Tag: Suttur mutt

  • ಇನ್ನೊಬ್ಬರ ಬದುಕನ್ನು ಹಾಳು ಮಾಡೋರಿಗೆ ಸದ್ಬುದ್ಧಿ ಬರಲಿ: ಸಿಎಂ

    ಇನ್ನೊಬ್ಬರ ಬದುಕನ್ನು ಹಾಳು ಮಾಡೋರಿಗೆ ಸದ್ಬುದ್ಧಿ ಬರಲಿ: ಸಿಎಂ

    – ಸುತ್ತೂರು ಶ್ರೀಗಳ ಜೊತೆ ಗೌಪ್ಯ ಮಾತುಕತೆ

    ಮೈಸೂರು: ಇನ್ನೊಬ್ಬರ ಬದುಕನ್ನು ಯಾರು ಹಾಳು ಮಾಡಲು ಪ್ರಯತ್ನ ಮಾಡ್ತಿದ್ದಾರೆ ಅವರಿಗೆಲ್ಲಾ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಸುತ್ತೂರು ಶಾಖಾ ಮಠಕ್ಕೆ (Suttur Mutt) ಸಿಎಂ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ವಿಜಯದಶಮಿ ಹಬ್ಬ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡುವಂತಹ ಹಬ್ಬ. ನಾಡಿನೆಲ್ಲೆಡೆ ಇದು ನಡೆಯಲಿ ಎಂದು ಜನತೆಗೆ ವಿಜಯದಶಮಿಯ ಶುಭ ಹಾರೈಸಿದ್ದಾರೆ.

    ಈ ಬಾರಿ ಚೆನ್ನಾಗಿ ಮಳೆ ಬೆಳೆ ಆಗಿದೆ. ರೈತರ ಮೊಗದಲ್ಲಿ ಸಂಭ್ರಮ ಕಾಣುತ್ತಿದೆ. ರೈತರಿಗೆ ಉತ್ತಮವಾಗಿ ಮಳೆ ಆದ್ರೆ ಅದಕ್ಕಿಂತ ಸಂತೋಷ ಬೇರಿಲ್ಲ. ಕಳೆದ ವರ್ಷ ಬರಗಾಲ ಇತ್ತು. ಈ ವರ್ಷ ಎಲ್ಲಾ ಜಲಾಶಯ ಭರ್ತಿ ಆಗಿವೆ ಎಂದಿದ್ದಾರೆ.

    ಶ್ರೀಗಳ ಜೊತೆಗೆ ಸಿದ್ದರಾಮಯ್ಯ ಗೌಪ್ಯ ಮಾತುಕತೆ ನಡೆಸಿದ್ದಾರೆ. ಮಠಕ್ಕೆ ಭೇಟಿ ನೀಡಿದ ವೇಳೆ ಸಿಎಂಗೆ ಪೂರ್ಣ ಕುಂಭ ಸ್ವಾಗತ ಕೋರಲಾಗಿದೆ. ಬಳಿಕ ಮಠದ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಮಠದಲ್ಲಿ ಉಪಹಾರ ಸೇವಿಸಿದ್ದಾರೆ. ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವೆ ಲಕ್ಷಿ ಹೆಬ್ಬಾಳ್ಕರ್, ಶಾಸಕ ರವಿಶಂಕರ್ ಸಾಥ್ ನೀಡಿದ್ದಾರೆ.

  • ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಗೃಹ ಸಚಿವ ಅಮಿತ್ ಶಾ

    ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಗೃಹ ಸಚಿವ ಅಮಿತ್ ಶಾ

    ಮೈಸೂರು: ಸುತ್ತೂರು ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ.

    ಈ ವೇಳೆ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಚಾಮುಂಡಿ ಬೆಟ್ಟದಿಂದ (Chamundi HIlls) ರ್ಯಾಡಿಷನ್ ಬ್ಲೂ ಹೋಟೆಲ್ ಕಡೆ ತೆರಳಿದರು.

    ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಮಿತ್ ಅಮಿತ್ ಶಾಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ನಾಗೇಂದ್ರ ಸೇರಿ ಸ್ಥಳೀಯ ಮುಖಂಡರೂ ಅಮಿತ್ ಶಾ ಅವರನ್ನು ಸ್ವಾಗತ ಮಾಡಿದರು. ಕಳಸ, ಮಂಗಳವಾದ್ಯದ ಮೂಲಕ ಗೃಹ ಸಚಿವರನ್ನು ಅರ್ಚಕರು ಬರಮಾಡಿಕೊಂಡರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಆರಂಭಕ್ಕೆ ಚಿಂತನೆ: ಅಮಿತ್ ಶಾ

    ಗೃಹ ಸಚಿವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿ.ವೈ.ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಸಾಥ್ ನೀಡಿದರು. ಅಮಿತ್ ಶಾ ಚಾಮುಂಡಿ ಬೆಟ್ಟಕ್ಕೆ ಭೇಟಿ ಹಿನ್ನೆಲೆಯಲ್ಲಿ ದೇವಾಲಯದ ಮುಂಭಾಗ ಬ್ಯಾರಿಕೇಡ್ ಹಾಕಲಾಗಿತ್ತು. ಅಲ್ಲದೆ ಮಧಾಹ್ನ 2:15 ರಿಂದ ಸಂಜೆ 4 ಗಂಟೆ ತನಕ ಸಾರ್ವಜನಿಕ ದರ್ಶನಕ್ಕೆ ನಿಬರ್ಂಧ ಹೇರಲಾಗಿದೆ. ಸಂಜೆ 4ರ ಬಳಿಕ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಸುತ್ತ ಬಿಗಿ ಪೆÇಲೀಸ್ ಭದ್ರತೆ ಒದಗಿಸಲಾಗಿತ್ತು.

  • ವಿಜಯದಶಮಿ ಬಳಿಕ 10 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ: ಬೊಮ್ಮಾಯಿ

    ವಿಜಯದಶಮಿ ಬಳಿಕ 10 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ: ಬೊಮ್ಮಾಯಿ

    ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯವರು ಅರಮನ ನಗರಿ ಮಂದಿಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನಂದರೆ ವಿಜಯದಶಮಿ ಬಳಿಕ 10 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲು ಸಿಎಂ ಅವಕಾಶ ನೀಡಿದ್ದಾರೆ.

    ಇಂದು ಸುತ್ತೂರು ಮಠ (Suttur Mutt) ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ದಸರಾ ನಂತರವೂ ಮೈಸೂರು ಜಗಮಗಿಸಲು ಅವಕಾಶ ನೀಡಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರ ಜನರ ಗಮನ ಸೆಳೆದಿದೆ. ಹೀಗಾಗಿ ದಸರಾ ನಂತರವೂ 10 ದಿನ ದಸರಾ ದೀಪಾಲಂಕಾರ ಕಣ್ತುಂಬಿಕೊಳ್ಳುವ ಅವಕಾಶ ಕೊಡುವುದಾಗಿ ತಿಳಿಸಿದರು.

    ಕಳೆದ ಎರಡು ವರ್ಷದಲ್ಲಿ ಕೋವಿಡ್ (Corona Virus) ಹಿನ್ನಲೆ ದಸರಾಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಈ ಬಾರಿ ಬಹಳಷ್ಟು ಅರ್ಥಪೂರ್ಣ ಹಾಗೂ ವೈಭವಪೂರ್ಣವಾದ ದಸಾರಾಗೆ ಹೆಚ್ಚಿನ ಜನ ಆಕರ್ಷಣೆಯಾಗಿದ್ದಾರೆ. ಲಕ್ಷಾಂತರ ಜನ ಇಡೀ ರಾಜ್ಯದಿಂದ ವಿದೇಶದಿಂದ ಬಂದಿದ್ದಾರೆ. ಮತ್ತೊಮ್ಮೆ ಪಾರಂಪರಿಕವಾದ ವೈಭವ ನೋಡೋಕೆ ಸಿಗ್ತಾ ಇದೆ ಎಂದರು. ಇದನ್ನೂ ಓದಿ: ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ

    ಆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಸಕಲ ಕನ್ನಡಿನಾಡಿನ ಜನತೆಗೆ ಒಳ್ಳೆಯದು ಮಾಡಲಿ. ಸುಖ ಶಾಂತಿ ನೆಲಸಲಿ, ರೈತರ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ಲಿ ಅಂತಾ ಪ್ರಾರ್ಥಿಸಿದ್ದೇನೆ. ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಬಹಳ ಯಶಸ್ವಿ ಕಾರ್ಯಕ್ರಮಗಳಾಗಿವೆ. ಇವತ್ತು ಕೂಡ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

    ಪ್ರವಾಸಿಗರು ಬಹಳಷ್ಟು ಜನ ಬರ್ತಾ ಇರೋದ್ರಿಂದ ಮುಂಚಿನ ದಸರಾ (Mysuru Dasara 2022) ಕಾಣಿಸ್ತಿದೆ. ಇಲ್ಲಿ ಟೂರಿಸಂ ಸರ್ಕಿಟ್ ಮಾಡಬೇಕಿದೆ ಅದಕ್ಕೆ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಮೈಸೂರು ಸರ್ಕಿಟ್ ಅಂದ್ರೆ ಮೈಸೂರು ಹಳೇಬೀಡು ಬೇಲೂರು ಸೋಮನಾಥಪುರ ಸುತ್ತಲೂ ಇರೋದನ್ನ ವೆಬ್ ಸೈಟ್ ನಲ್ಲಿ ಬುಕ್ ಮಾಡಿ ಎಲ್ಲವನ್ನು ಮಾಡಬಹುದು. ಟೂರಿಸಂ ಉತ್ತೇಜನಕ್ಕೆ ಶೀಘ್ರದಲ್ಲಿ ಕಾರ್ಯರಂಭವಾಗುತ್ತದೆ. ಉತ್ತರದಲ್ಲಿ ಹಂಪಿ ದಕ್ಷಿಣದಲ್ಲಿ ಮೈಸೂರು ದಸರಾವನ್ನ ಟೂರಿಸ್ಟ್ ಸರ್ಕಿಟ್ ನ್ನ ಬಹಳ ಅರ್ಥಪೂರ್ಣವಾಗಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

    ಸರ್ಕಿಟ್ ಅನುಭವದಿಂದ ಯಾವುದೇ ಸ್ಟ್ರಚರ್ ಕೊಡಬೇಕು ಅನ್ನೋದನ್ನ ಮಾಡೋಣ. ಕೊರೊನಾ ಸಾರ್ವತ್ರಿಕವಾಗಿ ಹರಡೋದು ನಿಂತಿದೆ. ಹೀಗಾಗಿ ನಮ್ಮ-ನಮ್ಮ ಸುರಕ್ಷತೆಯಲ್ಲಿ ಮಾಡೋಣ. ದಸರಾ ವೈಭವ ಹೆಚ್ಚಿಸಿರುವ ಲೈಟಿಂಗ್ (Lighting)ನ್ನ ಇನ್ನು ಹತ್ತು ದಿನ ವಿಸ್ತರಣೆ ಮಾಡುತ್ತೇವೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಸಚಿವ ಸ್ಥಾನಕ್ಕೆ ಪ್ರಯತ್ನಿಸಿದರೆ ತಪ್ಪೇನು, ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ : ಈಶ್ವರಪ್ಪ

    ಸಚಿವ ಸ್ಥಾನಕ್ಕೆ ಪ್ರಯತ್ನಿಸಿದರೆ ತಪ್ಪೇನು, ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ : ಈಶ್ವರಪ್ಪ

    – ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಪ್ರಯತ್ನ ವಿಚಾರ

    ಶಿವಮೊಗ್ಗ : ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ, ಇದೀಗ ಮತ್ತೆ ಸಚಿವ ಸ್ಥಾನಕ್ಕೆ ಪ್ರಯತ್ನ ಪಟ್ಟರೆ ತಪ್ಪೇನಿದೆ? ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಪ್ರಯತ್ನ ಪಡುತ್ತಿರಬಹುದು. ಆದರೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ, ಇಲ್ಲವೋ ಎಂಬುದು ಕೇಂದ್ರದ ನಾಯಕರು ಹಾಗೂ ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.

