Tag: swachh bharat

  • ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿಗೆ(Bengaluru) ಮತ್ತೆ ಧಕ್ಕೆಯಾಗಿದೆ. ಸ್ವಚ್ಛ ಸರ್ವೇಕ್ಷಣ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ(Swachh Survekshan 2022 list) ಬೆಂಗಳೂರು ಕುಸಿದಿದೆ.

    ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕಳೆದ ವರ್ಷ 28ನೇ ಸ್ಥಾನದಲ್ಲಿ ಬೆಂಗಳೂರು ಈ ಬಾರಿ 43ನೇ ಸ್ಥಾನಕ್ಕೆ ಕುಸಿದಿದೆ.

    10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ 45 ನಗರಗಳನ್ನು ಅಧ್ಯಯನ ನಡೆಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಧ್ಯಪ್ರದೇಶದ ಇಂದೋರ್‌ ಸತತ 6ನೇ ಬಾರಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ. ಚೆನ್ನೈ ಮತ್ತು ಮಧುರೈ ಕೊನೆಯ ಸ್ಥಾನಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಯುವಕರ ಸಾಹಸ – ಭೂಗಳ್ಳರ ಕೈಯಿಂದ ಶಾಲೆಗೆ ಸೇರಿತು ಕೋಟ್ಯಂತರ ಮೌಲ್ಯದ ಜಮೀನು

    ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಪಾಲಿಕೆಯಿಂದ ಕೈಗೊಂಡ ಕ್ರಮಗಳು, ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕೆ ಕೈಗೊಂಡ ಕ್ರಮ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ರ್‍ಯಾಂಕ್‌ ನೀಡಲಾಗುತ್ತದೆ.

    ಕುಟುಕಿದ ಪೈ
    ಉದ್ಯಮಿ ಮೋಹನ್‌ದಾಸ್‌ ಪೈ(Mohandas Pai), ಬಿಗ್‍ಶೇಮ್. ನಮ್ಮ ಶಾಸಕರು, ಸಂಸದರು ಮತ್ತೆ ವಿಫಲರಾಗಿದ್ದಾರೆ. ತುಂಬಾ ಶಾಸಕರು ಭ್ರಷ್ಟ್ಟಾಚಾರಿಗಳು ಎಂದು ಬರೆದು ಸಿಎಂ ಬೊಮ್ಮಾಯಿ ಸೇರಿದಂತೆ ಬೆಂಗಳೂರಿನ ಮಂತ್ರಿ ಮತ್ತು ಸಂಸದರಿಗೆ ಟ್ಯಾಗ್‌ ಮಾಡಿ ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

    ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

    ಚಿತ್ರದುರ್ಗ: ಮೊಳಕಾಲ್ಮೂರಿನಲ್ಲಿಂದು ಕಸ ಸಂಗ್ರಹಣಾ ವಾಹನಗಳಿಗೆ ಸ್ವಯಂ ವಾಹನ ಚಲಾಯಿಸುವ ಮೂಲಕ ಚಾಲನೆ ನೀಡಿದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು, ಸಾರ್ವಜನಿಕರು ಸ್ಚಚ್ಚತೆಯನ್ನು ಮೈಗೂಡಿಸಿಕೊಂಡು ಸ್ವಚ್ಚ, ಸುಂದರ ಹಾಗೂ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿ ಜಾಗೃತಿ ಮೂಡಿಸಿದರು.

    Sriramulu

    ಮೊಳಕಾಲ್ಮೂರಿನಲ್ಲಿಂದು ಪಟ್ಟಣ ಪಂಚಾಯಿತಿಯು ಆಯೋಜಿಸಿದ್ದ ಕಸಸಂಗ್ರಹಣಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಚಚ್ಚ ಭಾರತ ಸ್ವಾಥ್ಯ ಭಾರತವಾಗಿದೆ. ಮಹಾತ್ಮ ಗಾಂಧೀಜಿಯವರ ಆಶಯವೂ ಇದಾಗಿತ್ತು. ಮಹಾತ್ಮ ಗಾಂಧೀಜಿ ಅವರ ಆಶಯವನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಾಕಾರಗೊಳಿಸಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

    Sriramulu

    ಮಕ್ಕಳಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಸ್ವಚ್ಚತೆಯನ್ನು ಮೈಗೂಡಿಸಿಕೊಂಡು ತಮ್ಮ ಮನೆ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ಕಸವನ್ನು ಬೇರ್ಪಡಿಸಿ ಕಸಸಂಗ್ರಹಣಾ ವಾಹನಗಳಿಗೆ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಶೌಚಾಯಗಳನ್ನು ಬಳಕೆ ಮಾಡಬೇಕು. ಸ್ಚಚ್ಚತೆ ಕಾಪಾಡಲು ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಾರ್ವಜನಿಕರು ಸಹಕರಿಸಿ, ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    Sriramulu

    ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಇಸ್ಕಾನ್ ಸಂಸ್ಥೆಯ ವತಿಯಿಂದ ಪೌರಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಸಂದರ್ಭದಲ್ಲಿ ವಿವಿಧ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಚಿತ್ರದುರ್ಗ ಸಂಸದ

    ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಚಿತ್ರದುರ್ಗ ಸಂಸದ

    ತುಮಕೂರು: ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಕಸ ಸ್ವಚ್ಛಗೊಳಿಸಿದ್ದಾರೆ.

    ಸಂಸದ ನಾರಾಯಣಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ್ ಹೇಳಿಕೆಯನ್ನು ಪಾಲಿಸಿದ್ದಾರೆ. ಭಾನುವಾರ ನಡೆದ ಗಣೇಶೋತ್ಸವದಲ್ಲಿ ರಸ್ತೆಗಳು ಮಲೀನವಾಗಿತ್ತು. ಹಾಗಾಗಿ ನಾರಾಯಣಗೌಡ ಅವರು ನಮ್ಮ ಕಸ ನಾವು ತೆಗೆಯಬೇಕು ಎಂದು ಹೇಳುವ ಮೂಲಕ ರಸ್ತೆಗಳನ್ನು ಸ್ವಚ್ಛ ಮಾಡಿದ್ದಾರೆ.

    ನಾರಾಯಣಸ್ವಾಮಿ ಅವರು ಭಾನುವಾರ ಬೆಳಗ್ಗೆನಿಂದಲೂ ಗಣೇಶೋತ್ಸವದಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಮುಗಿದ ಮೇಲೆ ರಾತ್ರಿ ಎಲ್ಲಾ ರಸ್ತೆಗಳನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ಸಂಸದರಿಗೆ ಸ್ಥಳೀಯ ಬಿಜೆಪಿ ಮುಖಂಡರ ಎಸ್.ಆರ್ ಗೌಡ ಸೇರಿದಂತೆ ಹಲವರು ಸಾಥ್ ನೀಡಿದ್ದರು.

    ಸದ್ಯ ಸಂಸದರು ಭಾನುವಾರ ತುಮಕೂರು ಜಿಲ್ಲೆ ಶಿರಾನಗರದ ಮಲಿಕ್ ರೇಹಾನ್ ದರ್ಗಾ ಮತ್ತು ಬಸ್ ನಿಲ್ದಾಣಗಳಲ್ಲಿ ಸ್ವಚ್ಛಗೊಳಿಸಿದ್ದಾರೆ.

  • ಮಹಾತ್ಮ ಗಾಂಧೀಜಿಯಿಂದಾಗಿ ಸ್ವಚ್ಛ ಭಾರತ, ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ

    ಮಹಾತ್ಮ ಗಾಂಧೀಜಿಯಿಂದಾಗಿ ಸ್ವಚ್ಛ ಭಾರತ, ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ

    ರಾಯಚೂರು: ಜಿಲ್ಲೆಯ ನಗರ ರೈಲ್ವೇ ನಿಲ್ದಾಣ ಅಂದ್ರೆ ಈ ಹಿಂದೆ ಮೂಗು ಮುರಿಯುವಂತಿತ್ತು. ಆದರೆ ಈಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಿಂದಾಗಿ ಇಡೀ ರೈಲ್ವೇ ನಿಲ್ದಾಣದಲ್ಲಿ ಹೊಸ ಲೋಕವೇ ಸೃಷ್ಟಿಯಾದಂತಾಗಿದೆ.

    ಈ ಹಿಂದೆ ಸ್ವಚ್ಛ ಭಾರತ ಅಭಿಯಾನದ ಸರ್ವೆಯಲ್ಲಿ ಕೆಳಗಡೆಯಿಂದ ನಾಲ್ಕನೇ ಸ್ಥಾನ ಪಡೆದು ಅಪಕೀರ್ತಿಗೆ ಒಳಗಾಗಿದ್ದ ರಾಯಚೂರು ರೈಲ್ವೇ ನಿಲ್ದಾಣ ಈಗ ಸಂಪೂರ್ಣ ಬದಲಾಗಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸೂಚನೆಯಂತೆ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ರಾಯಚೂರು ನಿಲ್ದಾಣ ದೇಶದ ನೂರು ಸ್ವಚ್ಛ ನಿಲ್ದಾಣಗಳ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಿದೆ.

