿಂದಿನ ದಿನ ವ್ಯಾಸಂಗ ಮಾಡಿದರೂ ಒಳ್ಳೆಯ ಅಂಕ ಪಡೆದುಕೊಳ್ಳಬಹುದು. ಆದರೆ ಮೊದಲೇ ಅಭ್ಯಾಸ ಮಾಡಿಕೊಂಡರೆ ಭವಿಷ್ಯಕ್ಕೆ ಒಳ್ಳೆದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ರು.

    ಅವಳು ನಿದ್ದೆ ಏನು ಬಿಡಲಿಲ್ಲ. ಪ್ರತಿದಿನ ಓದಿಕೊಳ್ಳುತ್ತಿದ್ದಳು. ಶಿಕ್ಷಕರ ಬೆಂಬಲ ಕೂಡ ಇತ್ತು. ಹೀಗಾಗಿ ಅವಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ನಮಗೆ ತುಂಬಾ ಸಂತೋಷವಾಗಿದೆ. ಎಲ್ಲವೂ ನಮ್ಮ ಕುಲದೇವರ ಮಹಿಮೆಯಾಗಿದೆ ಎಂದು ಸ್ವಾತಿ ಅವರು ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಕಲಾ ವಿಭಾಗದಲ್ಲಿ ಕೂಲಿ ಕಾರ್ಮಿಕನ ಮಗಳು ರಾಜ್ಯಕ್ಕೆ ಪ್ರಥಮ!

    ಕಲಾ ವಿಭಾಗದಲ್ಲಿ ಕೂಲಿ ಕಾರ್ಮಿಕನ ಮಗಳು ರಾಜ್ಯಕ್ಕೆ ಪ್ರಥಮ!

    ಬಳ್ಳಾರಿ: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಕಲಾ ವಿಭಾಗದಲ್ಲಿ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದ ಕೊಟ್ಟಪ್ಪ ಮತ್ತು ರತ್ನಮ್ಮ ದಂಪತಿಯ ಪುತ್ರಿ ಸ್ವಾತಿ ಬಡತನದಲ್ಲಿ ಓದಿ 585 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಕೂಲಿ ಕಾರ್ಮಿಕರ ಮಗಳಾಗಿರುವ ಸ್ವಾತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಷಯ ತಿಳಿಯುತ್ತಿದ್ದಂತೆ ಇಂದು ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಕಾಲೇಜಿನ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸ್ವಾತಿಗೆ ಸಿಹಿ ತಿನಿಸಿ ಶುಭಾಶಯ ಕೋರಿದರು. ಇನ್ನೂ ಇದೇ ಇಂದು ಕಾಲೇಜಿನ ರಮೇಶ್ 593 ಹಾಗೂ ಗೊರವ ಕಾವ್ಯಾಂಜಲಿ 588 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಇಂದು ಕಾಲೇಜು ಕಳೆದ ಮೂರು ವರ್ಷಗಳಿಂದ ಕಲಾ ವಿಭಾಗದಲ್ಲಿ ಸತತವಾಗಿ ಪ್ರಥಮ ಸ್ಥಾನ ಪಡೆಯುತ್ತಿರುವುದು ಸಹ ಮತ್ತೊಂದು ದಾಖಲೆಯಾಗಿದೆ. ಸ್ವಾತಿ ಒಟ್ಟು 595 ಅಂಕಗಳನ್ನು ಪಡೆದಿದ್ದು, ಕನ್ನಡ (98), ಸಂಸ್ಕೃತ (99), ಐಚ್ಚಿಕ ಕನ್ನಡ(99) ಇತಿಹಾಸ(100), ರಾಜ್ಯಶಾಸ್ತ್ರ (99) ಮತ್ತು ಶಿಕ್ಷಣ(100) ಅಂಕಗಳನ್ನು ಪಡೆದಿದ್ದಾರೆ.