Tag: Sushmita Sen

  • ನಟಿ ಸುಶ್ಮಿತಾ ಸೇನ್ ಜೊತೆಗೆ ಲಲಿತ್ ಮೋದಿ ಲವ್ವಿ-ಡವ್ವಿ

    ನಟಿ ಸುಶ್ಮಿತಾ ಸೇನ್ ಜೊತೆಗೆ ಲಲಿತ್ ಮೋದಿ ಲವ್ವಿ-ಡವ್ವಿ

    ಮುಂಬೈ: ಮಾಜಿ ಗೆಳೆಯ ರೋಹ್ಮನ್ ಶಾಲ್ ಜೊತೆಗಿನ ಬ್ರೇಕ್ ಅಪ್ ಬಳಿಕ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಉದ್ಯಮಿ ಮತ್ತು ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

     

    ಈ ಕುರಿತ ಮಾಹಿತಿಯನ್ನು ಲಲಿತ್ ಮೋದಿ ಅವರು ಕೆಲವು ಫೋಟೋಗಳನ್ನು ಗುರುವಾರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಾನು ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಮತ್ತು ಶೀಘ್ರದಲ್ಲಿಯೇ ಮದುವೆಯೂ ಆಗಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡೋನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ವಿಧಿವಶ

    ಸುಶ್ಮಿತಾ ಸೇನ್ ಅವರು ಲಲಿತ್ ಮೋದಿಯನ್ನು ಮದುವೆಯಾಗಿದ್ದಾರೆ ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಲಲಿತ್ ಮೋದಿ ಟ್ವೀಟ್ ಮಾಡುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

    ನಾವು ಪರಸ್ಪರ ಡೇಟಿಂಗ್ ಮಾಡುತ್ತಿರುವುದು ನಿಜ ಎಂದು ಬರೆದುಕೊಳ್ಳುವ ಮೂಲಕ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಇನ್ನೂ ಮದುವೆಯಾಗಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುಂದೊಂದು ದಿನ ಮದುವೆಯೂ ಆಗುತ್ತೇವೆ ಎಂದು ತಿಳಿಸಿದ್ದಾರೆ. ಫೋಟೋದಲ್ಲಿ ಸುಶ್ಮಿತಾ ಸೇನ್, ಲಲಿತ್ ಮೋದಿ ಮತ್ತು ಅವರ ದಿವಂಗತ ಪತ್ನಿ ಮಿನಲ್ ಮೋದಿ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಮಿನಲ್ ಮೋದಿ(64) ಅವರು 2018ರಲ್ಲಿ ನಿಧನರಾದರು.

    ಡಿಸೆಂಬರ್ 2020ರಲ್ಲಿ ತಮ್ಮ ಬಹುಕಾಲದ ಗೆಳೆಯ ಮತ್ತು ಮಾಡೆಲ್ ರೋಹ್ಮನ್ ಶಾಲ್‍ನೊಂದಿಗೆ ಸುಶ್ಮಿತಾ ಸೇನ್ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಅಲ್ಲದೇ ನಿರ್ಮಾಪಕ ವಿಕ್ರಮ್ ಭಟ್ ಅವರೊಂದಿಗೂ ಸುಶ್ಮಿತಾ ಸೇನ್ ಡೇಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು

    2010ರಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಮಧ್ಯೆ ಲಲಿತ್ ಮೋದಿ ಭಾರತ ತೊರೆದಿದ್ದರು. ಅಂದಿನಿಂದ ಅವರು ಲಂಡನ್‍ನಲ್ಲಿದ್ದಾರೆ. ಸುಶ್ಮಿತಾ ಸೇನ್ 1994ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ತೊಟ್ಟಿದ್ದರು. ನಂತರ ಅವರು 1996 ರ ಚಲನಚಿತ್ರ ದಸ್ತಕ್ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟರು. ಬಳಿಕ ಸೇನ್, ಬಿವಿ ನಂ 1, ಡು ನಾಟ್ ಡಿಸ್ಟರ್ಬ್, ಮೈ ಹೂ ನಾ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಂ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನಿ ಯುವತಿಯ ಮಾತನ್ನು ಒಪ್ಪದ ಯುವಕನಿಗೆ ಸರ್ಪ್ರೈಸ್ ಕೊಟ್ಟ ಸುಶ್ಮಿತಾ ಸೇನ್!