    ಸ್ವಚ್ಛ ರೈಲು ಅಭಿಯಾನದಲ್ಲೂ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ, ಸ್ವಚ್ಛ ರೈಲು ಶೀರ್ಷಿಕೆಯಡಿ ಇಡೀ ರೈಲ್ವೇ ನಿಲ್ದಾಣ ಈಗ ಗಾಂಧೀಮಯವಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿ ಅವರು ರಾಯಚೂರಿನಿಂದ ಮಹಾರಾಷ್ಟ್ರಕ್ಕೆ ತೆರಳಿದ್ದ ನೆನಪನ್ನ ಮರುಕಳಿಸುವಂತೆ ಸುಂದರವಾದ ಚಿತ್ರಗಳನ್ನ ಇಡೀ ರೈಲ್ವೇ ನಿಲ್ದಾಣದ ತುಂಬಾ ಬಿಡಿಸಲಾಗಿದೆ. ಗಾಂಧಿಜೀ ಅವರ 150ನೇ ಜಯಂತಿ ಹಿನ್ನೆಲೆ ರಾಯಚೂರು ನಿಲ್ದಾಣ ಈಗ ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ ಎಂದು ರೈಲ್ವೇ ಸಲಹಾ ಸಮಿತಿ ಮಾಜಿ ಸದಸ್ಯ ಜಗದೀಶ್ ಗುಪ್ತಾ ಹೇಳಿದ್ದಾರೆ.

    ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಕಲಾವಿದರು ಗಾಂಧೀಜಿ ರಾಯಚೂರಿಗೆ ಬಂದಿದ್ದ ಕ್ಷಣಗಳಿಗೆ ಮರುಜೀವ ನೀಡಿದ್ದಾರೆ. ಉಪ್ಪಿನ ಸತ್ಯಾಗ್ರಹ ಸೇರಿ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳನ್ನ ಸುಂದರವಾಗಿ ಚಿತ್ರಿಸಲಾಗಿದೆ. ಅಲ್ಲದೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗಿದೆ. ಗಾಂಧೀಜಿ ಅವರ 150ನೇ ಜನ್ಮದಿನದ ನೆನಪಿಗಾಗಿ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಬಾಪೂಜಿ ಪುತ್ಥಳಿ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ದೇಶದ 10 ಸ್ವಚ್ಛ ರೈಲ್ವೇ ನಿಲ್ದಾಣಗಳನ್ನ ಆಯ್ಕೆ ಮಾಡಿ ವಿಶೇಷ ಕಲಾಚಿತ್ರಗಳಿಂದ ಸುಂದರಗೊಳಿಲಾಗಿದೆ. ಜಾನಪದ ಚಿತ್ರಗಳಿಗೆ ಸಿಖಂದರಬಾದ್ ರೈಲ್ವೇ ನಿಲ್ದಾಣವನ್ನ ಆಯ್ಕೆ ಮಾಡಿದ್ರೆ, ಸ್ವಚ್ಛ ಭಾರತ ಹಾಗೂ ಸ್ವಚ್ಛ ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ ಮಾಡಲಾಗಿದೆ. ಈಗ ರಾಯಚೂರು ರೈಲ್ವೇ ನಿಲ್ದಾಣ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳಲ್ಲೇ ಸುಂದರ ನಿಲ್ದಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ 6 ಲಕ್ಷ ರೂ. ದೇಣಿಗೆ ನೀಡಿದ ರಾಜಮೌಳಿ

    ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ 6 ಲಕ್ಷ ರೂ. ದೇಣಿಗೆ ನೀಡಿದ ರಾಜಮೌಳಿ

    ಬಳ್ಳಾರಿ: ಸ್ವಚ್ಛ, ಸ್ವಸ್ಥ ಮತ್ತು ಸುಂದರ ಬಳ್ಳಾರಿ ನಿರ್ಮಾಣದ ಮಹತ್ತರ ಉದ್ದೇಶದೊಂದಿಗೆ ಜಿಲ್ಲಾಡಳಿತ ಆರಂಭಿಸಿರುವ ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ಎಲ್ಲೆಡೆಯಿಂದ ಸಕರಾತ್ಮಕ ಬೆಂಬಲ ದೊರೆಯುತ್ತಿದ್ದು, ಈ ಅಭಿಯಾನಕ್ಕೆ ಈಗ ಸ್ವಂತ ಬಾಹುಬಲಿ ನಿರ್ದೇಶಕ ರಾಜಮೌಳಿ ಕೈ ಜೋಡಿಸಿದ್ದಾರೆ.

