Tag: swamiji

  • ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಮಠದ ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರೀಗಳ ಮೊಬೈಲ್ ಕಾಲ್ ಹಾಗೂ ಡೆತ್‌ನೋಟ್ (Death Note) ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಹನಿಟ್ರ‍್ಯಾಪ್ (Honeytrap) ಸುಳಿವು ನೀಡಿದ್ದು, ಇನ್ನು 2-3 ದಿನಗಳಲ್ಲಿ ಶ್ರೀಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

    ರಾಜ್ಯದಲ್ಲಿ ಕೆಲ ಸ್ವಾಮೀಜಿಗಳು ಹನಿಟ್ರ‍್ಯಾಪ್ ಜಾಲಕ್ಕೆ ಒಳಗಾಗಿದ್ದು, ಮುರುಘಾ ಶ್ರೀಗಳ ಪ್ರಕರಣದ ಬಳಿಕ ಈ ಜಾಲ ಇನ್ನಷ್ಟು ವಿಸ್ತಾರಗೊಂಡಿದೆ ಎನ್ನುವುದು ಖಾತ್ರಿಯಾಗಿದೆ. 6-7 ತಿಂಗಳ ಹಿಂದೆ ಮಾಗಡಿಯ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಮೃತದೇಹ ಸಹ ಕಿಟಕಿಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಬಂಡೇ ಮಠದ ಸ್ವಾಮೀಜಿ ಸಹ ಅದೇ ಮಾದರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿಯ ಆತ್ಮಹತ್ಯೆ ಸಂಬಂಧ ಇಡೀ ಪ್ರಕರಣಕ್ಕೆ ರೋಚಕ ತಿರುವು ನೀಡಿರುವುದು ಡೇತ್‌ನೋಟ್. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಪ್ರಕರಣದ ದಿಕ್ಕನ್ನು ಬದಲಿಸಿವೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೇತ್‌ನೋಟ್ ಕೂಡಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾನು ಮಠದ ಉತ್ತರಾಧಿಕಾರಿಯಾದ ಬಳಿಕ ಯಾವುದೇ ಹಗರಣವನ್ನು ಮಾಡಿಲ್ಲ. ಸಿದ್ದಗಂಗಾ ಮಠಕ್ಕೆ ನಂಬುಗೆಯಿಂದಲೇ ಕೆಲಸ ಮಾಡಿದ್ದೇನೆ. ಆದರೆ ಕೆಲವರು ಇತ್ತೀಚೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಮಹಿಳೆಯೊಬ್ಬಳು 6-7 ತಿಂಗಳಿನಿಂದ ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ವೈರಲ್ ಆಗಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಡೆತ್‌ನೋಟ್ ನಿಜವಾದುದಲ್ಲ, ಕೇವಲ 1-2 ಅಂಶಗಳು ಸಾಮ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಡೆತ್‌ನೋಟ್‌ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೆಖ ಮಾಡಲಾಗಿದೆ. ಆದರೆ ಅವರು ಸಾವಿಗೆ ಕಾರಣ ಎಂದು ಬರೆದಿಲ್ಲ. ಒಬ್ಬ ಅನಾಮಧೇಯ ಹೆಸರನ್ನು ಸ್ಪಷ್ಟವಾಗಿ ಉಲ್ಲೆಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಪ್ರಕರಣ ಸಂಬಂಧ 306 ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.

    ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ನೋಟ್‌ನ ಕೆಲ ಅಂಶಗಳನ್ನು ತನಿಖೆಯ ದಿಕ್ಕನ್ನೇ ಬದಲಿಸಿವೆ. ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗಿದ್ರೆ, ಮತ್ತೊಂದೆಡೆ ಮಠದ ಅಧಿಕಾರ ಹಿಡಿಯಲು ಕೆಲವರು ಸಂಚು ರೂಪಿಸಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ. ಇದನ್ನೂ ಓದಿ: ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ – ಸ್ವಾಮೀಜಿ ಅರೆಸ್ಟ್

    ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ – ಸ್ವಾಮೀಜಿ ಅರೆಸ್ಟ್

    ಬೆಳಗಾವಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಜನರಿಗೆ ಮೋಸ ಮಾಡಿ ಹಲ್ಲೆ ಮಾಡಿರುವ ಆರೋಪದಡಿ ಮೂಡಲಗಿಯಲ್ಲಿ ಖತರ್ನಾಕ್ ವಂಚಕ ಸ್ವಾಮೀಜಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಸ್ವಾಮೀಜಿ ಅಲ್ಲಮಪ್ರಭು ಹಿರೇಮಠ ಬಂಧಿತ ಆರೋಪಿ. ಬಂಧಿತ ಆರೋಪಿ ಅಲ್ಲಮಪ್ರಭು ಸ್ವಾಮೀಜಿಯ ರೀತಿ ಪೋಸ್ ಕೊಟ್ಟು ಜನರನ್ನು ವಂಚಿಸುತ್ತಿದ್ದನು. ಕಳೆದ 6 ತಿಂಗಳ ಹಿಂದೆ ಎಸ್‍ಸಿ ಕೋಟಾದಡಿ ‘ಡಿ’ ದರ್ಜೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮೂಡಲಗಿ ಪಟ್ಟಣದ ನಿವಾಸಿ ಸಂತೋಷ ಹವಳೆವ್ವಗೋಳ ಎಂಬಾತನಿಂದ 4 ಲಕ್ಷ ರೂಪಾಯಿ ಪಡೆದಿದ್ದನು. ಯುವಕ ಕೆಲಸ ಸಿಗದೇ ಇದ್ದಾಗ ಹಣ ವಾಪಸ್ ಕೇಳಿದ್ದಾನೆ. ಆಗ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಆಗಸ್ಟ್ 15ರಂದು ಹಣ ಕೇಳಲು ಹೋದಾಗ ಅಲ್ಲಮಪ್ರಭು ಹಿರೇಮಠ ಸಂಗಡಿಗರ ಜೊತೆಗೂಡಿ ಚಾಕುವಿನಿಂದ ಸಂತೋಷ ಹವಳೆವ್ವಗೋಳ ಬೆನ್ನಿಗೆ, ಕಾಲಿಗೆ ಚುಚ್ಚಿ ಗಾಯ ಮಾಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ಆರೋಪಿ ಅಲ್ಲಮಪ್ರಭು ಹಿರೇಮಠನನ್ನು ಬಂಧಿಸಿದ್ದಾರೆ. ಇದನ್ನೂ ಓದಿ : ಆಮದು ಸುಂಕ ಹೆಚ್ಚಿಸಿ, ಅಡಿಕೆ ಬೆಲೆ ಪರಿಷ್ಕರಿಸಿ – ಕೇಂದ್ರ ಸರ್ಕಾರಕ್ಕೆ ಗೃಹ ಸಚಿವರ ನೇತೃತ್ವದ ನಿಯೋಗ ಮನವಿ