    ರಾಜಕಾರಣಕ್ಕೆ ಸುಮ್ಮನೆ ಯಾರು ಬರುವುದಿಲ್ಲ. ರಾಜಕಾರಣಕ್ಕೆ ಬರುವುದೇ ಸ್ಥಾನ ಮಾನ ಪಡೆಯಲು. ರಾಜಕೀಯದಲ್ಲಿ ಯಾರೂ ಕೂಡ ಸನ್ಯಾಸಿಯಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಪ್ರಯತ್ನ ಪಟ್ಟರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ರಮೇಶ್ ಜಾರಕಿಹೊಳಿ ಸುತ್ತೂರು ಮಠಕ್ಕೆ ಭೇಟಿ ನೀಡಿರುವ ಹಿಂದೆ ಯಾವುದೇ ಉದ್ದೇಶ ಇಲ್ಲ. ಮಠಕ್ಕೆ ಯಾರೂ ಬೇಕಾದರೂ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆಯಬಹುದು. ಸಚಿವ ಆಗುವುದಕ್ಕೆ ಅವರು ಮಠಕ್ಕೆ ಹೋಗಿಲ್ಲ. ಬದಲಿಗೆ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಮಠಕ್ಕೆ ಹೋದರೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದಾದರೆ ಎಲ್ಲಾ ಮಠಗಳ ಮುಂದೆ ರಾಜಕಾರಣಿಗಳು ಸಾಲುಗಟ್ಟಿ ನಿಲ್ಲುತ್ತಿದ್ದರು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.  ಇದನ್ನೂ ಓದಿ: ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸಿಗಬೇಕು ಅದೇ ರಾಜಕಾರಣ: ಎಂಟಿಬಿ

  • 50 ಲಕ್ಷ ದೇಣಿಗೆ ನೀಡಿದ ಸುತ್ತೂರು ಮಠ

    50 ಲಕ್ಷ ದೇಣಿಗೆ ನೀಡಿದ ಸುತ್ತೂರು ಮಠ

    – ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸೋಮಣ್ಣ ಭೇಟಿ

    ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ಮೈಸೂರಿನ ಶ್ರೀ ಸುತ್ತೂರು ಮಠ ಸ್ಪಂದಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದೆ.

    ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇವತ್ತು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ರೂ.ಗಳ ದೇಣಿಗೆಯನ್ನು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳು ಸಚಿವರಿಗೆ ನೀಡಿದರು. ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜೆ.ಎಸ್.ಎಸ್. ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.

    ಮೈಸೂರು ಭಾಗದಲ್ಲಿ ಕೊರೊನಾ ಭೀತಿ ಹೆಚ್ಚಾಗಲು ಕಾರಣವಾಗಿರುವ ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸಚಿವ ವಿ. ಸೋಮಣ್ಣ ಇಂದು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಖಾನೆ ಲಾಕ್‍ಡೌನ್ ಆಗಿರುವುದನ್ನು ಸಚಿವರು ವೀಕ್ಷಿಸಿದರು.

    ಕಾರ್ಖಾನೆಯಲ್ಲಿ 15 ಜನ ಸೆಕ್ಯೂರಿಟಿ ಗಾರ್ಡ್ ಗಳು ಮಾತ್ರ ಇದ್ದು, ಅವರನ್ನು ಇಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಬೇಕಾದ ಊಟ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರು ಸಚಿವರಿಗೆ ಮಾಹಿತಿ ನೀಡಿದರು.

     

  • ಬಿಳಿಗಿರಿರಂಗನ ಬೆಟ್ಟದ ಸುತ್ತೂರು ಶಾಖಾ ಮಠಕ್ಕೆ ರಂಜನ್ ಗೊಗೊಯ್ ಭೇಟಿ

    ಬಿಳಿಗಿರಿರಂಗನ ಬೆಟ್ಟದ ಸುತ್ತೂರು ಶಾಖಾ ಮಠಕ್ಕೆ ರಂಜನ್ ಗೊಗೊಯ್ ಭೇಟಿ

    ಚಾಮರಾಜನಗರ: ನಿವೃತ್ತಿ ಅಂಚಿನಲ್ಲಿ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ನೀಡಿ ಗಮನ ಸೆಳೆದಿದ್ದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದರು.

