Tag: Surupura

  • ದನ ಮೇಯಿಸಲು ಹೋಗಿ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕರು – ಓರ್ವನ ಶವ ಪತ್ತೆ

    ದನ ಮೇಯಿಸಲು ಹೋಗಿ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕರು – ಓರ್ವನ ಶವ ಪತ್ತೆ

    ಯಾದಗಿರಿ: ದನ ಮೇಯಿಸಲು ಹೋಗಿ ಇಬ್ಬರು ಬಾಲಕರು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ (Surapura) ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆದಿದೆ.

    ಓರ್ವನ ಶವ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತ ಬಾಲಕನನ್ನು ಶಂಕರ ಮೇಟಿ (10) ಎಂದು ಗುರುತಿಸಲಾಗಿದ್ದು, ಶ್ರೀಯಣ್ಣ ಚಂದ್ರಕಾಂತ್‌ಗಾಗಿ (8) ಹುಡುಕಾಟ ನಡೆದಿದೆ.ಇದನ್ನೂ ಓದಿ: ಕೌಟುಂಬಿಕ ಜಗಳ- ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆಗೈದ ಮೈದುನ

    ಭಾನುವಾರ ಸ್ಕೂಲ್‌ಗೆ ರಜೆಯಿದ್ದ ಹಿನ್ನೆಲೆ ಇಬ್ಬರು ಬಾಲಕರು ದನ ಮೇಯಿಸಲು ತೆರಳಿದ್ದರು. ಆ ವೇಳೆ ಕಾಲು ಜಾರಿ ಹಿರೇಹಳ್ಳಕ್ಕೆ ಬಿದ್ದಿದ್ದಾರೆ. ನಿನ್ನೆ (ನ.18) ತಡರಾತ್ರಿಯಿಂದ ಸ್ಥಳದಲ್ಲಿ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಬಿಡುಬಿಟ್ಟಿದೆ. ಸದ್ಯ ಶಂಕರನ ಶವ ಪತ್ತೆಯಾಗಿದ್ದು, ಶ್ರೀಯಣ್ಣಗಾಗಿ ಶೋಧ ಕಾರ್ಯ ಮುಂದುವರೆದಿದೆ.

    ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಬಿಜೆಪಿಯಿಂದ 50 ಕೋಟಿ ಅಲ್ಲ 100 ಕೋಟಿ ರೂ. ಆಫರ್ : ಗಣಿಗ ರವಿ

  • ಯಾದಗಿರಿ | ವಿಷಕಾರಿ ನೀರು ಸೇವಿಸುತ್ತಿರುವ ತಾಂಡಾ ಗ್ರಾಮಸ್ಥರು – ಇಲ್ಲಿನ ಜನಕ್ಕಿಲ್ಲ ಶುದ್ಧ ಕುಡಿಯುವ ನೀರು

    ಯಾದಗಿರಿ | ವಿಷಕಾರಿ ನೀರು ಸೇವಿಸುತ್ತಿರುವ ತಾಂಡಾ ಗ್ರಾಮಸ್ಥರು – ಇಲ್ಲಿನ ಜನಕ್ಕಿಲ್ಲ ಶುದ್ಧ ಕುಡಿಯುವ ನೀರು

    – ಗ್ರಾಮಸ್ಥರು ಒತ್ತಾಯಿಸಿದರೂ ಸರ್ಕಾರದ ನಿರ್ಲಕ್ಷ್ಯ

    ಯಾದಗಿರಿ: ಇಲ್ಲಿಯ ಜನರು ಜೀವಕ್ಕೆ ಕಂಟಕವಾಗುವ ವಿಷಕಾರಿ ನೀರು ಸೇವಿಸುತ್ತಿದ್ದಾರೆ. ಜನರಿಗೆ ಶುದ್ಧ ನೀರನ್ನು ಪೂರೈಕೆ ಮಾಡಬೇಕಿರುವ ಸರ್ಕಾರವೇ ಯೋಗ್ಯವಲ್ಲದ ಅಪಾಯಕಾರಿ ನೀರು ಪೂರೈಕೆ ಮಾಡುತ್ತಿದೆ. ಕೇವಲ ಕಲುಷಿತ ನೀರಲ್ಲ ಆರ್ಸೆನಿಕ್ (Arsenic) ಹಾಗೂ ಫ್ಲೋರೈಡ್‌ (Fluoride) ಮಿಶ್ರಿತ ನೀರನ್ನು ಸೇವಿಸುತ್ತಿದ್ದಾರೆ. ಈ ದೃಶ್ಯ ಕಂಡು ಬಂದಿರುವುದು ಜಿಲ್ಲೆಯ ಸುರುಪುರ (Surupura) ತಾಲೂಕಿನ ಕೀರದಳ್ಳಿ ತಾಂಡಾ ಗ್ರಾಮದಲ್ಲಿ.

