Tag: swaccha savrvekshan-2020. mysuru

  • ಸ್ವಚ್ಛ ಭಾರತ- 10 ಲಕ್ಷ ಜನ ನಗರ ಪಟ್ಟಿಯಲ್ಲಿ ಮೈಸೂರು ಬೆಸ್ಟ್

    ಸ್ವಚ್ಛ ಭಾರತ- 10 ಲಕ್ಷ ಜನ ನಗರ ಪಟ್ಟಿಯಲ್ಲಿ ಮೈಸೂರು ಬೆಸ್ಟ್

    ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಇಲಾಖೆ ಸ್ವಚ್ಛ ಸರ್ವೇಕ್ಷಣ್-2020 ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, 10 ಲಕ್ಷದೊಳಗಿನ ಜನಸಂಖ್ಯೆಯುಳ್ಳ ಸ್ವಚ್ಛ ನಗರಗಳ ವಿಭಾಗದಲ್ಲಿ ಮೈಸೂರು ಮೊದಲ ಸ್ಥಾನ ಪಡೆದಿದೆ.

    ದೇಶದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಗರಿಮೆಗೆ ಸತತ ನಾಲ್ಕನೇ ಬಾರಿ ಮಧ್ಯಪ್ರದೇಶದ ಇಂದೋರ್ ಪಾತ್ರವಾಗಿದೆ. ಎರಡನೇ ಸ್ಥಾನದಲ್ಲಿ ಸೂರತ್, ಮೂರನೇ ಸ್ಥಾನದಲ್ಲಿ ನವೀ ಮುಂಬೈ ಇದೆ.

    ಟಾಪ್ 20 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ನಗರ ಸ್ಥಾನ ಪಡೆದಿಲ್ಲ. ಆದರೆ 10 ಲಕ್ಷದೊಳಗಿನ ಜನಸಂಖ್ಯೆಯುಳ್ಳ ಸ್ವಚ್ಛ ನಗರಗಳ ವಿಭಾಗದಲ್ಲಿ ಮೈಸೂರು ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ನಗರಕ್ಕೆ ಅತ್ಯುತ್ತಮ ಸ್ವಸುಸ್ಥಿರ ನಗರ ಪ್ರಶಸ್ತಿ ದೊರೆತಿದೆ.

    ಸ್ವಚ್ಛ ನಗರಗಳ ಪಟ್ಟಿ ಪ್ರಕಟಿಸಿದ ಕೇಂದ್ರ ಸಚಿವ ಹರ್‍ದೀಪ್ ಪುರಿ ಮೈಸೂರಿನ ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದ್ರು. ಈ ವೇಳೆ ಮಂಜುಳಾ ನಂಜುಂಡ ಸ್ವಾಮಿ ಅವರು ಸಮುದಾಯಕ್ಕೆ ಟಾಯ್ಲೇಟ್ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಬಳಿಕ ಸಚಿವರು ಪೌರ ಕಾರ್ಮಿಕ ನಂಜುಂಡ ಸ್ವಾಮಿ ಜೊತೆ ಮಾತುಕತೆ ನಡೆಸಿದರು. ನಂಜುಂಡ ಸ್ವಾಮಿ ಕೊರೊನಾ ಪಾಸಿಟಿವ್ ಆಗಿ ಗುಣಮುಖರಾಗಿದ್ದಾರೆ. ಕೊರೊನಾದಿಂದ ಪಾಸಿಟಿವ್ ಆಗಿ ಮತ್ತೆ ಬಂದು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಂಜುಂಡ ಸ್ವಾಮಿ ಮಾಹಿತಿಯಿಂದ ಸಚಿವರು ಪುಲ್ ಖುಷಿಯಾದರು. ಸಚಿವರ ತಂಡ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದೆ.