Tag: Sushant Singh

  • ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ ನಟಿ ಅದಾ

    ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ ನಟಿ ಅದಾ

    ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ (Sushant Singh) ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ್ದಾರೆ ನಟಿ ಅದಾ ಶರ್ಮಾ (Adah Sharma). ಈ ಮೂಲಕ ನೀವು ನನ್ನ ಹೃದಯದಲ್ಲಿ ಇದ್ದೀರಿ ಎನ್ನುವಂತಹ ಸಂದೇಶವನ್ನೂ ಅವರು ಕೊಟ್ಟಿದ್ದಾರೆ.

    ಯುವ ನಟ ಸುಶಾಂತ್ ಸಿಂಗ್ ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. 2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್ ನ ರೂಮ್ ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲಿಂದ ಆ ಫ್ಲ್ಯಾಟ್ (Flat) ಖಾಲಿಯೇ ಉಳಿದಿತ್ತು. ಸುಶಾಂತ್ ಸಿಂಗ್ ಆತ್ಮ ಅಲ್ಲಿದೆ ಎಂದೂ ಹಬ್ಬಿಸಲಾಗಿತ್ತು.

     

    ಮುಂಬೈನ  ಆ ಫ್ಲ್ಯಾಟ್ ನಾಲ್ಕು ಕೋಣೆಗಳನ್ನು ಹೊಂದಿದ್ದು, ಸಮುದ್ರಕ್ಕೆ ಮುಖ ಮಾಡಿದ ಮನೆಯಾಗಿದೆ. ಒಟ್ಟು 2500 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದೆ. ಇಲ್ಲಿಯೇ ಹಲವಾರು ವರ್ಷಗಳಿಂದ ಸುಶಾಂತ್ ಸಿಂಗ್ ವಾಸವಿದ್ದರು. ಸಾವಿನ ನಂತರ ಯಾರೂ ಈ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟ ಪಟ್ಟಿರಲಿಲ್ಲ.

  • ಸುಶಾಂತ್ ಸಿಂಗ್ ಸಾವಿಗೆ ರಣಬೀರ್, ಕರಣ್ ಜೋಹರ್ ಕಾರಣ : ಬೆಂಕಿ ಉಗುಳಿದ ಕಂಗನಾ

    ಸುಶಾಂತ್ ಸಿಂಗ್ ಸಾವಿಗೆ ರಣಬೀರ್, ಕರಣ್ ಜೋಹರ್ ಕಾರಣ : ಬೆಂಕಿ ಉಗುಳಿದ ಕಂಗನಾ

    ಬಾಲಿವುಡ್ ನಟರಾದ ರಣಬೀರ್ ಕಪೂರ್ ಹಾಗೂ ನಿರ್ದೇಶಕ ಕರಣ್ ಜೋಹರ್ (Karan Johar) ಮೇಲೆ ನಟಿ ಕಂಗನಾ ರಣಾವತ್ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ನಿನ್ನೆಯಷ್ಟೇ ರಣಬೀರ್ ಕಪೂರ್ ಅವರನ್ನು ಬಿಳಿ ಇಲಿಗೆ ಹೋಲಿಸಿದ್ದ ಕಂಗನಾ ಇವತ್ತು ಸುಶಾಂತ್ ಸಿಂಗ್ ಸಾವನ್ನು ಎಳೆತಂದಿದ್ದಾರೆ. ಸುಶಾಂತ್ (Sushant Singh) ಸಾವಿಗೆ ರಣಬೀರ್ ಕಪೂರ್ ಮತ್ತು ಕರಣ್ ಜೋಹರ್ ಕಾರಣವೆಂದು ಬರೆದುಕೊಂಡಿದ್ದಾರೆ. ಅಲ್ಲದೇ ರಣಬೀರ್ ಅವರನ್ನು ದುರ್ಯೋಧನನಿಗೆ ಕರಣ್ ಜೋಹರ್ ಅವರನ್ನು ಶಕುನಿ ಹೋಲಿಸಿದ್ದಾರೆ.

    ನಿನ್ನೆಯಷ್ಟೇ ರಣಬೀರ್ ಕಪೂರ್, ಆಲಿಯಾ ಭಟ್ ನಟಿಸುತ್ತಾರೆ ಎನ್ನಲಾದ ರಾಮಾಯಣ ಸಿನಿಮಾ ಬಗ್ಗೆಯೂ ಕಂಗನಾ ಮಾತನಾಡಿದ್ದರು. ಬಾಲಿವುಡ್ ನಲ್ಲಿ ರಾಮಾಯಣ (Ramayana) ಆಧಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಇದೊಂದು ಭಾರೀ ಬಜೆಟ್‍ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರು ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ತಾರಾಗಣದ ಯಾದಿ ಮಾತ್ರ ಹೊರಗೆ ಬಿದ್ದಿದೆ.

    ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್ (Alia Bhatt) ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ನಿಜ ಜೀವನದಲ್ಲೂ ಸತಿ-ಪತಿಯಾಗಿರುವ ರಣಬೀರ್ ಮತ್ತು ಆಲಿಯಾ ಭಟ್ ತೆರೆಯ ಮೇಲೂ ಅಂಥಧ್ದೇ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಳ್ಳುತ್ತಿದೆ.

