Tag: Sushma swaraj

  • ಆತ್ಮೀಯ ಗೆಳೆಯ ಮೋದಿಗೆ ಶುಭಾಶಯ ತಿಳಿಸಿದ್ರು ಡೊನಾಲ್ಡ್ ಟ್ರಂಪ್

    ಆತ್ಮೀಯ ಗೆಳೆಯ ಮೋದಿಗೆ ಶುಭಾಶಯ ತಿಳಿಸಿದ್ರು ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿಶೇಷ ಒಲವನ್ನು ಹೊರಹಾಕಿ, ಸ್ನೇಹಿತನಿಗೆ ಶುಭಾಶಯ ತಿಳಿಸಿದ್ದಾರೆ.

    ‘ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಶುಭಾಶಯಗಳನ್ನು ತಿಳಿಸಿಬಿಡಿ ಅಂತ ಡೊನಾಲ್ಡ್ ಟ್ರಂಪ್ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಹೇಳಿದ್ದಾರೆ.

    ಅಮೆರಿಕಾದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯದ ವಿರುದ್ಧದ ಜಾಗತಿಕ ಮಟ್ಟದ ಸಭೆಯಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಭಾಗಿಯಾಗಿದ್ದರು. ಈ ವೇಳೆ ಸುಷ್ಮಾ ಸ್ವರಾಜ್ ಅವರನ್ನು ಅಮೆರಿಕಾದ ರಾಯಭಾರಿ ನಿಕ್ಕಿ ಹಾಲೆ, ಟ್ರಂಪ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

     

    ಟ್ರಂಪ್ ಜೊತೆಗೆ ಮಾತು ಪ್ರಾರಂಭಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಶುಭಾಶಯ ತಿಳಿಸಲು ಹೇಳಿದ್ದಾರೆ ಎಂದು ಸುಷ್ಮಾ ಶುಭಕೊರಿದ್ದೇ ತಡ, ಟ್ರಂಪ್ ಪ್ರತಿಕ್ರಿಯಿಸಿ, ‘ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನನ್ನ ಶುಭಾಶಯ ತಿಳಿಸಿ ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್ ಟ್ರಂಪ್ ಅವರು ಸ್ನೇಹಿತ ಅಂತ ಕರೆದಿದ್ದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್ ನಂದು ಅಮೆರಿಕಾದ ವೈಟ್ ಹೌಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡ ಮೋದಿ ನನ್ನ ಆತ್ಮೀಯ ಗೆಳೆಯ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನನ್ನು ಬ್ಲಾಕ್ ಮಾಡಿ ಎಂದ ಅಭಿಮಾನಿಗೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ನನ್ನನ್ನು ಬ್ಲಾಕ್ ಮಾಡಿ ಎಂದ ಅಭಿಮಾನಿಗೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ನವದೆಹಲಿ: ಅಂತರಧರ್ಮಿಯ ವಿವಾಹವಾಗಿದ್ದ ದಂಪತಿಗೆ ಪಾಸ್‍ಪೋರ್ಟ್ ನೀಡುವ ವಿಚಾರದಲ್ಲಿ ಟ್ರೋಲ್ ಆಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

    ಅಂದಹಾಗೆ ಸುಷ್ಮಾ ಸ್ವರಾಜ್ ಅವರ ನಡೆಯನ್ನು ವಿರೋಧಿಸಿದ್ದ ಸೋನಮ್ ಎಂಬವರು ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ಆದರೆ ಅವರ ಟ್ವೀಟ್ ಗೆ ತೀಕ್ಷ್ಣ ಪ್ರತಿಕ್ರಿಯೆ ಎಂಬಂತೆ ಅವರನ್ನು ಬ್ಲಾಕ್ ಮಾಡಿ ತಿರುಗೇಟು ನೀಡಿದ್ದರು. ಆದರೆ ಅವರನ್ನು ಬ್ಲಾಕ್ ಮಾಡಿ ಬಳಿಕ ಟ್ವೀಟಿಗರು ಮತ್ತೊಮ್ಮೆ ಟ್ರೋಲ್ ಮಾಡಿದ್ದು, ನಮ್ಮನ್ನು ಬ್ಲಾಕ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

    ಅಂದಹಾಗೇ ಸೋನಮ್ ತಮ್ಮ ಟ್ವೀಟ್ ನಲ್ಲಿ, ಉತ್ತಮ ಆಡಳಿತ ನೀಡಲು ಬಂದಿದ್ದರು. ನೋಡಿ ಸದ್ಯ ಉತ್ತಮ ದಿನಗಳು ಬಂದಿದೆ. ಸುಷ್ಮಾ ಅವರೇ ನಾನು ನಿಮ್ಮ ಅಭಿಮಾನಿಯಾಗಿದ್ದು, ನಿಮ್ಮನ್ನು ವಿರೋಧಿಸುತ್ತೇನೆ. ಈಗ ನೀವು ನನ್ನನ್ನು ಬ್ಲಾಕ್ ಮಾಡುವ ಮೂಲಕ ಉತ್ತಮ ಬಹುಮಾನ ನೀಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಈ ಟ್ವೀಟ್ ಗೂ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಇದಕ್ಕಾಗಿ ಏಕೆ ಕಾಯುತ್ತೀರಿ? ನಿಮ್ಮನ್ನು ಬ್ಲಾಕ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿ ಟ್ರೋಲ್ ಮಾಡುವ ಮಂದಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

