ಬೀದರ್: ಫೀರ್ ಪಾಶಾ ದರ್ಗಾ ಮತ್ತು ಮೂಲ ಅನುಭವ ಮಂಟಪದ ವಿವಾದದ ಹಿನ್ನೆಲೆ ನಗರದಲ್ಲಿ ಇಂದು 770 ಮಠಾಧೀಶರಿಂದ ಬೃಹತ್ ಸಮಾವೇಶ ನಡೆಯಲಿದೆ.
ಮೂಲ ಅನುಭವ ಮಂಟಪಕ್ಕಾಗಿ ಇಂದು ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಎಂಬ ಬೃಹತ್ ಸಮಾವೇಶ ನಡೆಯಲಿದೆ. ಬಸವಕಲ್ಯಾಣದ ತೇರು ಮೈದಾನದ ಸಭಾ ಭವನದಲ್ಲಿ ನಡೆಯಲಿದೆ. ನೂರಾರು ಮಠಾಧೀಶರು ಹಾಗೂ ಸಾವಿರಾರು ಬಸವ ಭಕ್ತರು ಹಾಗೂ ಜನಪ್ರತಿನಿಗಳು ಭಾಗಿಯಾಗಲಿದ್ದಾರೆ. ಜೊತೆಗೆ ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲನ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
10 ಗಂಟೆಗೆ ವಿವಿಧ ಮಠಾಧೀಶರಿಂದ ಕಲ್ಯಾಣದ ಬಸವ ಕೇಂದ್ರದಲ್ಲಿ ಇಷ್ಟಲಿಂಗ ಪೂಜೆ ಜರುಗಲಿದೆ. ಬಳಿಕ ಮೆರವಣಿಗೆ ಮೂಲಕ ತೇರು ಮೈದಾನಕ್ಕೆ ಮಠಾಧೀಶರ ಆಗಮನವಾಗುತ್ತದೆ. ಸಭಾ ಭವನದಲ್ಲಿ ಮಠಾಧೀಶರ ಚಿಂತನ – ಮಂಥನ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಮಠಾಧೀಶರು ಮೂಲ ಅನುಭವ ಮಂಟಪವನ್ನು ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಬೇಕು ಎಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿರುವ ಕಲ್ಯಾಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ತುಮಕೂರು: ಸಮಾಜದಲ್ಲಿ ಶಾಂತಿ ಕಾಪಾಡುವ ಬದಲು ಅಶಾಂತಿ ಉಂಟು ಮಾಡುತ್ತಿರುವ _ಕಾವಿ ಹಾಕುವ ಕಳ್ಳ ಸ್ವಾಮೀಜಿಗಳ ಮುಖಕ್ಕೆ ಕ್ಯಾಕರಿಸಿ ಉಗಿಬೇಕು ಎಂದು ಹಿಂದೂ ಸ್ವಾಮೀಜಿಗಳ ಸಮೂಹದ ವಿರುದ್ದ ಗುಬ್ಬಿ ಕ್ಷೇತ್ರದ ಜೆ.ಡಿ.ಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಹಿಂದೂ, ಮುಸ್ಲಿಂ ನಾವೆಲ್ಲಾ ಒಂದಾಗಿ ಬದುಕುತ್ತಿದ್ದೇವೆ. ಆದರೆ ಇಂದು ಸ್ವಾಮೀಜಿಗಳು ಧರ್ಮ ಧರ್ಮದ ನಡುವೆ ವೈಮನಸ್ಸು ಬೆಳೆಸುತ್ತಿದ್ದಾರೆ. ಆ ಧರ್ಮದ ಡ್ರೈವರ್ ಇಟ್ಕೊಂಡು ದೇವಸ್ಥಾನಕ್ಕೆ ಹೋಗಬೇಡ ಎಂದು ಒಬ್ಬ ಸ್ವಾಮೀಜಿ ಹೇಳಿದ್ರೆ, ಇನ್ನೊಬ್ಬ ಯಾವನೋ ಸ್ವಾಮೀಜಿ ಹಿಜಬ್ ಎಂದು ಹೇಳಿ ಸಾಮರಸ್ಯ ಕದಡುತ್ತಾನೆ ಎಂದು ಏಕ ವಚನದಲ್ಲಿ ಟೀಕಿಸಿದ್ದಾರೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ
ಯಾವತ್ತೋ ಮುಸ್ಲಿಮರು ಮಾಡಿದ್ದ ವಿಗ್ರಹಕ್ಕೆ ಪೂಜೆ ಮಾಡಬೇಡಿ ಅಂತಾರೆ ಈ ಸ್ವಾಮಿಗಳು, ಆದರೆ ನಮ್ಮೂರಲ್ಲಿ ಶೇ.90 ದೇವಸ್ಥಾನ ಕಟ್ಟಿರೋರು ಮುಸ್ಲಿಮರೆ ಆಗಿದ್ದಾರೆ. ಯಾವನೋ ತಲೆ ಕೆಟ್ಟ ಸ್ವಾಮಿ ಹೇಳಿದ್ದಾನೆ. ವಿಗ್ರಹ ಕಿತ್ತುಹಾಕೋಕಾಗುತ್ತಾ? ಮೊದಲು ಈ ಕಾವಿ ಹಾಕಿ ಬರುವ ಸ್ವಾಮೀಜಿಗಳಿಗೆ ಕ್ಯಾಕರಿಸಿ ಮುಖಕ್ಕೆ ಉಗಿಬೇಕು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ: 5 ಅಂಗಡಿಗಳು ಭಸ್ಮ
ಸ್ವಾಮೀಜಿಗಳ ಕೆಲಸ ಸಮಾಜದಲ್ಲಿ ಶಾಂತಿ ಕಾಪಾಡೋದು, ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವುದು ಅವರ ಜವಾಬ್ದಾರಿ ಆಗಿದೆ. ಆದರೆ ಇವೆಲ್ಲಾ ಬಿಟ್ಟು ಬೀದಿಗೆ ಬಂದಿದ್ದಾರೆ. ಹಿಂದೂಗಳ ಸಂಘಟನೆ ಮಾಡುತ್ತೇವೆ ಅನ್ನುವ ಇವರು ಏನ್ ಸಂಘಟನೆ ಮಾಡುತ್ತಾರೆ. ಮುಸ್ಲಿಮರನೆಲ್ಲಾ ಈ ದೇಶಬಿಟ್ಟು ಓಡಿಸಬೇಕು. ಓಡಿಸಲು ಇವರಿಂದ ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.
ಕಲಬುರಗಿ: ಜಿಲ್ಲೆಯ ಅನೇಕ ಮಠಾಧೀಶರು ಸೇರಿ ನೈಜ ಘಟನೆ ಆಧಾರಿತ ‘ದಿ ಕಾಶ್ಮೀರ ಫೈಲ್ಸ್’ (The Kashmir Files) ಚಿತ್ರ ವೀಕ್ಷಣೆ ಮಾಡಿದ್ದಾರೆ.
ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಸಿನಿಮಾ ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದಾರೆ. ಐವತ್ತಕ್ಕೂ ಹೆಚ್ಚು ಮಠಾಧೀಶರು ಮತ್ತು ಬಿಜೆಪಿ ಕಾರ್ಯಕರ್ತರು ಮಿರಾಜ್ ಟಾಕಿಜ್‍ನಲ್ಲಿ ಫ್ರೀ ಶೋ ವೀಕ್ಷಣೆ ಮಾಡಿದ್ದಾರೆ.
