Tag: swamiji

  • ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಪತ್ತೆ- ಭಕ್ತರಲ್ಲಿ ಆತಂಕ

    ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಪತ್ತೆ- ಭಕ್ತರಲ್ಲಿ ಆತಂಕ

    ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆಯಾಗಿದೆ.

    ಮೃತ ಸ್ವಾಮೀಜಿಯನ್ನು ಬಾಳೆಹೊನ್ನೂರು ಶಾಖಾಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮಿ ಎಂದು ಗುರುತಿಸಲಾಗಿದೆ. ಆಲೂರು ತಾಲೂಕಿನ ವ್ಯಾಪ್ತಿಯಲ್ಲಿ ಶಂಭುಲಿಂಗಶಿವಾಚಾರ್ಯ ಸ್ವಾಮೀಜಿ ಹೆಚ್ಚು ಜನಪ್ರಿಯವಾಗಿದ್ದರು. ಇದೀಗ ಕಾರ್ಜುವಳ್ಳಿ ಮಠದಲ್ಲಿಯೇ ಸ್ವಾಮೀಜಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ವಾಮೀಜಿ ಸಾವಿನಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದೆ.

    ಮಾರ್ಗದರ್ಶನ ಮಾಡಬೇಕಾದ ಸ್ವಾಮೀಜಿಯವರ ಸಾವಿನ ಬಗ್ಗೆ ಅನುಮಾನ ಮೂಡಿದ್ದು, ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಅತ್ಯಾಚಾರಿಗಳ ಜನನಾಂಗ ಕಟ್ ಮಾಡಿ- ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹ

    ಅತ್ಯಾಚಾರಿಗಳ ಜನನಾಂಗ ಕಟ್ ಮಾಡಿ- ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹ

    – ಹೆಣ್ಮಕ್ಕಳು ಉಡುಗೆ ಬಗ್ಗೆ ಕಾಳಜಿ ವಹಿಸ್ಬೇಕು

    ಧಾರವಾಡ: ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆ ಬಾಗಲಕೋಟೆಯ ಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಮಾಗಡಿ ತಾಲೂಕಿನ ಅತ್ಯಾಚಾರ ಪ್ರಕರಣ ನಡೆದ ವಿಚಾರವಾಗಿ ಧಾರವಾಡದಲ್ಲಿ ಮಾತನಾಡುವ ವೇಳೆ ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ ಅವರು, ಪೊಲೀಸರು ಬಂಧಿಸೋದು, ಜಾಮೀನು ಕೊಡವುದು ಆಗಬಾರದು. ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವ ಕಾನೂನು ಬರಬೇಕು ಎಂದರು.

    ಈ ರೀತಿ ಮಾಡಿದರೆ ಮಾತ್ರ ಭಾರತದಲ್ಲಿ ಅತ್ಯಾಚಾರ ಕಡಿಮೆ ಆಗುತ್ತವೆ ಎಂದ ಅವರು, ಹೆಣ್ಣು ಮಕ್ಕಳು ಉಡುಗೆ ತೊಡುಗೆ ಬಗ್ಗೆಯೂ ಕಾಳಜಿ ವಹಿಸಬೇಕು. ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ತಲೆ ಮೇಲೆ ಸೆರಗು ಹಾಕಿಕೊಂಡು ಯುದ್ಧ ಮಾಡಿದ್ದಾರೆ. ಆದರೆ ನಮ್ಮ ಯುವತಿಯರು ಹೊಸ ವರ್ಷ ಬಂದರೆ ಎಂಜಿ, ಬ್ರಿಗೆಡ್ ರೋಡ್‍ನಲ್ಲಿ ಇರುತ್ತಾರೆ. ತುಂಡು ಬಟ್ಟೆ ಹಾಕಿಕೊಂಡು ಕುಣಿಯುತ್ತಾರೆ. ಇದರಿಂದ ಪುರುಷರ ಮನುಷ್ಯ ಪ್ರಚೋದನೆಗೊಳಗಾಗಿ ಕೆಲ ಸಂದರ್ಭಗಳಲ್ಲಿ ಅತ್ಯಾಚಾರ ಆಗುತ್ತಿವೆ ಎಂದು ಹೇಳಿದರು.

    ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಇದರಿಂದ ಅತ್ಯಾಚಾರ ಆಗುತ್ತಿವೆ ಎಂದ ಅವರು, ಸ್ತ್ರೀಯರಿಗೆ ಮೊದಲು ತಾವು ಹೇಗೆ ಇರಬೇಕು ಅನ್ನೋದು ಗೊತ್ತಿರಬೇಕಲ್ವ. ಉಡುಗೆ, ತೊಡುಗೆಯಲ್ಲಿ ಎಚ್ಚೆತ್ತುಕೊಳ್ಳಬೇಕಲ್ಲ ಎಂದು ಪ್ರಶ್ನೆ ಮಾಡಿದರು.

  • ಈಗಾಗ್ಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಸ್ವಾಮೀಜಿಯಿಂದ ಒತ್ತಡ

    ಈಗಾಗ್ಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಸ್ವಾಮೀಜಿಯಿಂದ ಒತ್ತಡ

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ದಿಗಂತ್- ಐಂದ್ರಿತಾ ರಕ್ಷಣೆಗೆ ಪ್ರಭಾವಿ ಸ್ವಾಮೀಜಿಯೊಬ್ಬರು ನಿಂತಿದ್ದಾರೆ ಎಂಬ ಸುದ್ದಿ ಈಗ ಮುನ್ನೆಲೆಗೆ ಬಂದಿದೆ.

    ಬುಧವಾರ ವಿಚಾರಣೆ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಕರೆ ಮಾಡಿದ್ದ ಪ್ರಭಾವಿ ಮಠಾಧೀಶರೊಬ್ಬರು, ದಿಗಂತ್-ಐಂದ್ರಿತಾ ನಮ್ಮ ಮಠದ ಭಕ್ತರು. ಅವರನ್ನು ಬಂಧಿಸಬೇಡಿ, ಈಗಾಗಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಒತ್ತಡ ಹೇರಿದ ವಿಚಾರ ಈಗ ರಾಜಕೀಯ ಮತ್ತು ಪೊಲೀಸ್‌ ವಲಯದಿಂದ ಕೇಳಿ ಬಂದಿದೆ.

    ಕಾಕತಾಳೀಯ ಎಂಬಂತೆ ದಿಗಂತ್-ಐಂದ್ರಿತಾರನ್ನು ಕೇವಲ ಮೂರೂವರೆ ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು, ಇಬ್ಬರನ್ನು ಬಿಟ್ಟು ಕಳಿಸಿದ್ದಾರೆ. ಸೋಮವಾರ ಮನಸಾರೆ ದಂಪತಿಯ ಮೂರು ಮೊಬೈಲ್‍ಗಳ ರಿಟ್ರೀವ್‌ ವರದಿ ಬರುವ ಸಾಧ್ಯತೆ ಇದ್ದು, ನಂತರ ಸಿಸಿಬಿ ಇಬ್ಬರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಂಭವ ಇದೆ. ಇದನ್ನೂ ಓದಿ: ನಾವು ಏನೂ ಮಾತಾಡುವ ಹಾಗಿಲ್ಲ: ಐಂದ್ರಿತಾ ರೇ

    ಡ್ರಗ್ಸ್ ಪ್ರಕರಣವನ್ನು ಮುಚ್ಚಿ ಹಾಕಿಲು ಪ್ರಭಾವಿಗಳು ಪ್ರಯತ್ನ ಮಾಡುತ್ತಿರುವ ಸುದ್ದಿ ಹೊಸದೇನು ಅಲ್ಲ. 14 ದಿನಗಳ ಹಿಂದೆ ನಟಿ ರಾಗಿಣಿ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಫೋನ್ ಮಾಡಿ, ಎಷ್ಟು ವಿಚಾರಣೆ ಮಾಡುತ್ತೀರಿ. ಬಿಟ್ಟು ಕಳುಹಿಸಿ ಅಂತಾ ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು.

