Tag: Sushant Rajput Singh

  • ಬಂಟಿ ಸಜ್ದೇಹ್ ಜೊತೆ ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಡೇಟಿಂಗ್

    ಬಂಟಿ ಸಜ್ದೇಹ್ ಜೊತೆ ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಡೇಟಿಂಗ್

    ಬಾಲಿವುಡ್ (Bollywood) ನಟಿ ರಿಯಾ ಚಕ್ರವರ್ತಿ  (Rhea Chakraborty) ಮತ್ತೆ ಸುದ್ದಿಯಲ್ಲಿದ್ದಾರೆ. ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಎರಡೂವರೆ ವರ್ಷದ ನಂತರ ಇದೀಗ ತಮ್ಮ ಪ್ರೀತಿಯನ್ನ ಕಂಡುಕೊಂಡಿದ್ದಾರೆ. ಉದ್ಯಮಿ ಬಂಟಿ ಸಜ್ದೇಹ್ (Bunty Sajdeh) ಜೊತೆ ಡೇಟಿಂಗ್ ಮಾಡ್ತಿದ್ದಾರೆ.

    ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಶಾಂತ್ ಸಾವಿನ ನಂತರ ರಿಯಾ ಅವರನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಎರಡೂವರೆ ವರ್ಷಗಳ ನಂತರ ಮತ್ತೆ ನಟಿ ಎಂಗೇಜ್ ಆಗಿದ್ದಾರೆ. ಫ್ಯಾಷನ್ ಡಿಸೈನರ್ ಸೀಮಾ ಸಹೋದರ ಬಂಟಿ ಸಜ್ದೇಹ್ ಜೊತೆ ರಿಯಾ ಎಂಗೇಜ್ ಆಗಿದ್ದಾರೆ.

    ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಎಂಡಿ ಬಂಟಿ ಜೊತೆ ರಿಯಾ ಡೇಟಿಂಗ್ ಮಾಡುತ್ತಿದ್ದು, ತಮ್ಮ ಸಂಬಂಧವನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನಟಿ ರಿಯಾ ವೈಯಕ್ತಿಕ ಜೀವನ ಮತ್ತು ಸಿನಿಮಾ ಕೆರಿಯರ್‌ ಎರಡರಲ್ಲೂ ಸೋತಿರುವ ಸಮಯದಲ್ಲಿ ಬಂಟಿ ಜೊತೆಯಾಗಿ ನಿಂತು ಸಾಥ್ ನೀಡಿದ್ದರು. ಇದನ್ನೂ ಓದಿ: ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ

     

    View this post on Instagram

     

    A post shared by Bunty Sajdeh (@buntysajdeh)

    ಸದ್ಯ ಬಿಟೌನ್ ಬಂಟಿ ಮತ್ತು ರಿಯಾ ಡೇಟಿಂಗ್ ಮ್ಯಾಟರ್ ಭಾರಿ ಸೌಂಡ್ ಮಾಡ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ, ಸದ್ಯದಲ್ಲೇ ಅಧಿಕೃತವಾಗಿ ಹೇಳುವ ಯೋಚನೆ ಇದ್ಯಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸುಶಾಂತ್ ಸಿಂಗ್ ಪುಣ್ಯ ಸ್ಮರಣೆ: ಸಹೋದರನ ನೆನೆದ ಶ್ವೇತಾ

    ಸುಶಾಂತ್ ಸಿಂಗ್ ಪುಣ್ಯ ಸ್ಮರಣೆ: ಸಹೋದರನ ನೆನೆದ ಶ್ವೇತಾ

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ 2 ವರ್ಷಗಳಾಗಿವೆ. ಇದೀಗ ಸಹೋದರಿ ಶ್ವೇತಾ ಸುಶಾಂತ್ ಅವರನ್ನ ನೆನೆದು ಭಾವುಕರಾಗಿದ್ದಾರೆ. ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಶ್ವೇತಾ ಸಹೋದರ ಸುಶಾಂತ್‌ನನ್ನು ಸ್ಮರಿಸಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ.

    ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಕಿರುತೆರೆಯಿಂದ ಹಿರಿತೆರೆಗೆ ಬಂದು ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದರು. ಚಿತ್ರರಂಗದ ಹಿನ್ನಲೆ ಇಲ್ಲದೆ ಸ್ವಂತ ಪ್ರತಿಭೆಯ ಮೂಲಕ ನೆಲೆ ನಿಂತ ಮಹಾನ್ ಕಲಾವಿದ ಸುಶಾಂತ್, ಅಗಲಿ ಇದೀಗ ಎರಡು ವರ್ಷಗಳಾಗಿದೆ. ಕಳೆದ ಜೂನ್ 14, 2020ರಂದು ನಟ ಸುಶಾಂತ್ ನಿಧನರಾಗಿದ್ದರು. ಇನ್ನು ನಟನ ಪುಣ್ಯಸ್ಮರಣೆಯನ್ನು ಕಹಿ ನೆನಪಿನಿಂದಲೇ ಮಾಡುತ್ತಿದ್ದಾರೆ. ಇದೀಗ ಸಹೋದರಿ ಶ್ವೇತಾ ಸಿಂಗ್ ಸುಶಾಂತ್ ನೆನೆದು ಭಾವುಕರಾಗಿದ್ದಾರೆ.ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ನೀವು ನಮ್ಮೆಲ್ಲರನ್ನ ಅಗಲಿ ಎರಡು ವರ್ಷಗಳಾಗಿದೆ. ಜೀವನದ ನಿಮ್ಮ ಮೌಲ್ಯಗಳಿಂದ ನೀವು ಅಮರರಾಗಿದ್ದೀರಿ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದೀರಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ್ದೀರಿ. ನಿಮ್ಮ ಬದುಕಿನ ಆದರ್ಶಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ .ನಾವೆಲ್ಲರೂ ದೀಪವನ್ನು ಬೆಳಗಿಸೋಣ, ಇನ್ನೋಬ್ಬರ ಮುಖದಲ್ಲಿ ನಗುವನ್ನು ತರಲು ನಿಸ್ವಾರ್ಥ ಕೆಲಸವನ್ನು ಮಾಡೋಣ ಎಂದು ಶ್ವೇತಾ ಬರೆದುಕೊಂಡಿದ್ದಾರೆ. ಸುಶಾಂತ್ ಸಹೋದರಿಯ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ.

  • ಸುಶಾಂತ್‍ನ ಎರಡು ವಸ್ತುಗಳು ಮಾತ್ರ ನನ್ನಲ್ಲಿವೆ: ರಿಯಾ ಚಕ್ರವರ್ತಿ

    ಸುಶಾಂತ್‍ನ ಎರಡು ವಸ್ತುಗಳು ಮಾತ್ರ ನನ್ನಲ್ಲಿವೆ: ರಿಯಾ ಚಕ್ರವರ್ತಿ

    ಮುಂಬೈ: ಸುಶಾಂತ್ ಬಳಸುತ್ತಿದ್ದ ಎರಡು ವಸ್ತುಗಳು ಮಾತ್ರ ನನ್ನ ಬಳಿಯಲ್ಲಿವೆ ಎಂದು ನಟಿ ರಿಯಾ ಚಕ್ರವರ್ತಿ ಹೇಳಿಕೊಂಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಎರಡು ಫೋಟೋ ಜೊತೆ ಸಂದೇಶ ಹಂಚಿಕೊಂಡಿರುವ ರಿಯಾ, ನನ್ನ ಹತ್ತಿರುವ ಸುಶಾಂತ್ ಪ್ರಾಪರ್ಟಿ ಎಂದಿದ್ದಾರೆ. ಒಂದು ಫೋಟೋದಲ್ಲಿ ಸಿನಿಮಾವೊಂದರಲ್ಲಿ ಬಳಿಸಿದ್ದ ನೀರಿನ ಬಾಟಲ್, ಮತ್ತೊಂದು ಸುಶಾಂತ್ ಹಸ್ತಾಕ್ಷರವುಳ್ಳ ಒಂದು ಪುಟದ ಚಿತ್ರವಿದೆ. ಪುಟದಲ್ಲಿ ಸುಶಾಂತ್ ತನ್ನ ಜೀವನದಲ್ಲಿರುವ ವ್ಯಕ್ತಿಗಳಿಗೆ ಆಭಾರಿಯಾಗಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸುಶಾಂತ್ ಕೇಸ್- ಸಿಬಿಐ ತನಿಖೆಗೆ ಕೇಂದ್ರ ಸಮ್ಮತಿ

