Tag: Sushanth Singh Rajput

  • ಮತ್ತೆ ಬರಲಿದೆ ಎಂ.ಎಸ್ ಧೋನಿ ಬಯೋಪಿಕ್ – ರಿಲೀಸ್ ಡೇಟ್ ಫಿಕ್ಸ್

    ಮತ್ತೆ ಬರಲಿದೆ ಎಂ.ಎಸ್ ಧೋನಿ ಬಯೋಪಿಕ್ – ರಿಲೀಸ್ ಡೇಟ್ ಫಿಕ್ಸ್

    ಬಾಲಿವುಡ್‌ನಲ್ಲಿ (Bollywood) ಸಂಚಲನ ಮೂಡಿಸಿದ್ದ ಎಂ.ಎಸ್ ಧೋನಿ (M s Dhoni) ಬಯೋಪಿಕ್ ಸಿನಿಮಾ ಮತ್ತೆ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಸುಶಾಂತ್ ಸಿಂಗ್ ರಜಪೂತ್  (Sushant Singh Rajput) ಈ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದರು. ಇದೀಗ ಮತ್ತೆ ಈ ಸಿನಿಮಾ ಚಿತ್ರಮಂದಿರದಲ್ಲಿ ಸಿನಿಪ್ರೇಕ್ಷಕರು ಕಣ್ತುಂಬಿಕೊಳ್ಳಲು ದಿನಾಂಕ ನಿಗದಿಯಾಗಿದೆ.  ಇದನ್ನೂ ಓದಿ:ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

    ಸಿನಿಮಾರಂಗದಲ್ಲಿ ಈಗಾಗಲೇ ಅನೇಕ ಕ್ರಿಕೆಟರ್‌ಗಳ ಬದುಕಿನ ಕುರಿತು ಸಿನಿಮಾಗಳು ಮೂಡಿಬಂದಿವೆ. ಆದರೆ ಯಶಸ್ಸು ಕಂಡಿರುವುದು ಕೆಲವೇ ಕೆಲವು ಚಿತ್ರಗಳು ಮಾತ್ರ. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಕುರಿತು ‘ಎಂ.ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಚಿತ್ರ 2016ರಲ್ಲಿ ಮೂಡಿ ಬಂದಿತ್ತು. ಧೋನಿ ಬಯೋಪಿಕ್‌ನಲ್ಲಿ ನಟ ಸುಶಾಂತ್ ಸಿಂಗ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಧೋನಿ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ಈಗ ಮೇ 12ರಂದು ಈ ಸಿನಿಮಾ ಮತ್ತೆ ಮರು ಬಿಡುಗಡೆ ಆಗುತ್ತಿದೆ. ಈ ಮೂಲಕ ದೊಡ್ಡ ಪರದೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೋಡಿ ಖುಷಿಪಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತಿದೆ.

    ಎಂ.ಎಸ್. ಧೋನಿ (M.s Dhoni) ಅವರು ಕ್ರಿಕೆಟ್ (Cricket) ಲೋಕದಲ್ಲಿ ಮಾಡಿದ ಸಾಧನೆ ಅಪಾರ. ಟೀಮ್ ಇಂಡಿಯಾವನ್ನು ಅವರು ಮುನ್ನಡೆಸಿದ ರೀತಿಗೆ ಫ್ಯಾನ್ಸ್ ಸಲಾಂ ಹೊಡೆದಿದ್ದರು. ಅದರ ಜೊತೆಗೆ ಅವರ ರಿಯಲ್ ಲೈಫ್ ಘಟನೆಗಳು ಕೂಡ ಅಷ್ಟೇ ಇಂಟರೆಸ್ಟಿಂಗ್ ಆಗಿತ್ತು. ಹಾಗಾಗಿ ಆ ಎಲ್ಲಾ ವಿಚಾರಗಳನ್ನ ಇಟ್ಟುಕೊಂಡು ಬಯೋಪಿಕ್ ಮಾಡಲಾಯಿತು. ಈ ಸಿನಿಮಾಗೆ ಅಂದು ವ್ಯಾಪಕ ಮೆಚ್ಚುಗೆ ಸಿಕ್ಕಿತ್ತು.

