Tag: suryavamsha film

  • Bigg Boss 18: ದೊಡ್ಮನೆಗೆ ಬರಲಿದ್ದಾರೆ ‘ಸೂರ್ಯವಂಶ’ ನಟಿ

    Bigg Boss 18: ದೊಡ್ಮನೆಗೆ ಬರಲಿದ್ದಾರೆ ‘ಸೂರ್ಯವಂಶ’ ನಟಿ

    ನ್ನಡದ ‘ಸೂರ್ಯವಂಶ'(Suryavamsha), ‘ಓ ನನ್ನ ನಲ್ಲೆ’ ಖ್ಯಾತಿಯ ನಟಿ ಇಶಾ ಕೊಪ್ಪಿಕರ್ (Isha Koppikar) ಅವರು ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಶೋಗೆ ಎಂಟ್ರಿ ಕೊಡಲಿದ್ದಾರೆ ಎಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

    ಸಲ್ಮಾನ್‌ ಖಾನ್‌ ನಿರೂಪಣೆಯ (Salman Khan) ‘ಬಿಗ್ ಬಾಸ್ ಹಿಂದಿ ಸೀಸನ್ 18’ಕ್ಕೆ (Bigg Boss Hindi 18) ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ. ಸ್ಪರ್ಧಿಗಳ ಲಿಸ್ಟ್ ಕೂಡ ರೆಡಿಯಾಗ್ತಿದೆ. ಅದರಲ್ಲಿ ಈ ಬಾರಿಯ ಬಿಗ್ ಬಾಸ್‌ ಶೋಗೆ ಮೊದಲ ಸ್ಪರ್ಧಿಯಾಗಿ ಇಶಾ ಕೊಪ್ಪಿಕರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ವಾಹಿನಿ ಆಗಲಿ, ಸ್ಪರ್ಧಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.

    ಅಂದಹಾಗೆ, ಇತ್ತೀಚೆಗೆ ತಮಗಾದ ಕ್ಯಾಸ್ಟಿಂಗ್ ಕೌಚ್ ಅನುಭವ ಬಗ್ಗೆ ಕರಾಳ ಸತ್ಯ ಹೇಳುವ ಮೂಲಕ ನಟಿ ಭಾರೀ ಸುದ್ದಿಯಾಗಿದ್ದರು. ನನಗೆ ಆಗ 18 ವರ್ಷ. ಓರ್ವ ಸೆಕ್ರೆಟರಿ ನನಗೆ ಕರೆ ಮಾಡಿದರು. ಹೀರೋಗೆ ನೀವು ಒಂಟಿಯಾಗಿ ಸಿಗಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದ್ದರು. ಹೀರೋ ಜೊತೆ ನೀವು ಫ್ರೆಂಡ್ಲಿ ಆಗಿರಬೇಕು ಎಂದು ಸೂಚಿಸಿದರು. ನಾನು ಎಲ್ಲರ ಜೊತೆ ಫ್ರೆಂಡ್ಲಿ ಆಗಿದ್ದೇನೆ. ಆದರೆ ನೀವು ಹೇಳುವ ಫ್ರೆಂಡ್ಲಿ ಎಂದರೆ ಏನು ನನಗೆ ಅರ್ಥವಾಗಿಲ್ಲ ಎಂದು ಫೋನ್ ಇಟ್ಟಿದ್ದೆ.

    23ನೇ ವಯಸ್ಸಿನಲ್ಲೂ ಹಾಗೆಯೇ ಆಗಿತ್ತು. ಒಂಟಿಯಾಗಿ ಸಿಗುವಂತೆ ಹಿಂದಿ ಸ್ಟಾರ್ ನಟನೊಬ್ಬ ಕೇಳಿದ್ದ. ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಬರುವಂತೆ ಆತ ಹೇಳಿದ್ದ. ಆತನ ಹೆಸರು ಈಗಾಗಲೇ ಹಲವು ನಾಯಕಿಯರ ಜೊತೆ ತಳುಕು ಹಾಕಿಕೊಂಡಿತ್ತು. ಈ ರೀತಿ ಬೇಡಿಕೆ ಇಟ್ಟಿದ್ದು, ಬಾಲಿವುಡ್‌ನ ಸ್ಟಾರ್ ನಟ ಎಂದು ಇಶಾ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಆದರೆ ಆ ನಟನ ಹೆಸರನ್ನು ಮಾತ್ರ ರಿವೀಲ್ ಮಾಡಿರಲಿಲ್ಲ.

  • ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ‘ಸೂರ್ಯವಂಶ’ ನಟಿ

    ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ‘ಸೂರ್ಯವಂಶ’ ನಟಿ

    ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತಲೇ ಇರುತ್ತದೆ. ಇತ್ತೀಚೆಗೆ ‘ಸ್ನೇಹನಾ ಪ್ರೀತಿನಾ’ ನಟಿ ಲಕ್ಷ್ಮಿ ರೈ ಈ ಕುರಿತು ಮಾತನಾಡಿದ್ದರು. ಈ ಬೆನ್ನಲ್ಲೇ ‘ಸೂರ್ಯವಂಶ’ (Suryavamsha Film) ನಟಿ ಇಶಾ ಕೊಪ್ಪಿಕರ್ (Isha Koppikar) ಕೂಡ ಕಾಸ್ಟಿಂಗ್ ಬಗ್ಗೆ ಕರಾಳ ಸತ್ಯವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಒಳ ಉಡುಪು ಧರಿಸದೇ ಹಾಟ್ ಪೋಸ್ ಕೊಟ್ಟ ಪಾಯಲ್ ರಜಪೂತ್

    ನನಗೆ ಆಗ 18 ವರ್ಷ. ಓರ್ವ ಸೆಕ್ರೆಟರಿ ನನಗೆ ಕರೆ ಮಾಡಿದರು. ಹೀರೋಗೆ ನೀವು ಒಂಟಿಯಾಗಿ ಸಿಗಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದ್ದರು. ಹೀರೋ ಜೊತೆ ನೀವು ಫ್ರೆಂಡ್ಲಿ ಆಗಿರಬೇಕು ಎಂದು ಸೂಚಿಸಿದರು. ನಾನು ಎಲ್ಲರ ಜೊತೆ ಫ್ರೆಂಡ್ಲಿ ಆಗಿದ್ದೇನೆ. ಆದರೆ ನೀವು ಹೇಳುವ ಫ್ರೆಂಡ್ಲಿ ಎಂದರೆ ಏನು ಅರ್ಥವಾಗಿಲ್ಲ ಎಂದು ಫೋನ್ ಇಟ್ಟಿದ್ದೆ.

    23ನೇ ವಯಸ್ಸಿನಲ್ಲೂ ಹಾಗೆಯೇ ಆಗಿತ್ತು. ಒಂಟಿಯಾಗಿ ಸಿಗುವಂತೆ ಹಿಂದಿ ಸ್ಟಾರ್ ನಟನೊಬ್ಬ (Bollywood Actor) ಕೇಳಿದ್ದ. ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಬರುವಂತೆ ಆತ ಹೇಳಿದ್ದ. ಆತನ ಹೆಸರು ಈಗಾಗಲೇ ಹಲವು ನಾಯಕಿಯರ ಜೊತೆ ತಳುಕು ಹಾಕಿಕೊಂಡಿತ್ತು. ಈ ರೀತಿ ಬೇಡಿಕೆ ಇಟ್ಟಿದ್ದು ಹಿಂದಿ ಚಿತ್ರರಂಗದ ಸ್ಟಾರ್ ನಟ ಎಂದಿದ್ದಾರೆ. ಆದರೆ ಆ ನಟ ಯಾರು ಎಂದು ರಿವೀಲ್ ಮಾಡಿಲ್ಲ ‘ಸೂರ್ಯವಂಶ’ ಸಿನಿಮಾದ ನಟಿ.

    ಅಂದಹಾಗೆ, ತೆಲುಗಿನ ‘ಚಂದ್ರಲೇಖಾ’ ಸಿನಿಮಾದಲ್ಲಿ ನಾಗಾರ್ಜುನಗೆ (Nagarjuna) ನಾಯಕಿಯಾಗಿ ಇಶಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡದ ನಟ ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’, ರವಿಚಂದ್ರನ್ ಜೊತೆ ‘ಓ ನನ್ನ ನಲ್ಲೆ’, ‘ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳಲ್ಲಿ ನಟಿಸಿದ್ದಾರೆ.