    ಏನದು ಸಂದೇಶ?: ನನ್ನ ಜೀವನದ ಒಂದು ಭಾಗವಾಗಿರುವ ಲಿಲ್ಲು (ಶೌವಿಕ್ ಚಕ್ರವರ್ತಿ). ಬೇಬೂ (ರಿಯಾ), ಸರ್ (ರಿಯಾ ತಂದೆ), ಮಮ್ಮಿ (ರಿಯಾ ತಾಯಿ), ಫಡ್ಜ್ (ಸುಶಾಂತ್ ಸಾಕು ನಾಯಿ) ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಬರೆಯಲಾಗಿದೆ. ಆದ್ರೆ ಈ ಲೆಟರ್ ಸುಶಾಂತ್ ಯಾವಾಗ ಬರೆದಿದ್ದು ಎಂಬುದನ್ನು ರಿಯಾ ಹೇಳಿಕೊಂಡಿಲ್ಲ. ಇದನ್ನೂ ಓದಿ:  ರಿಯಾ ಸೋದರನ ಖಾತೆಗೆ ಸುಶಾಂತ್ ಅಕೌಂಟ್‍ನಿಂದ ಹಣ ವರ್ಗಾವಣೆ

    ಅಕ್ರಮ ಹಣ ವರ್ಗಾವಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಎಂಟು ಗಂಟೆ ರಿಯಾರನ್ನು ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ವೇಳೆ ತಾನು ಸುಶಾಂತ್ ನಿಂದ ಯಾವುದೇ ಹಣ ಪಡೆದಿಲ್ಲ ಎಂದು ರಿಯಾ ಹೇಳಿಕೆ ದಾಖಲಿಸಿರುವ ಬಗ್ಗೆ ವರದಿಗಳು ಬಿತ್ತರವಾಗಿವೆ. ಇದನ್ನೂ ಓದಿ: ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಆಪ್ತ ಗೆಳೆಯ ಸಿದ್ಧಾರ್ಥ್ ಪಿಠಾಣಿ

  • ನನ್ನನ್ನು ಖರೀದಿಸಲು ಸಾಧ್ಯವಿಲ್ಲ: ಸುಶಾಂತ್ ಮಾಜಿ ಗೆಳತಿ ಅಂಕಿತಾ

    ನನ್ನನ್ನು ಖರೀದಿಸಲು ಸಾಧ್ಯವಿಲ್ಲ: ಸುಶಾಂತ್ ಮಾಜಿ ಗೆಳತಿ ಅಂಕಿತಾ

    ಮುಂಬೈ: 34 ವರ್ಷದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಸುಶಾಂತ್ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ, ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂದು ಇನ್‍ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ.

    ಸುಶಾಂತ್ ನಿಧನದ ಒಂದು ತಿಂಗಳ ಬಳಿಕ ಅಂಕಿತಾ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಸುಶಾಂತ್ ಜೊತೆಗಿನ ಸ್ನೇಹ, ಒಡನಾಟ, ನಿಗೂಢ ಸಾವಿನ ಬಗ್ಗೆ ಹಲವು ವಿಷಯಗಳನ್ನು ಅಂಕಿತಾ ಶೇರ್ ಮಾಡಿಕೊಂಡಿದ್ದಾರೆ. ಇಂದು ಇನ್‍ಸ್ಟಾಗ್ರಾಂನಲ್ಲಿ ಎಆರ್‍ಎ ಸಾಲುಗಳ ಫೋಟೋ ಶೇರ್ ಮಾಡಿಕೊಂಡಿರುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

