Tag: suri

  • ವಿಕ್ಕಿ ವರುಣ್ ಹುಟ್ಟು ಹಬ್ಬಕ್ಕೆ ‘ಕಾಲಪತ್ಥರ್’ ಪೋಸ್ಟರ್ ರಿಲೀಸ್

    ವಿಕ್ಕಿ ವರುಣ್ ಹುಟ್ಟು ಹಬ್ಬಕ್ಕೆ ‘ಕಾಲಪತ್ಥರ್’ ಪೋಸ್ಟರ್ ರಿಲೀಸ್

    ಕೆಂಡಸಂಪಿಗೆ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ವಿಕ್ಕಿ ವರುಣ್ (Vicky Varun), ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹುಟ್ಟು ಹಬ್ಬಕ್ಕಾಗಿ  (Birthday,) ಅವರ ನಟನೆಯ ‘ಕಾಲಪತ್ಥರ್ ‘ ಸಿನಿಮಾದ ಪೋಸ್ಟರ್ (Poster) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅವರು ವಿಭಿನ್ನ ರೀತಿಯ ಪಾತ್ರ ನಿರ್ವಹಿಸುತ್ತಿದ್ದು, ಆ ಪಾತ್ರದ ಪೋಸ್ಟರ್ ಅನ್ನು ವಿಕ್ಕಿ ಹುಟ್ಟು ಹಬ್ಬಕ್ಕೆ ರಿಲೀಸ್ ಮಾಡಿದೆ ಚಿತ್ರತಂಡ.

    ನಿರ್ದೇಶಕ ಸುಕ್ಕಾ ಸೂರಿ ಗರಡಿಯಲ್ಲಿ ಪಳಗಿದ್ದ ವಿಕ್ಕಿ, ಕೆಂಡಸಂಪಿಗೆ ಚಿತ್ರದಲ್ಲಿನ ಇವರ ಮುಗ್ಧ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಮೊದಲ ಚಿತ್ರದ ಗೆಲುವಿನ ನಂತರ ಕಾಲೇಜ್ ಕುಮಾರನಾಗಿ ತೆರೆ ಮೇಲೆ ಎಂಟ್ರಿ ಕೊಟ್ಟ ಇವರು ಎರಡನೇ ಸಿನಿಮಾದಲ್ಲೂ ಸಕ್ಸಸ್ ಕಾಣುವ ಮೂಲಕ ಖ್ಯಾತಿ ಗಳಿಸಿದ್ರು. ಸಿನಿಮಾ ಆಯ್ಕೆ ವಿಚಾರದಲ್ಲಿ ಸಖತ್ ಚ್ಯೂಸಿಯಾಗಿರುವ ವಿಕ್ಕಿ ವರುಣ್ ಬಹಳ ದಿನಗಳ ನಂತರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

    ಕೆಂಡ ಸಂಪಿಗೆ, ಕಾಲೇಜ್ ಕುಮಾರ ಚಿತ್ರಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಂತರ ವಿಕ್ಕಿ ವರುಣ್ ಒಪ್ಪಿಕೊಂಡಿರುವ ನೂತನ ಚಿತ್ರವೇ ಈ ‘ಕಾಲಾ ಪತ್ಥರ್’ ((Kalapathar)). ಈಗಾಗಲೇ ನಟಿಸಿದ ಎರಡೂ ಸಿನಿಮಾಗಳು ಹಿಟ್ ಆಗಿರೋದ್ರಿಂದ ಸಾಕಷ್ಟು ಎಚ್ಚರಿಕೆ ವಹಿಸಿ ಮೂರನೇ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ ವಿಕ್ಕಿ ವರುಣ್. ‘ಕಾಲಾ ಪತ್ಥರ್’ ಸಿನಿಮಾ ಭಿನ್ನವಾಗಿದ್ದು ಖಂಡಿತಾ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗುತ್ತೆ ಎನ್ನುತ್ತಾರೆ ನಟ ವಿಕ್ಕಿ ವರುಣ್.

    ‘ಕಾಲಾಪತ್ಥರ್’ ಚಿತ್ರಕ್ಕೆ ವಿಕ್ಕಿ ವರುಣ್ ಇವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ (Satya Prakash) ‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸುರೇಶ್ ಮತ್ತು ನಾಗರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ವಿಶ್ರಾಂತಿ ಬಳಿಕ ‘ಬಘೀರ’ ಶೂಟಿಂಗ್ ನಲ್ಲಿ ಭಾಗಿಯಾದ ಶ್ರೀಮುರಳಿ

