Tag: suv

  • ಹೊಸ ಮಹೀಂದ್ರಾ XUV 3XO ‘REVX’ ಶ್ರೇಣಿ ಬಿಡುಗಡೆ; ಹೊಸತೇನಿದೆ..?

    ಹೊಸ ಮಹೀಂದ್ರಾ XUV 3XO ‘REVX’ ಶ್ರೇಣಿ ಬಿಡುಗಡೆ; ಹೊಸತೇನಿದೆ..?

    ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ & ಮಹೀಂದ್ರಾ (Mahindra & Mahindra) ಲಿಮಿಟೆಡ್ ಇತ್ತೀಚಿಗೆ ಹೊಸ XUV 3XO ‘REVX’ ಕಾರನ್ನು ಬಿಡುಗಡೆ ಮಾಡಿದೆ. ಇತೀಚೆಗಷ್ಟೇ ಮಹೀಂದ್ರಾ XUV 3XO ಕಾರುಗಳು ಒಂದು ವರ್ಷದೊಳಗೆ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿತ್ತು. ಈ ಗುರಿಯನ್ನು ಇಷ್ಟು ಬೇಗ ತಲುಪಿದ ಮಹೀಂದ್ರಾ SUV ಇದಾಗಿದೆ. ಈ ಸಾಧನೆಯನ್ನು ಸಂಭ್ರಮಿಸಲು ಮತ್ತು ಇನ್ನಷ್ಟು ಜನರನ್ನು ತಲುಪಲು ಕಂಪನಿಯು XUV 3XO ‘REVX’ ಶ್ರೇಣಿಯನ್ನು ಅತ್ಯಾಕರ್ಷಕ ಡಿಸೈನ್, ಉತ್ತಮ ಕಾರ್ಯಕ್ಷಮತೆ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. REVX ಸರಣಿಯ ಕಾರುಗಳ ಬೆಲೆ ರೂ. 8.94 ಲಕ್ಷದಿಂದ ಪ್ರಾರಂಭವಾಗುತ್ತದೆ.

    REVX ಸರಣಿಯ ಪ್ರಮುಖ ಮುಖ್ಯಾಂಶಗಳು

    REVX M (ಎಕ್ಸ್-ಶೋರೂಮ್ ಬೆಲೆ: ₹ 8.94 ಲಕ್ಷ) – ಈ ರೂಪಾಂತರದಲ್ಲಿ 1.2L mStallion TCMPFi ಎಂಜಿನ್‌ ಇದ್ದು, ಈ ಪೆಟ್ರೋಲ್‌ ಎಂಜಿನ್‌ 82 kW ಪವರ್ ಮತ್ತು 200 Nm ಟಾರ್ಕ್ ಉತ್ಪಾದಿಸುತ್ತದೆ. ಹೊರಭಾಗದಲ್ಲಿ ಕಾರಿನ ಬಣ್ಣದ ಗ್ರಿಲ್, LED DRLಗಳು, R16 ಕಪ್ಪು ಬಣ್ಣದ ವೀಲ್‌ ಕವರ್‌ಗಳು ಮತ್ತು ಸ್ಪೋರ್ಟಿ ಡ್ಯುಯಲ್-ಟೋನ್ ರೂಫ್‌ ಹೊಂದಿದೆ. ಒಳಭಾಗದಲ್ಲಿ ಪ್ಲಶ್ ಕಪ್ಪು ಲೆದರೆಟ್ ಸೀಟುಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್‌, 26.03 ಸೆಂ.ಮೀ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4-ಸ್ಪೀಕರ್ ಆಡಿಯೊ ಸೆಟಪ್ ಹೊಂದಿದೆ. ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್ (HHC) ಜೊತೆಗೆ ESC ಮತ್ತು ಎಲ್ಲಾ 4 ಡಿಸ್ಕ್ ಬ್ರೇಕ್‌ಗಳು ಸೇರಿದಂತೆ 35 ಪ್ರಮಾಣಿತ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

    REVX M(O) (ಎಕ್ಸ್-ಶೋರೂಮ್ ಬೆಲೆ: ₹ 9.44 ಲಕ್ಷ) – ಈ ರೂಪಾಂತರವು REVX M ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳ ಜೊತೆ ಹೆಚ್ಚುವರಿಯಾಗಿ ಸಿಂಗಲ್-ಪೇನ್ ಸನ್‌ರೂಫ್‌ ಹೊಂದಿದ್ದು ಅತ್ಯಾಧುನಿಕತೆಯನ್ನು ಹೆಚ್ಚಿಸಿದೆ. REVX Mಗಿಂತ ಉತ್ತಮ ಕ್ಯಾಬಿನ್ ಅನುಭವ ಇದರಲ್ಲಿ ದೊರೆಯಲಿದೆ.

