Tag: Swachcha Bharat

  • ನಿನ್ನೆ ಮೈಸೂರಿನಾದ್ಯಂತ ಮೋದಿಮಯ-ಇಂದು ಮಹಾರಾಜ ಕಾಲೇಜು ಮೈದಾನವೆಲ್ಲ ಕಸಮಯ

    ನಿನ್ನೆ ಮೈಸೂರಿನಾದ್ಯಂತ ಮೋದಿಮಯ-ಇಂದು ಮಹಾರಾಜ ಕಾಲೇಜು ಮೈದಾನವೆಲ್ಲ ಕಸಮಯ

    ಮೈಸೂರು: ಸೋಮವಾರ ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರಿಂದ ಮಹಾರಾಜ ಕಾಲೇಜು ಮೈದಾನದ ಮೋದಿಮಯವಾಗಿತ್ತು. ಆದ್ರೆ ಇಂದು ಅದೇ ಮೈದಾನವೆಲ್ಲ ಕಸಮಯವಾಗಿದೆ.

    ಮಹರಾಜ ಕಾಲೇಜು ಮೈದಾನದ ತುಂಬೆಲ್ಲಾ ರಾಶಿ ರಾಶಿ ನೀರಿನ ಪ್ಯಾಕೇಟ್ ಗಳು ಎಲ್ಲೆಂದರಲ್ಲಿ ಬಿದ್ದಿವೆ. ಕಾರ್ಯಕ್ರಮದ ಆಯೋಜಕರು ಅಗತ್ಯಕ್ಕಿಂತ ಹೆಚ್ಚಿನ ನೀರಿನ ಪ್ಯಾಕೇಟ್ ತರಿಸಿದ್ದರಿಂದ ಮೈದಾನದ ತುಂಬೆಲ್ಲಾ ಬಿದ್ದಿವೆ. ವ್ಯರ್ಥವಾಗಿ ಬಿದ್ದಿರುವ ಪ್ಯಾಕೇಟ್ ಗಳನ್ನು ವಿದ್ಯಾರ್ಥಿಗಳು ಶೇಖರಣೆ ಮಾಡಿ ಮೈದಾನ ಸ್ವಚ್ಛಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?

    ಫೆಬ್ರವರಿ 04ರಂದು ಬೆಂಗಳೂರಿಗೆ ಪ್ರಧಾನಿಗಳು ಆಗಮಿಸಿದ್ದ ವೇಳೆಯೂ ಕಾರ್ಯಕ್ರಮದ ಬಳಿಕ ಅರಮನೆ ಮೈದಾನವೆಲ್ಲಾ ಕಸದಿಂದ ತುಂಬಿತ್ತು. ಈಗ ಮೈಸೂರಿನಲ್ಲಿ ಇದೇ ಕೆಲಸ ಪುನಾರವರ್ತಿತವಾಗಿದೆ. ಸಮಾವೇಶದ ಬಳಿಕ ಬಿಜೆಪಿ ಮುಖಂಡರು ಮೈದಾನದತ್ತ ತಿರುಗಿಯೂ ನೋಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೋದಿ ಅವರ ಕನಸಿನ ಸ್ವಚ್ಛ ಭಾರತಕ್ಕೆ ರಾಜ್ಯ ಬಿಜೆಪಿ ನಾಯಕರು ಮರೆತು ಬಿಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಇದನ್ನೂ ಓದಿ: ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

  • ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಜೈಪುರ: ರಾಜಸ್ಥಾನದ ರಾಜಧಾನಿ ಗುಲಾಬಿ ನಗರದಲ್ಲಿ ಬಿಜೆಪಿ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನ ಸರ್ಕಾರದ ಆರೋಗ್ಯ ಸಚಿವರಾಗಿರುವ ಕಾಲಿಚಂದ್ರನ್ ಸರಾಫ್ ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸಚಿವರನ್ನು ಪ್ರಶ್ನಿದ್ರೆ ಅದೇನು ದೊಡ್ಡ ವಿಷಯವಲ್ಲ ಅಂತಾ ಹೇಳಿದ್ದಾರೆ.

