Tag: swarnavalli swamiji

  • ಅವರು ಹಮ್ ದೋ ಹಮಾರೆ ದಸ್ ಅಂದರೆ ಹಿಂದೂಗಳು ಹಮ್ ದೋ ಹಮಾರೆ ಏಕ್ ಬಸ್ ಅನ್ನುತ್ತಾರೆ: ಸ್ವರ್ಣವಲ್ಲಿ ಶ್ರೀ

    ಅವರು ಹಮ್ ದೋ ಹಮಾರೆ ದಸ್ ಅಂದರೆ ಹಿಂದೂಗಳು ಹಮ್ ದೋ ಹಮಾರೆ ಏಕ್ ಬಸ್ ಅನ್ನುತ್ತಾರೆ: ಸ್ವರ್ಣವಲ್ಲಿ ಶ್ರೀ

    ಕಾರವಾರ: ನಮ್ಮ ಸಮಾಜದಲ್ಲಿ ಹಿಂದೂಗಳಿಗೊಂದು (Hindu), ಬೇರೆ ಸಮಾಜಕ್ಕೊಂದು ವಿವಾಹದ ಕಾನೂನು ಇದೆ. ಬೇರೆ ಸಮಾಜದಲ್ಲಿ 15 ವರ್ಷಕ್ಕೆ ವಿವಾಹ ಮಾಡುತ್ತಾರೆ. ಬೇರೆ ಸಮಾಜಕ್ಕೆ ಬೇರೆ ದೇಶದ ಆಶ್ರಯ ಇದೆ. ಹಿಂದೂಗಳಿಗೆ ಹಿಂದುಸ್ಥಾನ ಒಂದೇ ಗತಿ. ಈ ಅಪಾಯ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಶಿರಸಿಯ ದೇವನಳ್ಳಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜೀ (Swarnavalli Swamiji) ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡಿದರು.

    ಹಿಂದೂಗಳು 3 ತಪ್ಪುಗಳನ್ನು ಮಾಡುತ್ತಿದ್ದಾರೆ. ಮಕ್ಕಳಿಗೆ ತಡವಾಗಿ ವಿವಾಹ ಮಾಡುತ್ತಿದ್ದಾರೆ, ತಡವಾಗಿ ಮದುವೆ ಮಾಡುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ತಡವಾಗಿ ಮದುವೆಯಾದವರಲ್ಲಿ ವಿವಾಹ ವಿಚ್ಛೇದನ ಆಗುತ್ತಿದೆ. ಸೂಕ್ತ ಸಮಯದಲ್ಲಿ ಮದುವೆಯಾದರೆ ಮಾತ್ರವೇ ಹೆಚ್ಚು ಸಶಕ್ತ ಮಕ್ಕಳನ್ನು ಸಮಾಜಕ್ಕೆ ಕೊಡಬಹುದು. ಸಂತತಿಯ ಅತಿ ನಿಯಂತ್ರಣ ಹಿಂದೂಗಳಲ್ಲಿ ಹಿಂದೂ ಸಂತಾನ ಕಡಿಮೆಯಾಗುತ್ತದೆ. ಹಿಂದುಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಬಾರದು. ಹಿಂದುಸ್ಥಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಬಾರದು ಎಂದರು.