    ವಿಶ್ರಾಂತಿ ಬಳಿಕ ‘ಬಘೀರ’ ಶೂಟಿಂಗ್ ನಲ್ಲಿ ಭಾಗಿಯಾದ ಶ್ರೀಮುರಳಿ

    ರೋಬ್ಬರಿ ಮೂರು ತಿಂಗಳು ನಂತರ ಮತ್ತೆ ಬಘೀರ (Bagheera) ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ. ಚಿತ್ರೀಕರಣದಲ್ಲಿ ಗಾಯಗೊಂಡಿದ್ದ ನಟ ಶ್ರೀಮುರಳಿಗೆ ವೈದ್ಯರು ಮೂರು ತಿಂಗಳ ಕಾಲ ವಿಶ್ರಾಂತಿ ತಗೆದುಕೊಳ್ಳುವಂತೆ ಸೂಚಿಸಿದ್ದರು. ಇದೀಗ ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣದಲ್ಲಿ (Shooting) ಪಾಲ್ಗೊಂಡಿದ್ದಾರೆ. ಅರ್ಧಕ್ಕೆ ನಿಂತಿದ್ದ ಸಾಹಸ ದೃಶ್ಯದ ಚಿತ್ರೀಕರಣಲ್ಲಿ ಅವರು ಭಾಗಿಯಾಗಿದ್ದಾರೆ.

    ನಿರ್ದೇಶಕ ಸೂರಿ ಸದ್ಯ ಪ್ರಕಾಶ್ ರೈ (Prakash Rai) ಕಾಣಿಸಿಕೊಳ್ಳುವ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದು, ಈ ದೃಶ್ಯಗಳು ಮುಗಿಯುತ್ತಿದ್ದಂತೆಯೇ ಚಿತ್ರತಂಡ ಮೈಸೂರಿಗೆ ಹಾರಲಿದೆಯಂತೆ. ರೇಸ್ ಕೋರ್ಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಮಾಡಿದೆಯಂತೆ ಚಿತ್ರತಂಡ. ಈ ಭಾಗದ ಶೂಟಿಂಗ್ ನಲ್ಲೂ ಶ್ರೀಮುರಳಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ಮೂರು ತಿಂಗಳ ಹಿಂದೆ ರಾಕ್‌ಲೈನ್ ಸ್ಟುಡಿಯೋದಲ್ಲಿ (Rockline Studio) ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ `ಬಘೀರ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ (Actor Srimurali) ಗಾಯಗಳಾಗಿದ್ದವು. ಸೂರಿ ನಿರ್ದೇಶನದ ಈ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿತ್ತು. ಇನ್ನೇರೆಡೆ ದಿನಗಳಲ್ಲಿ ಶೂಟಿಂಗ್‌ಗೆ ಬ್ರೇಕ್ ಬೀಳೋದರಲ್ಲಿತ್ತು. ಈ ವೇಳೆ ಶ್ರೀಮುರಳಿಗೆ ಪೆಟ್ಟಾಗಿತ್ತು.

    `ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು.

  • ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಲಯಾಳಂ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ, ಪ್ರತಿಭಾವಂತ ಕಲಾವಿದ ಫಹಾದ್ ಫಾಸಿಲ್ (Fahad Faasil) ಇದೀಗ ಸಿಬಿಐ ಅಧಿಕಾರಿಯಾಗಿದ್ದಾರೆ. ಕನ್ನಡದ ಬಘೀರ (Bagheera)ಸಿನಿಮಾದಲ್ಲಿ ಅವರು ಇಂಥದ್ದೊಂದು ಪಾತ್ರ ನಿರ್ವಹಿಸಲಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ನಾಯಕನಾಗಿ ನಟಿಸಿರುವ ಈ ಚಿತ್ರವು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿಸಿದೆ.

    ಬಘೀರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಗಾಯ ಮಾಡಿಕೊಂಡಿದ್ದ ಶ್ರೀಮುರಳಿ, ಆನಂತರ ಆಸ್ಪತ್ರೆ ಸೇರಿ ಗಾಯಕ್ಕೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಮರಳಲಿದ್ದು, ಆಗ ಫಹಾದ್ ಫಾಸಿಲ್ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕಾಲಿವುಡ್ ವಿಕ್ರಮ್ ಸಿನಿಮಾ ಗೆಲುವಿನ ನಂತರ ಫಹಾದ್ ಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    ಅಂದಹಾಗೆ ಬಘೀರ್ ಸಿನಿಮಾವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಲಕ್ಕಿ ಚಿತ್ರದ ನಂತರ ಸೂರಿ ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ಫಹಾದ್ ಸಿಬಿಐ ಅಧಿಕಾರಿಯಾಗಿ ಶ್ರೀಮುರಳಿಗೆ ಸಾಥ್ ನೀಡಲಿದ್ದಾರೆ. ಮಂಗಳೂರು ಸೇರಿದಂತೆ ಹಲವು ಕಡೆ ಈಗಾಗಲೇ ಹಲವು ಹಂತದ ಚಿತ್ರೀಕರಣ ನಡೆದಿದೆ. ಫೆಬ್ರವರಿಯಿಂದ ಮುಂದಿನ ಹಂತದ ಚಿತ್ರೀಕರಣ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ರುದ್ರನ ಪಾತ್ರ ನಿರ್ವಹಿಸುತ್ತಿದ್ದಾರೆ ಅಭಿಷೇಕ್

    ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ರುದ್ರನ ಪಾತ್ರ ನಿರ್ವಹಿಸುತ್ತಿದ್ದಾರೆ ಅಭಿಷೇಕ್

    ದೇ ಮೊದಲ ಬಾರಿಗೆ ಸೂರಿ ಮತ್ತು ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ಬ್ಯಾಡ್ ಮ್ಯಾನರ್ಸ್ (Bad Manners) ಸಿನಿಮಾ ಮೂಡಿ ಬರುತ್ತಿದ್ದು, ಈ ಸಿನಿಮಾದಲ್ಲಿ ಅಭಿಷೇಕ್ (Abhishek Ambarish) ವಿಭಿನ್ನ ರೀತಿಯ ಪಾತ್ರವನ್ನು ಮಾಡುತ್ತಿದ್ದಾರೆ. ಅದು ಪೊಲೀಸ್ ಅಧಿಕಾರಿಯ ಪಾತ್ರವಾಗಿದ್ದರೂ, ಮ್ಯಾನರಿಸಂ ಮಾತ್ರ ಹೊಸ ಬಗೆಯಲ್ಲಿ ಇದೆಯಂತೆ. ಅಭಿಷೇಕ್ ನಿರ್ವಹಿಸುವ ಪಾತ್ರಕ್ಕೆ ರುದ್ರ ಎಂದು ಹೆಸರಿಡಲಾಗಿದ್ದು, ಹೆಸರಿಗೆ ತಕ್ಕಂತೆ ರೌದ್ರಾವತಾರವೇ ಪ್ರಧಾನವಾಗಿದೆಯಂತೆ.

    ಒಂದೂವರೆ ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಸೂರಿ (Suri). ಈಗಾಗಲೇ ಸಿನಿಮಾದ ಶೀರ್ಷಿಕೆಯಿಂದಾನೇ ಕುತೂಹಲ ಮೂಡಿಸಿರುವ ಸಿನಿಮಾದ ಟೀಸರ್ (Teaser) ಅನ್ನು ಅಭಿಷೇಕ್ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಮಾಡಿದೆ ಚಿತ್ರತಂಡ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಕೆಲ ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಇದೇ ತಿಂಗಳು 8 ರಿಂದ ಶೂಟಿಂಗ್ ಶುರುವಾಗಲಿದ್ದು, ಸಂಪೂರ್ಣ ಶೂಟಿಂಗ್ ಮುಗಿಯಲಿದೆಯಂತೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ರಿಲೀಸ್ ಆದ ಟೀಸರ್ ನಲ್ಲಿ ಅಭಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆಯನ್ನು ಅದು ಪಡೆದಿದೆ. ಈ ಸಿನಿಮಾದಲ್ಲಿ  ಅಭಿಷೇಕ್ ಜೊತೆ ರಚಿತಾ ರಾಮ್ (Rachita Ram) ಮತ್ತು ಪ್ರಿಯಾಂಕಾ ಕುಮಾರ್ ನಟಿಸಿದ್ದು, ಸುಧೀರ್ ಅವರ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ‘ವಿಡುದಲೈ’ ಸಿನಿಮಾದ ಭರ್ಜರಿ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ನಲ್ಲಿ ವಿಜಯ್ ಸೇತುಪತಿ

    ‘ವಿಡುದಲೈ’ ಸಿನಿಮಾದ ಭರ್ಜರಿ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ನಲ್ಲಿ ವಿಜಯ್ ಸೇತುಪತಿ

    ಕಾಲಿವುಡ್ (Kollywood) ನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ (Vetrimaran) ನಿರ್ದೇಶನದ ‘ವಿಡುದಲೈ’ (Vidudalai) ಚಿತ್ರವು ಎರಡು ಭಾಗಗಳಲ್ಲಿ ನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಈಗ ಈ ಚಿತ್ರಕ್ಕಾಗಿ ಕೊಡೈಕೆನಾಲ್ನಲ್ಲಿ ವಿಜಯ್ ಸೇತುಪತಿ (Vijay Sethupathi), ಸೂರಿ ಮತ್ತು ನೂರಾರು ಫೈಟರ್ಗಳ ಅಭಿನಯದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಆರ್‌ಎಸ್ ಇನ್ಫೋಟೈನ್‌ಮೆಂಟ್ನಡಿ ಎಲ್ಡ್ರೆಡ್ ಕುಮಾರ್ ಅವರು ‘ವಿಡುದಲೈ’ ಚಿತ್ರವನ್ನು ನಿರ್ಮಿಸುತ್ತಿದ್ದು, ರೆಡ್ ಜೈಂಟ್ ಮೂವೀಸ್ನ  ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.