    ಎಂ.ಎಸ್ ಧೋನಿ ಬಯೋಪಿಕ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ಕಿಯಾರಾ ಅಡ್ವಾಣಿ (Kiara Advani), ದಿಶಾ ಪಟಾನಿ (Disha Patani) ನಟಿಸಿದ್ದರು. ಆನ್‌ಸ್ಕ್ರೀನ್‌ನಲ್ಲಿ ಧೋನಿ ಲವ್ ಕಹಾನಿ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈಗ ಇದೇ ಮೇ 12ಕ್ಕೆ ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ.

  • ನಟ ಸುಶಾಂತ್ ಸಿಂಗ್ ಮುದ್ದಿನ ಶ್ವಾನ ಸಾವು

    ನಟ ಸುಶಾಂತ್ ಸಿಂಗ್ ಮುದ್ದಿನ ಶ್ವಾನ ಸಾವು

    ಬಾಲಿವುಡ್ (Bollywood) ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajaput) ಇಲ್ಲ ಎಂದು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಶಾಂತ್ ನಿಧನದ ಹಿಂದಿನ ಅಸಲಿ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ನಡುವೆ ಮತ್ತೊಂದು ಬೇಸರದ ಸುದ್ದಿ ಹೊರಬಿದ್ದಿದೆ. ನಟ ಸುಶಾಂತ್ ಪ್ರೀತಿಯ ಶ್ವಾನ (Dog) ಫಡ್ಜ್ ಅಗಲಿದೆ.

    ನಟ ಸುಶಾಂತ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಮತ್ತೊಂದು ಬೇಸರದ ಸುದ್ದಿ ಬಹಿರಂಗವಾಗಿದೆ. ಸುಶಾಂತ್ ಸಿಂಗ್ ಪ್ರೀತಿಯ ನಾಯಿ(Dog) ಫಡ್ಜ್‌ ಸಾವಾಗಿದೆ. ಈ ಬಗ್ಗೆ ಸುಶಾಂತ್ ಸಹೋದರಿ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಫಡ್ಜ್  ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಮದುವೆ ಬಗ್ಗೆ ನಟಿ ರಚಿತಾ ರಾಮ್ ಮನದಾಳದ ಮಾತು

    ಫಡ್ಜ್ ಜೊತೆ ಇರುವ ಸುಶಾಂತ್ ಸಿಂಗ್ ಫೋಟೋಗಳನ್ನು ಶೇರ್ ಮಾಡಿ ಪ್ರಿಯಾಂಕಾ ಸಿಂಗ್ (Priyanka Singh) ಸ್ನೇಹಿತನ ಜೊತೆ ನೀನು ಕೂಡ ಸ್ವರ್ಗ ಸೇರಿಕೊಂಡೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸುಶಾಂತ್ ಅಭಿಯನದ ಚಿಚೋರೆ ಚೀನಾ ಚಿತ್ರ ಮಂದಿರದಲ್ಲಿ ತೆರೆ ಕಾಣಲು ಸಿದ್ಧ

    ಸುಶಾಂತ್ ಅಭಿಯನದ ಚಿಚೋರೆ ಚೀನಾ ಚಿತ್ರ ಮಂದಿರದಲ್ಲಿ ತೆರೆ ಕಾಣಲು ಸಿದ್ಧ

    ಬೀಜಿಂಗ್: 2019ರಲ್ಲಿ ಭಾರತದಾದ್ಯಂತ ತೆರೆ ಕಂಡಿದ್ದ ಸೂಪರ್ ಹಿಟ್ ಸಿನೆಮಾ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರೆ ಈಗ ಚೀನಾದ ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನಕ್ಕೆ ಸಿದ್ಧವಾಗಿದೆ.

    ನಿತೇಶ್ ತಿವಾರಿ ನಿರ್ದೇಶನದ ಈ ಸಿನೆಮಾ, ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. 2022ರ ಜನವರಿ 7ರಂದು ಚೀನಾದಲ್ಲಿ ಬಿಡುಗಡೆಯಾಗಲು ಈ ಸಿನೆಮಾ ಸಿದ್ಧವಾಗಿದೆ. ಈ ಹಿಂದೆ ಅಮೀರ್ ಖಾನ್ ಅಭಿನಯದ ದಂಗಲ್ ಸಿನೆಮಾ ಚೀನಾದಲ್ಲಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು.