  • ಕೊರೊನಾಗೆ ಮತ್ತೊಬ್ಬ ಸ್ವಾಮೀಜಿ ಬಲಿ

    ಕೊರೊನಾಗೆ ಮತ್ತೊಬ್ಬ ಸ್ವಾಮೀಜಿ ಬಲಿ

    – ರೌಡಕುಂದ ಮಠದ ಶ್ರೀಗಳು ಸಾವು

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದ ಸಂಸ್ಥಾನಮಠದ 13ನೇ ಪೀಠಾಧಿಪತಿ ಮರಿಸಿದ್ದಲಿಂಗಸ್ವಾಮೀಜಿ ಸಾವನ್ನಪ್ಪಿದ್ದಾರೆ.

    44 ವರ್ಷದ ಸ್ವಾಮೀಜಿ ಡೆಂಗ್ಯೂ ಜ್ವರ ಹಾಗೂ ಉಸಿರಾಟ ತೊಂದರೆ ಹಿನ್ನೆಲೆ ಮೂರು ದಿನಗಳ ಹಿಂದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಸಾವಿನ ಬಳಿಕ ಕೋವಿಡ್-19 ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಸಹ ದೃಢಪಟ್ಟಿದೆ.

    ಕೋವಿಡ್-19 ನಿಯಮಾನುಸಾರ ರೌಡಕುಂದ ಗ್ರಾಮದಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯ ಸಂಸ್ಕಾರದಲ್ಲಿ ಕೆಲವೇ ಭಕ್ತರು ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ವಾಮೀಜಿ ಸಾವನ್ನಪ್ಪಿದ ಹಿನ್ನೆಲೆ ಗ್ರಾಮದಲ್ಲಿ ಜನ ಸೇರದಂತೆ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಅಪಾರ ಭಕ್ತ ಸಮೂಹ ಹೊಂದಿರುವ ಸ್ವಾಮೀಜಿ ಅಗಲಿಕೆಗೆ ಭಕ್ತರು, ವಿವಿಧ ಮಠಗಳ ಶ್ರೀಗಳು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

  • ಶಿವಮೊಗ್ಗದ ರಾಂಪುರದ ಮಠಾಧೀಶ ಹಾಲಸ್ವಾಮಿ ಕೊರೊನಾದಿಂದ ಸಾವು

    ಶಿವಮೊಗ್ಗದ ರಾಂಪುರದ ಮಠಾಧೀಶ ಹಾಲಸ್ವಾಮಿ ಕೊರೊನಾದಿಂದ ಸಾವು

    ಶಿವಮೊಗ್ಗ: ಕೊರೊನಾ ಸೋಂಕಿನಿಂದಾಗಿ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರ ಮಠದ ಮಠಾಧೀಶ ಹಾಲಸ್ವಾಮಿ(54)ಯವರು ಸಾವನ್ನಪ್ಪಿದ್ದಾರೆ.

    ಶಿವಮೊಗ್ಗದ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆ. ಸ್ವಾಮೀಜಿ ಕಳೆದ 10 ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಭಕ್ತರು ಆಸ್ಪತ್ರೆಗೆ ದಾಖಲಾಗುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಆದರೂ ಸ್ವಾಮೀಜಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ ಎನ್ನಲಾಗಿದೆ.

    ಕಳೆದ 4 ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಸ್ವಾಮೀಜಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಅಂದಿನಿಂದ ಮೆಗ್ಗಾನ್ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಸಾವಿಗೆ ಭಕ್ತರು ಕಂಬನಿ ಮಿಡಿದಿದ್ದಾರೆ.