    ಜೈಪುರ ಮುನ್ಸಿಪಲ್ ಕಾರ್ಪೋರೇಷನ್ ನಗರವನ್ನು ಸ್ವಚ್ಛ ಭಾರತ ಯೋಜನಡಿಯ ಪಟ್ಟಿಯಲ್ಲಿ ಮೇಲೆ ತರಲು ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ. ಆದ್ರೆ ರಾಜ್ಯ ಸಚಿವರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಸಾಮಾನ್ಯವಾಗಿ ಸಾರ್ವಜನಿಕರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವ ವ್ಯಕ್ತಿಗಳಿಗೆ 200 ರೂ. ದಂಡ ವಿಧಿಸಲಾಗುತ್ತದೆ. ಫೋಟೋ ವೈರಲ್ ಆಗುತ್ತಿದ್ದಂತೆ ಸಚಿವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಮಾತನಾಡುವುದಕ್ಕೆ ಅದೇನು ಅಂತಹ ದೊಡ್ಡ ವಿಷಯವಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

    ನಾಚಿಕೆಯ ಕೆಲಸ: ಸ್ವಚ್ಛ ಭಾರತ್ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಹಣವನ್ನು ವ್ಯಯ ಮಾಡುತ್ತಿದೆ. ಬಿಜೆಪಿಯ ಇಂತಹ ನಾಯಕರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಚಿವರು ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದೊಂದು ನಾಚಿಕೆಗೇಡಿನ ಕೆಲಸ ಎಂದು ರಾಜಸ್ಥಾನದ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಅರ್ಚನಾ ಶರ್ಮಾ ಗುಡುಗಿದ್ದಾರೆ.

    ಬಿಜೆಪಿ ವಿರೋಧಿಗಳು ಸ್ವಚ್ಛ ಭಾರತಕ್ಕೆ ಕಾಲಿಚಂದ್ರನ್ ಸರಾಫ್ ಉಡುಗೊರೆ ನೀಡಿದ್ದಾರೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿ ಟೀಕಿಸುತ್ತಿದ್ದಾರೆ.

    ಈ ಹಿಂದೆ ಧೋಲ್‍ಪುರ ಉಪ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಸಚಿವರಾದ ಕಾಲಿಚಂದ್ರನ್ ಸರಾಫ್ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ನಾನು ಚುನಾವಣಾ ಪ್ರಚಾರದ ಒತ್ತಡದಲ್ಲಿ ಇದ್ದಿದರಿಂದ ಅಂದು ನನಗೆ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ ಅಂತಾ ಅರ್ಚನಾ ಶರ್ಮಾ ತಿಳಿಸಿದ್ದಾರೆ.

    ಕೋಟಾ ಕ್ಷೇತ್ರದ ಬಿಜೆಪಿ ನಾಯಕ ಅಶೋಕ್ ಚೌಧರಿ ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೆ ಅವರ ಆಡಳಿಯ ವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಬಿಜೆಪಿ ರಾಷ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕೆಂದು ಎಂದು ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಮಾತನಾಡಿರುವ ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ರಾಜಸ್ಥಾನದಲ್ಲಿ ನಡೆದ ಮೂರು ಕ್ಷೇತ್ರಗಳ (ಎರಡು ಲೋಕಸಭಾ, ಒಂದು ವಿಧಾನಸಭಾ ಕ್ಷೇತ್ರ)ಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಇತ್ತೀಚಿನ ಕೆಲವು ದಿನಗಳಿಂದ ಆಡಳಿತ ಸರ್ಕಾರ ಅನಗತ್ಯ ವಿಷಯಗಳಿಗಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

  • ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಯುವಕ-ಯುವತಿ

    ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಯುವಕ-ಯುವತಿ

    ರಾಯ್ಪುರ: ಯುವ ಜೋಡಿಯೊಂದು ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿರುವ ಘಟನೆ ಛತ್ತೀಸ್‍ಘಢ ರಾಜ್ಯದ ಬಿಸಲಾಪುರದಲ್ಲಿ ನಡೆದಿದೆ. ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗುವ ಮೂಲಕ ಪ್ರತಿಯೊಬ್ಬರು ತಮ್ಮ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂಬ ಸಂದೇಶವನ್ನು ನವಜೋಡಿ ನೀಡಿದೆ.