    ಇದರ ಜೊತೆಗೆ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ಟಾರ್ ಗಳ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಟೀಕೆ ಮಾಡಿದ್ದಾರೆ. ಅದರಲ್ಲೂ ಪರೋಕ್ಷವಾಗಿ ರಣಬೀರ್ ಕಪೂರ್ ಟೀಕಿಸಿದ್ದಾರೆ. ಮಾದಕ ವ್ಯಸನಿ, ಬಿಳಿ ಇಲಿ ಅಂತೆಲ್ಲ ಕರೆದಿದ್ದಾರೆ. ಇದನ್ನೂ ಓದಿ:ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಂಗನಾ ರಣಾವತ್ (Kangana Ranaut), ‘ನಾನು ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ ಬಗ್ಗೆ ಕೇಳುತ್ತಿರುವೆ. ಅದರಲ್ಲಿ ಮಾದಕ ವ್ಯಸನಿಯೊಬ್ಬ ರಾಮನ ಪಾತ್ರ ಮಾಡಲಿದ್ದಾನಂತೆ. ತೆಳ್ಳಗಿನ ಬಿಳಿ ಇಲಿಯು ಕೆಟ್ಟ ರೀತಿಯಲ್ಲಿ ಬೇರೆಯವರ ಬಗ್ಗೆ ಪಿ.ಆರ್ ಮಾಡಿಕೊಂಡು ಓಡಾಡುವಲ್ಲಿ ಕುಖ್ಯಾತಿ ಪಡೆದವನು. ಇವನು ಕೇವಲ ನಟನಲ್ಲ, ಹೆಣ್ಣು ಬಾಕ ಕೂಡ. ಇಂಥವನು ರಾಮನಾಗಲು ಬೆಳೆದು ನಿಂತಿದ್ದಾನೆ’ ಎಂದು ಜರಿದಿದ್ದಾರೆ.

     

    ಯಶ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ ಎಂದು ಕೇಳಿದ್ದೇನೆ. ರಾವಣ ಪಾತ್ರಕ್ಕಿಂತ ಅವರಿಗೆ ರಾಮನ ಪಾತ್ರ ಹೊಂದುತ್ತದೆ ಎಂದು ಪರೋಕ್ಷವಾಗಿ ರಾಕಿಂಗ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲ ಹೇಳಿಕೆಗಳ ನಡುವೆಯೂ ಅವರು ರಣಬೀರ್ ಕಪೂರ್ ಗೆ ಎಚ್ಚರಿಕೆಯನ್ನೂ ನೀಡಿದ್ದು, ‘ನೀನು ಒಮ್ಮೆ ಹೊಡೆದರೆ ನಾನು ಸಾಯೋತನಕ ಹೊಡೆಯುತ್ತೇನೆ. ಗಲಾಟೆ ಮಾಡದೇ ದೂರ ಇರು’ ಎಂದು ಬರೆದುಕೊಂಡಿದ್ದಾರೆ.

  • ಸುಶಾಂತ್ ಶವ ಪರೀಕ್ಷೆ ಸಿಬ್ಬಂದಿ ಬೆನ್ನಿಗೆ ನಿಂತ ನಟನ ಸಹೋದರಿ

    ಸುಶಾಂತ್ ಶವ ಪರೀಕ್ಷೆ ಸಿಬ್ಬಂದಿ ಬೆನ್ನಿಗೆ ನಿಂತ ನಟನ ಸಹೋದರಿ

    ಬಾಲಿವುಡ್ ನಟ ಸುಶಾಂತ್ ಸಿಂಗ್ ಶವ ಪರೀಕ್ಷೆಯ ಬಗ್ಗೆ ಎರಡೂವರೆ ವರ್ಷಗಳ ನಂತರ ಸತ್ಯ ನುಡಿದಿರುವ ಶವಪರೀಕ್ಷೆ ಮಾಡಿದ ಸಿಬ್ಬಂದಿ ರೂಪಾ ಕುಮಾರ್ ಬೆನ್ನಿಗೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ನಿಂತುಕೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತಗೆದುಕೊಂಡು ಸಾವಿನ ಕುರಿತು ಮರು ತನಿಖೆ ಮಾಡಬೇಕು ಎಂದು ಅವರು ಸಿಬಿಐಗೆ ಮನವಿ ಮಾಡಿದ್ದಾರೆ. ಅಲ್ಲದೇ, ಸತ್ಯ ನುಡಿದಿರುವ ರೂಪಾ ಅವರಿಗೆ ಭದ್ರತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಸುಶಾಂತ್ ಸಿಂಗ್ ಸಾವು ಪ್ರಕರಣ ಇದೀಗ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳಿದ್ದರೆ, ಅವರು ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ವಾದಿಸಿತ್ತು. ಈ ವಾದ ವಿವಾದಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಈವರೆಗೂ ಅವರ ಮರಣೋತ್ತರ ಅಂತಿಮ ವರದಿ ಬಂದಿಲ್ಲ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ ಮರ್ಡರ್ ಎನ್ನುವ ಆಘಾತಕಾರಿ ವಿಷಯವನ್ನು ಶವಪರೀಕ್ಷೆಯ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಸುಶಾಂತ್ ಸಿಂಗ್ ಶವಪರೀಕ್ಷೆ ನಡೆಸಿದ ಸಿಬ್ಬಂದಿಗಳಲ್ಲಿ ರೂಪಾ ಕುಮಾರ್ ಶಾ ಕೂಡ ಒಬ್ಬರು. ಅವರು ಹಲವು ವರ್ಷಗಳ ನಂತರ ಮಾತನಾಡಿ, ‘ಅವತ್ತು ನಮ್ಮ ಮುಂದೆ ಐದಾರು ಶವಗಳು ಇದ್ದವು. ನಾವು ಅವುಗಳನ್ನು ಪೋಸ್ಟ್ ಮಾರ್ಟಂ ಮಾಡಬೇಕಿತ್ತು. ಅದರಲ್ಲಿ ಒಂದು ವಿಐಪಿ ಶವ ಅಂತ ಗೊತ್ತಾಯಿತು. ಬೇಗ ಬೇಗ ಶವಪರೀಕ್ಷೆ ಮಾಡುವಂತೆ ನಮಗೆ ಸೂಚಿಸಲಾಯಿತು. ಆನಂತರ ನಮಗೆ ಗೊತ್ತಾಗಿದ್ದು ಅದು ಸುಶಾಂತ್ ಸಿಂಗ್ ಅವರ ಶವ ಅಂತ. ದೇಹದ ಮೇಲೆ ಹಲವು ಗುರುತುಗಳು ಇದ್ದವು. ಕುತ್ತಿಗೆ ಮೇಲೂ ಇದ್ದವು’ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ಸುಶಾಂತ್ ಸಿಂಗ್ ಶವ ಪರೀಕ್ಷೆ ಮಾಡುವಾಗ ತಮಗೆ ಒತ್ತಡವೂ ಇತ್ತು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ. ಶವಪರೀಕ್ಷೆ ಮಾಡುವಾಗ ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸುಶಾಂತ್ ಅವರದ್ದು ಕೇವಲ ಫೋಟೋ ಮಾತ್ರ ತಗೆಯಲಾಯಿತು. ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಿ ಶವವನ್ನು ಪೊಲೀಸನವರಿಗೆ ಹಸ್ತಾಂತರಿಸಿದೆವು  ಎಂದೂ ಅವರು ಮಾತನಾಡಿದ್ದಾರೆ.

