Tag: suspended

  • ಜಾಸ್ತಿ ಮಾತಾಡ್ತಾರೆ ಅಂತಾ ವಿದ್ಯಾರ್ಥಿಗಳ ಬಾಯಿಗೆ ಟೇಪ್ ಹಚ್ಚಿದ ಶಿಕ್ಷಕಿ

    ಜಾಸ್ತಿ ಮಾತಾಡ್ತಾರೆ ಅಂತಾ ವಿದ್ಯಾರ್ಥಿಗಳ ಬಾಯಿಗೆ ಟೇಪ್ ಹಚ್ಚಿದ ಶಿಕ್ಷಕಿ

    -ವಿಡಿಯೋ ವೈರಲ್: ಶಿಕ್ಷಕಿ ಅಮಾನತು

    ಗುರುಗ್ರಾಮ: ತರಗತಿಯಲ್ಲಿ ಅತಿಯಾಗಿ ಮಾತನಾಡುವ ವಿದ್ಯಾರ್ಥಿಗಳ ಬಾಯಿಗೆ ಟೇಪ್ ಸುತ್ತಿದ್ದ ಶಿಕ್ಷಕಿಯನ್ನು ಅಮಾನತು ಮಾಡಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

    ಇದೇ ವರ್ಷ ಅಕ್ಟೋಬರ್ ನಲ್ಲಿ ಘಟನೆ ನಡೆದಿದೆ. ಶಿಕ್ಷಕಿಯು ಮಕ್ಕಳ ಬಾಯಿಗೆ ಟೇಪ್ ಸುತ್ತುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಲಾ ಆಡಳಿತ ಮಂಡಳಿ ಇಂದು ಶಿಕ್ಷಕಿಯನ್ನು ಅಮಾನತು ಮಾಡಿದೆ.

    ವಿಡಿಯೋದಲ್ಲಿ ಏನಿದೆ?:
    ಒಂದು ತರಗತಿಯಲ್ಲಿ ಸುಮಾರು 4ರಿಂದ 5 ವರ್ಷದ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕಿಯರು ಹಾಗೂ ಒಬ್ಬ ಸಹಾಯಕಿ ಇರುತ್ತಾರೆ. ಈ ವೇಳೆ ಕೆಲ ವಿದ್ಯಾರ್ಥಿಗಳು ಅತಿಯಾಗಿ ಮಾತನಾಡುತ್ತಿರುತ್ತಾರೆ. ಇದನ್ನು ಕೇಳಿಸಿಕೊಂಡ ಶಿಕ್ಷಕಿಯೊಬ್ಬಳು ಎದ್ದು ಬ್ಯಾಗ್ ನಲ್ಲಿದ್ದ ಟೇಪ್ ತೆಗೆದುಕೊಳ್ಳುತ್ತಾಳೆ. ನಂತರ ತನ್ನ ಮುಂದೆಯಿದ್ದ ವಿದ್ಯಾರ್ಥಿಯ ಬಾಯಿಗೆ ಬಲವಾಗಿ ಒತ್ತಿ ಟೇಪ್ ಹಚ್ಚುತ್ತಾಳೆ. ಅಲ್ಲಿಂದ ಮತ್ತೊಬ್ಬ ವಿದ್ಯಾರ್ಥಿನಿ ಬಳಿಗೆ ಬಂದು ಟೇಪ್ ಹಚ್ಚುತ್ತಾಳೆ.

    ಎರಡನೇ ವಿದ್ಯಾರ್ಥಿನಿ ಮಾತ್ರ ತಕ್ಷಣವೇ ಟೇಪ್ ಕಿತ್ತು ಹಾಕುತ್ತಾಳೆ. ತರಗತಿಯಲ್ಲಿ ಕುಳಿತಿದ್ದ ಮತ್ತೊಬ್ಬ ಶಿಕ್ಷಕಿ ಈ ದೃಶ್ಯವನ್ನು ಗಮನಿಸಿ ಸುಮ್ಮನೆ ಇರುತ್ತಾಳೆ. ಈ ದೃಶ್ಯವು ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಈ ವಿಡಿಯೋ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಪೋಷಕರು ಶಿಕ್ಷಕಿ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಪರಿಶೀಲನೆ ನಡೆಸಿದ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನು ಇಂದು ಅಮಾನತು ಮಾಡಿದೆ.