    ಕಳೆದ ಮೂರು ತಿಂಗಳಿನಿಂದ ವಿಷಕಾರಿ ನೀರನ್ನು ಸೇವಿಸುತ್ತಿದ್ದು, 12 ವರ್ಷಗಳ ಹಿಂದೆ ಆರ್ಸೆನಿಕ್ ಮುಕ್ತ ಮಾಡಲು ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಕೆ ಮಾಡಿತ್ತು. ಆದರೆ, ಶುದ್ಧ ಕುಡಿಯುವ ನೀರಿನ ಘಟಕ ಈಗ ಬಂದ್ ಆಗಿದೆ. ಜನರ ಆರೋಗ್ಯ ಕಾಪಾಡಬೇಕಾದ ನೀರು ಇದೀಗ ತಾಂಡಾದ ಜನರು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿದೆ. ಇದರಿಂದಾಗಿ ತಾಂಡಾದ ಜನರು ಬೋರ್‌ವೆಲ್‌ನೀರು ಸೇವಿಸುವಂತಾಗಿದೆ.ಇದನ್ನೂ ಓದಿ: ಪೇಜರ್‌ ಸ್ಫೋಟ ಬೆನ್ನಲ್ಲೇ ಚೀನಿ ಸಿಸಿಟಿವಿ ಬಳಕೆ ನಿಯಂತ್ರಿಸಲು ಮುಂದಾದ ಕೇಂದ್ರ

    ತಾಲೂಕಿನ 19 ಗ್ರಾಮಗಳು ಆರ್ಸೆನಿಕ್ ಪೀಡಿತ ಗ್ರಾಮಗಳಾಗಿವೆ. ಇದನ್ನು ನಿವಾರಿಸಲು ಈ ಹಿಂದಿನ ಸರ್ಕಾರ ಅರ್ಸೆನಿಕ್ ಅಂಶವಿರುವ ನೀರು ಪೂರೈಕೆ ಮಾಡುವುದನ್ನು ಸ್ಥಗಿತ ಮಾಡಿತ್ತು. 12 ವರ್ಷಗಳ ಹಿಂದೆ ಜನರ ಆರೋಗ್ಯ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಿತ್ತು. ಇದರಿಂದ ಜನರ ಆರೋಗ್ಯ ಕಾಪಾಡಲು ಅನುಕೂಲವಾಗಿತ್ತು. ಆದರೆ, ಈಗ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಬಂದ್ ಆಗಿದೆ.

    ಗ್ರಾಮಕ್ಕೆ ಈಗ ಬೋರ್‌ವೆಲ್‌ನಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿಯಲು ಯೋಗ್ಯವಿಲ್ಲವಂತೆ. ಅನಿವಾರ್ಯವಾಗಿ ತಾಂಡಾದ ಜನರು ವಿಷಕಾರಿ ನೀರು ಸೇವಿಸುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಎದುರಿಸುವಂತಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಗ್ರಾಮದ ಜನರು ಒತ್ತಾಯಿಸಿದ್ದಾರೆ. ಆದರೆ ಜನರಿಗೆ ಶುದ್ಧ ನೀರು ಪೂರೈಕೆ ಮಾಡಬೇಕಾದ ಪಂಚಾಯಿತಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

    ರಾಜ್ಯ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ, ಈ ತಾಂಡಾದಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಿ ಕೈತೊಳೆದುಕೊಂಡಿದೆ. ಈಗಲಾದರೂ, ಸರ್ಕಾರ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿ ಜನರಿಗೆ ಶುದ್ಧ ಜೀವಜಲ ಪೂರೈಕೆ ಮಾಡಬೇಕಿದೆ.ಇದನ್ನೂ ಓದಿ: ಕೋಲಾರ ಕಾಂಗ್ರೆಸ್ ಸಭೆಯಲ್ಲಿ ಗದ್ದಲ, ಮಾರಾಮಾರಿ- ಪರಸ್ಪರ ಕೈ ಮಿಲಾಯಿಸಿದ ಮುಖಂಡರು