ಸಿನಿಮಾ ವಿಕ್ಷಣೆಗೂ ಮುನ್ನ ಶ್ರೀರಾಮ ಸೇನೆಯ ರಾಜ್ಯಧ್ಯಕ್ಷ, ಆಂದೋಲಾ ಮಠದ ಸಿದ್ಧಲಿಂಗ ಸ್ವಾಮಿಜಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಕಾಶ್ಮೀರದಲ್ಲಿ ನಡೆದ ಸತ್ಯ ಘಟನೆಯ ಸಿನಿಮಾವಾಗಿದೆ. ಅಲ್ಲಿನ ಮುಸ್ಲಿಂ ಆತಂಕವಾದಿಗಳಿಂದ ಹಿಂದುಗಳ ಮೇಲಿನ ಹಿಂಸೆ ಎಳೆ ಎಳೆಯಾಗಿ ಬಿಡಿಸಿ ಹೇಳಲಾಗಿದೆ. ಇದಕ್ಕಾಗಿ ಚಿತ್ರ ನಿರ್ಮಾಪಕ ಅಗ್ನಿ ಹೋತ್ರಿ ಅವರಿಗೆ ಅನಂತ ಧನ್ಯವಾದಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
ಭಾರತದ ಇತಿಹಾಸದಲ್ಲಿ ಇಂತಹ ಅನೇಕ ನೈಜ ಘಟನೆಗಳು ಮುಳುಗಿ ಹೋಗಿವೆ. ಆದರೆ ಯಾವುದೇ ನಿರ್ಮಾಪಕ, ನಿರ್ದೇಶಕರು ಸತ್ಯ ತೋರಿಸುವ ಕೆಲಸ ಮಾಡಿಲ್ಲ. ಇದೀಗ ಅಗ್ನಿ ಹೋತ್ರಿ ದಿಟ್ಟತನ ತೋರಿದ್ದಾರೆ. ಪ್ರತಿಯೊಬ್ಬ ಹಿಂದು ಈ ಚಿತ್ರ ನೋಡಲೇಬೇಕು. ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರದೇ ಇದ್ದಿದ್ದರೆ, ಈ ಸತ್ಯ ಘಟನೆಯೂ ಸಿನಿಮಾ ಆಗುತ್ತಿರಲಿಲ್ಲ ಎಂದು ಆಂದೋಲಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ವಿಜಯಪುರ: ಮಠಾಧೀಶರು ಅವರ ಶೀಷ್ಯಂದಿರ ಬಗ್ಗೆ ಪ್ರೀತಿಯಿಂದ ಅಭಿಪ್ರಾಯ ಹೇಳೋದು ತಪ್ಪಲ್ಲ. ಆದರೆ ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಾ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡ್ಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಬಿಜೆಪಿ ಸರ್ವನಾಶ ಆಗುತ್ತೆ ಎಂದು ಹೇಳಿದರು. ಕೆಲ ಮಠಾಧಿಪತಿಗಳು ಇದನ್ನು ಒಪ್ಪಿಲ್ಲ. ಆ ಸಭೆ ಮುಗಿಯುತ್ತಿದ್ದಂತೆ ಶ್ರೀ ದಿಂಗಾಲೇಶ್ವರ ಸ್ವಾಮಿಜಿ ನಮ್ಮ ಮನೆಗೆ ಬಂದಿದ್ದರು. ಇದು ಯಾವ ಸಿಸ್ಟ್‍ಂ ಎಂದು ಅವರನ್ನು ಕೇಳಿದೆ. ನೀವು ಯಾವುದೋ ಒಬ್ಬ ವ್ಯಕ್ತಿ ಮೇಲೆ ಪ್ರೀತಿ ಇಟ್ಟುಕೊಂಡು. ಆ ವ್ಯಕ್ತಿಯನ್ನು ಇಳಿಸಿದರೆ ಪಕ್ಷ ಸರ್ವನಾಶ ಆಗುತ್ತೆ ಎಂದು ನಿಮ್ಮ ಬಾಯಲ್ಲಿ ಬಂದರೆ, ಯಾರಿಗೆ ನಾವು ಗೌರವ ಕೊಡೋಣ ಎಂದು ಕೇಳಿದೆ ಎಂದರು.
