Tag: suspicious death

  • ಮೂರಂತಸ್ತಿನ ಕಟ್ಟಡದಿಂದ ಬಿದ್ದು ಯುವತಿ ಅನುಮಾನಾಸ್ಪದ ಸಾವು

    ಮೂರಂತಸ್ತಿನ ಕಟ್ಟಡದಿಂದ ಬಿದ್ದು ಯುವತಿ ಅನುಮಾನಾಸ್ಪದ ಸಾವು

    ನೆಲಮಂಗಲ: ಮೂರಂತಸ್ತಿನ ಕಟ್ಟಡದಿಂದ ಬಿದ್ದು ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ (Suspicious Death) ಘಟನೆ ಬೆಂಗಳೂರು(Bengaluru) ಉತ್ತರ ತಾಲ್ಲೂಕಿನ ಕಡಬಗೆರೆಯಲ್ಲಿ ನಡೆದಿದೆ.

    ರಿಸೆಪ್ಷನಿಸ್ಟ್ ರಕ್ಷಿತಾ (20) ಮೃತ ಯುವತಿ. ರಕ್ಷಿತಾ ಜುನಿಫರ್ ಫಿಟ್ನೆಸ್ ಸೆಂಟರ್‌ನಲ್ಲಿ (Fitness Center) ಕಳೆದ 8 ತಿಂಗಳಿನಿಂದ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ

    ಇದ್ದಕ್ಕಿದ್ದಂತೆ ಮೂರನೇ ಮಹಡಿಯಲ್ಲಿದ್ದ ಫಿಟ್ನೆಸ್ ಸೆಂಟರ್ ಕಟ್ಟಡದ ಮೇಲಿನಿಂದ ಬಿದ್ದು ರಕ್ಷಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯ ಬಾತ್‌ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಮನೆಯ ಬಾತ್‌ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಬೆಂಗಳೂರು: ಯುವತಿ ಅನುಮಾನಾಸ್ಪದವಾಗಿ (Suspicious Death) ಮನೆಯಲ್ಲೇ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ (Subramanyapura Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಭುಧ್ಯಾ(21) ಸಾವನ್ನಪ್ಪಿರುವ ಯುವತಿ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಭುಧ್ಯಾ ಶವ ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಬುಧವಾರ ಸಂಜೆ ಈ ಘಟನೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಅಸಹಜ ಸಾವು ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಜೈಲಿನಲ್ಲಿ ಕೈದಿಯ ಅನುಮಾನಾಸ್ಪದ ಸಾವು

    ಜೈಲಿನಲ್ಲಿ ಕೈದಿಯ ಅನುಮಾನಾಸ್ಪದ ಸಾವು

    ಬೆಳಗಾವಿ: ಕೇರಳದ ಕುಖ್ಯಾತ ರೌಡಿ ಡಾನ್ ತಸ್ಲಿಮ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಗುರುರಾಜ್ ದೊಡ್ಡಮನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

    ಕಳೆದ ನಾಲ್ಕು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿರುವುದಾಗಿ ಗುರುರಾಜ್ ಹೇಳಿಕೊಂಡಿದ್ದ. ಶುಕ್ರವಾರ ಸಂಜೆಯೂ ಜೈಲಿನ ಸಿಬ್ಬಂದಿ ಬಳಿ ಎದೆನೋವು ಇದೆ, 500 ರೂ. ಕೊಡುವಂತೆ ಕೇಳಿಕೊಂಡಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಗುರುರಾಜ್ ಸಾವನ್ನಪ್ಪಿದ್ದಾನೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಅಗ್ನಿ ಅವಘಡ – 20 ಕೈದಿಗಳು ಆಸ್ಪತ್ರೆಗೆ ದಾಖಲು

    jail

    2019ರಲ್ಲಿ ಕೊಲೆ ಕೇಸ್‌ನಲ್ಲಿ ಗುರುರಾಜ್ ಜೈಲು ಸೇರಿದ್ದ. ಹದಿನೈದು ದಿನಗಳ ಹಿಂದೆ ಗುರುರಾಜ್ ಮೇಲೆ ಜೈಲು ಸಿಬ್ಬಂದಿ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಇದಾದ ಬಳಿಕ ಗುರುರಾಜ್‌ಗೆ ಎದೆನೋವು ಕಂಡುಬಂದಿದೆ. ಗುರುರಾಜ್ ಸಾವಿಗೆ ಜೈಲು ಸಿಬ್ಬಂದಿಯೇ ಕಾರಣ ಎಂದು ಆತನ ಸಹೋದರ ಕಿರಣ್ ಆರೋಪಿಸಿದ್ದಾರೆ. ಇದನ್ನೂ ಓದಿ: ಕಳೆದುಕೊಂಡಿರುವ ಜಿಲ್ಲಾ ಕೇಂದ್ರ ಹಾಸನವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಬೇಕು: ಸೂರಜ್

    ಗುರುರಾಜ್ ಕುಟುಂಬಸ್ಥರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

  • 3 ತಿಂಗ್ಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತೆ ಸಾವು

    3 ತಿಂಗ್ಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತೆ ಸಾವು

    ಬೆಂಗಳೂರು: ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂನಲ್ಲಿ ನಡೆದಿದೆ.