    ನಟ ಸುಶಾಂತ್ 2020 ಜೂನ್ ನಲ್ಲಿ ಅವರು ವಾಸವಿದ್ದ ಅಪಾರ್ಟ್ಮೈಂಟ್ ನಲ್ಲೇ ಶವವಾಗಿ ಪತ್ತೆಯಾಗಿದ್ದರು. ಆನಂತರ  ಅನೇಕ ಅನುಮಾನಗಳು ಹುಟ್ಟಿಕೊಂಡವು. ಬಾಲಿವುಡ್ ನ ಕೆಲ ಕಲಾವಿದರು ಮತ್ತು ನಿರ್ಮಾಣ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನಗಳು ನಡೆದವು. ಸ್ವತಃ ಸುಶಾಂತ್ ಅವರ ಸಿಬ್ಬಂದಿ ಮೇಲೂ ಅನುಮಾನ ಪಡಲಾಯಿತು. ಆದರೆ, ಈ ಪ್ರಕರಣ ಇದೀಗ ಬೇರೆ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಪೊಲೀಸ್ ಇಲಾಖೆ ಏನು ಹೇಳುತ್ತದೆಯೋ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ಸುಶಾಂತ್ ಸಿಂಗ್ ಮರ್ಡರ್ ಹೇಳಿಕೆ : ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ

    ನಟ ಸುಶಾಂತ್ ಸಿಂಗ್ ಮರ್ಡರ್ ಹೇಳಿಕೆ : ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ

    ರಡೂವರೆ ವರ್ಷಗಳ ಹಿಂದೆ ನಡೆದ ಸುಶಾಂತ್ ಸಿಂಗ್ ಸಾವು ಪ್ರಕರಣ ಇದೀಗ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳಿದ್ದರೆ, ಅವರು ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ವಾದಿಸಿತ್ತು. ಈ ವಾದ ವಿವಾದಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಈವರೆಗೂ ಅವರ ಮರಣೋತ್ತರ ಅಂತಿಮ ವರದಿ ಬಂದಿಲ್ಲ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ ಮರ್ಡರ್ ಎನ್ನುವ ಆಘಾತಕಾರಿ ವಿಷಯವನ್ನು ಶವಪರೀಕ್ಷೆಯ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಸುಶಾಂತ್ ಸಿಂಗ್ ಶವಪರೀಕ್ಷೆ ನಡೆಸಿದ ಸಿಬ್ಬಂದಿಗಳಲ್ಲಿ ರೂಪಾ ಕುಮಾರ್ ಶಾ ಕೂಡ ಒಬ್ಬರು. ಅವರು ಹಲವು ವರ್ಷಗಳ ನಂತರ ಮಾತನಾಡಿ, ‘ಅವತ್ತು ನಮ್ಮ ಮುಂದೆ ಐದಾರು ಶವಗಳು ಇದ್ದವು. ನಾವು ಅವುಗಳನ್ನು ಪೋಸ್ಟ್ ಮಾರ್ಟಂ ಮಾಡಬೇಕಿತ್ತು. ಅದರಲ್ಲಿ ಒಂದು ವಿಐಪಿ ಶವ ಅಂತ ಗೊತ್ತಾಯಿತು. ಬೇಗ ಬೇಗ ಶವಪರೀಕ್ಷೆ ಮಾಡುವಂತೆ ನಮಗೆ ಸೂಚಿಸಲಾಯಿತು. ಆನಂತರ ನಮಗೆ ಗೊತ್ತಾಗಿದ್ದು ಅದು ಸುಶಾಂತ್ ಸಿಂಗ್ ಅವರ ಶವ ಅಂತ. ದೇಹದ ಮೇಲೆ ಹಲವು ಗುರುತುಗಳು ಇದ್ದವು. ಕುತ್ತಿಗೆ ಮೇಲೂ ಇದ್ದವು’ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