    REVX A (ಎಕ್ಸ್-ಶೋರೂಮ್ ಬೆಲೆ ₹ 11.79 ಲಕ್ಷದಿಂದ ಪ್ರಾರಂಭವಾಗುತ್ತದೆ) – ಈ ರೂಪಾಂತರವು ಸುಧಾರಿತ 1.2L mStallion TGDi ಎಂಜಿನ್‌ ಹೊಂದಿದೆ, ಇದು ತನ್ನ ವಿಭಾಗದ ಕಾರುಗಳಲ್ಲಿಯೇ ಅತ್ಯತ್ತಮ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಡೀಸೆಲ್‌ ಎಂಜಿನ್‌ 96 kW ಪವರ್‌ ಮತ್ತು 230 Nm ಟಾರ್ಕ್ ಉತ್ಪಾದಿಸುತ್ತದೆ. ಮಾನ್ಯುಯಲ್ ಗೇರ್‌ಬಾಕ್ಸ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ REVX A ಲಭ್ಯವಿದೆ. ಪ್ಯಾನಾರೋಮಿಕ್ ಸನ್‌ರೂಫ್, ಲೆದರೆಟ್ ಸೀಟುಗಳು, ಡ್ಯುಯಲ್-ಟೋನ್ ಒಳಾಂಗಣ, ಆಟೋ-ಡಿಮ್ಮಿಂಗ್ IRVM, ಇತ್ಯಾದಿ ಪ್ರೀಮಿಯಂ ವೈಶಿಷ್ಟ್ಯಗಳನ್ನು REVX A ಹೊಂದಿದೆ . ಹೊರಭಾಗದಲ್ಲಿ ಕಾರಿನ ಬಣ್ಣದ ಮುಂಭಾಗದ ಗ್ರಿಲ್, ವಿಶಿಷ್ಟ ಬ್ಯಾಡ್ಜಿಂಗ್, ಕಪ್ಪು ಬಣ್ಣದ R16 ಅಲಾಯ್‌ ವೀಲ್‌ಗಳು, ಡ್ಯುಯಲ್-ಟೋನ್ ರೂಫ್‌ ಅನ್ನು ಈ ಕಾರು ಹೊಂದಿದೆ. 26.03 cm HD ಇನ್ಫೋಟೈನ್‌ಮೆಂಟ್ ಸಿಸ್ಟಮ್‌, 26.03 cm HD ಡಿಜಿಟಲ್ ಕ್ಲಸ್ಟರ್, ಅಡ್ರಿನಾಕ್ಸ್ ಕನೆಕ್ಟ್ , ಅಲೆಕ್ಸಾ, ಆನ್‌ಲೈನ್ ನ್ಯಾವಿಗೇಷನ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು REVX A ಹೊಂದಿದೆ.

    REVX ಸರಣಿಯ ಎಲ್ಲಾ ಮೂರು ರೂಪಾಂತರಗಳು ಗ್ಯಾಲಕ್ಸಿ ಗ್ರೇ, ಟ್ಯಾಂಗೋ ರೆಡ್, ನೆಬ್ಯುಲಾ ಬ್ಲೂ, ಎವರೆಸ್ಟ್ ವೈಟ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

  • ಕಾರಿನಲ್ಲಿ ಮಲಗಿದ್ದ ವ್ಯಾಪಾರಿ; ಆಚೆಗೆಳೆದು 35 ಸುತ್ತು ಗುಂಡು ಹಾರಿಸಿ ಕೊಂದ ದುರುಳರು!

    ಕಾರಿನಲ್ಲಿ ಮಲಗಿದ್ದ ವ್ಯಾಪಾರಿ; ಆಚೆಗೆಳೆದು 35 ಸುತ್ತು ಗುಂಡು ಹಾರಿಸಿ ಕೊಂದ ದುರುಳರು!

    – ದುಷ್ಕರ್ಮಿಗಳ ಪತ್ತೆಗೆ 8 ವಿಶೇಷ ತಂಡ ರಚನೆ

    ಚಂಡೀಗಢ: ತನ್ನ ಎಸ್‌ಯುವಿ ಕಾರಿನಲ್ಲಿ ಮಲಗಿದ್ದ ವ್ಯಾಪಾರಿಯೊಬ್ಬನನ್ನು ಕಾರಿನಿಂದಾಚೆಗೆ ಎಳೆದು ಸುಮಾರು 35 ಸುತ್ತು ಗುಂಡು ಹಾರಿಸಿ ಕೊಂದಿರುವ ಘಟನೆ ಹರಿಯಾಣದ ಡಾಬಾವೊಂದರ (Haryana Dhaba) ಪಾರ್ಕಿಂಗ್‌ ಸ್ಥಳದಲ್ಲಿ ನಡೆದಿದೆ.

    ಭಾನುವಾರ (ಇಂದು) ಬೆಳಗ್ಗೆ 8:30ರ ಸುಮಾರಿಗೆ ಹರಿಯಾಣದ ಮುರ್ತಾಲ್‌ನ ಗುಲ್ಶನ್‌ ಡಾಬಾದಲ್ಲಿ (Gulshan Dhaba) ಘಟನೆ ನಡೆದಿದ್ದು, ಗೊಹಾನಾದ ಸರಗ್ತಾಲ್ ಗ್ರಾಮದ ಸುಂದರ್ ಮಲಿಕ್ (38) ಎಂದು ಗುರುತಿಸಲಾಗಿದೆ. ಈತ ಮದ್ಯದ ವ್ಯಾಪಾರಿ ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭಾರೀ ಮಳೆ- 19 ಮಂದಿ ಸಾವು, ಹಲವರು ನಾಪತ್ತೆ

    ಇಬ್ಬರು ದುಷ್ಕರ್ಮಿಗಳು ಗುಂಡಿನ ಮಳೆ ಸುರಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಕಾರಿನಲ್ಲಿ ಕುಳಿತಿದ್ದ ವ್ಯಾಪಾರಿಯನ್ನು ಕೆಳಗೆ ಎಳೆಯುತ್ತಿದ್ದಂತೆ ಆತ ಒಬ್ಬನೊಂದಿಗೆ ಗುದ್ದಾಟಕ್ಕೆ ಇಳಿದಿದ್ದಾನೆ. ಅಷ್ಟರಲ್ಲೇ ಮತ್ತೊಬ್ಬ ದುಷ್ಕರ್ಮಿ ಏಕಾಏಕಿ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಘಟನೆ ತಿಳಿದಕೂಡಲೇ ಡಾಬಾ ಮಾಲೀಕರು ಪೊಲೀಸರಿಗೆ (Haryana Police) ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಪೊಲೀಸರು ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ. ದುಷ್ಕರ್ಮಿಗಳು ಸುಮಾರು 30 ರಿಂದ 35 ಸುತ್ತು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಪತ್ತೆಗಾಗಿ 8 ವಿಶೇಷ ತಂಡಗಳನ್ನು ರಚಿಸಿ, ಶೋಧ ಕಾರ್ಯ ನಡೆಸಲಾಗುತ್ತಿದೆ. ಅವರ ಕುಟುಂಬದ ಸದಸ್ಯರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸ್ ಅಧಿಕಾರಿ ಗೌರವ್ ರಾಜಪುರೋಹಿತ್ ಹೇಳಿದ್ದಾರೆ.

    ಈ ಘಟನೆಯು ಗ್ಯಾಂಗ್‌ವಾರ್‌ ದೃಷ್ಟಿಕೋನ ಒಳಗೊಂಡಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ ಎಂಬುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ಬೀದರ್‌ನಲ್ಲಿ 15.50 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ!

    ಕಳೆದ ಫೆಬ್ರವರಿ 26 ರಂದು ಭಾರತೀಯ ರಾಷ್ಟ್ರೀಯ ಲೋಕದಳ ಹರಿಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್ ರಾಠಿ ಅವರನ್ನೂ ಇದೇ ರೀತಿ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿತ್ತು. ಇದನ್ನೂ ಓದಿ: 2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ

  • ಪತ್ನಿಗೆ ದೇಶದ ಅತ್ಯಂತ ದುಬಾರಿ ಕಾರನ್ನು ಗಿಫ್ಟ್ ಕೊಟ್ಟ ಮುಖೇಶ್ ಅಂಬಾನಿ- ಬೆಲೆ ಎಷ್ಟು ಗೊತ್ತಾ?

    ಪತ್ನಿಗೆ ದೇಶದ ಅತ್ಯಂತ ದುಬಾರಿ ಕಾರನ್ನು ಗಿಫ್ಟ್ ಕೊಟ್ಟ ಮುಖೇಶ್ ಅಂಬಾನಿ- ಬೆಲೆ ಎಷ್ಟು ಗೊತ್ತಾ?

    ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ (Mukesh Ambani) ತಮ್ಮ ಪತ್ನಿ ನೀತಾ ಅಂಬಾನಿಗೆ (Nita Ambani) ದೇಶದ ಅತ್ಯಂತ ದುಬಾರಿ ಕಾರನ್ನು (Car) ಉಡುಗೊರೆ ನೀಡಿರುವುದಾಗಿ ವರದಿಯಾಗಿದೆ.

    ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ತಮ್ಮ ವ್ಯವಹಾರ, ದೇಣಿಗೆ ಮಾತ್ರವಲ್ಲದೆ ಐಷಾರಾಮಿ ಜೀವನಶೈಲಿಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಅಂಬಾನಿ ಕುಟುಂಬ ಭಾರತದ ಅತ್ಯಂತ ಶ್ರೀಮಂತ ಕುಟುಂಬವಾಗಿದೆ. ತಮ್ಮ ಆಂಟಿಲಿಯಾ ಹೆಸರಿನ 15,000 ಕೋಟಿ ರೂ.ಯ ನಿವಾಸದಲ್ಲಿರುವ ಗ್ಯಾರೇಜ್‌ನಲ್ಲಿ ಪ್ರಪಂಚದ ಅತ್ಯಂತ ದುಬಾರಿ ಕಾರುಗಳೇ ತುಂಬಿವೆ.

    ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ನಿವಾಸದ ಪಾರ್ಕಿಂಗ್ ಸ್ಥಳದಲ್ಲಿ ದೇಶದ ಅತ್ಯಂತ ದುಬಾರಿ ಕಾರುಗಳನ್ನು ಕಾಣಬಹುದು. ಮುಖೇಶ್ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ತಮ್ಮ ದುಬಾರಿ ಕಾರುಗಳಲ್ಲಿ ಕೆಲ ಕಾರ್ಯಕ್ರಮಗಳಿಗೆ ಆಗಮಿಸುವುದನ್ನು ಆಗಾಗ ಕಾಣಬಹುದು. ಇದೀಗ ಈ ದುಬಾರಿ ಕಾರುಗಳ ಸಂಗ್ರಹಣೆಗೆ ಮತ್ತೊಂದು ಅತ್ಯಂತ ದುಬಾರಿ ಕಾರೊಂದು ಸೇರ್ಪಡೆಯಾಗಿದೆ. ಅದೆಂದರೆ 10 ಕೋಟಿ ರೂ.ಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ (Rolls Royce Cullinan Black Badge) ಎಸ್‌ಯುವಿ.

