ಕೊಪ್ಪಳ: ಮಹಿಳೆಯೊಂದಿಗೆ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಕಾಮಿ ಸ್ವಾಮಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಸನ್ಮಾಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಂಗಾವತಿಯ ಕಲ್ಮಠದ ಕೊಟ್ಟೂರು ಮಠಕ್ಕೆ ಪೊಲೀಸ್ ಅಧಿಕಾರಿಗಳು ದೀಪಾವಳಿಯ ಹಬ್ಬದಂದು ಬಂದಿದ್ದರು. ಈ ವೇಳೆ ಮಠದ ಕಾಮಿ ಸ್ವಾಮಿಯನ್ನು ಸನ್ಮಾನಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಈ ನಡೆಯ ಬಗ್ಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ಎದುರಾಗಿದೆ.
ಸ್ವಾಮಿಯ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಕೊಲೆ ಬೆದರಿಕೆ, ಕೊಲೆ ಯತ್ನ, ಶಾಂತಿ ಭಂಗ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಬೇರೆ ಆರೋಪಗಳು ಮತ್ತು ಪ್ರಕರಣಗಳು ಸ್ವಾಮಿ ಮೇಲಿವೆ. ಆದರೂ ಗಂಗಾವತಿ ಪೊಲೀಸರು ದೀಪಾವಳಿ ಹಬ್ಬದ ದಿನದಂದು ಮಠಕ್ಕೆ ತೆರಳಿ ಕಾಮಿ ಸ್ವಾಮಿಯನ್ನ ಸನ್ಮಾನ ಮಾಡಿದ್ದಾರೆ.
ಕಾಮಿ ಸ್ವಾಮಿಯನ್ನ ಸನ್ಮಾನಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೊಲೀಸ್ ಇಲಾಖೆ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.
ಯಾದಗಿರಿ: ಜಿಲ್ಲೆಯ ಕಾಮಿಸ್ವಾಮೀಯ ಕಾಮಪುರಾಣ ಆಡಿಯೋ ಸ್ಥಳೀಯ ಮಟ್ಟದಲ್ಲಿ ಬಾರಿ ಸುದ್ದಿಯಲ್ಲಿದೆ. ಜಿಲ್ಲೆಯ ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ, ಪೀಠಾಧಿಪತಿ ಶ್ರೀ 1008 ವಿದ್ಯಾವಾರೀಧಿತೀರ್ಥ ಸ್ವಾಮಿಯ ಅಕ್ರಮ ಸಂಬಂಧ ಬಟಾ ಬಯಲಾಗಿದೆ.
ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ.
ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸ್ವಾಮಿ ಮೇಲಿದೆ.
ಸ್ವಾಮಿ ಮೈಸೂರು ಮೂಲದ ಮಹಿಳೆ ಜೊತೆ ನಡೆಸಿದ ಮಾತುಕತೆ ಹೀಗಿದೆ.
ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ವಾಟ್ಸಾಪ್‍ಗೆ ಬರ್ಲಾ..? ಮಹಿಳೆ: ವಾಟ್ಸಾಪ್‍ಗೆ ಬರ್ತಿರಾ..? ಸರಿ ಬನ್ನಿ.. ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಫೋಟೋ ಕಳುಹಿಸು ನಿಂದು ಮಹಿಳೆ: ಹಲೋ..ಏನು..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಫೋಟೋ ಕಳುಹಿಸಿ ಅಂದೆ ಮಹಿಳೆ: ಹಾಗೆಲ್ಲಾ ನಾನು ಫೋಟೋ ಯಾರಿಗೂ ಕಳುಹಿಸಲ್ಲ. ಸರಿ ಈಗ ನೀವು ಮಾತಾಡಿ. ವಾಟ್ಸಾಪ್ ಯಾಕೆ ಈಗ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಹೌದಾ..? ಫೋಟೋ ಕಳುಹಿಸಲ್ವಾ..? ಮಹಿಳೆ: ಇದೇ ನಂಬರ್ ನಂದು ವಾಟ್ಸಾಪ್. ಡಿಪಿ ಇದೆ ನೋಡ್ಕೊಳ್ಳಿ. ಆದ್ರೆ ಫೋಟೋಯೆಲ್ಲ ಹಂಗ್ ಕಳುಹಿಸಲ್ಲ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಹೌದಾ..? ಮಹಿಳೆ: ಹುಂ.. ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಸರಿ ಸರಿ..