    ಸುಶಾಂತ್ ಸಿಂಗ್ ಶವ ಪರೀಕ್ಷೆ ಮಾಡುವಾಗ ತಮಗೆ ಒತ್ತಡವೂ ಇತ್ತು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ. ಶವಪರೀಕ್ಷೆ ಮಾಡುವಾಗ ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸುಶಾಂತ್ ಅವರದ್ದು ಕೇವಲ ಫೋಟೋ ಮಾತ್ರ ತಗೆಯಲಾಯಿತು. ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಿ ಶವವನ್ನು ಪೊಲೀಸನವರಿಗೆ ಹಸ್ತಾಂತರಿಸಿದೆವು  ಎಂದೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ನಡುರಾತ್ರಿಯಲ್ಲಿ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್

    ನಟ ಸುಶಾಂತ್ 2020 ಜೂನ್ ನಲ್ಲಿ ಅವರು ವಾಸವಿದ್ದ ಅಪಾರ್ಟ್ಮೈಂಟ್ ನಲ್ಲೇ ಶವವಾಗಿ ಪತ್ತೆಯಾಗಿದ್ದರು. ಆನಂತರ  ಅನೇಕ ಅನುಮಾನಗಳು ಹುಟ್ಟಿಕೊಂಡವು. ಬಾಲಿವುಡ್ ನ ಕೆಲ ಕಲಾವಿದರು ಮತ್ತು ನಿರ್ಮಾಣ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನಗಳು ನಡೆದವು. ಸ್ವತಃ ಸುಶಾಂತ್ ಅವರ ಸಿಬ್ಬಂದಿ ಮೇಲೂ ಅನುಮಾನ ಪಡಲಾಯಿತು. ಆದರೆ, ಈ ಪ್ರಕರಣ ಇದೀಗ ಬೇರೆ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಪೊಲೀಸ್ ಇಲಾಖೆ ಏನು ಹೇಳುತ್ತದೆಯೋ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ, ಮರ್ಡರ್: ಹೊರಬಿತ್ತು ಆಘಾತಕಾರಿ ಹೇಳಿಕೆ

    ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ, ಮರ್ಡರ್: ಹೊರಬಿತ್ತು ಆಘಾತಕಾರಿ ಹೇಳಿಕೆ

    ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಎರಡುವರೆ ವರ್ಷಗಳ ಹಿಂದೆಯೇ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳಿದ್ದರೆ, ಅವರದ್ದು ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ವಾದಿಸಿತ್ತು. ಈ ವಾದ ವಿವಾದಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಈವರೆಗೂ ಅವರ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದಿಲ್ಲ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ ಮರ್ಡರ್ ಎನ್ನುವ ಆಘಾತಕಾರಿ ವಿಷಯವನ್ನು ಶವಪರೀಕ್ಷೆಯ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ.

    ಸುಶಾಂತ್ ಸಿಂಗ್ ಶವಪರೀಕ್ಷೆ ನಡೆಸಿದ ಸಿಬ್ಬಂದಿಗಳಲ್ಲಿ ರೂಪಾ ಕುಮಾರ್ ಶಾ ಕೂಡ ಒಬ್ಬರು. ಅವರು ಹಲವು ವರ್ಷಗಳ ನಂತರ ಮಾತನಾಡಿ, ‘ಅವತ್ತು ನಮ್ಮ ಮುಂದೆ ಐದಾರು ಶವಗಳು ಇದ್ದವು. ನಾವು ಅವುಗಳನ್ನು ಪೋಸ್ಟ್ ಮಾರ್ಟಂ ಮಾಡಬೇಕಿತ್ತು. ಅದರಲ್ಲಿ ಒಂದು ವಿಐಪಿ ಶವ ಅಂತ ಗೊತ್ತಾಯಿತು. ಬೇಗ ಬೇಗ ಶವಪರೀಕ್ಷೆ ಮಾಡುವಂತೆ ನಮಗೆ ಸೂಚಿಸಲಾಯಿತು. ಆನಂತರ ನಮಗೆ ಗೊತ್ತಾಗಿದ್ದು ಅದು ಸುಶಾಂತ್ ಸಿಂಗ್ ಅವರ ಶವ ಅಂತ. ದೇಹದ ಮೇಲೆ ಹಲವು ಗುರುತುಗಳು ಇದ್ದವು. ಕುತ್ತಿಗೆ ಮೇಲೂ ಇದ್ದವು’ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

    ಸುಶಾಂತ್ ಸಿಂಗ್ ಶವ ಪರೀಕ್ಷೆ ಮಾಡುವಾಗ ತಮಗೆ ಒತ್ತಡವೂ ಇತ್ತು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ. ಶವಪರೀಕ್ಷೆ ಮಾಡುವಾಗ ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸುಶಾಂತ್ ಅವರದ್ದು ಕೇವಲ ಫೋಟೋ ಮಾತ್ರ ತೆಗೆಯಲಾಯಿತು. ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಿ ಶವವನ್ನು ಪೊಲೀಸನವರಿಗೆ ಹಸ್ತಾಂತರಿಸಿದೆವು  ಎಂದೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್‌ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್

