Tag: Sushmita

  • ತೆರೆಯ ಮೇಲೆಯೂ ಜಗಪ್ಪ- ಸುಶ್ಮಿತಾ ಜೋಡಿ

    ತೆರೆಯ ಮೇಲೆಯೂ ಜಗಪ್ಪ- ಸುಶ್ಮಿತಾ ಜೋಡಿ

    ಕಿರುತೆರೆ ಖ್ಯಾತಿಯ ಯುವಜೋಡಿ ಜಗ್ಗಪ್ಪ (Jaggappa), ಸುಶ್ಮಿತಾ (Sushmita) ಅಭಿನಯದ,  ವೇಂಪಲ್ಲಿ ಬಾವಾಜಿ  ಅವರ ನಿರ್ದೇಶನದ  ಆನ್‌ಲೈನ್ ಮದುವೆ, ಆಫ್‌ಲೈನ್ ಶೋಭನ ಚಿತ್ರದ ಟ್ರೈಲರ್ ಹಾಗೂ 2 ಹಾಡುಗಳ ಪ್ರದರ್ಶನ  ಇತ್ತೀಚೆಗೆ ನಡೆಯಿತು, ಆನ್ ಲೈನ್ ಆಪ್ ಮೂಲಕ ಜೊತೆಯಾದ ಯುವಜೋಡಿಯ ಸುತ್ತ ನಡೆಯುವ   ಹಾಸ್ಯಪ್ರದಾನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅಪ್ಸರ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಂಪಲ್ಲಿ ಬಾವಾಜಿ (Vempalli Bawaji)  ಅವರೇ  ನಿರ್ಮಾಣ ಮಾಡಿದ್ದಾರೆ. ಜಗಪ್ಪ, ಸುಶ್ಮಿತ, ಸೀರುಂಡೆ ರಘು  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವೇಂಪಲ್ಲಿ ಬಾವಾಜಿ ಪೂರ್ಣ ಪ್ರಮಾಣದ ಎಂಟರ್‌ಟೈನರ್ ಕಥಾಹಂದರ ಈ ಚಿತ್ರದಲ್ಲಿದ್ದು, ಈ ಕಥೆಗೆ ಯಾರು ಸೂಟ್ ಆಗ್ತಾರೆ ಅಂತ ಹುಡುಕಿದಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದ ಜಗಪ್ಪ , ಸುಶ್ಮಿತಾ ಸಿಕ್ಕರು. ಇಡೀ ಚಿತ್ರದಲ್ಲಿ ನಗದೇ ಇರೋದಕ್ಕೆ ಗ್ಯಾಪ್ ಕೊಟ್ಟಿಲ್ಲ, ನಗದೇ ಇರುವವರಿಗೆ ಲಕ್ಷ ರೂಪಾಯಿ ಬಹುಮಾನ ಕೊಡುತ್ತೇವೆ. ಈ ಚಿತ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ  ಅಲ್ಲದೇ ಹಾಡುಗಳನ್ನು ಆನೇಕಲ್‌ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್‌ವೊಂದರಲ್ಲಿ  ಚಿತ್ರೀಕರಣ

    ನಡೆಸಿದ್ದೇವೆ. ಈಗಿನ ಯೂಥ್ ಎಲ್ಲದಕ್ಕೂ ಸೋಷಿಯಲ್ ಮೀಡಿಯಾ ನೋಡುತ್ತಾರೆ, ಅದೇರೀತಿ‌ ಇದ್ದ ನಾಯಕ ನಾಯಕಿ ಹೇಗೆ ಮದುವೆಯಾಗ್ತಾರೆ ಅಂತ ಸಿನಿಮಾದಲ್ಲಿ ಹೇಳಿದ್ದೇವೆ. ಮನರಂಜನೆಗಾಗಿ ಮಾಡಿದ ಚಿತ್ರವಿದು ಎಂದು ಹೇಳಿದರು, ನಂತರ ನಾಯಕಿ ಸುಶ್ಮಿತಾ ಮಾತನಾಡುತ್ತ ಆರಂಭದಲ್ಲಿ ಹಾಡು ಇದ್ದಿಲ್ಲ, ನಂತರ ಸೇರಿಸಲಾಯಿತು, ಆಡಂಬರ ಅಬ್ಬರ ಇಲ್ಲದ ಫ್ಯಾಮಿಲಿ ಸ್ಟೋರಿಯಿದು ಎಂದರು.

