ಹಾಸನ: ಕಾಂಗ್ರೆಸ್ (Congress) ಪಕ್ಷಕ್ಕೆ ಶಕ್ತಿ ತುಂಬಲು ಡಿ.5ರಂದು ಹಾಸನದ (Hassan) ಎಸ್.ಎಂ.ಕೃಷ್ಣನಗರದಲ್ಲಿ ಸ್ವಾಭಿಮಾನಿ ಸಮಾವೇಶ (Swabhimani Samavesha) ನಡೆಯಲಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸಮಾವೇಶದ ಮೂಲಕ ರಾಜ್ಯಕ್ಕೆ ನಮ್ಮ ಮುಖ್ಯಮಂತ್ರಿಗಳು (Siddaramaiah) ಒಂದು ಸಂದೇಶ ಕೊಡಲಿದ್ದಾರೆ. ಈ ಮೂಲಕ ರಾಜಕೀಯವಾಗಿ ಪಕ್ಷವನ್ನು ಸದೃಢಗೊಳಿಸಲು ಮತ್ತು ಒಂದು ಒಳ್ಳೆಯ ಆಡಳಿತ ಕೊಡುತ್ತಿದ್ದೇವೆ ಎಂಬ ಸಂದೇಶ ಹೋಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಮಾವೇಶದ ವಿರುದ್ಧ ಹೈಕಮಾಂಡ್‍ಗೆ ಪತ್ರ ಕಳುಹಿಸಿದ ವಿಚಾರವಾಗಿ, ವ್ಯಕ್ತಿಯ ಶಕ್ತಿ ನೋಡದೆ ಟೀಕೆ, ಟಿಪ್ಪಣಿ ಅಥವಾ ಪ್ರಶಂಸೆ ಮಾಡಲ್ಲ. ಭಿನ್ನಾಭಿಪ್ರಾಯ ಒಬ್ಬರಿಂದ ಒಬ್ಬರಿಗೆ ಇದ್ದೇ ಇರುತ್ತೆ. ಅವರ ಚಿಂತನೆ ತಕ್ಕಂತೆ ಬರೆದಿರುತ್ತಾರೆ. ಎಐಸಿಸಿಗೆ ಪತ್ರ ಹೋದ ಮೇಲೂ ಸಮಾವೇಶ ನಡೆಯುತ್ತಿದೆ ಎಂದರೆ ಎಐಸಿಸಿ ದೃಷ್ಟಿಯಿಂದಲೂ ಸಮಾವೇಶ ಸರಿ ಇದೆ ಎಂದರ್ಥ. ಭಿನ್ನಮತ ಮೂಡಿಸಲು ಈ ರೀತಿ ಮಾಡಿದ್ದಾರೆ. ಬೇರೆ ಪಕ್ಷದವರು ಪತ್ರ ಬರೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಯಾರ ಹೆಸರಿಲ್ಲ ಎಂದರೆ ಅದು ಫೇಕ್ ಲೆಟರ್. ಅವನು ಧೈರ್ಯವಂತ ಅಭಿಮಾನಿ ಆಗಿದ್ದರೆ ನೇರವಾಗಿ ಹೇಳಬೇಕಿತ್ತು. ಪತ್ರ ಬರೆದವನಿಗೆ ವ್ಯಕ್ತಿ, ಪಕ್ಷದ ಬಗ್ಗೆ ಮಾತನಾಡುವ ಧೈರ್ಯ ಇಲ್ಲ. ಅದಕ್ಕೆ ಒಂದು ಫೇಕ್ ಲೆಟರ್ ರೆಡಿ ಮಾಡಿ ಕಳುಹಿಸಿ ಗೊಂದಲ ಸೃಷ್ಟಿ ಮಾಡಿದ್ದಾನೆ ಎಂದಿದ್ದಾರೆ.
ರಾಯಚೂರು: ಹಿಂದುಳಿದ ಜಾತಿಗೆ ಸೇರಿದವನು, ಕುರಿ ಕಾಯುತ್ತಿದ್ದವನು 2 ಬಾರಿ ಸಿಎಂ ಆದನಲ್ಲಾ ಅಂತ ಬಿಜೆಪಿಗೆ (BJP) ಹೊಟ್ಟೆ ಉರಿ ಸಿಎಂ ಸಿದ್ದರಾಮಯ್ಯ (Siddaramaiah) ಲೇವಡಿ ಮಾಡಿದ್ದಾರೆ.