ಭಾರತೀಯ ಸಂಸ್ಕ್ರತಿಯನ್ನು ಉಳಿಸುತ್ತಿರುವ ಪಕ್ಷ ಬಿಜೆಪಿ ಒಂದೇ. ಪಕ್ಷಕ್ಕೆ ಶಾಪ ಹಾಕುವ ನಿಟ್ಟಿನಲ್ಲಿ ದಯವಿಟ್ಟು ಮಾತನಾಡಬೇಡಿ ಎಂದು ಕಾಲಿಗೆ ಬಿದ್ದು ಪ್ರರ್ಥನೆ ಮಡ್ತೆನೆ. ಯಾವ ಸ್ವಾಮಿಗಳೂ ಯಾವುದೇ ಪಾಠ ಕಲಿಸಲು ಆಗುವುದಿಲ್ಲ, ಬಿಜೆಪಿ ಸುಸಂಘಟಿತವಾಗಿದೆ. ಪ್ರೀತಿಯಿಂದ ನೀವು ಏನು ಬೇಕಾದರೂ ಹೇಳಿ. ನಿಮ್ಮ ಬೆದರಿಕೆಗಳಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಯತ್ನಾಳ್‍ಗೆ ಕಿವಿಮಾತು:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಾನೊಬ್ಬ ಸ್ನೇಹಿತನಾಗಿ ಬುದ್ಧಿ ಹೇಳುತ್ತೇನೆ. ಬೇರೆ ಜಿಲ್ಲೆಯವರಿಗೆ ಸ್ವಲ್ಪ ಬುದ್ಧಿ ಇದೆ. ಯತ್ನಾಳ್‍ಗೆ ಬುದ್ಧಿ ಇಲ್ಲ ಎಂದು ನಾನು ಹೇಳಲ್ಲ. ಆದರೆ ಬಹಿರಂಗವಾಗಿ ಹೇಳಿಕೆ ಕೊಟ್ಟು ಅವರೇ ಹಾಳಾಗ್ತಾರೆ. ಬಿಜೆಪಿಯ ಹಿರಿಯ ನಾಯಕರು ಬರುತ್ತಾರೆ. ನಿಮ್ಮದೇನಾದರೂ ಇದ್ದರೆ ಅಲ್ಲಿ ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಳ್ಳಿ. ಬಹಿರಂಗವಾಗಿ ಹೇಳಿಕೆ ಕೊಟ್ಟು ದೊಡ್ಡ ಮನುಷ್ಯನಾಗಲು ಹೊರಟರೆ ಒಳ್ಳೆಯದಲ್ಲ ಎಂದು ಈ ಹಿಂದೆಯೇ ಅವರಿಗೆ ಹೇಳಿದ್ದೆ ಎಂದಿದ್ದಾರೆ.
ಅವರು ನನ್ನ ಆತ್ಮೀಯ ಸ್ನೇಹಿತ, ಹಿಂದುತ್ವವಾದಿ, ನನಗೆ ತುಂಬಾ ಖುಷಿ ಅವರು ಹಿಂದುತ್ವದ ಪರ ಮಾತನಾಡುತ್ತಾರೆ. ಆದರೆ ಬಹಿರಂಗವಾಗಿ ಹೇಳಿಕೆ ಕೊಟ್ಟರೆ ಹೇಗೆ? ಸದ್ಯ ಎಲ್ಲ ಸಮಸ್ಯೆಗಳು ಬಗಿಹರಿದಿವೆ. ಇವರು ಹೇಳಿಕೆ ಕೊಡುವುದರಿಂದ ಮತ್ತೆ ಗೊಂದಲ ಆಗುತ್ತದೆ ಎಂದು ಅನಿಸುತ್ತಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ ಎಂದರು.
ರಾಯಣ್ಣ ಬ್ರಿಗೇಡ್‍ನ್ನು ನಿಲ್ಲಿಸಬೇಕು ಎಂದು ಅಮಿತ್ ಶಾ ಅವರು ದೆಹಲಿಗೆ ಕರೆದು ಹೇಳಿದರು. ಎಲ್ಲರೂ ಸೇರಿ ಕ್ಲೋಸ್ ಅಂದ್ರು, ಅವತ್ತೆ ಮುಗಿಸಾಯ್ತು, ನನ್ನ ಜೀವನದಲ್ಲಿ ಮತ್ತೆ ಆ ಕಡೆ ತಿರುಗಿ ನೋಡಲ್ಲ ಎಂದರು.
ಸಿದ್ದರಾಮಯ್ಯನವರ ಅಪ್ಪ ಯಾರು?