    ಶಬಾ ನವಾಜ್ ಮತ್ತು ಸರಫರಾಜ್ ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಜೋಡಿ. 2017 ಮಾರ್ಚ್ ನಲ್ಲಿ ಶಬಾ ಮತ್ತು ಸರಫರಾಜ್ ಮದುವೆ ನಿರ್ಣಯವಾಗಿತ್ತು. ಆದ್ರೆ ಶಬಾ ಪತಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದ್ರೆ ಮಾತ್ರ ಮದುವೆ ಆಗುತ್ತೇನೆ ಎಂದು ಷರತ್ತು ವಿಧಿಸಿದ್ದರು.

    ಸರಫರಾಜ್ 2017 ಮೇ ನಲ್ಲಿ ಸರ್ಕಾರಕ್ಕೆ ಶೌಚಾಲಯ ನಿರ್ಮಾಣಕ್ಕಾಗಿ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಸರ್ಕಾರದ ಸಹಾಯ ಧನದಿಂದ ಸರಫರಾಜ್ ಜೂನ್‍ನಲ್ಲಿಯೇ ಶೌಚಾಲಯ ನಿರ್ಮಿಸಿದ್ದರು.

    ಸರಫರಾಜ್ ಬಾವಿ ಪತ್ನಿಗಾಗಿ ಶೌಚಾಲಯ ನಿರ್ಮಿಸಿದ ವಿಷಯ ಶಬಾ ಪೋಷಕರಿಗೆ ತಿಳಿದಿದೆ. ಎರಡು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಬ್ಬರೂ ಜನವರಿ 21 ರಂದು ಮದುವೆ ಆಗಿದ್ದಾರೆ. ಜನವರಿ 24ರಂದು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಶಬಾ ಮತ್ತು ಸರಫರಾಜ್ ಇಬ್ರೂ ಮತೊಮ್ಮೆ ನಗರದ ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿದ್ದಾರೆ. ಪ್ರತಿ ಮನೆಯಲ್ಲಿ ಶೌಚಾಲಯವಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ಶೌಚಾಲಯ ನಿರ್ಮಾಣ ಮಾಡುವುದರಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಲಿವೆ ಎಂದು ನವದಂಪತಿ ಹೇಳಿದ್ದಾರೆ.

  • ಹೊಸದಾಗಿ ಕಟ್ಟಿಸಿದ್ದ ಶೌಚಾಲಯಕ್ಕೆ ಪೂಜೆ ಸಲ್ಲಿಸಿದ ಮಹಿಳೆಯರು

    ಹೊಸದಾಗಿ ಕಟ್ಟಿಸಿದ್ದ ಶೌಚಾಲಯಕ್ಕೆ ಪೂಜೆ ಸಲ್ಲಿಸಿದ ಮಹಿಳೆಯರು

    ಪಾಟ್ನಾ: ಬಿಹಾರದ ಗೋಪಾಲಗಂಜ್ ಜಿಲ್ಲೆಯ ಕರ್ಣಾಪುರ ಪಂಚಾಯ್ತಿ ವ್ಯಾಪ್ತಿಯ ಗ್ರಾಮದ ಮಹಿಳೆಯರು ತಮ್ಮ ಮನೆಗಳಲ್ಲಿ ಹೊಸದಾಗಿ ಕಟ್ಟಿಸಿರುವ ಶೌಚಾಲಯಕ್ಕೆ ಪೂಜೆ ಸಲ್ಲಿಸಿದ್ದಾರೆ.