  • ತಾಯಿಗಾಗಿ ದೇವಸ್ಥಾನ ನಿರ್ಮಿಸಿದ ಶಾಸಕ ರಾಜೂಗೌಡ

    ತಾಯಿಗಾಗಿ ದೇವಸ್ಥಾನ ನಿರ್ಮಿಸಿದ ಶಾಸಕ ರಾಜೂಗೌಡ

    ಯಾದಗಿರಿ: ತಾಯಿ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ ಯಾರು ಕೂಡ ಸರಿಸಮಾನರಲ್ಲ. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಯ ಮುಂದೆ ಅವರು ಮಕ್ಕಳೇ. ರಾಜಕೀಯದವರು ಕುಟುಂಬಕ್ಕೆ ಸಮಯ ಕೊಡುವುದಿಲ್ಲ ಎಂಬ ಮಾತಿದೆ. ಅಲ್ಲದೇ ಎಷ್ಟೋ ರಾಜಕಾರಣಿಗಳು ಅವರ ತಂದೆ-ತಾಯಿಯರನ್ನು ವಯಸ್ಸಾದ ಬಳಿಕ ಕೈಬಿಟ್ಟ ಪ್ರಕರಣ ನಮ್ಮ ಕಣ್ಣ ಮುಂದಿವೆ. ಇವುಗಳ  ಮಧ್ಯೆ ಯಾದಗಿರಿ ಸುರಪುರದ ಶಾಸಕ ರಾಜೂಗೌಡ ಮಾತ್ರ ವಿಭಿನ್ನವಾಗಿದ್ದಾರೆ. ಅವರ ತಾಯಿ ಬದುಕಿದ್ದಾಗ ಎಷ್ಟು ಪ್ರೀತಿ ಮಾಡಿದ್ದಾರೋ ಅವರು ಮೃತರಾದ ಮೇಲೂ ಅದಕ್ಕಿಂತ ಜಾಸ್ತಿ ಪ್ರೀತಿ ಮಾಡುತ್ತಿದ್ದಾರೆ. ಅವರ ತಾಯಿ ಜೊತೆಗೆ ಇರದಿದ್ದರೂ ಅವರ ನೆರಳಿನಲ್ಲಿ ಜೀವನ ಕಳೆಯುತ್ತಿದ್ದಾರೆ.

    ರಾಜೂಗೌಡರು ತಮ್ಮ ತಾಯಿ ತಿಮ್ಮಮ್ಮನವರ ನೆನಪಿಗಾಗಿ ಸ್ವಗ್ರಾಮ ಕೊಡೆಕಲ್ ಜಮೀನಿನಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಇಷ್ಟೇ ಅಲ್ಲದೇ ಅವರ ತಾಯಿ ಬಹಳಷ್ಟು ಪ್ರೀತಿಯಿಂದ ಸಾಕಿದ್ದ ಗೋವುಗಳಿಗಾಗಿ ಗೋಶಾಲೆ, ಕುರಿ ಸಾಗಾಣಿಕೆ ಜೊತೆಗೆ ನೈಸರ್ಗಿಕ ಕೃಷಿಗೆ ಸಹ ಮುಂದಾಗಿದ್ದಾರೆ. ಅವರ ತಾಯಿ ನಡೆದಾಡುವ ಸ್ಥಳ ಇಂದು ಶಾಂತಿಧಾಮವಾಗಿದೆ. ಅಷ್ಟೇ ಅಲ್ಲದೇ ಅವರ ತಾಯಿ ಸಮಾಧಿ ಬಳಿಯೇ ಮನೆ ನಿರ್ಮಾಣ ಮಾಡಿಕೊಂಡಿರುವ ರಾಜೂಗೌಡರು ಸದ್ಯ ಅಲ್ಲಿಯೇ ವಾಸವಾಗಿದ್ದಾರೆ.