  • ಬೆತ್ತಲೆ ದರ್ಶನ- ವೈರಲ್ ವಿಡಿಯೋ ಕುರಿತು ಗುರುಸ್ವಾಮಿ ಸ್ಪಷ್ಟನೆ

    ಬೆತ್ತಲೆ ದರ್ಶನ- ವೈರಲ್ ವಿಡಿಯೋ ಕುರಿತು ಗುರುಸ್ವಾಮಿ ಸ್ಪಷ್ಟನೆ

    ಹುಬ್ಬಳ್ಳಿ: ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಮೋಹನ್ ಗುರು ಸ್ವಾಮೀಜಿ ಅವತಾರ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿ, ಆತನನ್ನು ಮಠದಿಂದ ಹೊರ ಕಳುಹಿಸಬೇಕೆಂಬ ಕೂಗು ಕೇಳಿ ಬಂದಿತ್ತು.

    ಸದ್ಯ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶ ಮೋಹನ ಗುರುಸ್ವಾಮಿ, ಕುಸುಗಲ್ ರಸ್ತೆಯಲ್ಲಿರುವ ಸಿದ್ದಾರೂಡ ಮಠದಲ್ಲಿ ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಶಬರಿನಗರದ ವಿಜಯ ಪೂಜಾರಿ ಹಾಗೂ ಶಂಕರ ಇದ್ದಲಿ ಎಂಬುವವರೇ ನನ್ನ ಏಳಿಗೆಯನ್ನು ಸಹಿಸದೆ ನನ್ನ ವಸ್ತ್ರಗಳನ್ನು ತೆಗೆದು ನಗ್ನ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.

    ಸುಮಾರು ದಿನಗಳಿಂದ ನನ್ನ ಏಳಿಗೆಯನ್ನು ಸಹಿಸದೇ ಈ ರೀತಿ ನನ್ನ ಮಾನಹಾನಿ ಮಾಡಿದ್ದಾರೆ. ಈ ಕುರಿತು ನಾನು ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ. ಉಳಿದಂತೆ ಗುರು ಸ್ವಾಮೀಜಿ ನೇತೃತ್ವದಲ್ಲಿಯೇ ಪ್ರತಿ ವರ್ಷ ನೂರಾರು ಜನರಿಗೆ ಮಾಲಾ ದೀಕ್ಷೆ ನೀಡಿ, ಅಂಬಾರಿ ಮೆರವಣಿಗೆ ಮಾಡಲಾಗುತ್ತಿತ್ತು.

  • ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರ ಮದ್ಯದಂಗಡಿ ತೆರೆದದ್ದು ತಪ್ಪು: ಚೌಕಿಮಠ ಸ್ವಾಮೀಜಿ ಕಿಡಿ

    ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರ ಮದ್ಯದಂಗಡಿ ತೆರೆದದ್ದು ತಪ್ಪು: ಚೌಕಿಮಠ ಸ್ವಾಮೀಜಿ ಕಿಡಿ

    ರಾಯಚೂರು: ತನ್ನ ಬೊಕ್ಕಸ ತುಂಬಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರ ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂದು ರಾಯಚೂರಿನ ಚಿಕ್ಕಸೂಗುರಿನ ಚೌಕಿಮಠದ ಸಿದ್ದಲಿಂಗ ಮಹಾಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಮದ್ಯಪಾನ ನಿಷೇಧಕ್ಕೆ ಕೆಲ ಸಂಘ ಸಂಸ್ಥೆಗಳು ನಿರಂತರ ಹೋರಾಟ ನಡೆಸಿದ್ದರೂ ಸಾಧ್ಯವಾಗದ್ದನ್ನ ಕೊರೊನಾ ವೈರಸ್ ಮಾಡಿತ್ತು. ಲಾಕ್‍ಡೌನ್ ವೇಳೆ ಶೇ. 90ರಷ್ಟು ಜನ ಸಂಪೂರ್ಣವಾಗಿ ಮದ್ಯಪಾನ ತ್ಯಜಿಸಿದ್ದರು. ಇನ್ನಷ್ಟು ದಿನ ಮುಂದುವರೆದಿದ್ದರೆ ಉಳಿದ ಜನರು ಮದ್ಯಪಾನ ಬಿಡುತ್ತಿದ್ದರು. ಆದ್ರೆ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಆಸೆಗೆ ಮದ್ಯದಂಗಡಿಗಳನ್ನ ತೆರೆದಿದೆ ಎಂದು ಕಿಡಿಕಾರಿದರು.