    ರಂಜಿತಾ (24) ಮೃತ ದುರ್ದೈವಿ. ರಂಜಿತ ಮೂರು ತಿಂಗಳ ಹಿಂದೆ ಅಶೋಕ್ ಎಂಬಾತನೊಂದಿಗೆ ವಿವಾಹವಾಗಿತ್ತು. ವಿವಾಹವಾದ ಬಳಿಕ ರಂಜಿತಾ ಹಾಗೂ ಅಶೋಕ್ ಕೆ.ಆರ್ ಪುರಂನ ದೇವಸಂದ್ರ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

    ರಂಜಿತಾ ಮೂಲತಃ ಮುಳಬಾಗಿಲುದವರಾಗಿದ್ದು, ಬುಧವಾರ ಮನೆಯ ಕೋಣೆಯಲ್ಲಿ ನೇಣು ಬಿಗಿದ ರೀತಿಯಲ್ಲಿ ರಂಜಿತಾರ ಮೃತ ದೇಹ ಪತ್ತೆಯಾಗಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡಿ ಪತಿ ಅಶೋಕ್ ಕೊಲೆ ಮಾಡಿದ್ದಾನೆ ಎಂದು ರಂಜಿತಾ ಪೋಷಕರು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಗಳೂರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

    ಬೆಂಗಳೂರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

    ಬೆಂಗಳೂರು: ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಕೊತ್ತನೂರಿನ ಕೆ ನಾರಾಯಣಪುರ ಬಳಿಯ ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ನಡೆದಿದೆ.

    ಮುಂಬೈ ಮೂಲದ ಸೋಫಿಯಾ ದಮನಿ ಅನುಮಾನಾಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿನಿ. ನಗರದ ಖಾಸಗಿ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿನಿ ಸೋಫಿಯಾ ಶವ ಹಾಸ್ಟೆಲಿನ ಕೋಣೆಯ ಬೆಡ್ ಮೇಲೆ ಬುಧವಾರ ಸಂಜೆ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಅನುಮಾನಾಸ್ಪದವಾಗಿ ಸೋಫಿಯಾ ಮೃತಪಟ್ಟ ಹಿನ್ನೆಲೆಯಲ್ಲಿ ದೂರು ನೀಡಲಾಗಿದ್ದು, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 74(ಅಸಹಜ ಸಾವು) ಅಡಿ ಪ್ರಕರಣ ದಾಖಲಾಗಿದೆ.

    ಕಳೆದ ಎರಡು ವರ್ಷದಿಂದ ಸೋಫಿಯಾ ಬೆಂಗಳೂರಿನಲ್ಲಿ ನೆಲೆಸಿದ್ದಳು. ಪೊಲೀಸರು ಮುಂಬೈಯಿಂದ ಸೋಫಿಯಾ ಪೋಷಕರ ಆಗಮನಕ್ಕಾಗಿ ಈಗ ಕಾಯುತ್ತಿದ್ದಾರೆ. ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಸೋಫಿಯಾ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಸೋಫಿಯಾ ಬೆಳಗ್ಗೆ ಸಹಪಾಠಿಗಳ ಜೊತೆ ಮಾತಾಡಿದ್ದಾಳೆ. ಈ ನೀವು ಕಾಲೇಜಿಗೆ ಹೋಗಿ ನಾನು ಬರುವುದಿಲ್ಲ ಎಂದು ತಿಳಿಸಿದ್ದಾಳೆ. ಬಳಿಕ ಸಂಜೆ ಸಹಪಾಠಿಗಳು ಹಾಸ್ಟೆಲ್ ವಾಪಸ್ ಬಂದಾಗ ಸೋಫಿಯಾ ಶವವಾಗಿ ಪತ್ತೆಯಾಗಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರಿ ಹೊರಗೆ ಹೋಗಿದ್ದ ಯುವತಿ ಮುಂಜಾನೆ ಶವವಾಗಿ ಪತ್ತೆ

    ರಾತ್ರಿ ಹೊರಗೆ ಹೋಗಿದ್ದ ಯುವತಿ ಮುಂಜಾನೆ ಶವವಾಗಿ ಪತ್ತೆ

    ಕೋಲಾರ: ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಶವ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಕೋಲಾರ ತಾಲೂಕಿನ ಶೆಟ್ಟಿಕೊತ್ತನೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 20 ವರ್ಷ ವಯಸ್ಸಿನ ಕಾವ್ಯಾ ಮೃತ ಯುವತಿ. ಬುಧವಾರ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ಕಾವ್ಯಾ ಮುಂಜಾನೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈಕೆ ಕೂಲಿ ಕೆಲಸ ಮಾಡಿಕೊಂಡಿದ್ದು, ತರಕಾರಿಗಳನ್ನು ಕೊಯ್ಯುವ ಕೆಲಸ ಮಾಡುತ್ತಿದ್ದಳು.

    ಕಾವ್ಯಾ ರಾತ್ರಿ ಬಹಿರ್ದೆಸೆಗೆ ಹೊರಗೆ ಹೋಗಿದ್ದಳು. ಆದರೆ ಇಂದು ಮುಂಜಾನೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಯಾರೋ ಕಿಡಿಗೇಡಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಕೋಲಾರ ಎಸ್‍ಪಿ ರೋಹಿಣಿ ಕಟೋಜ್ ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.