ಕಾಂಗ್ರೆಸ್ ನ ಮೂಲ ಕಾರ್ಯಕರ್ತರಿಂದ ಪಕ್ಷದಲ್ಲಿ ಗೊಂದಲ ಇಲ್ಲ. ಹೊರಗಿನಿಂದ ಬಂದವರು ಗೊಂದಲ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಈ ಮೂಲಕ ನೇರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಹೌದು ನಾನು ಹೊರಗಿನಿಂದ ಬಂದೆ, ಕಾಂಗ್ರೆಸ್ ಸೊಸೆಯಾಗಿ ನಾನು ಬೀಗ ಹಿಡಿದುಕೊಂಡೆ ಎಂದು ಹೇಳಿದರು. ಚಾಮುಂಡೇಶ್ವರಿಯಲ್ಲಿ ಸೋತಾಗ ಕಾಂಗ್ರೆಸ್‍ನ ಮಗ ನಾನು ಎಂದು ಹೇಳಿದ್ದರು. ಬಾದಾಮಿಗೆ ಬರುತ್ತಿದ್ದಂತೆ ಮತ್ತೆ ಇಲ್ಲಿಯ ಮಗ ಎಂದರು. ಚಾಮರಾಜಪೇಟೆಗೆ ಹೋದಾಗ ಮತ್ತೆ ಅಲ್ಲಿನ ಮಗ ಎಂದರು. ಯಾವ ಪಕ್ಷದಲ್ಲಿದ್ದೀರಿ ನೀವು ಎಂದು ಈಶ್ವರಪ್ಪ ಪ್ರಶ್ನಿಸಿದರು.
ಮಗ ಅಂತಾರೆ ಒಪ್ಪಿಕೊಳ್ಳೋಣ, ಈಗ ಕಾಂಗ್ರೆಸ್ ನಲ್ಲಿದ್ದೀರಿ, ಹಿಂದೆ ಜೆಡಿಎಸ್, ಎಬಿಪಿಜೆಡಿ ನಲ್ಲಿದ್ದಿರಿ. ಮೂರು ಪಾರ್ಟಿಯ ಮಗನಾ ನೀವು? ಹಾಗಾದ್ರೆ ನಿಮ್ಮ ಅಪ್ಪ ಯಾರು ಎಂದು ಸಿದ್ದರಾಮಯ್ಯನವರ ವಿರುದ್ಧ ವ್ಯಂಗ್ಯವಾಡಿದರು.
ಮೈಸೂರು: ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಬಹುತೇಕ ಮಠಾಧೀಶರು ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮುಂದುವರಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ದಾರಿ ತಪ್ಪಿದ ವೇಳೆ ಮಠಾಧೀಶರು ಎಚ್ಚರಿಸಬೇಕು. ನಾಡಿನ ಧರ್ಮಾಧಿಕಾರಿಗಳು ಒಂದು ಪಕ್ಷದ ಪರವಾಗಿ, ಒಂದು ನಾಯಕತ್ವದ ಪರವಾಗಿ ಧ್ವನಿ ಎತ್ತಿರುವುದು ಎಷ್ಟು ಸರಿ? ರಾಜಕಾರಣಿಗಳನ್ನು ಮೀರಿಸುವಂತೆ ರಾಜಕೀಯದಲ್ಲಿ ಪಾತ್ರ ಮಾಡುತ್ತಿರುವುದು ಎಷ್ಟು ಸರಿ? ವೀರಶೈವ ಧರ್ಮ ಮಾನವ ಧರ್ಮ. ಇದನ್ನು ಜಾತಿಗೆ ಸೀಮಿತ ಮಾಡಿ ಧರ್ಮದ ವ್ಯಾಪ್ತಿಯನ್ನು ಕುಬ್ಜ ಮಾಡುತ್ತಿದ್ದಾರೆ. ಮಠಗಳು ರಾಜಕೀಯ ಕೇಂದ್ರಗಳಂತಾಗಿದ್ದು, ಸಮಾಜದ ಭಾಗವಾಗಬೇಕೆ ಹೊರತು ಅಧಿಕಾರದ ಭಾಗವಾಗಬಾರದು. ಒಬ್ಬ ನಾಯಕನ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿ: ಸಿದ್ದಗಂಗಾ ಶ್ರೀ
ನಮ್ಮ ಸಮುದಾಯದ ಸ್ವಾಮೀಜಿಗಳು ಸಹ ಸಮುದಾಯದ ನಾಯಕನ ಪರವಾಗಿ ಧ್ವನಿ ಎತ್ತಿದಾಗ ಅವರಿಗೂ ಈ ಮಾತು ಹೇಳಿದ್ದೇನೆ. ರಾಜಕೀಯಕ್ಕಾಗಿ ಧರ್ಮಾಧಿಕಾರಿಗಳು ಬೀದಿಗೆ ಬರಬಾರದು. ಧರ್ಮಾಧಿಕಾರಿಗಳು ಸಂವಿಧಾನಕ್ಕಿಂತ ದೊಡ್ಡವರು ಎನ್ನುವ ರೀತಿ ಹೋಗುತ್ತಿರುವುದು ಸರಿಯಲ್ಲ ಎಂದರು.