    ಶನಿವಾರ ಬಾಹುಬಲಿ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ರಾಜಮೌಳಿ ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ರಾಧಿಕಾ ಚಿತ್ರಮಂದಿರದ ಸಹ ಮಾಲೀಕ ಸಾಯಿರೊಂದಿಗೆ ಜೊತೆಗೂಡಿ ನಿರ್ದೇಶಕ ರಾಜಮೌಳಿ 6 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಜಿಲ್ಲಾಧಿಕಾರಿ ರಾಮಪ್ರಸಾತ ಮನೋಹರ್ ಗೆ ಹಸ್ತಾಂತರಿಸಿದರು.

    ಜಿಲ್ಲಾಡಳಿತ ಆರಂಭಿಸಿರುವ ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ಈಗಾಗಲೇ ಹಲವಾರು ಜನರು ಧನ ಸಹಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.

    ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಹುಬಲಿ ಚಿತ್ರ ವೀಕ್ಷಿಸಿದ ರಾಜಮೌಳಿ. ಡಬ್ಬಿಂಗ್ ಬಗ್ಗೆ ಹೇಳಿದ್ದು ಏನು?

  • ಮೈಸೂರಿನ ಮದುವೆ ಆಮಂತ್ರಣ ಪ್ರಧಾನಿ ಮೋದಿಯಿಂದ ವೈರಲಾಯ್ತು!

    ಮೈಸೂರಿನ ಮದುವೆ ಆಮಂತ್ರಣ ಪ್ರಧಾನಿ ಮೋದಿಯಿಂದ ವೈರಲಾಯ್ತು!

    – ಮಗಳ ಮದ್ವೆ ಕಾಗದದಲ್ಲಿ ಸ್ವಚ್ಛ ಭಾರತ ಲೋಗೋ ಪ್ರಿಂಟ್
    – ಪ್ರಧಾನಿಯಿಂದ ಸಹೋದರನ ಟ್ವೀಟ್ ರೀಟ್ವೀಟ್

    – ಅಶ್ವಥ್ ಸಂಪಾಜೆ
    ಬೆಂಗಳೂರು: ನಿಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ದೇಶದ ಪ್ರಧಾನಿಯೇ ಮೆಚ್ಚಿದರೆ ನಿಮಗೆ ಹೇಗನಿಸುತ್ತೆ..? ಮೈಸೂರು ಮೂಲದ ಉದ್ಯಮಿಯೊಬ್ಬರ ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಮಾರು ಹೋಗಿದ್ದಾರೆ.

    ಸ್ವಚ್ಛ ಭಾರತಕ್ಕೆ ಕೈ ಜೋಡಿಸುವ ವ್ಯಕ್ತಿಗಳನ್ನು ಆಗಾಗ ತಮ್ಮ ಮನ್‍ಕೀ ಬಾತ್‍ನಲ್ಲಿ ನೆನಪಿಸಿಕೊಳ್ಳುವ ಪ್ರಧಾನಿ ಮೋದಿ, ಇದೀಗ ಮೈಸೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರ ಮದುವೆ ಕಾಗದವನ್ನು ಅದರೊಳಗಿನ ಸುಂದರ ಆಶಯಕ್ಕಾಗಿ ರೀ ಟ್ವೀಟ್ ಮಾಡಿದ್ದಾರೆ.

    ಹೌದು, ಡಿ ದೇವರಾಜ್ ಅರಸ್ ರಸ್ತೆಯಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಆಕಾಶ್ ಅವರು ಸ್ವಚ್ಛ ಭಾರತ ಲೋಗೋ ಇರುವ ತಮ್ಮ ಸಹೋದರಿಯ ಮದುವೆ ಆಹ್ವಾನ ಪತ್ರಿಕೆಯನ್ನು ಏಪ್ರಿಲ್ 1 ರಂದು ಮೋದಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಮೋದಿ ಅವರು ಭಾನುವಾರ ಸಂಜೆ ರೀ ಟ್ವೀಟ್ ಮಾಡಿದ್ದು ಈಗ ವೈರಲ್ ಆಗಿದೆ.