    ಇದಲ್ಲದೇ ಆರೋಪಿ ಅಲ್ಲಮಪ್ರಭು ಹಿರೇಮಠ ವಿರುದ್ಧ ಮತ್ತೊಂದು ವಂಚನೆ ದೂರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಂಗಳೂರು (ಬಿಬಿಎಂಪಿ) ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿ ಗೆಲ್ಲಿಸಿಕೊಡುವುದಾಗಿ 5 ಲಕ್ಷ ಹಣ ಪಡೆಯಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಿವಾಸಿ ಪ್ರಶಾಂತ್ ಕುಮಾರ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಅಲ್ಲಮಪ್ರಭು ವಿರುದ್ಧ ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಇನ್ಸ್‌ಪೆಕ್ಟರ್, ಕಾನ್‍ಸ್ಟೇಬಲ್ ನಾಗಿಣಿ ಡ್ಯಾನ್ಸ್ – ಇಬ್ಬರು ಎತ್ತಂಗಡಿ

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಆಕಳು ಸಾಕಿದರೆ ಒಬ್ಬ ವೈದ್ಯನನ್ನ ಸಾಕಿದಂತೆ: ಕಣೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ

    ಮನೆಯಲ್ಲಿ ಆಕಳು ಸಾಕಿದರೆ ಒಬ್ಬ ವೈದ್ಯನನ್ನ ಸಾಕಿದಂತೆ: ಕಣೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ

    ಚಿಕ್ಕೋಡಿ(ಬೆಳಗಾವಿ): ಈಗ ಎಲ್ಲೆಲ್ಲೂ ಹೈ ಬ್ರೇಡ್ ಗೋ ತಳಿಗಳದ್ದೇ ಕಾರುಬಾರು ಜೋರಾಗಿದೆ. ಇದರ ನಡುವೆ ಸಿಲುಕಿ ನಲುಗುತ್ತಿರುವ ದೇಶಿ ತಳಿ ಸಂತತಿ ಅವಸಾನದತ್ತ ಸಾಗಿದೆ. ರೈತರ ಜೀವನಾಡಿ ದೇಶೀ ಗೋ ತಳಿ ಹೇಳ ಹೆಸರಿಲ್ಲದೆ ನೆಪ್ಪತ್ಯಕ್ಕೆ ಸರಿಯುತ್ತಿವೆ. ಹೀಗಾಗಿ ದೇಶಿ ಗೋ ತಳಿ ಸಂವರ್ಧನೆ ಹಾಗೂ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಒಂದು ಒಳ್ಳೆಯ ಕಾರ್ಯವನ್ನ ಆಯೋಜಿಸಲಾಗಿತ್ತು.

    ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದಲ್ಲಿ ಪ್ಯಾನ್ ಪೆನೆಲ್ ಶುಗರ್ಸ್ ಸಂಸ್ಥೆಯ ವತಿಯಿಂದ ಸಾವಯವ ಕೃಷಿ ಉತ್ಸವ, ದೇಶಿ ತಳಿ ಹಸು ಸಂವರ್ಧನೆ ಕಾರ್ಯಕ್ರಮ ಹಾಗೂ ಕೃಷಿ ಇಲಾಖೆಯಿಂದ ಕೃಷಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ದೇಶಿ ಗೋ ಸಾಕಾಣಿಕೆ ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮನೆಯಲ್ಲಿ ದೇಶಿ ಗೋವುಗಳ ಸಾಕಾಣಿಕೆ ಮಾಡಬೇಕು. ಅದರಿಂದ ಒಂದು ಕುಟುಂಬ ಜೀವನ ನಡೆಸಬಹುದು. ಅಲ್ಲದೇ ಗೋಮಯ, ಗೋಮೂತ್ರ ಹಾಲು ಮೊಸರು ಮಜ್ಜಿಗೆ ಮನುಷ್ಯನ ಆರೋಗ್ಯ ಪ್ರಕೃತಿ ಜೊತೆಗೆ ಕೃಷಿಯಲ್ಲೂ ಕೂಡ ಹಸುವಿನ ಸೆಗಣಿ, ಮೂತ್ರದಿಂದ ಗೋ ಕೃಪಾಮೃತ ತಯಾರಿಸಬಹುದು. ಪ್ರತಿಯೊಬ್ಬ ರೈತರು ತಮ್ಮ ಮನೆಯಲ್ಲಿ ಒಂದು ದೇಶಿ ಹಸು ಸಾಕಬೇಕು. ಇದರಿಂದ ಮನೆಯ ಜನರ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯ ಕಾಪಾಡುವುದಲ್ಲದೇ ಅಂತ ಕೋಲ್ಹಾಪುರ ಕಣೇರಿ ಮಠದ ಸ್ವಾಮೀಜಿ ಹೇಳಿದ್ರು.