    ನಟ ಸುಶಾಂತ್ 2020 ಜೂನ್ ನಲ್ಲಿ ಅವರು ವಾಸವಿದ್ದ ಅಪಾರ್ಟ್ಮೈಂಟ್ ನಲ್ಲೇ ಶವವಾಗಿ ಪತ್ತೆಯಾಗಿದ್ದರು. ಆನಂತರ  ಅನೇಕ ಅನುಮಾನಗಳು ಹುಟ್ಟಿಕೊಂಡವು. ಬಾಲಿವುಡ್ ನ ಕೆಲ ಕಲಾವಿದರು ಮತ್ತು ನಿರ್ಮಾಣ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನಗಳು ನಡೆದವು. ಸ್ವತಃ ಸುಶಾಂತ್ ಅವರ ಸಿಬ್ಬಂದಿ ಮೇಲೂ ಅನುಮಾನ ಪಡಲಾಯಿತು. ಆದರೆ, ಈ ಪ್ರಕರಣಕ್ಕೆ ಇದೀಗ ಬೇರೆ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಪೊಲೀಸ್ ಇಲಾಖೆ ಏನು ಹೇಳುತ್ತದೆಯೋ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು

    ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು

    ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾನಿಯಾನ್ ಸಾವಿನ ಬೆನ್ನಲ್ಲೇ ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದರು. ಹಾಗಾಗಿ ಮ್ಯಾನೇಜರ್ ಸಾವಿಗೆ ಸುಶಾಂತ್ ಸಾವನ್ನು ತಳುಕು ಹಾಕಲಾಗಿತ್ತು. ದಿಶಾ ಸಾವಿನಿಂದಾಗಿಯೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

    ದಿಶಾ ಸಾವಿಗೆ ಸಂಬಂಧಿಸಿದಂತೆ ದೂರು ದಾಖಲಾಗದೇ ಇದ್ದರೂ, ಸಿಬಿಐ ಸ್ವತಂತ್ರವಾಗಿ ತನಿಖೆ ಆರಂಭಿಸಿತ್ತು. ಎರಡು ಸಾವುಗಳಿಗೆ ಏನಾದರೂ ಸಂಬಂಧ ಇದೆಯಾ ಎಂದು ಪರಿಶೀಲನೆ ನಡೆಸಿತ್ತು. ಕೇವಲ ಸಿಬಿಐ ಮಾತ್ರವಲ್ಲ, ಇಡಿ ಮತ್ತು ಎನ್.ಸಿ.ಬಿ ಕೂಡ ಈ ವಿಚಾರಣೆಗೆ ಕೈ ಜೋಡಿಸಿದ್ದವು. ಈ ಎಲ್ಲ ವಿಚಾರಣೆಗಳು ಮುಗಿದಿದ್ದು, ಕೊನೆಗೂ ದಿಶಾ ಅವರ ಸಾವಿನ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಗುರೂಜಿ ಮಾಡಿದ ಆ ಒಂದು ತಪ್ಪಿನಿಂದ, ಮನೆ ಮಂದಿಗೆ ಬಿಗ್ ಬಾಸ್ ಗುನ್ನ

    ಜೂನ್ ಎರಡನೇ ವಾರದಲ್ಲಿ ದಿಶಾ ಅವರ ಮೃತದೇಹ ಮುಂಬೈನ ಅಪಾರ್ಟಮೆಂಟ್ ವೊಂದರಲ್ಲಿ 14ನೇ ಮಹಡಿಯ ಕೋಣೆಯಲ್ಲಿ ಪತ್ತೆಯಾದ ಕೇವಲ 5 ದಿನಗಳ ನಂತರ ಸುಶಾಂತ್ ಶವವಾಗಿ ಪತ್ತೆಯಾಗಿದ್ದ. ಹಾಗಾಗಿ ಎರಡೂ ಸಾವುಗಳ ಕುರಿತು ತನಿಖೆಗೆ ಅನೇಕರು ಆಗ್ರಹಿಸಿದ್ದರು. ಸಿಬಿಐ ಸಲ್ಲಿಸಿರುವ ವರದಿಗಳ ಪ್ರಕಾರ ದಿಶಾ ಅತಿಯಾದ ಮದ್ಯಪಾನ ಸೇವಿಸಿ, ನಿಯಂತ್ರಣ ಸಿಗದೇ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ಎರಡೂ ಸಾವಿಗೆ ಒಂದಕ್ಕೊಂದು ಸಂಬಂಧವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

    ತನಿಖೆಯನ್ನು ಕೈಗೆತ್ತಿಕೊಂಡ ನಂತರ ದಿಶಾ ಪ್ರಿಯತಮ ರೋಹನ್ ರೈ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗಿತ್ತು. ಸಮಗ್ರ ಕೋನದಿಂದ ತನಿಖೆ ಮಾಡಿರುವ ಅಧಿಕಾರಿಗಳು ಸುಶಾಂತ್ ಸಾವಿಗೆ ದಿಶಾ ಸಾವು ಕಾರಣವಲ್ಲ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸುಶಾಂತ್ ಸಿಂಗ್ ಸಾವಿನ ಪ್ರಕರಣ ಚಾರ್ಜ್ ಶೀಟ್ ಸಲ್ಲಿಸಿದ ಎನ್.ಸಿ.ಬಿ : ರಿಯಾ ಚಕ್ರವರ್ತಿಗೆ ಸಂಕಷ್ಟ?

    ಸುಶಾಂತ್ ಸಿಂಗ್ ಸಾವಿನ ಪ್ರಕರಣ ಚಾರ್ಜ್ ಶೀಟ್ ಸಲ್ಲಿಸಿದ ಎನ್.ಸಿ.ಬಿ : ರಿಯಾ ಚಕ್ರವರ್ತಿಗೆ ಸಂಕಷ್ಟ?

    ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ರಹಸ್ಯವನ್ನು ಇನ್ನೂ ಬೇಧಿಸಲು ಸಾಧ್ಯವಾಗಿಲ್ಲ. ಆ ಸಾವು ಅಭಿಮಾನಿಗಳ ಪಾಲಿಗೆ ಇನ್ನೂ ನಿಗೂಢವಾಗಿದೆ. ಅದು ಆತ್ಮಹತ್ಯೆಯೋ, ಕೊಲೆಯೋ ಈ ಹೊತ್ತಿಗೂ ಅದು ಚರ್ಚೆಯ ವಿಷಯವಾಗಿದೆ. ಈ ಮಧ್ಯ ಎನ್.ಸಿ.ಬಿಯು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.  ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜಾಮೀನು ಪಡೆದು, ಆಚೆ ಇರುವ ಸುಶಾಂತ್ ಸಿಂಗ್ ಪ್ರೇಯಸಿ ಮತ್ತು ಪ್ರಕರಣದ ಮುಖ್ಯ ಆರೋಪಿ ರಿಯಾ ಚಕ್ರವರ್ತಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.

    ಬಾಲಿವುಡ್ ನಲ್ಲಿ ಏರುಗತಿಯಲ್ಲಿದ್ದ ನಟ ಸುಶಾಂತ್ ಸಿಂಗ್, ಸ್ಟಾರ್ ನಟರಾಗಿ ಮುಂಚುತ್ತಿರುವ ಹೊತ್ತಿನಲ್ಲೇ ಅಕಾಲಿಕ ಮರಣ ಹೊಂದಿದರು. ಯಾರೂ ಊಹಿಸಿಕೊಳ್ಳದೇ ಇರುವಂತಹ ಕೆಲಸಕ್ಕೆ ಕೈ ಹಾಕಿದರು. ಅದೂ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಪತ್ತೆಯಾದಾಗ, ಅವರು ಆ ರೀತಿ ಮಾಡಿಕೊಳ್ಳುವವರು ಅಲ್ಲ ಎಂದೇ ಆಪ್ತರು ಹೇಳಿದ್ದರು. ಸುಶಾಂತ್ ಅವರ ಈ ಸ್ಥಿತಿಗೆ ಕಾರಣ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಎಂದು ಆರೋಪಿಸಲಾಯಿತು. ಇದನ್ನೂ ಓದಿ:ಆರೋಗ್ಯದಲ್ಲಿ ಚೇತರಿಕೆ, ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಸುಶಾಂತ್ ಸಿಂಗ್ ಸಾವು ಒಂದು ಕಡೆ ನೋವಾಗಿ ಕಾಡಿದರೆ, ಮತ್ತೊಂದು ಕಡೆ ಅದು ಡ್ರಗ್ಸ್ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ದಂಧೆಗೆ ತಳುಕು ಹಾಕಿಕೊಂಡಿತು. ಸುಶಾಂತ್ ಸಿಂಗ್ ಡ್ರಗ್ಸ್ ಸೇವಿಸುತ್ತಿದ್ದ, ಅದನ್ನು ಸ್ವತಃ ರಿಯಾ ಚಕ್ರವರ್ತಿ ಹಾಗೂ ಶೋವಿಕ್ ಚಕ್ರವರ್ತಿಯೇ ಸಪ್ಲೈ ಮಾಡುತ್ತಿದ್ದರು ಎಂದು ಹೇಳಲಾಯಿತು. ರಿಯಾ ಚಕ್ರವರ್ತಿಯನ್ನು ಬಂಧಿಸಿ ಜೈಲಿಗೂ ಕಳುಹಿಸಲಾಯಿತು. ಆನಂತರ ಅವರು ಜಾಮೀನು ಪಡೆದು ಆಚೆ ಬಂದರು. ಇದೀಗ ಈ ಪ್ರಕರಣದ ಕುರಿತಂತೆ ಜಾರ್ಜಶೀಟ್ ಸಲ್ಲಿಕೆಯಾಗಿದೆ. ಅದರಲ್ಲಿ ಏನೆಲ್ಲ ರಹಸ್ಯಗಳಿವೆಯೋ ಕಾದು ನೋಡಬೇಕು.

    Live Tv

  • ರಸ್ತೆ ಅಪಘಾತದಲ್ಲಿ ಸುಶಾಂತ್ ಸಿಂಗ್ ಕುಟುಂಬದ ಆರು ಮಂದಿ ಸಾವು – ನಾಲ್ವರಿಗೆ ಗಾಯ

    ರಸ್ತೆ ಅಪಘಾತದಲ್ಲಿ ಸುಶಾಂತ್ ಸಿಂಗ್ ಕುಟುಂಬದ ಆರು ಮಂದಿ ಸಾವು – ನಾಲ್ವರಿಗೆ ಗಾಯ

    ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ಆರು ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ಬೆಳಗ್ಗೆ ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾ ಗ್ರಾಮದ ಬಳಿ ಸಿಕಂದರಾ-ಶೇಖ್‍ಪುರ ರಾಷ್ಟ್ರೀಯ ಹೆದ್ದಾರಿ-333ರಲ್ಲಿ ಈ ಅಪಘಾತ ಸಂಭವಿಸಿದ್ದು, ಸಂತ್ರಸ್ತರು ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಪಾಟ್ನಾದಿಂದ ಜಮುಯಿಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್‍ಕುಮಾರ್ ರಾವ್ – ಫೋಟೋ ವೈರಲ್