    ಈ ಹಿಂದೆ ಇಸ್ಲಾಮಿಕ್ ಕಿಡ್ನಿ ಪಡೆದಿರುವ ಸುಷ್ಮಾ ಸ್ವರಾಜ್ ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ ಎಂದು ಕೆಲ ಮಂದಿ ನಿಂದಿಸಿ ಟ್ರೋಲ್ ಮಾಡಿದ್ದರು. ಈ ವೇಳೆ ಟ್ವಿಟ್ಟರ್ ಪೋಲ್ ನಡೆಸಿದ್ದ ಸುಷ್ಮಾ ಅವರು ಇಂತಹ ಟ್ವೀಟ್‍ಗಳನ್ನು ನೀವು ಇಷ್ಟ ಪಡುತ್ತೀರಾ? ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿದ್ದರು. ಪೋಲ್ ನಲ್ಲಿ ಸುಷ್ಮಾ ಸ್ವರಾಜ್ ಅವರ ಪರ 57% ಮಂದೊ ವೋಟ್ ಹಾಕಿ ಬೆಂಬಲ ಸೂಚಿಸಿದ್ದರು.

    https://twitter.com/AsYouNotWish/status/1013771459615813632

    ಟ್ರೋಲ್ ಮಾಡುವವರಿಗೆ ಪೋಲ್ ನೀಡುವ ಮೂಲಕ ಸುಷ್ಮಾ ಸ್ವರಾಜ್ ಉತ್ತರ ನೀಡಿದ ಬಳಿಕವೂ ಅವರ ವಿರುದ್ಧ ಹಲವರು ಟ್ರೋಲ್ ಮಾಡುತ್ತಲೇ ಇದ್ದರು. ಈ ಕುರಿತು ಹಲವರು ರಾಜಕೀಯ ನಾಯಕರು ಸುಷ್ಮಾ ಸ್ವರಾಜ್ ಅವರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದರು. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಟ್ವೀಟ್ ಮಾಡಿ, ಸುಷ್ಮಾ ಅವರ ಹಿರಿಯ ರಾಜಕಾರಿಣಿ, ಅವರ ವಿರುದ್ಧ ಬಳಕೆ ಮಾಡುತ್ತಿರುವ ಭಾಷೆಯನ್ನು ವಿರೋಧಿಸುವುದಾಗಿ ಹೇಳಿದ್ದರು.

    ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಸಹ ತಮ್ಮ ಸಂಪುಟ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಳಕೆ ಮಾಡಲಾಗುತ್ತಿದ್ದ ಭಾಷೆಯನ್ನು ಖಂಡಿಸಿ ಸುಷ್ಮಾ ರ ಬೆಂಬಲಕ್ಕೆ ನಿಂತಿದ್ದರು.

  • ನೀವ್ಯಾಕೆ ನಿಮ್ಮ ಪತ್ನಿಗೆ ಹೊಡೆದು ಬುದ್ದಿ ಹೇಳಬಾರದು?-ಸುಷ್ಮಾ ಸ್ವರಾಜ್ ಪತಿಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ

    ನೀವ್ಯಾಕೆ ನಿಮ್ಮ ಪತ್ನಿಗೆ ಹೊಡೆದು ಬುದ್ದಿ ಹೇಳಬಾರದು?-ಸುಷ್ಮಾ ಸ್ವರಾಜ್ ಪತಿಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ

    ನವದೆಹಲಿ: ದೆಹಲಿ ಐಐಟಿಯ ಮುಖೇಶ್ ಗುಪ್ತಾ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವಿಟ್ಟರ್ ನಲ್ಲಿ  ಜನರ ಅಭಿಪ್ರಾಯವನ್ನು ಕೇಳಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆ ದೆಹಲಿಯ ಐಐಟಿಯ ಮುಖೇಶ್ ಗುಪ್ತಾ ಎಂಬವರು ಟ್ಟಿಟ್ಟರ್ ನಲ್ಲಿ ಹಾಕಿದ್ದ ಅವಹೇಳನಕಾರಿ ಪೋಸ್ಟ್ ವಿರುದ್ಧ ಕೇಂದ್ರ ಸಚಿವೆ ತೀವ್ರವಾಗಿ ಖಂಡಿಸಿದ್ದಾರೆ. ನಾನು ಕೆಲವು ಟ್ವಿಟ್ಟರ್ ಪೋಸ್ಟ್ ಗಳನ್ನು ಲೈಕ್ ಮಾಡುತ್ತೇನೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಬಂದಿದ್ದ ಪೋಸ್ಟ್ ನ ಕುರಿತು ನೀವೇ ನಿರ್ಧಾರ ತಿಳಿಸಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ವೋಟ್ ಮಾಡಿ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗು ಒಟ್ಟು 56,521 ಮಂದಿ ಟ್ವಿಟ್ಟರ್ ನಲ್ಲಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಏನಿದು ಟ್ಟಿಟ್ಟರ್  ಪೋಸ್ಟ್?
    ದೆಹಲಿಯ ಐಐಟಿ ಕಾಲೇಜಿನ ಮುಖೇಶ್ ಗುಪ್ತಾರವರು ತಮ್ಮ ಟ್ವಿಟ್ವರಿನಲ್ಲಿ, ಸುಷ್ಮಾ ಸ್ವರಾಜ್ ರಾತ್ರಿ ಮನೆಗೆ ಬಂದಾಗ ನೀವ್ಯಾಕೆ ಆಕೆಗೆ ಹೊಡೆದು ಮುಸ್ಲಿಂಮರನ್ನು ಓಲೈಸ್ಬೇಡಿ ಅಂತ ಯಾಕೆ ಹೇಳಾಬಾರದು, ಮುಸ್ಲಿಂಮರನ್ನು ಓಲೈಸುವುದರಿಂದ ಬಿಜೆಪಿಗೆ ಯಾವತ್ತೂ ವೋಟ್ ಸಿಗಲ್ಲ ಎಂದು ಸುಷ್ಮಾ ಸ್ವರಾಜ್ ಪತಿಗೆ ಪೋಸ್ಟ್ ಮಾಡಿದ್ದರು. ಮಹೇಶ್ ಗುಪ್ತಾರವರ ಟ್ಟಿಟ್ಟರ್ ಪೋಸ್ಟ್ಅನ್ನು ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ತೀವ್ರವಾಗಿ ಖಂಡಿಸಿದ್ದರು. ಅಲ್ಲದೇ ಇಂತಹ ಹೇಳಿಕೆಗೆ ಜನರೇ ಸರಿಯಾದ ಉತ್ತರ ಕೋಡುತ್ತಾರೆ ಎಂದು ಮುಖೇಶ್ ಗುಪ್ತಾರವರ ಟ್ವೀಟ್‍ನ್ನು ರೀ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್

    https://twitter.com/governorswaraj/status/1012949727774535680

  • ಈಗ ಪಾಸ್ ಪೋರ್ಟ್ ಪಡೆಯುವುದು ಇನ್ನೂ ಸುಲಭ: ಹೊಸ ಬದಲಾವಣೆ ಏನು?

    ಈಗ ಪಾಸ್ ಪೋರ್ಟ್ ಪಡೆಯುವುದು ಇನ್ನೂ ಸುಲಭ: ಹೊಸ ಬದಲಾವಣೆ ಏನು?

    ನವದೆಹಲಿ: ಪಾಸ್ ಪೋರ್ಟ್ ಪಡೆಯಲು ಹೇರಿದ್ದ ಕಠಿಣ ಷರತ್ತುಗಳನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಸಡಿಲಗೊಳಿಸಿ ಶೀಘ್ರವಾಗಿ ಕೈ ಸೇರುವಂತ ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ.

    ಮಂಗಳವಾರ ನಡೆದ ರಾಷ್ಟ್ರೀಯ ಪಾಸ್ ಪೋರ್ಟ್ ದಿನದಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರವರು, ಪಾಸ್ ಪೋರ್ಟ್ ನಿಯಾಮಳಿಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿ, ಹಲವು ಕಠಿಣ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಹೊಸ ಯೋಜನೆಯಿಂದ ದೇಶದ ನಾಗರಿಕರು ತಮ್ಮ ಮೂಲ ವಿಳಾಸದಿಂದ ದೇಶದ ಯಾವುದೇ ಭಾಗದಲ್ಲಿಯೂ ಕೂಡ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಬದಲಾವಣೆಯಿಂದ ಉದ್ಯೋಗಕ್ಕಾಗಿ ಬೇರೆ ಕಡೆ ವಾಸಿಸುವ ಜನರಿಗೆ ಅನುಕೂಲವಾಗಿದೆ. ಅಲ್ಲದೇ ಜನರು ತಮಗೆ ಬೇಕಾದ ಸೇವಾಕೇಂದ್ರವನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

    ಪಾಸ್ ಪೋರ್ಟ್ ಸಲ್ಲಿಸಲು ಹೊಸ ಮೊಬೈಲ್ ಆ್ಯಪನ್ನು ಜಾರಿಗೊಳಿಸಿದ್ದು, ಇದರಿಂದ ಯಾವುದೇ ಭಾಗದಿಂದಲೂ ನಾಗರಿಕರು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಈಗಿನಿಂದಲೇ ಜಾರಿಬರಲಿದ್ದು, ನೀವು ಒಂದು ವೇಳೆ ಬೆಂಗಳೂರಿನಲ್ಲಿದ್ದುಕೊಂಡು ಕೆಲಸಕ್ಕಾಗಿ ಕೋಲ್ಕತ್ತಾಗೆ ಬಂದಿದ್ದರೆ ನೀವು ಬೆಂಗಳೂರಿನಲ್ಲಿ ಮೊದಲು ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಈ ಹೊಸ ಯೋಜನೆಯಿಂದ ನೀವು ಕೋಲ್ಕತ್ತಾದಲ್ಲಿಯೇ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