    ಪಾಕಿಸ್ತಾನಿ ಯುವತಿಯ ಮಾತನ್ನು ಒಪ್ಪದ ಯುವಕನಿಗೆ ಸರ್ಪ್ರೈಸ್ ಕೊಟ್ಟ ಸುಶ್ಮಿತಾ ಸೇನ್!

    ಮುಂಬೈ: ಪಾಕಿಸ್ತಾನಿ ಯುವತಿಯ ಮಾತನ್ನು ಒಪ್ಪದ ಯುವಕನಿಗೆ ಮಾಜಿ ವಿಶ್ವ ಸುಂದರಿ ಸುಶ್ಮಿತ ಸೇನ್ ಸರ್ಪ್ರೈಸ್ ನೀಡಿದ್ದಾರೆ.

    ಪಾಕಿಸ್ತಾನದ ಸೈನ್ ಎಂಬಾಕೆ ಅಮೃತಸರದ ಉದ್ಯಮಿಯಾಗಿರುವ ವರುಣ್ ಡಿಪಿ (ಡಿಸ್‍ಪ್ಲೈ ಪಿಚ್ಚರ್) ಬಗ್ಗೆ ಟ್ವೀಟ್ ಮಾಡಿದ್ದಳು. ಇಂದು ಯಾರೋ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ ಎಂದು ಸೈನ್, ವರುಣ್ ಡಿಪಿ ಬಗ್ಗೆ ಟ್ವೀಟ್ ಮಾಡಿದ್ದಳು.

    ಈ ಟ್ವೀಟ್‍ಗೆ ವರುಣ್ ಪ್ರತಿಕ್ರಿಯಿಸಿ, ಧನ್ಯವಾದ ನೀವು ಹೇಳುತ್ತಿದ್ದೀರಾ ಎಂದರೆ ನಾನು ಒಪ್ಪಿಕೊಳ್ಳುತ್ತೇನೆ ಎಂದು ರೀ-ಟ್ವೀಟ್ ಮಾಡಿದ್ದರು. ಅದಕ್ಕೆ ಸೈನ್ ಅರೇ ನಿನಗೆ ನಂಬಿಕೆ ಇಲ್ಲ ಎಂದರೆ ಬೇರೆಯವರಿಗೆ ಕೇಳು ಎಂದು ಮತ್ತೆ ಟ್ವೀಟ್ ಮಾಡಿದ್ದಳು.

    ನಂತರ ಸುಶ್ಮಿತಾ ಸೇನ್ ಹೇಳಿದ್ದರೆ, ಅದು ನಿಜವಾಗುತ್ತೆ ಆಗ ನಾನು ನಂಬುತ್ತೀನಿ ಎಂದು ಸೈನ್ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದಾರೆ. ನಂತರ ಸೈನ್ ನಟಿ ಸುಶ್ಮಿತಾ ಸೇನ್‍ಗೆ ಟ್ಯಾಗ್ ಮಾಡಿ “ಡಿಪಿ ಚೆನ್ನಾಗಿ ಇದೆ ಎಂದು ನೀವೇ ಅವನಿಗೆ ಹೇಳಿ” ಎಂದು ಟ್ವೀಟ್ ಮಾಡಿದ್ದಾಳೆ.

    ಸೈನ್ ಟ್ಯಾಗ್ ಮಾಡಿದ ಸ್ವಲ್ಪ ಸಮಯದಲ್ಲೇ ಸುಶ್ಮಿತಾ ಸೇನ್ “ಲವ್ ಯುವರ್ ಡಿಪಿ” ಎಂದು ವರುಣ್ ಡಿಪಿಗೆ ಟ್ವೀಟ್ ಮಾಡಿದ್ದಾರೆ. ಸುಶ್ಮಿತಾ ಪ್ರತಿಕ್ರಿಯೆ ನೋಡಿ ವರುಣ್ ಹಾಗೂ ಸೈನ್ ಖುಷಿಪಟ್ಟಿದ್ದಾರೆ. “ವಿಶ್ವ ಸುಂದರಿ ಲವ್ ಯುವರ್ ಡಿಪಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ನನಗೆ ಬಹಳ ಮಹತ್ವದ ಕ್ಷಣ ಹಾಗೂ ಖುಷಿಯ ವಿಷಯ” ಎಂದು ವರುಣ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.