Tag: Suriya 46

  • ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    ಮಿಳು ನಟ ಸೂರ್ಯ (Suriya) ನಟನೆಯ 46ನೇ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Devarakonda) ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ರಾಧಿಕಾ ಪಂಡಿತ್‌ಗೆ ಸಿನಿಮಾ – ಯಶ್ ತಾಯಿ ಹೇಳೋದೇನು?

    ಇತ್ತೀಚೆಗೆ ಸೂರ್ಯ ನಟನೆಯ 46ನೇ ಚಿತ್ರಕ್ಕೆ (Suriya 46) ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ‘ಪ್ರೇಮಲು’ ನಟಿ ಮಮಿತಾ ಬೈಜು ನಟಿಸಲಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಹೀಗೊಂದು ಸುದ್ದಿಯೊಂದು ಟಾಲಿವುಡ್ ಗಲ್ಲಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

    ಚಿತ್ರದಲ್ಲಿ ತಿರುವು ಕೊಡುವ ಪಾತ್ರದಲ್ಲಿ ವಿಜಯ್ ನಟಿಸಲಿದ್ದಾರೆ ಎನ್ನಲಾಗಿದೆ. ನಟನೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಆದರೆ ವಿಜಯ್ ದೇವರಕೊಂಡ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಾ ಎಂಬುದನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.

    ವಿಜಯ್ ಸದ್ಯ `ಕಿಂಗ್‌ಡಮ್’ ಚಿತ್ರದ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಭಾಗ್ಯಶ್ರೀ ಜೊತೆ ನಟ ರೊಮ್ಯಾನ್ಸ್ ಮಾಡಿದ್ದಾರೆ. ಈ ಚಿತ್ರ ಜುಲೈ 4ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

  • ‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ

    ‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ

    ‘ರೆಟ್ರೋ’ ಸಿನಿಮಾ ಬಳಿಕ ಸೂರ್ಯ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು (ಮೇ 19) ಹೈದರಾಬಾದ್‌ನಲ್ಲಿ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಸೂರ್ಯ (Suriya) ನಟನೆಯ ಈ ಸಿನಿಮಾಗೆ ‘ಪ್ರೇಮಲು’ (Premalu) ನಟಿ ಮಮಿತಾ ಬೈಜು (Mamitha Baiju) ಜೋಡಿಯಾಗಿದ್ದಾರೆ. ಇದನ್ನೂ ಓದಿ:ದರ್ಶನ್ ದಾಂಪತ್ಯಕ್ಕೆ 22 ವರ್ಷ- ಹೊಸ ಪೋಸ್ಟ್ ಹಂಚಿಕೊಂಡ ವಿಜಯಲಕ್ಷ್ಮಿ

    ‘ಲಕ್ಕಿ ಭಾಸ್ಕರ್’ ನಿರ್ದೇಶಕ ವೆಂಕಿ ಅವರು ‘ಸೂರ್ಯ 46’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯಗೆ ನಾಯಕಿಯಾಗಿ ಮಮಿತಾ ಬೈಜು ನಟಿಸಲಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಿದೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಸೂರ್ಯ ಸಿನಿಮಾಗೆ ಕ್ಲ್ಯಾಪ್ ಮಾಡಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ

    ಸಿತಾರಾ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಲಿದ್ದು, ‘ಕೆಜಿಎಫ್ 2’ ನಟಿ ರವೀನಾ ಟಂಡನ್, ರಾಧಿಕಾ ಶರತ್ ಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

    ಕಂಗುವ, ರೆಟ್ರೋ ಸಿನಿಮಾಗಳಿಗೆ ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲ. ಹೀಗಾಗಿ ಯುವ ನಟಿ ಮಮಿತಾ ಮತ್ತು ಲಕ್ಕಿ ಭಾಸ್ಕರ್ ಮೂಲಕ ಯಶಸ್ಸು ಕಂಡಿರುವ ನಿರ್ದೇಶಕ ವೆಂಕಿ ಜೊತೆ ಸೂರ್ಯ ಕೈಜೋಡಿಸಿದ್ದಾರೆ.