    ಸುಶಾಂತ್ ಸಿಂಗ್ ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರಿಗೆ ಎಲ್‍ಪಿಜಿ ಸಿಲಿಂಡರ್‌ಗಳನ್ನು ತುಂಬಿದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಆರು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಗೊಂಡ ನಾಲ್ವರನ್ನು ಇದೀಗ ಜಮುಯಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಲಾಲ್ಜಿತ್ ಸಿಂಗ್, ಅವರ ಇಬ್ಬರು ಮಕ್ಕಳಾದ ಅಮಿತ್ ಶೇಖರ್ ಅಲಿಯಾಸ್ ನೆಮಾನಿ ಸಿಂಗ್ ಮತ್ತು ರಾಮ್ ಚಂದ್ರ ಸಿಂಗ್, ಮಗಳು ಬೇಬಿ ದೇವಿ, ಸೊಸೆ ಅನಿತಾ ದೇವಿ ಮತ್ತು ಚಾಲಕ ಪ್ರೀತಂ ಕುಮಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 10 ತಿಂಗಳ ಕಂದಮ್ಮನ ಮೇಲೆ ಮನೆಕೆಲಸದವನಿಂದ ಅತ್ಯಾಚಾರ

    sushanth singh

    ಲಾಲ್ಜಿತ್ ಸಿಂಗ್ ಅವರು ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಅವರ ಸೋದರ ಮಾವ ಆಗಿದ್ದು, ಓಂ ಪ್ರಕಾಶ್ ಸಿಂಗ್ ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವ ಆಗಿದ್ದಾರೆ. ಸಂತ್ರಸ್ತರು ಓಂ ಪ್ರಕಾಶ್ ಸಿಂಗ್ ಅವರ ಸಹೋದರಿ ಗೀತಾ ದೇವಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಜಮುಯಿಗೆ ಹಿಂತಿರುಗುತ್ತಿದ್ದಾಗ ಘಟನೆ ಜರುಗಿದೆ.

  • ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ಅಕ್ಷಯ್‌ ಕುಮಾರ್‌

    ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ಅಕ್ಷಯ್‌ ಕುಮಾರ್‌

    – 4 ತಿಂಗಳಿನಲ್ಲಿ ಲಕ್ಷಗಟ್ಟಲೇ ಹಣ ಸಂಪಾದನೆ
    – ಸಬ್‌ಸ್ಕ್ರೈಬರ್ಸ್ ಸಂಖ್ಯೆ 2 ಲಕ್ಷ ‌ ಏರಿಕೆ

    ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತನ್ನ ವಿರುದ್ಧವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಯೂಟ್ಯೂಬರ್‌ ವಿರುದ್ಧ ಕೋಟಿಗಟ್ಟಲೇ ಮಾನನಷ್ಟ ಪ್ರಕರಣವನ್ನು ದಾಖಲಿಸಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪ ಮಾಡಿದ್ದಕ್ಕೆ ಯೂಟ್ಯೂಬರ್‌ ರಶೀದ್ ಸಿದ್ದಿಕಿ ವಿರುದ್ಧ 500 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದ್ದಾರೆ.

    ಸಿದ್ದಿಕಿ ಹೇಳಿದ್ದು ಏನು?
    ಎಂಎಸ್ ಧೋನಿ: ದಿ ಅನ್‌ ಟೋಲ್ಡ್‌ ಸ್ಟೋರಿಯಂತಹ ಹಿಟ್‌ ಚಿತ್ರದಲ್ಲಿ ಸುಶಾಂತ್‌ ನಟಿಸಿದ್ದಕ್ಕೆ ಅಕ್ಷಯ್‌ ಕುಮಾರ್‌ ಅಸಮಾಧಾನವನ್ನು ಹೊಂದಿದ್ದರು. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಅವರು ಸುಶಾಂತ್‌ ಪ್ರಕರಣದ ಸಂಬಂಧ ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರೊಂದಿಗೆ ರಹಸ್ಯ ಸಭೆಯನ್ನು ನಡೆಸಿದ್ದರು.

    ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ ಜೊತೆ ಅಕ್ಷಯ್‌ ಕುಮಾರ್‌ ಸಂಪರ್ಕ ಹೊಂದಿದ್ದರು. ರಿಯಾ ಕೆನಡಾಗೆ ತೆರಳಲು ಅಕ್ಷಯ್‌ ಕುಮಾರ್‌ ಸಹಾಯ ಮಾಡಿದ್ದರು ಎಂದು ಸಿದ್ದಿಕಿ ವಿಡಿಯೋದಲ್ಲಿ ಆರೋಪಿಸಿದ್ದ.

     

    ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ವಿರುದ್ಧ ನಕಲಿ ಸುದ್ದಿ ಹರಡಿದ ಆರೋಪದ ಹಿನ್ನೆಲೆಯಲ್ಲಿ ರಶೀದ್ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಈತನಿಗೆ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದ್ದು ಪೊಲೀಸ್‌ ತನಿಖೆಗೆ ಸಹಕಾರ ನೀಡಬೇಕೆಂದು ಸೂಚಿಸಿದೆ.