    ಪಾಸ್‍ಪೋರ್ಟ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಸರ್ಕಾರ ಪಾಸ್‍ಪೋರ್ಟ್ ವ್ಯವಸ್ಥೆ ಸುಲಭಗೊಳಿಸಿದ್ದರಿಂದ ಕ್ರಾಂತಿಕಾರಿ ಬದಲಾವಣೆಯಾಗಲಿದ್ದು, ಯಾರು ಹುಟ್ಟಿದ ದಿನಾಂಕ ಇಲ್ಲಯೋ ಅವರು ಸಹ ಅರ್ಜಿ ಸಲ್ಲಿಸಬಹುದು ಹಾಗೂ ಕಡ್ಡಾಯವಾಗಿ ವಿವಾಹ ನೋಂದಣಿ ಪತ್ರ ಸಲ್ಲಿಕೆಯನ್ನು ತೆಗೆದುಹಾಕಲಾಗಿದ್ದು ಇದರಿಂದ ಹಲವು ದಿನಗಳ ವರಗೆ ಕಾಯುವ ತೊಂದರೆ ತಪ್ಪುತ್ತದೆ. ವಿಚ್ಛೇದನ ಹೊಂದಿದವರಿಗೆ ಪಾಸ್‍ಪೋರ್ಟ್ ಪಡೆಯಲು ಇದು ಸಹಾಯಕವಾಗಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್

    ವಿಚ್ಛೇದಿತ ಮಹಿಳೆಯರು ತಮ್ಮ ಮಾಜಿ ಪತಿ ಮತ್ತು ಅವರ ಮಕ್ಕಳ ಹೆಸರನ್ನು ತುಂಬಬೇಕಾದ ಅಗತ್ಯವಿಲ್ಲ ಹಾಗೂ ಸದ್ಯ ದೇಶದಲ್ಲಿ ಒಟ್ಟು 370 ಪಾಸ್ ಪೋರ್ಟ್ ಸೇವಾ ಕೇಂದ್ರಗಳಿದ್ದು, ಇವುಗಳನ್ನು ದೇಶದ 545 ಲೋಕಸಭಾ ಕ್ಷೇತ್ರಗಳಿಗೂ ವಿಸ್ತರಿಸುವ ಗುರಿಯನ್ನು ತಿಳಿಸಿದ್ದಾರೆ.

    ಏನಿಲ್ಲಾ ಷರತ್ತುಗಳು ಬದಲಾವಣೆಯಾಗಿವೆ?
    ನಾಗರಿಕರು ತಮ್ಮ ವ್ಯಾಪ್ತಿಯಲ್ಲೇ ಬರುವ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಕ್ರಮ, ಪತಿ-ಪತ್ನಿಯರ ಕಡ್ಡಾಯ ವಿವಾಹ ನೋಂದಣಿ ಪತ್ರ ಲಗತ್ತು, ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವಿಚ್ಛೇದಿತ ದಂಪತಿಗಳ ಹೆಸರು ನಮೂದುಗೊಳಿಸುವ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿದೆ.

  • ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್

    ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್

    – ಪಾಸ್ ಪೋರ್ಟ್ ನಿಯಮಗಳಲ್ಲಿ `ಕಾಂತ್ರಿಕಾರಿ’ ಬದಲಾವಣೆ

    ನವದೆಹಲಿ: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಸ್ಲಿಂ ಸಮುದಾಯದ ಪರ ನಿಂತಿದ್ದ ಕಾರಣ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಒಳಗಾಗಿದ್ದರು. ಆದರೆ ಸದ್ಯ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು ಆ್ಯಪ್ ಬಿಡುಗಡೆಗೊಳಿಸಿ ಕಾಂತ್ರಿಕಾರಿ ಬದಲಾವಣೆಗೆ ಕಾರಣರಾಗಿದ್ದಾರೆ.

    ಪಾಸ್ ಪೋರ್ಟ್ ದಿವಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಸ್ ಪೋರ್ಟ್ ಪಡೆಯಲು ಯಾವುದೇ ಕಚೇರಿಯಲ್ಲೂ ವಿವಾಹ ಪ್ರಮಾಣ ಪತ್ರ ತೋರಿಸಬೇಕಾದ ಅಗತ್ಯವಿಲ್ಲ. ಅಲ್ಲದೇ ಭಾರತದ ಯಾವುದೇ ಮೂಲೆಯಿಂದಲೂ ಸಹ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಎಂದು  ತಿಳಿಸಿದ್ದಾರೆ. ಅಲ್ಲದೇ ವಿಚ್ಛೇದಿತ ಮಹಿಳೆಯರು ತಮ್ಮ ಮಾಜಿ ಪತಿ ಮತ್ತು ಅವರ ಮಕ್ಕಳ ಹೆಸರನ್ನು ತುಂಬಬೇಕಾದ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಪಪಡಿಸಿದೆ.

    ಈ ಬದಲಾವಣೆಯನ್ನು ಪಾಸ್ ಪೋರ್ಟ್ ನಿಯಮಗಳಲ್ಲಿ ಮಾಡಲಾದ ಕಾಂತ್ರಿಕಾರಿ ಬದಲಾವಣೆ ಎಂದು ಕರೆದಿರುವ ಸುಷ್ಮಾ ಸ್ವರಾಜ್ ಅವರು, ವಿಚ್ಚೇದಿತ ಪುರುಷ ಹಾಗೂ ಆತನೊಂದಿಗಿರುವ ಮಕ್ಕಳ ಹೆಸರನ್ನು ನಮೂದಿಸಬೇಕೆ ಎಂಬ ಬಗ್ಗೆ ಕೆಲ ವಿಚ್ಚೇದಿತ ಮಹಿಳೆಯರು ದೂರು ನೀಡಿದ್ದರು. ಆದ್ದರಿಂದ ನಿಯಮವನ್ನು ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

    ದೇಶದಲ್ಲಿ 260 ಪಾಸ್ ಪೋರ್ಟ್ ಸೇವಾ ಕೇಂದ್ರಗಳ ಸ್ಥಾಪನೆ ಕುರಿತು ಮಾಹಿತಿ ನೀಡಿದ ಅವರು, ಈಗಾಗಲೇ 212 ಕೇಂದ್ರಗಳು ಕಾರ್ಯಾರಂಭ ಮಾಡಿದೆ. ಇನ್ನು 38 ಹೆಚ್ಚುವರಿ ಕೇಂದ್ರಗಳಲ್ಲಿ ಎರಡು ಕೇಂದ್ರಗಳು ಆಂರಭಿಸುವ ಹಂತದಲ್ಲಿದೆ. ದೇಶದ ಲೋಕಸಭಾ ಕ್ಷೇತ್ರಗಳಿಗೆ ಒಂದರಂತೆ 260 ಕೇಂದ್ರಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು.

    ಇದಕ್ಕೂ ಮೊದಲು ಲಖನೌದಲ್ಲಿ ಅಂತರ್ ಧರ್ಮೀಯ ದಂಪತಿಗೆ ಕಿರುಕುಳ ನೀಡಿದ್ದ ಪಾಸ್‍ಪೋರ್ಟ್ ಅಧಿಕಾರಿಯನ್ನು ವರ್ಗಾವಣೆ ಮಾಡಿ, ಅಧಿಕಾರಿಯ ವಿರುದ್ಧ ಕೈಗೊಂಡ ಬಗ್ಗೆ ಕೆಲವರು ಟ್ರೋಲ್ ಮಾಡಿದ್ದರು. ಇಸ್ಲಾಮಿಕ್ ಕಿಡ್ನಿ ಪಡೆದಿದ್ದರ ಫಲ ಎಂದೆಲ್ಲಾ ಕಮೆಂಟ್ ಮಾಡಿದ್ದರು. ಈ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ ಸುಷ್ಮಾ ಅವರು ಅಂತಹ ಟ್ರೋಲ್ ಲೈಕ್ ಮಾಡಿ, ಕೆಲವರ ಟ್ವೀಟ್ ನಿಂದ ದೊಡ್ಡ ಗೌರವವೇ ಸಿಕ್ಕಿದೆ. ಅದನ್ನು ನಾನು ನಿಮ್ಮೊಂದಿಗೆ ಶೇರ್ ಮಾಡಿದ್ದೇನೆ. ಅದನ್ನು ನಾನು ಇಷ್ಟಪಟ್ಟಿದ್ದೇನೆ ಎಂದು ಟಾಂಗ್ ನೀಡಿದ್ದಾರೆ.

  • 14 ನಿಮಿಷ ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

    14 ನಿಮಿಷ ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ 14 ನಿಮಿಷ ರಾಡಾರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

    ಶನಿವಾರ ಮಧ್ಯಾಹ್ನ 2.08ಕ್ಕೆ ಸುಷ್ಮಾ ಸ್ವರಾಜ್ ಭಾರತೀಯ ವಾಯುಪಡೆಯ ಎಂಬ್ರೆಯರ್ 135 ವಿಮಾನದಲ್ಲಿ ಪ್ರಯಾಣ ಆರಂಭಿಸಿದ್ದರು. ತಿರುವನಂತಪುರದಿಂದ ಪ್ರಯಾಣ ಆರಂಭಿಸಿದ ಸುಷ್ಮಾ ಅವರು ಮಾರಿಷಸ್‍ಗೆ ತರಳುತ್ತಿತ್ತು. ವಿಮಾನ ಸಂಜೆ 4.44ಕ್ಕೆ ಮಾಲೆಯ ಎಟಿಸಿ(ವಿಮಾನ ಸಂಚಾರ ನಿಯಂತ್ರಣ)ಯೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ನಂತರ ಮಾಲೆ ಎಟಿಸಿಯನ್ನು ಮಾರಿಷಸ್‍ಗೆ ವರ್ಗಾಯಿಸಿತ್ತು.