    ಹೌದು, ವರದಿಯ ಪ್ರಕಾರ ದೀಪಾವಳಿಗೆ ಮುಂಚಿತವಾಗಿ ಮುಖೇಶ್ ಅಂಬಾನಿ ತನ್ನ ಪತ್ನಿಗೆ 10 ಕೋಟಿ ರೂ. ಬೆಲೆಯ ಎಸ್‌ಯುವಿಯನ್ನು (SUV) ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ವೀಡಿಯೊವನ್ನು CS 12 Vlogs ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ನೀತಾ ಅಂಬಾನಿಯವರಿಗೆ ಉಡುಗೊರೆ ನೀಡಿದ ಈ ಹೊಸ ರೋಲ್ಸ್ ರಾಯ್ಸ್ ಈಗ ಭಾರತದ ಅತ್ಯಂತ ದುಬಾರಿ ಕಾರು ಎನಿಸಿಕೊಂಡಿದೆ. ಇದನ್ನೂ ಓದಿ: Cash for Query – ಟಿಎಂಸಿ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ

    ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಭಾರತದ ಅತ್ಯಂತ ದುಬಾರಿ ಎಸ್‌ಯುವಿಯಾಗಿದೆ. ಈ ಐಷಾರಾಮಿ ಕಾರನ್ನು ದೇಶದಲ್ಲಿ ಕೆಲವೇ ಸೆಲೆಬ್ರಿಟಿಗಳು ಹೊಂದಿದ್ದಾರೆ. ಭಾರತದಲ್ಲಿನ ಜನಪ್ರಿಯ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್‌ಯುವಿಯನ್ನು ಹೊಂದಿರುವವರಲ್ಲಿ ಒಬ್ಬರೆಂದರೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್. ಮುಖೇಶ್ ಅಂಬಾನಿ ಒಡೆತನದ ಇತರ ರೋಲ್ಸ್ ರಾಯ್ಸ್ ಎಸ್‌ಯುವಿಗೆ ಹೋಲಿಸಿದರೆ ನೀತಾ ಅಂಬಾನಿಯವರ ಹೊಸ ಕಾರು ಕಿತ್ತಳೆ ಬಣ್ಣದ ವಿಭಿನ್ನ ಶೇಡ್‌ನಲ್ಲಿದೆ. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಹೇಳಿಕೆಗಳು ದೇಶವನ್ನೇ ಅವಮಾನಿಸುವಂತಿದೆ: ಮೋದಿ ವಾಗ್ದಾಳಿ

  • ಉತ್ತರ ಪ್ರದೇಶದಲ್ಲಿ ಕಾರು ಅಪಘಾತ – ಇಬ್ಬರು ಮಕ್ಕಳು ಸೇರಿ 6 ಮಂದಿ ನೇಪಾಳಿ ಪ್ರಜೆಗಳು ದುರ್ಮರಣ

    ಉತ್ತರ ಪ್ರದೇಶದಲ್ಲಿ ಕಾರು ಅಪಘಾತ – ಇಬ್ಬರು ಮಕ್ಕಳು ಸೇರಿ 6 ಮಂದಿ ನೇಪಾಳಿ ಪ್ರಜೆಗಳು ದುರ್ಮರಣ

    ಲಕ್ನೋ: ಎಸ್‌ಯುವಿ ಕಾರು (Car) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಕಂದಕಕ್ಕೆ ಉರುಳಿ ಬಿದ್ದಿದ್ದು, ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ನೇಪಾಳಿ ಪ್ರಜೆಗಳು (Nepali Citizens) ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರ ಸಂಜೆ ಘಟನೆ ನಡೆದಿದ್ದು, ಎಸ್‌ಯುವಿ (SUV) ಕಾರು ಚಾಲಕ ರಸ್ತೆಯಲ್ಲಿದ್ದ ಜಾನುವಾರುಗಳಿಗೆ ಅಪಘಾತ ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೃತಪಟ್ಟವರು ನೇಪಾಳದ ನೇಪಾಳಗಂಜ್ ನಗರದ ತ್ರಿಭುವನ್ ಚೌಕ್ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಮಣಿಪುರದಲ್ಲಿ ನಿಲ್ಲದ ಸಂಘರ್ಷ – ಕಳೆದ 24 ಗಂಟೆಗಳಲ್ಲಿ ಆರು ಮಂದಿ ಸಾವು

    ಮೃತರನ್ನು ನಿಲಾಂಶ್ (36), ನೀತಿ (20), ದೀಪಿಕಾ (35), ವೈಭವ್ ಅಲಿಯಾಸ್ ಸೋನು (36) ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಅಪ್ರಾಪ್ತ ಮಕ್ಕಳ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ಪತಿ ಲಂಚ ಪಡೆದಿದ್ದಕ್ಕೆ ಜೈಪುರ ಮೇಯರ್‌ ವಜಾ

    ಘಟನೆಯಿಂದ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಹ್ರೈಚ್‌ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಛತ್ತಿಸ್‌ಗಢದಲ್ಲಿ ಎಸ್‌ಯುವಿ, ಟ್ರಕ್ ಮುಖಾಮುಖಿ ಡಿಕ್ಕಿ – 11 ಮಂದಿ ಸಾವು

