Tag: Suspicion Of Affair

  • ಅನೈತಿಕ ಸಂಬಂಧ ಶಂಕೆ – ತಲೆಗೆ ಸುತ್ತಿಗೆಯಿಂದ ಹೊಡೆದು ವಿಧವೆಯ ಹತ್ಯೆ

    ಅನೈತಿಕ ಸಂಬಂಧ ಶಂಕೆ – ತಲೆಗೆ ಸುತ್ತಿಗೆಯಿಂದ ಹೊಡೆದು ವಿಧವೆಯ ಹತ್ಯೆ

    ಲಕ್ನೋ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ವಿಧವೆಯಾಗಿದ್ದ ಅತ್ತಿಗೆಯ ತಲೆಗೆ ವ್ಯಕ್ತಿಯೋರ್ವ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.

    ಟ್ವಿಂಕಲ್(25) ಮೃತ ಮಹಿಳೆಯಾಗಿದ್ದು, ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಟ್ವಿಂಕಲ್‍ಗೆ ಮೂವರು ಮಕ್ಕಳಿದ್ದಾರೆ. ಟ್ವಿಂಕಲ್, ಮೀರತ್ ಜಿಲ್ಲೆಯ ಜಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ಪುರ್ ಗ್ರಾಮದ ಗೌರವ್ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಆದರೆ ಅವರ ಪತಿ 2021ರ ಟ್ರಕ್ ಅಪಘಾತದಲ್ಲಿ ನಿಧನರಾದರು. ಇದನ್ನೂ ಓದಿ: ನಾನು ಇನ್ನೆರಡು ತಿಂಗಳು ಇರೋದಿಲ್ಲ, ನಾನು ಎಲ್ಲದಕ್ಕೂ ರೆಡಿ ಇದ್ದೀನಿ: ಶಂಕಿತ ಉಗ್ರ

    ಅತ್ತಿಗೆ ಪದೇ, ಪದೇ ಫೋನ್‍ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಆರೋಪಿ ಅಭಿಷೇಕ್‍ಗೆ ಆಕೆಯ ನಡವಳಿಕೆಯ ಮೇಲೆ ಅನುಮಾನ ಮೂಡಿತ್ತು. ಭಾನುವಾರ ರಾತ್ರಿ ಮೊದಲ ಮಹಡಿಯಲ್ಲಿರುವ ಆಕೆಯ ಕೋಣೆಯನ್ನು ತಲುಪಿದ ಅಭಿಷೇಕ್ ಮನಬಂದಂತೆ ಸುತ್ತಿಗೆಯಿಂದ ಟ್ವಿಂಕಲ್ ತಲೆಗೆ ಹೊಡೆದು ದೇಹವನ್ನು ಸೀಳಿಹಾಕಿದ್ದಾನೆ ಎಂದು ಸರ್ಕಲ್ ಆಫೀಸರ್ ರಜನೀಶ್ ಉಪಾಧ್ಯಾಯ ಹೇಳಿದ್ದಾರೆ.

    ಇದೀಗ ಅಭಿಷೇಕ್ ಅನ್ನು ಬಂಧಿಸಲಾಗಿದ್ದು, ಕೃತ್ಯವೆಸಗಲು ಆರೋಪಿ ಬಳಸಿದ್ದ ಸುತ್ತಿಗೆಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಟ್ವಿಂಕಲ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]