ಮಹಿಳೆ: ನಾನೇ ಬೇಕಾದ್ರೆ ಯಾವತ್ತಾದ್ರೂ ಡೈರೆಕ್ಟ್ ಆಗಿ ಸಿಗ್ತೀನಿ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಸರಿ ಯಾವಾಗ ಸಿಗ್ತೀರಾ..? ಮಹಿಳೆ: ನೆಕ್ಸ್ಟ್ ವಾರ ಹೇಳ್ತೀನಿ ಫೋನ್ ಮಾಡಿ. ನಾನು ಬ್ಯೂಸಿ ಇರ್ತಿನಿ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಹೌದಾ..? ಸರಿಯಮ್ಮ..ಏನೋ ಬೇಕಾಗಿತ್ತು. ನಿಮ್ಮ ಒಂದು ಸಹಕಾರ. ಫೋನ್ ಮಾಡಿದ್ದಷ್ಟೆ ಮಹಿಳೆ: ಏನ್ ಬೇಕಾಗಿತ್ತು..? ಹೇಳಿ.. ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಹಹ..ಏನ್ ಹೇಳ್ಬೇಕು ನಿನಗೆ ಮಹಿಳೆ: ಅಯ್ಯೋ ನನಗೆ ಗೊತ್ತಾಗಲ್ಲ. ಹೇಳ್ಬೇಕು ನೀವು ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಸರಿಯಮ್ಮ.. ಮಹಿಳೆ: ಹೇಳಿ..ಇಲ್ಲಾ ಬಂದಾಗಲೇ ಹೇಳ್ತೀರಾ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಪರಸ್ಪರ ಸುಖ ಬೇಕು ಮಹಿಳೆ: ಅಷ್ಟೇ ಸಾಕಾ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ನಿರಂತರ ಆತ್ಮೀಯತೆ, ಸಂಬಂಧ ಇರಲಿ. ಆಶ್ರಯ ಇರಲಿ ಮಹಿಳೆ: ಮತ್ತೆ ಬರೀ ಟೈಮ್‍ಪಾಸ್‍ಗಾ..? ಹೇಗೆ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಅಲ್ಲ ಬರೀ ಟೈಮ್‍ಪಾಸ್‍ಗೂ ಮಾಡಬಹುದು. ಆದ್ರೆ ನನಗೆ.. ಮಹಿಳೆ: ಲೈಫ್‍ಲಾಂಗಾ..? ಟೈಮ್‍ಪಾಸಾ..? ಮಧ್ಯದಲ್ಲಿ ಕೈ ಕೊಟ್ಟು ಹೋಗೋದಾ ಯಾವ್ ಥರಾ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಇಲ್ಲಪ್ಪ ಮಧ್ಯದಲ್ಲಿ ಹೆಂಗೆ ಕೈ ಕೊಡೋದು..?