    ಛತ್ತಿಸ್‌ಗಢದಲ್ಲಿ ಎಸ್‌ಯುವಿ, ಟ್ರಕ್ ಮುಖಾಮುಖಿ ಡಿಕ್ಕಿ – 11 ಮಂದಿ ಸಾವು

    ರಾಯಪುರ: ಎಸ್‌ಯುವಿ (SUV) ಕಾರು ಟ್ರಕ್‌ವೊಂದಕ್ಕೆ (Truck) ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 11 ಜನ ಸಾವನ್ನಪ್ಪಿರುವ ಘಟನೆ ಛತ್ತಿಸ್‌ಗಢದ (Chattisgarh) ಬಲೋದ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

    ಮೃತರು ಧಮತರಿ ಜಿಲ್ಲೆಯ ಸೋರಂ-ಭಟ್‌ಗಾಂವ್ ಗ್ರಾಮದ ನಿವಾಸಿಗಳಾಗಿದ್ದು, ಮದುವೆ ನಿಮಿತ್ತ ಕಂಕೇರ್ ಜಿಲ್ಲೆಯ ಮರ್ಕಟೋಲಾ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಜಾಗ್ತಾರಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಕಾರು ಟ್ರಕ್‌ವೊಂದಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎಂದು ಪುರೂರ್ ಪೊಲೀಸ್ ಠಾಣಾಧಿಕಾರಿ ಅರುಣ್ ಕುಮಾರ್ ಸಾಹು ತಿಳಿಸಿದ್ದಾರೆ. ಇದನ್ನೂ ಓದಿ: 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

    ಘಟನೆ ಬಳಿಕ ಟ್ರಕ್ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಎಸ್‌ಯುವಿ ಕಾರ್‌ನಲ್ಲಿದ್ದ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಮಗು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

    ವಾಹನ ಬಿಟ್ಟು ಪರಾರಿಯಾಗಿರುವ ಟ್ರಕ್ ಚಾಲಕನ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಘಟನೆಗೆ ಛತ್ತಿಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಅರ್ಚಕ ನೇಣುಬಿಗಿದು ಆತ್ಮಹತ್ಯೆ – ಸಾಯುವ ಮೊದಲು ಫೇಸ್‌ಬುಕ್ ಲೈವ್

  • ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ

    ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ

    ಜೈಪುರ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಟ್ರಕ್ ಮತ್ತು ಎಸ್‍ಯುವಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಂಭೀರವಾಗಿ ಗಾಯವಾಗಿದೆ.

    ಗುಡಾ ಮಲಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಗಾ ಹೈವೇ ಬಳಿ ಈ ಘಟನೆ ನಡೆದಿದೆ. ಒಟ್ಟು ಒಂಬತ್ತು ಜನರು ಎಸ್‍ಯುವಿ ಕಾರಿನಲ್ಲಿ ಜಲೋರ್ ಜಿಲ್ಲೆಯ ಸೇಡಿಯಾದಿಂದ ಗುಡಾ ಮಲಾನಿಯ ಕಂಧಿ ಕಿ ಧನಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿಬಂದ ಟ್ರಕ್ ಎಸ್‍ಯುವಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಹೊಸ ತಕರಾರು 

    ಡಿಕ್ಕಿ ಹೊಡೆದ ರಭಸಕ್ಕೆ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಎಸ್‍ಯುವಿ ಒಂದು ಭಾಗ ಸಂಪೂರ್ಣವಾಗಿ ನಾಶವಾಗಿದೆ. ವಾಹನದಿಂದ ದೇಹಗಳನ್ನು ಹೊರತೆಗೆಯಲು ಸುಮಾರು ಎರಡು ಗಂಟೆ ಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತರನ್ನು ಪುನ್ಮಾ ರಾಮ್(45), ಪ್ರಕಾಶ್ ಬಿಷ್ಣೋಯ್(28), ಮನೀಶ್ ಬಿಷ್ಣೋಯ್(12), ಪ್ರಿನ್ಸ್ ಬಿಷ್ಣೋಯ್(5), ಭಾಗೀರಥ್ ರಾಮ್(38), ಪುನ್ಮಾ ರಾಮ್(48), ಮಂಗಿಲಾಲ್ ಬಿಷ್ಣೋಯ್(38) ಮತ್ತು ಬುಧರಾಮ್ ಬಿಷ್ಣೋಯ್(38) ಎಂದು ಗುರುತಿಸಲಾಗಿದೆ.

    Rajasthan: A fierce collision between the car and truck of the wedding processions in Barmer, 8 people of the same family died

    ಪ್ರತ್ಯಕ್ಷದರ್ಶಿ ಭೋಮಾ ರಾಮ್ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದು, ನನಗೆ ಘಟನೆ ನಡೆದ ಸ್ಥಳದಿಂದ ದೊಡ್ಡ ಶಬ್ದ ಕೇಳಿಸಿತು. ತಕ್ಷಣ ನಾನು ಸ್ಥಳಕ್ಕೆ ಧಾವಿಸಿ ನೋಡಿದಾಗ ವಾಹನದಲ್ಲಿದ್ದವರು ಸಹಾಯಕ್ಕಾಗಿ ಕಿರುಚುತ್ತಿದ್ದರು. ಟ್ರಕ್‍ನ ಚಾಲಕ ಗಾಯಗೊಂಡಿದ್ದ. ನಾನು ಮತ್ತು ಸ್ಥಳೀಯರು ಪೊಲೀಸರಿಗೆ ತಿಳಿಸಿ ದೇಹಗಳನ್ನು ಹೊರತೆಗೆದೆವು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: RSS ಚಡ್ಡಿ ಬಗ್ಗೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ 