    ಕೂಲಿಕಾರರನ್ನ ಅವರ ಊರುಗಳಿಗೆ ಕರೆದುಕೊಂಡು ಬರಲಾಗುತ್ತಿದೆ. ಆದರೆ ಯಾರೂ ನಿಯಮಗಳನ್ನ ಪಾಲಿಸುತ್ತಿಲ್ಲ. ಸ್ವತಃ ಮಂತ್ರಿಗಳೇ ಕ್ವಾರಂಟೈನ್‍ಗೆ ಹೋಗುತ್ತಿರುವಾಗ ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

    ಮಠ ಹಾಗೂ ಮಠಾಧೀಶರನ್ನ ಸರ್ಕಾರ ನಿರ್ಲಕ್ಷಿಸದೇ ನಮ್ಮ ಸಲಹೆಗಳನ್ನ ಪರಿಗಣಿಸಬೇಕು. ಉತ್ತರ ಕರ್ನಾಟಕದ ಮಠಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶ್ರೀಮಂತ ಮಠಗಳಿಗೆ ಸರ್ಕಾರಗಳು 10 ಕೋಟಿ, 20 ಕೋಟಿ ರೂ. ಅನುದಾನ ನೀಡಿದೆ. ಅಂತೆಯೆ ನಮ್ಮ ಮಠಗಳಿಗೂ ಅನುದಾನ ನೀಡಬೇಕು ಎಂದು ಸ್ವಾಮಿಜಿ ಮನವಿ ಮಾಡಿದರು.

  • ಶಾಸಕ ರಾಜೇಗೌಡ ಮಗಳ ಮದುವೆಯಲ್ಲಿ ಡಿಕೆಶಿ ಭಾಗಿ

    ಶಾಸಕ ರಾಜೇಗೌಡ ಮಗಳ ಮದುವೆಯಲ್ಲಿ ಡಿಕೆಶಿ ಭಾಗಿ

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದರು.

    ಈ ವೇಳೆ ರಂಭಾಪುರಿ ಶ್ರೀಗಳು ಡಿ.ಕೆ.ಶಿವಕುಮಾರ್ ಅವರಿಗೆ ರಂಭಾಪುರಿ ಮಠದ 119ನೇ ಜಗದ್ಗುರುಗಳಾದ ವೀರ ಗಂಗಾಧರ ಶ್ರೀಗಳ ಫೋಟೋವನ್ನು ಉಡುಗೊರೆಯಾಗಿ ನೀಡಿದರು. ಆಗ ಡಿ.ಕೆ.ಶಿವಕುಮಾರ್ ಜೊತೆಗಿದ್ದ ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್ ಜೊತೆ ಮಾತನಾಡಿ, ರೀ, ಅಧ್ಯಕ್ಷರೇ, ಇವರೇ ನಮ್ಮ ಹೈಕಮಾಂಡ್, ಇವರ ಫೋಟೋವನ್ನು ನಮ್ಮ ಕೆಪಿಸಿಸಿ ಕಚೇರಿಯ ನನ್ನ ಕೊಠಡಿಯಲ್ಲಿ ಹಾಕಬೇಕು, ಅದು ನಿಮ್ಮ ಜವಾಬ್ದಾರಿ ಎಂದು ಫೋಟೋವನ್ನು ಮುಟ್ಟಿ ತೋರಿಸಿದರು.

    ಶ್ರೀಗಳ ಆಶೀರ್ವಾದದ ಬಳಿಕ ಬಾಳೆಹೊನ್ನೂರು ಸಮೀಪದ ಬಾಸಾಪುರ ತೋಟದಲ್ಲಿ ನಡೆಯುತ್ತಿದ್ದ ತಮ್ಮ ಪಕ್ಷದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮಗಳ ಮದುವೆಯಲ್ಲಿ ಭಾಗಿಯಾಗಿ, ನೂತನ ವಧುವರರಿಗೆ ಶುಭ ಕೋರಿದರು.

    ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೊರೊನಾದಿಂದ ರಾಜ್ಯಾದ್ಯಂತ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ, ಸರ್ಕಾರ ಎಲ್ಲ ಬ್ಯಾಂಕುಗಳ ಇ.ಎಮ್.ಐಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು. ಜನಸಾಮಾನ್ಯರಿಗೆ ಆರ್ಥಿಕವಾಗಿ ಉಸಿರಾಡಲು ಆಗುತ್ತಿಲ್ಲ. ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟದಲ್ಲಿದ್ದು, ಬ್ಯಾಂಕುಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಪವಿತ್ರ ಕೆಲಸವನ್ನು ರಾಜ್ಯ ಸರ್ಕಾರ ತುರ್ತಾಗಿ ಮಾಡಬೇಕು ಎಂದರು.

  • ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ

    ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ

    – ಹೃದಯಾಘಾತವಾ, ಆತ್ಮಹತ್ಯೆಯಾ?

    ಮೈಸೂರು: ಸ್ವಾಮೀಜಿಯ ಸಾವಿನ ಸುತ್ತ ಅನುಮಾನಗಳ ಹುತ್ತ ಎದ್ದಿದ್ದು, ಮಠದ ಶಿಷ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದರೆ, ಗ್ರಾಮಸ್ಥರು ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ.

    ಮೈಸೂರು ಜಿಲ್ಲೆಯ ಟಿ.ನರಸೀಪುರದ ಬೆನಕಹಳ್ಳಿ ಗ್ರಾಮದ ಪಟ್ಟದ ಮಠದ ಮಹದೇವ ಸ್ವಾಮೀಜಿ(55) ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಬೆಳಗ್ಗೆಯಾದರೂ ಸ್ವಾಮೀಜಿ ಕೊಣೆಯಿಂದ ಹೊರಗೆ ಬಾರದಿದ್ದಾಗ ಬಾಗಿಲು ಮುರಿದು ಒಳಗೆ ಹೋದೆವು. ಆಗ ಸ್ವಾಮೀಜಿ ನಿಧನ ವಿಚಾರ ಬೆಳಕಿಗೆ ಬಂದಿದೆ. ಮಠದಲ್ಲಿ ಮಲಗಿದ್ದ ವೇಳೆಯೇ ಸ್ವಾಮೀಜಿಗೆ ಹೃದಯಾಘಾತವಾಗಿದೆ. ಹೀಗಾಗಿ ಸ್ವಾಮೀಜಿ ಸಾವನ್ನಪ್ಪಿದ್ದಾರೆ ಎಂದು ಮಠದ ಶಿಷ್ಯ ವರ್ಗ ಹೇಳುತ್ತಿದೆ.

    ಆದರೆ ಸ್ವಾಮೀಜಿ ಸಾವಿನ ಬಗ್ಗೆ ಗ್ರಾಮದಲ್ಲಿ ಹಲವು ರೀತಿಯ ವದಂತಿ ಹಬ್ಬಿವೆ. ಇದು ಹೃದಯಾಘಾತವಲ್ಲ, ಆತ್ಮಹತ್ಯೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಗ್ರಾಮಸ್ಥರ ಈ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ನಿರ್ಧಾರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸ್ವಾಮೀಜಿ ಸಾವಿಗೆ ಕಾರಣ ಸ್ಪಷ್ಟವಾಗಲಿದೆ.