    ಈ ಜೀವನದಲ್ಲಿ ಹಲವು ವಸ್ತುಗಳನ್ನು ಅವರು ಬಯಸುತ್ತಿರಬಹುದು. ಅಂತವರಿಗೆ ನೇರವಾಗಿ ನಾನು ಉತ್ತರ ನೀಡಲು ಬಯಸುತ್ತೇನೆ. ಈ ಜಗತ್ತಿನಲ್ಲಿ ಲಕ್ಷಾಂತರ ವಿಷಯಗಳಲ್ಲಿ ನಾನು ಮರೆಯಾಗಿ, ಶರಣಾಗಲಿ ಎಂದು ಬಯಸುತ್ತಿದ್ದಾರೆ. ಆದ್ರೆ ನಾನು ಸಂತರ ಹಾದಿಯಲ್ಲಿ ಪಯಣಿಸುತ್ತಿದ್ದು, ನನ್ನನ್ನು ಅವರ ಮೋಸದಾಟದಲ್ಲಿ ಸಿಲುಕಿಕೊಳ್ಳಲ್ಲ. ನಾನು ಹೃದಯದ ಮಾತು ಕೇಳಿ ಮನಸ್ಸಿನಿಂದ ಮಾತನಾಡುತ್ತೇನೆ. ನಾನು ಖರೀದಿಸಲು ಆಗಲ್ಲ ಮತ್ತು ಮಾರಾಟವಾಗುವ ವಸ್ತು ಸಹ ನಾನಲ್ಲ ಎಂದು ಅಂಕಿತಾ ಲೋಖಂಡೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಯಾ ವಿರುದ್ಧ 48 ಪುಟಗಳ ಸಾಕ್ಷಿ ಸಂಗ್ರಹಿಸಿದ ಪಾಟ್ನಾ ಪೊಲೀಸ್

    https://www.instagram.com/p/CDdV9LHh3yT/?utm_source=ig_embed

    ಬಾಲಿವುಡ್ ನಟಿ ರಿಯಾ ಚಕ್ರವರ್ತಿ ವಿರುದ್ಧ ಪಾಟ್ನಾದಲ್ಲಿ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಸತ್ಯ ಗೆಲ್ಲಲಿದೆ ಎಂದು ಅಂಕಿತಾ ಪೋಸ್ಟ್ ಮಾಡಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸುಶಾಂತ್ ಮತ್ತು ಅಂಕಿತಾ ನಡುವೆ ನಡೆದ ವಾಟ್ಸಪ್ ಸಂದೇಶದ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್‍ಗೆ ಬೈ ಹೇಳಿ ಕೊಡಗಿನಲ್ಲಿ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್

    https://www.instagram.com/p/CDN3Vfrh78X/

  • ರಿಯಾ ವಿರುದ್ಧ 48 ಪುಟಗಳ ಸಾಕ್ಷಿ ಸಂಗ್ರಹಿಸಿದ ಪಾಟ್ನಾ ಪೊಲೀಸ್

    ರಿಯಾ ವಿರುದ್ಧ 48 ಪುಟಗಳ ಸಾಕ್ಷಿ ಸಂಗ್ರಹಿಸಿದ ಪಾಟ್ನಾ ಪೊಲೀಸ್

    -ಅರೆಸ್ಟ್ ವಾರೆಂಟ್‍ಗಾಗಿ ಸಿದ್ಧತೆ

    ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ವಿರುದ್ಧ ಪಾಟ್ನಾ ಪೊಲೀಸರು 48 ಪುಟಗಳ ಸಾಕ್ಷಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

    ಸುಶಾಂತ್ ನಿಧನದ ಬಳಿಕ ಅಜ್ಞಾತ ಸ್ಥಳದಲ್ಲಿರುವ ರಿಯಾ ಚಕ್ರವರ್ತಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ವಿಡಿಯೋ ಮೂಲಕ ರಿಯಾ ಚಕ್ರವರ್ತಿ ಸಂದೇಶ ರವಾನಿಸಿದ್ದರು. ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದು, ಸುಶಾಂತ್ ತಂದೆ ಕೆ.ಕೆ.ಸಿಂಗ್ ಪಾಟ್ನಾದಲ್ಲಿ ರಿಯಾ ಚಕ್ರವರ್ತಿ ಮತ್ತು ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಾಟ್ನಾ ಪೊಲೀಸರು ರಿಯಾ ಬಂಧನಕ್ಕಾಗಿ ಸಾಕ್ಷಿ ಸಂಗ್ರಹಿಸುತ್ತಿದ್ದಾರೆ.