    ಅದ್ಧೂರಿ ನಿರ್ಮಾಣಕ್ಕಾಗಿ ಸಾಕಷ್ಟು ಸುದ್ದಿಯಾಗಿರುವ ಈ ಚಿತ್ರಕ್ಕಾಗಿ ಇತ್ತೀಚೆಗೆ ಪೀಟರ್ ಹೇಯ್ನ್ ಅವರ ನೇತೃತ್ವದಲ್ಲಿ ಮೈನವಿರೇಳಿಸುವಂತಹ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಈ ಸಾಹಸ ದೃಶ್ಯಗಳಿಗಾಗಿಯೇ ಬಲ್ಗೇರಿಯಾದಿಂದ ಫೈಟರ್ಗಳನ್ನು ಕರೆಸಲಾಗಿರುವುದು ವಿಶೇಷ. ಕೊಡೈಕೆನಾಲ್‌ನ ಪೂಂಬರೈನ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ಈ ಸನ್ನಿವೇಶಗಳು ಚಿತ್ರದ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಹೆರಿಗೆಯ ನಂತರ ಬದಲಾಯ್ತು ಪ್ರಣಿತಾ ಸುಭಾಷ್ ಲುಕ್

    ‘ವಿಡುದಲೈ’ ಚಿತ್ರವು ಈಗಾಗಲೇ ತನ್ನ ಅದ್ಭುತ ತಾರಾಗಣ, ತಾಂತ್ರಿಕ ವರ್ಗ, ಮೇಕಿಂಗ್ ಮತ್ತು ಫಸ್ಟ್ಲುಕ್ ಪೋಸ್ಟರ್ಗಳಿಂದ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಆಡಿಯೋ, ಟ್ರೈಲರ್ ಮತ್ತು ಚಿತ್ರ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತದೆ.

    ‘ವಿಡುದಲೈ’ ಚಿತ್ರದ ತಾರಾಬಳಗದಲ್ಲಿ ವಿಜಯ್ ಸೇತುಪತಿ, ಸೂರಿ (Suri), ಭವಾನಿ ಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ರಾಜೀವ್ ಮೆನನ್, ಚೇತನ್ ಮತ್ತು ಅನೇಕ ಪ್ರಮುಖ ನಟರು ನಟಿಸಿದ್ದು,  ಇಸೈಜ್ಞಾನಿ ಇಳಯರಾಜ (Ilayaraja) ಸಂಗೀತ ಸಂಯೋಜಿಸುತ್ತಿದ್ದಾರೆ. ವೇಲ್ರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಟ್ರಿಮಾರನ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್

    ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್

    ವಿಜಯ್​ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುದಲೈ’ ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವನ್ನು ರೆಡ್​ ಜಯಂಟ್​ ಮೂವಿಸ್​ನಡಿ ಉದಯನಿಧಿ ಸ್ಟಾಲಿನ್​ ಅರ್ಪಿಸಿದರೆ, ಆರ್​.ಎಸ್​. ಇನ್ಫೋಟೈನ್​ಮೆಂಟ್​ನಡಿ ಎಲ್ರೆಡ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಕಾಲಿವುಡ್​ನ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್​ ಪ್ರಮುಖರು. ಕೆಲವು ತಿಂಗಳುಗಳ ಹಿಂದೆ ಅವರು ‘ವಿಡುದಲೈ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ನರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.

    ಸದ್ಯ, ‘ವಿಡುದಲೈ’ ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್​ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್​ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳಿನ ಕಾಸ್ಟ್ಲಿ ಚಿತ್ರಗಳ ಪೈಕಿ ‘ವಿಡುದಲೈ’ ಸಹ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ. ಇದಲ್ಲದೆ, ಸಿರುಮಲೈ ಬಳಿ ಜಾಕಿ ಅವರ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಮತ್ತೆ ಶುರುವಾಯ್ತು ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್: `ಬ್ರಹ್ಮಾಸ್ತ್ರʼ ಚಿತ್ರಕ್ಕೆ ವಿರೋಧ