    ಚಿಚೋರೆ ಸಿನೆಮಾದಲ್ಲಿ ಗೆಳೆತನದ ಬಗ್ಗೆ ವಿವರಿಸಲಾಗಿದೆ. ಚಿತ್ರದಲ್ಲಿ ಅನಿರುದ್ಧ್ ಎಂಬ ಯುವಕ ಸ್ನೇಹಿತರೊಂದಿಗೆ ಕಳೆದ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುವುದರ ಹಾಗೂ ಜೀವನದಲ್ಲಿ ಆದ ದುರ್ಘಟನೆಯನ್ನು ನೆನಪಿಸಿಕೊಳ್ಳುವುದನ್ನು ಈ ಚಲನಚಿತ್ರದಲ್ಲಿ ವಿವರಿಸಲಾಗಿದೆ. ಈ ಸಿನೆಮಾ ಯುವ ಜನರನ್ನು ಹೆಚ್ಚು ಸೆಳೆದಿದೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ನಿಧನ

    ಚಿಚೋರೆ ಸಿನೆಮಾದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಕಪೂರ್, ವರುಣ್ ಶರ್ಮಾ, ತಾಹಿರ್ ರಾಜ್ ಭಾಸಿನ್, ಪ್ರತೀಕ್ ಬಬ್ಬರ್, ತುಷಾರ್ ಪಾಂಡೆ, ನವೀನ್ ಪೋಲಿಶೆಟ್ಟಿ ಮತ್ತು ಸಹರ್ಷ್ ಕುಮಾರ್ ಶುಕ್ಲಾ ಸಹ ನಟರಾಗಿ ಸಿನೆಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಯಾವುದೇ ಖರ್ಚಿಲ್ಲದೇ ಮುಂಬಯಿಂದ ಅಬುಧಾಬಿಗೆ ಹೋದ

  • ರಿಯಾ, ಶೌವಿಕ್ ನ್ಯಾಯಾಂಗ ಬಂಧನ ಅಕ್ಟೋಬರ್ 20ರವರೆಗೆ ವಿಸ್ತರಣೆ

    ರಿಯಾ, ಶೌವಿಕ್ ನ್ಯಾಯಾಂಗ ಬಂಧನ ಅಕ್ಟೋಬರ್ 20ರವರೆಗೆ ವಿಸ್ತರಣೆ

    ಮುಂಬೈ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮತ್ತು ಸೋದರ ಶೌವಿಕ್ ಚಕ್ರವರ್ತಿ ಇಬ್ಬರ ನ್ಯಾಯಾಂಗ ಬಂಧನವನ್ನ ಅಕ್ಟೋಬರ್ 20ರವರೆಗೆ ವಿಸ್ತರಿಸಿ ಮುಂವೈ ವಿಶೇಷ ನ್ಯಾಯಾಲಯ ಆದೇಶಿಸಿದೆ.

    ಇಂದು ಇಬ್ಬರ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು. ಮತ್ತೆ ಇಬ್ಬರನ್ನು ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಯಿಂದ ಬಂಧನಕ್ಕೊಳಗಾಗಿರುವ ರಿಯಾ ಮತ್ತು ಶೌವಿಕ್ ಜೈಲಿನಲ್ಲಿದ್ದಾರೆ. ರಿಯಾ ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರೂ ಬೇಲ್ ಸಿಕ್ಕಿಲ್ಲ.