    ಈಗಾಗಲೇ ಪಾಟ್ನಾ ಪೊಲೀಸರು 48 ಪುಟಗಳಷ್ಟು ಸಾಕ್ಷಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಈ 48 ಪುಟಗಳಲ್ಲಿ ರಿಯಾ ಮತ್ತು ಸುಶಾಂತ್ ನಡುವೆ ನಡೆದ ಬ್ಯಾಂಕ್ ವ್ಯವಹಾರಗಳ ಮಾಹಿತಿ ಇದೆ. 13 ಪುಟಗಳಲ್ಲಿ ಸುಶಾಂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಜೊತೆ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್, ಆರು ಜನರ ಹೇಳಿಕೆಗಳು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯ ಟೆಲಿಫೋನ್ ಹೇಳಿಕೆ ಸಹ ಈ ಪುಟಗಳಲ್ಲಿದೆ ಎಂದು ಪ್ರಕಟವಾಗಿದೆ. ಇದನ್ನೂ ಓದಿ: ಬಾಲಿವುಡ್‍ಗೆ ಬೈ ಹೇಳಿ ಕೊಡಗಿನಲ್ಲಿ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್

    ಈ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ರಿಯಾ ಚಕ್ರವರ್ತಿಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸುವಂತೆ ಪೊಲೀಸರು ಮನವಿ ಮಾಡಿಕೊಳ್ಳಲಿದ್ದಾರೆ. ಸುಶಾಂತ್ ಹೊಂದಿದ್ದ ಮೂರು ಬ್ಯಾಂಕ್ ಖಾತೆಗಳ ಮಾಹಿತಿ, ಯುಪಿಐ ಪೇಮೆಂಟ್, ಸ್ಟೇಟ್‍ಮೆಂಟ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಲೇಜರ್ ಬ್ಯಾಲೆನ್ಸ್ ಕಾಪಿಯನ್ನು ಸಹ ಪೊಲೀಸರು ತರಿಸಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಸೋದರಿಯಿಂದ ಪ್ರಧಾನಿ ಮೋದಿಗೆ ಬಹಿರಂಗ ಪತ್ರ – ಸಹೋದರನಿಗಾಗಿ ಮನವಿ

    ಸುಶಾಂತ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಮತ್ತು ಮುಂಬೈ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

  • ಸುಶಾಂತ್ ಕೇಸ್- ಪೊಲೀಸರಿಂದ ಕಂಗನಾ ವಿಚಾರಣೆ

    ಸುಶಾಂತ್ ಕೇಸ್- ಪೊಲೀಸರಿಂದ ಕಂಗನಾ ವಿಚಾರಣೆ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬೆನ್ನಟ್ಟಿರುವ ಮುಂಬೈ ಪೊಲೀಸರು ಇದುವರೆಗೂ 38ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ನಟಿ ಕಂಗನಾ ರಣಾವತ್ ಸಹ ಪೊಲೀಸ್ ವಿಚಾರಣೆಗೆ ಹಾಜರಾಗಲಿದ್ದಾರೆ.

    ಜುಲೈ 14ರಂದು ಸುಶಾಂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿಕೊಂಡಿದ್ದು, ಗೆಳತಿ ರಿಯಾ ಸೇರಿದಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇತ್ತ ಸುಶಾಂತ್ ನಿಧನದ ಬಳಿಕ ನಟ ಕಂಗನಾ ರಣಾವತ್, ಇದೊಂದು ಪಕ್ಕಾ ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದರು. ಸುಶಾಂತ್ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದಾರೆ ಎಂದು ಧ್ವನಿ ಎತ್ತಿದ್ದಾರೆ.