ಮಹಿಳೆ: ನಿಮ್ಮನ್ನೇ ನಾವು ನಂಬ್ಕೊಂಡು ಬಂದಿರ್ತಿವಿ. ನಮಗೇನ್ ಪ್ರಯೋಜನ ಹಂಗ್ ಬರೋದ್ರಿಂದ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ನೀವ್ ನಂದ್ರೆ ಸಹಕಾರ ಮಾಡೋಣ, ಸಹಾಯ ಮಾಡೋಣ. ನಿಮಗೆ ಅವಶ್ಯಕತೆ ಇದ್ದಾಗ ಹೆಲ್ಪ್ ಮಾಡೋಣ ಮಹಿಳೆ: ಹೆಲ್ಪ್ ಮಾಡ್ತೀರಾ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಮಾಡೋಣ. ನಿಮಗೆ ಯಾವಾಗ ಅವಶ್ಯಕತೆ ಇರುತ್ತೋ ಆವಾಗ ಮಹಿಳೆ: ನಿಮ್ಮನ್ನ ನಾವು ನಂಬ್ಕೊಂಡು ಬಂದಿರ್ತಿವಿ. ಅಕಸ್ಮಾತ್ ನೀವು ಅರ್ಧ ದಾರಿಯಲ್ಲಿ ಕೈ ಕೊಟ್ರೆ ನನ್ ಗತಿಯೇನು..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಇಲ್ಲಪ್ಪ ನೀನು ಜನ ನೋಡ್ಬೇಕು. ಇವರೆನು ಕುಡಿಯೋರಾ..? ತಿನ್ನೋರು..ಯಾವ ಜನ ಏನು ಅಂತ ನೀವು ನೋಡ್ಕೋಬೇಕು. ನೋಡ್ಕೊಂಡು ಮುಂದುವರಿಯಿರಿ
ಮಹಿಳೆ: ಸರಿ..ಈವಾಗ ನೀವು ಸ್ವಾಮೀಜಿ. ನೋಡ್ಕೊಂಡು ಬರ್ತಿನಿ ಸರಿ ಓಕೆ. ಆದ್ರೂ ನಮಗೆ ನಂಬಿಕೆ ಬರಬೇಕಲ್ವಾ..ನೀವು ಒಳ್ಳೆಯವ್ರಾ ಕೆಟ್ಟವರಾ..? ಹೆಂಗೆ ಅರ್ಧದಲ್ಲಿ ಕೈ ಕೊಟ್ಬಿಡ್ತಿರಾ ಹೇಗೆ ಏನು ಅಂತ ನಮಗೂ ಗೊತ್ತಾಗಬೇಕಲ್ವಾ..? ಎಲ್ಲರೂ ಒಳ್ಳೆಯವರಿರ್ತಾರಾ ಅಂತ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ನೋಡಮ್ಮ. ಲೌಕಿಕರು ಬೇರೆ ಅಮ್ಮ. ಕುಡಿಯೋದು.. ಎಲೆ, ಅಡಿಕೆ ತಿನ್ನೋದು ಅನೇಕ ವ್ಯಸನ ಇಟ್ಕೊಂಡು ಏನೇನೋ ಮಾಡುತ್ತಿರುತ್ತಾರೆ. ಅವರದ್ದು ಬೇರೆ ನಮ್ಮದು ಬೇರೆಯಮ್ಮ.. ಮಹಿಳೆ: ಸರಿ ಆಯ್ತು..ನಿಮ್ ಭಕ್ತರೆಲ್ಲ ಯಾರ್ಯಾರೋ ಬರ್ತಾರೆ. ಅವರು ಯಾರ್ಯಾದರೂ ನನ್ನನ್ನು ತಗ್ಲಾಕಿಸಿಬಿಟ್ರೆ ಏನ್ ಮಾಡೋದು..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಈಗ ನಮ್ ಮನೆಯಲಿ ಏನೋ ಪ್ರಾಬ್ಲಂ ಇತ್ತು. ಗುರುಗಳ ಹತ್ತಿರ ಪರಿಹಾರ ಉಪಾಯಕ್ಕೆ ಬಂದಿದ್ದೀವಿ ಅಂತ ಹೇಳ್ಬೇಕು ಅಷ್ಟೆ ಮಹಿಳೆ: ಏನೂ ತೊಂದರೆ ಆಗಲ್ಲ ತಾನೆ
ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಏನಿಲ್ಲಮ್ಮ..ಏನೂ ಆಗಲ್ಲ. ಮಹಿಳೆ: ಆಮೇಲೆ ಯಾರ್ಯಾರೋ ಸ್ವಾಮೀಜಿ ಸ್ಟೋರಿ ನೋಡಿ ಆ ಥರ ತಗ್ಲಾಕೊಂಡ್ರೆ ಕಷ್ಟ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಇಲ್ಲಮ್ಮ..ನೀನು ಈಗ ಭಕ್ತರ ರೂಪದಲ್ಲಿ ಬರಬೇಕು. ಯಾರಾದ್ರೂ ಕೇಳಿದ್ರೆ ಗುರುಗಳ ಆಶೀರ್ವಾದ ಪಡೆಯೋಕೆ ಬಂದಿದ್ದೀನಿ ಅಂತ ಹೇಳಿ ಬರಬೇಕು. ಯಾರಾದ್ರೂ ಮಾತನಾಡಿಸಿದ್ರೆ ಗುರುಗಳ ಪೂಜೆ ಮಾಡೋಕೆ ಬಂದಿದ್ದೀವಿ ಅಂತ ಹೇಳ್ಬೇಕು. ಮನೆಯಲ್ಲಿ ಕಷ್ಟ ಇದೆ. ಹೇಳಿಕೊಳ್ಳೋಣ ಅಂತ ಬಂದಿದ್ದೀವಿ ಅಂತ ಹೇಳ್ಬೇಕು ಮಹಿಳೆ: ಸರಿ..ಮತ್ತೆ ಬೇರೆ ಯಾರು ಸ್ವಾಮೀಜಿ ಇಲ್ವಾ ಅಲ್ಲಿ..? ಯಾರಾದ್ರೂ ಏನಾದ್ರೂ ಕೇಳ್ತಾರಾ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಇಲ್ಲ ಯಾರೂ ಇಲ್ಲ. ನನ್ನ ಶಿಷ್ಯರು ಇರ್ತಾರೆ ಅಷ್ಟೇ ಮಹಿಳೆ: ಅಲ್ಲಿ ನೀವೇ ಸೀನಿಯರಾ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಹೌದಮ್ಮ ಮಹಿಳೆ: ನಿಮ್ಮ ಹೆಸರು..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಗುರೂಜಿ, ಸ್ವಾಮೀಜಿ ಅಂತಾರೆ ಮಹಿಳೆ: ಇಲ್ಲ ನಿಮ್ಮ ಹುಟ್ಟು ಹೆಸರು ಹೇಳಿ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಬರ್ತ್ ನೇಮ್ ಈಗ ಯಾರೂ ಕರೆಯೋದಿಲ್ಲಮ್ಮ ಮಹಿಳೆ: ಹೌದಾ..?
ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ನಾವು ಸ್ವಾಮೀಜಿ ಆದ್ಮೇಲೆ ಯಾರೂ ಬರ್ತ್ ನೇಮ್ ಕರೆಯೋದಿಲ್ಲ ಮಹಿಳೆ: ಸರಿ ನನಗೆ ತಿಳಿದುಕೊಳ್ಳೋಕೆ ಕೇಳ್ತಿದ್ದೀನಿ ಅಷ್ಟೇ. ನಾನು ಗುರೂಜಿ ಅಂತಾನೆ ಕರೀತಿನಿ. ನಿಮ್ ಹಸರು ಏನು ಹೇಳಿ..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ವಿದ್ಯಾವಾರಿಧಿತೀರ್ಥರು..ವಿದ್ಯಾವಾರಿಧಿತೀರ್ಥರು ಮಹಿಳೆ: ಓಕೆ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಪತ್ರಿಕೆ ಕಳುಹಿಸ್ತೀನಿ ಈಗ ವಾಟ್ಸಾಪ್‍ನಲ್ಲಿ ನೋಡಿ ಮಹಿಳೆ: ಆಯ್ತ ಸರ್ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ನಿಂದು ಡೇಟ್ ಆಫ್ ಬರ್ತ್ ಏನು..? ವಯಸ್ಸೆಷ್ಟು..? ಎಷ್ಟಮ್ಮ..?