    ಭೇಟಿ ನೀಡಿದ ವೇಳೆ ಸುತ್ತೂರು ಮಠದಲ್ಲಿ ಆಶ್ರಯ ಪಡೆದಿರುವ ಅಸ್ಸಾಂ ರಾಜ್ಯದ ವಿದ್ಯಾರ್ಥಿನಿಯರು ರಂಜನ್ ಗೊಗೊಯ್ ಅವರನ್ನು ಬರಮಾಡಿಕೊಂಡರು. ಬಳಿಕ ಗೊಗೊಯ್ ದಂಪತಿಗೆ ಪೂರ್ಣಕುಂಭಸ್ವಾಗತ ಕೋರಲಾಯಿತು.

    ಕೆಲ ಹೊತ್ತು ಸುತ್ತೂರು ಶ್ರೀಗಳೊಂದಿಗೆ ರಂಜನ್ ಗೊಗೊಯ್ ಸಮಾಲೋಚನೆ ನಡೆಸಿದರು. ಬಳಿಕ ಅಸ್ಸಾಂ ರಾಜ್ಯದ ವಿದ್ಯಾರ್ಥಿನಿಯರು ಬಸವಣ್ಣನ ವಚನಗಳನ್ನು ಹೇಳುವ ಮೂಲಕ ರಂಜನ್ ಗೊಗೊಯ್ ಅವರ ಗಮನ ಸೆಳೆದರು.

    ಇದೇ ವೇಳೆ ಸುತ್ತೂರು ಶ್ರೀಗಳು, ಗೊಗೊಯ್ ದಂಪತಿಗೆ ಮೈಸೂರು ಪೇಟಾ ತೊಡಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿದರು.

  • ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಅಗ್ರಸ್ಥಾನಕ್ಕೇರಲು ಕೈಜೋಡಿಸಿ: ಸುತ್ತೂರು ಶ್ರೀಗಳು

    ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಅಗ್ರಸ್ಥಾನಕ್ಕೇರಲು ಕೈಜೋಡಿಸಿ: ಸುತ್ತೂರು ಶ್ರೀಗಳು

    ಮೈಸೂರು: ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಮೊದಲ ಸ್ಥಾನ ಗಳಿಸಲು ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಹೇಳಿದ್ದಾರೆ.

    ಸ್ವಚ್ಛ ಸರ್ವೇಕ್ಷಣ್-2020 ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ನಂಬರ್ ಒನ್ ಸ್ವಚ್ಛ ನಗರವನ್ನಾಗಿಸಲು ಮಹಾನಗರ ಪಾಲಿಕೆಯಿಂದ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಇಂದು ಸರ್ವಧರ್ಮ ಗುರುಗಳ ಸಭೆಯು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ನಡೆಯಿತು.

    ಈ ಸಭೆಯಲ್ಲಿ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಸೇರಿದಂತೆ ಇತರ ಧರ್ಮಗುರುಗಳು ಭಾಗಿಯಾಗಿದ್ದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮೈಸೂರು ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಸುತ್ತೂರು ಮಠದ ಶ್ರೀಗಳು, ಪ್ಲಾಸ್ಟಿಕ್ ಬಳಕೆ ಮೇಲಿನ ನಿರ್ಬಂಧವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವ ಪ್ರವೃತ್ತಿ ಬಿಡಬೇಕು. ಶಾಲಾ ಮಟ್ಟದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವೂ ಪ್ರಮುಖವಾಗಿದೆ ಎಂದು ತಿಳಿಸಿದರು.