ರಾಯಚೂರಿನ (Raichur) ಮಾನ್ವಿಯಲ್ಲಿ ನಡೆದ ಕಾಂಗ್ರೆಸ್ ʻಸ್ವಾಭಿಮಾನಿʼ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾಷಣ ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಶಿಳ್ಳೆ, ಚಪ್ಪಾಳೆ ಸಂಭ್ರಮ ಮುಗಿಲು ಮುಟ್ಟಿತ್ತು. ಸಿಎಂ ʻಈ ಸ್ವಾಭಿಮಾʼ ಎನ್ನುತ್ತಿದ್ದಂತೆ ಕೇಕೆ, ಶಿಳ್ಳೆ ಹಾಕುವ ಮೂಲಕ ಜೈಕಾರ ಕೂಗಿದರು.
ಬಿಜೆಪಿ-ಜೆಡಿಎಸ್‌ನವರು ನಾನು 2ನೇ ಬಾರಿ ಸಿಎಂ ಆದ ಮೇಲೆ ಸುಳ್ಳು ಆರೋಪ ಮಾಡಲು ಶುರು ಮಾಡಿದ್ದಾರೆ. ಅದಕ್ಕೆ ಈ ಸ್ವಾಭಿಮಾನಿ ಸಭೆ ಮಾಡಿರುವುದು. ಇದರ ಮೂಲಕ, ನಿಮ್ಮ ಮೂಲಕ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ದೇವರಾಜು ಅರಸು ಬಳಿಕ 5 ವರ್ಷ ಅಧಿಕಾರ ಪೂರ್ಣಗೊಳಿಸಿದ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ. 5 ವರ್ಷದ ಹಲವು ಯೋಜನೆ ಜಾರಿಗೆ ಮಾಡಿದ್ದೇನೆ. ಯಾರೊಬ್ಬರು ಇನ್ನೊಬ್ಬರ ಮನೆ ಮುಂದೆ ಹೋಗಿ ಕೈ ಒಡ್ಡಬಾರದು, ಭಿಕ್ಷುಕರು ಈ ರಾಜ್ಯದಲ್ಲಿ ಇರಬಾರದು ಅಂತ ಅನ್ನಭಾಗ್ಯ ಯೋಜನೆ ಮಾಡಿದೆವು ಎಂದಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ರು ಆಗ ಏನೂ ಮಾಡಲಿಲ್ಲ. 1 ವರ್ಷ 2 ತಿಂಗಳಲ್ಲಿ ಏನೂ ಕೆಲಸ ಮಾಡಲಿಲ್ಲ. ʻಕೊಟ್ಟ ಕುದುರೆ ಏರದವನು ವೀರನೂ ಅಲ್ಲಾ ಶೂರನೂ ಅಲ್ಲಾʼ ಎಂದು ವ್ಯಂಗ್ಯವಾಡಿದ ಸಿಎಂ, 17 ಜನ ಶಾಸಕರನ್ನ ಬಿಜೆಪಿಯವರು ಕೊಂಡುಕೊಂಡು ಸರ್ಕಾರ ಮಾಡಿದ್ರು. ಒಬ್ಬೊಬ್ಬರಿಗೆ 25 ಲಕ್ಷ ರೂ. ಖರ್ಚು ಮಾಡಿದರು. ಯಡಿಯೂರಪ್ಪ ಸಿಎಂ ಆದ್ರೂ, ಬೊಮ್ಮಾಯಿ ಸಿಎಂ ಆದ್ರೂ ಏನೂ ಮಾಡಲಿಲ್ಲ ಬರೀ ಲೂಟಿ ಮಾಡಿದ್ರು. ನಂತ್ರ ಜನ ನೀವು ನಮಗೆ ಆಶಿರ್ವಾದ ಮಾಡಿದ್ರಿ. ಬಿಜೆಪಿ ,ಜೆಡಿಎಸ್‌ಗೆ ಯಾವಾಗಲೂ ಜನ ಬೆಂಬಲ ಆಶಿರ್ವಾದ ಇರಲಿಲ್ಲ. ನಾವು ಗೆದ್ದ ಮೇಲೆ 5 ಗ್ಯಾರೆಂಟಿ ಕೊಡ್ತಿವಿ ಅಂತ ಹೇಳಿದ್ದೇವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಬೊಬ್ಬರಿದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರ ಸಚಿವರಾದ್ರೂ ರಾಜ್ಯಕ್ಕೆ ಪ್ರಯೋಜನ ಆಗ್ತಿಲ್ಲ: ಕೃಷ್ಣಬೈರೇಗೌಡ ಟಕ್ಕರ್
ನಮ್ಮ ಸರ್ಕಾರ ಬಡವರಿಗೆ ಕಾರ್ಯಕ್ರಮ ಕೊಡುತ್ತಿರುವುದು ಬಿಜೆಪಿಗೆ ತಡೆದುಕೊಳ್ಳಲು ಆಗ್ತಿಲ್ಲ. ಮಹಿಳೆಯರು, ದಲಿತರಿಗೆ ಶಕ್ತಿ ತುಂಬುತ್ತಿದ್ದೇವೆ ಅದು ತಡೆದುಕೊಳ್ಳಲು ಆಗ್ತಿಲ್ಲ. ನನ್ನ ಹೆಂಡ್ತಿ ಎಂದೂ ರಾಜಕೀಯಕ್ಕೆ ಬಂದವಳಲ್ಲಾ, ಅಂತಹವಳನ್ನ ಇವತ್ತು ಬೀದಿಗೆ ತಂದಿದ್ದೀರಲ್ಲಾ, ಹೊರಗಡೆ ತಂದಿದ್ದೀರಲ್ಲಾ, ನಾನು ಏನ್ ತಪ್ಪು ಮಾಡಿದ್ದೇನೆ ಏನೂ ತಪ್ಪು ಮಾಡದಿದ್ದರೂ. ರಾಜಕೀಯವಾಗಿ ಕಪ್ಪು ಚುಕ್ಕೆ ಇಡಬೇಕು ಅಂತ ಇದನ್ನ ಮಾಡುತ್ತಿದ್ದಾರೆ. ನಾನು ಹಿಂದುಳಿದ ಜಾತಿಗೆ ಸೇರಿದವನು ಅನ್ನೋದೇ ಇದಕ್ಕೆ ಕಾರಣ. ಕುರಿ ಕಾಯುತ್ತಿದ್ದವನು 2 ಬಾರಿ ಸಿಎಂ ಆದನಲ್ಲಾ ಅಂತ ಹೊಟ್ಟೆಉರಿ. ಯಡಿಯೂರಪ್ಪ, ಅಶೋಕ್, ವಿಜಯಯೇಂದ್ರ, ಕುಮಾರಸ್ವಾಮಿಗೆ ಹೊಟ್ಟೆಉರಿ. ಇದನ್ನ ಜನ ನೀವು ಸಹಿಕೊಳ್ಳುತ್ತೀರಾ? ಸಮಸಮಾಜದ ಯೋಚನೆ ಅವರ ಪ್ರಕಾರ ನಾನು ಮಾಡಿದ ತಪ್ಪು ಎಂದು ತಿವಿದಿದ್ದಾರೆ.
ಯಾವುದೇ ಕಾರಣ ಇಲ್ಲದಿದ್ದರೂ ಪ್ರತಿದಿನ ರಾಜೀನಾಮೆ ಕೊಡಿ… ರಾಜೀನಾಮೆ ಕೊಡಿ… ರಾಜೀನಾಮೆ ಕೊಡಿ… ಅಂತ ಕೇಳಿ ಬೇಜಾರಾಗಿದೆ. ಆದ್ರೆ ನಿಮಗಾಗಿ ನನ್ನ ಹೋರಾಟ ಮುಂದುವರೆಸುತ್ತೇನೆ. ನಾನು ಹೆದರಿ ಓಡುವುದಿಲ್ಲ, ಯಾಕಂದ್ರೆ ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲಾ ನ್ಯಾಯಾಲಯಕ್ಕಿಂತಲೂ ಆತ್ಮಸಾಕ್ಷಿ ಮೇಲೆ ಇದೆ ಎನ್ನತ್ತಾ ಮತ್ತೊಮ್ಮೆ ಸಿಎಂ ಆತ್ಮಸಾಕ್ಷಿ ಹೇಳಿಕೆ ಪುನರುಚ್ಚರಿಸಿದರು. ಇದನ್ನೂ ಓದಿ: ರಾಜ್ಯದ ರಾಜಕೀಯ ಬೆಳವಣಿಗೆಗಳು ಸರಿಯಲ್ಲ, ಹೀಗೆ ಮುಂದುವರಿದ್ರೆ ಜನ ಕಲ್ಲಲ್ಲಿ ಹೊಡೀತಾರೆ: ಡಿ.ಕೆ.ಸುರೇಶ್
ಮಂಡ್ಯ: ನಿಮ್ಮ ಋಣವನ್ನು ಸಾಯುವವರೆಗೂ ಮರೆಯುವುದಕ್ಕೆ ಆಗಲ್ಲ. ನೀವು ನಮಗೆ ಪುನರ್ಜನ್ಮ ಕೊಟ್ಟಿದ್ದೀರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಂಡ್ಯ ಜನರಿಗೆ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲ್ಲ. ಅವರ ರೂಪದಲ್ಲಿ ಕಾಣುವ ನಿಮ್ಮೆಲ್ಲರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ. ಸುಮಲತಾ ಅಮ್ಮನಿಗೆ ಸಹಕಾರ, ಬೆಂಬಲ ಕೊಟ್ಟಿದ್ದೀರ. ಮಂಡ್ಯದಲ್ಲಿ ನಿಂತು ಮಾತನಾಡುವ ಯೋಗ್ಯತೆ ಕೊಟ್ಟಿದ್ದೀರಿ. ಇಲ್ಲಿಯೇ ನಿಂತು ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ ಎಂದು ಬಾಗಿ ವೇದಿಕೆಗೆ ನಮಸ್ಕರಿಸಿದರು.
ಒಂದು ವೇಳೆ ನಾವು ಈ ಚುನಾವಣೆ ಹಬ್ಬದಲ್ಲಿ ಸೋಲು ಕಂಡಿದ್ದರೆ ನಮ್ಮ ಪರಿಸ್ಥಿತಿ ಬಹಳ ಕಷ್ಟವಾಗುತಿತ್ತು. ಕೆಲವರು ತಮ್ಮ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡು ನಮ್ಮ ಪರ ಪ್ರಚಾರಕ್ಕೆ ನಿಂತರು. ನಿಮ್ಮ ಸಹಕಾರ, ಬೆಂಬಲ, ಪ್ರೀತಿಗೆ ನಾನು ಋಣಿಯಾಗಿದ್ದೇನೆ ಎಂದರು.
ತಪ್ಪು ತಿಳಿಯಬೇಡಿ, ಕೆಲವರಿಗೆ ರಾಜಕೀಯ ನಾಯಕರ ಕಾರ್ಯವನ್ನು ತಿಳಿಸಬೇಕಿದೆ. ಸಂಸದರ ಕೆಲಸ ಏನು? ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಕೆಲಸ ಏನು ಅಂತ ಅರಿವು ಮೂಡಿಸಬೇಕಿದೆ. ನಮ್ಮ ಮನೆ ಮೋರಿ ಕಟ್ಟಿದೆ ಬನ್ನಿ ಎಂದು ಶಾಸಕರಿಗೆ ಹೇಳುವುದಕ್ಕೆ ಆಗುತ್ತಾ? ಹಾಗೆಯೇ ನಾಯಕರು ತಮ್ಮ ವ್ಯಾಪ್ತಿಯ ಕಾರ್ಯವನ್ನು ಮಾಡುತ್ತಾರೆ ಎಂದು ತಿಳುವಳಿಕೆ ಮೂಡಿಸುವ ಪ್ರಯತ್ನ ನಡೆಸಿದರು.
ಇದೇ ವೇಳೆ ಅಭಿಷೇಕ್‍ನನ್ನು ಕರೆದು, ಮಗು ಚಿಕ್ಕ ಸಿನಿಮಾ ಮಾಡಿದೆ ಹಾರೈಸಿ. ಅಭಿ ನಮಗಿಂತ ಚಿಕ್ಕವನಾದರೂ ಸ್ಕ್ರೀನ್‍ನಲ್ಲಿ ರೊಮಾನ್ಸ್ ಮಾಡುವಾಗ ನಮಗಿಂತ ದೊಡ್ಡವನಾಗಿ ಕಾಣುತ್ತಾನೆ ಎಂದು ಕಿಚಾಯಿಸಿದರು.