    https://www.facebook.com/girish.pandey.7543/videos/2278764822231561/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾತಕಿ ದಾವೂದ್ ಸಹೋದರನಿಗೆ ಜೈಲಿನಲ್ಲಿ ಸಕಲ ಸೌಲಭ್ಯ ಒದಗಿಸಿದ್ದ ಐವರು ಪೊಲೀಸರು ಸಸ್ಪೆಂಡ್

    ಪಾತಕಿ ದಾವೂದ್ ಸಹೋದರನಿಗೆ ಜೈಲಿನಲ್ಲಿ ಸಕಲ ಸೌಲಭ್ಯ ಒದಗಿಸಿದ್ದ ಐವರು ಪೊಲೀಸರು ಸಸ್ಪೆಂಡ್

    ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿ ಸಹೋದರ ಇಕ್ಬಾಲ್ ಕಸ್ಕರ್ ಗೆ ಜೈಲಿನಲ್ಲಿ ವಿಶೇಷ ಉಪಚಾರ ನೀಡುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 5 ಪೊಲೀಸರನ್ನು ಅಮಾನತು ಮಾಡಲಾಗಿದೆ.

    ಸುಲಿಗೆ ಪ್ರಕರಣದಲ್ಲಿ ಕಸ್ಕರ್ ನನ್ನು ಬಂಧಿಸಿ, ಥಾಣೆ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಕಸ್ಕರ್ ಖಾಸಗಿ ಕಾರಿನಲ್ಲಿ ಕುಳಿತು ತೆರಳುತ್ತಿರುವ ಹಾಗೂ ಜೈಲಿನಲ್ಲಿ ಬಿರಿಯಾನಿ ತಿನ್ನುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ವಿಡಿಯೋ ನೋಡಿದ ಥಾಣೆ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್, ಜೈಲಿನ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿ, ಪ್ರಕರಣದ ತನಿಖೆಗೆ ಆದೇಶ ಹೊರಡಿಸಿದ್ದಾರೆ.

    ಕಸ್ಕರ್ ಜೈಲು ಸೇರಿದ್ದೇಕೆ?:
    ದಾವೂದ್ ಇಬ್ರಾಹಿಂ ಸಹೋದರ ಕಸ್ಕರ್ 2013ರಿಂದ ನನ್ನ ಬಳಿ ನಿರಂತವಾಗಿ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಮುಂಬೈನ ಕಟ್ಟಡ ನಿರ್ಮಾಣ ಮಾಡುವ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 2017ರ ಸೆಪ್ಟೆಂಬರ್ 18 ರಂದು ದು ಕಸ್ಕರ್ ನನ್ನು ಥಾಣೆಯಲ್ಲಿ ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೃಷ್ಟಿ ಕಳೆದುಕೊಂಡ ಬಾಲಕ ಪ್ರಕರಣ- ಸ್ಕೇಲ್ ನಿಂದ ಹೊಡೆದ ಮುಖ್ಯ ಶಿಕ್ಷಕ ಅಮಾನತು

    ದೃಷ್ಟಿ ಕಳೆದುಕೊಂಡ ಬಾಲಕ ಪ್ರಕರಣ- ಸ್ಕೇಲ್ ನಿಂದ ಹೊಡೆದ ಮುಖ್ಯ ಶಿಕ್ಷಕ ಅಮಾನತು

    ಚಾಮರಾಜನಗರ: ಮುಖ್ಯ ಶಿಕ್ಷಕ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕನ್ನು ಅಮಾನತು ಮಾಡಿರುವ ಘಟನೆ ಚಾಮರಾಜನಗರದಲ್ಲಿ ಜರುಗಿದೆ.

    ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್, ಗಿರಿಮಲ್ಲೇಶ್ ಎಂಬ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದಿರುವ ಪ್ರಕರಣ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿ ಮುಖ್ಯಶಿಕ್ಷಕನನ್ನು ಅಮಾನತು ಮಾಡಿದೆ. ಸ್ಕೇಲ್ ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

    ಏನಿದು ಘಟನೆ?;
    ಜನವರಿಯಲ್ಲಿ ಶಾಲೆಯ ಸಮಯದಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ಮೂಲಕ ಹೊಡೆದಿದ್ದಾನೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ಬಿದ್ದ ಕಾರಣ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದಾದ ನಂತರ ವಿದ್ಯಾರ್ಥಿ ತನಗೆ ಯಾವುದೇ ನೋವಾಗಿಲ್ಲ ಎಂದು ತಿಳಿದುಕೊಂಡಿದ್ದಾನೆ. ಇದೀಗ ವಿದ್ಯಾರ್ಥಿಗೆ ಕಣ್ಣಿನ ನೋವು ಕಾಡುತ್ತಿದ್ದ ಕಾರಣ ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ಈತನ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ನಂತರ ಗಿರಿಮಲ್ಲೇಶ್‍ನನ್ನು ಪೋಷಕರು ವಿಚಾರಿಸಿದಾಗ ಐದು ತಿಂಗಳ ಹಿಂದೆ ಶಾಲೆಯಲ್ಲಿ ಹೀಗೆ ಆಗಿದೆ ಎಂದು ಹೇಳಿದ್ದಾನೆ. ಈ ಬಗ್ಗೆ ಗಿರಿಮಲ್ಲೇಶ್ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದ್ದನ್ನು ಒಪ್ಪಿಕೊಳ್ಳದ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕ ಯುಸೇಫ್‍ರನ್ನು 10 ದಿನಗಳ ರಜೆ ಮೇಲೆ ಕಳುಹಿಸಿತ್ತು. ಆದರೆ ಇದೀಗ ಪ್ರಕರಣ ವ್ಯಾಪಕ ಚರ್ಚೆ ಆದ ಕಾರಣ ಶಾಲೆಯ ಆಡಳಿತ ಮಂಡಳಿ ಯುಸೇಫ್ ನನ್ನು ಅಮಾನತುಗೊಳಿಸಿದೆ. ಸದ್ಯ ಗಿರಿಮಲ್ಲೇಶ್ ತಮಿಳುನಾಡಿನ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ನಕಲಿಗೆ ಅವಕಾಶ ಕೊಟ್ಟ 7 ದಾವಣಗೆರೆ ಶಿಕ್ಷಕರು ಅಮಾನತು

    ನಕಲಿಗೆ ಅವಕಾಶ ಕೊಟ್ಟ 7 ದಾವಣಗೆರೆ ಶಿಕ್ಷಕರು ಅಮಾನತು

    ದಾವಣಗೆರೆ: ಪ್ರಾಥಮಿಕ ಶಾಲೆಯ ಸಿಎಸ್‍ಎಎಸ್ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಿಸಿದ್ದ 7 ಮಂದಿ ಶಿಕ್ಷಕರನ್ನು ದಾವಣಗೆರೆ ಡಿಡಿಪಿಐ ಅಮಾನತು ಮಾಡಿ ಖಡಕ್ ಆದೇಶ ಹೊರಡಿಸಿದ್ದಾರೆ.

    ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಸೇವಾನಗರ ಶಾಲೆಯಲ್ಲಿ ಶಿಕ್ಷಕರು ಸಾಮೂಹಿಕ ನಕಲು ಮಾಡಿಸಿದ್ದರು. ನಕಲು ಮಾಡಿಸುತ್ತಿದ್ದ ವೀಡಿಯೋ ವೈರಲ್ ಆದ ಹಿನ್ನಲೆ ಡಿಡಿಪಿಐ ಕೋದಂಡರಾಮ ಅವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.

    ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರುಕ್ಮಿಣಿ, ಸಹ ಶಿಕ್ಷಕರಾದ ಅಂಗಡಿ ಶಾಂತಪ್ಪ, ಮಮತಾ, ಪರಮೇಶ್ವರನಾಯ್ಕ, ಹನುಮಂತಪ್ಪ, ಮಹದೇವಮ್ಮ ಮತ್ತು ಲಲಿತಾಬಾಯಿ ಅಮಾನತುಗೊಂಡವರು ಎಂದು ತಿಳಿದುಬಂದಿದೆ. 4 ರಿಂದ 7 ನೇ ತರಗತಿ ಮಕ್ಕಳ ಕಲಿಕಾ ಗುಣಮಟ್ಟ ತಿಳಿದುಕೊಳ್ಳಲು ನಡೆಸುವ ಪರೀಕ್ಷೆ ಇದಾಗಿದ್ದು, ಇದರಲ್ಲಿ ನಮ್ಮ ಶಾಲೆಯಿಂದ ಉತ್ತಮ ಫಲಿತಾಂಶ ಬರಲಿ ಎನ್ನುವ ನಿಟ್ಟಿನಲ್ಲಿ ಶಿಕ್ಷಕರೇ ನಕಲು ಮಾಡಿಸಿದ್ದರು ಎನ್ನಲಾಗಿದೆ.