    ಸದ್ಯ ಕೊಡೈಕೆನಾಲ್​ನಲ್ಲಿ ಪೀಟರ್​ ಹೇನ್ಸ್​ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆಕ್ಷನ್​ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿರುವುದು ವಿಶೇಷ. ವಿಡುದಲೈ’ ಚಿತ್ರದಲ್ಲಿ ವಿಜಯ್​ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್​ ರಾಜ್​, ಗೌತಮ್​ ವಾಸುದೇವ ಮೆನನ್, ರಾಜೀವ್​ ಮೆನನ್​ ಮುಂತಾದವರು ನಟಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ‘ಇಸೈಜ್ನಾನಿ’ ಇಳಯರಾಜ ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದು, ವೇಲ್​ರಾಜ್​ ಛಾಯಾಗ್ರಹಣ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 2ನೇ ಚಿತ್ರ ರಿಲೀಸೇ ಆಗಿಲ್ಲ. 3, 4 ಮತ್ತು 5ನೇ ಸಿನಿಮಾ ಒಪ್ಪಿಕೊಂಡ ಯಂಗ್ ರೆಬೆಲ್ ಸ್ಟಾರ್

    2ನೇ ಚಿತ್ರ ರಿಲೀಸೇ ಆಗಿಲ್ಲ. 3, 4 ಮತ್ತು 5ನೇ ಸಿನಿಮಾ ಒಪ್ಪಿಕೊಂಡ ಯಂಗ್ ರೆಬೆಲ್ ಸ್ಟಾರ್

    ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಸಿನಿಮಾ ರಂಗದಲ್ಲೇ ಉಳಿಯುತ್ತಾರಾ ಅಥವಾ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಚರ್ಚೆ ಇತ್ತೀಚಿನ ದಿನಗಳಲ್ಲಿ ನಡೆದಿತ್ತು. ಮಗ ರಾಜಕೀಯ ಬರುವ ವಿಚಾರ ಅವನಿಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಸುಮಲತಾ ಅಂಬರೀಶ್ ಈ ಚರ್ಚೆಗೆ ಬೇರೆ ಆಯಾಮ ಕೊಟ್ಟಿದ್ದರು. ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದರೆ, ಪಕ್ಕಾ ಅವರು ಸಿನಿಮಾ ರಂಗದಲ್ಲಿ ನೆಲೆಯೂರುತ್ತಾರೆ ಎನ್ನುವುದು ಖಾತ್ರಿಯಾಗಿದೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ ‘ಅಮರ್’ ಅವರ ವೃತ್ತಿ ಬದುಕಿಗೆ ಹೇಳಿಕೊಳ್ಳುವಂತಹ ಸಹಾಯವೇನೂ ಮಾಡಲಿಲ್ಲ. ಇದೀಗ ಶೂಟಿಂಗ್ ಆಗುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಯಂಗ್ ರೆಬೆಲ್ ಸ್ಟಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಅಭಿಷೇಕ್ ನಟನೆಯ ಎರಡನೇ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ರಿಲೀಸ್ ಆಗೋಕೆ ಇನ್ನೂ ಟೈಮ್ ಇದೆ. ಈ ಮಧ್ಯೆ ಅಭಿಷೇಕ್ ಬರೋಬ್ಬರಿ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಅಭಿಷೇಕ್ ಒಂದು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ಈ ನಡುವೆ ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಕೂಡ ಒಂದು ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಕೃಷ್ಣ ಹೇಳಿರುವ ಕಥೆಯನ್ನು ಅಭಿಷೇಕ್ ಒಪ್ಪಿಕೊಂಡಿದ್ದಾರಂತೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ಕೃಷ್ಣ ಮತ್ತು ಅಭಿಷೇಕ್ ಕಾಂಬಿನೇಷನ್ ಸಿನಿಮಾವಾದ ನಂತರ ಮದಗಜ ಖ್ಯಾತಿಯ ಮಹೇಶ್ ಕುಮಾರ್ ಕೂಡ ಅಭಿಷೇಕ್ ಅವರಿಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ ಮಹೇಶ್ ಹೇಳಿದ ಕಥೆಯನ್ನೂ ಅಭಿಷೇಕ್ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಈಗಾಗಲೇ ನಿರೀಕ್ಷೆ ಮೂಡಿಸಿರುವುದರಿಂದ ಮತ್ತು ಸೂರಿ ವಿಭಿನ್ನವಾಗಿ ಸಿನಿಮ ಮಾಡಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಪಸರಿಸಿರುವುದರಿಂದ ಅಭಿಷೇಕ್ ಅವರಿಗೆ ಒಂದರ ಮೇಲೊಂದು ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಹೀಗಾಗಿ ರಾಜಕೀಯ ಕ್ಷೇತ್ರಕ್ಕಿಂತಲೂ ಸಿನಿಮಾ ರಂಗದಲ್ಲಿ ಅವರು ಗಟ್ಟಿಯಾಗಿ ನೆಲೆಯೂರುವ ಲಕ್ಷಣಗಳು ಕಾಣುತ್ತಿವೆ.