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ

    ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ

    ಪುಣೆ: ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಮಾಡಿದ್ದ ವಧುವಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

    23 ವರ್ಷದ ವಧು ಎಸ್‍ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಹೊರಟಿದ್ದಳು. ಪುಣೆ- ಸಾಸ್ವಾಡ್ ರಸ್ತೆಯಲ್ಲಿ ಕಾರು ಸಂಚರಿಸಿತ್ತು. ಬೈಕಿನ ಕುಳಿತು ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸಿದ್ದ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಅಡಿ ಕಾರಿನ ಮಾಲೀಕ, ಯುವತಿ, ಚಾಲಕ, ವಿಡಿಯೋಗ್ರಾಫರ್ ಮೇಲೆ ದಂಡ ವಿಧಿಸಿದ್ದಾರೆ. ಕೊರೊನಾ ನಡುವೆಯೂ ಅಲ್ಲಿದ್ದವರು ರೂ ಮಾಸ್ಕ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ : ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ

    ವಾಹನವು ಸಾಸ್ವಾಡ್‍ನಿಂದ ವಿವಾಹದ ಸ್ಥಳಕ್ಕೆ ತೆರಳುತ್ತಿತ್ತು. ಪುಣೆ-ಸಾಸ್ವಾಡ್ ರಸ್ತೆಯ ಉದ್ದಕ್ಕೂ ಪ್ರಯಾಣಿಸುತ್ತಿದ್ದ ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು.

  • ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ – ಮಹೀಂದ್ರಾ ಥಾರ್‌ ಮೈಲುಗಲ್ಲು

    ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ – ಮಹೀಂದ್ರಾ ಥಾರ್‌ ಮೈಲುಗಲ್ಲು

    ಮುಂಬೈ: ಮಹೀಂದ್ರಾ ಕಂಪನಿಯ  ಸ್ಫೋಟ್ಸ್‌ ಯುಟಿಲಿಟಿ ವೆಹಿಕಲ್‌ ಕಾರು ಥಾರ್ ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ ಕಂಡಿದೆ. ಅಕ್ಟೋಬರ್‌ 2 ರಂದು ಥಾರ್‌ ಬಿಡುಗಡೆಯಾಗಿದ್ದು ಈಗಾಗಲೇ 9 ಸಾವಿರ ಬುಕ್ಕಿಂಗ್‌ ಆಗಿದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

    ಬಿಡುಗಡೆಯಾದ ಹೊಸ ಥಾರ್‌ 4*4 ಲೈಫ್‌ಸ್ಟೈಲ್‌ನಲ್ಲಿರುವ ಏಕೈಕ ಎಸ್‌ಯುವಿ. ಬುಕ್ಕಿಂಗ್‌ನಲ್ಲಿ ಕಡಿಮೆ ಅವಧಿಯಲ್ಲಿ ಹೊಸ ಮೈಲಿಗಲ್ಲು ಬರೆದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ದೆಹಲಿಯ ಎಕ್ಸ್‌ ಶೋರೂಮ್‌ನಲ್ಲಿ ಹೊಸ ಥಾರ್‌ ಬೆಲೆ 9.80 ಲಕ್ಷ ರೂ. ನಿಗದಿಯಾಗಿದೆ. ಅಟೋ ತಜ್ಞರ ಮೆಚ್ಚುಗೆಗೆ ಥಾರ್‌ ಪಾತ್ರವಾಗಿದೆ. ಅ.2 ರಂದು ಬಿಡುಗಡೆಯಾದ ಬಳಿಕ 36 ಸಾವಿರ ಮಂದಿ ವಿಚಾರಣೆ ನಡೆಸಿದ್ದಾರೆ 3.3 ಲಕ್ಷ ಮಂದಿ ವೆಬ್‌ಸೈಟಿಗೆ ಭೇಟಿ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಪ್ರತಿ 2 ನಿಮಿಷಕ್ಕೆ 1 ಕಿಯಾ ಸೋನೆಟ್‌ ಕಾರು ಮಾರಾಟ

    ಆಫ್‌ ರೋಡ್‌ ಪ್ರಿಯರು ಈ ಕಾರನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, ಕನ್ವರ್ಟಬಲ್ ಟಾಪ್ , ಇನ್ಫೋಟೈನ್ಮೆಂಟ್ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಥಾರ್‌ನಲ್ಲಿದೆ. ಮಲೆಯಾಳಂ ನಟ ಪೃಥ್ವಿ ರಾಜ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸೇರಿದಂತೆ ಹಲವು ಗಣ್ಯರು ಮಹೀಂದ್ರ ಥಾರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಎಸ್‌ಯುವಿ ವಿಭಾಗದಲ್ಲಿ 12 ದಿನದಲ್ಲಿ ಕಿಯಾ ಸೆಲ್ಟೋಸ್‌ ಕಾರಿಗೆ 12 ಸಾವಿರ ಬುಕ್ಕಿಂಗ್‌ ಆಗಿತ್ತು. ಇದೀಗ ಥಾರ್ ಕೇವಲ 4 ದಿನಕ್ಕೆ ಈ ಸಂಖ್ಯೆ ತಲುಪಿರುವುದು ವಿಶೇಷ. ಆರಂಭಿಕ ಹಂತದಲ್ಲಿ ಭಾರತದ 18 ನಗರಗಳಲ್ಲಿ ಥಾರ್  ಬಿಡುಗಡೆಯಾಗಿದೆ. ಅಕ್ಟೋಬರ್ 10ರೊಳಗಗೆ 100 ನಗರಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

  • ಭಾರತಕ್ಕೆ ಎಂಜಿಯ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ – ಬೆಲೆ, ಮೈಲೇಜ್ ಎಷ್ಟು?