    ಸ್ವಚ್ಛ ಸರ್ವೇಕ್ಷಣಾ-2019 ಪ್ರಶಸ್ತಿಯನ್ನು ಮಧ್ಯಪ್ರದೇಶದ ಇಂದೋರ್ ಪಡೆದಿತ್ತು. ಈ ಮೂಲಕ ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹಿರಿಮೆಯನ್ನು ಇಂದೋರ್ ಸತತ ಮೂರನೇ ವರ್ಷವೂ ಉಳಿಸಿಕೊಂಡಿತ್ತು. ಹಾಗೆಯೇ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ಗೆ ‘ಸ್ವಚ್ಛ ರಾಜಧಾನಿ’ ಪ್ರಶಸ್ತಿ ಸಂದಿತ್ತು. ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಛತ್ತೀಸ್‍ಗಢದ ಅಂಬಿಕಾಪುರಿ ಹಾಗೂ ಮೂರನೇ ಸ್ಥಾನವನ್ನು ಅರಮನೆ ನಗರಿ ಮೈಸೂರು ಇದ್ದವು.
    ಕೊಂಡಿದೆ.

  • ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಬಿಎಸ್‍ವೈ ಪುತ್ರ

    ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಬಿಎಸ್‍ವೈ ಪುತ್ರ

    ಮೈಸೂರು: ಮೈಸೂರಿನ ವರುಣಾ ಕ್ಷೇತ್ರದಲ್ಲಿನ ಸುತ್ತೂರು ಶ್ರೀ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ಶ್ರೀಗಳ ಆಶೀರ್ವಾದ ಪಡೆದು ಕೆಲಕಾಲ ಶ್ರೀಗಳ ಜೊತರ ಮಾತುಕತೆ ನಡೆಸಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ ಅವರು, ಇಡೀ ದೇಶದಲ್ಲಿ ರಾಜ್ಯದ ಉಪ ಚುನಾವಣೆ ಸುದ್ದಿಯಾಗಿತ್ತು. ಚುನಾವಣೆ ಮುಗಿದ ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರ ಭೇಟಿ ವೇಳೆ ಕೇವಲ ಉಪಚುನಾವಣೆ ವಿಚಾರವನ್ನಷ್ಟೆ ಚರ್ಚೆ ಮಾಡಿದೆ ಎಂದು ತಿಳಿಸಿದರು.

    ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆದ್ದ ವಿಚಾರವನ್ನು ಕೂಡ ಅಮಿತ್ ಶಾ ಚರ್ಚೆ ಮಾಡಿದರು. ಅಲ್ಲಿ ಗೆಲುವು ಸಾಧಿಸಿದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಈ ಚುನಾವಣೆ ಗೆಲುವು ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಸೃಷ್ಟಿಯಾಗಿದೆ ಎಂದರು.

    ಸಚಿವ ಸ್ಥಾನದ ವಿಚಾರವಾಗಿ ಕೆಲವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಸಚಿವನಾಗಬೇಕು ಎಂದು ಆಕಾಂಕ್ಷೆಗಳಿರುತ್ತೆ. ಆದರೆ ಈ ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

  • ಬಲೂನ್‍ಗೆ ನೈಟ್ರೋಜನ್ ಬಳಸಿದ್ದೇ ಸುತ್ತೂರು ಮಠದ ಅನಾಹುತಕ್ಕೆ ಕಾರಣ!

    ಬಲೂನ್‍ಗೆ ನೈಟ್ರೋಜನ್ ಬಳಸಿದ್ದೇ ಸುತ್ತೂರು ಮಠದ ಅನಾಹುತಕ್ಕೆ ಕಾರಣ!

    – ವಿಧಿವಿಜ್ಞಾನ ತಜ್ಞರು ಹೇಳಿದ್ದೇನು?