    ಹೊಸ ಶೌಚಾಲಯದ ಮುಂದೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಲ್ಲಿನ ಮಹಿಳೆಯರು ಶೌಚಾಲಯವನ್ನು `ಇಜ್ಜತ್ ಘರ್’ (ಮರ್ಯಾದಾ ಗೃಹ) ಎಂದು ಕರೆದಿದ್ದು, ಮಹಿಳೆಯರಿಗೆ ಘನತೆ ಮತ್ತು ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ಪಟ್ನಾದಿಂದ 35 ಕಿ,ಮೀ ದೂರದಲ್ಲಿರೋ ಬಲಿಯಾವನ್ ಗ್ರಾಮದಲ್ಲಿ ಮಹಿಳೆಯೊಬ್ಬರು ಬಹಿರ್ದೆಸೆಗೆ ಹೋಗಿದ್ದಾಗ ಅವರ ಮೇಲೆ ಅತ್ಯಾಚಾರ ನಡೆದಿತ್ತು.

    ಗೋಪಾಲಗಂಜ್ ಜಿಲ್ಲೆಯ ಜಿಲ್ಲಾಧಿಕಾರಿ ಸೈಕಲ್‍ನಲ್ಲಿ ಗ್ರಾಮದತ್ತ ಬಂದಾಗ ರಸ್ತೆಯ ಎರಡು ಬದಿಗಳಲ್ಲಿ ಮಹಿಳೆಯರು ಕೈಯಲ್ಲಿ ದೀಪ ಹಿಡಿದು ನಿಂತಿದ್ದರು. ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳಬೇಕೆಂದು ಕಷ್ಟಪಟ್ಟು ದುಡಿದ ಮಹಿಳೆಯರ ಶ್ರಮವನ್ನ ಶ್ಲಾಘಿಸಿದ್ರು.

    ಗ್ರಾಮದ ಮಹಿಳೆಯೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಎರಡಂತಸ್ತಿನ ದೊಡ್ಡ ಮನೆಯಲ್ಲಿ ವಾಸವಾಗಿದ್ರೂ ತನ್ನ ಮನೆಯಲ್ಲಿ ಶೌಚಾಲಯವಿರಲಿಲ್ಲ ಎಂದಿದ್ದಾರೆ.

    ನನ್ನ ಪತಿ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮದುವೆಗೆ ಮುಂಚೆ ನಾನು ಇವರ ಮನೆಯಲ್ಲಿ ಶೌಚಾಲಯ ಇರುತ್ತದೆ ಎಂದುಕೊಂಡಿದ್ದೆ. ಯಾಕಂದ್ರೆ ಈ ಮನೆ ಕಟ್ಟಲು ತುಂಬಾ ಹಣ ಖರ್ಚು ಮಾಡಿದ್ದರು. ಆದ್ರೆ ಮೊದಲ ದಿನ ಮನೆಗೆ ಬಂದಾಗ ಮನೆಯಲ್ಲಿ ಶೌಚಾಲಯವೇ ಇಲ್ಲದಿರುವುದು ನೋಡಿ ನನಗೆ ಆಶ್ಚರ್ಯವಾಗಿತ್ತು ಅಂತ ಹೇಳಿದ್ರು.

     

  • ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

    ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

    ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಈಗ ಕೇಂದ್ರ ಸಚಿವರೊಬ್ಬರು ಸಾರ್ವಜನಿಕವಾಗಿ ಮೂತ್ರ ಮಾಡುವ ಮೂಲಕ ಅವಮಾನ ಮಾಡಿದ್ದಾರೆ.

    ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಈಗ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

    ರಾಧಾ ಮೋಹನ್ ಸಿಂಗ್ ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಪ್ರದೇಶದ ಮೋತಿಹಾರಿ ಎಂಬ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಚಿವರು ಅಂಗರಕ್ಷಕರ ಕಾವಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿರುವ ಗೋಡೆಯೊಂದರ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ.

    ಸಚಿವರು ಮೂತ್ರ ವಿಸರ್ಜನೆ ಮಾಡಿರುವ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ್ದು ಸಾಮಾಜಿಕ ಜಾಲತಾಣದಲ್ಲಿ ಜನರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    https://twitter.com/OneTipOneHand_/status/880299681036750848

  • ರಾಯಚೂರು: ಸಾಮೂಹಿಕ ವಿವಾಹದಲ್ಲಿ ಸ್ವಚ್ಛ ಭಾರತ ಅಭಿಯಾನ

    ರಾಯಚೂರು: ಸಾಮೂಹಿಕ ವಿವಾಹದಲ್ಲಿ ಸ್ವಚ್ಛ ಭಾರತ ಅಭಿಯಾನ

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನವಲಕಲ್ ನಲ್ಲಿ ಹಮ್ಮಿಕೊಂಡಿರುವ 171 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ರಾಯಚೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕುರ್ಮಾರಾವ್ ಸ್ವಚ್ಛ ಭಾರತ್ ಅಭಿಯಾನ ನಡೆಸಿದರು.

    ಅಧಿಕಾರಿಗಳು ನವ ದಂಪತಿಗಳಿಗೆ ಮನವಿ ಪತ್ರ ನೀಡಿ ಶುಭ ಹಾರೈಸುವ ಜೊತೆಗೆ ಕುಟುಂಬದ ಆರೋಗ್ಯ, ಗೌರವ ಹಾಗೂ ಸ್ವಚ್ಛತೆಗಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಮನವಿ ಮಾಡಿದರು.

    ವಿಧಾನ ಪರಿಷತ್ ಸದಸ್ಯ ಎನ್. ಎಸ್.ಬೋಸರಾಜು ತಮ್ಮ 70ನೇ ವರ್ಷದ ಹುಟ್ಟು ಹಬ್ಬ ನಿಮಿತ್ತ ನವಲಕಲ್ ಬೃಹನ್ಮಠದಲ್ಲಿ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿದ್ದರು. ನವ ಜೋಡಿಗಳು ಸೇರಿದಂತೆ ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳೇ ನವ ದಂಪತಿಗಳಿಗೆ ಮನವಿ ಪತ್ರ ಹಂಚಿದ್ದಾರೆ. ಬಯಲು ಶೌಚ ಮುಕ್ತ ಗ್ರಾಮ ನಮ್ಮ ಧ್ಯೇಯವಾಗಿರಲಿ ಅಂತ ವಿವಾಹ ಕಾರ್ಯಕ್ರಮದಲ್ಲಿ ಅಭಿಯಾನ ನಡೆಸಲಾಯಿತು.

    ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೆ.ಶಿವನಗೌಡ ನಾಯಕ್, ರಾಯಚೂರು ಸಂಸದ ಬಿ.ವಿ.ನಾಯಕ್, ಶಾಸಕರಾದ ಎನ್.ಎಸ್.ಬೋಸರಾಜು, ಹಂಪಯ್ಯನಾಯಕ್, ಡಾ.ಶಿವರಾಜ್ ಪಾಟೀಲ್ ಸೇರಿ ಇತರರು ಭಾಗವಹಿಸಿದ್ದರು.

     