    ಮಾಲೆಯಿಂದ ಮಾರಿಷಸ್‍ಗೆ ಎಟಿಸಿ ವರ್ಗಾಯಿಸುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಒಂದು ವೇಳೆ ಎಟಿಸಿ ಸಂಪರ್ಕ ಕಳೆದುಕೊಂಡಾಗ ಅಧಿಕಾರಿಗಳು 30 ನಿಮಿಷಗಳವರೆಗೆ ಕಾಯುತ್ತಾರೆ. ಆದ್ರೆ ವಿಮಾನದಲ್ಲಿ ಗಣ್ಯ ವ್ಯಕ್ತಿ ಪ್ರಯಾಣಿಸುತ್ತಿದ್ದ ಕಾರಣದಿಂದ ಭಯಗೊಂಡ ಮಾರಿಷಸ್‍ನ ಸಿಬ್ಬಂದಿ ಅಲಾರಂ ಒತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

    ಸಂಪರ್ಕ ಕಳೆದುಕೊಂಡ ಬರೋಬ್ಬರಿ 14 ನಿಮಿಷಗಳ ಬಳಿಕ ವಿಮಾನ ಮಾರಿಷಸ್ ಎಟಿಸಿಯೊಂದಿಗೆ ಸಂಪರ್ಕ ಸಾಧಿಸಿದೆ ಎಂದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

  • ಮೈಸೂರಿನ ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವೆ ಪುತ್ರಿ

    ಮೈಸೂರಿನ ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವೆ ಪುತ್ರಿ

    ಮೈಸೂರು: ಕೇಂದ್ರ ವಿದೇಶಾಂಗ ಸಚಿವೆ ಬನ್ಸೂರಿ ಸ್ವರಾಜ್ ಮತ್ತು ಅವರ ಸ್ನೇಹಿತೆಯರು ಇಂದು ಅರಮನೆ ನಗರಿ ಮೈಸೂರಿಗೆ ಭೇಟಿ ನೀಡಿದ್ದರು.

    ಸಂಸದ ಪ್ರತಾಪ್ ಸಿಂಹ ಬನ್ಸೂರಿ ಅವರಿಗೆ ಮೈಸೂರು ದರ್ಶನ ಮಾಡಿಸುವದರ ಜೊತೆ ಒಡೆಯರ್ ಇತಿಹಾಸವನ್ನು ಪರಿಚಯಿಸಿದ್ದಾರೆ. ಅರಮನೆ, ಮೃಗಾಲಯ ಸೇರಿದಂತೆ ಪ್ರೇಕ್ಷಣಿಯ ಸ್ಥಳಗಳಿಗೆ ಸುಷ್ಮಾ ಪುತ್ರಿ ಭೇಟಿ ನೀಡಿ ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

    ಇದೇ ವೇಳೆ ಸಂಜೆ ಪ್ರತಾಪ್ ಸಿಂಹ ಕೆಲ ನಿಮಿಷ ಫೇಸ್‍ಬುಕ್ ಲೈವ್ ಬಂದು ತಾವು ಬನ್ಸೂರಿ ಸ್ವರಾಜ್ ಮತ್ತು ತಮ್ಮ ಮಗಳೊಂದಿಗೆ ಅರಮನೆಯ ವಿದ್ಯುದೀಪಾಲಂಕಾರ ವೀಕ್ಷಣೆ ಮಾಡುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಮೈಸೂರು ಅರಮನೆ ನಾಡಿನ ಪರಂಪರೆ, ಸಂಸ್ಕೃತಿಯನ್ನು ಕಂಡು ಬನ್ಸೂರಿ ಸ್ವರಾಜ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    https://www.facebook.com/MPPratapSimha/videos/2076156969311317/

  • ಸುಷ್ಮಾ ಖಡಕ್ ಮಾತಿಗೆ ಕಾಶ್ಮೀರ ಯುವಕನ ಲೊಕೇಶನ್ ಚೇಂಜ್- ಟ್ವೀಟ್ ವೈರಲ್

    ಸುಷ್ಮಾ ಖಡಕ್ ಮಾತಿಗೆ ಕಾಶ್ಮೀರ ಯುವಕನ ಲೊಕೇಶನ್ ಚೇಂಜ್- ಟ್ವೀಟ್ ವೈರಲ್

    ನವದೆಹಲಿ: `ಭಾರತ ಆಕ್ರಮಿತ ಜಮ್ಮು ಕಾಶ್ಮೀರ’ ಎಂದು ಟ್ವಿಟ್ಟರ್ ನಲ್ಲಿ ಲೋಕೆಷನ್ ಹಾಕಿದ್ದ ಜಮ್ಮುವಿನ ಯುವಕನಿಗೆ ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಟಾಂಗ್ ನೀಡಿ ಇಂತಹ ಪ್ರದೇಶವೇ ಇಲ್ಲ ಎಂದು ಉತ್ತರಿಸಿದ್ದಾರೆ.

