Tag: Surinder Choudhary

  • Articles 370 Row | ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನ ಮಾರಾಮಾರಿ

    Articles 370 Row | ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನ ಮಾರಾಮಾರಿ

    ಶ್ರೀನಗರ: ಸಂವಿಧಾನದ ಆರ್ಟಿಕಲ್‌ 370 (Articles 370) ಮರುಸ್ಥಾಪನೆ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ (Jammu Kashmir Assembly) ಆಡಳಿತಾರೂಢ ನ್ಯಾಷನಲ್‌ ಕಾನ್ಪರೆನ್ಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ 3ನೇ ದಿನವೂ ಗದ್ದಲ ಮುಂದುವರಿದಿದೆ.

    ಮೂರನೇ ದಿನವಾದ ಶುಕ್ರವಾರವೂ ಗದ್ದಲ ಮುಂದುವರಿದಿದ್ದು, ಬಿಜೆಪಿ ಶಾಸಕರು (BJP MLAs) ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನೆ ಆರಂಭಿಸಿದರು. ಇದನ್ನೂ ಓದಿ: 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶನ- ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ತಾರಕಕ್ಕೇರಿದ ಗದ್ದಲ

    ಕಣಿವೆಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಪುನರ್‌ ಸ್ಥಾಪಿಸುವಂತೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರಗೊಂಡಿದ್ದ ನಿರ್ಣಯ ಹಿಂದಕ್ಕೆ ಪಡೆಯಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರನ್ನು ಸದನದದಿಂದ ಹೊರ ಹಾಕುವಂತೆ ಸ್ಪೀಕರ್‌ ಅಬ್ದುಲ್‌ ರಹೀಂ ರಾಥರ್‌ ಆದೇಶ ನೀಡುತ್ತಿದ್ದತೆ ವಿಧಾನಸಭೆ ರಣರಂಗವಾಯಿತು. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಸದನದಿಂದ ಹೊರಹಾಕಲು ಯತ್ನಿಸಿದ ಮಾರ್ಷಲ್‌ಗಳ ಜೊತೆ ಶಾಸಕರು ಸಂಘರ್ಷಕ್ಕಿಳಿದರು. ಈ ವೇಳೆ ತಳ್ಳಾಟ, ನೂಕಾಟವೂ ಉಂಟಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದ ಹಿನ್ನೆಲೆಯಲ್ಲಿ ಸ್ಪೀಕರ್‌ ಕಲಾಪವನ್ನು ಮುಂದೂಡಿದರು.

    ಇದಕ್ಕೂ ಮುನ್ನ ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ 370ನೇ ವಿಧಿ ಕುರಿತು ಚರ್ಚೆ ಆರಂಭವಾಯಿತು. ನಿರ್ಣಯದ ಮೇಲೆ ಬಿಜೆಪಿ ಶಾಸಕ ಹಾಗೂ ಪ್ರತಿಪಕ್ಷ ನಾಯಕ ಸುನಿಲ್‌ ಶರ್ಮಾ ಮಾತನಾಡುತ್ತಿದ್ದ ವೇಳೆ ಅವಾಮಿ ಇತ್ತೆಹಾದ್‌ ಪಕ್ಷದ ಶಾಸಕ ಲಂಗೈಟ್‌ ಶೇಖ್‌ ಖುರ್ಷೀದ್‌, ಸಂವಿಧಾನದ 370ನೇ ವಿಧಿ ಹಾಗೂ 35ಎ ಕಲಂ ಮರು ಸ್ಥಾಪಿಸುವಂತೆ ಆಗ್ರಹಿಸಿ ಬ್ಯಾನರ್‌ ಪ್ರದರ್ಶಿಸಿದರು.

    ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದರಲ್ಲದೆ, ಶಾಸಕ ಪ್ರದರ್ಶಿಸಿದ ಬ್ಯಾನರ್‌ ಕಸಿಯಲು ಮುಂದಾದರು. ಈ ವೇಳೆ ಕೋಲಾಹಲ ಉಂಟಾಯಿತು. ಪರಿಸ್ಥಿತಿ ನಿಭಾಯಿಸಲು ಕಲಾಪವನ್ನು ಸ್ಪೀಕರ್‌ 15 ನಿಮಿಷ ಮುಂದೂಡಿದರು. ಕಲಾಪ ಪುನಾರಂಭಗೊಂಡ ಬಳಿಕ ತಮ್ಮ ಸ್ಥಾನಗಳಿಗೆ ತೆರಳುವಂತೆ ಸದಸ್ಯರಿಗೆ ಸ್ಪೀಕರ್‌ ಸೂಚನೆ ನೀಡಿದರು. ಸಭಾಧ್ಯಕ್ಷರ ಮಾತು ಆಲಿಸದ ಬಿಜೆಪಿ ಸದಸ್ಯರು ಹೋರಾಟ ಮುಂದುವರಿಸಿದರು. ʻನೀವು ಸದನದ ನಿಯಮಗಳನ್ನು ಮೀರುತ್ತಿದ್ದೀರಿ, ಕೆಲ ಸದಸ್ಯರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಹೀಗೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆʼ ಎಂದು ಎಚ್ಚರಿಸಿದ ಸ್ಪೀಕರ್‌ ಅಬ್ದುಲ್‌ ರಹೀಂ ರಾಥರ್, ಶುಕ್ರವಾರಕ್ಕೆ ಕಲಾಪ ಮುಂದೂಡಿದ್ದರು.