    ಭಾರತಕ್ಕೆ ಎಂಜಿಯ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ – ಬೆಲೆ, ಮೈಲೇಜ್ ಎಷ್ಟು?

    ನವದೆಹಲಿ: ಪ್ರತಿಷ್ಠಿತ ಎಂಜಿ ಮೋಟಾರ್ಸ್ ತನ್ನ ಕಂಪನಿಯ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ ಕಾರನ್ನು ಎಂಜಿ ಝಡ್‍ಎಸ್ ಇವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

    ಈಗಾಗಲೇ ಹುಂಡೈ ಕಂಪನಿಯವರು ಕೋನಾ ಹೆಸರಿನ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಇದಕ್ಕೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಎಂಜಿ ಮೋಟಾರ್ಸ್ ಅವರು ತಮ್ಮ ಕಂಪನಿಯ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದೆ.

    ಈ ಎಂಜಿ ಜಡ್‍ಎಸ್ ಇವಿ ತುಂಬಾ ಸ್ಟೈಲಿಶ್ ಲುಕ್‍ನಲ್ಲಿ ಡಿಸೈನ್ ಮಾಡಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 340 ಕಿ.ಮೀ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ 44.5 ಕಿಲೋವ್ಯಾಟ್ ಲಿಥಿಯಂ ಬ್ಯಾಟರಿಯನ್ನು ಅಳವಡಿಸಿದ್ದು, 50 ಕಿ.ವ್ಯಾ ಡಿಸಿ ಚಾರ್ಜರ್ ನಲ್ಲಿ ಕೇವಲ 40 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಆಗುತ್ತದೆ. ಅಲ್ಲದೇ ಕಾರಿನ ಜೊತೆ ಕಂಪನಿಯವರು 7.4 ಕಿ.ವ್ಯಾ ಡಿಸಿ ಚಾರ್ಜರ್ ಅನ್ನು ನೀಡುತ್ತಿದ್ದು, ಇದನ್ನು ಬಳಸಿ ಚಾರ್ಜ್ ಮಾಡಿದರೆ 7 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.

    ಎಂಜಿ ಜಡ್‍ಎಸ್ ಇವಿ ಎಸ್‍ಯುವಿ ಎಲೆಕ್ಟ್ರಿಕ್ ಕಾರನ್ನು ಭಾರತದದ್ಯಾಂತ ಸುಮಾರು 1 ಲಕ್ಷ ಕಿ.ಮೀ ಡ್ರೈವ್ ಮಾಡಿ ಪರೀಕ್ಷೆ ಮಾಡಲಾಗಿದೆ ಎಂದು ಎಂಜಿ ಮೋಟಾರ್ಸ್ ಕಂಪನಿ ತಿಳಿಸಿದೆ. ಈ ಕಾರು ಬ್ಯಾಟರಿ ಪವರ್ ಬಳಸಿಕೊಂಡು ಕೇವಲ ಎಂಟು ಸೆಕೆಂಡ್‍ಗಳಲ್ಲಿ 100 ಕಿ.ಮೀ ಸ್ಪೀಡ್‍ಗೆ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ಎಂಜಿ ಮೋಟಾರ್ಸ್ ಶೋರೂಮ್‍ಗಳು ಭಾರತದಲ್ಲಿ ದೆಹಲಿ, ಹೈದರಾಬಾದ್, ಮುಂಬೈ, ಬೆಂಗಳೂರು ಮತ್ತು ಅಹಮದಾಬಾದ್‍ನಲ್ಲಿ ಇದ್ದು, ಮುಂದಿನ 5 ವರ್ಷಗಳಲ್ಲಿ ಪ್ರಮುಖ ಮೆಟ್ರೋ ನಗರಗಳಲ್ಲಿ ಪ್ರತಿ 5 ಕಿ.ಮೀ ಮತ್ತು ಹೆದ್ದಾರಿಗಳಲ್ಲಿ ಪ್ರತಿ 25 ಕಿ.ಮೀ.ಗೆ 1 ಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲು ಕಂಪನಿ ಯೋಜನೆ ರೂಪಿಸಿದೆ.

    ಈ ಕಾರು ಈ ಹಿಂದೆ ಎಂಜಿ ಮೋಟಾರ್ಸ್ ಬಿಡುಗಡೆ ಮಾಡಿದ ಎಂಜಿ ಹೆಕ್ಟರ್ ಕಾರಿಗಿಂತ ಸ್ವಲ್ಪ ಚಿಕ್ಕದಾಗಿದ್ದು, ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಇಂಟಿರಿಯರ್ ಡಿಸೈನ್ ಮಾಡಲಾಗಿದೆ. ಈ ಕಾರು 4314 ಮಿಮೀ (14 ಅಡಿ) ಉದ್ದ, 1809 ಮಿಮೀ (5 ಅಡಿ) ಅಗಲ ಮತ್ತು 1620 ಮಿಮೀ (5 ಅಡಿ) ಎತ್ತರವನ್ನು ಇದೆ. ಈ ಕಾರು ಹುಂಡೈ ಕಂಪನಿಯ ಕ್ರೆಟಾ ಕಾರಿಗಿಂತ ದೊಡ್ಡಾಗಿದೆ.