    ಇನ್ನೊಂದು ಸಮುದಾಯದವರು 15 ವರ್ಷಕ್ಕೆ ಮದುವೆ ಮಾಡುತ್ತಾರೆ. ‘ಹಮ್ ದೋ ಹಮಾರೆ ದಸ್’ ಎನ್ನುತ್ತಾರೆ. ಆದರೆ ಹಿಂದೂಗಳು 30 ವರ್ಷವಾದರೂ ಮದುವೆ ಮಾಡುತ್ತಿಲ್ಲ. ‘ಹಮ್ ದೋ ಹಮಾರೆ ಏಕ್ ಬಸ್’ ಎನ್ನುತ್ತಾರೆ. ಹಿಂದೂ ಪರಿವಾರ ಅಲ್ಪ ಸಂತತಿ, ಅತಿ ನಿಯಂತ್ರಣ ಮಾಡುತ್ತಿದ್ದಾರೆ. ಹಿಂದೂಗಳು ಆದಷ್ಟು ಹೆಚ್ಚಿನ ಮಕ್ಕಳನ್ನು ಪಡೆಯಬೇಕು ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದೂ ಎನ್ನುವುದು ಧರ್ಮ, ಉಳಿದಂತಹದ್ದು ರಿಲೀಜಿಯನ್‌ಗಳು. ಇಂಗ್ಲಿಷ್‌ನ ರಿಲೀಜಿಯನ್ ಅನ್ನು ಅನುವಾದ ಮಾಡುವಾಗ ನಾವು ಎಡವಟ್ಟು ಮಾಡಿಕೊಂಡಿದ್ದೇವೆ. ಯಾವುದನ್ನು ಧರಿಸಿಕೊಂಡು ಹೋಗುತ್ತೇವೆಯೋ ಅದೇ ಧರ್ಮ. ಕೆಲವು ಹಿಂದೂಗಳು ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ್ ಆಗಿ ಚರ್ಚ್‌ಗೆ ಹೋಗುತ್ತಾರೆ. ಆದರೆ ಚರ್ಚ್‌ನಲ್ಲಿ ಇವರನ್ನು ಆಕರ್ಷಿಸಲು ಗರುಡುಗಂಬ ಹಾಕುತ್ತಾರೆ. ಚರ್ಚ್‌ನಲ್ಲಿ ಏಸುವಿಗೆ ಆರತಿ ಮಾಡುತ್ತಾರೆ, ಹರಿಹರದ ಚರ್ಚ್‌ನಲ್ಲಿ ರಥೋತ್ಸವ ಮಾಡುತ್ತಾರೆ. ಇದೆಲ್ಲವೂ ಹಿಂದೂ ಧರ್ಮದಿಂದಲೇ ಕಾಪಿ ಮಾಡಿರುವುದು ಎಂದರು.

    ಹಿಂದೂ ಧರ್ಮ ಎಂದರೆ ಬಿಟ್ಟರೂ ಬಿಡಲು ಸಾಧ್ಯವಾಗದಂತದ್ದು. ಹಿಂದೂ ಧರ್ಮದಂತಹ ಶ್ರೇಷ್ಠ ಧರ್ಮವನ್ನು ಬಿಟ್ಟುಹೋದವರು ಮತ್ತೊಂದು ಧರ್ಮದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಇತರ ಧರ್ಮದಲ್ಲಿ ನಂಬಿಕೆಗಾಗಿ ಒಂದು ಪುಸ್ತಕ ಬೇಕು. ಒಬ್ಬನೇ ದೇವರು ಬೇಕು. ಆ ದೇವರ ಬಗ್ಗೆ ಹೇಳಲು ಒಬ್ಬ ವ್ಯಕ್ತಿ ಬೇಕು. ಆದರೆ ಹಿಂದೂ ಧರ್ಮದಲ್ಲಿ ಹಾಗಿಲ್ಲ. ಹಿಂದೂ ಧರ್ಮ ಎನ್ನುವುದು ಮೂಲ ವಿಜ್ಞಾನದಂತೆ ಇದರ ಬಗ್ಗೆ ಅಧ್ಯಯನ ಮಾಡುವುದು ಇಡೀ ಲೈಬ್ರರಿಯನ್ನೇ ಓದಿದಂತೆ ಎಂದರು. ಇದನ್ನೂ ಓದಿ: ಜೈ ಶ್ರೀರಾಮ್ ಶಾಲು ಧರಿಸಿ ಉಜ್ಜಯಿನಿಯಲ್ಲಿ ಡಿಕೆಶಿ