  • ಡಾಲಿಯನ್ನು ಮೀರಿಸಿದ ಮಂಕಿ ಸೀನ- ಭೂಗತ ಲೋಕದ ರಕ್ತ-ಸಿಕ್ತ ‘ರಾ’-ಕಹಾನಿ

    ಡಾಲಿಯನ್ನು ಮೀರಿಸಿದ ಮಂಕಿ ಸೀನ- ಭೂಗತ ಲೋಕದ ರಕ್ತ-ಸಿಕ್ತ ‘ರಾ’-ಕಹಾನಿ

    ಹಳ ಕ್ರೇಜ್ ಹುಟ್ಟಿಸಿದ್ದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ದುನಿಯಾ ಸೂರಿ, ಡಾಲಿ ಕಾಂಬೀನೇಷನ್‍ನ ಪಕ್ಕಾ ರಾ- ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಭೋಜನ ನೀಡಿದೆ.

    ಪಾಪ್ ಕಾರ್ನ್ ಮಂಕಿ ಟೈಗರ್ ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಅಂಡರ್ ವಲ್ಡ್ ಸಿನಿಮಾಗಳನ್ನು ರಾ- ಸ್ಟೈಲ್‍ನಲ್ಲಿ ತೆರೆ ಮೇಲೆ ತರುವಲ್ಲಿ ನಿಸ್ಸೀಮರಾಗಿರುವ ಸುಕ್ಕಾ ಸೂರಿ ಈ ಸಿನಿಮಾದಲ್ಲಿ ದುನಿಯಾ, ಕಡ್ಡಿಪುಡಿ ಸಿನಿಮಾಗಳಿಗೂ ಮೀರಿ ಆಳಕ್ಕೆ ಇಳಿದು ಭೂಗತ ಲೋಕದ ಪ್ರಪಂಚವನ್ನು ಪಕ್ಕಾ ರಾ ಆಗಿ ತೋರಿಸಿದ್ದಾರೆ.

    ಪಾಪ್ ಕಾರ್ನ್ ಮಂಕಿ ಟೈಗರ್ ಒಬ್ಬ ಅಂಡರ್ ವಲ್ಡ್ ರೌಡಿಯ ಕಥೆ. ಮಂಕಿ ಸೀನ ಅಲಿಯಾಸ್ ಟೈಗರ್ ಸೀನ, ಪಾಪ್ ಕಾರ್ನ್ ದೇವಿ ಈ ಎರಡು ಪಾತ್ರಗಳ ಜೀವನದಲ್ಲಿ ನಡೆಯುವ ಏಳು ಬೀಳುಗಳೆ ಈ ಚಿತ್ರದ ಕಥೆ. ಇದನ್ನು ಒಂದು ಸಿನಿಮಾ ಅನ್ನೋದಕ್ಕಿಂತ ಒಬ್ಬ ವ್ಯಕ್ತಿಯ ಜರ್ನಿ ಅಂದ್ರೆ ತಪ್ಪಾಗೊಲ್ಲ. ಯಾಕಂದ್ರೆ ಇಡೀ ಸಿನಿಮಾ ಒಂದು ಜರ್ನಿಯಂತೆ ಫೀಲ್ ಕೊಡುತ್ತೆ. ಸುಕ್ಕಾ ಸೂರಿ ಸಿನಿಮಾ ಇಷ್ಟವಾಗೋದೇ ಅವ್ರು ಕಥೆ ಹೇಳುವ ಸ್ಟೈಲ್‍ಗೆ. ಈ ಚಿತ್ರ ಕೂಡ ಹೊರತಾಗಿಲ್ಲ. ಚಿತ್ರಕಥೆ ಹೊಸದೊಂದು ಅನುಭವವನ್ನು, ಥ್ರಿಲ್‍ಅನ್ನು ಪ್ರೇಕ್ಷಕರಿಗೆ ನೀಡುತ್ತೆ. ಚಿತ್ರದಲ್ಲಿ ಸೂರಿ ಸೃಷ್ಟಿಸಿರೋ ಪಾತ್ರಗಳ ಹೆಸರು ಮತ್ತೊಮ್ಮೆ ಸದ್ದು ಮಾಡಿದೆ. ಮಂಕಿ ಸೀನ, ಮೂಕ, ಗಲೀಜು, ಭದ್ರಾವತಿ ಕುಷ್ಕ, ಶುಗರ್ ಹೆಸರುಗಳು ಸಖತ್ ಮಜಾ ನೀಡುತ್ತೆ.