    ದೇಶಿ ತಳಿ ಆಕಳು ಸಾಕುವುದರಿಂದ ತುಂಬ ಪ್ರಯೋಜನ ಇದೆ. ಗೋವಿನ ಸಂರಕ್ಷಣೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಲೂ ಸಹಕಾರಿಯಾಗುತ್ತದೆ. ಚಿಕ್ಕೋಡಿ ಉಪವಿಭಾಗದಲ್ಲಿ ಜನರು ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ಮತ್ತು ಕೆಮಿಕಲ್ ಗೊಬ್ಬರ ಉಪಯೋಗ ಮಾಡುವುದರಿಂದ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಆದರೆ ಜನರು ಬೇಗನೆ ಬೆಳೆ ಲಾಭಕ್ಕಾಗಿ ಕೆಮಿಕಲ್ ಬಳಸಿ ಬೆಳೆ ಬೆಳೆಯುತ್ತಾರೆ. ಆದರೆ ಅದೇ ಗೋವಿನ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗುತ್ತದೆ. ಆದರೆ ಅದಕ್ಕೆ ಸ್ವಲ್ಪ ಸಮಯ ತಗೆದುಕೊಳ್ಳುತ್ತದೆ. ಅದರಿಂದ ಭವಿಷ್ಯದಲ್ಲಿ ತುಂಬಾ ಪ್ರಯೋಜನಗಳಿವೆ. ಹಾಗಾಗಿ ಈಗಿನ ರೈತಾಪಿ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇವತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಂತ ಕಾರ್ಯಕ್ರಮ ಆಯೋಜಕ ವಿವೇಕರಾವ್ ಪಾಟೀಲ್ ಹೇಳಿದರು.

    ಒಟ್ಟಿನಲ್ಲಿ ದೇಶಿ ಗೋವುಗಳು ರೈತರಿಗೆ ವರದಾನವಿದ್ದಂತೆ. ಅವು ರೈತರಿಗೆ ಗೊಬ್ಬರ, ಉರುವಲು ಕೃಷಿ, ಔಷಧ, ಉಳುಮೆ.. ಹೀಗೆ ನಾನಾ ರೀತಿಯಲ್ಲಿ ಉಪಯುಕ್ತವಾಗಿವೆ. ಇಷ್ಟೆಲ್ಲಾ ಲಾಭವಿರುವ ಭಾರತೀಯ ಗೋವುಗಳ ಸಾಕಾಣಿಕೆ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆದರೆ ಇಂತಹ ಒಳ್ಳೆಯ ಕಾರ್ಯಕ್ರಮಗಳ ಮೂಲಕ ಈಗಿನ ರೈತಾಪಿ ವರ್ಗದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಅಲ್ಲದೇ ಸರ್ಕಾರ ಕೂಡ ದೇಶಿ ಗೋವುಗಳ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಮುಂದೆ ಬರಬೇಕಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ರಾಜಸ್ಥಾನದಲ್ಲಿ ಸ್ವಾಮೀಜಿ ಆತ್ಮಹತ್ಯೆ – ಬಿಜೆಪಿ ಶಾಸಕ ವಿರುದ್ಧ ಆರೋಪ

    ರಾಜಸ್ಥಾನದಲ್ಲಿ ಸ್ವಾಮೀಜಿ ಆತ್ಮಹತ್ಯೆ – ಬಿಜೆಪಿ ಶಾಸಕ ವಿರುದ್ಧ ಆರೋಪ

    ಜೈಪುರ: ರಾಜಸ್ಥಾನದ ಜಲೋರ್‍ನಲ್ಲಿ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ರೆಸಾರ್ಟ್ ನಿರ್ಮಿಸುವುದಕ್ಕಾಗಿ ಆಶ್ರಮದ ಜಾಗವನ್ನು ನೀಡುವಂತೆ ಬಿಜೆಪಿ ಶಾಸಕರೊಬ್ಬರು ಒತ್ತಡ ಹೇರಿದ್ದರಿಂದ ಮನನೊಂದು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೃತ ಸ್ವಾಮೀಜಿಯನ್ನು ರವಿನಾಥ್(60) ಎಂದು ಗುರುತಿಸಲಾಗಿದೆ. ಭಿನ್ಮಾಲ್ ಶಾಸಕ ಪೂರ ರಾಮ್ ಚೌಧರಿ ಅವರು ರೆಸಾರ್ಟ್ ನಿರ್ಮಿಸುವುದಕ್ಕಾಗಿ ಆಶ್ರಮದ ಜಾಗವನ್ನು ನೀಡುವಂತೆ ಸ್ವಾಮೀಜಿಯವರಿಗೆ ಒತ್ತಾಯಿಸಿದ್ದರಿಂದ ರವಿನಾಥ್ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ‘ಇಂಡಿಯಾ ಕಿ ಉಡಾನ್’ ಮೂಲಕ ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್

    crime

    ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಅದರಲ್ಲಿರುವ ಯಾವುದೇ ಅಂಶಗಳನ್ನು ಬಹಿರಂಗ ಪಡಿಸಿರಲಿಲ್ಲ. ರಾಜಪುರ ಗ್ರಾಮದ ಸುಂಧಾ ಮಾತಾ ದೇವಸ್ಥಾನದ ತಪ್ಪಲಿನಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯವರ ಮೃತ ದೇಹ ಪತ್ತೆಯಾಗಿದ್ದು, ಮೃತದೇಹವನ್ನು ಕೆಳಗಿಳಿಸಲು ಆಶ್ರಮದ ಭಕ್ತರು ಅವಕಾಶ ನೀಡಿರಲಿಲ್ಲ. ಸೂಸೈಡ್ ನೋಟ್‍ನಲ್ಲಿರುವ ಅಂಶವನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದರು.