    ಈ ಕಾರನ್ನು ಸ್ಪೋರ್ಟ್ ಕಾರ್ ರೀತಿಯಲ್ಲಿ ಡಿಸೈನ್ ಮಾಡಿದ್ದು, ಕಪ್ಪು ಮತ್ತು ಸಿಲ್ವರ್ ಬಣ್ಣದಲ್ಲಿ ಕಾರಿನ ಒಳಭಾಗವನ್ನು ಬಹಳ ಆಕರ್ಷಣೀಯವಾಗಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಇದರ ಜೊತೆ 8.0 ಇಂಚಿನ ಟಚ್‍ಸ್ಕ್ರೀನ್ ಸಿಸ್ಟಮ್ ನೀಡಲಾಗಿದ್ದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುತ್ತದೆ. ಮೊಬೈಲ್ ಚಾರ್ಜರ್ ಮತ್ತು ಬ್ಲೂಟೂತ್ ಮತ್ತು ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ.

    ಬೆಲೆ ಎಷ್ಟು?
    ಕಂಪನಿ ಕಾರಿನ ಬೆಲೆಯನ್ನು ನಿಖರವಾಗಿ ತಿಳಿಸಿಲ್ಲ. ಆದರೆ ಮೂಲಗಳ ಪ್ರಕಾರ 20 ಲಕ್ಷ ರೂ. ಇರಬಹುದು ಎಂದು ಅದಾಜಿಸಲಾಗಿದೆ. ಜನವರಿಯಿಂದ ಈ ಕಾರು ಮಾರಾಟವಾಗಲಿದೆ.

  • ಸ್ಕಿಡ್ ಆದ ಎಸ್‍ಯುವಿ ಕಾರು- ನಾಲ್ವರು ಟೆಕ್ಕಿಗಳ ದುರ್ಮರಣ

    ಸ್ಕಿಡ್ ಆದ ಎಸ್‍ಯುವಿ ಕಾರು- ನಾಲ್ವರು ಟೆಕ್ಕಿಗಳ ದುರ್ಮರಣ

    ನೋಯ್ಡಾ: ಎಸ್‍ಯುವಿ ಕಾರು ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿದ್ದ 30 ಅಡಿ ಹಳ್ಳಕ್ಕೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸೇರಿ ನಾಲ್ಕು ಮಂದಿ ಟೆಕ್ಕಿಗಳು ಸಾವನ್ನಪ್ಪಿರುವ ಘಟನೆ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ ಪ್ರೆಸ್ ಹೈವೇಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಎಲ್ಲರೂ ಮಾಹಿತಿ ತಂತ್ರಜ್ಞಾನ ಕಂಪನಿಯ ನೌಕರರು ಎಂದು ತಿಳಿದು ಬಂದಿದ್ದು, ತನ್ನ ಸಹೋದ್ಯೋಗಿಯೊಬ್ಬರು ಕೊಂಡ ಹೊಸ ಎಸ್‍ಯುವಿ ಕಾರಿನಲ್ಲಿ ಟ್ರಿಪ್ ಹೋಗಿದ್ದರು. ಒಟ್ಟು 6 ಮಂದಿ ಪುರುಷರು ಮತ್ತು 3 ಮಂದಿ ಮಹಿಳೆಯರು ಸೇರಿ 9 ಮಂದಿಯಿದ್ದ ಕಾರು ಅಳಕ್ಕೆ ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಎಸ್‍ಯುವಿಯಲ್ಲಿ ವೇಗವಾಗಿ ಬಂದು ಪಾರಿ ಚೌಕ್ ಬಳಿ ಯೂ-ಟರ್ನ್ ತೆಗೆದುಕೊಳ್ಳಲು ಹೋದಾಗ ಸ್ಕಿಡ್ ಆಗಿ ಹಳ್ಳಕ್ಕೆ ಬಿದ್ದಿದೆ. ವೇಗವಾಗಿ ಬಂದು ಯೂ-ಟರ್ನ್ ತೆಗೆದುಕೊಂಡ ಕಾರಣ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಗ್ರೇಟರ್ ನೋಯ್ಡಾದ ಪೊಲೀಸ್ ಅಧಿಕಾರಿ ತನು ಉಪಾಧ್ಯಾಯ ಹೇಳಿದ್ದಾರೆ.

    ಈ ಎಲ್ಲಾ ಉದ್ಯೋಗಿಗಳು ನೋಯ್ಡಾ ಸೆಕ್ಟರ್-2 ಅಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹೊಸ ಕಾರು ತೆಗೆದುಕೊಂಡು ಅಲಿಗ್ರಾ ಎಂಬ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಐದು ಮಂದಿಯ ಪೈಕಿ ಮೂವರು ಗಂಭೀರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    165 ಕಿ.ಮೀ ಉದ್ದ ಇರುವ ಯಮುನಾ ಎಕ್ಸ್ ಪ್ರೆಸ್ ವೇ 2012ರಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. 2012 ರಿಂದ ಇಲ್ಲಿಯವರೆಗೂ ಸುಮಾರು 5,000 ಅಪಘಾತಗಳಲ್ಲಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 7,600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.