    ಮಂಕಿ ಸೀನನಾಗಿ ಧನಂಜಯ್ ಅವರದ್ದು ರಾಕ್ಷಸ ಅಭಿನಯ. ಸೂರಿ ರಾ- ಸ್ಟೈಲ್‍ಗೆ ಅಷ್ಟೇ ರಾ- ಆದ ಅಭಿನಯ ಮಾಡಿದ್ದಾರೆ ಧನಂಜಯ್. ಈ ಮೂಲಕ ತಮ್ಮ ನಟನೆಯ ತಾಕತ್ತು ಏನು ಅನ್ನೋದನ್ನ ಮತ್ತೆ ತೆರೆ ಮೇಲೆ ಸಾಭೀತು ಮಾಡಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಗಳು ಪ್ರಭಾವಿಯಾಗಿ ನಟಿಸಿದ್ದು ಚಿತ್ರದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ.

    ಅಂಡರ್ ವಲ್ಡ್ ಸಿನಿಮಾ ಅಂದ್ರೆ ಮುಖ್ಯವಾಗಿ ಹಿನ್ನೆಲೆ ಸಂಗೀತ, ಕ್ಯಾಮೆರಾ ಕೈಚಳಕ ಇವೆರಡು ಪ್ರಮುಖ ಪಾತ್ರ ವಹಿಸುತ್ತೆ. ಚಿತ್ರದಲ್ಲಿ ಬ್ಯಾಗ್ರೌಂಡ್‍ನಲ್ಲಿ ಬರುವ ಎರಡು ಸಾಂಗ್‍ಗಳು ಕಮಾಲ್ ಮಾಡಿವೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಸಿನಿಮಾಗೆ ಬೇರೆಯದ್ದೇ ಫೀಲ್ ನೀಡುತ್ತೆ. ಶೇಖರ್ ಕ್ಯಾಮೆರಾ ವರ್ಕ್ ಕೂಡ ಚಿತ್ರವನ್ನು ಶ್ರೀಮಂತಗೊಳಿಸಿದ್ದು ಆಫ್ ಸ್ಕ್ರೀನ್ ಹೀರೋಗಳಾಗಿ ಇಬ್ಬರು ಮಿಂಚಿದ್ದಾರೆ. ಒಟ್ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಮಾಸ್ ಸಿನಿ ಪ್ರಿಯರಿಗೆ ಫುಲ್ ಮೀಲ್ಸ್ ಬಡೂಟ ಅಂದ್ರೆ ತಪ್ಪಾಗೊಲ್ಲ.

    ಚಿತ್ರ: ಪಾಪ್ ಕಾರ್ನ್ ಮಂಕಿ ಟೈಗರ್
    ನಿರ್ದೇಶನ: ಸೂರಿ
    ನಿರ್ಮಾಪಕ: ಸುಧೀರ್. ಕೆ.ಎಂ
    ಸಂಗೀತ: ಚರಣ್ ರಾಜ್
    ಛಾಯಾಗ್ರಹಣ: ಶೇಖರ್
    ತಾರಾಬಳಗ: ಧನಂಜಯ್, ನಿವೇಧಿತಾ, ಅಮೃತ ಅಯ್ಯಂಗಾರ್, ಸಪ್ತಮಿ, ಸುಧಿ, ಇತರರು

    Rating 3.5 / 5

  • ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಸ್ಯಾಂಡಲ್‍ವುಡ್ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ‘ಪಾಪ್ ಕಾರ್ನ್ ಮಂಕಿ ಟೈಗರ್’. ಇನ್ನೇನು ಎರಡೇ ದಿನದಲ್ಲಿ ಚಿತ್ರಮಂದಿರದ ಅಂಗಳಕ್ಕೆ ಚಿತ್ರ ಕಾಲಿಡಲಿದೆ. ಸುಕ್ಕಾ ಸೂರಿ, ಸ್ಪೆಷಲ್ ಸ್ಟಾರ್ ಧನಂಜಯ್ ಕಾಂಬಿನೇಷನ್ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಟೀಸರ್, ಟೀಸರ್‌ನಲ್ಲಿ ಡಾಲಿ ಮಾಸ್ ಅವತಾರ ಕಂಡು ಪ್ರೇಕ್ಷಕರು ಫಿಧಾ ಆಗಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಟಗರು ನಂತರ ಒಂದಾಗಿರೋ ರಾ ಡೈರೆಕ್ಟರ್ ಸೂರಿ ಹಾಗೂ ಧನಂಜಯ್ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಮಾಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಮುಂದಾಗಿದ್ದು, ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ.

    ಈಗಾಗಲೇ ‘ಪಾಪ್ ಕಾರ್ನ್ ಮಂಕಿ ಟೈಗರ್’ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದ್ದು, ಡಾಲಿ ಅಭಿಮಾನಿ ಬಳಗ ‘ಪಾಪ್ ಕಾರ್ನ್ ಮಂಕಿ ಟೈಗರ್’ ಅವತಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಧನಂಜಯ್ ಚಿತ್ರದಲ್ಲಿ ವಿಶೇಷ ಅವತಾರಗಳಲ್ಲಿ ತೆರೆ ಮೇಲೆ ಮಿಂಚಲಿದ್ದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಜೊತೆಗೆ ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸೂರಿ ಹಾಗೂ ಧನಂಜಯ್ ಸಿನಿಮಾಗಳನ್ನು ಪ್ರೀತಿಸೋ ಭಕ್ತ ವೃಂದಕ್ಕೆ ಈ ಸಿನಿಮಾ ಭರ್ಜರಿ ಭೋಜನ ಆಗಲಿದೆ.

    ಟೀಸರ್‌ನಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಹಿನ್ನೆಲೆ ಸಂಗೀತ ಕಮಾಲ್ ಮಾಡಿದ್ದು, ಇಲ್ಲೂ ಕೂಡ ಟಗರು ಚಿತ್ರದಂತೆ ಮ್ಯೂಸಿಕ್‍ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಲಿದ್ದಾರೆ ಚರಣ್ ರಾಜ್. ಶೇಖರ್ ಕ್ಯಾಮೆರಾ ಕಣ್ಣಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸೆರೆಯಾಗಿದ್ದು, ಸುಧೀರ್.ಕೆ.ಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಯಾವ ರೀತಿ ಸದ್ಧು ಮಾಡುತ್ತೆ ಕಾದು ನೋಡಬೇಕು.

  • ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಸ್ಯಾಂಡಲ್‍ವುಡ್ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ `ಪಾಪ್ ಕಾರ್ನ್ ಮಂಕಿ ಟೈಗರ್’. ಇನ್ನೇನು ಒಂದೇ ದಿನದಲ್ಲಿ ಚಿತ್ರಮಂದಿರದ ಅಂಗಳಕ್ಕೆ ಚಿತ್ರ ಕಾಲಿಡಲಿದೆ. ಸುಕ್ಕಾ ಸೂರಿ, ಸ್ಪೆಷಲ್ ಸ್ಟಾರ್ ಧನಂಜಯ್ ಕಾಂಬಿನೇಷನ್ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಟೀಸರ್, ಟ್ರೈಲರಿನಲ್ಲಿ ಡಾಲಿ ಮಾಸ್ ಅವತಾರ ಕಂಡು ಪ್ರೇಕ್ಷಕರು ಫಿಧಾ ಆಗಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಟಗರು ನಂತರ ಒಂದಾಗಿರೋ ರಾ ಡೈರೆಕ್ಟರ್ ಸೂರಿ ಹಾಗೂ ಧನಂಜಯ್ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಮಾಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಮುಂದಾಗಿದ್ದು, ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ.

    ಈಗಾಗಲೇ `ಪಾಪ್ ಕಾರ್ನ್ ಮಂಕಿ ಟೈಗರ್’ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದ್ದು, ಡಾಲಿ ಅಭಿಮಾನಿ ಬಳಗ `ಪಾಪ್ ಕಾರ್ನ್ ಮಂಕಿ ಟೈಗರ್’ ಅವತಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಧನಂಜಯ್ ಚಿತ್ರದಲ್ಲಿ ವಿಶೇಷ ಅವತಾರಗಳಲ್ಲಿ ತೆರೆ ಮೇಲೆ ಮಿಂಚಲಿದ್ದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಜೊತೆಗೆ ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸೂರಿ ಹಾಗೂ ಧನಂಜಯ್ ಸಿನಿಮಾಗಳನ್ನು ಪ್ರೀತಿಸೋ ಭಕ್ತ ವೃಂದಕ್ಕೆ ಈ ಸಿನಿಮಾ ಭರ್ಜರಿ ಭೋಜನ ಆಗಲಿದೆ.

    ಟೀಸರಿನಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಹಿನ್ನೆಲೆ ಸಂಗೀತ ಕಮಾಲ್ ಮಾಡಿದ್ದು, ಇಲ್ಲೂ ಕೂಡ ಟಗರು ಚಿತ್ರದಂತೆ ಮ್ಯೂಸಿಕ್‍ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಲಿದ್ದಾರೆ ಚರಣ್ ರಾಜ್. ಶೇಖರ್ ಕ್ಯಾಮೆರಾ ಕಣ್ಣಲ್ಲಿ `ಪಾಪ್ ಕಾರ್ನ್ ಮಂಕಿ ಟೈಗರ್’ ಸೆರೆಯಾಗಿದ್ದು, ಸುಧೀರ್.ಕೆ.ಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ `ಪಾಪ್ ಕಾರ್ನ್ ಮಂಕಿ ಟೈಗರ್’ ಯಾವ ರೀತಿ ಸದ್ಧು ಮಾಡುತ್ತೆ ಕಾದು ನೋಡಬೇಕು.