    ಮೈಸೂರು: ನೈಟ್ರೋಜನ್ ಅನ್ನು ಬಲೂನ್‍ನಲ್ಲಿ ತುಂಬಿದ್ದೇ ಸುತ್ತೂರು ಜಾತ್ರಾ ಮಹೋತ್ಸವದ ನಿಮಿತ್ತ ಪಂದ್ಯಾವಳಿ ಉದ್ಘಾಟನೆ ವೇಳೆ ನಡೆದ ಅವಘಡಕ್ಕೆ ಕಾರಣವಾಗಿದೆ ಎಂದು ವಿಧಿವಿಜ್ಞಾನ ತಜ್ಞರು ದಿನೇಶ್ ರಾವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಹೀಲಿಯಂನ ಬೆಲೆ ಹೈಡ್ರೋಜನ್/ನೈಟ್ರೋಜನ್ ಗ್ಯಾಸ್ ಗಿಂತ ದುಪ್ಪಟ್ಟು. ಹೀಗಾಗಿ ನೈಟ್ರೋಜನ್ ಗ್ಯಾಸ್ ಅನ್ನು ಬಲೂನ್‍ಗೆ ತುಂಬಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಹೀಲಿಯಂ ಬೆಂಕಿ ನಿರೋಧಕವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಹೀಲಿಯಂ ತುಂಬಿದ ಬಲೂನ್‍ಗಳಿಂದ ಬೆಂಕಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನು ಓದಿ: ಭಾರೀ ಅವಘಡದಿಂದ ಸುತ್ತೂರು ಶ್ರೀಗಳು ಪಾರು!

    ನೈಟ್ರೋಜನ್ ಆಕ್ಸಿಜನ್‍ನೊಂದಿಗೆ ಬೆರೆತರೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಎಲ್ಲಾ ಬಲೂನ್‍ಗಳು ಸ್ಫೋಟಗೊಂಡು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಬಲೂನ್ ಬಳಕೆ ಮಾಡದಿದ್ದರೂ ಇಂತಹ ಅನಾಹುತ ಸಂಭವಿಸುತ್ತದೆ ಎಂದ ಮಾಹಿತಿ ನೀಡಿದರು.

    ಈ ಅವಘಡವು ಓಪನ್ ಸ್ಪೇಸ್‍ನಲ್ಲಿ ಸಂಭವಿಸಿದ್ದರಿಂದ ಅಷ್ಟೇನೂ ತೀವ್ರತೆ ಕಂಡಿಲ್ಲ. ಒಂದು ವೇಳೆ ಕೊಠಡಿಯಲ್ಲಿ ಸಂಭವಿಸಿದ್ದರೆ ಸ್ಫೋಟದ ತೀವ್ರತೆ ಹೆಚ್ಚಾಗಿರುತ್ತಿತ್ತು. ಸಿರಿಯಾ ಯುದ್ಧದಲ್ಲಿ ನೈಟ್ರೋಜನ್ ಬಲೂನ್‍ಗಳನ್ನು ಬಳಸಿ ವಿಮಾನಗಳನ್ನು ಸ್ಫೋಟ ಮಾಡಲಾಗುತ್ತಿತ್ತು. ಹೀಗಾಗಿ ಕೆಲವು ದೇಶಗಳಲ್ಲಿ ನೈಟ್ರೋಜನ್ ತುಂಬಿದ ಬಲೂನ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇಂತಹದದ್ದೇ ಘಟನೆಯೊಂದು ಕಳೆದ ಬಾರಿ ಮಂಡ್ಯದಲ್ಲಿ ನಡೆದಿತ್ತು. ಆಗಲೇ ಸರ್ಕಾರ ನೈಟ್ರೋಜನ್ ಬಲೂನ್ ಮಾರಾಟದ ಮೇಲೆ ನಿರ್ಬಂಧ ಹೇರಬಹುದಿತ್ತು ಎಂದು ಹೇಳಿದರು.

    ಹೀಲಿಯಂ ಗ್ಯಾಸ್ ತುಂಬಿದ ಬಲೂನ್‍ಗಳನ್ನೇ ಉಪಯೋಗಿಸಬೇಕು. ಬೇರೆ ಯಾವುದೇ ಗ್ಯಾಸ್ ತುಂಬಿದ ಬಲೂನ್‍ಗಳನ್ನು ಉಪಯೋಗಿಸಿದರೆ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂದು ತಜ್ಞರು ಪಬ್ಲಿಕ್ ಟಿವಿ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv