Tag: SUV showroom

  • ಶೋರೂಮ್‍ನಲ್ಲಿ ರೈತನಿಗೆ ಅವಮಾನ – ಆನಂದ್ ಮಹಿಂದ್ರಾ ಹೇಳಿದ್ದೇನು?

    ಶೋರೂಮ್‍ನಲ್ಲಿ ರೈತನಿಗೆ ಅವಮಾನ – ಆನಂದ್ ಮಹಿಂದ್ರಾ ಹೇಳಿದ್ದೇನು?

    ನವದೆಹಲಿ: ಇತ್ತೀಚೆಗೆ ಕರ್ನಾಟಕದ ರೈತನೊಬ್ಬ ಬೊಲೆರೋ ಪಿಕ್‍ಅಪ್ ಟ್ರಕ್ ಖರೀದಿಸಲು ಶೋರೂಮ್‍ಗೆ ಹೋಗಿದ್ದಾಗ ಅಲ್ಲಿನ ಸೇಲ್ಸ್‍ಮ್ಯಾನ್ ರೈತನಿಗೆ ಅವಮಾನ ಮಾಡಿದ್ದಾಗಿ ಸುದ್ದಿಯಾಗಿತ್ತು. ಇದೀಗ ಕೈಗಾರಿಕೋದ್ಯಮಿ ಆನಂದ್ ಮಹಿಂದ್ರಾ ಈ ವಿಚಾರವಾಗಿ ಸಂದೇಶ ನೀಡಿದ್ದಾರೆ.

    ಮಂಗಳವಾರ ಸಾರ್ವಜನಿಕ ಪ್ರತಿಕ್ರಿಯೆಯಲ್ಲಿ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಮಹತ್ವದ ಬಗ್ಗೆ ಆನಂದ್ ಮಹಿಂದ್ರಾ ಒತ್ತಿ ಹೇಳಿದ್ದಾರೆ. ಮಹಿಂದ್ರಾ ಕಂಪನಿಯ ಮುಖ್ಯ ಉದ್ದೇಶ ಸಮುದಾಯ ಹಾಗೂ ಎಲ್ಲಾ ಪಾಲುದಾರರನ್ನು ಹೆಚ್ಚಿಸಲು ಅನುವು ಮಾಡಿ ಕೊಡುವುದು. ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಒಂದು ಪ್ರಮುಖ ಮೌಲ್ಯವಾಗಿದೆ ಎಂದು ಮಹಿಂದ್ರಾ ಸಿಇಒ ವಿಜಯ್ ನಕ್ರಾ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಮಾ.28 ರಿಂದ ಆರಂಭ

    ಈ ಕುರಿತು ವಿಜಯ್ ನಕ್ರಾ, ಆನಂದ್ ಮಹಿಂದ್ರಾ ಅವರ ಸಂದೇಶವನ್ನು ತಿಳಿಸಿದ್ದು ಘಟನೆಯ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಕಳೆದ ವಾರ ತುಮಕೂರು ಮೂಲದ ರೈತನೊಬ್ಬ ಬೊಲೆರೋ ಪಿಕ್‍ಅಪ್ ಟ್ರಕ್ ಖರೀದಿಸಲು ಶೋರೂಮ್‍ಗೆ ತೆರಳಿದ್ದ. ಆದರೆ ಶೋರೂಮ್‍ನ ಸೇಲ್ಸ್‍ಮ್ಯಾನ್ 10 ಲಕ್ಷ ರೂ.ಯ ಕಾರ್ ಅನ್ನು ಖರೀದಿಸಲು 10 ರೂ. ನಿನ್ನ ಬಳಿ ಇಲ್ಲ ಎಂದು ವ್ಯಂಗ್ಯ ಮಾಡಿದ್ದ. ಇದನ್ನು ರೈತ ಸವಾಲಾಗಿ ತೆಗೆದುಕೊಂಡು ಕೇವಲ ಒಂದು ಗಂಟೆಯಲ್ಲಿ 10 ಲಕ್ಷ ರೂ. ಯೊಂದಿಗೆ ಶೋರೂಮ್‍ಗೆ ಮರಳಿದ್ದ. ಇದನ್ನೂ ಓದಿ: ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

    ಆಕ್ರೋಶಗೊಂಡಿದ್ದ ರೈತನ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಟ್ವಿಟ್ಟರ್‍ನಲ್ಲಿ ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾಗೆ ಟ್ಯಾಗ್ ಮಾಡಲಾಗಿತ್ತು.