  • ಸ್ವಾಮೀಜಿ ಎಸ್ಕೇಪ್ ಪ್ರಕರಣಕ್ಕೆ ಟ್ವಿಸ್ಟ್ – ಉಲ್ಟಾ ಹೊಡೆದ ಯುವತಿ

    ಸ್ವಾಮೀಜಿ ಎಸ್ಕೇಪ್ ಪ್ರಕರಣಕ್ಕೆ ಟ್ವಿಸ್ಟ್ – ಉಲ್ಟಾ ಹೊಡೆದ ಯುವತಿ

    – ಮಧ್ಯರಾತ್ರಿ ಜೈಲಿಗೆ ಮಾಜಿ ಕಳ್ಳಸ್ವಾಮಿ

    ಕೋಲಾರ: ಯುವತಿಯೊಂದಿಗೆ ಎಸ್ಕೇಪ್ ಆಗಿ ಸನ್ಯಾಸಿಯಾಗಿದ್ದ ಸ್ವಾಮೀಜಿ ಸಂಸಾರಿಯಾಗಿ ಪತ್ತೆಯಾಗಿದ್ದು, ಇದೀಗ ಸ್ವಾಮೀಜಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಮಾಜಿ ಸ್ವಾಮೀಜಿಗೆ ಕೈಕೊಟ್ಟು ಇದೀಗ ಉಲ್ಟಾ ಹೊಡೆದಿರುವ ಯುವತಿ ಪೋಷಕರೊಂದಿಗೆ ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಮಠದಲ್ಲಿರಬೇಕಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕೋಲಾರದ ಉಪಕಾರಾಗೃಹಕ್ಕೆ ತೆರಳಿದ್ದಾನೆ. ಇದನ್ನೂ ಓದಿ: ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ

    ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದನು. ಅಲ್ಲದೇ ನನ್ನನ್ನು ವಶೀಕರಣ ಮಾಡಿಕೊಂಡು ತನ್ನ ಜೊತೆ ಕರೆದುಕೊಂಡು ಹೋಗಿದ್ದನು ಎಂದು ಯುವತಿ ಪೊಲೀಸರ ಬಳಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಹೀಗಾಗಿ ಮಧ್ಯರಾತ್ರಿ ಗೌಪ್ಯ ಸ್ಥಳದಿಂದ ಸ್ವಾಮಿಯನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಪಾದಪೂಜೆ ವೇಳೆ ಲವ್ – 20ರ ಯುವತಿ ಜೊತೆ 45ರ ಸ್ವಾಮೀಜಿ ಪರಾರಿ?

    ಸ್ವಾಮೀಜಿಯ ವಿರುದ್ಧ ಪೊಲೀಸರು ಯುವತಿಗೆ ನಂಬಿಸಿ ವಂಚನೆ ಪ್ರಕರಣ ಹಾಗೂ 420 ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ಸ್ವಾಮಿಗೆ ಹಣಕೊಟ್ಟು ವಂಚನೆಗೊಳಗಾದ 9 ಜನರಿಂದ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ ಫೆ.27 ರಂದು ಕೋಲಾರ ತಾಲೂಕಿನ ಹೊಳಲಿ ಗ್ರಾಮದಿಂದ ಯುವತಿಯೊಂದಿಗೆ ಸ್ವಾಮೀಜಿ ನಾಪತ್ತೆಯಾಗಿದ್ದ. ದತ್ತಾತ್ರೇಯ ಅವಧೂತ ಸ್ವಾಮಿ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿಯಾಗಿ ಘೋಷಣೆ ಮಾಡಿಕೊಂಡಿದ್ದ. ನಂತರ ಅದೇ ಗ್ರಾಮದ 20 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ. ಈ ಹಿನ್ನೆಲೆ ಯುವತಿಯ ಪೋಷಕರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಅಲ್ಲದೆ ಆತನ ಹುಡುಕಾಟ ಗ್ರಾಮಾಂತರ ಠಾಣಾ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.  ನಂತರ ಈತನ ಹೆಸರು ರಾಘವೇಂದ್ರ ಎಂಬ ಮಾಹಿತಿಯನ್ನ ಪೊಲೀಸರು ಕಲೆಹಾಕಿದ್ದರು. ನಂತರ ಪೊಲೀಸರಿಗೆ ಮಂಗಳೂರು ಬಳಿ ಯುವತಿಯೊಂದಿಗೆ ಸ್ವಾಮೀಜಿ ಸಿಕ್ಕಿಬಿದ್ದಿದ್ದನು. ಸ್ವಾಮೀಜಿ ಪೊಲೀಸರ ಅತಿಥಿಯಾಗುತ್ತಿದ್ದಂತೆ ಸ್ವಾಮೀಜಿಯ ಟಿಕ್ ಟಾಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.