    ನಂತರ ನಾಯಕ ಜಗಪ್ಪ ಮಾತನಾಡಿ ಚಿತ್ರದಲ್ಲಿ ಎಲ್ಲ ಪಾತ್ರಗಳೂ ಲೀಡ್ ಆಗಿವೆ, ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತ ಇರುತ್ತೇನೆ, ಆಗ ಆನ್‌ಲೈನ್ ಆಪ್‌ನಲ್ಲಿ ಹುಡುಗಿಯಬ್ಬಳು ಸಿಗುತ್ತಾಳೆ.  ಗಂಡ ಹೆಂಡತಿಯ ಜಗಳದ ಡೈಲಾಗ್‌ಗಳು ಚೆನ್ನಾಗಿ ಬಂದಿವೆ ಎಂದು ಹೇಳಿದರು, ನಾಯಕಿಯ ಸಹೋದರನಾಗಿ ಕಾಣಿಸಿಕೊಂಡಿರುವ ಸೀರುಂಡೆ ರಘು ಮಾತನಾಡಿ ನಾವೆಲ್ಲ ರಿಯಾಲಿಟಿ ಶೋನಿಂದ ಬಂದವರು, ೮ ವರ್ಷಗಳಿಂದಲೂ ಸ್ನೇಹಿತರು ಎಂದು ಹೇಳಿಕೊಂಡರು. ಸಂಗೀತ ನಿರ್ದೇಶಕ ಅರುಣ್ ಪ್ರಸಾದ್ ಮಾತನಾಡುತ್ತ ಬಾವಾಜಿ ನನಗೆ ೮ ವರ್ಷಗಳಿಂದ ಸ್ನೇಹಿತರು, ಉತ್ತಮ ಕಾರ್ಟೂನಿಸ್ಟ್ ಕೂಡ, ಅಡ್ಜಸ್ಟ್ ಮಾಡ್ಕೊಳಿ ಸಾಂಗ್ ನಾನೇ ಬರೆದಿದ್ದೇನೆ ಎಂದು ಹೇಳಿದರು. ನಿರ್ಮಾಪಕ ಕುಮಾರ್ ಮಾತನಾಡಿ ಬಾವಾಜಿ ನನಗೆ ತುಂಬಾ ವರ್ಷಗಳ  ಸ್ನೇಹಿತರು, ಒಂದೊಳ್ಳೇ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.

     

    ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಅಲ್ಲದೆ ಆಂಕರ್ ದಯಾನಂದ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆಯನ್ನು ನಿರ್ದೇಶಕ ವೇಂಪಲ್ಲಿ ಬಾವಾಜೀ ಅವರೇ ಬರೆದಿದ್ದಾರೆ. ಬಾಲು ಅವರ ಕ್ಯಾಮೆರಾವರ್ಕ, ರೋಹಿತ್ ಅವರ ಸಂಕಲನ, ಅಲೆಕ್ಸ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

  • ನ.19ಕ್ಕೆ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ ಮದುವೆ

    ನ.19ಕ್ಕೆ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ ಮದುವೆ

    ನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ (Gichchi Giligili), ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ (Sushmita) ಮತ್ತು ಜಗ್ಗಪ್ಪ (Jaggappa) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದು, ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ.

    ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಇತ್ತು. ಆದರೆ, ಈ ಜೋಡಿ ಅದನ್ನು ಅಲ್ಲಗಳೆಯುತ್ತಲೇ ಬಂದರು.

    ಕಾಮಿಡಿ ಶೋಗಳಲ್ಲಿ ಅನೇಕ ಬಾರಿ ಗಂಡ ಹೆಂಡತಿ ಪಾತ್ರ ಮಾಡುತ್ತಾ ಬಂದಿರುವುದರಿಂದ ಜನರು ಆ ರೀತಿಯಲ್ಲಿ ತಿಳಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರುತ್ತಿದ್ದಾರೆ.