  • ಅಕ್ರಮ ಚಟುವಟಿಕೆಗಳ ತಾಣ ಈಗ ಸುಂದರ ಪಾರ್ಕ್- ಫ್ಲೈಓವರ್ ಕೆಳಗೆ ಉದ್ಯಾನವನ ನಿರ್ಮಾಣ

    ಅಕ್ರಮ ಚಟುವಟಿಕೆಗಳ ತಾಣ ಈಗ ಸುಂದರ ಪಾರ್ಕ್- ಫ್ಲೈಓವರ್ ಕೆಳಗೆ ಉದ್ಯಾನವನ ನಿರ್ಮಾಣ

    – ಮಂಗಳೂರಿನ ಗುರುಚಂದ್ರ ಹೆಗ್ಡೆ ನಮ್ಮ ಹೀರೋ

    ಮಂಗಳೂರು: ಪ್ರಧಾನಿ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯಿಂದ ಪ್ರೇರಿತರಾದ ಉದ್ಯಮಿಯೊಬ್ಬರು ಅಕ್ರಮ ಚಟುವಟಿಕೆಗಳ ತಾಣ ಹಾಗೂ ಡಂಪಿಂಗ್ ಯಾರ್ಡ್ ಆಗಿದ್ದ ಹೈವೇ ಫ್ಲೈ ಓವರ್ ಕೆಳಗಿನ ಜಾಗವನ್ನು ಸುಂದರ ಪಾರ್ಕ್ ಮಾಡಿದ್ದಾರೆ. ಗಬ್ಬೆದ್ದು ನಾರುತ್ತಿದ್ದ ಆ ಸ್ಥಳ ಈಗ ಎಲ್ಲರ ಆಕರ್ಷಣೆಯಾಗಿದೆ. ಇದಕ್ಕೆ ಕಾರಣರಾದವರು ನಮ್ಮ ಮಂಗಳೂರಿನ ಪಬ್ಲಿಕ್ ಹೀರೋ.

    ಮಂಗಳೂರಿನ ಕೂಳೂರು ನಿವಾಸಿ ವಿ.ಜಿ.ಗುರುಚಂದ್ರ ಹೆಗ್ಡೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಟ್ರಾನ್ಸ್‍ಪೋರ್ಟ್ ಉದ್ಯಮ ಆರಂಭಿಸಿದ್ದಾರೆ. ಕೂಳೂರಿನಲ್ಲಿ ಚಿಕ್ಕದಾದ ಒಂದು ಕಚೇರಿಯನ್ನು ಮಾಡಿಕೊಂಡಿದ್ದಾರೆ. ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‍ನ ಕೆಳಭಾಗ ಗೂಡಂಗಡಿಗಳ ತಾಣವಾಗಿತ್ತು. ಎಲ್ಲರೂ ಕಸ ಕಡ್ಡಿ ತಂದು ಇಲ್ಲಿ ಹಾಕುತ್ತಿದ್ದರು. ಇದರಿಂದ ದುರ್ವಾಸನೆ ಬೀರುತ್ತಿತ್ತು. ರಾತ್ರಿಯಾದ್ರೆ ಇಲ್ಲಿ ಅಕ್ರಮ ಚಟುವಟಿಕೆಗಳು ನಡೀತಿದ್ವು. ಇಂದು ಅದೇ ಜಾಗವನ್ನು ಗುರುಚಂದ್ರ ಅವರು ಸುಂದರ ಪಾರ್ಕ್ ಮಾಡಿದ್ದಾರೆ.

    ಪಾಲಿಕೆಯ ಅಧಿಕಾರಿಗಳ ಸಹಾಯದಿಂದ ಅಕ್ರಮ ಗೂಡಂಗಡಿಗಳನ್ನು ತೆರವು ಮಾಡಿಸಿದ್ದಾರೆ. 4 ಲಕ್ಷ ರೂಪಾಯಿ ಖರ್ಚು ಮಾಡಿ ಸುಂದರವಾದ ಪಾರ್ಕ್, ಫುಟ್‍ಪಾತ್, ವಾಕಿಂಗ್ ಟ್ರ್ಯಾಕ್ ಮಾಡಿಸಿದ್ದಾರೆ. ಫ್ಲೈ ಓವರ್ ಪಿಲ್ಲರ್‍ಗಳ ಮೇಲೆ ಸುಂದರ ಕಲಾಕೃತಿಗಳನ್ನು ಮೂಡಿಸಿದ್ದಾರೆ.

    ಗುರುಚಂದ್ರ ಹೆಗ್ಡೆಯವರು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನೂ ನಡೆಸುತ್ತಿದ್ದಾರೆ. ಇವರಿಂದ ಪ್ರೇರೇಪಿತರಾದವರು ತಮ್ಮ ಊರಲ್ಲೂ ಹೀಗೆ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ.

    https://www.youtube.com/watch?v=oua2LrHkXJ8