ಮಹಿಳೆ: 33 ವಿದ್ಯಾವಾರಿಧಿತೀರ್ಥ ಸ್ವಾಮೀಜಿ: 33 ವರ್ಷನಾ..? ಮ್ಯಾರೇಜ್ ಆಗಿದ್ಯಾ..? ಮಕ್ಕಳಿದ್ದಾರಾ..? ಮಹಿಳೆ: ಹೌದು ಇದ್ದಾರೆ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಎಷ್ಟು ವಯಸ್ಸಮ್ಮ ಮಕ್ಕಳಿಗೆ..? ಮಹಿಳೆ: ಒಂದೇ ಮಗು..8 ವರ್ಷ
ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಹೌದಾ..? ಸರಿ ಸರಿ ಒಳ್ಳೆಯದು. ಯಜಮಾನ್ರು ಏನ್ ಮಾಡ್ತಾರೆ..? ನಿಮ್ ಹತ್ರ ಇದ್ದಾರೆ. ಮಹಿಳೆ: ಇದ್ದಾರೆ ಆದ್ರೆ ಮನೆ ಬಗ್ಗೆ ಏನೂ ಕೇರ್ ಮಾಡಲ್ಲ. ಅವರು ಎಣ್ಣೆ ಕುಡಿತಾರೆ. ಪ್ರಾಬ್ಲಂ ಇದೆ ಮನೆಯಲ್ಲಿ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಹೌದಾ..? ಸರಿ..ಸರಿ ನೀವು ಬರ್ತಾ ಇರಿ. ಮಹಿಳೆ: ಸರಿ ಗುರೂಜಿ ಎಲ್ಲಿ ಆಶ್ರಮ ನಿಮ್ಮದು..? ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ನಾನು ನಿಮಗೆ ಈಗ ಆಮಂತ್ರಣ ಪತ್ರಿಕೆ, ಮ್ಯಾಪ್ ಕಳುಹಿಸ್ತೀನಿ ಹೇಗೆ ಬರಬೇಕು ಅಂತ ಮಹಿಳೆ: ಸರಿ ಗುರೂಜಿ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ನೀವು ನಿಮ್ಮದೊಂದು ಫೋಟೋ ಕಳುಹಿಸಿ. ನನ್ನ ಫೋಟೋನು ನಿಮಗೆ ಕಳುಹಿಸ್ತೀನಿ ಮಹಿಳೆ: ನನ್ ಡಿಪಿಯಲ್ಲಿ ಇದೆಯಲ್ಲ ನೋಡಿ. ನಾನು ಹಾಗೆ ಫೋಟೋ ಯಾರಿಗೂ ಕಳುಹಿಸೋದಿಲ್ಲ ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಸರಿ..ಆಯ್ತಮ್ಮ..ಮ್ಯಾಪ್, ಏನ್ ಕಾರ್ಯಕ್ರಮ ಇದೆ ಕಳುಹಿಸ್ತೀನಿ ಈಗ ಮಹಿಳೆ: ನಿಮ್ ಫೋಟೋ ಕಳುಹಿಸಿ ನೋಡೋಣ ಹೆಂಗಿದ್ದೀರಾ ಅಂತ. ಹೆಣ್ಮಕ್ಕಳು ಹಾಗೆಲ್ಲ ಫೋಟೋ ಕಳುಹಿಸಬಾರದು. ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಆಯ್ತಮ್ಮ. ನನ್ನ ಪತ್ರಿಕೆನೇ ಇದೆ. ಆ ಪತ್ರಿಕೆಯಲ್ಲಿ ನನ್ ಫೋಟಕಳುಹಿಸ್ತೀನಿ
ಬೆಳಗಾವಿ: ವ್ಯಕ್ತಿಯೊಬ್ಬ ಖಾವಿ ಧರಿಸಿ ಮದ್ಯ ಕುಡಿಯಲು ಮುಂದಾದಾಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಗರದ ಅಪೊಲೋ ಬಾರ್ ಬಳಿ ನಡೆದಿದೆ.