    ಸಾರ್ವಜನಿಕ ದೂರಿನನ್ವಯ ಡಿಡಿಪಿಐರವರು ನಾಗರಿಕ ಸೇವಾ ನಿಯಮಾವಳಿ 1957 ರ ನಿಯಮ 3 (123) ಹಾಗೂ ರಾಜ್ಯ ಕಾಪಿ ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕಾರ ಕ್ರಮ ಕೈಗೊಂಡಿದ್ದಾರೆ.

  • ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಟೀ ವ್ಯಾಪಾರಿಗೆ ಥಳಿಸಿದ್ದ ಪಿಎಸ್‍ಐ ಅಮಾನತು

    ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಟೀ ವ್ಯಾಪಾರಿಗೆ ಥಳಿಸಿದ್ದ ಪಿಎಸ್‍ಐ ಅಮಾನತು

    ತುಮಕೂರು: ಮಾಮೂಲಿ ನೀಡದ್ದಕ್ಕೆ ಟೀ ಅಂಗಡಿ ಮಾಲೀಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್‍ಐ ನನ್ನು ಅಮಾನತು ಮಾಡಲಾಗಿದೆ.

    ದರ್ಪ ತೋರಿದ ಪಿಎಸ್‍ಐ ಶ್ರೀಕಾಂತ್‍ರನ್ನು ಅಮಾನತುಗೊಳಿಸಿ ಎಸ್‍ಪಿ ದಿವ್ಯಾ ಗೋಪಿನಾಥ್ ಆದೇಶಿಸಿದ್ದಾರೆ. ಬಿದರೆಗುಡಿ ಗ್ರಾಮದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ನಾರಾಯಣ ಕುಮಾರ್ ಎಂಬವರ ಬಳಿ ಪಿಎಸ್‍ಐ ಶ್ರೀಕಾಂತ ಲಂಚ ಕೇಳಿದ್ದರು. ಕಳೆದ 15 ವರ್ಷಗಳಿಂದ ನಾರಾಯಣ ಕುಮಾರ್ ರಾತ್ರಿ ವೇಳೆ ಟೀ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಇನ್ಮುಂದೆ ರಾತ್ರಿ ವ್ಯಾಪಾರ ಮಾಡೋದಾದ್ರೆ ತಿಂಗಳಿಗೆ ಐದು ಸಾವಿರ ರೂಪಾಯಿ ಲಂಚ ಕೊಡಬೇಕು ಎಂದು ಪಿಎಸ್‍ಐ ಬೇಡಿಕೆ ಇಟ್ಟಿದ್ರು ಎನ್ನಲಾಗಿದೆ. ಲಂಚ ನೀಡಲು ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಬಂದು ದರ್ಪ ತೋರಿದ್ದರು.

    ಮಾಮೂಲಿ ನೀಡಲು ನಿರಾಕರಿಸಿದ್ದಕ್ಕೆ ಅಂಗಡಿಗೆ ನುಗ್ಗಿ ನಾರಾಯಣ ಅವರನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇವರ ಜೊತೆ ಟೀ ಕುಡಿಯುತ್ತಿದ್ದ ಇಬ್ಬರು ಗ್ರಾಹಕರಿಗೂ ಥಳಿಸಿದ್ದರು. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರ ಅಗುತ್ತಿದ್ದಂತೆಯೇ ಎಸ್‍ಪಿ ದಿವ್ಯಾ ಗೋಪಿನಾಥ್ ಅವರು ಪಿಎಸ್‍ಐ ಶ್ರೀಕಾಂತ್‍ರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

    https://www.youtube.com/watch?v=MZF1PSuVnDA