    ನಿನ್ನೆ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನಾಳೆ ಮಾಂಗಲ್ಯ ಧಾರಣೆವಿದೆ. ಈ ಜೋಡಿಯ ವಿವಾಹ (marriage) ಮುಹೋತ್ಸವಕ್ಕೆ ಅನೇಕ ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಭಾಗಿಯಾಗಲಿದ್ದಾರೆ.

    ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಜೋಡಿಯಾಗಿದ್ದ ಸುಷ್ಮಿತಾ ಮತ್ತು ಜಗ್ಗಪ್ಪ ಜೋಡಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಈ ಜೋಡಿಯ ಕಾಮಿಡಿ ವಿಡಿಯೋಗಳು ವೈರಲ್ ಕೂಡ ಆಗಿವೆ.


    ಇಂತಹ ಜನಪ್ರಿಯ ಜೋಡಿಯು ಕೇವಲ ವೇದಿಕೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಜೊತೆಯಾಗಿವೆ.

  • ‘ಆನ್ ಲೈನ್ ಮದುವೆ ಆಫ್ ಲೈನ್ ಶೋಭನ’ಕ್ಕೆ ಸಜ್ಜಾದ ಜಗ್ಗಪ್ಪ

    ‘ಆನ್ ಲೈನ್ ಮದುವೆ ಆಫ್ ಲೈನ್ ಶೋಭನ’ಕ್ಕೆ ಸಜ್ಜಾದ ಜಗ್ಗಪ್ಪ

    ಪ್ಸರ ಮೂವೀಸ್ ಲಾಂಛನದಲ್ಲಿ ವೇಂಪಲ್ಲಿ ಬಾವಾಜಿ (Bavaji) ಅವರ ನಿರ್ದೇಶನದಲ್ಲಿ ‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ (Online Maduve, Offline Shobhana) ಎಂಬ ಹಾಸ್ಯ ಪ್ರಧಾನ ಕಥಾಹಂದರ ಹೊಂದಿದ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ‌. ಈ ಹಿಂದೆ ಗರ್ಭದಗುಡಿ, 141, ಅಕ್ಕ ಬಾವ ಬಾಮೈದ, ನೀನೇನಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಬಾವಾಜಿ ಈಗ ಮತ್ತೊಂದು ಅಪ್ಪಟ ಕಾಮಿಡಿ ಚಿತ್ರವನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ಬಾವಾಜಿ ಅವರೇ ಬರೆದಿದ್ದಾರೆ.

    ಈಗಿನ ಟ್ರೆಂಡ್ ಗೆ ತಕ್ಕಂತೆ ಕಾಮಿಡಿ, ಫ್ಯಾಮಿಲಿ ಎಂಟರ್ ಟೈನರ್, ಕಥಾಹಂದರ ಹೊಂದಿರುವ  ಚಿತ್ರ ಇದಾಗಿದ್ದು,  ಕುಟುಂಬ ಸಮೇತ ಕುಳಿತು ವೀಕ್ಷಿಸುವಂಥ ಅನ್ ಲಿಮಿಟೆಡ್ ಕಾಮಿಡಿ ಜೊತೆಗೆ ಡಿಫರೆಂಟ್ ಕಾನ್ಸೆಪ್ಟ್ ಇದರಲ್ಲಿದೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಈ ಚಿತ್ರದ ಮಾತಿನ ಭಾಗವನ್ನು ಬೆಂಗಳೂರು, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ  ಅಲ್ಲದೇ ಹಾಡುಗಳನ್ನು ಆನೇಕಲ್ ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್ ವೊಂದರಲ್ಲಿ  ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

     

    ಜಗ್ಗಪ್ಪ(Jaggappa) , ಸುಶ್ಮಿತಾ, (Sushmita)  ಸೀರುಂಡೆ ರಘು, ಗಜೇಂದ್ರ, ರಾಘವಿ ಸೇರಿದಂತೆ  ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ  ಯಶಸ್ವಿನಿ, ಚಂದನ, ಶರಣ್ಯ ರೆಡ್ಡಿ ಮುಂತಾದವರು  ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.  ಬಾಲು ಅವರ ಕ್ಯಾಮೆರಾ ವರ್ಕ್, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಅವರ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.