    ಜಮ್ಮುವಿನ ಶೇಕ್ ಅತೀಕ್ ಯುವಕ ಫಿಲಿಪೈನ್ಸ್ ನಿಂದ ಸುಷ್ಮಾ ಸ್ವರಾಜ್ ಅವರ ಸಹಾಯ ಕೇಳಿ ಟ್ವೀಟ್ ಮಾಡಿದ್ದ. ಈ ಟ್ವೀಟ್ ಗೆ ಉತ್ತರಿಸಿದ ಅವರು, ನೀವು ಜಮ್ಮು ಕಾಶ್ಮೀರದ ವ್ಯಕ್ತಿಯಾಗಿದ್ದರೆ ಖಂಡಿತ ನಾವು ಸಹಾಯ ಮಾಡುತ್ತೇವೆ. ಆದ್ರೆ ನಿಮ್ಮ ಪ್ರೊಫೈಲ್ ನಲ್ಲಿ ನೀವು `ಭಾರತ ಆಕ್ರಮಿತ ಪ್ರದೇಶದ’ ವ್ಯಕ್ತಿ ಎಂದು ಬರೆದುಕೊಂಡಿದ್ದೀರಿ. ಆದರೆ ಅಂತಹ ಪ್ರದೇಶವೇ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಸಹಾಯ ಕೇಳಿದ್ದು ಯಾಕೆ?
    ಜಮ್ಮುವಿನ ಶೇಕ್ ಅತೀಕ್ ನಾನು ಫಿಲಿಪೈನ್ಸ್ ನಲ್ಲಿ ಮೆಡಿಕಲ್ ಮಾಡುತ್ತಿದ್ದೇನೆ. ನನ್ನ ಪಾಸ್‍ಪೋರ್ಟ್ ಸಮಸ್ಯೆ ಎದುರಾಗಿದೆ. ಕಳೆದ ಒಂದು ತಿಂಗಳ ಹಿಂದೆಯೇ ತಾನು ಹೊಸ ಪಾಸ್‍ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ. ಈ ಕುರಿತು ಸಹಾಯ ಮಾಡಿ. ಆರೋಗ್ಯ ಸಮಸ್ಯೆಯ ಪರೀಕ್ಷೆಗಾಗಿ ತಾನು ತವರಿಗೆ ಮರಳಬೇಕಿದೆ ಎಂದು ಏಪ್ರಿಲ್ 5 ರಂದು ಟ್ವೀಟ್ ಮಾಡಿ ಮನವಿ ಮಾಡಿದ್ದ.

    ಸದಾ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಸಮಸ್ಯೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಸುಷ್ಮಾ ಸ್ವರಾಜ್ ಅವರು ಶೇಕ್‍ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಅವರ ಟ್ವೀಟ್ ಬಳಿಕ ಶೇಕ್ ಅತೀಕ್ ಎಚ್ಚೆತ್ತು ತಕ್ಷಣ ತನ್ನ ಟ್ವಿಟ್ಟರ್ ನಲ್ಲಿ ಲೋಕೆಷನ್ ಬದಲಾಯಿಸಿ ಜಮ್ಮು ಕಾಶ್ಮೀರದ ಮಲೀನಾ ಎಂದು ಎಡಿಟ್ ಮಾಡಿದ್ದಾನೆ.

    ಯುವಕ ತನ್ನ ತಪ್ಪು ಸರಿಪಡಿಸಿಕೊಂಡ ಬಳಿಕ ಸುಷ್ಮಾ ಸ್ವರಾಜ್ ಮತ್ತೊಂದು ಟ್ವೀಟ್ ಮಾಡಿ ನಿಮ್ಮ ಪ್ರೊಫೈಲ್ ಸರಿ ಮಾಡಿದ್ದು ನನಗೆ ಸಂತೋಷ ತಂದಿದೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸದ್ಯ ಸುಷ್ಮಾ ಸ್ವರಾಜ್ ಅವರ ಎರಡು ಟ್ವೀಟ್ ಗಳು ಸುಮಾರು 5 ಸಾವಿರಕ್ಕೂ ಹೆಚ್ಚು ಶೇರ್ ಆಗಿದ್ದು, 10 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಸುಷ್ಮಾ ಸ್ವರಾಜ್ ಅವರ ಟ್ವೀಟ್ ವೈರಲ್ ಆಗುತ್ತಿದಂತೆ ಶೇಕ್ ಅತೀಕ್ ತನ್ನ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ.

     

     

  • ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ನಾಲ್ವರೂ ಮೃತಪಟ್ಟಿದ್ದಾರೆ: ಸುಷ್ಮಾ ಸ್ವರಾಜ್

    ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ನಾಲ್ವರೂ ಮೃತಪಟ್ಟಿದ್ದಾರೆ: ಸುಷ್ಮಾ ಸ್ವರಾಜ್

    ವಾಷಿಂಗ್ಟನ್: ಅಮೆರಿಕದ ಈಲ್ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಕುಟುಂಬದ 4 ಸದಸ್ಯರಲ್ಲಿ ಸೋಮವಾರ ಮೂವರ ಶವ ಮಾತ್ರ ಪತ್ತೆಯಾಗಿತ್ತು. ಈಗ, ನಾಲ್ವರ ಶವವೂ ದೊರೆತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

    ಗುಜರಾತ್ ರಾಜ್ಯದ ಸೂರತ್ ಮೂಲದ ಸಂದೀಪ್ ತೊಟ್ಟಪಿಲ್ಲಿ, ಪತ್ನಿ ಸೌಮ್ಯ ಹಾಗೂ ಅವರ ಮಗಳು ಸಾಚಿ ಶವ ಮಾತ್ರ ಪತ್ತೆಯಾಗಿತ್ತು. ಇದೀಗ ಸಿದ್ಧಾಂತ್ (12) ಅವರ ಶವ ಕೂಡ ಪತ್ತೆಯಾಗಿದೆ. ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಸಂದೀಪ್ ಲಾಸ್ ಏಂಜಲೀಸ್ ನಲ್ಲಿ ವಾಸವಿದ್ದರು. ಸುಮಾರು 15 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದರು.