ಸಿಎಂ ಅವರನ್ನು ಭ್ರಷ್ಟಾಚಾರದ ಕಾರಣಕ್ಕೆ ಬದಲಾಯಿಸಲಾಗುತ್ತಿದೆ. ಮಠಾಧಿಪತಿಗಳು ನಾಡಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತೀದ್ದೀರಾ? ಧರ್ಮಾಧಿಕಾರಿಗಳನ್ನು ಬೀದಿಗೆ ತಂದು ನಿಲ್ಲಿಸಿ, ತಮ್ಮ ಪರವಾಗಿ ಧ್ವನಿ ಎತ್ತಿಸುವುದು ಯಾರಿಗೂ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಜಾತಿವಂತನಾಗಬಾರದು ನೀತಿವಂತನಾಗ ಬೇಕು. ಮುರಾಘಾ ಶ್ರೀಗಳೇ ಬೀದಿಗೆ ಬಂದು ನಿಂತು ಜಾತಿಗೆ ಹೋರಾಡುತ್ತಿದ್ದಾರೆ. ಬಸವ ಶ್ರೀ ಪ್ರಶಸ್ತಿ ಕೊಡುವ ನೀವು ಇಂತಹ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಲಾಗಿದೆ. ಆದರೆ, ಇದನ್ನು ಈಗ ಸರ್ಕಾರದ ಕೆಲಸ ಸ್ವಾಮೀಜಿಗಳ ಕೆಲಸವಾಗಿ ಬದಲಾಯಿಸಬೇಕಿದೆ. ಯಡಿಯೂರಪ್ಪ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಎರಡು ಬಾರಿಯೂ ಪರಿಸ್ಥಿತಿಯ ಶಿಶುವಾದರು. ಮೊದಲ ಬಾರಿಯೂ ಗೌರವಯುತವಾಗಿ ಸಿಎಂ ಸ್ಥಾನದಿಂದ ಅವರು ನಿರ್ಗಮಿಸಲಿಲ್ಲ. 48 ಇದ್ದ ಸ್ಥಾನ 104 ಸ್ಥಾನ ಆಗಿದ್ದು ಮೋದಿ ಅವರಿಂದ. ಮೋದಿ ಅವರ ಕಾರ್ಯ ಸಿದ್ಧಾಂತಕ್ಕೆ ವಿರೋಧವಾಗಿ ಇಲ್ಲಿ ಆಡಳಿತ ನಡೆಯುತ್ತಿದೆ. ಯಡಿಯೂರಪ್ಪ ಹೋರಾಟಗಾರ ಎಂದು ಅವರ ಕೈಗೆ ಅಧಿಕಾರ ಕೊಡಲಾಯಿತು. ಆದರೆ ಕಥೆ ಏನಾಗಿದೆ ನೋಡಿ, ಸಿಎಂ ಆದ ಮೇಲೆ ಯಡಿಯೂರಪ್ಪ ಅವರ ತಮ್ಮ ನಾಲಿಗೆ, ಕೈಯನ್ನು ಮಗನ ಕೈಗೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಅಲ್ಲ, ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಶಂಕರಮೂರ್ತಿಯಂತಹವರು ಕಟ್ಟಿದ್ದು. ನಂತರವೂ ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಒಬ್ಬರೇ ಅಲ್ಲ. ಹಲವು ನಾಯಕರು ಬಿಜೆಪಿ ಕಟ್ಟಿದ್ದಾರೆ. ಯಡಿಯೂರಪ್ಪ ಅಧಿಕಾರ ಅನುಭವಿಸಿದ್ದಾರೆ ಅಷ್ಟೆ, ರಾಜ್ಯದ ಆಡಳಿತ, ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದೆ. ಎರಡು ಬಾರಿಯೂ ನಿಮ್ಮ ನಿರ್ಗಮನ ಸರಿ ಆಗಲಿಲ್ಲ, ಇಂದು ಗೌರವಯುತವಾಗಿ ನಿರ್ಗಮನವಾದರೆ ನಿಮಗೇ ಒಳ್ಳೆಯದು ಎಂದರು.