    ಧೋನಿ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ಸುಶಾಂತ್ ನನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಪ್ಲಾಪ್ ಸ್ಟಾರ್ ಎಂದು ಕರೆದು ಅವಮಾನಿಸಿದ್ದರು. ಸುಶಾಂತ್ ನಟನೆಯ ಸಿನಿಮಾಗಳಿಗೆ ಥಿಯೇಟರ್ ಸಿಗದಂತೆ ಬಾಲಿವುಡ್ ಮಾಫಿಯಾ ಒಳಸಂಚು ಮಾಡಿತ್ತು ಎಂದು ಕಂಗನಾ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕಂಗನಾರಿಗೆ ನೋಟಿಸ್ ನೀಡಲಾಗಿದೆ.

    ಕೊರೊನಾದಿಂದ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡ ಹಿನ್ನೆಲೆ ಕಂಗನಾ ಹಿಮಾಚಲ ಪ್ರದೇಶದ ತಮ್ಮ ಊರಿನಲ್ಲಿದ್ದಾರೆ. ಇತ್ತ ಪೊಲೀಸ್ ನೋಟಿಸ್ ಗೆ ಉತ್ತರಿಸಿರುವ ಕಂಗನಾ, ಮುಂಬೈಗೆ ಬಂದ ಕೂಡಲೇ ವಿಚಾರಣೆಗೆ ಹಾಜರಾಗುವುದಾಗಿ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.

  • ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಬಾಲಿವುಡ್ ಚಿತ್ರರಂದವರು ಶಾಕ್ ಆಗಿದ್ದು, ಎಲ್ಲರೂ ನಟನ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, ಅನುಪಮ್ ಖೇರ್, ಅಜಯ್ ದೇವಗನ್, ನಟಿ ಬಿಪಾಶು ಬಸು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಸುಶಾಂತ್ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, “ಈ ಸುದ್ದಿ ನನಗೆ ಆಘಾತವನ್ನೂಂಟು ಮಾಡಿದೆ. ಸುದ್ದಿ ತಿಳಿದು ಮಾತೇ ಬರುತ್ತಿಲ್ಲ. ನಾನು ಸುಶಾಂತ್ ಸಿಂಗ್ ಅಭಿನಯಿಸಿದ್ದ ‘ಚಿಚೋರ್’ ಸಿನಿಮಾ ನೋಡಿ ತುಂಬಾ ಆನಂದಿಸಿದ್ದೆ. ಆಗ ನನ್ನ ಸ್ನೇಹಿತ, ‘ಚಿಚೋರ್’ ಸಿನಿಮಾ ನಿರ್ಮಾಪಕ ಸಾಜಿದ್‍ಗೆ ನಾನು ಸಿನಿಮಾ ನೋಡಿ ಎಷ್ಟು ಸಂತಸಪಟ್ಟೆ ಎಂದು ಹೇಳಿದ್ದೆ. ಅಲ್ಲದೇ ಆ ಸಿನಿಮಾದಲ್ಲಿ ನಾನು ಒಂದು ಭಾಗವಾಗಿ ಅಭಿನಯಿಸಬೇಕಿತ್ತು ಎಂದು ಹೇಳಿದ್ದೆ. ಸುಶಾಂತ್ ಪ್ರತಿಭಾವಂತ ನಟ. ದೇವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ದುಃಖದಿಂದ ಬರೆದುಕೊಂಡಿದ್ದಾರೆ.

    “ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನಿಜಕ್ಕೂ ದುಃಖಕರವಾಗಿದೆ. ಎಂತಹ ದುರಂತ, ಅವನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸುಶಾಂತ್ ಕುಟುಂಬದವರಿಗೆ ನಟ ಅಜಯ್ ದೇವಗನ್ ಸಂತಾಪ ಸೂಚಿಸಿದರು.

    “ನಿಜಕ್ಕೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಟಿ ಬಿಪಾಶಾ ಬಸು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.