    ಸಂದೀಪ್ ತೊಟ್ಟಪಿಲ್ಲಿ, ಪತ್ನಿ ಸೌಮ್ಯ ಹಾಗೂ ಅವರ ಇಬ್ಬರು ಮಕ್ಕಳ ಸಾವಿಗೆ ಸುಷ್ಮಾ ಸ್ವರಾಜ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬದವರು ಅಮೆರಿಕಗೆ ಹೋಗಿಬರಲು ವೀಸಾ ಒದಗಿಸಲು ಸಹಕರಿಸುವುದಾಗಿ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಮೂವರ ಶವಪತ್ತೆ

    ಸಂದೀಪ್, ಪತ್ನಿ ಸೌಮ್ಯ ಹಾಗೂ ಇಬ್ಬರು ಮಕ್ಕಳು ಈಲ್ ನದಿ ಬಳಿ ಏಪ್ರಿಲ್ 8 ರಂದು ಕಾಣೆಯಾಗಿದ್ದರು. ಕಳೆದ ವಾರ ಸ್ಯಾನ್ ಜೋಸ್ ನಲ್ಲಿರುವ ಕುಟುಂಬ ಸದಸ್ಯರನ್ನು ಭೇಟಿಯಾಗಲು ಸಂದೀಪ್ ಕುಟುಂಬ 2016ರ ಮಾಡೆಲ್ ಕಡುಕೆಂಪು ಬಣ್ಣದ ಹೋಂಡಾ ಪೈಲಟ್ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಏಪ್ರಿಲ್ 8 ರಂದು ಸ್ಯಾನ್ ಜೋಸ್ ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಬೇಕಿದ್ದ ಸಂದೀಪ್ ಭೇಟಿ ಮಾಡಿರಲಿಲ್ಲ. ಒರೆಗಾನ್ ನಿಂದ ಕ್ಯಾಲಿಫೋರ್ನಿಯ ಗೆ ಪ್ರಯಾಣ ಮಾಡುತ್ತಿದ್ದ ವೇಳೆ ಕುಟುಂಬ ಕಾಣೆಯಾದ ಬಗ್ಗೆ ವರದಿಯಾಗಿತ್ತು. ಕ್ಲಾಮತ್ ರೆಡ್ವುಡ್ ರಾಷ್ಟ್ರೀಯ ಉದ್ಯಾನವನದಲ್ಲಿ ಕುಟುಂಬ ಕೊನೆಯದಾಗಿ ಫೋಟೋ ತೆಗೆದಿತ್ತು ಎಂದು ಸಂದೀಪ್ ಸ್ನೇಹಿತರು ಮತ್ತು ಕುಟುಂಬದವರು ತಿಳಿಸಿದ್ದರು.

  • ಉಗ್ರರಿಂದ ಹತ್ಯೆಗೊಳಗಾದ 38 ಭಾರತೀಯರ ಶವಗಳು ಹಸ್ತಾಂತರ

    ಉಗ್ರರಿಂದ ಹತ್ಯೆಗೊಳಗಾದ 38 ಭಾರತೀಯರ ಶವಗಳು ಹಸ್ತಾಂತರ

    ನವದೆಹಲಿ: ಯುದ್ಧಪೀಡಿತ ಇರಾಕ್‍ನ ಮೊಸೆಲ್‍ನಲ್ಲಿ ಐಎಸ್ ಉಗ್ರರಿಂದ ಹತ್ಯೆಗೊಳಗಾಗಿದ್ದ 38 ಭಾರತೀಯರ ಶವಗಳನ್ನು ತರಲು ಕೇಂದ್ರ ಸಚಿವ ವಿಕೆ ಸಿಂಗ್ ಇರಾಕ್‍ಗೆ ತೆರಳಿದ್ದಾರೆ. ಡಿಎನ್‍ಎ ಆಧಾರದಲ್ಲಿ ಶವ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು ಭಾರತಕ್ಕೆ ಇಂದು ತಡರಾತ್ರಿ ಪಾರ್ಥಿವ ಶರೀರಗಳು ಆಗಮಿಸುವ ಸಾಧ್ಯತೆ ಇದೆ.

    ಮೃತದೇಹಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಇರಾಕ್ ಗೆ ತೆರಳಿದ್ದಾರೆ. ಈ ಸಂಬಂಧ ಮೇಲ್ವಿಚಾರಣೆ ವಿ.ಕೆ.ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಭಾರತಕ್ಕೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಅಂತಾ ಹೇಳಲಾಗಿದೆ. ಇತ್ತೀಚೆಗೆ ಕುಟುಂಬಸ್ಥರನ್ನು ಭೇಟಿಯಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೃತದೇಹಗಳನ್ನು ಒಂದು ವಾರದಲ್ಲಿ ತರಲಾಗುವುದು ಅಂತಾ ಭರವಸೆಯನ್ನು ನೀಡಿದ್ದರು. ಇದನ್ನೂ ಓದಿ: ಇರಾಕ್‍ನಲ್ಲಿ ಐಸಿಸ್‍ನಿಂದ ಹತ್ಯೆಯಾಗಿದ್ದ 39 ಭಾರತೀಯರ ಮೃತ ದೇಹ ಪತ್ತೆ ಮಾಡಿದ್ದು ಹೇಗೆ? 

    ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಮಾರ್ಚ್ ನಲ್ಲಿ ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!

    ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.