  • 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶನ- ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ತಾರಕಕ್ಕೇರಿದ ಗದ್ದಲ

    370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶನ- ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ತಾರಕಕ್ಕೇರಿದ ಗದ್ದಲ

    ಶ್ರೀನಗರ: ಸಂವಿಧಾನದ 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ  (Jammu Kashmir) ವಿಧಾನಸಭೆಯಲ್ಲಿ ಭಾರೀ ಗದ್ದಲ ನಡೆಯಿತು. ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹಮದ್ ಬ್ಯಾನರ್ ಪ್ರದರ್ಶಿಸಿದ್ದರು. ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾನರ್ ಕಿತ್ತುಕೊಳ್ಳಲು ಮುಂದಾದ ಬಿಜೆಪಿ (BJP) ಶಾಸಕರು, ಪಿಡಿಪಿ, ಎನ್‌ಸಿ ಶಾಸಕರ ನಡುವೆ ಹೊಡೆದಾಟ ನಡೆಯಿತು.

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಮರು ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಗೊತ್ತುವಳಿಯನ್ನು ಭಾರಿ ಗದ್ದಲದ ನಡುವೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಅಂಗೀಕರಿಸಿತು. ಇದನ್ನೂ ಓದಿ: ಕೊಲೆ ಆರೋಪಿ ಪವಿತ್ರಾಗೌಡಗೆ ಜೈಲೇ ಗತಿ – ಜಾಮೀನು ಅರ್ಜಿ ವಿಚಾರಣೆ ನ.21ಕ್ಕೆ ಮುಂದೂಡಿಕೆ

    ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಗೊತ್ತುವಳಿ ಮಂಡಿಸಿದ ಉಪಮುಖ್ಯಮಂತ್ರಿ ಸುರಿಂದರ್ ಚೌದರಿ ಅವರು, ವಿಶೇಷ ಸ್ಥಾನಮಾನದ ಮಹತ್ವ ಮತ್ತು ರಾಜ್ಯದ ಜನರ ಹೆಗ್ಗುರುತು, ಸಂಸ್ಕೃತಿ ಹಾಗೂ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಗ್ಯಾರಂಟಿಯನ್ನು ಈ ವಿಧಾನಸಭೆ ದೃಢೀಕರಿಸುತ್ತದೆ. ಇಂತಹ ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಕ್ರಮದ ಕುರಿತು ಕಳವಳ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ರಾಜಿಯಾದ ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್‌ ರದ್ದು ಮಾಡಲು ಸಾಧ್ಯವಿಲ್ಲ: ಸುಪ್ರೀ

    ವಿಪಕ್ಷ ಬಿಜೆಪಿ ಸದಸ್ಯರು ಗೊತ್ತುವಳಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪದ ಪಟ್ಟಿಯಲ್ಲಿ ಇರದ ವಿಷಯವನ್ನು ಮಂಡಿಸಲಾಗಿದೆ. ನಾವು ಇದನ್ನು ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ. ಸಂಸತ್ ಕೈಗೊಂಡ ನಿರ್ಧಾರವನ್ನು ಬದಲಾಯಿಸಲಾಗದು ಎಂದು ತಿಳಿದಿದ್ದರೂ ಪ್ರಚಾರಕ್ಕಾಗಿ ಸುಮ್ಮನೆ ಗದ್ದಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಈ ವೇಳೆ ಗದ್ದಲ ಉಂಟಾಗಿದೆ. ಇದಾದ ನಂತರ ವಿರೋಧ ಪಕ್ಷದ ನಾಯಕ ಸುನೀಲ್ ಶರ್ಮಾ ಬ್ಯಾನರ್ ತೋರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಗದ್ದಲದ ನಂತರ ಮಾರ್ಷಲ್‌ಗಳು ಮಧ್ಯಪ್ರವೇಶಿಸಿ ಶಾಸಕರನ್ನು ಗದ್ದಲದಿಂದ ಪ್ರತ್ಯೇಕಿಸಿದರು. ಇದನ್ನೂ ಓದಿ: ವಕ್ಫ್ ವಿವಾದ; ಹುಬ್ಬಳ್ಳಿಗೆ ವಕ್ಫ್ ಜಂಟಿ ಸಂಸದೀಯ ಮಂಡಳಿ ಅಧ್ಯಕ್ಷ ಭೇಟಿ – ರೈತರಿಂದ ಅಹವಾಲು ಸ್ವೀಕಾರ