    ಈ ಮಧ್ಯೆ ಬಿಜೆಪಿ ಶಾಸಕ ಪೂರಾರಾಮ್ ಚೌದರಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಪಾರದರ್ಶಕ ರೀತಿಯಲ್ಲಿ ತನಿಖೆಗೆ ಒತ್ತಾಯಿಸಿದ್ದಾರೆ. ಸ್ವಾಮೀಜಿಗಳ ದೂರಿನ ಆಧಾರದ ಮೇಲೆ ಶಾಸಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಲೋರ್ ಎಸ್‍ಪಿ ಹರ್ಷವರ್ಧನ್ ಅಗರ್ ವಾಲ್ ತಿಳಿಸಿದ್ದಾರೆ.

    ರವಿನಾಥ್ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಶುಕ್ರವಾರ ತಿಳಿದು ಬಂದಿದ್ದು, ಮೃತದೇಹವನ್ನು ಇನ್ನೂ ಮರದಿಂದ ಕೆಳಗೆ ಇಳಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದು, ಈ ಬಗ್ಗೆ ಭಕ್ತರ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಅವಳಿಗೆ ಮಗು ನೋಡಿಕೊಳ್ಳೋಕೆ ಕಷ್ಟ ಅಂತಿದ್ರೆ ನಾನೇ ನೋಡಿಕೊಳ್ತಿದ್ದೆ: ಪತಿ ಕಣ್ಣೀರು

    ಈ ಹಿಂದೆ ಆಶ್ರಮ ಇರುವ ಜಾಗಕ್ಕೆ ಶಾಸಕ ಪೂರ ರಾಮ್ ಚೌಧರಿ ಮಾಲೀಕರಾಗಿದ್ದರು. ಇದೀಗ ಆಶ್ರಮವಿರುವ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾದಾಗ ವಿವಾದ ಸೃಷ್ಟಿಯಾಗಿದೆ. ಸದ್ಯ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಆಶ್ರಮದ ಸುತ್ತಾ ಭದ್ರತೆ ವಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಡದಿಯ ನಿತ್ಯಾನಂದನ ಸ್ವರೂಪ ಎಂದು ಜನರನ್ನು ವಂಚಿಸುತ್ತಿದ್ದ ಸತ್ಯಾನಂದನಿಗೆ ಗೂಸಾ

    ಬಿಡದಿಯ ನಿತ್ಯಾನಂದನ ಸ್ವರೂಪ ಎಂದು ಜನರನ್ನು ವಂಚಿಸುತ್ತಿದ್ದ ಸತ್ಯಾನಂದನಿಗೆ ಗೂಸಾ

    ಕಾರವಾರ: ಬಿಡದಿ ನಿತ್ಯಾನಂದನ ಲುಕ್, ಆತನಂತೆಯೇ ಮಾತುಗಾರಿಕೆ, ಹಾವಭಾವ. ನಾನೊಬ್ಬ ನಿತ್ಯಾನಂದನ ಸ್ವರೂಪ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದ್ದುಕೊಂಡೇ ಮುಗ್ಧ ಜನರಿಗೆ ಮೋಸ ಮಾಡುತಿದ್ದ ಸತ್ಯಾನಂದ ಸ್ವಾಮಿಯ ಅಸಲಿ ಮುಖವನ್ನು ಮಂಗಳೂರಿನ ಭಜರಂಗದಳದ ಕಾರ್ಯಕರ್ತರು ಹೊರಗೆಳೆದಿದ್ದಾರೆ.

    ಬಿಡದಿ ನಿತ್ಯಾನಂದನ ರಾಸಲೀಲೆ ಯಾರು ತಾನೇ ಕೇಳದೇ ಇರಲು ಸಾಧ್ಯ? ಇದೀಗ ನಿತ್ಯಾನಂದ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡರೆ, ಆತನ ಸ್ವರೂಪ ತಾನು ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಚವೆಯ ಬೋರಳ್ಳಿಯಲ್ಲಿ ಸತ್ಯಾನಂದ ಉದ್ಭವವಾಗಿ ಬಿಟ್ಟಿದ್ದಾನೆ. ಈತ ತಾನು ಧರಿಸುವ ಕಾವಿಯಿಂದ ಹಿಡಿದು ಹಾವಾಭಾವದಲ್ಲೂ ನಿತ್ಯಾನಂದನ ಅನುಕರಣೆ ಮಾಡುತ್ತಾನೆ. ಅಷ್ಟೇ ಅಲ್ಲ, ಈತನಿಗೆ ಮಹಿಳೆಯರು ಎಂದರೆ ಅತೀವ ಪ್ರೀತಿ. ಹೀಗಾಗಿ ನಿತ್ಯಾನಂದನ ಪ್ರಭಾವದಲ್ಲಿ ಓರ್ವ ಮಹಿಳೆಯನ್ನು ಅತ್ಯಾಚಾರ ಮಾಡಲು ಹೋಗಿ ಜೈಲಿನ ಕಂಬಿ ಎಣಿಸಿ ಬೇಲ್ ಮೂಲಕ ಹೊರಬಂದಿದ್ದಾನೆ.

    ಇಷ್ಟಾದರೂ ತನ್ನ ಚಾಳಿ ಮುಂದುವರಿಸಿರುವ ಈತ ಸತ್ಯಾನಂದ ಪರಮಶಿವ ಎಂಬ ಫೇಸ್‌ಬುಕ್ ಅಕೌಂಟ್ ಮಾಡಿಕೊಂಡು ಪ್ರತಿ ದಿನ ಧಾರ್ಮಿಕ ವಿಚಾರವಾಗಿ ದಿನಗಟ್ಟಲೆ ಪ್ರವಚನ ನೀಡುತಿದ್ದ. ಇಷ್ಟು ಸಾಲದು ಎನ್ನುವಂತೆ ಭಾರತ ಮಾತೆ ನನ್ನ ಹೆಂಡತಿ, ಇಲ್ಲಿರುವ ಜನರು ನನ್ನ ಮಕ್ಕಳು ಎಂದು ಕೆಟ್ಟದಾಗಿ ಹೇಳುವುದರ ಜೊತೆಗೆ ಹಿಂದೂ ದೇವರು, ಧರ್ಮ ಕ್ಷೇತ್ರದ ಬಗ್ಗೆ ಅವಹೇಳನ ಮಾಡುತ್ತಿದ್ದ. ತಾನೇ ದೇವರೆಂದು ಹೇಳುವ ಮೂಲಕ ಈತ ನಿತ್ಯಾನಂದನಿಗೆ ಕಮ್ಮಿ ಇಲ್ಲ ಎನ್ನುವಂತೆ ನಡೆದುಕೊಳ್ಳುತಿದ್ದ.