    ಸೆಪ್ಟೆಂಬರ್ 8ರಂದು ವಿಚಾರಣೆಗೆ ಹಾಜರಾಗಿದ್ದ ನಟಿ ರಿಯಾ ಚಕ್ರವರ್ತಿಯನ್ನು ಎನ್‍ಸಿಬಿ ಬಂಧಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿ ಇದುವವರೆಗೂ 20 ಆರೋಪಿಗಳನ್ನ ಬಂಧಿಸಿದೆ. ರಿಯಾ ಮತ್ತು ಶೌವಿಕ್ ಇಬ್ಬರು ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕದಲ್ಲಿರೋ ವಿಷಯ ಸಿಬಿಐ ತನಿಖೆ ವೇಳೆ ತಿಳಿದು ಬಂದಿತ್ತು. ಸಿಬಿಐ ಶಿಫಾರಸ್ಸಿನ ಮೇರೆಗೆ ಎನ್‍ಸಿಬಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿತ್ತು. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

    ಡ್ರಗ್ಸ್ ಪೆಡ್ಲರ್ ಜೊತೆ ರಿಯಾ ನಡೆಸಿದ್ದ ವಾಟ್ಸಪ್ ಸಂಭಾಷಣೆಯನ್ನ ಖಾಸಗಿ ಮಾಧ್ಯಮ ವರದಿ ಮಾಡಿತ್ತು. ಅಕ್ಕ ರಿಯಾ ಸೂಚನೆಯ ಮೇರೆಗೆ ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಶೌವಿಕ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಎನ್‍ಸಿಬಿಯ ವಿಚಾರಣೆ ಎದುರಿಸಿದ್ದಾರೆ.  ಇದನ್ನೂ ಓದಿ: ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

    ಸುಶಾಂತ್ ಪ್ರಕರಣದಲ್ಲಿ ಕೇಳಿ ಬಂದಿರುವ ಕೊಲೆ ಆರೋಪಗಳನ್ನು ಏಮ್ಸ್ ವೈದ್ಯ ಸುಧೀರ್ ಗುಪ್ತಾ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸುಶಾಂತ್ ದೇಹದಲ್ಲಿ ಯಾವುದೇ ವಿಷ ಪದಾರ್ಥ ಅಥವಾ ಕೆಮಿಕಲ್ ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಬನಮ್ಮ ವರದಿಯನ್ನು ಸೆಪ್ಟೆಂಬರ್ 28ರಂದು ಸಿಬಿಐಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಕುರಿತು ಸಲ್ಮಾನ್ ಟ್ವೀಟ್- ನೆಟ್ಟಿಗರಿಂದ ಆಕ್ರೋಶ

    ಮೊದಲಿಗೆ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಿ ಮುಂಬೈನ ಕೂಪರ್ ಆಸ್ಪತ್ರೆ ವೈದ್ಯರು ನೀಡಿದ ವರದಿಯ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವೈದ್ಯಕೀಯ ವರದಿ ನೀಡುವಂತೆ ಡಾ.ಸುಧೀರ್ ಗುಪ್ತಾ ನೇತೃತ್ವದ ಐವರು ಏಮ್ಸ್ ವೈದ್ಯರ ತಂಡಕ್ಕೆ ನೀಡಲಾಗಿತ್ತು. ಏಮ್ಸ್ ವೈದ್ಯರ ತಂಡಕ್ಕೆ ಸೆಪ್ಟೆಂಬರ್ 20ಕ್ಕೆ ವರದಿ ಸೂಚಿಸುವಂತೆ ಸಿಬಿಐ ಸೂಚಿಸಿತ್ತು. ಆದ್ರೆ ವೈದ್ಯರು ಸೆಪ್ಟೆಂಬರ್ 28ರಂದು ವರದಿ ನೀಡಿದ್ದರು.

  • ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ

    ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ

    – ಸತ್ಯಮೇವ ಜಯತೇ ಎಂದ ರಿಯಾ ಪರ ವಕೀಲ
    – ಎಲ್ಲರ ಚಿತ್ತ ಸಿಬಿಐ ನತ್ತ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ 110 ದಿನಗಳ ಬಳಿಕ ಸ್ಫೋಟಕ ಸತ್ಯ ರಿವೀಲ್ ಆಗಿದೆ. ಸುಶಾಂತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಹೊರತು ಅದು ಕೊಲೆಯಲ್ಲ ಎಂದು ಏಮ್ಸ್ ವೈದ್ಯ ಡಾ. ಸುಧೀರ್ ಗುಪ್ತಾ ಹೇಳಿದ್ದಾರೆ.

    ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ಡಾ.ಸುಧೀರ್ ಗುಪ್ತಾ, ಸುಶಾಂತ್ ಪ್ರಕರಣದಲ್ಲಿ ಕೇಳಿ ಬಂದಿರುವ ಕೊಲೆ ಆರೋಪಗಳನ್ನು ಸಂಪೂರ್ಣ ತಳ್ಳಿ ಹಾಕಿದ್ದಾರೆ. ಸುಶಾಂತ್ ದೇಹದಲ್ಲಿ ಯಾವುದೇ ವಿಷ ಪದಾರ್ಥ ಅಥವಾ ಕೆಮಿಕಲ್ ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಬನಮ್ಮ ವರದಿಯನ್ನು ಸೆಪ್ಟೆಂಬರ್ 28ರಂದು ಸಿಬಿಐಗೆ ನೀಡಿದ್ದೇವೆ ಎಂದು ತಿಳಿಸಿದರು.

    ಮೊದಲಿಗೆ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಿ ಮುಂಬೈನ ಕೂಪರ್ ಆಸ್ಪತ್ರೆ ವೈದ್ಯರು ನೀಡಿದ ವರದಿಯ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವೈದ್ಯಕೀಯ ವರದಿ ನೀಡುವಂತೆ ಡಾ.ಸುಧೀರ್ ಗುಪ್ತಾ ನೇತೃತ್ವದ ಐವರು ಏಮ್ಸ್ ವೈದ್ಯರ ತಂಡಕ್ಕೆ ನೀಡಲಾಗಿತ್ತು. ಏಮ್ಸ್ ವೈದ್ಯರ ತಂಡಕ್ಕೆ ಸೆಪ್ಟೆಂಬರ್ 20ಕ್ಕೆ ವರದಿ ಸೂಚಿಸುವಂತೆ ಸಿಬಿಐ ಸೂಚಿಸಿತ್ತು. ಆದ್ರೆ ವೈದ್ಯರು ಸೆಪ್ಟೆಂಬರ್ 28ರಂದು ವರದಿ ನೀಡಿದ್ದರು. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

    ಮುಂಬೈ ಆಸ್ಪತ್ರೆಗೆ ಕ್ಲೀನ್ ಚಿಟ್ ಇಲ್ಲ: ಮೊದಲು ಮರಣೋತ್ತರ ಶವ ಪರೀಕ್ಷೆ ನಡೆಸಿದ ಮುಂಬೈನ ಕೂಪರ್ ಆಸ್ಪತ್ರೆಗೂ ಏಮ್ಸ್ ಸಂಪೂರ್ಣ ಕ್ಲೀನ್ ಚಿಟ್ ನೀಡಿಲ್ಲ. ಸುಶಾಂತ್ ಮೃತದೇಹವನ್ನು ಬಾಂದ್ರಾ ನಿವಾಸದಿಂದ ನೇರವಾಗಿ ಕೂಪರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆದ್ರೆ ಮರಣೋತ್ತರ ಶವ ಪರೀಕ್ಷೆ ನಡೆಸಿದ್ದ ವೈದ್ಯರ ತಂಡ ಸುಶಾಂತ್ ದೇಹದ ಮೇಲಾದ ಗಾಯದ ಗುರುತು ಮತ್ತು ಕುತ್ತಿಗೆ ಭಾಗದಲ್ಲಿ ಕಂಡು ಬಂದಿದ್ದ ರಕ್ತದ ಕಲೆಗಳನ್ನು ಉಲ್ಲೇಖಿಸಿರಲಿಲ್ಲ. ಪ್ರಾಥಮಿಕವಾಗಿ ಉಲ್ಲೇಖಿಸುವ ಪ್ರಾಣ ಹೋದ ಅಂದಾಜು ಸಮಯವನ್ನು ವೈದ್ಯರು ದಾಖಲಿಸಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.  ಇದನ್ನೂ ಓದಿ: ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ

    ಸೆಪ್ಟೆಂಬರ್ 28ರಂದು ಸಿಬಿಐ ವರದಿ ಸಲ್ಲಿಸಿದ ಬಳಿಕ ಮಾತನಾಡಿದ್ದ ಡಾ.ಸುಧೀರ್ ಗುಪ್ತಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆಯ ಅಗತ್ಯವಿದೆ. ನಾವು ನಮ್ಮ ವರದಿಯನ್ನು ಸಲ್ಲಿಸಿದ್ದೇವೆ. ನಮ್ಮ ವರದಿಯ ವಿಶ್ಲೇಷಣೆಯನ್ನ ಸಿಬಿಐ ಮಾಡುತ್ತದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ್ರಾ ಅಥವಾ ಕೊಲೆ ಮಾಡಲಾಯ್ತಾ ಅನ್ನೋದನ್ನು ಸಹ ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

    ಸತ್ಯಮೇವ ಜಯತೆ: ಡಾ.ಸುಧೀರ್ ಗುಪ್ತಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೋಶಿಂಧೆ, ನಾವು ಸಿಬಿಐ ತಂಡ ನೀಡುವ ಅಧಿಕಾರಿಗಳ ಹೇಳಿಕೆಯ ನಿರೀಕ್ಷೆಯಲ್ಲಿದ್ದೇವೆ. ಪ್ರಕರಣದ ತನಿಖೆ ಯಾವುದೇ ಏಜೆನ್ಸಿ ನಡೆಸಿದ್ರೂ ಸತ್ಯ ಮಾತ್ರ ಬದಲಾಗಲ್ಲ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ನಾವು ಸತ್ಯದ ಮೇಲೆ ನಂಬಿಕೆ ಹೊಂದಿದ್ದು, ಸತ್ಯಮೇವ ಜಯತೆ ಎಂದಿದ್ದಾರೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ

  • ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

    ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

    -ನಟನ ಪ್ರೇಯಸಿ ಸುತ್ತ ಅನುಮಾನದ ಹುತ್ತ
    -ಬಿಹಾರ ಮೂಲದ ಯುವ ನಟ

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಂತರ ಮತ್ತೋರ್ವ ನಟ ಅಕ್ಷತ್ ಉತ್ಕರ್ಷ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಕ್ಷತ್ ಪ್ರೇಯಸಿ ಮತ್ತು ಆತನ ಗೆಳೆಯರ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ಬಿಹಾರದ ಮುಜಫರ್ ನಗರ ಮೂಲದ ಅಕ್ಷತ್ ಮುಂಬೈನಲ್ಲಿ ಉಳಿದುಕೊಂಡಿದ್ದರು. ಕೆಲಸದ ಜೊತೆಯಲ್ಲಿ ಅಲ್ಬಂಗಳಲ್ಲಿಯೂ ಅಕ್ಷತ್ ಕಾಣಿಸಿಕೊಂಡಿದ್ದರು.

    ಮುಜಫರ್ ನಗರದ ಸಿಕಂದರಪುರ ನಾಲಾ ರಸ್ತೆಯ ನಿವಾಸಿಯಾಗಿದ್ದ ಅಕ್ಷತ್ ಉದ್ಯೋಗ ಅರಸಿ ಮುಂಬೈಗೆ ಬಂದಿದ್ದರು. ಮುಂಬೈನ ಸುರೇಶ್ ನಗರದಲ್ಲಿರುವ ಪಶ್ಚಿಮ ಅಂಧೇರಿಯ ಆರ್ ಟಿಓ ಲೈನ್ ಕಟ್ಟಡದಲ್ಲಿ ಅಕ್ಷತ್ ವಾಸವಾಗಿದ್ದರು. ಅಕ್ಷತ್ ವಾಸವಾಗಿದ್ದ ಸ್ಥಳದ ಕೂಗಳತೆ ದೂರದಲ್ಲಿಯೇ ಗೆಳತಿ ಮತ್ತು ಆತನ ಗೆಳೆಯರು ವಾಸವಾಗಿದ್ದರು. ಸದ್ಯ ಅಕ್ಷತ್ ಜೊತೆಯಲ್ಲಿರುತ್ತಿದ್ದ ಫ್ರೆಂಡ್ಸ್ ಸರ್ಕಲ್ ಮೇಲೆ ಅನುಮಾನಗಳು ವ್ಯಕ್ತವಾಗಿವೆ.

    ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಅಕ್ಷತ್ ತಂದೆ ಜೊತೆ ಫೋನ್ ನಲ್ಲಿ ಮಾತನಾಡಿದ್ದಾನೆ. ಅದಾದ ಬಳಿಕ ಅಕ್ಷತ್ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದು ತಡರಾತ್ರಿ ಅಕ್ಷತ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂತು. ಮುಂಬೈ ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅಕ್ಷತ್ ಮಾವ ರಂಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ

    ಅಕ್ಷತ್ ಸಾವು ಆಗಿದೆಯಾ ಅಥವಾ ಇಲ್ಲವಾ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆ ಮುಂಬೈಗೆ ದೌಡಾಯಿಸಿದೆ. ಅಕ್ಷತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ರೆ, ಆತನ ಗೆಳೆಯರು ಅಕ್ಷತ್ ತಂದೆಗೆ ಫೋನ್ ಮಗ ಸಾವು ಆಗಿದೆ ಅಂತಾ ಹೇಳಿದ್ದರು. ಕೊನೆಗೆ ಮುಂಬೈಗೆ ಬಂದಾಗ ಅಕ್ಷತ್ ನಮ್ಮನ್ನು ಅಗಲಿರುವ ವಿಷಯ ತಿಳಿಯಿತು ಎಂದು ರಂಜಿತ್ ಸಿಂಗ್ ಕಣ್ಣೀರು ಹಾಕುತ್ತಾರೆ. ಇದನ್ನೂ ಓದಿ: ಸುಶಾಂತ್ ತನ್ನ ಹೆಸರಿನಲ್ಲಾಗ್ತಿರುವ ಸರ್ಕಸ್ ನೋಡಿ ನಗುತ್ತಿರಬಹುದು: ಸೋನು ಸೂದ್

    ಅಕ್ಷತ್ ಜೊತೆ ವಾಸವಾಗಿದ್ದ ಸ್ನೇಹಾ ಚೌಹಾಣ್ ಮಾತನಾಡಿ, ಬಣ್ಣದ ಲೋಕದಲ್ಲಿ ಮಿಂಚಲು ಕಷ್ಟುಪಡುತ್ತಿದ್ದನು. ನಿಧನಕ್ಕೂ ಮುನ್ನ ಅಕ್ಷತ್ ಫೋನ್ ನಲ್ಲಿ ಒಬ್ಬರ ಜೊತೆ ಮಾತನಾಡುತ್ತಿದ್ದನು ಎಂದು ಹೇಳಿದ್ದಾರೆ. ಆದ್ರೆ ಅಕ್ಷತ್ ಸಾವು ಹೇಗಾಯಿತು ಎಂಬುವುದು ತಿಳಿದು ಬಂದಿಲ್ಲ. ಇತ್ತ ಸ್ನೇಹಾ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸುಶಾಂತ್‍ನನ್ನು ಕತ್ತುಹಿಸುಕಿ ಕೊಲೆ ಮಾಡಲಾಗಿದೆ: ಲಾಯರ್ ವಿಕಾಸ್ ಸಿಂಗ್

    ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಅವರ ಬಾಂದ್ರಾದ ನಿವಾಸದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮಾನಸಿಕ ಖಿನ್ನತೆಯಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ನಟಿ ಕಂಗನಾ ರಣಾವತ್ ಮತ್ತು ಸುಶಾಂತ್ ಅಭಿಮಾನಿಗಳು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿ, ಸಿಬಿಐ ತನಿಖೆ ನಡೆಯಬೇಕೆಂದು ಅಭಿಯಾನ ಆರಂಭಿಸಿದ್ದರು. ಬಿಹಾರ ಮತ್ತು ಮುಂಬೈ ಪೊಲೀಸರ ಹಗ್ಗ ಜಗ್ಗಾಟದಲ್ಲಿ ಸುಶಾಂತ್ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರೇರಣೆ – ಚಂದ್ರನ ಮೇಲೆ ಭೂಮಿ ಖರೀದಿಸಿ ಮಡದಿಗೆ ಗಿಫ್ಟ್ ಕೊಟ್ಟ!