Tag: sutturu mutt

  • ಸುತ್ತೂರು ಸ್ವಾಮೀಜಿ ಬಹಳ ಸುಂದರವಾಗಿದ್ದಾರೆ: ಅಶೋಕ್ ಖೇಣಿ

    ಸುತ್ತೂರು ಸ್ವಾಮೀಜಿ ಬಹಳ ಸುಂದರವಾಗಿದ್ದಾರೆ: ಅಶೋಕ್ ಖೇಣಿ

    -ನನ್ನ ಮಕ್ಕಳಿಗೆ ಅವಳಿ ಹೆಣ್ಣು ಹುಡುಕಿ ಕೊಡಿ

    ಮೈಸೂರು: ಸುತ್ತೂರು ಶ್ರೀಗಳನ್ನು ಹೊಗಳುವ ಭರದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಸ್ವಾಮೀಜಿಗಳಿಗೆ ಮುಜುಗುರು ಉಂಟು ಮಾಡಿದ್ದಾರೆ.

    ಸುತ್ತೂರು ಮಠದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶೋಕ್ ಖೇಣಿ, ನನಗೆ ಮೈಸೂರಿಗೆ ಬಂದಾಗ ತವರು ಮನೆಗೆ ಬಂದ ಅನುಭವ ಉಂಟಾಗುತ್ತದೆ. ನನ್ನ ಪತ್ನಿ ಯಾವಗಲೂ ಸ್ವಾಮೀಜಿಗಳ ಕಣ್ಣುಗಳ ಬಗ್ಗೆ ಹೊಗಳುತ್ತಾರೆ. ಸ್ವಾಮೀಜಿಗಳ ಅರ್ಥ ಗರ್ಭಿತ ಮಾತು, ದಿವ್ಯ ದೃಷ್ಟಿ ಎಲ್ಲವೂ ಅದ್ಭುತ. ಮುಂದೆ ನನ್ನ ಮಕ್ಕಳ ಮದುವೆಯನ್ನು ಸುತ್ತೂರು ಮಠದಲ್ಲೇ ಸ್ವಾಮೀಜಿಗಳ ಸಮ್ಮುಖದಲ್ಲೇ ಮಾಡುತ್ತೇನೆ ಎಂದರು.

    ನನ್ನ ಮಕ್ಕಳಿಗೆ 25 ವರ್ಷ ಆಗಿದ್ದು, ಮದುವೆ ಮಾಡಬೇಕಿದೆ. ನನ್ನಿಬ್ಬರು ಗಂಡು ಮಕ್ಕಳಿಗೆ ಅವಳಿ-ಜವಳಿ ಹೆಣ್ಣು ಮಕ್ಕಳನ್ನು ಹುಡುಕಿ ಕೊಡಿ. ಹುಡುಗಿ ಲಿಂಗಾಯತರಾಗಿರಬೇಕು, ಸುಂದರವಾಗಿರಬೇಕು. ನಮ್ಮೆಲ್ಲರ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಎಂದು ಸ್ವಾಮೀಜಿಗಳಿಗೆ ತಮ್ಮ ಮಕ್ಕಳಿಗೆ ಹೆಣ್ಣು ಹುಡುಕುವ ಜವಾಬ್ದಾರಿ ಅಶೋಕ್ ಖೇಣಿ ನೀಡಿದರು.

    ಉದ್ಯಮ, ರಾಜಕಾರಣ ಎಲ್ಲವೂ ಆಯಿತು. ನನ್ನನ್ನು ನಿಮ್ಮ ಮಠಕ್ಕೆ ಸೇರಿಸಿಕೊಳ್ಳಿ ಅಥವಾ ನನಗೊಂದು ಬೇರೆ ಮಠ ಮಾಡಿಕೊಡಿ ಎಂದು ನಾನು ಸ್ವಾಮೀಜಿಗಳ ಬಳಿ ಕೇಳಿಕೊಂಡಿದ್ದೇನೆ. ಆದ್ರೆ ಸ್ವಾಮೀಜಿಗಳು ಒಪ್ಪುತ್ತಿಲ್ಲ. ನಿಮ್ಮ ಪತ್ನಿಯಿಂದ ಅನುಮತಿ ಪಡೆದುಕೊಂಡು ಬನ್ನಿ ಎಂದು ಹೇಳ್ತಾರೆ. ನಾನೇನು ಮಾಡಲಿ ಎಂದು ಆಶೋಕ್ ಖೇಣಿ ಹೇಳಿದರು.

  • ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರ- ಸುತ್ತೂರು ಮಠದಲ್ಲಿ ಗೌಪ್ಯ ಸಭೆ

    ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರ- ಸುತ್ತೂರು ಮಠದಲ್ಲಿ ಗೌಪ್ಯ ಸಭೆ

    -ನಾಳೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ

    ಮೈಸೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮತ್ತೆ ಹೋರಾಟ ತೀವ್ರಗೊಂಡಿದೆ. ಮೈಸೂರಿನ ಸುತ್ತೂರು ಮಠದಲ್ಲಿ ವೀರಶೈವ-ಲಿಂಗಾಯಿತ ಚಿಂತಕರ ಕಾರ್ಯಗಾರ ನಡೆದಿದೆ.

    ಇದೇ ಮೊದಲ ಬಾರಿಗೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸುತ್ತೂರು ಮಠ ವೇದಿಕೆಯಾಗಿದೆ. ಹಲವು ದಿನದಿಂದ ಧರ್ಮ ಸ್ಥಾಪನೆ ವಿಚಾರದ ವಿವಾದದಿಂದ ದೂರ ಇದ್ದ ಶ್ರೀಮಠ ಹಾಗೂ ಸುತ್ತೂರು ಶ್ರೀಗಳು ಸಹ ಇದೇ ಮೊದಲ ಬಾರಿಗೆ ಈ ವಿಚಾರದ ಚರ್ಚೆಗೆ ಮಠದಲ್ಲೇ ವೇದಿಕೆ ಕಲ್ಪಿಸಿದ್ದಾರೆ. ಈ ಕಾರ್ಯಗಾರದಲ್ಲಿ 700ಕ್ಕು ಹೆಚ್ಚು ಮಂದಿ ಭಾಗಿಯಾಗಿದ್ದರು. ಸಮುದಾಯದ ಸಂಪನ್ಮೂಲಗಳ ವ್ಯಕ್ತಿಗಳೊಂದಿಗೆ ವಿಶೇಷ ಚರ್ಚೆ ಕೂಡ ನಡೆಯಿತು. ವೀರಶೈವ-ಲಿಂಗಾಯಿತ ಒಂದಾಗಿರಬೇಕೋ? ಅಥವಾ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪಿಸಲು ಹೋರಾಟ ನಡೆಸಬೇಕೋ ಎನ್ನುವುದರ ಬಗ್ಗೆ ಚರ್ಚೆ ನಡೆಯಿತು.

    ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಮುದಾಯದ ಇತರೆ ಮಠಾಧಿಶರು ಕಾರ್ಯಾಗಾರದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮಾಧ್ಯಮಗಳನ್ನು ಹೊರಗಿಟ್ಟು ನಡೆದ ಕಾರ್ಯಾಗಾರದಲ್ಲಿ ಅಂತಿಮವಾಗಿ ಯಾವ ನಿರ್ಣಾಯಕ್ಕೂ ಬಂದಿಲ್ಲ. ಬದಲಾಗಿ ಕೇವಲ ಚರ್ಚೆ ಮಾತ್ರ ನಡೆದಿದೆ. ಲಿಂಗಾಯತ ಸ್ವಾತಂತ್ರ್ಯ ಧರ್ಮ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಸುತ್ತೂರು ಮಠ ಈಗ ಇಂತಹ ಚರ್ಚೆಗೆ ವೇದಿಕೆ ಕಲ್ಪಿಸಿರುವುದು ತೀವ್ರ ಕೂತುಹಲ ಕೆರಳಿಸಿದೆ.

    ಅತ್ತ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ ನಾಳೆ ಬೆಳಗಾವಿ ಚಲೋ ಮಹಾ ಜಾಥಾ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಸಾಧ್ಯತೆ ಇದೆ.