    ಸ್ವಚ್ಛ ಭಾರತದ ಲೋಗೋವನ್ನು ಪ್ರಕಟಿಸಿದ್ದು ಯಾಕೆ ಎಂದು ಪಬ್ಲಿಕ್ ಟಿವಿ ಕೇಳಿದ್ದಕ್ಕೆ, ನಾವು ಮೂಲತಃ ಗುಜರಾತ್‍ನವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದೇವೆ. ನನ್ನ ತಂದೆಯವರಿಗೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಬಹಳ ಇಷ್ಟವಾಗಿದೆ. ಏಪ್ರಿಲ್ 28 ರಂದು ರಾಜಸ್ಥಾನದ ಜೋದ್‍ಪುರದಲ್ಲಿ ನನ್ನ ಸಹೋದರಿಯ ಮದುವೆ ಇದೆ. ಈ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಏನಾದರೂ ಒಂದು ಉತ್ತಮ ಸಂದೇಶವನ್ನು ತಿಳಿಸುವ ಉದ್ದೇಶದಿಂದ ತಂದೆಯವರು ಸ್ವಚ್ಛ ಭಾರತದ ಲೋಗೋವನ್ನು ಪ್ರಿಂಟ್ ಹಾಕಿಸಿದ್ದಾರೆ ಎಂದು ತಿಳಿಸಿದರು.

    ನರೇಂದ್ರ ಮೋದಿಯವರ ಈ ಹಿಂದೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬ ನೆಲೆಸಿದೆ. ಹಿಂದಿನಿಂದಲೂ ನಾವು ಮೋದಿ ಅವರ ಕೆಲಸ ಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಕುಟುಂಬ ಸದಸ್ಯರಿಗೆ ಮೋದಿ ಅಂದ್ರೆ ಅಚ್ಚುಮೆಚ್ಚು. ಈ ಹಿಂದೆ ನನ್ನ ತಂದೆ ಬಿಸಿನೆಸ್ ಮಾಡಲು ಮೈಸೂರಿಗೆ ಬಂದಿದ್ದರು. 12 ವರ್ಷ ಮೈಸೂರಿನಲ್ಲಿ ಇದ್ದು ಬಳಿಕ ಗುಜರಾತ್‍ಗೆ ಮರಳಿದ್ವಿ. ಇದಾದ ಬಳಿಕ 2009ರಲ್ಲಿ ಮೈಸೂರಿಗೆ ಪುನಃ ಬಂದು ಈಗ ಇಲ್ಲೇ ನೆಲೆಸಿದ್ದೇವೆ. ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರ್ ಪದವಿ ಓದಿದ್ದೇನೆ ಎಂದರು.

    ಫಾಲೋ ಮಾಡಿದ್ರು: ಆಕಾಶ್ ಅವರ  ಟ್ವೀಟನ್ನು ಮೋದಿ ರೀಟ್ವೀಟ್ ಮಾಡಿದ್ದು ಮಾತ್ರ ಅಲ್ಲದೇ ಈಗ ಅವರನ್ನು ಫಾಲೋ ಮಾಡಿದ್ದಾರೆ. ಮೋದಿಯವರು ಇದುವರೆಗೆ ಒಟ್ಟು 1,698 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬನಾಗಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಆಕಾಶ್ ಸಂತಸ ಹಂಚಿಕೊಂಡಿದ್ದಾರೆ.

    ಸಾಫ್ಟ್ ವೇರ್  ಎಂಜಿನಿಯರ್ ಆಗಿರುವ ಆಕಾಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉದ್ಯಮಿ, ಬ್ಲಾಗರ್, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಎಂದು ತಮ್ಮ ವೃತ್ತಿ ವಿವರನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ಧೋನಿ ಅಭಿಮಾನಿ ಮತ್ತು ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವ ವ್ಯಕ್ತಿ ಎಂದು ತಮ್ಮ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದಾರೆ.

    ವೈರಲ್ ಟ್ವೀಟ್: ಸೋಮವಾರ ರಾತ್ರಿ ವೇಳೆಗೆ ಈ ಟ್ವಿಟನ್ನು 2,336 ಜನ ರೀ ಟ್ವೀಟ್ ಮಾಡಿದ್ರೆ, 7052 ಮಂದಿ ಲೈಕ್ ಮಾಡಿದ್ದಾರೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುರೇಶ್ ಪ್ರಭು, ಮೈಸೂರು ಸಂಸದ ಪ್ರತಾಪ್ ಸಿಂಹ, ಮಾಜಿ ರಕ್ಷಣಾ ಸಚಿವ ಹಾಲಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ರೀ ಟ್ವೀಟ್ ಮಾಡಿದ್ದಾರೆ.