    ಈತ ಫೇಸ್‌ಬುಕ್ ಮೂಲಕ ಮುಗ್ಧ ಮಹಿಳೆಯರನ್ನು ತನ್ನ ನಯವಾದ ಮಾತಿನಿಂದ ಆಕರ್ಷಿಸಿ ಹಣ ಪೀಕುವುದಲ್ಲದೇ, ದೇವಿ ದರ್ಶನ ಮಾಡಿಸುತ್ತೇನೆ, ನನ್ನ ಆಶ್ರಮಕ್ಕೆ ಬನ್ನಿ ಎಂದು ಕರೆಸಿಕೊಳ್ಳುತ್ತಿದ್ದ. ಹೀಗೆ ಮಂಗಳೂರಿನ ಮಹಿಳೆಗೆ ಕರೆಸಿ, ದೇವರನ್ನು ತೋರಿಸಲು ಹೋಗಿದ್ದವ ಇದೀಗ ಭಜರಂಗದಳ ಕಾರ್ಯಕರ್ತರಿಂದ ಗೂಸಾ ತಿಂದು ಕ್ಷಮಾಪಣೆ ಕೇಳಿ ಕಾವಿ ಕಳಚಿದ್ದಾನೆ.

    ಈ ಕಳ್ಳ ಸ್ವಾಮೀಜಿಯ ನಿಜವಾದ ಹೆಸರು ಶೇಖರ್ ಸಣ್ತಮ್ಮ ಪಟಗಾರ್. ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಳ್ಳಿ ಗ್ರಾಮದಲ್ಲಿ ಆಟೋ ಚಲಾಯಿಸಿಕೊಂಡಿದ್ದ. ಕಳೆದೆರಡು ವರ್ಷಗಳಿಂದ ಅದೇನಾಯ್ತೋ ಏನೋ ತನ್ನ ಮೈ ಮೇಲೆ ದೇವಿ ಬರುತ್ತಾಳೆ. ನಾನು ನಿತ್ಯಾನಂದನ ಸ್ವರೂಪಿ ಎಂದು ಕಾವಿ, ರುದ್ರಾಕ್ಷಿ ತೊಟ್ಟು ಸ್ವಯಂ ಘೋಷಿಸಿತ ಸ್ವಾಮೀಜಿ ಆಗಿದ್ದಾನೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವ – ಇದು ಹೇಡಿಗಳ ಲಕ್ಷಣ ಎಂದ ಈಶ್ವರಪ್ಪ

    ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅದರಲ್ಲಿ ವೀಡಿಯೋ ಹರಿಬಿಟ್ಟು ಜನರನ್ನು ಮರುಳು ಮಾಡುತ್ತಿದ್ದ ಈತನಿಗೆ 2,000ಕ್ಕೂ ಹೆಚ್ಚು ಜನ ಫಾಲೋವರ್‌ಗಳು ಇದ್ದಾರೆ. ಈತ ತನ್ನ ಮನೆಯನ್ನೇ ಆಶ್ರಮ ಮಾಡಿಕೊಂಡು ಅಲ್ಲಿಗೆ ತನ್ನ ಅನುಯಾಯಿಗಳನ್ನು ಕರೆಸಿಕೊಂಡು ಜ್ಯೋತಿಷ್ಯ, ವಾಸ್ತು, ಧರ್ಮ ಬೋಧನೆ ಎಂದು ಪುಂಗಿ ಬಿಟ್ಟು ಹಣ ಪೀಕುತ್ತಿದ್ದ. ಎಲ್ಲಿ ಈತನಿಗೆ ಮಹಿಳೆಯರ ಚಪಲ ಹೆಚ್ಚಾಯಿತೋ ಆಗ ಈತನ ಅಸಲಿ ಮುಖ ಆತನ ಅನುಯಾಯಿಗಳಿಗೆ ನಿಧಾನವಾಗಿ ತಿಳಿಯಲು ಪ್ರಾರಂಭವಾಯಿತು.

    ಇತ್ತೀಚೆಗೆ ಗ್ರಾಮ ಪಂಚಾಯಿತಿಯವರು ಈತನ ಬಳಿ ಬರುವ ಜನರಿಗೆ ಮೋಸದ ವಿಷಯ ತಿಳಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಆತನಿಗೆ ಬುದ್ಧಿ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಇವೆಲ್ಲವನ್ನು ಬಿಡುವಂತೆ ಹೇಳಿದ್ದರು. ಆದರೆ ಇದ್ಯಾವುದಕ್ಕೂ ಕಿವಿಗೊಡದ ಈತ ತನ್ನ ವಂಚನೆ ಕೆಲಸವನ್ನು ಮುಂದುವರಿಸಿದ್ದ. ಈ ವಿಷಯ ತಿಳಿದು ಒಂದು ಬಾರಿ ಮಾಧ್ಯಮಗಳು ಅಲ್ಲಿಗೆ ಹೋಗುತ್ತಿದ್ದಂತೆ ಆಶ್ರಮಕ್ಕೆ ಬೀಗ ಹಾಕಿ ಓಡಿಹೋಗಿದ್ದ. ಈತನ ಕೆಟ್ಟ ಕೆಲಸಗಳಿಂದಾಗಿ ಊರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಗ್ರಾಮದವರು ಈತನನ್ನು ಹುಡುಕಿ ಇದೀಗ ಅಂಕೋಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