ರಾಜಕಾರಣ ಸ್ವಾಮೀಜಿಗಳ ಕೈಗೆ ಹೋಗಬಾರದು. ಸ್ವಾಮೀಜಿಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಗಳಾಗಬಾರದು. ಯಡಿಯೂರಪ್ಪ ಬದಲಾದ ತಕ್ಷಣ ಶೂನ್ಯ ಸೃಷ್ಟಿಯಾಗಲ್ಲ, ಮಠಗಳ ಉತ್ತರಾಧಿಕಾರಿ ಮಾಡುವಾಗ ರಾಜಕಾರಣಿಗಳು ಮಧ್ಯ ಪ್ರವೇಶಿಸುತ್ತಾರಾ? ನಾಯಕತ್ವ ಬದಲಾವಣೆ ಶಾಸಕರ ಕೈಯಲ್ಲಿದೆ. ಮತ ಹಾಕುವವರು ಶಾಸಕರು, ನೀವು ಬಂದು ಮತ ಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಭ್ರಷ್ಟ ಸರ್ಕಾರ ಹೋಗಬೇಕು ಎನ್ನುತ್ತಾರೆ. ಅದೇ ಪಕ್ಷದ ಶಾಮನೂರು ಶಿವಶಂಕರಪ್ಪ ಸಿಎಂ ಮನೆಗೆ ಹೋಗಿ ಅವರಿಗೆ ಬೆಂಬಲ ಕೊಡುತ್ತಾರೆ. ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ಶಿಕ್ಷಣದ ದಲ್ಲಾಳಿಗಳು. ಕಾಂಗ್ರೆಸ್ ನ ನಿಜವಾದ ಸ್ಟ್ಯಾಂಡ್ ಏನು? ಶಾಮನೂರು, ಎಂ.ಬಿ.ಪಾಟೀಲ್ ಯಾವ ಪಕ್ಷದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಂಬೆ ಟೀಂನವರನ್ನು ಮಂತ್ರಿ ಮಾಡಬೇಡಿ
ಮುಂದೆ ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ. ಬದಲಾವಣೆಗಾಗಿ ಬೆಂಬಲವನ್ನು ಎಲ್ಲರೂ ನೀಡಿದ್ದರು. ಆದರೆ ಅಧಿಕಾರ ಸಿಕ್ಕ ಮೇಲೆ ಬದಲಾದರು. ಎಲ್ಲರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರೀತಿಯಾದರು. ಕೊಡಿ ಕೊಡಿ ಎನ್ನುವುದಕ್ಕೆ ಶುರು ಮಾಡಿದ್ದರು. ಅವರಿಗೆಲ್ಲ ಯಡಿಯೂರಪ್ಪ ಸಿಎಂ ಆಗಿರಲಿಲ್ಲ, ಬದಲಿಗೆ ವಿಜಯೇಂದ್ರ ಸಿಎಂ ಆಗಿದ್ದರು. 17 ಜನಕ್ಕೆ ಅಧಿಕಾರ ನೀಡದಿದ್ದರು ಪರವಾಗಿಲ್ಲ. ಆದರೆ ಇನ್ನು ಯಾವುದೇ ಅಧಿಕಾರ ನೀಡಬಾರದು. ಅವರು ಎಲ್ಲಿಗೂ ಹೋಗುವುದಿಲ್ಲ, ಹೋದರೆ ಹೋಗಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿ ಎಂದು ತಿಳಿಸಿದರು.
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರ್ಜರಿಯಾಗಿ ನಡೆಯುತ್ತಿವೆ. ಆಯೋಧ್ಯೆಯ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕರ್ನಾಟಕದ ಎಂಟು ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಕರ್ನಾಟಕಕ್ಕೆ ಎಂಟು ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಈ ಶುಭ ಸಂದರ್ಭಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ
ವಿಶೇಷ ಆಹ್ವಾನಿತರು:
1. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
2. ಇಸ್ಕಾನ್ ನ ಮಧುಪಂಡಿತ ದಾಸ್
3. ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ
4. ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ
5. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
6. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ
7. ಸುತ್ತೂರು ಮಠದ ಶ್ರೀಗಳು
8. ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ
ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಕ್ಕಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಪುರುಷೋತ್ತಮ ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.