Tag: swara bhakar

  • ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಕಂಗೊಳಿಸಿದ ಸ್ವರಾ ಭಾಸ್ಕರ್

    ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಕಂಗೊಳಿಸಿದ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಫಹಾದ್ ಅಹ್ಮದ್ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಸ್ವರಾ -ಫಹಾದ್ ಅವರ ಮತ್ತೊಂದು ಆರತಕ್ಷತೆ ಕಾರ್ಯಕ್ರಮವನ್ನ (Reception) ವರನ ಕುಟುಂಬದಿಂದ ಆಯೋಜಿಸಲಾಗಿತ್ತು. ಈ ಇವೆಂಟ್‌ನಲ್ಲಿ ನಟಿ ಸ್ವರಾ ಅವರು ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿರುವ ಲೆಹೆಂಗಾದಲ್ಲಿ ಮಿಂಚಿದ್ದಾರೆ.‌ ಇದನ್ನೂ ಓದಿ: ಸೆಕ್ಸ್ ಸಿಂಬಲ್ ಅಂತ ಕರೆದರೆ ಬೇಸರವಿಲ್ಲ ಎಂದ ನಟಿ ಮಲೈಕಾ

     

    View this post on Instagram

     

    A post shared by Swara Bhasker (@reallyswara)

    ಸ್ವರಾ- ಫಹಾದ್ ರಿಜಿಸ್ಟರ್ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದೀಗ ಕುಟುಂಬಸ್ಥರ ಆಸೆಯಂತೆ ಸ್ವರಾ ಮತ್ತೆ ಫಹಾದ್ ಜೊತೆ ತೆಲುಗು ಸಂಪ್ರದಾಯದಂತೆ ಮದುವೆಯಾದರು. ನಟಿ ಮನೆ ಕಡೆಯಿಂದ ಅದ್ದೂರಿ ಆರತಕ್ಷತೆ ಮಾಡಲಾಗಿತ್ತು. ಇದೀಗ ವರನ ಮನೆ ಕಡೆಯಿಂದ ಮತ್ತೊಂದು ಆರತಕ್ಷತೆ ಮಾಡಲಾಗಿದೆ.

    ಹೆವಿ ಎಂಬ್ರಾಯಿಡಿರಿ ವರ್ಕ್ ಇರುವ ಲೆಹೆಂಗಾವನ್ನ ನಟಿ ಧರಿಸಿದ್ದರು. ಮೂಗಿಗೆ ದೊಡ್ಡ ರಿಂಗ್ ಧರಿಸಿ, ಗೋಲ್ಡ್ ಬಣ್ಣ ಕುರ್ತಾದಲ್ಲಿ ನಟಿ ಕಂಗೊಳಿದ್ದಾರೆ. ಪಾಕಿಸ್ತಾನ ಪ್ರಸಿದ್ಧ ಡಿಸೈನರ್ ವಿನ್ಯಾಸ ಮಾಡಿರುವ ಲೆಹೆಂಗಾ ಇದಾಗಿದೆ.

     

    View this post on Instagram

     

    A post shared by Swara Bhasker (@reallyswara)

    ಸ್ವರಾ ಪತಿ ಫಹಾದ್ ಅಹ್ಮದ್ ರಾಜಕೀಯ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸಮಾಜವಾದಿ ಪಕ್ಷದ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

  • ಅಮ್ಮನ ಮನೆಗೆ ವಿದಾಯ ಹೇಳುವಾಗ ಕಣ್ಣೀರಿಟ್ಟ ನಟಿ ಸ್ವರಾ ಭಾಸ್ಕರ್

    ಅಮ್ಮನ ಮನೆಗೆ ವಿದಾಯ ಹೇಳುವಾಗ ಕಣ್ಣೀರಿಟ್ಟ ನಟಿ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್‌ (Swara Bhaskar) ಅವರು ಫಹಾದ್ ಅಹ್ಮದ್ (Fahad ahamad) ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೇ ತೆಲುಗು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ವಿಶೇಷ ಕಾಯ್ದೆಯಡಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈಗ ಗುರುಹಿರಿಯರ ಇಷ್ಟದಂತೆ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ಅಮ್ಮನ ಮನೆಗೆ ವಿದಾಯ ಹೇಳುವ ಸಮಯದಲ್ಲಿ ನಟಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾಗಲು ಭಾರಿ ಮೊತ್ತ ಖರ್ಚು ಮಾಡಿದ ರಾಜಮೌಳಿ ಆ್ಯಂಡ್ ಟೀಂ

    ನಟಿ ಸ್ವರಾ ಭಾಸ್ಕರ್ ಅವರು ಮದುವೆ ಸಂದರ್ಭದಲ್ಲಿ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದರು. ಮದುವೆ ಬಳಿಕ ಗಂಡನ ಮನೆಗೆ ಹೊರಡುವಾಗ ಸ್ವರಾ ಭಾಸ್ಕರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸ್ವರಾ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಂಬಾ ಕಷ್ಟದ ಕ್ಷಣವಾಗಿತ್ತು ಎಂದು ಸ್ವರಾ ತಂದೆ ಕೂಡ ಭಾವುಕರಾಗಿದ್ದಾರೆ. ಸ್ವರಾ ಪಕ್ಕದಲ್ಲಿ ತಾಯಿ ಇರಾ ಭಾಸ್ಕರ್ ಹಾಗೂ ಪತಿ ಫಹಾನ್ ನಿಂತಿದ್ದರು. ಒಬ್ಬರು ಕವನವನ್ನು ಓದಿ ಹೇಳುತ್ತಿದ್ದರು. ಆಗ ಸ್ವರಾ ಕಣ್ಣೀರಿಟ್ಟಿದ್ದಾರೆ. ತನ್ನ ತಾಯಿ ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೋಗುವ ಕ್ಷಣ ಅದು. ಸ್ವರಾ ಭಾಸ್ಕರ್ ಭಾವುಕರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ತೆಲುಗು ಶೈಲಿಯಲ್ಲಿ (Telagu Culture Wedding) ಸ್ವರಾ ಮದುವೆಯಾಗಿದ್ದಾರೆ. ತೆಲುಗು ಸಂಸ್ಕೃತಿಯನ್ನು ಸಂಕೇತಿಸುವ ವಿಶೇಷ ಮಂಗಲಸೂತ್ರವನ್ನು ಧರಿಸಿದ್ದಾರೆ. ಸ್ವರಾ ತಾಯಿ ಇರಾ ಭಾಸ್ಕರ್ ಬಿಹಾರದವರು ಆದರೆ ಅವರ ತಂದೆ ಉದಯ್ ಭಾಸ್ಕರ್ ತೆಲುಗು ಮೂಲದವರು. ಹಾಗಾಗಿ ಸ್ವರಾ ತೆಲುಗು ಶೈಲಿಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮಂಗಳಸೂತ್ರ ಧರಿಸಿರುವ ಸ್ವರಾ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವರಾ ಜೋಡಿಗೆ ಫ್ಯಾನ್ಸ್ ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಮದುವೆ ಮತ್ತು ಆರತಕ್ಷತೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತ್ತು. ಸ್ವರಾ ಮದುವೆ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅರವಿಂದ್‌ ಕೇಜ್ರಿವಾಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಹೊಸ ಜೋಡಿಗೆ ಶುಭಹಾರೈಸಿದ್ದರು.