    ಹಿಂದೂ ಧರ್ಮವನ್ನು ಅಶ್ಲೀಲ ಎಂದು ಕರೆದಂತೆ ಉಳಿದ ಧರ್ಮವನ್ನು ಅಶ್ಲೀಲ ಎಂದು ಕರೆದಿದ್ದರೆ ಆತ ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಅವರ ತಲೆ ಕಡಿಯುವವರೆಗೂ ಬಿಡುತ್ತಿರಲಿಲ್ಲ. ಆದರೆ ಹಿಂದೂ ಧರ್ಮೀಯರು ಆಯ್ತು ಕೇಳುವ ಅವಕಾಶ ನಿನಗಿದೆ. ಉತ್ತರ ನಾವು ಕೊಡುತ್ತೇವೆ ಎನ್ನುತ್ತಾರೆ. ಹತ್ತಾರು ಸಾವಿರ ಜನರ ಎದುರಲ್ಲಿ ಉತ್ತರ ಕೊಡಲು ಸಾಧ್ಯವಿರುವುದು ಹಿಂದೂ ಧರ್ಮಕ್ಕೆ ಮಾತ್ರ. ಹಿಂದೂ ಧರ್ಮಕ್ಕೆ ಬಂದೂಕು ಬೇಕಿಲ್ಲ, ಕತ್ತಿ ಬೇಕಿಲ್ಲ, ಶಾಸ್ತ್ರದ ಗ್ರಂಥಗಳು ಸಾಕು ಎನ್ನುತ್ತದೆ ಎಂದರು.

    ದೇವನಳ್ಳಿಯ ಹಿಂದೂ ಸಮಾವೇಶದಲ್ಲಿ ನಾಮಧಾರಿ ಗುರು ಮಠದ ಶ್ರೀ ಕಲ್ಯಾಣ ಸ್ವಾಮಿಜೀ, ಶಿರಸಿ ಬಣ್ಣದ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಮಂಜುಗುಣಿ ಕ್ಷೇತ್ರದ ಅರ್ಚಕರಾದ ಶ್ರೀನಿವಾಸ ಭಟ್ಟರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ದೇವನಳ್ಳಿ, ಮಂಜುಗುಣಿ ಬಂಡಲ, ಹೆಗಡೆಕಟ್ಟಾ, ಹುಣಸೇಕೊಪ್ಪ, ಸಾಲ್ಕಣಿ ವ್ಯಾಪ್ತಿಯ ಹಿಂದೂ ಸಮಾಜದವರು ಬೈಕ್ ರ‍್ಯಾಲಿ ಮತ್ತು ಶೋಭಾ ಯಾತ್ರೆಯನ್ನು ನೆರವೇರಿಸಿದರು. ಇದನ್ನೂ ಓದಿ: ಮೆಕಾಲೆ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು: ಬಿ.ಸಿ ನಾಗೇಶ್

    Live Tv
    [brid partner=56869869 player=32851 video=960834 autoplay=true]

  • ವಿವಾಹ ವಯಸ್ಸು ನಿರ್ಣಯದಿಂದ ಹಿಂದೂಗಳ ಸಂಖ್ಯೆಗೆ ಕುತ್ತು- ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನ

    ವಿವಾಹ ವಯಸ್ಸು ನಿರ್ಣಯದಿಂದ ಹಿಂದೂಗಳ ಸಂಖ್ಯೆಗೆ ಕುತ್ತು- ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನ

    ಉಡುಪಿ: ಮಹಿಳೆಯರ ವಿವಾಹದ ವಯಸ್ಸು 21ಕ್ಕೆ ಏರಿಸಿ ಕೇಂದ್ರ ಸರ್ಕಾರ ಮಾಡಿರುವ ನಿರ್ಣಯದ ವಿರುದ್ಧ ಸ್ವರ್ಣವಲ್ಲಿ ಸ್ವಾಮಿಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು. ಈ ನಿರ್ಧಾರ ಹಿಂದೂಗಳಿಗೆ ಅನ್ಯಾಯವಾಗುತ್ತದೆ ಎಂದು ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಉಡುಪಿಯ ಕೃಷ್ಣಮಠದ ವಿಶ್ವಾರ್ಪಣಂ ಧಾರ್ಮಿಕ ಸಭೆಯಲ್ಲಿ ಮಾತಮಾಡಿದ ಸ್ವಾಮೀಜಿ, ಕ್ರೈಸ್ತರಿಗೆ ಮುಸ್ಲಿಮರಿಗೆ ವಿವಾಹದ ಕಾನೂನು ಬೇರೆ ಇದೆ. ನೀವು ಮಾಡುತ್ತಿರುವ ಹೊಸ ನಿರ್ಣಯ ಹಿಂದೂಗಳಿಗೆ ಮಾತ್ರ ಯಾಕೆ? ಎಲ್ಲರಿಗೂ ಅನ್ವಯವಾಗುವ ರೀತಿ ನೀವು ಯಾಕೆ ಕಾನೂನು ಕಾಯ್ದೆ ಯಾಕೆ ರೂಪಿಸುತ್ತಿಲ್ಲ. ಎಲ್ಲರಿಗೆ ಸಮಾನ ಕಾಯ್ದೆ ಜಾರಿಗೆ ತನ್ನಿ ಅದಕ್ಕೆ ನಮ್ಮ ಪೂರ್ತಿ ಬೆಂಬಲವಿದೆ. ಮುಸ್ಲಿಮರ ಕಾನೂನಲ್ಲಿ ವಿವಾಹದ ವಯಸ್ಸು ಈಗಲೂ 15 ಇದೆ. ಈ ಕಾನೂನಿನ ಪ್ರಕಾರ ಮುಸ್ಲಿಮರ ಜನಸಂಖ್ಯೆ ಏರಿಕೆ ಪ್ರಮಾಣ ಜಾಸ್ತಿ ಇದೆ. ಹಿಂದೂಗಳ ಜನಸಂಖ್ಯೆ ಕಮ್ಮಿ ಇದೆ. ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಷ್ಟ್ರಮಟ್ಟದಲ್ಲಿ ಸಂತರು ಕಳವಳಗೊಂಡಿದ್ದಾರೆ. ನಮ್ಮ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಅಪಾಯ ಇದೆ. ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಿವಿ ಹಿಂಡಿದ್ದಾರೆ.

    ಜಪಾನ್ ಬ್ರಿಟನ್ ಅಮೆರಿಕದಲ್ಲಿ ಮದುವೆಗೆ 16ರಿಂದ 18 ವಯೋಮಿತಿ ಇದೆ. ಸರ್ಕಾರ ಕೊಡುವ ವೈಜ್ಞಾನಿಕ ಕಾರಣಗಳು ಬಗ್ಗೆ ನಮಗೆ ಒಪ್ಪಿಗೆ ಇದೆ ಆದರೆ ಹೆಣ್ಣುಮಕ್ಕಳಿಗೆ ತೊಂದರೆ ಆಗಬಾರದು. ತಡವಾದ ವಿವಾಹದಿಂದ ವಿಚ್ಛೇದನ ಜಾಸ್ತಿಯಾಗಿದೆ. ಕುಟುಂಬ ವ್ಯವಸ್ಥೆ ಶಿಥಿಲಗೊಂಡಿದೆ. ವಿವಾಹದ ವಯಸ್ಸನ್ನು ಸರ್ಕಾರ ಏರಿಕೆ ಮಾಡಿರುವುದರಿಂದ ಇನ್ನಷ್ಟು ಸಮಸ್ಯೆಗಳು ಬಾಧಿಸಲಿದೆ ಎಂದರು. ಇದನ್ನೂ ಓದಿ: ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