    ಸ್ವಯಂ ಘೋಷಿತ ಸ್ವಾಮೀಜಿ ಶೇಖರನಿಗೆ ಭಜರಂಗದಳ ಎಚ್ಚರಿಕೆ ನೀಡಿದ್ದಕ್ಕೆ ಕಾವಿ, ರುದ್ರಾಕ್ಷಿ ಬಿಚ್ಚಿ ನಾನು ಇನ್ನು ಮೇಲೆ ಕಾವಿ ತೊಡುವುದಿಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟದ್ದಾನೆ. ಇದಲ್ಲದೇ ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಇದ್ದ ವೀಡಿಯೋಗಳನ್ನೂ ಡಿಲೀಟ್ ಮಾಡಿದ್ದು, ತನ್ನನ್ನು ಪ್ರಶ್ನಿಸಿದ ಜನರ ವಿರುದ್ಧವೇ ಈಗ ಅಂಕೋಲ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಚಿಟುಗು ಮಲ್ಲೇಶ್ವರ ಮಠದ ಸ್ವಾಮೀಜಿ ಅಸಹಜ ಸಾವು

    ಚಿಟುಗು ಮಲ್ಲೇಶ್ವರ ಮಠದ ಸ್ವಾಮೀಜಿ ಅಸಹಜ ಸಾವು

    ಚಿತ್ರದುರ್ಗ: ಚಿಟುಗು ಮಲ್ಲೇಶ್ವರ ಮಠದ ಸ್ವಾಮೀಜಿ ಅಸಹಜ ಸಾವಿಗೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಜ್ಞಾನಭಾಸ್ಕರ ಸ್ವಾಮೀಜಿ(75) ಐಕ್ಯರಾದವರು. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿನ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಸ್ವಾಮೀಜಿ ಆಗಿದ್ದರು. ಇದನ್ನೂ ಓದಿ: ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ಬಗ್ಗೆ ಕ್ರಮಕೈಗೊಳ್ಳಿ – ರಾಷ್ಟ್ರಪತಿಗೆ ಭಜರಂಗದಳದಿಂದ ಪತ್ರ

    ಸ್ನಾನ ಗೃಹದಲ್ಲಿ ಜ್ಞಾನ ಭಾಸ್ಕರ ಸ್ವಾಮೀಜಿ ನೀರು ಕಾಯಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಐಕ್ಯರಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ವಿರೋಧ- ಇಂದು ಮತ್ತೇ ಪ್ಯಾಸೆಂಜರ್ ರೈಲಿನ 2 ಬೋಗಿಗೆ ಬೆಂಕಿ

    Live Tv

  • ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ಮುಂಬೈ: ಹನುಮನ ಜನ್ಮಸ್ಥಳ ಯಾವುದು..? ಅಂಜನಾದ್ರಿನಾ? ಅಂಜನೇರಿನಾ? ತಿರುಮಲನಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಸಿಕ್‍ನಲ್ಲಿ ನಡೆಸಲಾದ ಧರ್ಮ ಸಂಸದ್‍ನಲ್ಲಿ ಭಾರೀ ಗಲಾಟೆ ನಡೆದಿದೆ.

    ಹನುಮ ಜನ್ಮಸ್ಥಳದ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಹನುಮಾನ್ ಜನ್ಮಭೂಮಿ ಕ್ಷೇತ್ರದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಮುಗಿಬಿದ್ದಿದ್ದಾರೆ. ಹಿಂದೆ ರಾವಣ ಸೀತೆಯನ್ನು ಹೊತ್ತೊಯ್ದಿದ್ದ, ಆದರೆ ಈಗ ನೀವು ಹನುಮಂತನ ಜನ್ಮಸ್ಥಳವನ್ನೇ ಹೈಜಾಕ್ ಮಾಡ್ತಿದ್ದೀರಿ ಅಂತಾ ಆರೋಪಿಸಿದ್ದಾರೆ. ಇದಕ್ಕೆ ಗೋವಿಂದಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

    ಸುಮ್ನೆ ಮಾತಾಡೋದಲ್ಲ, ದಾಖಲೆ ಕೊಡಿ ಅಂತಾ ಸವಾಲ್ ಹಾಕಿದ್ದಾರೆ. ಈ ಹಂತದಲ್ಲಿ, ಮಹಾಂತ ಸುಧೀರದಾಸರು, ಆದಿಗುರು ಶಂಕರಾಚಾರ್ಯರನ್ನು ಕಾಂಗ್ರೆಸ್ಸಿಗ ಎಂದಿದ್ದು ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿಯ ಆಗ್ರಹಕ್ಕೆ ಕಾರಣವಾಯ್ತು. ಕೂಡಲೇ ಕ್ಷಮೆಗೆ ಒತ್ತಾಯಿಸಿದ್ರು. ಈ ವೇಳೆ ಮಹಾಂತ ಸುಧೀರ್ ದಾಸರು, ಮೈಕ್ ಹಿಡಿದು ಹಲ್ಲೆಗೆ ಮುಂದಾದ್ರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಗೋವಿಂದಾನಂದ ಸ್ವಾಮೀಜಿ, ಸ್ವಾಮೀಜಿಗಳಿಗೆ ಅಪಮಾನ ಮಾಡ್ತೀರಾ..? ನೀವು ಈ ಧರ್ಮಸಂಸದ್‍ಗೆ ಕಳಂಕ.. ಕೂಡ್ಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ್ರು.