    ಎಷ್ಟು ಹಣ ಸಂಪಾದನೆ?
    ಬಿಹಾರ ಮೂಲದ ಸಿವಿಲ್ ಎಂಜಿನಿಯರ್ ಸಿದ್ದಿಕಿ ಎಫ್‌ಎಫ್‌ ನ್ಯೂಸ್‌ ಹೆಸರಿನಲ್ಲಿ ಯೂ ಟ್ಯೂಬ್‌ ಚಾನೆಲ್‌ ತೆರೆದಿದ್ದಾನೆ. ಸಬ್‌ ಸ್ಕ್ರೈಬರ್ಸ್‌ ಸಂಖ್ಯೆ ಲಕ್ಷಕ್ಕೂ ಹೆಚ್ಚು ಇರುವ ಕಾರಣ ಯೂ ಟ್ಯೂಬ್‌ನಿಂದ ಅಧಿಕೃತ ಟಿಕ್‌ ಮಾರ್ಕ್‌ ಸಹ ಸಿಕ್ಕಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 15 ಲಕ್ಷ ರೂ. ಗಳಿಸಿದ್ದ. ಸುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಆತನ ಸಬ್‌ಸ್ಟ್ರೈಬರ್ಸ್‌ ಸಂಖ್ಯೆ 1 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗಿತ್ತು.

    ಯಾವ ತಿಂಗಳಿನಲ್ಲಿ ಎಷ್ಟು?
    ಸುಶಾಂತ್‌ ಸಿಂಗ್‌ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ವರ್ಷದ ಜೂನ್‌ 20ರಂದು. ಶುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಈತನ ವಿಡಿಯೋಗಳ ವ್ಯೂ ಜಾಸ್ತಿಯಾಗಿ ದಿಢೀರ್‌ ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡಿದ್ದಾನೆ.

    ಏಪ್ರಿಲ್‌ನಲ್ಲಿ 7,120 ರೂ., ಮೇ 296 ರೂ. ಜೂನ್‌ 38,200 ರೂ., ಜುಲೈ 2,75,025 ರೂ., ಆಗಸ್ಟ್‌ 5,57,658 ರೂ., ಸೆಪ್ಟೆಂಬರ್‌ 6,50,898 ರೂ., ಅಕ್ಟೋಬರ್‌ 2,38,180 ರೂ., ನವೆಂಬರ್ ತಿಂಗಳಿನಲ್ಲಿ‌ 35,901 ರೂ. ಹಣವನ್ನು ಸಿದ್ದಿಕಿ ಸಂಪಾದಿಸಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.

  • ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತೀರಿ- ಸುಶಾಂತ್ ಸಿಂಗ್ ಕುರಿತ ಭಾವನಾತ್ಮಕ ಟ್ವೀಟ್ ಮಾಡಿದ ರೈನಾ

    ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತೀರಿ- ಸುಶಾಂತ್ ಸಿಂಗ್ ಕುರಿತ ಭಾವನಾತ್ಮಕ ಟ್ವೀಟ್ ಮಾಡಿದ ರೈನಾ

    ನವದೆಹಲಿ: ಬಾಲಿವುಡ್ ಯಂಗ್ ಹೀರೋ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಮಾಡಿಕೊಂಡು 10 ವಾರ ಕಳೆದಿದೆ. ಆದರೆ ಇದುವರೆಗೂ ಆತನ ಆತ್ಮಹತ್ಯೆ ಪ್ರಮಾಣದ ವಿಚಾರಣೆಯಲ್ಲಿ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಸದ್ಯ ಪ್ರಕರಣವನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಭಾವನಾತ್ಮಕ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

    ಸುಶಾಂತ್ ಸಿಂಗ್ ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಎಂದು ಟ್ವೀಟ್ ಮಾಡಿರುವ ರೈನಾ, ಸರ್ಕಾರದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ. ‘ನೀನು ಎಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿರುವೆ. ಅಭಿಮಾನಿಗಳು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿಮಗೆ ಶೀಘ್ರ ನ್ಯಾಯ ಸಿಗಲಿದೆ. ನಿಮ್ಮ ಆತ್ಮಹತ್ಯೆಗೆ ಕಾರಣರಾಗಿರುವ ಯಾರನ್ನು ಬಿಡುವುದಿಲ್ಲ. ನೀವು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ ಎಂದು ಬರೆದುಕೊಂಡಿದ್ದಾರೆ.

    ತಮ್ಮ ಟ್ವೀಟ್‍ನೊಂದಿಗೆ ವಿಡಿಯೋ ಪೋಸ್ಟ್ ಮಾಡಿರುವ ರೈನಾ, ಸುಶಾಂತ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತೀರುವ #JusticeforSSR ಹ್ಯಾಶ್‍ಟ್ಯಾಗ್‍ನೊಂದಿಗೆ ಟ್ವೀಟ್ ಮಾಡಿದ್ದಾರೆ.

    ಇತ್ತ ಸುಶಾಂತ್ ಸಿಂಗ್ ಪ್ರಕರಣ ದಿನವೊಂದಕ್ಕೆ ತಿರುವು ಪಡೆಯುತ್ತಿದ್ದು, ಮುಂಬೈ ಪೊಲೀಸರು ಪ್ರಾಥಮಿಕ ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸುಶಾಂತ್ ಸಿಂಗ್ ಮರಣೋತ್ತರ ವರದಿಯಲ್ಲಿ ಸುಶಾಂತ್ ಸಾವಿನ ಸಮಯನ್ನೇ ನಮೂದಿಸಿಲ್ಲ. ಇಂಥ ಮುಖ್ಯ ಅಂಶವೇ ಯಾಕೆ ಮಿಸ್ ಆಯ್ತು ಎಂದು ಸುಶಾಂತ್ ಸಿಂಗ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.