    ರಾಜೂಗೌಡರು ಶಾಸಕರಾಗಲು ಅವರ ತಾಯಿ ತಿಮ್ಮಮ್ಮ ಮತ್ತು ಅವರ ತಂದೆ ಶಂಭುನಗೌಡರ ಶ್ರಮ ಬಹಳಷ್ಟಿದೆ. ರಾಜೂಗೌಡರು ಸುರಪುರಕ್ಕೆ ಮಾತ್ರ ಶಾಸಕರು. ಆದ್ರೆ ಸುರಪುರ ಕ್ಷೇತ್ರದ ಜನತೆಗೆ ತಿಮ್ಮಮ್ಮನವರೇ ಶಾಸಕಿ. ಕ್ಷೇತ್ರದ ಬಡವರ ಕಷ್ಟಕ್ಕೆ ತಿಮ್ಮಮ್ಮನವರು ಆಸರೆಯಾಗಿದ್ದರು. ಕಷ್ಟ ಹೇಳಿಕೊಂಡು ಮನೆಗೆ ಯಾರೇ ಬಂದರೂ ಅವರೇ ತಮ್ಮ ಕೈಯಾರೇ ಊಟ ಬಡಿಸಿ ಅವರ ಕಷ್ಟ ಆಲಿಸಿ ಅವರಿಗೆ ಸಹಾಯ ಮಾಡುತ್ತಿದ್ದರು. ಅಲ್ಲದೆ ಶಾಸಕ ರಾಜೂಗೌಡ ಮತ್ತು ಅವರ ಸಹೋದರ ಬಬ್ಲುಗೌಡ ದೊಡ್ಡವರಾಗಿ ಬೆಳೆದಿದ್ದರೂ ಪ್ರತಿ ದಿನ ಅವರ ತಾಯಿಯ ಕೈ ತುತ್ತು ತಿನ್ನುತ್ತಿದ್ದರು.

    ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೂಗೌಡರ ತಾಯಿ ಕಳೆದ ವರ್ಷ ನಿಧನರಾಗಿದ್ದಾರೆ. ತಾಯಿ ಅಗಲಿಕೆ ರಾಜೂಗೌಡರಿಗೆ ಅತೀವ ನೋವು ನೀಡಿತು. ಅಲ್ಲದೆ ತಾಯಿ ಮಡಿಲು ಅವರಿಗೆ ಬೇಕೆನ್ನಿಸಿತು. ಹೀಗಾಗಿ ರಾಜಸ್ಥಾನದಿಂದ ವಿಶೇಷ ಕಲ್ಲುಗಳನ್ನು ತಂದು ಆಂಧ್ರದ ಶಿಲ್ಪಿಗಳಿಂದ ತಾಯಿಯ ಮೂರ್ತಿಯನ್ನು ತಯಾರಿಸಿ ದೇವಸ್ಥಾನ ನಿರ್ಮಿಸಿದ್ದಾರೆ.

     

    ರಾಜೂಗೌಡರು ಅವರ ತಾಯಿ ಮೂರ್ತಿಯನ್ನು ಅವರೇ ಸ್ವಚ್ಛಗೊಳಿಸಿ ಪೂಜೆ ಮಾಡಿ ನಮಸ್ಕರಿಸಿ ಬಳಿಕವೇ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾರೆ. ಅವರ ಸಮಾಧಿ ಸ್ಥಳಕ್ಕೆ ಬಹಳಷ್ಟು ಆಭಾರಿಯಾಗಿರುವ ರಾಜೂಗೌಡ ಎಲ್ಲಿಯೇ ಇದ್ದರೂ ರಾತ್ರಿ ಎಷ್ಟೋ ಹೊತ್ತು ಆದರೂ ವಾಪಸ್ ಇಲ್ಲಿಗೆ ಬಂದು ಬಿಡುತ್ತಾರೆ. ಅಲ್ಲದೇ ತಮ್ಮ ತಾಯಿಯ ಮುಖಚಿತ್ರವನ್ನು ಕೈಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಪ್ಪನ ಈ ಪ್ರೀತಿ ರಾಜೂಗೌಡರ ಮಗ ಮಣಿಕಠಗೌಡ ಮಾರುಹೋಗಿದ್ದಾರೆ. ಅವರ ಅಜ್ಜಿಯ ನೆನಪುಗಳಿರುವ ಈ ಜಮೀನಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ.

    ತಂದೆ-ತಾಯಿ ದುಡ್ಡಿನಲ್ಲಿ ಶೋಕಿ ಮಾಡಿ, ಮುಪ್ಪಿನ ಕಾಲದಲ್ಲಿ ಮನೆಯಿಂದ ಹೊರಗೆ ಹಾಕಿ, ಇಳಿ ವಯಸ್ಸಿನ ಜೀವನವನ್ನು ನರಕ ಮಾಡುವ ಮಕ್ಕಳ ಮಧ್ಯೆ ಶಾಸಕರಾಗಿದ್ದರೂ ಮೃತರಾದ ತಾಯಿಗೆ ಪ್ರೀತಿ ತೋರಿಸುತ್ತಿರುವ ರಾಜೂಗೌಡ ಮತ್ತು ಅವರ ಸಹೋದರರ ಈ ತಾಯಿ ಪ್ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.