    ಕೊನೆಗೆ ಉಳಿದವರು ಸಮಾಧಾನ ಮಾಡೋ ಕೆಲಸ ಮಾಡಿದ್ರು. ಆದರೆ ನಾನು ಹಲ್ಲೆ ಮಾಡಲು ಯತ್ನಿಸಿಲ್ಲ. ಅವರೇ ಹಲ್ಲೆ ಮಾಡಿದರು ಅಂತಾ ನಾಟಕ ಮಾಡಿದ್ದಾರೆ ಎಂದು ಸುಧೀರ್ ದಾಸರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಧರ್ಮಸಂಸದ್‍ನಲ್ಲಿ ಭಾಗವಹಿಸದಂತೆ ಗೋವಿಂದಾನಂದ ಸ್ವಾಮೀಜಿಗೆ ತಡೆ ಒಡ್ಡಲು ಮಹಾರಾಷ್ಟ್ರ ಪೊಲೀಸರು ನೋಡಿದ್ರು. ನೀವು ಹನುಮನ ಜನ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿದ್ದೀರಿ. ಇದರಿಂದ ಅಂಜನೇರಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನೀವು ಧರ್ಮಸಂಸದ್‍ನಲ್ಲಿ ಭಾಗವಹಿಸಬೇಡಿ. ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ರು.

    ಇದಕ್ಕೆ ಡೋಂಟ್‍ಕೇರ್ ಎಂದ ಸ್ವಾಮೀಜಿ ಧರ್ಮಸಂಸದ್‍ನಲ್ಲಿ ಪಾಲ್ಗೊಂಡ್ರು. ಆದರೆ ಅಲ್ಲೂ ಮಹಾರಾಷ್ಟ್ರದ ಸ್ವಾಮೀಜಿಗಳು ಕಿರಿಕ್ ಮಾಡಿದ್ರು. ಕೊನೆಗೆ ಸಭೆಯೂ ಅರ್ಧಕ್ಕೆ ಮೊಟಕಾಯ್ತು.

  • ಮಹಿಳೆಗೆ ಕೊಲೆ ಬೆದರಿಕೆ – ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲು

    ಮಹಿಳೆಗೆ ಕೊಲೆ ಬೆದರಿಕೆ – ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲು

    ಕೊಪ್ಪಳ: ಮಹಿಳೆಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಕೊಪ್ಪಳ ಜಿಲ್ಲೆಯ ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಮಲಾಕ್ಷಿ ಎಂಬವರು ದೂರು ನೀಡಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ – ಸಿಎಂ ಮಧ್ಯಪ್ರವೇಶಕ್ಕೆ ಸಾಹಿತಿಗಳ ಆಗ್ರಹ

    ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಮಲಾಕ್ಷಿಗೆ ಬಸಲಿಂಗಮ್ಮ ನೀನು ಯಾಕೆ ಇಲ್ಲಿ ಬಂದಿದ್ದೀಯ ಎಂದು ನಿಂದಿಸಿ, ಗಲಾಟೆ ಪ್ರಾರಂಭಿಸಿದ್ದಳು. ಸ್ವಾಮೀಜಿ ಬಳಿ ಪಿಸ್ತೂಲ್ ಇದೆ, ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬಸಲಿಂಗಮ್ಮ ಬೆದರಿಕೆ ಹಾಕಿರುವುದಾಗಿ ಕಮಲಾಕ್ಷಿ ದೂರಿನಲ್ಲಿ ನಮೂದಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    POLICE JEEP

    ಇದೇ ವೇಳೆ ಗೇಟ್ ಬಳಿ ಇದ್ದ ಕೊಟ್ಟೂರು ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಮಲಾಕ್ಷಿ ದೂರು ನೀಡಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಲಂ 323, 324, 504 ಹಾಗೂ 506 ಅಡಿಯಲ್ಲಿ ದೂರು ದಾಖಲಾಗಿದೆ.

  • ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್

    ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್

    ಬೆಂಗಳೂರು: ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಸ್ವಾಮೀಜಿಯೊಬ್ಬರಿಗೆ ಕೈತುತ್ತು ತಿನ್ನಿಸಿ ಬಳಿಕ ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಮ್ಮ ಬಾಯಿಗೆ ಹಾಕಿಸಿಕೊಂಡು ಶಾಸಕ ಜಮೀರ್ ಅಹ್ಮದ್ ಖಾನ್ ಅತಿರೇಕದ ವರ್ತನೆ ತೋರಿದ್ದಾರೆ.

    ಚಾಮರಾಜಪೇಟೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಾಗೂ ಇದ್ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ದಲಿತ ಅಡುಗೆಯವರು ಮಾಡಿದ ಊಟ ಮಾಡಲು ಶಾಲಾ ಮಕ್ಕಳು ವಿರೋಧ ಮಾಡಿದ್ದರು. ಈ ಭೇದಭಾವ ಇರಬಾರದು ಎಂದರು. ಇದನ್ನೂ ಓದಿ: ಕುತುಬ್ ಮಿನಾರ್ ವಿವಾದ – ಸದ್ಯಕ್ಕಿಲ್ಲ ಉತ್ಖನನ

    ಬಳಿಕ ದಲಿತ ಸಮುದಾಯದ ನಾಗರಾಜ ಸ್ವಾಮೀಜಿಯನ್ನು ಕರೆಸಿ ಜಮೀರ್ ಕೈತುತ್ತು ತಿನ್ನಿಸಿದರು. ನಂತರ ಸ್ವಾಮೀಜಿ ಕೈ ತುತ್ತು ತಿನ್ನಿಸಲು ಮುಂದಾದಾಗ ಕೈ ತುತ್ತು ಬೇಡ ನಿಮ್ಮ ಬಾಯಿಯಿಂದಲೇ ಕೊಡಿ ಎಂದು ಅವರ ಬಾಯಿಯಿಂದ ಎಂಜಲು ಅನ್ನ ತೆಗೆಸಿ ಬಹಿರಂಗವಾಗಿ ಎಂಜಲು ಅನ್ನ ತಿಂದರು. ಈ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇದನ್ನೂ ಓದಿ: ತಾಳಿ ಕಟ್ಟುವಾಗ ಕುಸಿದುಬಿದ್ದಂತೆ ವಧು ನಾಟಕ – ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ

    ವೀಡಿಯೋದಲ್ಲಿ ಏನಿದೆ?
    ಯುಪಿನಲ್ಲಿ ಒಂದು ಸ್ಕೂಲ್ ಇತ್ತು ಸರ್, ಸರ್ಕಾರಿ ಸ್ಕೂಲ್, ಬಹಳ ವರ್ಷಗಳಿಂದ ದಲಿತರು ಅಡುಗೆ ಮಾಡುತ್ತಿದ್ದರು, ದಲಿತರು ಅಡುಗೆ ಮಾಡುತ್ತಿದ್ದಾರೆ ಅಂತಾ ಅಲ್ಲಿನ ಮಕ್ಕಳನ್ನು ಎತ್ತಿ ಕಟ್ಟಿ, ಇಲ್ಲಿ ಊಟ ಮಾಡಬಾರದು ಅಂತಾ ಗಲಾಟೆ ಮಾಡಿಸಿದ್ರು. ಆ ಮಕ್ಕಳನ್ನು ರಾಜಕೀಯ ಮಾಡಿ ಆ ಮಕ್ಕಳು ಊಟ ಬಿಟ್ಟಿದ್ದಾರೆ. ಏನ್ರಿ ಇದು ದೇಶ? ಏನ್ ಮಾಡೋಕೆ ಹೊರಟ್ಟಿದ್ದಾರೆ? ಏನ್ ಆಗ್ತಾ ಇದೇ? ಇವ್ರು ಸ್ವಾಮೀಜಿ ನಿಂತ್ಕೋಳಿ ಸ್ವಾಮೀಜಿ. ದಲಿತ ಸ್ವಾಮೀಜಿಗೆ ನಾನು ತಿನ್ನಿಸುತ್ತೇನೆ. ಒಂದ್ ನಿಮಿಷ… ಒಂದ್ ನಿಮಿಷ… ನಿಮ್ಮ ಬಾಯಲ್ಲಿ ಇರೋದನ್ನು ತೆಗೆದು ತಿನ್ನಿಸಿ. ಸ್ವಲ್ಪ ಅನ್ನ ತೆಗೆದು ನನಗೆ ಹಾಕಿ. ಇದು ರೀ… ಇದು ರೀ… ಇವ್ರ ಬಾಯಿಂದ ಅನ್ನ ತೆಗೆದು ತಿಂದಿದ್ದೀನಿ. ತಿಂದಿದ್ದೀನಿ ಅಲ್ವಾ? ಇದು ನಮ್ಮ ದೇಶ, ನಾವೆಲ್ಲಾರು ಒಂದೇ. ನಾವೆಲ್ಲಾರು ಒಂದೇ.

  • ಟ್ರ್ಯಾಕ್ಟರ್ ಸ್ಪೀಕರ್‌ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಸ್ವಾಮೀಜಿ ಮೇಲೆಯೇ ಹಲ್ಲೆ

    ಟ್ರ್ಯಾಕ್ಟರ್ ಸ್ಪೀಕರ್‌ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಸ್ವಾಮೀಜಿ ಮೇಲೆಯೇ ಹಲ್ಲೆ

    ಹಾವೇರಿ: ಸ್ವಾಮೀಜಿಯೊಬ್ಬರು ಟ್ರ್ಯಾಕ್ಟರ್ ಸ್ಪೀಕರ್‌ ಸೌಂಡ್ ಕಡಿಮೆ ಇಟ್ಟುಕೊಂಡು ಹೋಗುವಂತೆ ಹೇಳಿದ್ದಕ್ಕೆ ಅವರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿರುವ ಬಂಜಾರ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿ ಮೇಲೆ ಹಲ್ಲೆಯಾಗಿದೆ. ಟ್ರ್ಯಾಕ್ಟರ್ ಸ್ಪೀಕರ್‌ನಲ್ಲಿ ಹೆಚ್ಚು ಸೌಂಡ್ ಇಟ್ಟುಕೊಂಡು ಗುರುಪೀಠದ ಮುಂದೆಯೇ ಹೋಗುತ್ತಿತ್ತು. ಈ ವೇಳೆ ಮಹಾರಾಜ ಸ್ವಾಮೀಜಿ ಟ್ರ್ಯಾಕ್ಟರ್‌ನಲ್ಲಿನ ಸ್ಪೀಕರ್ ಸೌಂಡ್ ಕಡಿಮೆ ಇಟ್ಟುಕೊಂಡು ಹೋಗಿ. ಇದರಿಂದ ಪೂಜೆಗೆ ತೊಂದರೆ ಆಗುತ್ತದೆ ಎಂದು ಬುದ್ಧಿವಾದ ಹೇಳಿದ್ದಾರೆ.

    ಈ ಹಿನ್ನೆಲೆ ಟ್ರ್ಯಾಕ್ಟರ್‌ನಲ್ಲಿದ್ದವರು ಸ್ವಾಮೀಜಿಯನ್ನು ಗುರುಪೀಠದ ಪಕ್ಕದ ಜಮೀನಿಗೆ ಕರೆಯಿಸಿ ಅವಾಚ್ಯ ಪದಗಳಿಂದ ಬೈದಾಡಿ, ದೂಡಾಡಿ, ಹಲ್ಲೆ ಮಾಡಿದ್ದಾರೆ. ಪರಿಣಾಮ ಸ್ವಾಮೀಜಿ ಅವರು ಹಲ್ಲೆ ಮಾಡಿದ ನಾಲ್ವರ ವಿರುದ್ಧ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ

    ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಕೃಷ್ಣಾ, ಸುರೇಶ್, ಪುಟ್ಟಪ್ಪ ಮತ್ತು ದ್ಯಾಮಣ್ಣ ಎನ್ನುವವರ ವಿರುದ್ಧ ಮಹಾರಾಜ ಸ್ವಾಮೀಜಿ ದೂರು ದಾಖಲಿಸಿದ್ದಾರೆ.