ನಗರದ ಅಪೊಲೊ ಬಾರ್ ಬಳಿ ಖಾವಿ ಬಟ್ಟೆಯಲ್ಲಿಯೇ ವ್ಯಕ್ತಿಯೊಬ್ಬ ಮದ್ಯ ಸೇವಿಸಲು ಮುಂದಾಗಿದ್ದ. ಈ ವೇಳೆ ಸ್ಥಳದಲ್ಲಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಂದೂ ಧರ್ಮದ ಪ್ರತೀಕ ಹಾಗೂ ಪವಿತ್ರವಾದ ಖಾವಿ ವಸ್ತ್ರ ಧರಿಸಿ ಎಣ್ಣೆ ಕುಡಿಯುತ್ತಿದ್ದೀಯಾ ಎಂದು ಪ್ರಶ್ನಿಸಿ ವ್ಯಕ್ತಿಯೆ ಮೇಲೆ ಹಲ್ಲೆ ನಡೆಸಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣೆಯ ಸಮೀಪ ಇರುವ ಬಾರಿನಲ್ಲಿ ಈ ಘಟನೆ ನಡೆದಿದೆ. ಕಾರ್ಯಕರ್ತರಿಂದ ಒದೆ ತಿಂದ ಬಳಿಕ ವ್ಯಕ್ತಿ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದಾನೆ.
ರಾಯಚೂರು: ಮಾತೆ ಮಹಾದೇವಿಗೆ ಬುದ್ಧಿ ಭ್ರಮಣೆಯಾಗಿದ್ದು ಹೇಳುವುದೇ ಒಂದು ಮಾಡುವುದು ಇನ್ನೊಂದು ಅಂತ ರಾಯಚೂರಿನ ವಿವಿಧ ಮಠಗಳ ಸ್ವಾಮಿಜಿಗಳು ಕಿಡಿಕಾರಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಈಗಾಗಲೇ ಅವರ ಪಾದಪೂಜೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಲಿಂಗಾಯತ ಧರ್ಮ ಕಟ್ಟುತ್ತೇನೆ ಅಂತ ಅಡ್ಡಪಲ್ಲಕ್ಕಿ, ಪಾದಪೂಜೆಗಳನ್ನ ವಿರೋಧಿಸುವ ಮಾತೆ ಮಹಾದೇವಿ ಸ್ವತಃ ಸಿಂಹಾಸನ ಮೇಲೆ ಕುಳಿತು ತಾವೇ ಪಾದಪೂಜೆ ಮಾಡಿಸಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ.
ಬಸವಣ್ಣನವರನ್ನ ಸ್ವತಃ ಕಡೆಗಣಿಸಿರುವ ಮಾತೆ ಮಹಾದೇವಿ ಕೂಡಲಸಂಗಮದಲ್ಲಿ ಲಿಂಗದೇವರು ಹಾಗೂ ತನ್ನ ಫೋಟೋದ ಕೆಳಗೆ ಬಸವಣ್ಣನ ಫೋಟೋ ಇಟ್ಟು ಅವಮಾನ ಮಾಡಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದರು.
ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಲಿಂಗಾಯತ ಧರ್ಮದ ನಾಟಕ ಕೇವಲ ರಾಜಕೀಯ ಗಿಮಿಕ್, ಇದು ಚುನಾವಣೆವರೆಗೆ ಮಾತ್ರ ನಡೆಯುತ್ತದೆ. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಸಚಿವರುಗಳೇ ಸ್ವತಃ ಲಿಂಗ ಕಟ್ಟಿಲ್ಲ. ಲಿಂಗಪೂಜೆಯನ್ನ ಮಾಡದೆ, ಲಿಂಗ ತತ್ವವೇ ಗೊತ್ತಿಲ್ಲದೆ ರಾಜಕೀಯ ಮಾಡುತ್ತಿದ್ದಾರೆ. ವೀರಶೈವ ಪುರಾತನ ತತ್ವ ಇದು ಜಾತಿ, ಧರ್ಮ ಅಲ್ಲ ಅಂತ ಹೇಳಿದ್ದಾರೆ.